Tag: sumalatha ambaressh

  • ಹೆಚ್‍ಡಿಕೆ ಬರೀ ಹಿಟ್ & ರನ್, ದಾಖಲೆ ಇದ್ರೆ ಬಿಡುಗಡೆ ಮಾಡಲಿ: ಚಲುವರಾಯಸ್ವಾಮಿ

    ಹೆಚ್‍ಡಿಕೆ ಬರೀ ಹಿಟ್ & ರನ್, ದಾಖಲೆ ಇದ್ರೆ ಬಿಡುಗಡೆ ಮಾಡಲಿ: ಚಲುವರಾಯಸ್ವಾಮಿ

    ಚಾಮರಾಜನಗರ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರದ್ದು, ಬರೀ ಹಿಟ್ ಅಂಡ್ ರನ್ ಕೇಸ್. ಎಲ್ಲ ತಮಗೇ ಗೊತ್ತಿದೆ ಅನ್ಕೊಂಡಿದ್ದಾರೆ ನನ್ನತ್ರ ಸಿಡಿ ಇದೆ, ಕ್ಯಾಸೆಟ್ ಇದೆ ಅಂತಾರೆ. ಇದ್ದರೆ ಬಿಡುಗಡೆ ಮಾಡಲಿ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.

    ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಲೋಕಲ್ ರಾಜಕೀಯ ಮಾಡುತ್ತಾ ಮೈಲೇಜ್ ತೆಗೆದುಕೊಳ್ಳಲು ಹೊರಟಿದ್ದಾರೆ. ಇವರಿಗೆ ರಾಷ್ಟ್ರ ಹಾಗೂ ರಾಜ್ಯದ ಸಮಸ್ಯೆಗಳು ಬೇಕಿಲ್ಲ ಎಂದು ಆರೋಪಿಸಿದರು.

    ಜವಾಬ್ದಾರಿ ಸ್ಥಾನದಲ್ಲಿರುವ ಕುಮಾರಸ್ವಾಮಿ ಸುಮಲತಾ ಕೆಸರೆರಚಾಟ ಸರಿಯಲ್ಲ. ತಮ್ಮ ವೈಫಲ್ಯತೆಗಳನ್ನು ಮುಚ್ಚಿಕೊಳ್ಳಲು ಇಬ್ಬರೂ ಬೀದಿಜಗಳ ಆಡುತ್ತಿದ್ದಾರೆ. ಜನರು ಸಂಕಷ್ಟದಲ್ಲಿರುವಾಗ ಇವರು ಜಗಳ ಆಡುವ ಅವಶ್ಯಕತೆ ಇದೆಯಾ..? ಕೋವಿಡ್ ಸಂಕಷ್ಟದಲ್ಲಿ ಇವರು ಯಾರ ಮನೆ ಬಳಿ ಹೋಗಿದ್ದಾರೆ, ಯಾರ ಕಷ್ಟ ಆಲಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಂಬರೀಶ್‍ಗೆ ನಾನೇನು ಗುಲಾಮನಾಗಿದ್ನಾ: ಫೋಟೋ ವೈರಲ್‍ಗೆ ಹೆಚ್‍ಡಿಕೆ ಪ್ರಶ್ನೆ

    ಹೀಗೆ ಪರಸ್ಪರ ಜಗಳ ಆಡುವುದು ಇಬ್ಬರಿಗು ಗೌರವ ಅಲ್ಲ. ಜನರ ಹಿತಾಸಕ್ತಿ ದೃಷ್ಟಿಯಿಂದ ಕೆಲಸ ಮಾಡುವುದು ಬಿಟ್ಟು ಹೀಗೆ ಜಗಳವಾಡುತ್ತಿದ್ದರೆ ಜನ ನಗಲ್ಲವೇ ಎಂದ ಅವರು, ಮನ್ಮುಲ್ ಹಗರಣ ಇದೆ. ಸಕ್ಕರೆ ಕಾರ್ಖಾನೆ ವಿಚಾರ ಇದೆ. ಕೆ.ಅರ್.ಎಸ್ ವಿಚಾರ ