ಬೆಂಗಳೂರು: ಕೇಂದ್ರ ಸರ್ಕಾರ ಅನ್‍ಲಾಕ್ 3ಗೆ ಮಾರ್ಗಸೂಚಿ ಪ್ರಕಟಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೆ ತರಲು ನಿರ್ಧರಿಸಿದೆ. ಇದರ ಜೊತೆಗೆ ಸಂಡೇ ಲಾಕ್‍ಡೌನ್, ಶನಿವಾರ ರಜೆ ದಿನವನ್ನೂ ರದ್ದುಗೊಳಿಸಿದೆ.
ಕೇಂದ್ರದ ಮಾರ್ಗಸೂಚಿಯಂತೆ ಆಗಸ್ಟ್ 1ರಿಂದ ನೈಟ್ ಕರ್ಫ್ಯೂ ರದ್ದು, ಆಗಸ್ಟ್ 5ರಿಂದ ಯೋಗ, ಜಿಮ್ ಓಪನ್ ಸೇರಿದಂತೆ ಆಗಸ್ಟ್ 31ರವರೆಗೆ ಶಾಲೆ ಕಾಲೇಜ್ ನಿರ್ಬಂಧ ಮುಂದುವರಿಕೆಯನ್ನು ಪಾಲಿಸಿದೆ. ಜೊತೆಗೆ ಥಿಯೇಟರ್, ಬಾರ್, ರೆಸ್ಟೋರೆಂಟ್, ಮೆಟ್ರೋಗೆ ಅವಕಾಶ ಇಲ್ಲ. ಇದನ್ನೂ ಓದಿ: ಆ.31ರವರೆಗೆ ಶಾಲಾ, ಕಾಲೇಜಿಲ್ಲ – ಆ.5ರಿಂದ ಜಿಮ್ ಓಪನ್
ರಾಜಕೀಯ, ಧಾರ್ಮಿಕ ಸಮಾರಂಭ ಮಾಡುವಂತಿಲ್ಲ. ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಸಂಚಾರ ನಿರ್ಬಂಧವಿಲ್ಲ. ಕಂಟೈನ್‍ಮೆಂಟ್ ಝೋನ್‍ನಲ್ಲಿ ಯಾವುದೇ ಚಟುವಟಿಕೆಗೆ ಅವಕಾಶ ಇಲ್ಲ. ಬಫರ್ ಝೋನ್‍ಗಳಲ್ಲಿ ಬಿಗಿ ನಿಯಮ ಅಂದಿದೆ. ಜೊತೆಗೆ ಸ್ವಾತಂತ್ರ್ಯ ದಿನಾಚರಣೆಗೂ ಅನುಮತಿ ನೀಡಿದೆ.
ಹಾಸನ: ಭಾನುವಾರ ಎಂದಿನಂತೆ ಲಾಕ್‍ಡೌನ್ ಮುಂದುವರಿಯಲಿದೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ನುಡಿದಂತೆ ನಡೆದ ನಾಯಕರಾಗಿದ್ದಾರೆ. ಕೊರೊನಾ ಸಮಯದಲ್ಲಿ ಪಡಿತರ ವಿತರಣೆಯಲ್ಲಿ ರಾಜ್ಯ ಸರ್ಕಾರ ಪ್ರಥಮ ಸ್ಥಾನದಲ್ಲಿದೆ. ಹಾಸನದಲ್ಲಿನ 7 ಖಾಸಗಿ ಆಸ್ಪತ್ರೆಯಲ್ಲಿ 290 ಬೆಡ್ ಮೀಸಲಿರಿಸಲಾಗಿದೆ. ಕೊರೊನಾ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆಗಸ್ಟ್ ನಿಂದಲೂ ಕೂಡ ಪ್ರತೀ ಭಾನುವಾರ ಲಾಕ್‍ಡೌನ್ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾಜಿ ಸಚಿವ, ಸಚಿವರಾಗುತ್ತಾರೆ ಎಂದು ತಿಳಿಸಿದ ಗೋಪಾಲಯ್ಯ, ವಿಶ್ವನಾಥ್ ಸಂಪುಟ ಸೇರ್ಪಡೆಯಾಗುವ ಸೂಚನೆ ನೀಡಿದ್ದಾರೆ. ಹಾಸನ ಜಿಲ್ಲೆಗೆ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ತಾಳುತ್ತಿದೆ ಎಂಬ ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿ, ಹಾಸನ ಜಿಲ್ಲೆಯಲ್ಲಿ ಸರ್ಕಾರ ಯಾವುದೇ ಮಲತಾಯಿ ಧೋರಣೆ ತಾಳುತ್ತಿಲ್ಲಾ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಯಚೂರು: ಸಂಡೇ ಲಾಕ್‍ಡೌನ್ ಉಲ್ಲಂಘಿಸಿ ಓಡಾಡುವವರಿಗೆ ರಾಯಚೂರು ಪೊಲೀಸರು ಲಾಠಿ ರುಚಿ ತೋರಿಸಿ ವಾಪಸ್ ಕಳುಹಿಸುತ್ತಿದ್ದಾರೆ. ಭಾನುವಾರ ಲಾಕ್ ಡೌನ್ ಇರುವುದು ತಿಳಿದಿದ್ದರೂ ಜನ ಅನಾವಶ್ಯಕವಾಗಿ ರಸ್ತೆಗೆ ಇಳಿಯುವುದನ್ನ ಮುಂದುವರಿಸಿದ್ದಾರೆ. ಹೀಗಾಗಿ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.
