Tag: summer dress

  • ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಬೇಕೆ? – ಒಂದು ಕ್ಲಿಕ್‌ನಲ್ಲಿದೆ ಸಿಂಪಲ್‌ ಟಿಪ್ಸ್‌

    ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಬೇಕೆ? – ಒಂದು ಕ್ಲಿಕ್‌ನಲ್ಲಿದೆ ಸಿಂಪಲ್‌ ಟಿಪ್ಸ್‌

    ಬೇಸಗಿಯ ಬಿರು ಬಿಸಿಲು ಜನರ ನೆತ್ತಿ ಸುಡುತ್ತಿದೆ, ಮನೆಯೊಳಗಿದ್ದರೂ ಧಗೆಯ ಬೇಗೆ ಹೆಚ್ಚಾಗಿದೆ. ಫ್ಯಾನು ಎ.ಸಿ ಬಿಟ್ಟಿರಿಂಗೇ ಇಲ್ಲ. ಈ ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಡಿಮೆಯಾಗಿರುವಂತೆ ನೋಡಿಕೊಳ್ಳವುದು ಬಹಳ ಮುಖ್ಯ. ಅದಕ್ಕಾಗಿ ದೇಹ ತಂಪಾಗಿರಲು ದೇಹದಲ್ಲಿ ನೀರಿನ ಅಂಶ ಪ್ರಮುಖ ಪಾತ್ರವಹಿಸುತ್ತದೆ. ನೀರು, ಪಾನೀಯಗಳ ಜೊತೆ ಹಣ್ಣುಗಳು ಸಹ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ನಾವು ಇಂತಹ ಸಮಯದಲ್ಲಿ ನಾವು ಸೇವಿಸುವ ಆಹಾರ, ಧರಿಸುವ ಬಟ್ಟೆ, ಇರುವ ವಾತಾವರಣ ಎಲ್ಲವೂ ದೇಹದ ಮೇಲೆ ಪರಿಣಾಮ ಬೀರುತ್ತದೆ.

    ಬೇಸಿಗೆಯಲ್ಲಿ ಬಿಸಿಲಿನ ಝಳದಿಂದ ನಿರ್ಜಲೀಕರಣಕ್ಕೆ ಒಳಗಾಗುವುದು ಒಂದು ತೊಂದರೆಯಾದರೆ, ಬೆವರು, ಬೆವರುಸಾಲೆ, ಚರ್ಮ ಒಣಗುವಿಕೆ, ಬಿಸಿಲಿಗೆ ಒಡ್ಡಿದ ಚರ್ಮದ ಭಾಗ ಕಪ್ಪಗಾಗುವುದು, ಬಿರಿಯುವುದು ಮೊದಲಾದ ತೊಂದರೆಯಾಗಿವೆ. ಈ ತೊಂದರೆಗಳಿಗೆ ಆಯುರ್ವೇದ ಕ್ಷಾರೀಯ ಆಹಾರಗಳನ್ನು ಸೇವಿಸುವಂತೆ ಸಲಹೆ ಮಾಡುತ್ತದೆ ಹಾಗೂ ದೇಹವನ್ನು ತಂಪಾಗಿರಿಸಲು ಕೆಲವು ಕ್ರಮಗಳನ್ನುಸೂಚಿಸಿದೆ. ಅದಕ್ಕೆ ನಾವೇನು ಮಾಡಬೇಕು ಅನ್ನೋದರ ಕುರಿತು ಒಂದಿಷ್ಟು ಟಿಪ್ಸ್‌ ಇಲ್ಲಿದೆ…

    ದೈನಂದಿನ ತ್ವಚೆಯ ಆರೈಕೆಯಲ್ಲಿ ಕೊಬ್ಬರಿ ಎಣ್ಣೆ ಸೇರಿಸಿಕೊಳ್ಳಿ
    ನಿತ್ಯವೂ ಬೆಳಿಗ್ಗೆ, ಸ್ನಾನಕ್ಕೂ ಮುನ್ನ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ದೇಹಕ್ಕೆ ಚೆನ್ನಾಗಿ ತಿಕ್ಕಿಕೊಳ್ಳಿ. ಈ ಮೂಲಕ ತ್ವಚೆಗೆ ತಂಪಾದ ಅನುಭವ ಸಿಗುವ ಜೊತೆಗೇ ಉರಿಯಾಗದೇ ಇರಲೂ ಸಾಧ್ಯವಾಗುತ್ತದೆ. ಕೊಬ್ಬರಿ ಎಣ್ಣೆ ಲಭ್ಯವಿಲ್ಲದಿದ್ದರೆ ಸೂರ್ಯಕಾಂತಿ ಎಣ್ಣೆಯನ್ನೂ ಬಳಸಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.

