Tag: Sunaina Roshan

  • ತನ್ನ ಸಹೋದರಿಯ ಬದಲಾವಣೆ ಕಂಡು ಹೆಮ್ಮೆ ಪಟ್ಟ ಹೃತಿಕ್ ರೋಶನ್!

    ತನ್ನ ಸಹೋದರಿಯ ಬದಲಾವಣೆ ಕಂಡು ಹೆಮ್ಮೆ ಪಟ್ಟ ಹೃತಿಕ್ ರೋಶನ್!

    ಮುಂಬೈ: ತನ್ನ ಸಹೋದರಿ ಸುನೈನಾ ರೋಶನ್ ಅವರ ಬದಲಾವಣೆ ಕಂಡು ಖುಷಿಯಾಗಿದ್ದೇನೆ ಎಂದು ಬಾಲಿವುಡ್ ನಟ ಹೃತಿಕ್ ರೋಶನ್ ತಮ್ಮ ಖುಷಿಯನ್ನು ಟ್ವಿಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ.

    ಗುರುವಾರ ಹೃತಿಕ್ ತನ್ನ ಸಹೋದರಿಯ ಸದ್ಯದ ಮತ್ತು ಹಳೆಯ ಫೋಟೋಗಳನ್ನು ಕೊಲ್ಯಾಜ್ ಮಾಡಿ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಸುನೈನಾ ಹಳೆಯ ಫೋಟೋದಲ್ಲಿ ಸಾಕಷ್ಟು ದಪ್ಪವಾಗಿ ಇದ್ದರು. ಆದರೆ ಈಗಿನ ಫೋಟೋದಲ್ಲಿ ಸುನೈನಾ ಕಪ್ಪು ಡ್ರೆಸ್ ಮತ್ತು ಅದಕ್ಕೆ ಮುತ್ತಿನ ನೆಕ್ಲೇಸ್ ಹಾಕಿ ತುಂಬಾ ಸ್ಲಿಮ್ ಆ್ಯಂಡ್ ಫಿಟ್ ಆಗಿ ಕಾಣುತ್ತಿದ್ದಾರೆ.

    ಬದಲಾವಣೆ ಅಂದರೆ ಇದು. ಅಕ್ಕ ನಿಮ್ಮ ಮೇಲೆ ನನಗೆ ತುಂಬಾನೇ ಹೆಮ್ಮೆ ಆಗುತ್ತಿದೆ. ಹೀಗೆಯಿರಿ ಅಸಾಧ್ಯವಾದುದ್ದು ಯಾವುದು ಇಲ್ಲ ಎಂದು ಬರೆದು ತಮ್ಮ ಅಕ್ಕನ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ಪೋಸ್ಟಗೆ 20,271 ಲೈಕ್ ಗಳು, 1,481 ರೀ-ಟ್ವೀಟ್ ಹಾಗೂ 1,188 ರಿಪ್ಲೈಗಳು ಬಂದಿವೆ.

    ಹೃತಿಕ್ ಕಾಬಿಲ್ ಚಿತ್ರದಲ್ಲಿ ಕಾಣಿಸಿಕೊಂಡ ನಂತರ ವಿಕಾಸ್ ಬಾಲ್ ನಿರ್ದೇಶನದ ‘ಸೂಪರ್ 30’ ಚಿತ್ರದಲ್ಲಿ ನಟಿಸಲಿದ್ದಾರೆ.

    ಇದನ್ನೂ ಓದಿ:ಹೃತಿಕ್ ರೋಷನ್ ಬುದುಕಿನಲ್ಲಿ ಮತ್ತೆ ಕಂಗನಾ ರಣಾವತ್-ಕಾರಣ ಕೇಳಿದರೆ ಬೆಚ್ಚಿ ಬೀಳ್ತೀರ!