ಬೈಕ್, ಕಾರ್ ಗಳನ್ನ ಜಪ್ತಿಮಾಡಿ ದಂಡ ವಸೂಲಿ ಮಾಡುತ್ತಿದ್ದಾರೆ. ಇನ್ನೂ ಬೀದಿ ಬದಿಯಲ್ಲಿ ಟೀ, ತರಕಾರಿ ಮಾರುವವರು ಸಾಮಾಜಿಕ ಅಂತರವಿಲ್ಲದೆ ಮಾಸ್ಕ್ ಇಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ. ರಸ್ತೆ ಬದಿಯ ವ್ಯಾಪಾರಿಗಳನ್ನ ಪೊಲೀಸರು ಚದುರಿಸಿ ಕಳುಹಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿದ್ದರೂ ರಾಯಚೂರಿನಲ್ಲಿ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದೆ. ಇದನ್ನೂ ಓದಿ:ಅನಗತ್ಯವಾಗಿ ಓಡಾಡ್ತಿದ್ದವರ ವಾಹನಗಳು ಸೀಜ್
ಜಿಲ್ಲೆಯಲ್ಲಿ ಬಸ್ ಸಂಚಾರ ಬಂದ್ ಆಗಿರುವುದರಿಂದ ಬೆಂಗಳೂರಿನಿಂದ ಬಂದ ಪ್ರಯಾಣಿಕರು ಗ್ರಾಮಗಳಿಗೆ ಹೋಗಲಾಗದೆ ಪರದಾಡಬೇಕಾಯಿತು. ಆಟೋಗಳ ಸಂಚಾರವೂ ಇಲ್ಲದೆ ಹತ್ತಿರದ ಗ್ರಾಮಗಳಿಗೆ ಜನ ನಡೆದುಕೊಂಡೆ ಹೋಗಬೇಕಾದ ಸ್ಥಿತಿಯಿದೆ. ಉಳಿದಂತೆ ರಾಯಚೂರಿನಲ್ಲಿ ಆಸ್ಪತ್ರೆ, ಔಷಧಿ ಅಂಗಡಿ, ಹಾಲು, ಅಗ್ನಿಶಾಮಕ ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳು, ವ್ಯಾಪಾರ ವಹಿವಾಟು ಬಂದ್ ಆಗಿವೆ. ಸಂಡೇ ಮಟನ್ ಮಾರ್ಕೆಟ್ ಕೂಡಾ ಬಂದ್ ಮಾಡಲಾಗಿದ್ದು, ನಗರದ ಪ್ರಮುಖ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿವೆ.
ಬೆಂಗಳೂರು: ಭಾನುವಾರ ನಾನ್‍ವೆಜ್ ಪ್ರಿಯರಿಗೆ ವಿಶೇಷ ದಿನವಾಗಿದ್ದು, ಬೆಳ್ಳಂಬೆಳಗ್ಗೆ ನಾನ್ ವೆಜ್ ಅಂಗಡಿಗಳ ಮುಂದೆ ಜನರು ಸಾಲಾಗಿ ಕ್ಯೂ ನಿಂತಿದ್ದಾರೆ.
ಇಂದು ಲಾಕ್‍ಡೌನ್ ಜಾರಿಯಾಗಿ ಐದನೇ ದಿನವಾಗಿದೆ. ಜೊತೆಗೆ ಇಂದು ಸಂಡೇ ಲಾಕ್‍ಡೌನ್ ಕೂಡ ಆಗಿದೆ. ಹೀಗಾಗಿ ಮುಂಜಾನೆಯಿಂದಲೇ ನಾನ್ ವೆಜ್ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ಶಿವಾಜಿನಗರ ಮಾಂಸ ಮಾರುಕಟ್ಟೆಯಲ್ಲಿ ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಮಟನ್, ಚಿಕನ್, ಫಿಶ್ ಖರೀದಿಯಲ್ಲಿ ಮಾಂಸ ಪ್ರಿಯರು ತೊಡಗಿದ್ದು, ಇದರಿಂದ ಐದನೇ ದಿನದ ಲಾಕ್‍ಡೌನ್‍ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಇತ್ತ ಮೈಸೂರು ರಸ್ತೆಯ ಮಟಾನ್ ಸ್ಟಾಲ್ ಮುಂದೆ ಬೆಳ್ಳಂಬೆಳಗ್ಗೆ ಮಟಾನ್ ಖರೀದಿಗೆ ಜನರು ಫುಲ್ ಕ್ಯೂನಲ್ಲಿ ನಿಂತಿದ್ದಾರೆ. ಅಲ್ಲದೇ ಸದಾಶಿವನಗರ ಮಟನ್, ಚಿಕನ್ ಅಂಗಡಿಗಳ ಮುಂದೆಯೂ ಜನರು ಕ್ಯೂ ನಿಂತಿದ್ದಾರೆ. ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಜನರು ಸಾಲಿನಲ್ಲಿ ನಿಂತು ಮಟನ್, ಚಿಕನ್ ಖರೀದಿ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ರುದ್ರ ತಾಂಡವ ಮುಂದುವರಿದಿದ್ದು, ಶನಿವಾರ 4,537 ಹೊಸ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಸಹ 2 ಸಾವಿರದ ಗಡಿ ದಾಟಿದ್ದು, 2,125 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಶನಿವಾರ 49 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಕಳೆದ ದಿನ 93 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ.
ಬೆಂಗಳೂರು: ಕೊರೊನಾ ಕಂಟ್ರೋಲ್‍ಗೆ ಸಂಡೇ ಲಾಕ್‍ಡೌನ್ ಏನೋ ಜಾರಿಯಾಗಿದೆ. ಆದರೆ ನಮ್ ಬೆಂಗಳೂರಿಗರಿಗೆ ಮೊದಲ ಸಂಡೇ ಲಾಕ್‍ಡೌನ್‍ನಲ್ಲಿದ್ದ ಜೋಶ್ ಎರಡನೇ ಸಂಡೇ ಲಾಕ್‍ಡೌನ್‍ನಲ್ಲಿ ಕಾಣಿಸಿಲ್ಲ. ಇಂದು ಬೆಳಗ್ಗೆಯಿಂದ ಬೆಂಗಳೂರಿನ ರಸ್ತೆಗಳು ಬಿಕೋ ಅಂತಿತ್ತು. ಪ್ರಮುಖ ರಸ್ತೆಗಳೆಲ್ಲಾ ಬಂದ್ ಆಗಿತ್ತು. ಅಲ್ಲೊಂದು ಇಲ್ಲೊಂದು ವಾಹನಗಳು ರಸ್ತೆಗಿಳಿದಿತ್ತು. ಆದ್ರೆ ಮಧ್ಯಾಹ್ನದ ನಂತರ ಒಂದೊಂದಾಗಿ ವಾಹನಗಳು ರಸ್ತೆಗೆ ಇಳಿಯಲಾರಂಭಿಸಿದವು.
ಸೆಕೆಂಡ್ ಲಾಕ್‍ಡೌನ್ ಹಿನ್ನೆಲೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಕಮೀಷನರ್ ಭಾಸ್ಕರ್ ರಾವ್ ಸಿಟಿ ರೌಂಡ್ಸ್ ಹಾಕಿದರು. ಕೆ.ಆರ್.ಮಾರ್ಕೆಟ್, ಸಿರ್ಸಿ ಸರ್ಕಲ್, ಮೆಜೆಸ್ಟಿಕ್, ಮಲ್ಲೇಶ್ವರಂ, ಯಶವಂತಪುರ, ಆರ್‍ಎಂಸಿ ಯಾರ್ಡ್, ಅಂಚೆಪಾಳ್ಯ ಬಾರ್ಡರ್‍ವರೆಗೆ ನಗರ ಪ್ರದಕ್ಷಿಣೆ ಹಾಕಿದರು. ಈ ವೇಳೆ ಮಾತನಾಡಿದ ಸಚಿವರು, ಜನರು ಸರ್ಕಾರದ ನಿರ್ಧಾರಕ್ಕೆ ಸ್ವಯಂ ಪ್ರೇರಿತವಾಗಿ ಮನೆಯಲ್ಲಿರೋ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಸದಾ ವಾಹನಗಳಿಂದ ತುಂಬಿರೋ ತುಮಕೂರು ರಸ್ತೆ ಇಂದು ಸಂಪೂರ್ಣ ಸ್ತಬ್ಧವಾಗಿತ್ತು. ಬೆರೆಳೆಣಿಕೆಯಷ್ಟು ವಾಹನಗಳ ಸಂಚಾರ ಬಿಟ್ಟು ಬಹುತೇಕ ರಸ್ತೆ ಖಾಲಿ ಖಾಲಿ ಹೊಡೆಯುತ್ತಿದೆ. ಸುಜಾತ ಥಿಯೇಟರ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿತ್ತು.
ಹೊಟೇಲ್‍ಗಳಲ್ಲಿ ಪಾರ್ಸಲ್ ಗೆ ಅವಕಾಶ ಇದ್ರೂ ಸಂಡೇ ಲಾಕ್‍ಡೌನ್‍ನಿಂದ ನಷ್ಟದ ಭೀತಿಯಿಂದ ಬೆಂಗಳೂರಿನ ಹಲವು ಹೋಟೆಲ್‍ಗಳು ಬಂದ್ ಆಗಿದ್ದವು. ಚಾಮರಾಜಪೇಟೆ, ಬಸವನಗುಡಿ, ಬನಶಂಕರಿ, ತ್ಯಾಗರಾಜ ನಗರ, ಲಾಲ್ ಬಾಗ್ ವೆಸ್ಟ್ ಗೇಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೊಟೇಲ್ ಗಳು ಬಂದ್ ಆಗಿತ್ತು. ಮತ್ತೊಂದೆಡೆ ಪೊಲೀಸರು ಅಲ್ಲಲ್ಲಿ ವಾಹನಗಳ ತಪಾಸಣೆ ನಡೆಸಿದ್ರು. ಸಂಡೇ ಲಾಕ್‍ಡೌನ್ ಇದ್ದರೂ ಕಬ್ಬನ್ ಪಾರ್ಕ್‍ನಲ್ಲಿ ವಾಕಿಂಗ್ ಮಾಡೋರ ಸಂಖ್ಯೆಯೇನು ಕಡಿಮೆಯಿರಲಿಲ್ಲ.
