ಕೋಲ್ಕತ್ತಾ: ಸುಂದರಬನ್ಸ್‌ನಲ್ಲಿ (Sundarbans) ಅರಣ್ಯ ಇಲಾಖೆ (Forest Department) ಸಿಬ್ಬಂದಿ ಮೇಲೆ ಹುಲಿ ದಾಳಿ (Tiger Attack) ನಡೆಸಿದ ಘಟನೆ ನಡೆದಿದೆ. ಹುಲಿ ದಾಳಿಗೊಳಗಾದ ಅರಣ್ಯ ಇಲಾಖೆ ನೌಕರನನ್ನು ತಕ್ಷಣ ಸಹೋದ್ಯೋಗಿಗಳು ರಕ್ಷಿಸಿದ್ದಾರೆ. ನೌಕರನನ್ನು ರಕ್ಷಿಸುತ್ತಿರುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಂದರಬನ್ಸ್ ಅಭಯಾರಣ್ಯದಲ್ಲಿ ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಅಜ್ಮಲ್ಮರಿ ಅರಣ್ಯಕ್ಕೆ ಅಟ್ಟಲು ಯತ್ನಿಸುತ್ತಿದ್ದರು. ಈ ವೇಳೆ ನೌಕರನ ಮೇಲೆ ಹುಲಿ ದಾಳಿ ಮಾಡಿದೆ.
ಎಂಟರಿಂದ ಹತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಮತ್ತೆ ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದರು. ಇದ್ದಕ್ಕಿದ್ದಂತೆ ಹುಲಿ ಸಿಬ್ಬಂದಿ ಕಡೆಗೆ ಬಂದಿದೆ. ಈ ವೇಳೆ ಅವರು ಕಿರುಚಿದ್ದಾರೆ. ಈ ವೇಳೆ ಹುಲಿ ಒಬ್ಬರ ಮೇಲೆ ಎರಗಿದೆ. ಅಷ್ಟರಲ್ಲೇ ಅಲ್ಲೇ ಇದ್ದ ಸಹೋದ್ಯೋಗಿಗಳು ಕೋಲುಗಳಿಂದ ಹುಲಿಗೆ ಬಡಿದಿದ್ದಾರೆ. ಈ ವೇಳೆ ಹುಲಿ ಆ ವ್ಯಕ್ತಿಯನ್ನು ಬಿಟ್ಟು ಕಾಡಿಗೆ ಓಡಿಹೋಗಿದೆ.
ದೇಹದ ಮೇಲೆ ಹಲವಾರು ಗಾಯಗಳಾಗಿವೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಿದರೆ, ನಾವು ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ಸ್ಥಳಾಂತರಿಸುತ್ತೇವೆ. ಘಟನೆಯಲ್ಲಿ ಓರ್ವ ಸಿಬ್ಬಂದಿ ಹೊರತುಪಡಿಸಿ ಮತ್ಯಾರಿಗೂ ಗಾಯಗಳಾಗಿಲ್ಲ ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ನಿಶಾ ಗೋಸ್ವಾಮಿ ತಿಳಿಸಿದ್ದಾರೆ.
ನಮ್ಮ ತಂಡವು ಟ್ರ್ಯಾಂಕ್ವಿಲೈಜರ್ ಗನ್‌ಗಳು, ಪಂಜರ ಮತ್ತು ಬೆಟ್‌ನೊಂದಿಗೆ ಶಸ್ತ್ರಸಜ್ಜಿತವಾಗಿದೆ. ಹುಲಿ ಓಡಾಡುತ್ತಿರುವ ಪ್ರದೇಶದಲ್ಲಿ ನೈಲಾನ್ ಬಲೆಗಳಿಂದ ಬೇಲಿ ಹಾಕಲಾಗುತ್ತಿದೆ ಮತ್ತು ಗ್ರಾಮಸ್ಥರು ದನಗಳನ್ನು ಮೇಯಲು ಬಿಡದಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಲಕ್ನೋ: ವಿಶ್ವದ ಅತೀ ಉದ್ದದ ನದಿ ವಿಹಾರದ `ಎಂವಿ ಗಂಗಾ ವಿಲಾಸ್’ ಕ್ರೂಸ್ (MV Ganga Vilas Cruise) ಹಡಗಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವರ್ಚುವಲ್‌ನಲ್ಲಿ ಹಸಿರು ನಿಶಾನೆ ತೋರಿದ್ದಾರೆ.
