Tag: sumanth billava

  • 800 ವರ್ಷದ ಹಳೆಯ ಮನೆಯಲ್ಲಿ ಶುಭಾ ಪೂಂಜಾ ದಿಢೀರ್ ಮದುವೆ

    800 ವರ್ಷದ ಹಳೆಯ ಮನೆಯಲ್ಲಿ ಶುಭಾ ಪೂಂಜಾ ದಿಢೀರ್ ಮದುವೆ

    ಸ್ಯಾಂಡಲ್‌ವುಡ್‌ನ (Sandalwood) ಬಬ್ಲಿ ನಟಿ ಶುಭಾ ಪೂಂಜಾ (Shubha Poonja) ವೈವಾಹಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಮತ್ತು ಸಂಸಾರಿಕ ಬದುಕು ಎರಡು ಬ್ಯಾಲೆನ್ಸ್ ಮಾಡ್ತಿದ್ದಾರೆ. ಇದೀಗ ಲಾಕ್‌ಡೌನ್‌ನಲ್ಲಿ ನಡೆದ ದಿಢೀರ್ ಮದುವೆ ಬಗ್ಗೆ ನಟಿ ಶುಭಾ ಬಾಯ್ಬಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮದುವೆ ದಿನದ ಹಲವು ಸಂಗತಿಗಳನ್ನ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಿನಿಮಾ ಶಿವರಾತ್ರಿ : ಬೆಂಗಳೂರಿನಲ್ಲಿ ‘ರಾಜಕುಮಾರ’, ಹೈದರಾಬಾದ್ ನಲ್ಲಿ ‘ಕಾಂತಾರ’

    Shubha Poonjaನಟಿ ಶುಭಾ (Actress Shubha) ಅವರು ಸುಮಂತ್ (Sumanth)ಜೊತೆ 2020ರಲ್ಲಿ ಹಸೆಮಣೆ (Wedding) ಏರಿದ್ದರು. ಮಂಗಳೂರಿನಲ್ಲಿ ಸರಳವಾಗಿ ವಿವಾಹವಾಗಿದ್ದರು. ಪ್ರೇಮಿಗಳ ದಿನದಂದು ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮದುವೆ ದಿಢೀರ್ ಅಂತಾ ಯಾಕಾಯಿತು. ಅಂದು ಆ ಸಂದರ್ಭ ಹೇಗಿತ್ತು. ಮನೆಯವರ ಮದುವೆ ಬಗೆಗಿನ ಒತ್ತಾಯದ ಬಗ್ಗೆ ನಟಿ ಮಾತನಾಡಿದ್ದಾರೆ.

    ಬಿಗ್ ಬಾಸ್‌ನಿಂದ (Bigg Boss) ಬಂದ ಬಳಿಕ ಲಾಕ್‌ಡೌನ್ (Lockdown) ಸಮಯದಲ್ಲಿ ಮನೆಯಲ್ಲೂ ಮದುವೆ ಮಾಡಿಕೊಳ್ಳಿ ಎನ್ನುತ್ತಿದ್ದರು. ಡಿ.29 ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದೆ. 10 ಜನ ಇದ್ದರೂ ಪರ್ವಾಗಿಲ್ಲ ಸಿಂಪಲ್ ಆಗಿ ಮದುವೆ ಮಾಡಿಕೊಳ್ಳಬೇಕು ಮನೆಯಲ್ಲಿ ಮದುವೆ ಆಗೋಣ ಆಮೇಲೆ ಎಲ್ಲರಿಗೂ ಪಾರ್ಟಿ ಅರೇಂಜ್ ಮಾಡೋಣ ಎಂದು ನಿರ್ಧಾರ ಮಾಡಿದ್ವಿ. ಎರಡು ದಿನಗಳ ಮುನ್ನ ಮದುವೆ ಪ್ಲ್ಯಾನ್ ಮಾಡಲಾಗಿತ್ತು ಎಂದು ನಟಿ ಶುಭಾ ಮಾತನಾಡಿದ್ದಾರೆ.

