Tag: Sun Eclipse

  • ನಾಳೆ ವರ್ಷದ ಮೊದಲ ಸೂರ್ಯ ಗ್ರಹಣ

    ನಾಳೆ ವರ್ಷದ ಮೊದಲ ಸೂರ್ಯ ಗ್ರಹಣ

    -ಸೂರ್ಯ ಗ್ರಹಣ ಗೋಚರವಾಗುವ ಸಮಯ

    ಬೆಂಗಳೂರು: ನಾಳೆ ಅಂದ್ರೆ ಜನವರಿ 6ರಂದು ಸೂರ್ಯ ಗ್ರಹಣ ದಿನ. ಈಗಷ್ಟೇ 2018ನ್ನು ಬೀಳ್ಕೊಟ್ಟು ಹೊಸ ವರ್ಷಕ್ಕೆ ಕಾಲಿರಿಸಿದ್ದೇವೆ. 2018 ಕಳೆದು 2019ರ ಆರಂಭದಲ್ಲಿ ನಭೋಮಂಡಲದಲ್ಲಿ ವಿಸ್ಮಯ ಘಟನೆ ನಡೆಯಲಿದೆ.

    ಜನವರಿ 6ನೇ ತಾರೀಖು ಭಾನುವಾರ ಸೂರ್ಯಗ್ರಹಣ ಸಂಭವಿಸಲಿದೆ. ಇದು ವರ್ಷದ ಪ್ರಪ್ರಥಮ ಗ್ರಹಣ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗಿನ ಜಾವ 5 ಗಂಟೆ 4 ನಿಮಿಷದಿಂದ ಬೆಳಗ್ಗೆ 9 ಗಂಟೆ 18 ನಿಮಿಷದವರೆಗೂ ಗ್ರಹಣ ಗೋಚರಿಸಲಿದೆ. ಭಾರತದಲ್ಲಿ ಈ ಗ್ರಹಣ ಗೋಚರವಾಗಲ್ಲ. ಏಷ್ಯಾದ ಈಶಾನ್ಯ ಭಾಗದಲ್ಲಿ ಮತ್ತು ಫೆಸಿಫಿಕ್‍ನಲ್ಲಿ ಅಂದ್ರೆ ಚೀನಾ, ರಷ್ಯಾದ ಕೆಲ ಭಾಗಗಳಲ್ಲಿ, ಕೊರಿಯಾ, ತೈವಾನ್ ಹಾಗೂ ಜಪಾನ್ ದೇಶಗಳಲ್ಲಿ ಮಾತ್ರ ಗ್ರಹಣ ಗೋಚರವಾಗಲಿದೆ. ಇದನ್ನೂ ಓದಿ: ಭೂಮಿ ಮೇಲಾಗ್ತಿದೆಯಾ 2019ರ ಗ್ರಹಣದ ಎಫೆಕ್ಟ್..!?

