Tag: Sundar Gowda

  • ಸ್ಟೇಷನ್ ಮೆಟ್ಟಿಲು ಹತ್ತಿ ಹೈರಾಣಾಗಿದ್ದ ವಿಜಿಗೆ ಪೊಲೀಸ್ರಿಂದ ಮತ್ತೊಂದು ಶಾಕ್

    ಸ್ಟೇಷನ್ ಮೆಟ್ಟಿಲು ಹತ್ತಿ ಹೈರಾಣಾಗಿದ್ದ ವಿಜಿಗೆ ಪೊಲೀಸ್ರಿಂದ ಮತ್ತೊಂದು ಶಾಕ್

    ಬೆಂಗಳೂರು: ನಟ ದುನಿಯಾ ವಿಜಯ್‍ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದ್ದು, ಈಗ ಸ್ಟೇಷನ್ ಮೆಟ್ಟಿಲು ಹತ್ತಿ ಹೈರಾಣಾಗಿದ್ದ ವಿಜಿಗೆ ಪೊಲೀಸರು ಮತ್ತೊಂದು ಶಾಕ್ ಕೊಟ್ಟಿದ್ದಾರೆ.

    ನಿರ್ಮಾಪಕ ಸುಂದರ್ ಗೌಡನನ್ನ ಪರಾರಿ ಮಾಡಿಸಿದ ಪ್ರಕರಣದಲ್ಲಿ ದುನಿಯಾ ವಿಜಯ್ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸಿಕೆ ಅಚ್ಚುಕಟ್ಟು ಪೊಲೀಸರಿಂದ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಚಾರ್ಜ್ ಶೀಟ್ ನ ಎಕ್ಸ್ ಕ್ಲೂಸಿವ್ ಕಾಪಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಏನಿದು ಕೇಸ್?
    ಸುಂದರ್ ಗೌಡ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಖಳನಟರ ಸಾವಿನ ಕೇಸ್ ನಲ್ಲಿ ಕೋರ್ಟ್ ಗೆ ಹಾಜರಾಗಿರಲಿಲ್ಲ. ಬಳಿಕ ರಾಮನಗರ ನ್ಯಾಯಾಲಯದಿಂದ ಸುಂದರ್ ಪಿ ಗೌಡನ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು. ಹೀಗಾಗಿ ಸುಂದರ್ ಗೌಡನನ್ನು ಅರೆಸ್ಟ್ ಮಾಡಲು ಮೇ ತಿಂಗಳಲ್ಲಿ ಸಿಕೆ ಅಚ್ಚುಕಟ್ಟುವಿನಲ್ಲಿರುವ ಮನೆಗೆ ತಾವರೆಕೆರೆ ಪೊಲೀಸರು ಅರೆಸ್ಟ್ ವಾರೆಂಟ್ ತಂದಿದ್ದರು. ಈ ವೇಳೆ ಅಲ್ಲೇ ಇದ್ದ ದುನಿಯಾ ವಿಜಿ ಪೊಲೀಸರ ಮೇಲೆ ದಬ್ಬಾಳಿಕೆ ಮಾಡಿದ್ದರು.

    ರಾತ್ರಿ ವೇಳೆ ದಬ್ಬಾಳಿಕೆ ಮಾಡುತ್ತೀರಾ, ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಅಂತ ಅವಾಜ್ ಹಾಕಿದ್ದರು. ಅಲ್ಲದೇ ಸುಂದರ್ ಪಿ ಗೌಡನನ್ನ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು. ಈ ಬಗ್ಗೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ತಾವರೆಕೆರೆ ಪೊಲೀಸ್ ಠಾಣೆಯ ಎಚ್‍ಸಿ ಗೋವಿಂದರಾಜು ದೂರು ದಾಖಲಿಸಿದ್ದರು. ಕೋರ್ಟ್ ಆದೇಶವನ್ನ ಉಲ್ಲಂಘಿಸಿ, ಸರ್ಕಾರಿ ಕೆಲಸಕ್ಕೆ ತಡೆಯೊಡ್ಡಿದ ಆರೋಪದ ಮೇಲೆ ದೂರು ದಾಖಲಾಗಿತ್ತು.

