Tag: Sumanahalli

  • ಬೆಂಗಳೂರಿನ ಶ್ರೀಗಂಧಕಾವಲ್‍ನಲ್ಲಿ ಭಾರೀ ಅಗ್ನಿ ಅವಘಡ

    ಬೆಂಗಳೂರಿನ ಶ್ರೀಗಂಧಕಾವಲ್‍ನಲ್ಲಿ ಭಾರೀ ಅಗ್ನಿ ಅವಘಡ

    – 9 ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ

    ಬೆಂಗಳೂರು: ನಗರದ (Bengaluru) ಸುಮ್ಮನಹಳ್ಳಿ (Sumanahalli) ಬ್ರಿಡ್ಜ್ ಬಳಿಯ ಶ್ರೀಗಂಧಕಾವಲ್‍ನ ಅರಣ್ಯ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಮರಗಳು ಹೊತ್ತಿ ಉರಿದಿವೆ.

    ಬಿಬಿಎಂಪಿ (BBMP) ವ್ಯಾಪ್ತಿಗೆ ಸೇರಿದ 3 ಎಕರೆ ಅರಣ್ಯ ಪ್ರದೇಶದಲ್ಲಿ ಸುಮಾರು ಅರ್ಧ ಭಾಗಕ್ಕೆ ಬೆಂಕಿ ಆವರಿಸಿದೆ. ತೀವ್ರ ಬೇಸಿಗೆಯ ಪರಿಣಾಮ ಬೆಂಕಿ ಭಾರೀ ಪ್ರಮಾಣದಲ್ಲಿ ವ್ಯಾಪಿಸಿದೆ. ಒಣ ಕಸಕ್ಕೆ ಹಾಕಿದ ಬೆಂಕಿ ಅರಣ್ಯ ಪ್ರದೇಶಕ್ಕೆ ಹಬ್ಬಿದೆ ಎಂದು ಶಂಕಿಸಲಾಗಿದೆ. ಗುರುವಾರ ರಾತ್ರಿಯೇ ಅರಣ್ಯ ಪ್ರದೇಶಕ್ಕೆ ಬೆಂಕಿ ತಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕಾಂಬೋಡಿಯಾದ ಸೇನಾನೆಲೆಯಲ್ಲಿ ಮದ್ದುಗುಂಡುಗಳ ಸ್ಫೋಟ – 20 ಸೈನಿಕರು ಸಾವು

    ನಗರದಲ್ಲಿ ತೆರವುಗೊಳಿಸಿದ ಮರಗಳನ್ನು ಇಲ್ಲಿ ತಂದು ಡಂಪ್ ಮಾಡಲಾಗುತ್ತಿತ್ತು. ಅದೇ ರೀತಿ ಹೊರಗಡೆ ಮಾರಾಟ ಮಾಡುವ ಕಟ್ಟಿಗೆಗಳನ್ನು ಇಲ್ಲಿ ತಂದು ಹಾಕಿ ಹರಾಜು ಮಾಡಲಾಗ್ತಿತ್ತು. ಹರಾಜಾಗದೇ ಉಳಿದಿದ್ದ ಕಟ್ಟಿಗೆಗಳೆಲ್ಲ ಅರಣ್ಯ ವ್ಯಾಪ್ತಿಯಲ್ಲಿ ರಾಶಿ ಬಿದ್ದಿದ್ದವು. ತೀವ್ರ ಬಿಸಿಲಿನ ಕಾರಣ ಸಂಪೂರ್ಣ ಒಣಗಿದ್ದ ಮರದ ತುಂಡುಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಸಾಧ್ಯತೆಯೂ ಇದೆ ಎಂಬುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.

    ಸತತ 9 ಗಂಟೆಗಳಿಂದ ನಿರಂತರ ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೆÇಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂಬುಲೆನ್ಸ್‌ನಿಂದ ಸರಣಿ ಅಪಘಾತ – ಚಾಲಕನ ಬಂಧನ

  • ನಮ್ಮಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ – ನಾಯಿ ‘ಲಾರಾ’ ಅಂತ್ಯಕ್ರಿಯೆಗೆ ಬಂದ ರಮ್ಯಾ

    ನಮ್ಮಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ – ನಾಯಿ ‘ಲಾರಾ’ ಅಂತ್ಯಕ್ರಿಯೆಗೆ ಬಂದ ರಮ್ಯಾ

    ಬೆಂಗಳೂರು: ಬೀದಿ ನಾಯಿ ‘ಲಾರಾ’ ಅಂತ್ಯ ಸಂಸ್ಕಾರ ಸುಮ್ಮನಹಳ್ಳಿ ಪ್ರಾಣಿಗಳ ಸ್ಮಶಾನದಲ್ಲಿ ನಡೆಯಿತು. ನಾಯಿ ಅಂತ್ಯಕ್ರಿಯೆಗೆ ನಟಿ ರಮ್ಯಾ ಆಗಮಿಸಿದ್ದು ವಿಶೇಷವಾಗಿತ್ತು.