ಇಂದು ಗಂಗಾ ವಿಲಾಸ್ ನದಿ ಪ್ರವಾಸಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ಗಂಗಾ ನದಿಯಲ್ಲಿ ಕ್ರೂಸ್ ಸೇವೆ ಆರಂಭವಾಗುತ್ತಿರುವುದು ಐತಿಹಾಸಿಕ ಕ್ಷಣ. ಇದು ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ವಿದೇಶಿ ಪ್ರವಾಸಿಗರು ಈ ಸೇವೆ ಪಡೆಯುವ ಮೂಲಕ ಭಾರತದ ವೈಭವವನ್ನು ಆಸ್ವಾದಿಸಬೇಕು. ಇದರಿಂದ ನದಿ ವಿಹಾರ ಪ್ರವಾಸೋದ್ಯಮ ಉತ್ತೇಜನಗೊಳ್ಳಲಿದೆ. ಜೊತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ದೇಶದ ವಿವಿಧ ಭಾಗಗಳಲ್ಲೂ ಹೆಚ್ಚಿನ ನದಿ ವಿಹಾರ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ನದಿ ಮಾರ್ಗದ ಪ್ರವಾಸೋದ್ಯಮಕ್ಕೆ ಹೊಸ ದಿಸೆ ನೀಡಲು ಭಾರತ ಸಜ್ಜಾಗಿದೆ. ದೇಶದ ಮೊದಲ ಪ್ರವಾಸಿ ನೌಕೆ ಇದಾಗಿದ್ದು, ನದಿ ಮಾರ್ಗದ ಪ್ರವಾಸವನ್ನು ಆಸ್ವಾದಿಸಲು ವಿದೇಶಿ ಪ್ರವಾಸಗರು ಹೊರಟಿದ್ದಾರೆ. 36 ಸೀಟುಗಳ ಸಾಮರ್ಥ್ಯ ಹೊಂದಿರುವ ಈ ಕ್ರೂಸ್‌ನಲ್ಲಿ ಸ್ವಿಡ್ಜರ್ ಲ್ಯಾಂಡ್‌ನ 32 ಪ್ರವಾಸಿಗರು ಪ್ರವಾಸ ಬೆಳೆಸಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಿಂದ ಆರಂಭಗೊಂಡಿರುವ ಯಾತ್ರೆ 51 ದಿನಗಳ ಬಳಿಕ ಪೂರ್ವ ಅಸ್ಸಾಂನ ದಿಬ್ರೂಗಢಕ್ಕೆ ತಲುಪಲಿದೆ. ಹಾದಿಯುದ್ದಕ್ಕೂ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ. ಎಂವಿ ಗಂಗಾದ ಮೊದಲ ಯಾತ್ರೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ 32 ಪ್ರವಾಸಿಗರು ಭಾಗವಹಿಸಲಿದ್ದಾರೆ. ಯಾತ್ರೆಯು ಮೇ 1ರಂದು ಪೂರ್ಣಗೊಳ್ಳಲಿದೆ.
ಸ್ಪಾ, ಸಲೋನ್, ಜಿಮ್ ಸೌಲಭ್ಯಗಳನ್ನು ಹೊಂದಿರುವ ಈ ಕ್ರೂಸ್‌ನಲ್ಲಿ ಪ್ರತಿದಿನಕ್ಕೆ ಒಬ್ಬ ವ್ಯಕ್ತಿಗೆ 25 ರಿಂದ 50 ಸಾವಿರ ರೂ. ವೆಚ್ಚ ತಗುಲಲಿದೆ. ಒಟ್ಟಾರೆ 51 ದಿನಗಳ ಪ್ರವಾಸಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು 20 ಲಕ್ಷ ರೂ.ಗಳ ವೆಚ್ಚ ಭರಿಸಬೇಕಾಗುತ್ತದೆ. ಅಲ್ಲದೇ ಇದು ಮಾಲಿನ್ಯ ರಹಿತ ಪ್ರವಾಸವಾಗಿದ್ದು, ಶಬ್ಧ ನಿಯಂತ್ರಣ ತಂತ್ರಜ್ಞಾನವನ್ನೂ ಒಳಗೊಂಡಿದೆ ಎಂದು ಉತ್ತಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ತಿಳಿಸಿದ್ದಾರೆ.
ಏನಿದರ ವೈಶಿಷ್ಟ್ಯ?