    Coconut oil, essential oil, organic cosmetic

    ಪಿತ್ತ ಶಮನಗೊಳಿಸುವ ಆಹಾರ ಸೇವಿಸಿ
    ದೇಹವನ್ನು ತಂಪಾಗಿರಿಸಲು ಪಿತ್ತವನ್ನು ಶಮನಗೊಳಿಸುವ ಗುಣವಿರುವ ಆಹಾರಗಳನ್ನು ಬೇಸಿಗೆಯಲ್ಲಿ ಸೇವಿಸಬೇಕು. ಇವು ದೇಹವನ್ನು ತಂಪಾಗಿಸುವ ಜೊತೆಗೆ ಹೆಚ್ಚುವರಿ ಶಾಖವನ್ನು ದೇಹದಿಂದ ಹೊರಹಾಕಲೂ ನೆರವಾಗುತ್ತವೆ. ಇದಕ್ಕಾಗಿ ನೀರಿನಂಶ ಹೆಚ್ಚಾಗಿರುವ ಆಹಾರಗಳಾದ ಕಲ್ಲಂಗಡಿ, ಮರಸೇಬು (ಪಿಯರ್ಸ್), ಸೇಬು, ಪ್ಲಂ ಹಣ್ಣುಗಳು, ವಿವಿಧ ಬೆರ್‍ರಿ ಹಣ್ಣುಗಳು, ಪ್ರೂನ್ಸ್ ಮೊದಲಾದವುಗಳನ್ನು ಸೇವಿಸಬೇಕು. ಜೊತೆಗೇ ತರಕಾರಿಗಳಾದ ಶತಾವರಿ, ಬ್ರೋಕೋಲಿ, ಬ್ರಸಲ್ಸ್ ಮೊಗ್ಗುಗಳು, ಸೌತೆಕಾಯಿ ಮೊದಲಾದವುಗಳನ್ನೂ ಸೇವಿಸಬೇಕು., ಪುದಿನಾ, ಮಜ್ಜಿಗೆ ಮೊದಲಾದವುಗಳಿಂದ ತಯಾರಿಸಿದ ಪಾನೀಯಗಳೂ ಉತ್ತಮ ಆಯ್ಕೆಯಾಗಿವೆ.

    ​ಸರಿಯಾದ ಸಮಯದಲ್ಲಿ ಆಹಾರ ಸೇವಿಸಿ
    ಜೀರ್ಣಾಗ್ನಿ ಅತ್ಯಂತ ಪ್ರಬಲವಾಗಿದ್ದಾಗಿನ ಸಮಯದಲ್ಲಿಯೇ ಊಟ ಮಾಡಿ. ಇದು ನಡು ಮಧ್ಯಾಹ್ನ ಅಥವಾ ಸೂರ್ಯ ಸರಿಯಾಗಿ ನೆತ್ತಿಯ ಮೇಲಿದ್ದಾಗ ಗರಿಷ್ಟವಾಗಿರುತ್ತದೆ. ಈ ಸಮಯದಲ್ಲಿ ಆಹಾರ ಸೇವಿಸುವ ಮೂಲಕ ಪಿತ್ತದೋಶ ಎದುರಾಗುವುದಿಲ್ಲ. ಇದೇ ಕಾರಣದಿಂದ ಮಧ್ಯಾಹ್ನದ ಊಟ ಬಿಡಬಾರದು, ಬಿಟ್ಟರೆ ಪಿತ್ತದೋಶ ಎದುರಾಗುತ್ತದೆ ಮತ್ತು ದೇಹದಲ್ಲಿ ಉರಿಯೂತ ಹಾಗೂ ಚಡಪಡಿಕೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ದಿನದ ಮೂರೂ ಹೊತ್ತಿನ ಊಟಗಳನ್ನು ಸಮಯಕ್ಕೆ ಸರಿಯಾಗಿ ಸೇವಿಸಬೇಕು. ತಡವೂ ಆಗಬಾರದು ಮತ್ತು ಬಿಡಲೂಬಾರದು. ಜೊತೆಗೆ ನೀರನ್ನು ಸಾಧ್ಯವಾದಷ್ಟು ಕುಡಿಯುತ್ತಲೇ ಇರಬೇಕು. ಜೊತೆಗೆ ಬಿಸಿ ಪೇಯಗಳಿಂದ ಅಂದ್ರೆ ಕಾಫೀ, ಟೀ ಅಂತಹ ದೇಹದ ಉಷ್ಣಾಂಶ ಹೆಚ್ಚಿಸುವ ಲಿಕ್ವಿಡ್‌ಗಳನ್ನು ಸೇವಿಸಬಾರದು.