    2018 ಭೂಮಂಡಲದಲ್ಲಿ ಒಂದರ ಹಿಂದೆ ಒಂದು ಎಂಬಂತೆ (ಕೇರಳ ಪ್ರವಾಹ, ಕೊಡಗು ಪ್ರವಾಹ, ಇಂಡೋನೇಷ್ಯಾ ಸುನಾಮಿ ಇತ್ಯಾದಿ) ಅನಾಹುತಗಳು ಮೆರವಣಿಗೆ ನಡೆದಿದ್ದವು. ವರ್ಷದ ಆರಂಭದಿಂದ ಹಿಡಿದು 365 ದಿನವೂ ಮನುಕುಲ ಆತಂಕದಲ್ಲೇ ಬದುಕಿತ್ತು. ಗ್ರಹಣ ಒಂದು ಸಾಮಾನ್ಯ ನೈಸರ್ಗಿಕ ಘಟನೆಯಾಗಿರಬಹುದು. ವಿಜ್ಞಾನಿಗಳು ಗ್ರಹಣವನ್ನ ತುಂಬಾನೇ ಸಿಂಪಲ್ ಆಗಿ ಪರಿಗಣಿಸಲುಬಹುದು. ಗ್ರಹಣ ಕಾಲದ ಆಸುಪಾಸಿನಲ್ಲಿ ಭೂಮಿಯಲ್ಲಿ ನೈಸರ್ಗಿಕ ವಿಕೋಪಗಳು ನಡೆಯೋದು ಗ್ರಹಣದ ಎಫೆಕ್ಟ್ ಅನ್ನೋದು ಜೋತಿಷ್ಯಿಗಳ ವಾದ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಮನುಕುಲದ ಮೇಲೆ ಪರಿಣಾಮ ಬೀರುತ್ತೆ ಅಂತ ಹೇಳುತ್ತೆ. ರಾಶಿಗನುಸಾರವಾಗಿ ಅಥವಾ ವೈಯಕ್ತಿಕವಾಗಿಯೂ ಹಾಗೂ ಪ್ರಕೃತಿಯ ವೈಪರೀತ್ಯಕ್ಕೂ ಈ ಗ್ರಹಣ ಕಾರಣವಾಗುತ್ತೆ ಅಂತ ಜೋತಿಷ್ಯರು ಹೇಳುತ್ತಾರೆ. ಇದನ್ನೂ ಓದಿ: ನವ ವರ್ಷದ ಮೊದಲ ವಾರದಲ್ಲೇ ಗ್ರಹಣದ ಹಿಡಿತ-ಜನವರಿ ತಿಂಗಳಲ್ಲೇ ಡಬಲ್ ಗ್ರಹಣ

    ಸೂರ್ಯಗ್ರಹಣ ಹೇಗೆ ಜರಗುತ್ತದೆ?
    ಇದೊಂದು ನೈಸರ್ಗಿಕ ಸಹಜ ಪ್ರಕ್ರಿಯೆ. ಭೂಮಿ, ಸೂರ್ಯ ಹಾಗೂ ಚಂದ್ರನ ಮಧ್ಯೆ ನಡೆಯುವಂತಹ ಪ್ರಕ್ರಿಯೆ. ಸೂರ್ಯನ ಕಿರಣಗಳು ಭೂಮಂಡಲದ ಮೇಲೆ ಬೀಳದೆ ಇರೋದು ಸೂರ್ಯಗ್ರಹಣ. ಈ ಮೂರು ಗ್ರಹಗಳು ಒಂದೇ ರೇಖೆಗೆ ಸಮನಾಗಿ ಬಂದು ತಲುಪುತ್ತದೆ. ಈ ವೇಳೆ ಸೂರ್ಯನ ಕಿರಣಗಳು ಭೂಮಿಯನ್ನ ಸ್ಪರ್ಶಿಸದಂತೆ ಚಂದ್ರ ತಡೆಯುತ್ತದೆ. ಈ ಸಂದರ್ಭದಲ್ಲಿ ಸೂರ್ಯಗ್ರಹಣ ಉಂಟಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭೂಮಿ ಮೇಲಾಗ್ತಿದೆಯಾ 2019ರ ಗ್ರಹಣದ ಎಫೆಕ್ಟ್..!?

    ಭೂಮಿ ಮೇಲಾಗ್ತಿದೆಯಾ 2019ರ ಗ್ರಹಣದ ಎಫೆಕ್ಟ್..!?

    ಬೆಂಗಳೂರು: ವರ್ಷದ ಮೊದಲ ತಿಂಗಳಾದ ಜನವರಿಯಲ್ಲೇ ತಲಾ ಒಂದು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಜರುಗಲಿದೆ. ಜನವರಿ 6ರಂದು ಸೂರ್ಯಗ್ರಹಣ ಮತ್ತು 21ರಂದು ಚಂದ್ರಗ್ರಹಣ ಘಟಿಸಲಿವೆ. ಹಾಗಾಗಿ ನಭೋಮಂಡಲದ ಈ ವಿದ್ಯಮಾನ ಭೂಮಿಗೆ ಕಂಟಕಗಳನ್ನ ಹೊತ್ತು ಬರಲಿದೆಯಾ ಅನ್ನೋ ಅನುಮಾನ ಮೂಡೋದಕ್ಕೆ ಶುರುವಾಗಿದೆ. ಮುಂದಿನ ದಿನಗಳ ಆಸುಪಾಸಿನಲ್ಲಿ ಪ್ರಕೃತಿ ಯಾವ ರೀತಿ ಕೆರಳಲಿದೆಯೋ ಎಂಬ ಭೀತಿ ಕಾಡೋದಕ್ಕೆ ಶುರುವಾಗಿದೆ.