ಮಧ್ಯಾಹ್ನದವರಗೆ ಬೆಂಗಳೂರಿಗರು ಸಂಡೇ ಲಾಕ್‍ಡೌನ್‍ನ್ನು ಪಾಲಿಸಿದ್ರು. ಆದ್ರೆ ಮಧ್ಯಾಹ್ನ 3 ಗಂಟೆ ನಂತರ ವಾಹನಗಳೆಲ್ಲಾ ರಸ್ತೆಗಿಳಿದಿರೋದು ಕಂಡುಬಂತು. ಚಾಲುಕ್ಯ ಸರ್ಕಲ್, ಇಂಡಿಯನ್ ಎಕ್ಸ್ ಪ್ರೆಸ್ ಸರ್ಕಲ್, ರೇಸ್‍ಕೋರ್ಸ್ ರಸ್ತೆ, ಪ್ಯಾಲೆಸ್ ರಸ್ತೆಯಲ್ಲಿ ಭರ್ಜರಿ ವಾಹನಗಳ ಓಡಾಟವಿತ್ತು. ಒಟ್ಟಿನಲ್ಲಿ ಜನರೇ ಸ್ವಯಂ ನಿರ್ಬಂಧ ಹಾಕೊಂಡ್ರೆ ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗೋದರಲ್ಲಿ ಅನುಮಾನವಿಲ್ಲ.
ಬೆಂಗಳೂರು: ರಾಜ್ಯದಲ್ಲಿ ಮೊದಲ ಸಂಡೇ ಲಾಕ್‍ಡೌನ್ ಯಶಸ್ವಿಯಾಗಿ ಅಂತ್ಯವಾಗಿದೆ. ಇನ್ನೂ ಕೆಲವರು ರೂಲ್ಸ್ ಮೀರಿ ರಸ್ತೆಗೆ ಇಳಿದು ಲಾಠಿರುಚಿ ತಿಂದು ಮನೆಗೆ ಹೋಗಿದ್ದಾರೆ.
ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸುನಾಮಿ ಸ್ಫೋಟಕ್ಕೆ ಬ್ರೇಕ್ ಹಾಕಲು ಸಂಡೇ ಲಾಕ್‍ಡೌನ್ ಅಸ್ತ್ರಕ್ಕೆ ಜನರಿಂದ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಹಂತದಲ್ಲಿ ಮಹಾಮಾರಿ ಕೊರೊನಾ ಕಂಟ್ರೋಲ್‍ಗೆ ಸರ್ಕಾರ ಆದೇಶಿಸಿದ್ದ ಫಸ್ಟ್ ಸಂಡೇ ಲಾಕ್‍ಡೌನ್ ಬೆಳಗ್ಗೆ 5 ಗಂಟೆಗೆ ಯಶಸ್ವಿಯಾಗಿ ಅಂತ್ಯವಾಗಿದೆ. ಈ ಹಿಂದಿನ ಲಾಕ್‍ಡೌನ್‍ಗಳಿಗೆ ಹೋಲಿಸಿದ್ರೆ 33 ಗಂಟೆಗಳ ಸಂಡೇ ಲಾಕ್‍ಡೌನ್‍ಗೆ ಜನ ಸಹಕರಿಸಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರು ಬಹುತೇಕ ಸ್ತಬ್ಧವಾಗಿತ್ತು. ಜನರ ಓಡಾಟ ಭಾರೀ ವಿರಳವಾಗಿತ್ತು. ಮನೆಯಲ್ಲೇ ಇದ್ದ ಬೆಂಗಳೂರಿಗರು ಸಂಡೇ ಲಾಕ್‍ಡೌನ್‍ಗೆ ಬೆಂಬಲ ಸೂಚಿಸಿದ್ರು.
ಸಂಡೇ ಲಾಕ್‍ಡೌನ್ ಹಿನ್ನೆಲೆ ವಾಹನಗಳು ಓಡಾಡಬಾರದು ಅಂತ ನಗರದ ಪ್ರಮುಖ ರಸ್ತೆಗಳನ್ನೆಲ್ಲಾ ಸಂಪೂರ್ಣವಾಗಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಮೆಜೆಸ್ಟಿಕ್, ಬಿಎಂಟಿಸಿ-ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ವು. ಕುಂಟು ನೆಪ ಹೇಳಿಕೊಂಡು ಅಲ್ಲಲ್ಲಿ ಓಡಾಡ್ತಿದ್ದ ವಾಹನ ಸವಾರರನ್ನ ಹಿಡಿದು ಪೊಲೀಸ್ರು ತಪಾಸಣೆ ಮಾಡಿ ಬಿಡ್ತಿದ್ರು.
ಸಂಡೇ ಲಾಕ್‍ಡೌನ್ ಉಲ್ಲಂಘಿಸಿದ್ದಕ್ಕೆ ರಾಯಚೂರಲ್ಲಿ ಭರ್ಜರಿ ದಂಡ ಹಾಕಲಾಗಿದೆ. 484 ವಾಹನಗಳ ಜಪ್ತಿ ಮಾಡಲಾಗಿದೆ. ಅಲ್ಲದೇ ಒಂದೇ ದಿನ 78,700 ರೂಪಾಯಿ ದಂಡ ವಿಧಿಸಲಾಗಿದೆ. ಇದರ ನಡುವೆ ತಮಿಳುನಾಡಿನಿಂದ ಬಂದ ಪ್ರತಿಯೊಂದು ವಾಹನವನ್ನು ತಡೆದ ಪೊಲೀಸರು ವಾಪಸ್ ಕಳಿಸಿದ್ರು. ಮೈಸೂರು, ಮಂಗಳೂರು, ಬೆಳಗಾವಿ, ಕಲಬುರಗಿ, ಧಾರವಾಡ, ಬಳ್ಳಾರಿಗಳಲ್ಲೂ ಕೂಡ ಜನ ಲಾಕ್‍ಡೌನ್ ಪಾಲಿಸಿದ್ದಾರೆ. ಆದರೆ ಮತ್ತೆ ಕೆಲವು ಕಡೆ ಜನ ಬೇಕಾಬಿಟ್ಟಿಯಾಗಿ ಅಡ್ಡಾಡಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ಬಿಸಿಬಿಸಿ ಕಜ್ಜಾಯ ತಿಂದಿದ್ದಾರೆ. ಸಂಡೇ ಲಾಕ್‍ಡೌನ್ ಉಲ್ಲಂಘಿಸಿ ಓಡಾಡುತ್ತಿದ್ದ ಜನರಿಗೆ ವಿಜಯಪುರ, ಗದಗದಲ್ಲಿ ಪೊಲೀಸರು ಲಾಠಿ ಬೀಸಿ ತೋರಿಸಿದ್ರು. ದಾವಣಗೆರೆಯಲ್ಲಿ ವ್ಯಾಪಾರ ಜೋರಾಗಿತ್ತು.
ಜನಪ್ರತಿನಿಧಿಗಳಿಂದಲೇ ರೂಲ್ಸ್ ಬ್ರೇಕ್:
ಜನಪ್ರತಿನಿಧಿಗಳು ಮೂರ್ಖರಂತೆ ವರ್ತಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಶಾಸಕ ಕುಮಾರಸ್ವಾಮಿ ಅವರು ಮೂಡಿಗೆರೆ ತಾಲೂಕಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅತ್ತ, ದಾವಣಗೆರೆಯ ಬಿಜೆಪಿಯವರೇ ಆದ ಮೇಯರ್ ಅಜಯ್ ಕುಮಾರ್, ಮೇಯರ್ ಕಚೇರಿಯಲ್ಲೇ ತಮ್ಮ ಬರ್ತ್‍ಡೇ ಸೆಲೆಬ್ರೇಶನ್ ಮಾಡಿದ್ದಾರೆ. ಈಗ ಇದೆಲ್ಲಾ ಬೇಕಿತ್ತಾ ಅಂತ ಮಾಧ್ಯಮಗಳು ಕೇಳಿದ್ದಕ್ಕೆ ವಿಡಿಯೋ ಮಾಡ್ಕೋತೀರಾ.. ಮಾಡ್ಕೋಳಿ. ನಾನ್ಯಾವುದಕ್ಕೂ ಹೆದರಲ್ಲ ಅಂದಿದ್ದಾರೆ.
ಒಟ್ಟಾರೆಯಾಗಿ ಕೊರೊನಾ ತಡೆಗೆ ಮೊದಲ ಸಂಡೇ ಲಾಕ್‍ಡೌನ್ ಯಶಸ್ವಿಯಾಗಿದೆ. ಹೀಗೆ ಜನರು ಇನ್ನೆರಡು ವಾರ ನಡೆದುಕೊಂಡರೆ ಕೊರೊನಾ ಹರಡೋದನ್ನು ಖಂಡಿತವಾಗಿಯೂ ಸ್ವಲ್ಪಮಟ್ಟಿಗಾದರೂ ತಡೆಯಬಹುದು.
