Tag: sun risher hyderabad

  • ಇಶನ್‌ ಕಿಶನ್‌, ಸೂರ್ಯಕುಮಾರ್‌ ಸ್ಫೋಟಕ ಆಟ – ಮುಂಬೈಗೆ 42 ರನ್‌ ಜಯ

    ಇಶನ್‌ ಕಿಶನ್‌, ಸೂರ್ಯಕುಮಾರ್‌ ಸ್ಫೋಟಕ ಆಟ – ಮುಂಬೈಗೆ 42 ರನ್‌ ಜಯ

    ಅಬುಧಾಬಿ: ಕೊನೆಯ ಪಂದ್ಯವನ್ನು ಭಾರೀ ಅಂತರದಿಂದ ಗೆಲ್ಲದೇ ಇದ್ದರೂ ಹೈದರಬಾದ್‌ ಸನ್‌ ರೈಸರ್ಸ್‌ ವಿರುದ್ಧ 42 ರನ್‌ ಗಳಿಂದ ಗೆದ್ದ ಮುಂಬೈ ಇಂಡಿಯನ್ಸ್‌ ಈ ಬಾರಿಯ ಐಪಿಎಲ್‌ನಿಂದ ಹೊರ ನಡೆದಿದೆ.

    ಮುಂಬೈ ನೀಡಿದ 236 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 193 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ನಾಯಕ ಮನೀಶ್‌ ಪಾಂಡೆ ಔಟಾಗದೇ 69 ರನ್‌(41 ಎಸೆತ, 7 ಬೌಂಡರಿ, 2 ಸಿಕ್ಸ್‌) ಜೇಸನ್‌ ರಾಯ್‌ 34 ರನ್‌(21 ಎಸೆತ, 4 ಬೌಂಡರಿ) ಅಭಿಷೇಕ್‌ ಶರ್ಮಾ 33 ರನ್‌(16 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು.

    ಇಂದಿನ ಪಂದ್ಯವನ್ನು 170ಕ್ಕೂ ಅಧಿಕ ರನ್‌ ಗಳಿಂದ ಮುಂಬೈ ಗೆದ್ದಿದ್ದರೆ ನೆಟ್‌ ರನ್‌ ರೇಟ್‌ ಆಧಾರದಲ್ಲಿ ಕೋಲ್ಕತ್ತಾ ಹಿಂದಿಕ್ಕಿ 4ನೇ ಸ್ಥಾನ ಪಡೆಯುತ್ತಿತ್ತು. ಆದರೆ 5ನೇ ಸ್ಥಾನಕ್ಕೆ ಮುಂಬೈ ತೃಪ್ತಿ ಪಟ್ಟಿದ್ದು, ಬೆಂಗಳೂರು ಮತ್ತು ಕೋಲ್ಕತ್ತಾ ಮಧ್ಯೆ ಎರಡನೇ ಪ್ಲೇ ಆಫ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ: ಧೋನಿ ಅಚ್ಚರಿಯ ಹೇಳಿಕೆ

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮುಂಬೈ ಮೊದಲ ಓವರಿನಿಂದ ಭರ್ಜರಿ ಆಟಕ್ಕೆ ಇಳಿದಿತ್ತು. ನಾಯಕ ರೋಹಿತ್‌ ಶರ್ಮಾ ಮತ್ತು ಇಶನ್‌ ಕಿಶನ್‌ ಮೊದಲ ವಿಕೆಟಿಗೆ 33 ಎಸೆತದಲ್ಲಿ 80 ರನ್‌ ಜೊತೆಯಾಟ ನೀಡಿದ್ದರು. ಇಶನ್‌ ಕಿಶನ್‌ ಬೌಂಡರಿ ಸಿಕ್ಸರ್‌ಗಳು ಸಿಡಿಸಿದ ರನ್‌ ಹೆಚ್ಚಿಸುತ್ತಿದ್ದರು. ಇಶನ್‌ ಕಿಶನ್‌ ಕೇವಲ 16 ಎಸೆತಗಳಲ್ಲಿ 50 ರನ್‌ ಚಚ್ಚಿದ್ದರು.

    ರೋಹಿತ್‌ ಶರ್ಮಾ 18 ರನ್‌ ಗಳಿಸಿದರೆ ಇಶನ್‌ ಕಿಶನ್‌ 84 ರನ್‌(32 ಎಸೆತ, 11 ಬೌಂಡರಿ, 4 ಸಿಕ್ಸರ್‌) ಸಿಡಿಸಿ ಔಟಾದರು. ಮುಂಬೈ 43 ಎಸೆತಗಳಲ್ಲಿ 100 ರನ್‌ಗಳ ಗಡಿಯನ್ನು ದಾಟಿತ್ತು.

    ಇಶನ್‌ ಕಿಶನ್‌ ಔಟಾದ ನಂತರ ಸೂರ್ಯಕುಮಾರ್‌ ಯಾದವ್‌ ಹೈದರಾಬಾದ್‌ ಬೌಲರ್‌ಗಳನ್ನು ಚಚ್ಚಲು ಆರಂಭಿಸಿದರು. 40 ಎಸೆತಗಳಲ್ಲಿ 82 ರನ್‌(13 ಬೌಂಡರಿ, 3‌ ಸಿಕ್ಸರ್) ಸಿಡಿಸಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದ್ದರು.