    ದೂರು ದಾಖಲಾಗುತ್ತಿದ್ದಂತೆ ದುನಿಯಾ ವಿಜಿ ಪರಾರಿಯಾಗಿದ್ದರು. ಬಳಿಕ ಎಸ್‍ಐ ವಿನಯ್ ಅವರು ಬಂಡೀಪುರ ಟೈಗರ್ ರೆಸಾರ್ಟ್ ನಲ್ಲಿ ವಿಜಿಯನ್ನು ಪತ್ತೆ ಮಾಡಿದ್ದರು. ಕೂಡಲೇ ಸಿಕೆ ಅಚ್ಚುಕಟ್ಟು ಪೊಲೀಸರು ವಿಜಿಯನ್ನ ಬಂಡೀಪುರದಿಂದ ಕರೆತಂದು ಅರೆಸ್ಟ್ ಮಾಡಿದ್ದರು. ಬಳಿಕ ದುನಿಯಾ ವಿಜಿ ಅವರು ಕೋರ್ಟ್ ನಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.

    ಪೊಲೀಸರು ಈಗ ದುನಿಯಾ ವಿಜಯ್ ಮೇಲೆ 65 ಪುಟಗಳ ಚಾರ್ಜ್ ಶೀಟ್ ಸಿದ್ಧಪಡಿಸಿ ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಸಂಬಂಧ 9 ಮಂದಿಯನ್ನ ಸಾಕ್ಷಿಯನ್ನಾಗಿ ಪರಿಗಣಿಸಿ ಹೇಳಿಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಹಸ್ಯ ಮದ್ವೆಯ ಗುಟ್ಟನ್ನು ಬಿಚ್ಚಿಟ್ಟ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್, ನಿರ್ಮಾಪಕ ಸುಂದರ್ ಗೌಡ!

    ರಹಸ್ಯ ಮದ್ವೆಯ ಗುಟ್ಟನ್ನು ಬಿಚ್ಚಿಟ್ಟ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್, ನಿರ್ಮಾಪಕ ಸುಂದರ್ ಗೌಡ!

    ಬೆಂಗಳೂರು: ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಹಾಗೂ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ಲಕ್ಷ್ಮೀ ನಾಯ್ಕ್ ಇಬ್ಬರು ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದು ರಹಸ್ಯ ಮದುವೆಯ ವಿಚಾರವನ್ನು ತಿಳಿಸಿದ್ದಾರೆ.

    ತಮ್ಮ ಮದುವೆಗೆ ಬೆಂಬಲ ಸೂಚಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ಅವರು, ಮೊದಲು ನಾವು ಒಳ್ಳೆ ಸ್ನೇಹಿತರಾಗಿದ್ವಿ. ನಂತರ ಫೋನ್ ಕರೆಗಳ ಮೂಲಕ ಹತ್ತಿರವಾಗಿ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಈಗ ನಾವು ಮದುವೆಯಾಗಿ ನಿಮ್ಮ ಮುಂದೆ ಇದ್ದೇವೆ. ಲಕ್ಷ್ಮೀ ಅವರ ಮನೆಯವರು ನಾನು ಬೇರೆ ಜಾತಿ ಇರಬಹುದು ಎಂದು ಅವರು ನಮ್ಮ ಪ್ರೀತಿಯನ್ನು ನಿರಾಕರಿಸಿದ್ದರು ಎಂದು ಅನಿಸುತ್ತಿದೆ. ಆದರೆ ನಾನು ಈ ಮೊದಲೇ ನಮ್ಮ ಪ್ರೀತಿ ಬಗ್ಗೆ ಅವರ ಹತ್ತಿರ ಹೇಳಿದೆ. ಆದರೆ ಅವರು ಒಪ್ಪಲಿಲ್ಲ. ಹಾಗಾಗಿ ನಾವು ಈ ರೀತಿ ಮದುವೆಯಾಗಬೇಕಾಯಿತು ಎಂದು ಸುಂದರ್ ಹೇಳಿದರು.

    ನಮ್ಮ ಮದುವೆ ಮೊದಲೇ ಪ್ಲಾನ್ ಆಗಿತ್ತು. 15 ದಿನದ ಮುಂಚೆ ನಮ್ಮ ಮದುವೆ ಪ್ಲಾನ್ ಆಗಿತ್ತು. ಅವರ ಮನೆಯವರಿಗೂ ಮದುವೆಯ ಬಗ್ಗೆ ತಿಳಿಸಿದೆ. ನಂತರ ಈ ದಿನದಂದು ಮದುವೆ ಆಗೋಣವೆಂದು ನಾನು ಲಕ್ಷ್ಮೀಗೆ ತಿಳಿಸಿದೆ. ಅದೇ ರೀತಿ ನಮ್ಮ ಮದುವೆ ಕೂಡ ನಡೆಯಿತು. ಚಿಕ್ಕಮಗಳೂರಿಗೆ ಹೋಗುವಾಗ ದಾರಿ ಮಧ್ಯೆ ಸಿಗುವ ಗೌರಿ ಗದ್ದೆಯ ಪಾರ್ವತಿ ದೇಗುಲದಲ್ಲಿ ಮದುವೆಯಾದ್ವಿ. ನನ್ನ ಜೊತೆ ಲಕ್ಷ್ಮೀ ಹಾಗೂ ನನ್ನ ನಾಲ್ಕು ಜನ ಸ್ನೇಹಿತರಿದ್ದರು. ನನ್ನ ಮದುವೆಗೆ ನನ್ನ ಕುಟುಂಬದವರ ಯಾವುದೇ ಆಕ್ಷೇಪವಿರಲಿಲ್ಲ ಎಂದು ಸುಂದರ್ ವಿವರಿಸಿದರು.

    ನಾವಿಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದೇವೆ. ಇದರಿಂದ ಎಲ್ಲರಿಗೂ ನೋವಾಗಿದೆ ಎಂದು ನನಗೆ ಗೊತ್ತು. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಾವು ಯಾವುದೇ ಆಸೆ ಅಥವಾ ವ್ಯಾಮೋಹಕ್ಕೆ ಮದುವೆಯಾಗಲಿಲ್ಲ. ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದೇವೆ. ನಾವು ಮಾಡಿದ್ದು ತಪ್ಪು ಎಂದು ನಿಮಗೆ ಅನಿಸಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಲಕ್ಷ್ಮೀ ತುಂಬಾ ಬಬ್ಲಿ ಹುಡುಗಿ, ತುಂಬಾ ಕೇರ್ ಮಾಡುತ್ತಾಳೆ ಹಾಗೂ ಎಲ್ಲರ ಜೊತೆ ಸೋಶಿಯಲ್ ಆಗಿ ಇರುತ್ತಾಳೆ. ಹೀಗಾಗೀ ಲಕ್ಷ್ಮೀ ನನಗೆ ಇಷ್ಟ ಎಂದು ಸುಂದರ್ ತಿಳಿಸಿದ್ದರು.

    ಲಕ್ಷ್ಮಿ ಮಾತನಾಡಿ, ನಮ್ಮ ಕುಟುಂಬದವರು ಒಟ್ಟಿಗೆ ಇರಬೇಕು, ಎಲ್ಲರು ಜೊತೆಯಲ್ಲಿಯೇ ಕುಳಿತು ಊಟ ಮಾಡುವುದು ಎಂದರೆ ನನ್ನ ತಂದೆಗೆ ಇಷ್ಟವಾಗುತ್ತದೆ. ಅದೇ ಗುಣ ನನಗೆ ಸುಂದರ್ ಅವರ ಹತ್ತಿರ ಕಾಣಿಸಿತ್ತು. ಪ್ರತಿ ಮಗಳಿಗೆ ತನ್ನ ತಂದೆಯೇ ಮೊದಲ ಹೀರೋ ಆಗಿರುತ್ತಾರೆ. ಹಾಗೆಯೇ ನನಗೆ ನನ್ನ ತಂದೆಯೇ ಹೀರೋ. ಸುಂದರ್ ಅವರು ನನ್ನ ತಂದೆಯ ಗುಣ ಹೊಂದಿದರಿಂದ ಅದು ನನಗೆ ಇಷ್ಟವಾಯಿತು ಎಂದು ಹೇಳಿದರು.

    ಲಕ್ಷ್ಮೀ ಅವರಿಗೆ ಡಾಕ್ಟರ್ ಆಗಬೇಕೆಂದು ತುಂಬಾ ಆಸೆಯಿದೆ. ಸದ್ಯ ಈಗ ಅವರು 3ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ. ಇದಾದ ಬಳಿಕ ಐಎಎಸ್ ಅಥವಾ ಐಪಿಎಸ್ ಮಾಡಬೇಕೆಂಬ ಆಸೆ ಅವರಿಗಿದೆ. ಅವರ ಆಸೆಯನ್ನು ನಾನು ಪೂರ್ಣ ಮಾಡಬೇಕು. ಲವ್ ಮಾಡಿ ಮದುವೆಯಾಗೋದು ದೊಡ್ಡ ವಿಷಯ ಅಲ್ಲ. ಮದುವೆಯಾದ ಮೇಲೆ ಬದುಕಿ ತೋರಿಸುವುದು ಮುಖ್ಯ. ನಾನು ಹಾಗೆಯೇ ಮಾಡಿ ತೋರಿಸುತ್ತೇನೆ. ಎಲ್ಲರೂ ಮಾತಿನಲ್ಲಿ ಹೇಳುತ್ತಾರೆ. ಆದರೆ ನಾನು ಅದನ್ನು ಮಾಡಿ ತೋರಿಸುತ್ತೇನೆ ಎಂದು ಸುಂದರ್ ಹೇಳಿದರು.

    ಸದ್ಯ ಈಗ ನನ್ನ ಕುಟುಂಬದವರಿಗೆ ನಮ್ಮ ಮೇಲೆ ಕೋಪ ಇದೆ. ಹಾಗಂತ ನಾನು ಅವರನ್ನು ಹಾಗೆಯೇ ಬಿಡುವುದಿಲ್ಲ. ನಮ್ಮ ಇಬ್ಬರು ಕುಟುಂಬ ಒಂದಾಗಬೇಕು. ನಾನು ನಮ್ಮ ಇಬ್ಬರ ಪರವಾಗಿ ಕ್ಷಮೆ ಕೋರುತ್ತೇನೆ ಎಂದು ಲಕ್ಷ್ಮೀ ಹೇಳಿದ್ದಾರೆ.

  • ಮಗಳ ಹೆಸ್ರಲ್ಲಿ 50 ಕೋಟಿ ರೂ. ಆಸ್ತಿ ಇದೆ: ಮದ್ವೆಯಾಗಿದ್ದನ್ನು ನೋಡಿ ಕಣ್ಣೀರಿಟ್ಟ ಲಕ್ಷ್ಮೀ ತಾಯಿ

    ಮಗಳ ಹೆಸ್ರಲ್ಲಿ 50 ಕೋಟಿ ರೂ. ಆಸ್ತಿ ಇದೆ: ಮದ್ವೆಯಾಗಿದ್ದನ್ನು ನೋಡಿ ಕಣ್ಣೀರಿಟ್ಟ ಲಕ್ಷ್ಮೀ ತಾಯಿ

    ಬೆಂಗಳೂರು: ವಯಸ್ಸಿನ ಅಂತರವಿದೆ ಎನ್ನುವ ಕಾರಣಕ್ಕೆ ಲಕ್ಷ್ಮೀ ನಾಯ್ಕ್ ಪೋಷಕರು ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಜೊತೆ ಮದುವೆ ಆಗಲು ನಿರಾಕರಿಸಿದ್ದರು ಎನ್ನುವ ವಿಚಾರ ಈಗ ತಿಳಿದು ಬಂದಿದೆ.