ಚಾಮರಾಜನಗರ: ಭಾನುವಾರದ ಲಾಕ್‍ಡೌನ್ ಹಿನ್ನಲೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರ ಬಹುತೇಕ ಸ್ಥಬ್ಧಗೊಂಡಿದೆ. ಅಗತ್ಯ ವಸ್ತು ಹೊರತುಪಡಿಸಿ ಮಿಕ್ಕೆಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇಷ್ಟಾದರೂ ಕೆಲವರು ದ್ವಿಚಕ್ರ ವಾಹನಗಳ ಮೂಲಕ ಅನಗತ್ಯವಾಗಿ ಸಂಚರಿಸುತ್ತಿದ್ದರು. ಇಂತಹ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಭಾನುವಾರದ ಲಾಕ್‍ಡೌನ್ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚಾಮರಾಜಗರದಲ್ಲಿ ಸಿಟಿ ರೌಂಡ್ಸ್ ನಡೆಸಿದರು. ಈ ವೇಳೆ ದ್ಚಿಚಕ್ರ ವಾಹನ ಸವಾರರು ಅನಗತ್ಯವಾಗಿ ಓಡಾಟ ನಡಸುತ್ತಿರುವುದನ್ನು ಕಂಡು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಿದರು. ಈ ಮೂಲಕ ಕಾರಣವಿಲ್ಲದೆ ಓಡಾಟ ನಡೆಸುತ್ತಿದ್ದ ದ್ವಿಚಕ್ರವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.
ನಗರದ ವಿವಿಧೆಡೆ ಗಸ್ತು ಮಾಡುತ್ತಿರುವ ಪೊಲೀಸರು, ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ. ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಮಹದೇಶ್ವರನ ಸನ್ನಿಧಿ ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ. ಪ್ರಸಿದ್ಧ ಕೊಳ್ಳೇಗಾಲ ರೇಷ್ಮೆಗೂಡಿನ ಮಾರುಕಟ್ಟೆ ಬಂದ್ ಆಗಿದ್ದು, ರೇಷ್ಮೆ ಗೂಡಿನ ವ್ಯಾಪಾರವೂ ಸ್ಥಗಿತಗೊಂಡಿದೆ. ಜಿಲ್ಲೆಯಾದ್ಯಂತೆ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ.
ಬೆಂಗಳೂರು: ಇಂದು ಲಾಕ್‍ಡೌನ್ ಇದ್ದರೂ ಅನಾವಶ್ಯಕವಾಗಿ ರಸ್ತೆಗೆ ಇಳಿದಿದ್ದ ಬೈಕ್ ಸವಾರನ ಮೇಲೆ ಸಬ್ ಇನ್‍ಸ್ಪೆಕ್ಟರ್ ಫುಲ್ ಗರಂ ಆಗಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಪೊಲೀಸರು ಅನಾವಶ್ಯಕವಾಗಿ ರಸ್ತೆಗೆ ಇಳಿದವರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಬಂದ ಬೈಕ್ ಸವಾರನೋರ್ವ ಹೊರಗೆ ಬಂದಿದ್ದಕ್ಕೆ ಪೊಲೀಸರ ಮುಂದೆ ಸೂಕ್ತ ಕಾರಣ ನೀಡಿಲ್ಲ. ಪೊಲೀಸರು ಬೈಕ್ ವಶಪಡಿಸಿಕೊಳ್ಳಲು ಮುಂದಾದ ವೇಳೆ ಸವಾರ್ ಕಿರಿಕ್ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಸ್ಥಳದಲ್ಲಿದ್ದ ಎಸ್‍ಐ ಕಾನೂನುಗಿಂತ ದೊಡ್ಡವನ ನೀನು. ನಾನ್ ರಿಪೋರ್ಟ್ ಕೊಡ್ತೀನಿ. ಈ ನನ್ಮಗನ ಮೇಲೆ ಎಫ್‍ಐಆರ್ ಮಾಡ್ರಿ. ಕೀ ಕೊಡು ಅಂದ್ರೆ ಗಾಂಚಾಲಿ ಮಾಡ್ತಿಯಾ? ಬೆಳಗಿನಿಂದ ಊಟ ಇಲ್ಲದೇ ಕೆಲಸ ಮಾಡ್ತಾ ಇದ್ದೀವಿ. ನಾವು ಕೆಲಸ ಮಾಡೋದು ನಿನಗೆ ತಮಾಷೆನಾ ಎಂದು ಕೋಪಗೊಂಡು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕೊನೆಗೆ ಸವಾರನನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ರಾಜ್ಯದಲ್ಲಿ ಕೊರೊನಾ ತಡೆಗಾಗಿ ಸರ್ಕಾರ ಸಂಡೇ ಲಾಕ್‍ಡೌನ್ ಮೊರೆ ಹೋಗಿದೆ. ಸೋಮವಾರ ಬೆಳಗಿನ ಜಾವ ಯಾರು ಹೊರಗೆ ಅನಗತ್ಯವಾಗಿ ಬರಕೂಡದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಲಾಕ್‌ಡೌನ್ ನಡುವೆಯೂ ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಸಂಡೇ ಲಾಕ್‌ಡೌನ್ ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಪೊಲೀಸರು ರಸ್ತೆಗೆ ಇಳಿದಿದ್ದರು. ಕಾರಣ ಇಲ್ಲದೇ ಅನಗತ್ಯವಾಗಿ ತಿರುಗಾಡುತ್ತಿದ್ದ ಮಂದಿಗೆ ಪೊಲೀಸರು ಲಾಠಿ ಏಟು ನೀಡಿ ಮರಳಿ ಕಳುಹಿಸಿದ್ದಾರೆ.