    ಸ್ನಾನಕ್ಕೆ ತಣ್ಣೀರು ಬಳಸಿ
    ಬೇಸಿಗೆಯಲ್ಲಿ ನಿಮ್ಮ ದೇಹವು ಒಳಗಿನಿಂದ ತುಂಬಾ ಬಿಸಿಯಾಗುತ್ತಿದ್ದರೆ, ನೀವು ಸ್ನಾನಕ್ಕೆ ತಣ್ಣೀರನ್ನು ಬಳಸಬೇಕು. ಹೀಗೆ ಮಾಡಿದಾಗ, ನಿಮ್ಮ ದೇಹದ ಉಷ್ಣತೆ ನಿಯಂತ್ರಣದಲ್ಲಿರುತ್ತದೆ. ಸ್ನಾನದ ನಂತರವೂ ನಿಮಗೆ ತುಂಬಾ ಸೆಕೆ ಅನಿಸುತ್ತಿದ್ದರೆ, ನಿಮ್ಮ ಮಣಿಕಟ್ಟು, ಕುತ್ತಿಗೆ, ಹಣೆ ಮತ್ತು ಪಾದಗಳಿಗೆ ಕೂಲಿಂಗ್ ಪ್ಯಾಕ್‌ಗಳನ್ನು ಬಳಸಬಹುದು.

    ಹಗುರ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಿ
    ಬೇಸಿಗೆಯಲ್ಲಿ ಸಡಿಲ ಮತ್ತು ಹಗುರವಾದ ಬಟ್ಟೆಗಳನ್ನು ಧರಿಸುವುದರಿಂದ ದೇಹವನ್ನು ಇನ್ನಷ್ಟು ಆರಾಮದಾಯಕಗೊಳಿಸಬಹುದು. ಇದರಿಂದ ದೇಹದ ಉಷ್ಣತೆ ಹೆಚ್ಚಾಗದಂತೆ ನಿಯಂತ್ರಣದಲ್ಲಿಡಬಹುದು.

  • ನಾರಿಮಣಿಯರಿಗೆ ಸಮ್ಮರ್ ಫ್ಯಾಷನ್ ಟಿಪ್ಸ್

    ನಾರಿಮಣಿಯರಿಗೆ ಸಮ್ಮರ್ ಫ್ಯಾಷನ್ ಟಿಪ್ಸ್

    ಬೇಸಿಗೆಯಲ್ಲಿ (Summer) ನಾರಿಮಣಿಯರು ಪ್ರಯಾಣ ಮಾಡಬೇಕಾದ ಸಂದರ್ಭ ಬಂದಾಗ ಆದಷ್ಟೂ ಬೇಸಿಗೆ ಕಾಲಕ್ಕೆ ಹೊಂದುವಂತಹ ಕಂಫರ್ಟಬಲ್ ಕೂಲ್ ಫ್ಯಾಷನ್ ತಮ್ಮದಾಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆರಾಮದಾಯಕವಲ್ಲದ ಪ್ರಯಾಣ ನಿಮ್ಮದಾಗಬಹುದು. ಇದಕ್ಕಾಗಿ ಯಾವ ಬಗೆಯ ಫ್ಯಾಷನ್ ಬಟ್ಟೆಗಳನ್ನು (Fashion Dress) ಆಯ್ಕೆ ಮಾಡಬೇಕು? ಯಾವುದನ್ನು ಆವಾಯ್ಡ್ ಮಾಡಬೇಕು? ಎಂಬುದರ ಬಗ್ಗೆ ಫ್ಯಾಷನ್ ಸಂಬಂಧಿಸಿದ ಒಂದಿಷ್ಟು ಸಲಹೆಗಳು ಇಲ್ಲಿವೆ. ಇದನ್ನೂ ಓದಿ:ನಟಿ ರಮೋಲ ಒಂದು ದಿನದ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ!

    ಸುಡುಬೇಸಿಗೆಯಲ್ಲಿ ಒಪ್ಪುವಂತಹ ಟ್ರಾವೆಲ್ ಫ್ಯಾಷನ್ ಈಗಾಗಲೇ ಲಗ್ಗೆ ಇಟ್ಟಿದ್ದು, ಆರಾಮದಾಯಕ ಎಂದೆನಿಸುವ ನಾನಾ ಬಗೆಯ ಸಮ್ಮರ್ ಫ್ಯಾಷನ್‌ವೇರ್‌ಗಳು ಫ್ಯಾಷನ್ ಲೋಕದಲ್ಲಿ ಸದ್ದು ಮಾಡುತ್ತಿದೆ. ಪ್ರತಿ ಸಮ್ಮರ್‌ನಲ್ಲೂ ಟ್ರಾವೆಲ್ ಮಾಡುವುದು ಸಾಕುಸಾಕಪ್ಪ ಎಂದನಿಸುತ್ತದೆ. ಧರಿಸಿರುವ ಉಡುಪು ಆಕ್ಸೆಸರೀಸ್‌ಗಳು ಕೆಲವೊಮ್ಮೆ ಉಸಿರುಗಟ್ಟಿಸುತ್ತವೆ. ಹೇರ್ ಸ್ಟೈಲ್ ಕಿರಿಕಿರಿಯುಂಟು ಮಾಡುತ್ತವೆ. ಮುಖ ಬೆವೆತು ಮೇಕಪ್ ನೀರಾಗುತ್ತದೆ. ಕಂಫರ್ಟಬಲ್ ಪದ ಉಲ್ಟಾ ಹೊಡೆಯುತ್ತದೆ. ಸೋ, ಸಮ್ಮರ್‌ನಲ್ಲಿ ಆದಷ್ಟೂ ಸಿಂಪಲ್ ಹಾಗೂ ಕಂಫರ್ಟಬಲ್ ಸ್ಟೈಲಿಂಗ್ ಉತ್ತಮ.