    ನಾಯಿ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿ ವಿರುದ್ಧ ರಮ್ಯಾ ಸರಣಿ ಟ್ವೀಟ್ ಮಾಡಿದ್ದರು. ಇಂದು ಲಾರಾ ಅಂತಿಮ ಸಂಸ್ಕಾರದಲ್ಲಿ ಎಲ್ಲರೂ ಭಾಗವಹಿಸುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಈ ಹಿನ್ನೆಲೆ ಇಂದು ಬೆಂಗಳೂರಿನ ಸುಮ್ಮನಹಳ್ಳಿ ಪ್ರಾಣಿಗಳ ಸ್ಮಶಾನಕ್ಕೆ ರಮ್ಯಾ ಬಂದು ಲಾರಾಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಗೂ ಮುನ್ನ ಲಾರಾಗಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಲಾರಾ ಅಂತ್ಯಕ್ರಿಯೆ ಸಂಸ್ಕಾರಕ್ಕೆ ಹಲವು ಪ್ರಾಣಿ ಪ್ರಿಯರು ಭಾಗಿಯಾಗಿದ್ದರು. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ

    ಶ್ವಾನಪ್ರೀಮಿಯಾದ ರಮ್ಯಾ ಮಾತನಾಡಿ, ಆಕ್ಸಿಡೆಂಟ್ ಆಗುತ್ತೆ. ಮನುಷ್ಯ ತಪ್ಪು ಮಾಡ್ತಾನೆ ಅದು ಸಹಜ. ಆದರೆ ಈ ವಿಚಾರವನ್ನು ನಾವು ಗಮನಿಸಿದಾಗ, ಆ ವ್ಯಕ್ತಿ ಬೇಕಂತಲೇ ನಾಯಿ ಮೇಲೆ ಗಾಡಿ ಹತ್ತಿಸಿದ್ದಾನೆ. ಇದನ್ನ ನೋಡಿ ಸಹಿಸಿಕೊಳ್ಳಲು ಆಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಮ್ಮ ದೇಶದಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ. 50 ರೂಪಾಯಿ ಕೊಟ್ಟು ಹೊರಗಡೆ ಬರ್ತಾರೆ. ದಯೆ ಅನ್ನೋದು ಕೇವಲ ಮನುಷ್ಯನಿಗೆ ಅಲ್ಲ. ಪ್ರಕೃತಿಯಲ್ಲಿರುವ ಪ್ರಾಣಿಗಳಿಗೂ ಕೂಡ ಇರಬೇಕು. ಮೊದಲನೆಯದಾಗಿ ಕಾನೂನು ಕಠಿಣವಾಗಬೇಕಿದೆ. ದೊಡ್ಡವರು, ದುಡ್ಡಿರೋರು ಕಾನೂನಿನಲ್ಲಿ ಎಸ್ಕೇಪ್ ಆಗ್ತಾರೆ. ಕಾನೂನು ಕಠಿಣಗೊಳಿಸಬೇಕು ಅಂತ ನಾನು ಸರ್ಕಾರಕ್ಕೆ ಮನವಿ ಮಾಡ್ತಿನಿ ಎಂದರು.

    ಲಾರಾ ಪಾರ್ಥಿವ ಶರೀರದ ಬಳಿ ನಾಯಿಯನ್ನ ಸಲಹುತ್ತಿದ್ದ ಗಾಯತ್ರಿ ಕಣ್ಣೀರು ಇಡುತ್ತಿದ್ದರು. ಲಾರಾ ನಾಯಿಯನ್ನ ಸಣ್ಣ ಮರಿಯಿಂದ ಗಾಯತ್ರಿ ಅವರು ಸಲಹುತ್ತಿದ್ದೆ ಎಂದು ಭಾವುಕರಾಗಿದ್ದಾರೆ. ಸೆಂಟ್ ಪೀಟರ್ಸ್ ಶಾಲಾ ಮಕ್ಕಳು ಲಾರಾಗೆ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು

    ಪ್ರಕರಣ ಬೆಳಕಿಗೆ ಬಂದಾಗಿನಿಂದ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ, ಆತನಿಗೆ ಡ್ರೈವಿಂಗ್ ಲೈಸನ್ಸ್ ಇದ್ಯಾ? ಅಲ್ಕೋಹಾಲ್ ಅಥವಾ ಡ್ರಗ್ಸ್ ಸೇವನೆ ಮಾಡಿದ್ದನಾ? ಪೊಲೀಸರು ಏನು ಕ್ರಮ ತೆಗೆದುಕೊಂಡಿದ್ದಾರೆ. ಆತ ಇನ್ನೂ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನಾ? ಅಥವಾ ಆತನನ್ನ ಬಿಟ್ಟು ಕಳಿಸಿದ್ರಾ? ಎಂದು ಸರಣಿ ಟ್ವಿಟ್ ಮಾಡಿದ್ದು, ಮುಖ್ಯಮಂತ್ರಿಗಳು, ಸಂಸದ ತೇಜಸ್ವಿ ಸೂರ್ಯ, ಮೇನಕಾಗಾಂಧಿ, ಶಾಸಕಿ ಸೌಮ್ಯ ರೆಡ್ಡಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಆರ್.ಆಶೋಕ್ ಗೆ ಟ್ವೀಟ್ ಟ್ಯಾಗ್ ಮಾಡಿದ್ದರು. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ್ದ ಆದಿಕೇಶವುಲು ಮೊಮ್ಮಗ ಅರೆಸ್ಟ್‌

    ಆದಿಕೇಶವಲು ನಾಯ್ಡು ಮೊಮ್ಮಗ ಆದಿನಾರಾಯಣ ಉದ್ದೇಶಪೂರ್ವಕವಾಗಿ ಕಾರನ್ನು ಹರಿಸಿದ್ದ. ಘಟನೆ ಬಳಿಕ ಶ್ವಾನ ನಾಪತ್ತೆಯಾಗಿತ್ತು. ನಿನ್ನೆ ನಾಯಿಯ ಮೃತ ದೇಹ ಪತ್ತೆಯಾಗಿದೆ. ಹೆಬ್ಬಾಳ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೃತ ಶ್ವಾನ ಲಾರಾಗೆ ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಘಟನೆಯ ಬಳಿಕ ನಾಪತ್ತೆಯಾಗಿದ್ದ ಆದಿನಾರಾಯಣನನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಹೆಬ್ಬಾಳ ಫ್ಲೈ ಓವರ್ ಮೇಲೆ ಡಾಂಬರೀಕರಣ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಹೆಬ್ಬಾಳ ಫ್ಲೈ ಓವರ್ ಮೇಲೆ ಡಾಂಬರೀಕರಣ

    – ವರದಿಯಿಂದ ಎಚ್ಚೆತ್ತ ಬಿಡಿಎ ಅಧಿಕಾರಿಗಳು

    ಬೆಂಗಳೂರು: ಕಳಪೆ ಕಾಮಗಾರಿಯಿಂದ ಅಪಾಯಕ್ಕಾಗಿ ಆಹ್ವಾನಿಸುತ್ತಿದ್ದ ಹೆಬ್ಬಾಳ ಫ್ಲೈ ಓವರ್ ಗೆ ಡಾಂಬರೀಕರಣ ಭಾಗ್ಯ ದೊರೆತಿದೆ. ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಹೆಬ್ಬಾಳ ಫ್ಲೈ ಓವರ್ ಮೇಲೆ ಡಾಂಬರೀಕರಣ ಮಾಡುತ್ತಿದ್ದು, ಸವೆದಿದ್ದ ಕಬ್ಬಿಣದ ಡ್ರಿಲ್‍ಗಳನ್ನ ಸರಿಪಡಿತ್ತಿದ್ದಾರೆ.

    ಕಳಪೆ ಕಾಮಗಾರಿಯಿಂದ ಮೇಲ್ಸೇತುವೆ ಮೇಲೆ ಕಬ್ಬಿಣದ ಡ್ರಿಲ್ ಸವೆದು, ಎರಡು ಕಡೆ ಗುಂಡಿ ಬಿದ್ದು ಕುಸಿಯುವ ಮಟ್ಟಕ್ಕೆ ತಲುಪಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಬಿಡಿಎ ಅಧಿಕಾರಿಗಳು ಎಚ್ಚೆತ್ತುಕೊಂಡು ಹೆಬ್ಬಾಳ ಫ್ಲೈ ಓವರ್ ಮೇಲೆ ಗುಂಡಿ ಬಿದ್ದ ಕಡೆ ಡಾಂಬರೀಕರಣ ಆರಂಭಿಸಿದ್ದಾರೆ. ಇದನ್ನೂ ಓದಿ: ಅಪಾಯ ಆಹ್ವಾನಿಸುತ್ತಿದೆ ಹೆಬ್ಬಾಳ ಫ್ಲೈಓವರ್