    ಹೊಸ ವರ್ಷದ ಗ್ರಹಣಗಳ ಬಗ್ಗೆ ಜೋತಿಷ್ಯ ಲೋಕ ಕೂಡಾ ಸಾಕಷ್ಟು ಕುತೂಹಲದಿಂದ ಇದ್ದು, 2019ರ ಭಯಾನಕ ಜಾತಕ ಬಿಚ್ಚಿಟ್ಟ ಆನಂದ ಗುರೂಜಿ ಈ ವಿದ್ಯಮಾನ ಅಪಾಯಕಾರಿ ಅಂತಾರೆ. ಭಾರತಕ್ಕೆ ಗ್ರಹಣ ಗೋಚರವಾಗುತ್ತೋ ಇಲ್ವೋ ಅನ್ನೋದಕ್ಕಿಂತ, ಗ್ರಹಣ ಸಮಯದಲ್ಲಿ ಭೂಮಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದೆಲ್ಲದರ ಮುನ್ಸೂಚನೆ ಎಂಬಂತೆಯೇ ಈಗಾಗಲೇ ವಿಶ್ವದಲ್ಲಿ ಕೆಲ ವಿನಾಶಕಾರಿ ಘಟನೆಗಳು ನಡೆಯುತ್ತಿವೆ ಅನ್ನೋದು ಅವರ ಅಭಿಪ್ರಾಯವಾಗಿದೆ.

    2019ರ ಹೊಸ್ತಿಲಲ್ಲೆ ಸೌರಮಂಡಲದಲ್ಲಿ ಕೌತುಕದ ವಿದ್ಯಮಾನ ಏರ್ಪಡುತ್ತಿದೆ. ಇದು ಸಾಮಾನ್ಯ ವಿದ್ಯಮಾನದಂತೆ ಕಂಡು ಬಂದರೂ ಕರಾಳತೆಯನ್ನ ಪ್ರದರ್ಶಿಸುವ ಸಾಧ್ಯತೆಗಳು ಹೆಚ್ಚಿವೆ. ಹೊಸ ವರ್ಷದ ಆರಂಭದಲ್ಲೇ ಪೂರ್ಣ ಚಂದ್ರ ಗ್ರಹಣ ಬಂದಿದೆ. ಈ ಪೂರ್ಣ ಪ್ರಮಾಣದ ರಕ್ತ ಚಂದ್ರ ಗ್ರಹಣ ಪೂರ್ಣ ಪ್ರಮಾಣದಲ್ಲೇ ಅಪಾಯಗಳ ಆತಂಕವನ್ನ ಹುಟ್ಟುಹಾಕೋ ಸೂಚನೆಗಳು ನೀಡಿದಂತಿದೆ. 2019ರಲ್ಲೂ ಸಾಲು ಸಾಲು ಗ್ರಹಣಗಳಿದ್ದು, ಈ ಗ್ರಹಣಗಳೇ ಗಂಡಾಂತರಗಳನ್ನ ಹೊತ್ತು ಬರಲಿವೆ ಎನ್ನಲಾಗುತ್ತಿದೆ.