ವಿಜಯನಗರ ಮೆಟ್ರೋ ನಿಲ್ದಾಣದ ಬಳಿ ಪೊಲೀಸರ ಬಿಗಿ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಮಾಸ್ಕ್ ಇಲ್ಲದೆ ಜಾಲಿ ರೌಂಡ್ಸ್ ಗೆ ಬಂದ ಇಬ್ಬರು ಯುವತಿಯರ ಕಾರನ್ನು ಪೊಲೀಸರು ಸೀಝ್ ಮಾಡಿದರು.
ಈ ವೇಳೆ ವ್ಯಕ್ತಿಯೊಬ್ಬ ಮಗನ ಜೊತೆ ಬಂದಿದ್ದಾನೆ. ಯಾವ ಕಡೆಗೆ ಎಂದು ಕೇಳಿದ್ದಕ್ಕೆ ಮಟನ್ ತರಲು ಎಂದು ಹೇಳಿದ್ದಾನೆ. ಮತ್ತಷ್ಟು ಪ್ರಶ್ನೆ ಕೇಳುತ್ತಿದ್ದಂತೆ ಆತ ಗೊಂದಲಕ್ಕೆ ಬಿದ್ದಿದ್ದಾನೆ. ಕೊನೆಗೆ ಪೊಲೀಸರು ಬೈಕ್ ಅನ್ನು ಸೀಝ್ ಮಾಡಲು ಮುಂದಾದಾಗ ದುಡ್ಡು ನೀಡುತ್ತೇನೆ. ದಯವಿಟ್ಟು ಬೈಕ್ ಕೊಡಿ ಎಂದು ಕೇಳಿದ್ದಾನೆ. ಪೊಲೀಸರು ಬೈಕ್ ಸೀಝ್ ಮಾಡಿ ಆತನಿಗೆ ಲಾಠಿ ಏಟು ನೀಡಿ ಕಳುಹಿಸಿದ್ದಾರೆ.
ವ್ಯಕ್ತಿಯೊಬ್ಬ ಪತ್ನಿ, ಮಗನನ್ನು ಕುರಿಸಿಕೊಂಡು ಬಂದಿದ್ದಾನೆ. ಪೊಲೀಸರು ಅಡ್ಡ ಹಾಕಿ ಕೇಳಿದಾಗ ದೇವಾಲಯದಲ್ಲಿ ಪೂಜೆ ಮಾಡಿ ಬರುತ್ತಿರುವುದಾಗಿ ಸುಳ್ಳು ಹೇಳಿದ್ದಾನೆ. ಕೂಡಲೇ ಪೊಲೀಸರು ಆತನ ಗಾಡಿಯನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರು: ನಿಯಂತ್ರಣಕ್ಕೆ ಸಿಗದ ಕೊರೊನಾ ಹೆಮ್ಮಾರಿಗೆ ಮೂಗುದಾರ ಹಾಕೋಕೆ ರಾಜ್ಯ ಸರ್ಕಾರ ದೂರಗಾಮಿ ಅಲ್ಲದ, ಅರ್ಧಂಬರ್ಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಣಾಮ ನಾಳೆ ಮೊದಲ ಸಂಡೇ ಲಾಕ್‍ಡೌನ್ ಜಾರಿಗೆ ಬರಲಿದೆ. ರಾತ್ರಿ 8 ರಿಂದಲೇ ರಾತ್ರಿ ಕರ್ಫ್ಯೂ ಜಾರಿ ಇರುವ ಕಾರಣ, ಇವತ್ತಿನಿಂದಲೇ ಲಾಕ್‍ಡೌನ್ ಶುರುವಾದಂತೆ ಆಗಿದೆ. ಸೋಮವಾರ ನಸುಕಿನ ಜಾವ ಐದು ಗಂಟೆಯವರೆಗೂ ಅಂದ್ರೆ 33 ಗಂಟೆಗಳ ಕಾಲ ಈ ಲಾಕ್‍ಡೌನ್ ಎಫೆಕ್ಟ್ ಜಾರಿಯಲ್ಲಿ ಇರಲಿದೆ.
ಈಗಾಗಲೇ ಬೆಂಗಳೂರಿನ ಎಲ್ಲಾ ಫ್ಲೈ ಓವರ್ ಬಂದ್ ಆಗಿವೆ. ಅಂಗಡಿ ಮುಂಗಟ್ಟು ಮುಚ್ಚಿವೆ. ಜನ ಸಂಚಾರ ವಿರಳವಾಗಿದೆ. ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರ ಮಾತ್ರ ಅಲ್ಲಲ್ಲಿ ಕಂಡುಬರ್ತಿದೆ. ಭಾನುವಾರ ಮನೆಯಿಂದ ಯಾರು ಹೊರಗೆ ಬರಬಾರದು. ಒಂದು ವೇಳೆ ಯಾರಾದ್ರೂ ಹೊರಗೆ ಬಂದ್ರೆ ದಂಡ, ಕೇಸ್ ಜೊತೆಗೆ ಲಾಠಿ ರುಚಿಯನ್ನು ತಿನ್ನಬೇಕಾಗುತ್ತೆ ಎಂದು ಪೊಲೀಸ್ ಆಯುಕ್ತರು, ಬಿಬಿಎಂಪಿ ಆಯುಕ್ತರು ಎಚ್ಚರಿಸಿದ್ದಾರೆ.