    ಹೆಬ್ಬಾಳ ಫ್ಲೈ ಓವರ್ ಮೇಲೆ ನಿಂತು ಕೆಳಗಡೆ ನೋಡುದರೆ ಗುಂಡಿಗಳಲ್ಲಿ ಸೇತುವೆಯ ಕೆಳಗಡೆ ಓಡಾಡುವ ಜನ, ವಾಹನಗಳು ಕಾಣುತ್ತಿದ್ದರು. ಈ ಪ್ರಮಾಣದಲ್ಲಿ ಅಪಾಯ ಸೃಷ್ಟಿಯಾಗಿ ಮೇಲ್ಸೇತುವೆ ಯಾವಾಗ ಕುಸಿಯುತ್ತದೆಯೋ ಅಂತ ವಾಹನ ಸವಾರರು ಭಯದಲ್ಲೇ ಓಡಾಡುತ್ತಿದ್ದರು. ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದ ವರದಿ ಬಳಿಕ ಬಿಡಿಎ ಅಧಿಕಾರಿಗಳು ಎಚ್ಚೆತ್ತು, ಕಬ್ಬಿಣದ ಡ್ರಿಲ್ ಸರಿಪಡಿಸಿ, ಡಾಂಬರ್ ಹಾಕುತ್ತಿದ್ದಾರೆ.

    ಈ ಕಳಪೆ ಕಾಮಗಾರಿಯ ಫ್ಲೈ ಓವರ್ ಬಗ್ಗೆ ಪಬ್ಲಿಕ್ ಟಿವಿಯು ಸಂಚಾರ ತಜ್ಞರ ಅಭಿಪ್ರಾಯ ಸಂಗ್ರಹಿಸಿತ್ತು. ಹೆಬ್ಬಾಳ ಫ್ಲೈ ಓವರ್ ಪರಿಸ್ಥಿತಿ ಮನಗಂಡು ಸಂಚಾರ ತಜರ್ಞರು ಆತಂಕ ವ್ಯಕ್ತಪಡಿಸಿದ್ದರು. ಸರಿಯಾದ ನಿರ್ವಹಣೆ ಮಾಡದಿದ್ದರೆ ಎರಡ್ಮೂರು ತಿಂಗಳಲ್ಲಿ ಅಪಾಯ ಸಂಭವಿಸುತ್ತದೆ. ಅಪಾಯ ಕಟ್ಟಿಟ್ಟ ಬುತ್ತಿ ಎಂದು ಬಿಡಿಎಗೆ ಎಚ್ಚರಿಕೆ ನೀಡಿದ್ದರು. ಇದನ್ನು ಮನಗಂಡ ಬಿಡಿಎ ಅಧಿಕಾರಿಗಳು ಅಪಾಯ ಸಂಭವಿಸುವುದಕ್ಕೂ ಮುನ್ನವೇ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ.

    ಇದೇ ರೀತಿ ಬೆಂಗಳೂರಿನ ಕೆಲವು ಫ್ಲೈ ಓವರ್ ಗಳು ಅಪಾಯದ ಅಂಚಿನಲ್ಲಿವೆ. ಅಧಿಕಾರಿಗಳು ಇನ್ನದರೂ ಎಚ್ಚೆತ್ತು ಕಳಪೆ ಕಾಮಗಾರಿ ಫ್ಲೈ ಓವರ್ ಗಳನ್ನ ಸರಿಪಡಿಸುತ್ತಾರಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

  • ಅಪಾಯ ಆಹ್ವಾನಿಸುತ್ತಿದೆ ಹೆಬ್ಬಾಳ ಫ್ಲೈಓವರ್

    ಅಪಾಯ ಆಹ್ವಾನಿಸುತ್ತಿದೆ ಹೆಬ್ಬಾಳ ಫ್ಲೈಓವರ್

    ಬೆಂಗಳೂರು: ಸುಮನಹಳ್ಳಿ ಆಯ್ತು, ಇದೀಗ ಹೆಬ್ಬಾಳ ಫ್ಲೈಓವರ್ ಸರದಿ. ಪ್ರಯಾಣಿಕರೇ ಹೆಬ್ಬಾಳ ಫ್ಲೈಓವರ್ ಮೇಲೆ ಹೋಗೋದಕ್ಕೂ ಮುನ್ನ ಎಚ್ಚರವಾಗಿರಿ. ಮೇಲ್ಸೇತುವೆ ಸವೆದು ಎರಡು ಕಡೆ ಗುಂಡಿ ಬಿದ್ದಿದೆ. ಹೀಗಾಗಿ ಸೇತುವೆ ಮೇಲೆ ನಿಂತು ಈ ಗುಂಡಿ ಮೂಲಕ ಕೆಳಗಡೆ ನೋಡಿದರೆ ಓಡಾಡುವ ಜನ, ವಾಹನಗಳು ಕಾಣುತ್ತವೆ. ಈ ಕಾರಣದಿಂದಾಗಿ ಹೆಬ್ಬಾಳ ಮೇಲ್ಸೇತುವೆ ಡೇಂಜರ್ ಝೋನ್ ಆಗಿದೆ.