    ಹೊಸ ವರ್ಷದಲ್ಲಿ 5 ಗ್ರಹಣಗಳಿದ್ದು, ಜನವರಿಯಲ್ಲೇ ಭೀಕರವಾದ ರಕ್ತ ಚಂದ್ರಗ್ರಹಣ ಎದುರಾಗಲಿದೆ. ಇದು ಜನರನ್ನ ಆತಂಕದ ಕೂಪಕ್ಕೆ ತಳ್ಳಿದೆ. ಈಗ ಭುಗಿಲೆದ್ದಿರುವ ಭೀಕರ ಭೂಕಂಪ, ಜಲಪ್ರಳಯಗಳಂತಹ ಪ್ರಾಕೃತಿಕ ವಿಕೋಪಗಳ ಮೇಲೆ ರಕ್ತ ಚಂದ್ರ ಗ್ರಹಣ ಪ್ರಭಾವ ಬೀರುವ ಎಲ್ಲಾ ಲಕ್ಷಣಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ವರ್ಷದ ಆರಂಭದಲ್ಲಿ ಗ್ರಹಣ ಎಫೆಕ್ಟ್:
    ನಭೋಮಂಡಲದ ಪ್ರಕ್ರಿಯೆ ಭೂಮಿ ಮೇಲೆ ವ್ಯತಿರಿಕ್ತ ಪರಿಣಾಮವನ್ನ ಬೀರಲಿದೆ ಅನ್ನೋದನ್ನ ಸಾಕಷ್ಟು ಮಂದಿ ಹೇಳುತ್ತಾ ಬಂದಿದ್ದಾರೆ. ಈಗ ಭೂಮಿ ಮೇಲೆ ಆಗುತ್ತಿರುವ ಬೆಳವಣಿಗೆಗಳನ್ನ ನೋಡಿದ್ರೆ ನಿಜಕ್ಕೂ ಇವೆಲ್ಲಾ ವಿನಾಶಕಾರಿ ಬೆಳವಣಿಗೆಯಾ ಅಂತಾ ಅನ್ನಿಸದೇ ಇರೋದಿಲ್ಲ. ಮುಂದಾಗೋ ಗ್ರಹಣದ ಪ್ರಭಾವಕ್ಕೆ ಈಗಲೇ ಪ್ರಕೃತಿ ಕೆರಳಿ ನಿಂತಿದೆಯಾ ಅನ್ನೋ ಸಂಶಯನೂ ಕಾಡುತ್ತಿದೆ.

    ಇತ್ತೀಚಿನ ದಿನಗಳಲ್ಲಿ ಭೂಮಿ ಮೇಲೆ ಯಾವಾಗ ಏನಾಗುತ್ತೆ ಅನ್ನೋದನ್ನ ಕರಾರುವಕ್ಕಾಗಿ ಹೇಳೋಕಾಗ್ತಿಲ್ಲ. ಅಂತಹದರಲ್ಲಿ ಹೊಸ ವರ್ಷಕ್ಕೆ ಕಾಲಿಡುವ ಹೊಸ್ತಿಲಲ್ಲೇ ಪ್ರಕೃತಿ ಪದೇ ಪದೇ ಕೆರಳುತ್ತಿದೆ ಶಾಂತವಾಗಿದ್ದ ಕಡಲು ಏಕಾಏಕಿ ಕೆರಳಿ ಅಬ್ಬರಿಸೋದಕ್ಕೆ ಶುರವಾಗುತ್ತೆ. ಸಮುದ್ರ ದಡಕ್ಕೆ ದೈತ್ಯ ಅಲೆಗಳು ಬಂದು ಅಪ್ಪಳಿಸಿ ಸಿಕ್ಕಿದ್ದನ್ನೆಲ್ಲಾ ರಕ್ಕಸ ಅಲೆ ಎಳೆದೊಯ್ಯುತ್ತಿದೆ. ಸುಪ್ತವಾಗಿರೋ ಅಗ್ನಿಪರ್ವತಗಳು ಏಕಾಏಕಿ ಸ್ಫೋಟವಾಗ್ತಿವೆ. ನಿಂತ ನೆಲವೇ ಕುಸಿದು ಬೀಳುವಂತೆ ಭೂಮಿ ಕಂಪಿಸುತ್ತಿದೆ.