ಸಿಲಿಕಾನ್ ಸಿಟಿ ಸಂಪರ್ಕಿಸುವ ಎಲ್ಲಾ ಗಡಿಗಳಲ್ಲಿ ಕಟ್ಟುನಿಟ್ಟಿನ ತಡೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ಬಳಿ, ಮೈಸೂರು ರಸ್ತೆಯಲ್ಲಿ ನೈಸ್ ಬ್ರಿಡ್ಜ್ ಬಳಿ, ಕೆಆರ್ ಪುರಂ ಬಳಿ, ಹೊಸೂರು ರಸ್ತೆಯಲ್ಲಿ ಹೀಗೆ ಎಲ್ಲಾ ಕಡೆ ಚೆಕ್ ಪೊಲೀಸ್ ಚೆಕ್‍ಪೋಸ್ಟ್ ಇರಲಿದೆ. ಏರ್ ಪೋರ್ಟ್‍ಗೆ ತೆರಳೋರಿಗೆ ವಿನಾಯ್ತಿ ಇರಲಿದೆ. ಲಾಕ್‍ಡೌನ್ ಕಾರಣ ಸಂಜೆ ಮದ್ಯದ ಅಂಗಡಿಗಳ ಮುಂದೆ ಜನ ಮುಗಿಬಿದ್ದಿದ್ದರು.
ಸಂಡೆ ಲಾಕ್‍ಡೌನ್: ನಾಳೆ ಏನಿರುತ್ತೆ?
* ಮೀನು, ಮಾಂಸದ ಅಂಗಡಿಗಳು ಓಪನ್
* ಹಣ್ಣು, ತರಕಾರಿ, ದಿನಸಿ ಅಂಗಡಿ ತೆರೆಯಬಹುದು
* ಆಸ್ಪತ್ರೆ, ಮೆಡಿಕಲ್ ಸ್ಟೋರ್ ಓಪನ್
* ಡಾಕ್ಟರ್ಸ್, ನರ್ಸ್, ಆಂಬ್ಯುಲೆನ್ಸ್ ಸಂಚಾರಕ್ಕೆ ಅವಕಾಶ
* ರೋಗಿಗಳು, ಗರ್ಭಿಣಿಯರು ಆಸ್ಪತ್ರೆಗೆ ಹೋಗಬಹುದು
* ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ
* ಎಂದಿನಂತೆ ಸಿಲಿಂಡರ್ ಗ್ಯಾಸ್, ಹಾಲು, ದಿನಪತ್ರಿಕೆ
* ಸರಕು ಸಾಗಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ
ಸಂಡೆ ಲಾಕ್‍ಡೌನ್: ನಾಳೆ ಏನಿರಲ್ಲ?
* ತುರ್ತು ಅವಶ್ಯಕ ಸೇವೆ ಹೊರತುಪಡಿಸಿ ಉಳಿದ ಸೇವೆ ಬಂದ್
* ಸರ್ಕಾರಿ/ಖಾಸಗಿ ಬಸ್‍ಗಳ ಸಂಚಾರ ಸ್ಥಗಿತ
* ಆಟೋ, ಟ್ಯಾಕ್ಸಿ, ಖಾಸಗಿ ವಾಹನಗಳ ಸಂಚಾರ ನಿರ್ಬಂಧ
* ತುರ್ತು ಕೆಲಸ ಹೊರತು ಜನ ಹೊರಗೆ ಬರುವಂತಿಲ್ಲ
* ಪಾರ್ಕ್, ಸಲೂನ್ ಶಾಪ್, ಬ್ಯೂಟಿ ಪಾರ್ಲರ್ ಗಳು ಬಂದ್
* ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ, ಮೆಕಾನಿಕ್ ಅಂಗಡಿ, ಶೋರೂಂ ಲಾಕ್
* ಮಾಲ್‍ಗಳು, ಸೂಪರ್ ಮಾರ್ಕೆಟ್‍ಗಳು ಬಾಗಿಲು ತೆರೆಯಲ್ಲ
* ಕೈಗಾರಿಕೆಗಳು, ಖಾಸಗಿ ಕಂಪನಿಗಳು ಕಾರ್ಯನಿರ್ವಹಿಸುವಂತೆ ಇಲ್ಲ
* ಮದ್ಯದ ಅಂಗಡಿಗಳು ಬಂದ್, ಪಾರ್ಸಲ್ ಕೂಡ ಸಿಗಲ್ಲ.
* ದೇವಸ್ಥಾನ, ಮಸೀದಿ, ಚರ್ಚ್ ಓಪನ್ ಇರಲ್ಲ
* ಲಾಲ್‍ಬಾಗ್ ಸೇರಿದಂತೆ ಪಾರ್ಕ್ ಗಳು ಬಂದ್