    ಹೌದು. ಬೆಂಗಳೂರಿನ ಫ್ಲೈಓವರ್ ಗಳ ಮೇಲೆ ವಾಹನ ಸವಾರರು ಸಂಚರಿಸೋಕೆ ಭಯ ಪಡುತ್ತಿದ್ದಾರೆ. ಈ ಮೇಲ್ಸೇತುವೆ ಮೇಲಿನ ಕಬ್ಬಿಣದ ಡ್ರಿಲ್ ಸವೆದು, ಫ್ಲೈಓವರ್ ನಲ್ಲಿ ಎರಡು ಕಡೆ ಗುಂಡಿ ಬಿದ್ದಿದೆ. ಈ ಮೂಲಕ ಕೆಳಗಡೆ ನೋಡಿದರೆ ಕೆಳಗಡೆ ಓಡಾಡುವ ವಾಹನಗಳು, ಜನರು ಕಾಣುತ್ತಾರೆ. ಅಷ್ಟು ಪ್ರಮಾಣದಲ್ಲಿ ಗುಂಡಿ ಬಿದ್ದಿದ್ದರೂ ಇದರ ಮೇಲೆಯೇ ವಾಹನಗಳು ಓಡಾಡ್ತಿದ್ದು, ಅಪಾಯ ಯಾವ ಸಮಯದಲ್ಲಿ ಆಗುತ್ತೋ ಗೊತ್ತಿಲ್ಲ. ಈ ರೀತಿ ಆದರೂ ಬಿಡಿಎ ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು ಇದರ ಕಡೆ ಗಮನಹರಿಸಿಲ್ಲ. ಈ ರೀತಿಯ ಅಪಾಯ ಸೃಷ್ಟಿಸುವ ರೀತಿ ಗುಂಡಿ ಬಿದ್ದಿದೆ. ಜನ ಇದರ ಮೇಲೆ ಸಂಚರಿಸೋಕೆ ಆತಂಕ ಪಡುತ್ತಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.

    ಇದಕ್ಕೆ ಸಂಚಾರಿತಜ್ಞರು ಕೂಡ ಆತಂಕ ವ್ಯಕ್ತಪಡಿಸ್ತಿದ್ದು, ಕಳಪೆ ಕಾಮಗಾರಿಯಿಂದ ಈ ರೀತಿ ಆಗಿದೆ. ಹೀಗಾಗಿ ಮುಂಚಿತವಾಗಿ ಎಚ್ಚೆತ್ತು ಕ್ರಮ ಜರುಗಿಸಬೇಕು. ಇಲ್ಲ ಅಂದರೆ ಸೇತುವೆ ಕುಸಿಯುವ ಸಂಭವ ಇದೆ. ದೊಡ್ಡ ಅಪಾಯ ಎದುರಾಗಿ ಅಪಘಾತಗಳಾಗುತ್ತವೆ. ಅಧಿಕಾರಿಗಳು ಎಚ್ಚೆತ್ತು ಸರಿಪಡಿಸದೇ ಹೋದರೆ ಅಪಾಯ ಗ್ಯಾರಂಟಿ ಅಂತ ಮುನ್ಸೂಚನೆ ಕೊಡುತ್ತಿದ್ದಾರೆ.

    ಒಟ್ಟಾರೆ ಹೆಬ್ಬಾಳ ಫ್ಲೈಓವರ್ ಡೇಂಜರ್ ಸ್ಪಾಟ್ ಆಗಿದೆ. ಈಗಾಗಲೇ ಮೇಲು ಸೇತುವೆ ಮೇಲೆ ಗುಂಡಿ ಬಿದ್ದು ಸೇತುವೆ ಕುಸಿಯುವ ಸಂಭವ ಹೆಚ್ಚಿದೆ. ಹಲವಾರು ಬಾರಿ ವಾಹನ ಸವಾರರು ಬಿದ್ದು ಗಾಯಗೊಂಡು, ಸಾವನ್ನಪ್ಪಿರುವ ಉದಾಹರಣೆಗಳಿವೆ. ಬಿಬಿಎಂಪಿ, ಬಿಡಿಎ ಮತ್ತು ಸರ್ಕಾರದ ಪ್ರತಿನಿಧಿಗಳು ಎಚ್ಚೆತ್ತು ಮುನ್ನೆಚ್ಚರಿಕಾ ಕ್ರಮಗಳನ್ನ ಜರುಗಿಸ್ತಾರಾ ಕಾದು ನೋಡಬೇಕಿದೆ.