    ಎರಡು ದಿನದ ಮುನ್ನ ಮದುವೆ ಪ್ಲ್ಯಾನ್ ಆಗಿದ್ದು. ನಾವು ವಾಸ ಮಾಡುತ್ತಿದ್ದ ಮನೆ 800 ವರ್ಷ ಹಳೆ ಮನೆ. ಫುಲ್ ಪೇಂಟ್ ಬಿದ್ದಿತ್ತು, ಗೋಡೆ ಸರಿಯಾಗಿಲ್ಲ ಏನೂ ಇಲ್ಲ. ಏನ್ ಚಿನ್ನಿ ಇಲ್ಲಿ ಮದುವೆಯಾಗಿ ಒಂದು ಫೋಟೋ ತೆಗೆದರೂ ಹೇಗಿರುತ್ತೆ ಅಂದ. ಮದುವೆ ಹಿಂದಿನ ದಿನ ಫುಲ್ ಪೇಂಟ್ ಮಾಡಿದ್ದಾರೆ. ಮದುವೆ ಬಂದ ಗೆಸ್ಟ್ ಸೆಲೆಬ್ರಿಟಿ ಮಂಜು ಮತ್ತು ರಾಘು ಬಂದರು ಅವರಿಂದಲೂ ಪೇಂಟ್ ಮಾಡಿಸಲಾಗಿತ್ತು ಎಂದು ಶುಭಾ ಪೂಂಜಾ ಹೇಳಿದ್ದಾರೆ.

    ರಾತ್ರಿ 8 ಗಂಟೆಗೆ ಹೂ ತರಲು ಮಾರ್ಕೆಟ್‌ಗೆ ಹೋಗಿದ್ದಾರೆ. ತುಂಬಾ ಬಾಡಿರುವ ಹೂವುಗಳನ್ನು ಮದುವೆಗೆ ತೆಗೆದುಕೊಂಡು ಬಂದಿದ್ದಾರೆ. ನಮ್ಮ ಮದುವೆ ಹಾರ ಕೂಡ ಬಾಡಿದೆ. ಮದುವೆ ಪಟ್ ಪಟ್ ಅಂತ ಮುಗಿಯಿತು ಅಷ್ಟರಲ್ಲಿ ಸುಮಂತ್ ಪಂಚೆ ಬಿಚ್ಚಿ ಶಾರ್ಟ್ & ಬನಿಯನ್ ಹಾಕೊಂಡು ಬಂದಿದ್ದಾನೆ. ಹೀಗಾಗಿ ನನ್ನ ಮದುವೆ ಫೋಟೋ ಅಂತ ಇರುವುದು ಕೇವಲ ೪ ಅಷ್ಟೆ. ಮೀಡಿಯಾದವರು ಕರೆ ಮಾಡಿ ಫೋಟೋ ಕಳುಹಿಸಿ ಎನ್ನುತ್ತಿದ್ದಾರೆ ಅವರೇ ಹೇಳುತ್ತಿದ್ದರು 4 ಫೋಟೋ ಇದೆ ಅದು ಬಿಟ್ಟು ಬೇರೆ ಕೊಡಿ ಎಂದು. ನಮ್ಮ ಅಮ್ಮ ಅವರ ಅಪ್ಪ ಅಮ್ಮ ಜೊತೆಗೂ ಸುಮಂತ್ ಫೋಟೋ ತೆಗೆಸಿಕೊಂಡಿಲ್ಲ. ಮುಂದೆ ಮಕ್ಕಳು ಅಮ್ಮ ಮದುವೆ ಫೋಟೋ ವಿಡಿಯೋ ತೋರಿಸಿ ಎಂದು ಕೇಳಿದರೆ ಆ ನಾಲ್ಕು ಫೋಟೋ ಅಷ್ಟೇ ತೋರಿಸಬೇಕು ಎಂದು ನಟಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k