    ಗ್ರಹಣದ ಎಫೆಕ್ಟ್ ಗೆನೇ ವಿಶ್ವದೆಲ್ಲೆಡೆ ಭಯಾನಕವಾದಂತಹ, ವಿಚಿತ್ರವಾದ ಘಟನೆಗಳು ನಡೆಯುತ್ತಿವೆಯಂತೆ. ಪದೇ ಪದೇ ಇಂಡೋನೇಷ್ಯಾ ಮೇಲೆ ಸುನಾಮಿ ಉಗ್ರರೂಪ ತಾಳಿ ದಾಳಿ ಮಾಡುತ್ತಿದೆ. ಅಬ್ಬರಿಸಿದ ಸಮುದ್ರ ಸ್ವಲ್ಪವೂ ಗ್ಯಾಪ್ ಕೊಡದೇ ಪದೇ ಪದೇ ಕೆರಳುತ್ತಿದೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಕಸ ಅಲೆಗಳ ರಣಭೀಕರ ದಾಳಿಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಹುಣ್ಣಿಮೆ, ಜ್ವಾಲಾಮುಖಿ ಸ್ಫೋಟದಿಂದ ಕೆರಳಿದ ಅಲೆಗಳು ಸುನಾಮಿ ರೂಪ ತಾಳಿ ಅವಾಂತರ ಸೃಷ್ಟಿ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಪಿಲಿಫೈನ್‍ನಲ್ಲಿರುವ ಮಿಂಡನೌ ದ್ವೀಪದಲ್ಲಿ ಭೂಕಂಪನ ಉಂಟಾಗಿದೆ. ಸುಮಾರು 7 ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಈ ಭೂಕಂಪನ ಉಂಟಾದ ಬೆನ್ನಲ್ಲೇ ಸಮುದ್ರದ ಅಲೆಗಳಲ್ಲಿ ಬದಲಾವಣೆ ಆಗಿ ಭಯಾನಕ ಅನುಭವ ನೀಡಿದೆ.

    ಹೊಸ ವರ್ಷದ ಮೊದಲ ತಿಂಗಳಲ್ಲಿ ಚಂದ್ರ ಗ್ರಹಣ ಸಂಭವಿಸುತ್ತಿದ್ದು ವರ್ಷಪೂರ ಅದ್ಯಾವ ಗ್ರಹಗತಿಗಳು ಈ ದೇಶವನ್ನ ಕಾಡಲಿದೆಯೋ ಅನ್ನೋದು ಮತ್ತೊಂದು ಆತಂಕ. ಅಲ್ಲದೇ ಜನವರಿ 21ರಂದು ಸೌರ ಮಂಡಲದಲ್ಲಿ ನಡೆಯೋ ಕೌತುಕ ಮುಂದಿನ ದಿನಗಳಲ್ಲಿ ಭಾರೀ ಗಂಡಾತರವನ್ನು ಸೃಷ್ಟಿಸಲಿದ್ಯಂತೆ. ವಿಜ್ಞಾನಿಗಳೇನೋ ಎಂದಿನಂತೆ ಇಂದೊಂದು ಕ್ರಿಯೆ ಭಯ ಪಡೋ ಅಗತ್ಯವೇ ಇಲ್ಲ ಅಂತ ಸುಮ್ಮನಾದ್ರೂ ಕೂಡಾ, ಸಂಖ್ಯಾಶಾಸ್ತ್ರಜ್ಞರು, ಜೋತಿಷ್ಯಿಗಳು ಮಾತ್ರ ವಿನಾಶ ಕಾಲ ಹತ್ತಿರವಾಯ್ತು ಅಂತಲೇ ಭವಿಷ್ಯ ನುಡಿಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶನಿವಾರ ನಭೋಮಂಡಲದಲ್ಲಿ ಮತ್ತೊಂದು ಗ್ರಹಣ

    ಶನಿವಾರ ನಭೋಮಂಡಲದಲ್ಲಿ ಮತ್ತೊಂದು ಗ್ರಹಣ

    ಬೆಂಗಳೂರು: ಶನಿವಾರ ನಭೋಮಂಡಲದಲ್ಲಿ ಮತ್ತೊಂದು ಕೌತುಕ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಗುರುವಾರ ಮಧ್ಯಾಹ್ನ 1 ಗಂಟೆ 32 ನಿಮಿಷದಿಂದ ಸಂಜೆ 5 ಗಂಟೆ 02 ನಿಮಿಷದವರೆಗೆ ಸೂರ್ಯಗ್ರಹಣ ಘಟಿಸಲಿದೆ.