    ಟ್ರಾವೆಲ್ ಮಾಡುವಾಗ ಧರಿಸುವ ಉಡುಪು ಸಮ್ಮರ್‌ಗೆ ಸೂಟ್ ಆಗುವಂತಿರಬೇಕು. ಅದರಲ್ಲೂ ಬೇಸಿಗೆಯ ಬಿರು ಬಿಸಿಲಿಗೆ ಅಂಟುವಂತಿರಬಾರದು. ಆದಷ್ಟೂ ಹಗುರವಾದ, ಆರಾಮ ಏನಿಸುವ ಉಡುಪುಗಳನ್ನು ಆಯ್ಕೆ ಮಾಡಬೇಕು. ಶಾರ್ಟ್ ಹಾಗೂ ಸ್ಲೀವ್‌ಲೆಸ್‌ಗೆ ಆದ್ಯತೆ ನೀಡಿದರೆ ಉತ್ತಮ. ಅದರಲ್ಲೂ ಸಿಂಪಲ್ ಬಟ್ಟೆಗಳನ್ನು ಆಯ್ಕೆ ಮಾಡುವುದು ಬೆಸ್ಟ್. ಆದಷ್ಟೂ ಸೀರೆ ಹಾಗೂ ಗಾಗ್ರ, ಲೆಹೆಂಗಾದಂತಹ ಉಡುಪುಗಳಿಗೆ ಗುಡ್ ಬೈ ಹೇಳುವುದು ಬೆಸ್ಟ್. ಇನ್ನು, ಪ್ರಯಾಣಿಸುವಾಗ ಆದಷ್ಟೂ ಉಲ್ಲಾಸ ತುಂಬುವ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

    ಇನ್ನು, ಕಾಲರ್ ನೆಕ್, ಟೈಟ್ ಫಿಟ್ಟಿಂಗ್, ಮೈಗೆ ಅಂಟಿಕೊಳ್ಳುವಂತಹ ಹಗ್ಗಿಂಗ್ ಡ್ರೆಸ್, ಫುಲ್ ಸ್ಲೀವ್ ಸಲ್ವಾರ್, ಲಾಂಗ್ ಸಲ್ವಾರ್ ಸೇರಿದಂತೆ ಅಡಿಯಿಂದ ಮುಡಿಯವರೆಗೆ ಗಾಳಿಯಾಡದಂತೆ ಕ್ಲೋಸ್ ಆಗಿರುವಂತಹ ಉಡುಪುಗಳು ಬೇಸಿಗೆ ಟ್ರಾವೆಲ್ ಟೈಮ್‌ಗೆ ಯಾವುದೇ ಕಾರಣಕ್ಕೂ ಆಯ್ಕೆ ಮಾಡಿಕೊಳ್ಳಬೇಡಿ. ಇವು ಉಸಿರುಗಟ್ಟಿಸುವುದರೊಂದಿಗೆ ನಿಮ್ಮನ್ನು ನಿತ್ರಾಣರಾಗಿಸುತ್ತವೆ.

    ಈ ಸೀಸನ್‌ನಲ್ಲಿ, ಅದರಲ್ಲೂ ಟ್ರಾವೆಲ್ ಮಾಡುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಭಾರಿ ಆಭರಣಗಳನ್ನು ಧರಿಸಬೇಡಿ. ಅದರಲ್ಲೂ ಬಂಗಾರವನ್ನು ದೂರವಿಡಿ. ಇವು ಮೈ ಮೇಲೆ ಭಾರವೆನಿಸುತ್ತವೆ. ಜೊತೆಗೆ ಕಂಫರ್ಟಬಲ್ ಆಗಿರುವುದಿಲ್ಲ. ಈ ವೇಳೆ, ಸಿಂಪಲ್ ಸ್ಟಡ್ಸ್ ಹಾಗೂ ಚೈನ್ ಆಯ್ಕೆ ಮಾಡಿದರೆ ಜಂಜಾಟವಿರುವುದಿಲ್ಲ.