ಈ ನೌಕೆಯು 62.5 ಮೀಟರ್ ಉದ್ದ ಮತ್ತು 12.8 ಮೀಟರ್ ಅಗಲ ಇದೆ. ಪ್ರವಾಸಿಗರು ಕೊಠಡಿಯಿಂದಲೂ ಹೊರಗಿನ ದೃಶ್ಯಗಳನ್ನು ನೋಡಬಹುದು. ಇದರಲ್ಲಿ 40 ಆಸನಗಳ ರೆಸ್ಟೋರೆಂಟ್, ಸ್ಪಾ ಕೊಠಡಿ ಕೂಡ ಇದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಒಟ್ಟು 18 ಸೂಟ್ ರೂಮ್‌ಗಳನ್ನು ನೌಕೆ ಹೊಂದಿದೆ. ಅಷ್ಟೇ ಅಲ್ಲದೇ ಇದರಲ್ಲಿ ಓಪನ್ ಬಾಲ್ಕನಿ ಕೂಡ ಇದೆ. ಐಷರಾಮಿ ಸೌಲಭ್ಯಗಳನ್ನು ಹೊಂದಿರುವ ಈ ನೌಕೆಯಲ್ಲಿ ಜಿಮ್ ಹಾಗೂ ಇತ್ಯಾದಿ ವ್ಯವಸ್ಥೆ ಇದೆ. ಒಮ್ಮೆಗೆ 32 ಪ್ರವಾಸಿಗರಿಗೆ ಅವಕಾಶ ಸಿಗಲಿದೆ.
ಭಾರತ-ಬಾಂಗ್ಲಾದೇಶದ 27 ನದಿಗಳಲ್ಲಿ ಯಾನ
ಎಂವಿ ಗಂಗಾ ವಿಲಾಸ್ 3,200 ಕಿಮೀ ಯಾನ ಮಾಡಲಿದೆ. ನೌಕೆಯು ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆ ಮಾರ್ಗವಾಗಿ ಸಾಗಲಿದೆ. ಆ ಮೂಲಕ ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್‌ಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪ್ರಯಾಣವನ್ನು ಸ್ಮರಣೀಯ ಆಗಲಿಸಲಿದೆ. ಬಿಹಾರದ ಪಟ್ನಾ, ಜಾರ್ಖಂಡ್‌ನ ಶಿವಗಂಜ್, ಪಶ್ಚಿಮ ಬಂಗಾಳದ ಕೋಲ್ಕತ್ತ, ಬಾಂಗ್ಲಾದೇಶದ ಢಾಕಾ, ಅಸ್ಸಾಂನ ಗುವಾಹಟಿಯಂತಹ ನಗರಗಳೂ ಈ ವಿಹಾರದ ಹಾದಿಯಲ್ಲಿವೆ. ಬಿಹಾರದ ಬೌದ್ಧ ಯಾತ್ರಾ ಸ್ಥಳ ಸಾರನಾಥ, ಪ.ಬಂಗಳಾದ ಸುಂದರಬನ್ (Sundarbans), ಅಸ್ಸಾಂನ ಮಯೊಂಗ್ ಮತ್ತು ಮಜೌಲಿ, ಹುಲಿಗಳ ಆವಾಸಸ್ಥಾನವಾಗಿರುವ ಸುಂದರ್‌ಬನ್‌ನಲ್ಲಿಯೂ ನೌಕೆ ನಿಲುಗಡೆ ಇರುತ್ತದೆ.
ಟಿಕೆಟ್ ದರ ಎಷ್ಟು, ಬುಕ್ ಮಾಡೋದು ಎಲ್ಲಿ?
ಈ ಐಷರಾಮಿ ಪ್ರವಾಸಿ ನೌಕೆಯಲ್ಲಿ ಪ್ರಯಾಣ ಮಾಡಲು ಪ್ರತಿ ವ್ಯಕ್ತಿಗೆ ದಿನಕ್ಕೆ ಸುಮಾರು 24,692.25 ರೂ. (300 ಡಾಲರ್) ವೆಚ್ಚ ಆಗಲಿದೆ. ಟಿಕೆಟ್‌ಗಳನ್ನು ಅಂತರಾ ಐಷಾರಾಮಿ ರಿವರ್ ಕ್ರೂಸಸ್‌ನ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ಪ್ರವಾಸಿಗರು ಎಂವಿ ಗಂಗಾ ವಿಲಾಸ್‌ನಲ್ಲಿ ಸಂಪೂರ್ಣ 51 ದಿನಗಳವರೆಗೆ ಪ್ರವಾಸ ಕೈಗೊಳ್ಳುವುದಾದರೆ, ಒಬ್ಬರಿಗೆ ಸುಮಾರು 12.59 ಲಕ್ಷ (15,3000 ಡಾಲರ್) ಟಿಕೆಟ್ ದರ ಭರಿಸಬೇಕು. ಭಾರತೀಯ ಮತ್ತು ವಿದೇಶಿಯರಿಗೆ ಟಿಕೆಟ್ ದರ ಒಂದೇ ಆಗಿರುತ್ತದೆ.
Live Tv
[brid partner=56869869 player=32851 video=960834 autoplay=true]