    ಈ ಬಾರಿ ಜನರಿಗೆ ಯಾವುದೇ ಆತಂಕ ಇಲ್ಲ. ಯಾಕಂದ್ರೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಗ್ರಹಣದ ಯಾವುದೇ ಆಚರಣೆಗಳನ್ನ ಪಾಲಿಸುವ ಅಗತ್ಯವೂ ಇಲ್ಲ. ಆದ್ರೆ ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಾತ್ರ ಪೂಜೆ ವೇಳೆಯಲ್ಲಿ ವ್ಯತ್ಯಯವಾಗಿದೆ. ಗ್ರಹಣದ ವೇಳೆ ಭಕ್ತರಿಗೆ ದೇವರ ದರ್ಶನ ಮಾತ್ರ ಸಿಗಲಿದ್ದು, ಪೂಜೆ, ನೈವೇದ್ಯ ಅರ್ಚನೆ ಇರಲ್ಲ. ಬೆಳಗ್ಗೆ 10 ಗಂಟೆಯೊಳಗೆ ಪೂಜೆ ನಡೆಯಲಿದೆ. ಅಮಾವಾಸ್ಯೆಯ ಜೊತೆಗೆ ಗ್ರಹಣ ಬಂದಿರೋದ್ರಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

    ಮಧ್ಯಾಹ್ನ 1.32ಕ್ಕೆ ಗ್ರಹಣ ಸ್ಪರ್ಶಕಾಲ. ಮಧ್ಯಾಹ್ನ 3.16 ಗ್ರಹಣ ಮಧ್ಯಕಾಲ. ಸೂರ್ಯ ಗ್ರಹಣದ ಮೋಕ್ಷ ಕಾಲ ಸಂಜೆ 5 ಗಂಟೆ. ಗ್ರಹಣ ಭಾರತದಲ್ಲಿ ಗೋಚರಿಸದ ಕಾರಣ, ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಯಾವುದೇ ಗೊಂದಲ ಬೇಡ ಅಂತ ಕಾಡುಮಲ್ಲೇಶ್ವರ ದೇಗುಲದ ಅರ್ಚಕರಾದ ಗಂಗಾಧರ್ ಹೇಳಿದ್ದಾರೆ.

  • ಮತ್ತೊಂದು ಸೂರ್ಯ ಗ್ರಹಣ-ಭಾರತಕ್ಕಿದೆಯಾ ಖಂಡಗ್ರಾಸ ಗ್ರಹಣದ ಎಫೆಕ್ಟ್?

    ಮತ್ತೊಂದು ಸೂರ್ಯ ಗ್ರಹಣ-ಭಾರತಕ್ಕಿದೆಯಾ ಖಂಡಗ್ರಾಸ ಗ್ರಹಣದ ಎಫೆಕ್ಟ್?

    ಬೆಂಗಳೂರು: ಹದಿನೈದು ದಿನಗಳ ಹಿಂದಷ್ಟೇ ಶತಮಾನದ ಭೂಮಂಡಲದ ಅಪರೂಪದ ಕೌತುಕ ರಕ್ತಚಂದಿರನ ಕಣ್ತುಂಬಿಕೊಂಡಿದ್ದೇವೆ. ಈಗ ಮತ್ತೊಂದು ಸೂರ್ಯ ಗ್ರಹಣಕ್ಕೆ ಜನ ಅಣಿಯಾಗಬೇಕಿದೆ. ಇಂದು ಮಧ್ಯರಾತ್ರಿ 12:25 ಗ್ರಹಣ ಆರಂಭವಾಗಿ, ಮುಂಜಾನೆ 4:17 ನಿಮಿಷಕ್ಕೆ ಮುಕ್ತಾಯವಾಗಲಿದೆ.