  • ಗಮನಿಸಿ, ಮತ್ತೆ ಬೆಂಗ್ಳೂರಿನ ಸುಮನಹಳ್ಳಿ ಫ್ಲೈ ಓವರ್ 1 ತಿಂಗಳು ಬಂದ್

    ಗಮನಿಸಿ, ಮತ್ತೆ ಬೆಂಗ್ಳೂರಿನ ಸುಮನಹಳ್ಳಿ ಫ್ಲೈ ಓವರ್ 1 ತಿಂಗಳು ಬಂದ್

    – ಡಿ.15 ರಿಂದ ಕಾಮಗಾರಿ ಆರಂಭ
    – ದುರಸ್ತಿಗೊಳಿಸದಿದ್ದರೆ ಸೇತುವೆ ಕುಸಿತ
    – ಖಾಸಗಿ ಸಂಸ್ಥೆಯಿಂದ ಬಿಬಿಎಂಪಿಗೆ ವರದಿ

    ಬೆಂಗಳೂರು: ನಾಯಂಡಹಳ್ಳಿಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯಲ್ಲಿರುವ 546 ಮೀಟರ್ ಉದ್ದದ ಸುಮನಹಳ್ಳಿ ಫ್ಲೈ ಓವರ್ ಒಂದು ತಿಂಗಳು ಬಂದ್ ಆಗಲಿದೆ.

    ಮೇಲ್ಸೇತುವೆಯ ರಸ್ತೆಯಲ್ಲಿ ಸುಮಾರು 6 ಅಡಿ ಅಗಲದಷ್ಟು ಗುಂಡಿ ಬಿದ್ದ ಹಿನ್ನೆಲೆಯಲ್ಲಿ ನ.1ರಿಂದ ನ.18ವರೆಗೆ ಒಂದು ಬದಿಯ ಸಂಚಾರವನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಈಗ ಬಿಡಿಎ ನಿರ್ಮಿತ ನಿರ್ವಹಣೆಯಲ್ಲಿದ್ದ ಸೇತುವೆ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಖಾಸಗಿ ಸಂಸ್ಥೆಯೊಂದು ವರದಿ ನೀಡಿದೆ.

    ಈ ವರದಿಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಲಘು ವಾಹನಗಳಿಗೆ ಮುಕ್ತವಾಗಿದ್ದ ಸುಮನಹಳ್ಳಿ ಮೇಲ್ಸೇತುವೆಯನ್ನು ಒಂದು ತಿಂಗಳು ಬಂದ್ ಮಾಡಲು ಬಿಬಿಎಂಪಿ ಮುಂದಾಗಿದೆ. ಇದೇ ತಿಂಗಳ 15 ರಿಂದ ಭಾರೀ ವಾಹನಗಳ ಸಂಚಾರಕ್ಕೆ ಮೇಲ್ಸುತುವೆ ಎರಡು ಕಡೆಯಿಂದಲೂ ಅವಕಾಶ ನೀಡಲಾಗುವುದಿಲ್ಲ.

    ಸೇತುವೆಯ ಬೀಮ್(ಅಡ್ಡ ಕಂಬ), ಸ್ಲ್ಯಾಬ್ ಗಳಲ್ಲಿ ಹನಿಕಾಂಬ್(ಕಾಂಕ್ರೀಟ್ ಪದರ ಟೊಳ್ಳಾಗುವುದನ್ನು ಸಿವಿಲ್ ಎಂಜಿನಿಯರಿಂಗ್ ಭಾಷೆಯಲ್ಲಿ ಹನಿಕಾಂಬ್ ಎಂದು ಕರೆಯಲಾಗುತ್ತದೆ) ಸೃಷ್ಟಿಯಾಗಿದೆ. ಹೀಗಾಗಿ ದುರಸ್ತಿ ಕಾರ್ಯ ಶೀಘ್ರ ಆರಂಭಿಸದಿದ್ದರೆ ಮೇಲ್ಸುತುವೆಯನ್ನು ತೆಗೆಯಬೇಕಾಗುತ್ತದೆ. ಹೀಗಾಗಿ ಭಾರೀ ವಾಹನಗಳು ಫ್ಲೈಓವರ್ ಮೇಲೆ ಸಾಗದಂತೆ ಸಂಚಾರಿ ಪೊಲೀಸರು ಚಾಲಕರನ್ನು ತಡೆದು ಸರ್ವಿಸ್ ರಸ್ತೆಯ ಮೂಲಕ ಸಾಗುವಂತೆ ನಿರ್ದೇಶನ ನೀಡುತ್ತಿದ್ದಾರೆ.