    ಯಾವುದೇ ಕಾರಣಕ್ಕೂ ಫುಲ್ ಬೂಟ್ಸ್ ಅಥವಾ ಆಫ್ ಶೂಗಳಂತವನ್ನು ಟ್ರಾವೆಲ್ ಸಮಯದಲ್ಲಿ ಆವಾಯ್ಡ್ ಮಾಡಿ. ಇವು ಪಾದವನ್ನು ಕವರ್ ಮಾಡುವುದರಿಂದ ಗಾಳಿಯಾಡಲು ಅವಕಾಶ ಸಿಗದೇ ಪಾದಗಳು ಜಡ್ಡು ಹಿಡಿದಂತೆ ಆಗಬಹುದು. ಫ್ಲಿಪ್ ಫ್ಲಾಪ್ ಚಪ್ಪಲಿಗಳು, ಒಪನ್ ಸ್ಟ್ರಾಪ್ ಸ್ಯಾಂಡಲ್‌ಗಳನ್ನು ಧರಿಸಬಹುದು.

    ಬೇಸಿಗೆಯಲ್ಲಿ ಟ್ರಾವೆಲ್ ಮಾಡುವಾಗ ಆದಷ್ಟು ಸಿಂಪಲ್ ಮೇಕಪ್‌ಗೆ ಆದ್ಯತೆ ನೀಡಿ. ಮುಖ ಬೆವರಿದರೆ ಸ್ವೆಟ್ ಟಿಶ್ಯೂ ಜೊತೆಯಲ್ಲಿಟ್ಟುಕೊಳ್ಳಿ. ಹಾಗೆಂದು ಕಂಡ ಕಂಡ ಕಡೆಯೆಲ್ಲಾ ಮುಖ ತೊಳೆಯುವುದನ್ನು ರೂಢಿಸಿಕೊಳ್ಳಬೇಡಿ. ಕೆಲವೊಮ್ಮೆ ನೀರಿನಿಂದ ಮುಖ ತೀರಾ ಡ್ರೈ ಆಗುವ ಸಂದರ್ಭವಿರುತ್ತದೆ. ಒಂದು ದಿನಕ್ಕಿಂತ ಹೆಚ್ಚು ಸಮಯ ಟ್ರಾವೆಲ್‌ನಲ್ಲಿ ಕಳೆಯಬೇಕಾದಲ್ಲಿ, ಹೊರದೇಶಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಕಣ್ಣಿಗೆ ಕಾಡಿಗೆ ಬಳಸುವುದನ್ನು ಅವಾಯ್ಡ್ ಮಾಡಿ. ಸನ್ ಟ್ಯಾನ್ ಆಗದಂತೆ ನೋಡಿಕೊಳ್ಳಿ.

    ಸಮ್ಮರ್ ಟ್ರಾವೆಲ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್:

    * ಭಾರಿ ತೂಕದ ಜಾಕೆಟ್ ಸ್ಕಾರ್ಫ್, ಕೋಟ್ ಧರಿಸಬೇಡಿ.

    * ಸನ್‌ಸ್ಕ್ರೀನ್ ಹಾಗೂ ಮಾಯಿಶ್ಚರೈಸರ್ ಜೊತೆಗಿರಲಿ.

    * ನಿಯಾನ್ ಹಾಗೂ ಟ್ರೈಟ್ ಪ್ಲೋರಲ್ ಟ್ರೆಂಡಿ ಉಡುಪುಗಳ ಆಯ್ಕೆ ಮಾಡಿ.

  • ಸುಡುವ ಬೇಸಿಗೆಯಲ್ಲಿ ಯಾವ ಬಟ್ಟೆ ಬೆಸ್ಟ್- ಇಲ್ಲಿದೆ ಟಿಪ್ಸ್

    ಸುಡುವ ಬೇಸಿಗೆಯಲ್ಲಿ ಯಾವ ಬಟ್ಟೆ ಬೆಸ್ಟ್- ಇಲ್ಲಿದೆ ಟಿಪ್ಸ್

    ಬೇಸಿಗೆ ಆರಂಭವಾಯಿತು. ನಮ್ಮೊಳಗೂ, ಹೊರಗೂ ಧಗೆ ಸಹಿಸಲಸಾಧ್ಯ ಎನ್ನುವಂತಹ ವಾತಾವರಣ. ಈ ರಣಬಿಸಿಲಿಗೆ ಏನೋ ಅಸಹನೆ, ಕಿರಿಕಿರಿ. ಬೆಳಗಾದ್ರೆ ಕೆಲಸದ ಗಡಿಬಿಡಿ. ಕಚೇರಿಗೆ ತೆರಳಬೇಕು ಎಂದರೆ ಇವತ್ತು ಯಾವ ಬಟ್ಟೆ ಧರಿಸಲಿ ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡುತ್ತದೆ. ನಾವು ಧರಿಸುವ ಬಟ್ಟೆ ನೋಡಲು ಸುಂದರವಾಗಿದ್ದರೆ ಮಾತ್ರ ಸಾಲದು, ಮನಸ್ಸಿಗೂ ದೇಹಕ್ಕೂ ಹಿತಕರವಾಗಿರಬೇಕು.‌ ಇದನ್ನೂ ಓದಿ:‘ಎಕ್ಕ’ ಸಿನಿಮಾದ ಫಸ್ಟ್‌ ಸಾಂಗ್‌ ಔಟ್- ಯುವ ರಾಜ್‌ಕುಮಾರ್ ಜಬರ್ದಸ್ತ್ ಪರ್ಫಾಮೆನ್ಸ್

