Tag: sun light

  • ಎಲ್ಲೆಲ್ಲಿ ಸೂರ್ಯನ ಕಿರಣ ಹೆಚ್ಚು ಇರುತ್ತೋ ಅಲ್ಲಿ ಹೆಚ್ಚು ಜನ ಗುಣಮುಖರಾಗ್ತಿದ್ದಾರೆ: ಶ್ರೀರಾಮುಲು

    ಎಲ್ಲೆಲ್ಲಿ ಸೂರ್ಯನ ಕಿರಣ ಹೆಚ್ಚು ಇರುತ್ತೋ ಅಲ್ಲಿ ಹೆಚ್ಚು ಜನ ಗುಣಮುಖರಾಗ್ತಿದ್ದಾರೆ: ಶ್ರೀರಾಮುಲು

    – ಎರಡು ವಾರ ಕಠಿಣ ಪರಿಸ್ಥಿತಿ

    ಹಾವೇರಿ: ರಾಜ್ಯದಲ್ಲಿ ಈವರೆಗೆ 260 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲಿ 71 ಜನ ಈಗಾಗಲೇ ಗುಣಮುಖರಾಗಿದ್ದಾರೆ. ಮುಂದಿನ ಎರಡು ವಾರಗಳ ಕಾಲ ಕಠಿಣ ಪರಿಸ್ಥಿತಿ ಇದೆ. ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲೆಲ್ಲಿ ಸೂರ್ಯನ ಕಿರಣ ಹೆಚ್ಚು ಬೀಳುತ್ತಿವೆಯೋ ಅಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರು ಹೆಚ್ಚು ಗುಣಮುಖರಾಗುತ್ತಿದ್ದಾರೆ. ಈವರೆಗೆ ರಾಜ್ಯದಲ್ಲಿ ಪ್ರಾಥಮಿಕ ಟೆಸ್ಟ್ ಮಾತ್ರ ಮಾಡುತ್ತಿದ್ದೆವು. ಈಗ ಎರಡನೇ ಹಂತದ ಟೆಸ್ಟ್ ಮಾಡಲು ಪ್ರಾರಂಭ ಮಾಡಿದ್ದೇವೆ. ಇತ್ತೀಚೆಗೆ ನಡೆದ ಕ್ಯಾಬಿನೇಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

    ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದೇನೆ. ಎಲ್ಲೆಲ್ಲಿ ಏನೇನು ಸ್ಥಿತಿಗತಿ ಇದೆ ಎನ್ನುವುದರ ಬಗ್ಗೆ ಸಿಎಂ ಯಡಿಯೂರಪ್ಪ ಮಾನಿಟರ್ ಮಾಡುತ್ತಿದ್ದಾರೆ. ಕೊರೊನಾ ಹರಡುವುದನ್ನು ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.

  • ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋದ ಕಲಬುರಗಿಯ ಮದ್ಯಪ್ರಿಯರು

    ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋದ ಕಲಬುರಗಿಯ ಮದ್ಯಪ್ರಿಯರು

    ಕಲಬುರಗಿ: ಬೇಸಿಗೆ ಕಾಲ ಬಂದರೆ ಸಾಕು ತಂಪು ಪಾನೀಯಗಳಿಗೆ ಜನ ಮೊರೆ ಹೋಗುತ್ತಾರೆ. ಆದರೆ ಬಿಸಿಲ ನಾಡು ಕಲಬುರಗಿಯ ಮದ್ಯಪ್ರಿಯರು ಬಿಸಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋಗಿದ್ದಾರೆ. ಅಬಕಾರಿ ಇಲಾಖೆ ನೀಡಿರುವ ಅಂಕಿ ಅಂಶಗಳು ಇದನ್ನು ಹೇಳುತ್ತಿವೆ.

    ಬೇಸಿಗೆ ಕಾಲ ಆರಂಭವಾದ ನಂತರ ಕಲಬುರಗಿ ಜಿಲ್ಲೆಯಲ್ಲಿ ಮಾರ್ಚ್‍ನಿಂದ ಇಂದಿನವರೆಗೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದ ಬಚಾವಾಗಲು ಕಲಬುರಗಿಯಲ್ಲಿನ ಮದ್ಯಪ್ರಿಯರು ಮಧ್ಯಾಹ್ನ 12 ಗಂಟೆಯಾದ್ರೆ ಸಾಕು, ನೇರವಾಗಿ ಬಾರ್‍ಗಳತ್ತ ಮುಖ ಮಾಡಿ ಚಿಲ್ಡ್ ಬೀಯರ್ ಒಂದರ ಮೇಲೊಂದು ಬಾಟಲಿಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಬಾರ್‍ಗಳು ಮಧ್ಯಾಹ್ನವಾದ್ರೆ ಗಿರಾಕಿಗಳಿಂದ ಫುಲ್ ಆಗ್ತಾ ಇವೆ. ಈ ಬಗ್ಗೆ ಖುದ್ದು ಗ್ರಾಹಕರನ್ನು ಕೇಳಿದ್ರೆ ಬಿಸಲಿನ ತಾಪ ಹೆಚ್ಚಳದಿಂದ ಹಾರ್ಡ್ ಡ್ರಿಂಕ್ಸ್ ಬದಲು ಬೀಯರ್ ಮೊರೆ ಹೋಗಿದ್ದೇವೆ ಎಂದು ಹೇಳುತ್ತಾರೆ.

    ಅಬಕಾರಿ ಇಲಾಖೆಯ ಪ್ರಕಾರ ಕಳೆದ ವರ್ಷಕ್ಕಿಂತ ಈ ವರ್ಷ ಏಪ್ರಿಲ್ ನಲ್ಲಿ 10 ಸಾವಿರದ 396 ಬೀಯರ್ ಬಾಕ್ಸ್ ಗಳು ಹೆಚ್ಚಿಗೆ ಮಾರಾಟವಾಗಿದ್ದು, ಇದನ್ನು ಅರಿತ ಮದ್ಯದಂಗಡಿಯವರು ಇದೀಗ ಬಿಯರ್ ಸ್ಟಾಕ್ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅಬಕಾರಿ ಇಲಾಖೆಗೆ ಕೋಟಿ ಕೋಟಿ ಹಣ ಕೇವಲ ಬೀಯರ್ ಮಾರಾಟದಿಂದ ಆದಾಯ ಬರುತ್ತಿದೆ. ಬೇಸಿಗೆ ಕಾಲದ ಈ ಮೂರು ತಿಂಗಳಲ್ಲಿ ಹಗಲು ಹೊತ್ತಿನಲ್ಲಿಯೇ ಬೀಯರ್ ಸೇವನೆ ಗ್ರಾಹಕರು, ಸಂಜೆಯಾದ್ರೆ ಮಾಮೂಲು ನಿತ್ಯದ ಗ್ರಾಹಕರು ಎಂದು ಬಾರ್‍ವೊಂದರ ವ್ಯವಸ್ಥಾಪಕರು ಹೇಳುತ್ತಾರೆ.