    ಮೇಲ್ಸೇತುವೆಯಲ್ಲಿ ಗುಂಡಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸೇತುವೆಯ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸೇತುವೆಯ ಸದೃಢತೆ ಪರೀಕ್ಷಿಸಲು ಸಿವಿಲ್- ಎಡ್ ಟೆಕ್ನೋಕ್ಲಿನಿಕ್ ಸಂಸ್ಥೆಯನ್ನು ನಿಯೋಜಿಸಿತ್ತು. ಈ ಸಂಸ್ಥೆಯ ಎಂಜಿನಿಯರ್ ಗಳು ಪರಿಶೀಲಿಸಿ ಸೇತುವೆಯಲ್ಲಿ ಕಳಪೆ ಕಾಮಗಾರಿ ನಡೆದಿದ್ದರಿಂದ ದೋಷ ಉಂಟಾಗಿದೆ ಎಂದು ವರದಿ ನೀಡಿದ್ದರು.

    ಸೇತುವೆ ರ‍್ಯಾಂಪ್ ಹಾಗೂ ಪಿಲ್ಲರ್ ಮಧ್ಯೆ ಅಳವಡಿಸಿರುವ ಬೇರಿಂಗ್ ನಲ್ಲಿ ದೋಷವಿದೆ. ಅಲ್ಲದೇ ಕಳಪೆ ಕಾಮಗಾರಿಯಿಂದ ಹಲವು ಬೀಮ್ ಹಾಗೂ ಸ್ಲ್ಯಾಬ್ ಗಳಲ್ಲಿ ಹನಿಕಾಂಬ್ ಸೃಷ್ಟಿಯಾಗಿದೆ. ಈಗಲೇ ದುರಸ್ತಿ ಮಾಡದೇ ಇದ್ದರೆ ಮುಂದೆ ಸೇತುವೆಯೇ ಕುಸಿದು ಬೀಳಬಹುದು ಎಂದು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಸಂಚಾರವನ್ನು ಬಂದ್ ಮಾಡಲು ಮುಂದಾಗಿದೆ.

    ಸೇತುವೆಯ ಬೇರಿಂಗ್‍ನಲ್ಲಿ ಕಂಡು ಬಂದಿರುವ ದೋಷ ಸರಿ ಮಾಡುವ ತಜ್ಞರು ರಾಜ್ಯದಲ್ಲಿ ಇಲ್ಲದೇ ಇರುವುದರಿಂದ ಬಿಬಿಎಂಪಿ ಮುಂಬೈ ಮತ್ತು ದೆಹಲಿಯ ವಿವಿಧ ತಜ್ಞರಿಗೆ ಆಹ್ವಾನ ನೀಡಿದೆ. ತಜ್ಞರು ಪರಿಶೀಲಿಸಿ ಅಂದಾಜು ವೆಚ್ಚವನ್ನು ನೀಡಿದ ಬಳಿಕ ಬಿಬಿಎಂಪಿ ಕಾಮಗಾರಿ ಆರಂಭಿಸಲಿದೆ.

    ಸುಮನಹಳ್ಳಿ ಸಿಗ್ನಲ್‍ನಲ್ಲಿ ವಿಜಯನಗರ, ಮಾರುಕಟ್ಟೆ ಕಡೆಯಿಂದ ಸುಂಕದಕಟ್ಟೆ, ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆಗೆ ವಾಹನಗಳು ಸಂಚರಿಸುತ್ತವೆ. ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ 2007ರಲ್ಲಿ ಬಿಡಿಎ ಫ್ಲೈಓವರ್ ಕಾಮಗಾರಿಯ ಗುತ್ತಿಗೆಯನ್ನು ಚೆನ್ನೈ ಮೂಲದ ಇಸಿಸಿಐ ಕಂಪನಿಗೆ ನೀಡಿತ್ತು. 2010ರಲ್ಲಿ ಉದ್ಘಾಟನೆಯಾದ ಬಳಿಕ 2016ರವರೆಗೆ ಬಿಡಿಎ ನಿರ್ವಹಣೆ ಮಾಡಿ ನಂತರ ಬಿಬಿಎಂಪಿಗೆ ನೀಡಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳು ನಿರ್ವಹಣೆ ಸರಿ ಮಾಡದ ಪರಿಣಾಮ ರಸ್ತೆ ಗುಂಡಿ ಬಿದ್ದಿತ್ತು.