    ಹುಡುಕಿದಷ್ಟೂ ಕೆದಕಿದಷ್ಟು ಕೌತುಕಗಳನ್ನ ಅಡಗಿಸಿಟ್ಟುಕೊಂಡಿರುವ ಸೌರಮಂಡಲದಲ್ಲಿ ಇಂದು ಮತ್ತೊಂದು ಕೌತುಕ ಘಟನೆ ನಡೆಯಲಿದೆ. ಈ ಖಂಡಗ್ರಾಸ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಕರ್ನಾಟಕಕ್ಕೆ ಯಾವ ಎಫೆಕ್ಟ್ ಇರುವದಿಲ್ಲ. ಈ ಸೂರ್ಯಗ್ರಹಣ ದಕ್ಷಿಣ ಅಮೇರಿಕಾ, ಅಂರ್ಜೆಟೈನಾ, ಅಂಟಾರ್ಟಿಕಾದಲ್ಲಿ ಮಾತ್ರ ಗೋಚರಿಸುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಗ್ರಹಣ ಸಂಭವಿಸಲಿದ್ದು, ಸೂರ್ಯನ ಶೇಕಡಾ 30 ರಿಂದ 40 ರಷ್ಟು ಭಾಗ ಮಾತ್ರ ಗ್ರಹಣ ಪೀಡಿತವಾಗಿರುತ್ತದೆ.

    ಈ ಗ್ರಹಣದ ಬಗ್ಗೆ ಭಯ ಬೇಡ ಅನ್ನೋದು ಕೆಲ ಜ್ಯೋತಿಷಿಗಳ ವಾದ. ಯಾಕೆಂದರೆ ಗ್ರಹಣ ಪೀಡಿತ ಪ್ರದೇಶದಲ್ಲಿ ಭಾರತವಾಗಲೀ ಅಥವಾ ಕರ್ನಾಟಕವಾಗಲೀ ಇಲ್ಲ. ಅಲ್ಲದೇ ಮಧ್ಯರಾತ್ರಿ ಗ್ರಹಣ ಆರಂಭವಾಗಿ ಮುಂಜಾನೆಯಷ್ಟರೊಳಗೆ ಮುಗಿದು ಹೋಗತ್ತದೆ. ಹಾಗಾಗಿ ಗ್ರಹಣ ಸಂಭವಿಸುವ ವೇಳೆ ನಾವೆಲ್ಲಾ ನಿದ್ರಾವಸ್ಥೆಯಲ್ಲಿರುತ್ತೇವೆ. ಹಾಗಾಗಿ ಆತಂಕ ಬೇಡ ಎಂದು ಜ್ಯೋತಿಷಿ ಡಾ. ವಿದ್ವಾನ್ ಕಮಲಾಕರ್ ಭಟ್ ಹೇಳುತ್ತಾರೆ.

    ಮನುಷ್ಯನ ದೇಹ ಪಂಚಭೂತಗಳಿಂದ ಕೂಡಿದೆ. ಜಗತ್ತಿಗೆ ಒಬ್ಬನೇ ಸೂರ್ಯ. ಹಾಗಾಗಿ ಗ್ರಹಣ ಪೀಡಿತ ಸೂರ್ಯನಿಂದ ಕೆಲ ವ್ಯತಿರಿಕ್ತ ಪರಿಣಾಮಗಳು ಬೀರುತ್ತವಂತೆ. ಹಾಗಾಗಿ ಗ್ರಹಣ ಕಾಲದ ವ್ರತಾಚರಣೆಗಳನ್ನ ಪಾಲಿಸಬೇಕಂತೆ. ಒಟ್ಟಿನಲ್ಲಿ ಸೂರ್ಯ ಕಿರಣಗಳಂತೂ ನಮ್ಮ ಮೇಲೆ ಬೀಳಲ್ಲ. ಆದರೂ ಗ್ರಹಣ ಅತೀವವಾಗಿ ನಂಬುವವರು ಗ್ರಹಣ ಕಾಲಸ ರೀತಿ ರಿವಾಜುಗಳನ್ನ ಪಾಲಿಸೋದ್ರಿಂದ ಯಾವ ನಷ್ಟವೂ ಇಲ್ಲ ಅಂತಾ ಕೆಲ ಜ್ಯೋತಿಷಿಗಳು ಹೇಳುತ್ತಾರೆ.