    ಬೇಸಿಗೆಯಲ್ಲಿ (Summer) ಕಂಫರ್ಟಬಲ್ ಆಗಿರಲು ಯಾವ ರೀತಿಯ ಡ್ರೆಸ್ ಬೆಸ್ಟ್, ಸಮ್ಮರ್‌ನಲ್ಲೂ ಫ್ಯಾಶನೆಬಲ್ ಆಗಿ ಕಾಣಿಸಿಕೊಳ್ಳಲು ಯಾವ ರೀತಿಯ ಉಡುಪು ಒಳ್ಳೆಯದು, ಬೇಸಿಗೆ ಕಾಲದಲ್ಲಿ ನಿಮ್ಮ ವಾಡ್ರೋಬ್‌ನಲ್ಲಿ ಇರಲೇಬೇಕಾದ ಬಟ್ಟೆಗಳು (Dress) ಯಾವುದು ಎನ್ನುವ ಡಿಟೈಲ್ಸ್ ಇಲ್ಲಿದೆ.

    1. ಫ್ಯಾಬ್ರಿಕ್ ಮತ್ತು ಮೆಟೀರಿಯಲ್ಸ್ ಹೀಗಿರಲಿ:

    ಕಾಟನ್, ಲೆನಿನ್ ಅಥವಾ ಜರ್ಸಿಯಿಂದ ಮಾಡಿದ ಬಟ್ಟೆಗಳು ಸಮ್ಮರ್‌ಗೆ ಸೂಕ್ತ. ಈ ಬಟ್ಟೆಗಳು ಗಾಳಿಯಾಡಲು ಮತ್ತು ದೇಹವು ಶಾಖವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಈ ರೀತಿಯ ಮೆಟೀರಿಯಲ್ಸ್ ನಿಮಗೆ ಕಡಿಮೆ ಬೆವರುವಂತೆ ಮಾಡುತ್ತದೆ. ಆದ್ದರಿಂದ ಬೇಸಿಗೆಯಲ್ಲೂ ನೀವು ಕೂಲ್ ಆಗಿರಲು ಬಯಸಿದ್ರೆ ಕಾಟನ್, ಲೆನಿನ್ ಅಥವ ಜೆರ್ಸಿಯಿಂದ ಮಾಡಿದ ಟೀಶರ್ಟ್‌ಳನ್ನು ಧರಿಸಿ.

    2. ತಿಳಿ ಬಣ್ಣದ ಬಟ್ಟೆಗಳನ್ನು ಆರಿಸಿ:

    ಬೇಸಿಗೆಯಲ್ಲಿ ಧರಿಸಲು ತಿಳಿ ಬಣ್ಣದ ಬಟ್ಟೆಗಳನ್ನು ಆರಿಸಿ. ನಿಮ್ಮ ಬೇಸಿಗೆಯ ಉಡುಪನ್ನು ಆರಿಸುವಾಗ, ಗಾಢ ಮತ್ತು ದಪ್ಪ ಬಣ್ಣಗಳಿಂದ ದೂರವಿರಿ. ಕಪ್ಪು ಬದಲಿಗೆ, ಬಿಳಿ, ಕೆನೆಬಣ್ಣ ಅಥವಾ ಬೂದು ಬಣ್ಣವನ್ನು ಧರಿಸಿ. ತೆಳು-ಬಣ್ಣದ ಬಣ್ಣಗಳು ಗಾಢ ಬಣ್ಣಗಳಂತೆ ಸೂರ್ಯನ ಬಿಸಿಲನ್ನು ಹೀರಿಕೊಳ್ಳುವುದಿಲ್ಲ, ಬೇಸಿಗೆಗೆ ತಿಳಿ ಬಣ್ಣ ಹೆಚ್ಚು ಸೂಕ್ತ.