    ಇಬ್ಬರ ನಡುವೆಯೂ 13 ವರ್ಷ ಅಂತರವಿದೆ ಎನ್ನುವ ಕಾರಣಕ್ಕೆ ಈ ಮದುವೆ ಬೇಡ, ನಿನಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಸುತ್ತೇವೆ ಎಂದು ಹೇಳಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಸುಂದರ್ ಪರಿಚಯ ಆಗಿದ್ದು ಹೇಗೆ?
    ಲಕ್ಷ್ಮೀ ನಾಯ್ಕ್ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 3ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದು, 7-8 ತಿಂಗಳ ಹಿಂದೆ ತನ್ನ ಓದುತ್ತಿದ್ದ ಕಾಲೇಜಿನಲ್ಲೇ ಸುಂದರ್ ಗೌಡ ಪರಿಚಯವಾಗಿತ್ತು. ಇವೆಂಟ್ ಮ್ಯಾನೇಜರ್ ಆಗಿರೋ ಸುಂದರ್ ಗೌಡ ಸಹೋದರಿಯ ಪತಿಯ ಮೂಲಕ ಪರಿಚಯಗೊಂಡು ನಂತರ ಮದುವೆಯ ಹಂತಕ್ಕೆ ತಲುಪಿತ್ತು.

    ತಂದೆ ಶಾಸಕ, ತಾಯಿ ಡಾ.ಗೀತಾ ಚೀಫ್ ಮೆಡಿಕಲ್ ಆಫೀಸರ್ ಆಗಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬಕ್ಕೆ ತಕ್ಕ ಹಾಗೆ ಐಪಿಎಸ್, ಐಎಎಸ್ ಗ್ರೇಡ್ ಅಧಿಕಾರಿಯನ್ನು ಹುಡುಕುತ್ತಿದ್ದರು. ಶಿವಮೂರ್ತಿ ನಾಯ್ಕ್ ತನ್ನ ಮಗಳು ಲಕ್ಷ್ಮೀಗೆ ಐಪಿಎಸ್ ಅಧಿಕಾರಿಯನ್ನು ಹುಡುಕಿ ಮದುವೆಯಾಗಲು ಹೇಳಿದ್ದರು. ಆದರೆ ಲಕ್ಷ್ಮೀ ನಾಯ್ಕ್ ಐಪಿಎಸ್ ಅಧಿಕಾರಿಯನ್ನು ಮದುವೆಯಾಗಲು ತಿರಸ್ಕರಿಸಿದ್ದರು.

    ಲಕ್ಷ್ಮಿ ನಾಯ್ಕ್ ಹೆಸರಲ್ಲಿರುವ ಸುಮಾರು 50 ಕೋಟಿ ಆಸ್ತಿ ಹಾಗೂ 5-6 ಶಾಲೆಗಳಿವೆ. ಸುಂದರ್ ಗೌಡ ಜತೆಗಿನ ಪ್ರೀತಿ ವಿಷಯ ಇತ್ತೀಚೆಗಷ್ಟೆ ಲಕ್ಷ್ಮಿ ಕುಟುಂಬಕ್ಕೆ ಗೊತ್ತಾಗಿತ್ತು.

    ನನ್ನ ಮಗಳನ್ನು ಸುಂದರ್ ಗೌಡ ಹೇಗೆ ನೋಡಿಕೊಳ್ತಾನೆ? ಅವನಿಗೆ 36 ವರ್ಷ, ನನ್ನ ಮಗಳಿಗೆ ಇನ್ನೂ 23 ವರ್ಷ. ನನ್ನ ಮಗಳ ಹೆಸರಲ್ಲಿ 50 ಕೋಟಿ ರೂಪಾಯಿ ಆಸ್ತಿ ಪಾಸ್ತಿ ಇದೆ. ಸುಂದರ್ ಗೌಡ ಮಾಸ್ತಿಗುಡಿ ಕೇಸ್‍ನಲ್ಲಿ ಜೈಲಿಗೆ ಹೋಗಿ ಬಂದವನು. ಇವನು ಹೇಗೆ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಲಕ್ಷ್ಮಿ ತಾಯಿ ಡಾ. ಗೀತಾ ತಮ್ಮ ಆಪ್ತರ ಬಳಿ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರಿಟ್ಟಿದ್ದಾರೆ.