    ಈ ವಿಚಾರದ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ವತಃ ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡಿದ್ದರು. ಮೇಲ್ಸೇತುವೆಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುರಿಂದ ಸಮಸ್ಯೆ ಸೃಷ್ಟಿಯಾಗಿದೆ. ಸೇತುವೆ ಮೇಲೆ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಇರುವುದರಿಂದ ಗುಂಡಿ ಬಿದ್ದಿದೆ. ಬಿಬಿಎಂಪಿ ಅಧಿಕಾರಿಗಳು ಕಳೆದ 4 ವರ್ಷಗಳಿಂದ ಸೇತುವೆ ನಿರ್ವಹಣೆ ಮಾಡಿರಲಿಲ್ಲ. ಈ ಬ್ರಿಡ್ಜ್ ನಿರ್ಮಾಣ ಮಾಡಿದ ಚೆನ್ನೈ ಮೂಲದ ಖಾಸಗಿ ಸಂಸ್ಥೆ ಇಸಿಸಿಐ 3 ರಾಜ್ಯಗಳಲ್ಲಿ ಕಪ್ಪು ಪಟ್ಟಿಯಲ್ಲಿದೆ. ಈ ಸೇತುವೆ ಹಾಳಾಗಳು ಅಧಿಕಾರಿಗಳ ಬೇಜಾವಾಬ್ದಾರಿ ಕಾರಣ ಎಂದು ನೇರವಾಗಿ ಹೇಳಿದ್ದರು.

    ಕೋಲ್ಕತ್ತಾ ಸೇತುವೆ ದುರಂತ:
    2018ರ ಸೆಪ್ಟೆಂಬರ್ ನಲ್ಲಿ ದಕ್ಷಿಣ ಕೋಲ್ಕತ್ತಾದ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆ ಕುಸಿದು ಬಿದ್ದ ಪರಿಣಾಮ ಮೂರು ಮಂದಿ ಸಾವನ್ನಪ್ಪಿ, 25 ಜನ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದ ಬಳಿಕ ದೇಶದ ಎಲ್ಲ ರಾಜ್ಯ ಸರ್ಕಾರಗಳು ಹಳೆಯ ಸೇತುವೆಯ ಸದೃಢತೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸುತ್ತಿವೆ.

  • ಸುಮನಹಳ್ಳಿ ಬ್ರಿಡ್ಜ್‌ನಲ್ಲಿ  ಗುಂಡಿ- ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ

    ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ಗುಂಡಿ- ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ

    – ಬೃಹತ್ ವಾಹನಗಳ ಸಂಚಾರಕ್ಕೆ ನಿರ್ಬಂಧ

    ಬೆಂಗಳೂರು: ನಗರದ ಸುಮನಹಳ್ಳಿ ಬ್ರಿಡ್ಜ್‌ನ ಮಧ್ಯ ಭಾಗದಲ್ಲಿ ಗುಂಡಿ ಬಿದ್ದಿದ್ದು, ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸರ ಸಮಯ ಪ್ರಜ್ಞೆಯಿಂದೆ ಬಹುದೊಡ್ಡ ದುರಂತ ತಪ್ಪಿದೆ.

    ಬಿಡಿಎ ನಿರ್ಮಿಸಿದ್ದ ಸುಮನಹಳ್ಳಿ ಳ್ಳಿ ಬ್ರಿಡ್ಜ್ ಕಾಣಿಸಿಕೊಂಡ ಗುಂಡಿಯು ಸವಾರರು ಹಾಗೂ ಚಾಲಕರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಶುಕ್ರವಾರ ರಾತ್ರಿಯಿಂದಲೇ ಬೃಹತ್ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಗುಂಡಿ ಬಿದ್ದ ಜಾಗದ ಸುತ್ತ ಕಾಮಾಕ್ಷಿ ಸಂಚಾರ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

    ಮಳೆಯ ನೀರು ಬ್ರಿಡ್ಜ್ ಮೇಲೆ ನಿಂತ ಪರಿಣಾಮ ಸುಮಾರು ಏಳೆಂಟು ಅಡಿ ಗುಂಡಿ ಬಿದ್ದಿದೆ. ಇದನ್ನು ಗಮನಿಸಿದ ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸರು ಭಾರೀ ವಾಹನಗಳು ಹೋಗದಂತೆ ಎಚ್ಚರ ವಹಿಸಿದ್ದಾರೆ. ಇದರಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಉಮೇಶ್, ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ತಾಂತ್ರಿಕವಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡು ಗರ್ಡರ್ ಭೀಮ್‍ಗಳ ಮಧ್ಯೆಯಿರುವುದರಿಂದ ಬ್ರಿಡ್ಜ್ ಗೆ ಯಾವುದೇ ರೀತಿಯ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಸೇತುವೆ ಪರಿಶೀಲನೆ ನಡೆಸಲಾಗುತ್ತದೆ. ಸುರಕ್ಷಿತ ದೃಷ್ಟಿಯಿಂದ ಸೇತುವೆಯ ಮೇಲಿನ ವಾಹನ ದಟ್ಟಣೆಯನ್ನು ಸದ್ಯಕ್ಕೆ ತಡೆಯಲಾಗಿದೆ. ಬುಧವಾರ ರಾತ್ರಿ 11 ಗಂಟೆ ಬಳಿಕ ಒನ್ ವೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.