    3. ಪಾಲಿಯೆಸ್ಟರ್, ನೈಲಾನ್ ಅಥವಾ ಅಕ್ರಿಲಿಕ್ ಬಟ್ಟೆಗಳನ್ನು ತಪ್ಪಿಸಿ:

    ಪಾಲಿಯೆಸ್ಟರ್, ನೈಲಾನ್ ಅಥವಾ ಅಕ್ರಿಲಿಕ್ ಬಟ್ಟೆಗಳು ಚೆನ್ನಾಗಿ ಕಾಣಿಸಬಹುದು. ಆದರೆ ಅವು ವಾಸ್ತವವಾಗಿ ಶಾಖವನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ನೀವು ಹೆಚ್ಚು ಬೆವರಬಹುದು. ಹೆಚ್ಚು ಬೆವರುವುದನ್ನು ತಪ್ಪಿಸಲು ಮತ್ತು ಅತ್ಯಂತ ಆರಾಮದಾಯಕವಾಗಿರಲು ಈ ರೀತಿಯ ಅನ್‌ಕಂಫರ್ಟೆಬಲ್ ಬಟ್ಟೆಗಳಿಂದ ದೂರವಿರಿ. ಜೊತೆಗೆ ರೇಯಾನ್ ಮತ್ತು ಉಣ್ಣೆಯಂತಹ ಚಳಿಗಾಲದ ಬಟ್ಟೆಗಳಿಂದ ದೂರವಿರಿ. ಏಕೆಂದರೆ ಬೇಸಿಗೆಕಾಲಕ್ಕೆ ಇದು ಒಳ್ಳೆಯದಲ್ಲ.

    4. ಶಾರ್ಟ್ ಸ್ಲೀವ್ ಅಥವಾ ಸ್ಲೀವ್‌ಲೆಸ್ ಬಟ್ಟೆ ಆಯ್ಕೆ ಮಾಡಿ:

    ಬೇಸಿಗೆಯಲ್ಲಿ ಯಾವಾಗಲೂ ಶಾರ್ಟ್‌ ಸ್ಲೀವ್ ಅಥವಾ ತೋಳುಗಳಿಲ್ಲದ ಬಟ್ಟೆಗಳನ್ನು ಧರಿಸಿ. ಈ ಶೈಲಿಯ ಬಟ್ಟೆಗಳು ನಿಮ್ಮ ಚರ್ಮವನ್ನು ತೇವಾಂಶದಲ್ಲಿ ಉಸಿರಾಡಲು ಅವಕಾಶ ಮಾಡಿಕೊಡುತ್ತವೆ. ನೀವು ಆಫೀಸ್‌ಗೆ ಹೋಗುವವರಾಗಿದ್ದರೆ ಸಣ್ಣ ತೋಳಿನ ಕಾಲರ್ ಬಟನ್-ಡೌನ್ ಬಟ್ಟೆ ಧರಿಸಿ. ಗೆಟ್ ಟುಗೆದರ್‌ಗೆ ಅಥವಾ ಹೊರಗೆ ಹೋಗುತ್ತಿದ್ದರೆ ಸ್ಲೀವ್ ಲೆಸ್ ಡ್ರೆಸ್ ಅಥವಾ ಕಂಫರ್ಟೆಬಲ್ ಆಗಿರುವ ಟೀಶರ್ಟ್ ಧರಿಸಿ.

    5. ಬಿಗಿಯಾದ ಬಟ್ಟೆ ಬೇಡವೇ ಬೇಡ:

    ಬೇಸಿಗೆಯಲ್ಲಿ ಬಿಗಿಯಾಗಿ ಮೈಗಂಟು ಬಟ್ಟೆಗಳ ಸಹವಾಸಕ್ಕಂತೂ ಹೋಗಲೇಬೇಡಿ. ಬೇಸಿಗೆಯಲ್ಲಿ ಕಂಫರ್ಟೆಬಲ್ ಆಗಿರಲು ಸಡಿಲವಾದ ಬಟ್ಟೆಗಳೇ ಹೆಚ್ಚು ಬೆಸ್ಟ್. ವಾತಾವರಣ ಬಿಸಿಯಾಗಿರುವಾಗ, ಬೆವರುವಾಗ ಚರ್ಮಕ್ಕೆ ಅಂಟಿಕೊಂಡಿರುವ ಬಟ್ಟೆಗಳು ಕಿರಿಕಿರಿಯುಂಟುಮಾಡಬಹುದು. ಸಡಿಲವಾದ ಟಾಪ್ ಅಥವಾ ತ್ವಚೆ ಉಸಿರಾಡುವಂತೆ ಮಾಡುವ ಉಡುಪನ್ನು ಆಯ್ಕೆ ಮಾಡಿ. ಸಡಿಲವಾದ ತೋಳು ಹೊಂದಿರುವ ಎ-ಲೈನ್ ಟಾಪ್, ರಾತ್ರಿ ಔಟಿಂಗ್ ಆದರೆ ಸ್ಕರ್ಟ್, ಮಧ್ಯಾಹ್ನ ಹೊರಹೋಗುವುದಾದರೆ ಕ್ರಾಪ್‌ಟಾಪ್ ಧರಿಸುವುದು ಸೂಕ್ತ.