  • ದುನಿಯಾ ವಿಜಿ ಜೊತೆ ಠಾಣೆಗೆ ಬಂದ ಸುಂದರ್-ಲಕ್ಷ್ಮೀ ದಂಪತಿ: ಸ್ವಇಚ್ಛೆಯಿಂದ ಮದುವೆ ಆಗಿರುವುದಾಗಿ ಹೇಳಿಕೆ

    ದುನಿಯಾ ವಿಜಿ ಜೊತೆ ಠಾಣೆಗೆ ಬಂದ ಸುಂದರ್-ಲಕ್ಷ್ಮೀ ದಂಪತಿ: ಸ್ವಇಚ್ಛೆಯಿಂದ ಮದುವೆ ಆಗಿರುವುದಾಗಿ ಹೇಳಿಕೆ

    ಬೆಂಗಳೂರು: ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಜೊತೆ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್ ಪ್ರೇಮ ವಿವಾಹ ಪ್ರಕರಣದ ಹಿನ್ನಲೆಯಲ್ಲಿ ಇಂದು ಯಲಹಂಕ ನ್ಯೂಟೌನ್ ಠಾಣೆಗೆ ನವದಂಪತಿ ಆಗಮಿಸಿದ್ದಾರೆ.

    ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಲಕ್ಷ್ಮೀ ನಾಯ್ಕ್ ಕಿಡ್ನ್ಯಾಪ್ ಪ್ರಕರಣ ದಾಖಲಾಗಿತ್ತು. ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ವಿರುದ್ಧ ಲಕ್ಷ್ಮಿ ಪೋಷಕರು ಕಿಡ್ನ್ಯಾಪ್ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ದಂಪತಿಯನ್ನು ನಟ ದುನಿಯಾ ವಿಜಯ್ ಠಾಣೆಗೆ ಕರೆತಂದರು.

    ಗುರುವಾರ ಮೈಸೂರಿನಲ್ಲಿ ಸುಂದರ್ ಹಾಗೂ ಲಕ್ಷ್ಮೀ ಮದುವೆಯಾಗಿದ್ದು, ಬಳಿಕ ಇಂದು ಮುಂಜಾನೆ ನೇರವಾಗಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ದುನಿಯಾ ವಿಜಿ ನಿವಾಸಕ್ಕೆ ಆಗಮಿಸಿದ್ದರು. ಲಕ್ಷ್ಮಿ ನಾಯ್ಕ್ ನಾಪತ್ತೆಯಾಗಿದ್ದ ಬಗ್ಗೆ ಲಕ್ಷ್ಮೀ ಷೋಷಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಇಂದು ಠಾಣೆಗೆ ಬಂದ ನವದಂಪತಿ ಸ್ವ ಇಚ್ಛೆಯಿಂದ ಮದುವೆ ಆಗಿರುವುದಾಗಿ ಹೇಳಿಕೆ ನೀಡಿದ್ದಾರೆ.

    ಲಕ್ಷ್ಮೀ ಯನ್ನ ನಮ್ಮ ಸೊಸೆಯಾಗಿ ಮಾಡಿಕೊಂಡಿದ್ದೇವೆ ಎಂದು ಸುಂದರ್ ಗೌಡ ತಂದೆ, ತಾಯಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

  • ಮದುವೆ ಮಾಡಿಕೊಂಡು ನೇರವಾಗಿ ದುನಿಯ ವಿಜಯ್ ಮನೆಗೆ ಬಂದ ಸುಂದರ್- ಲಕ್ಷ್ಮೀ!