    6. ಬೇಸಿಗೆಯಲ್ಲಿ ವರ್ಕ್ಔಟ್ ಕ್ಲೋತಿಂಗ್ ಕೂಡ ಬೆಸ್ಟ್:

    ವರ್ಕ್ಔಟ್ ಮಾಡೋವಾಗ ಮಾತ್ರವಲ್ಲ ನೀವು ಇತರ ಕೆಲಸ ಮಾಡುವಾಗಲೂ ಸ್ಪೋರ್ಟ್ಸ್ ಬ್ರಾ, ಲೆಗ್ಗಿಂಗ್ಸ್, ವರ್ಕೌಔಟ್ ಟಾಪ್ ಮತ್ತು ಸ್ಪೋರ್ಟ್ಸ್ ಶಾರ್ಟ್ಸ್ ಧರಿಸಬಹುದು. ಇವು ಆರಾಮದಾಯಕವಾಗಿರುವುದು ಮಾತ್ರವಲ್ಲ ಚರ್ಮವು ಉಸಿರಾಡಲು ಮತ್ತು ಸುಲಭವಾಗಿ ಚಲಿಸಲು ಸಹಕಾರಿ. ನೀವು ಮನೆಯಲ್ಲಿರುವಾಗ ವರ್ಕ್ಔಟ್ ಡ್ರೆಸ್ ಧರಿಸಲು ಅಡ್ಡಿಯಿಲ್ಲ.

    7.ಒಂದರ ಮೇಲೆ ಇನ್ನೊಂದು ಬಟ್ಟೆ ಧರಿಸಬೇಡಿ:

    ಬೇಸಿಗೆ ಕಾಲದಲ್ಲಿ ಬಟ್ಟೆಗಳನ್ನು ಲೇಯರ್ ರೀತಿ ಧರಿಸಬೇಡಿ. ಆದಷ್ಟು ಕಡಿಮೆ ಬಟ್ಟೆ ಧರಿಸಿ. ಸಿಂಪಲ್ ಆಗಿರುವ ಉದ್ದನೆಯ ಉಡುಪು, ಸ್ಕರ್ಟ್ ಅಥವಾ ಉದ್ದ ತೋಳು ಹೊಂದಿರುವ ಶರ್ಟ್‌ಗಳು ಉತ್ತಮ. ಒಂದರ ಮೇಲೆ ಇನ್ನೊಂದು ಬಟ್ಟೆ ಧರಿಸಿದರೆ ನೀವು ಬಿಸಿಯಾಗುತ್ತೀರಿ.

    ಬೇಸಿಗೆಯಲ್ಲಿ ಅನುಸರಿಸಬೇಕಾದ ಕ್ರಮಗಳು:

    1.ಬೇಸಿಗೆಯಲ್ಲಿ ಸ್ಟೈಲಿಶ್ ಆಗಿಯೂ ಕಾಣಬೇಕೆಂದರೆ ಸನ್‌ಗ್ಲಾಸ್ ಧರಿಸಿ, ಇದು ತೀಕ್ಷ್ಣ ಸೂರ್ಯನ ಕಿರಣಗಳಿಂದ ಕಣ್ಣನ್ನು ರಕ್ಷಿಸುವುದಲ್ಲದೇ ಫ್ಯಾಶನಬಲ್ ಆಗಿಯೂ ನೀವು ಕಾಣುತ್ತೀರಿ.

    2.ಬಿಸಿಲಿನಲ್ಲಿ ಹೊರಗೆ ಸುತ್ತಾಡುವುದಾದರೆ ಟೋಪಿ ಧರಿಸುವುದು ಸೂಕ್ತ. ಇದು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ.

    3.ಹೆಚ್ಚಿನವರು ಬೇಸಿಗೆಯಲ್ಲಿ ಕಾಲು ಪೂರ್ತಿಯಾಗಿ ಮುಚ್ಚಿರುವ ಶೂಸ್ ಧರಿಸುತ್ತಾರೆ. ಇದರಿಂದಾಗಿ ಬೆವರಿ ವಾಸನೆ ಬರಲು ಆರಂಭವಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕ್ಯಾನ್ವಾಸ್ ಅಥವಾ ಕಾಟನ್‌ನಿಂದ ಮಾಡಿರುವ ಶೂಸ್ ಅಥವಾ ಆರಾಮದಾಯಕ ಚಪ್ಪಲಿ ಧರಿಸಿ.

    4.ಬಿಸಿಲಿನಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಬೇಸಿಗೆಯಲ್ಲಿ ಸನ್‌ಸ್ಕ್ರೀನ್ ಹಚ್ಚುವುದನ್ನಂತೂ ಮರೆಯಲೇಬೇಡಿ. ಹೊರಗೆ ಹೋಗುವುದಾದರೆ ಸನ್‌ಸ್ಕ್ರೀನ್ ಲೋಷನ್ ನಿಮ್ಮ ಬ್ಯಾಗ್‌ನಲ್ಲಿರಲಿ. ಕನಿಷ್ಠ ಎರಡು ಗಂಟೆಗೊಮ್ಮೆಯಾದರೂ ಸನ್‌ಸ್ಕ್ರೀನ್ ಲೋಷನ್ ಹಚ್ಚಿ.