    ಮದುವೆ ಮಾಡಿಕೊಂಡು ನೇರವಾಗಿ ದುನಿಯ ವಿಜಯ್ ಮನೆಗೆ ಬಂದ ಸುಂದರ್- ಲಕ್ಷ್ಮೀ!

    ಬೆಂಗಳೂರು: ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಹಾಗೂ ಕಾಂಗ್ರೆಸ್ ಶಾಸಕರ ಪುತ್ರಿ ಲಕ್ಷ್ಮೀ ಮದುವೆಯಾದ ನಂತರ ನೇರವಾಗಿ ದುನಿಯಾ ವಿಜಯ್ ಮನೆಗೆ ಬಂದಿಳಿದಿದ್ದಾರೆ.

    ದುನಿಯಾ ವಿಜಯ್ ಮನೆಯ ಹತ್ತಿರ ಬರುತ್ತಿದ್ದ ಹಾಗೇ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್ ಕಾರಿನಿಂದ ಇಳಿದು ವಿಜಯ್ ಮನೆಯೊಳಗೆ ಓಡಿ ಹೋದರು. ನಂತರ ಚಿತ್ರೀಕರಣ ಮಾಡಲು ಮುಂದಾದ ಮಾಧ್ಯಮದವರಿಗೆ ನಿರಾಕರಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಪುತ್ರಿ ಜೊತೆ ಮಾಸ್ತಿಗುಡಿ ನಿರ್ಮಾಪಕ ಸುಂದರ್ ಪರಾರಿ – ಚಾಮುಂಡಿ ಬೆಟ್ಟದಲ್ಲಿ ವಿವಾಹ

    ಇಬ್ಬರೂ ಫ್ರೆಶಪ್ ಆದ ನಂತರ ದುನಿಯಾ ವಿಜಯ್ ಇಂದು ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಿದ್ದಾರೆ. ನಂತರ ಪೊಲೀಸರ ಮುಂದೆ ಹಾಜರಾಗಿ ಲಕ್ಷ್ಮೀ ನಾಯ್ಕ್ ಹೇಳಿಕೆ ನೀಡಲಿದ್ದಾರೆ.

    ಮಾಸ್ತಿಗುಡಿ ನಿರ್ಮಾಪಕ ಸುಂದರ್ ಹಾಗೂ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಕಳೆದ ಆರು ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದರು. ಶಾಸಕರ ಯಲಹಂಕ ನ್ಯೂಟೌನ್ ಮನೆಯಿಂದ ಪುತ್ರಿ ನಾಪತ್ತೆಯಾಗಿದ್ದು, ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ಎರಡು ವಿಶೇಷ ತಂಡಗಳಿಂದ ಶಾಸಕರ ಪುತ್ರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಇದನ್ನೂ ಓದಿ: ಮದ್ವೆ ಬಗ್ಗೆ ಸ್ಪಷ್ಟನೆ ನೀಡಿ ತಂದೆಗೆ ಸಂದೇಶ ಕಳುಹಿಸಿದ ಶಾಸಕರ ಪುತ್ರಿ- ವಿಡಿಯೋ ನೋಡಿ

    ಸುಂದರ್ ಮತ್ತು ಲಕ್ಷ್ಮೀ ನಾಯ್ಕ್ ಗುರುವಾರ ಚಾಮುಂಡಿ ಬೆಟ್ಟದಲ್ಲಿ ಮದ್ವೆಯಾಗಿದ್ದಾರೆ. ಹುಡುಗಿಯ ಪೋಷಕರು ಕೂಡ ಜೊತೆಯಲ್ಲಿಯೇ ಇದ್ದು, ಶಾಸಕರಿಗೆ ಇಷ್ಟವಿಲ್ಲದ ಕಾರಣ ರಾತ್ರಿ ಮನೆ ಬಿಟ್ಟು ಹೋಗಿ, ಗುರುವಾರ ಮದುವೆಯಾಗಿದ್ದಾರೆ.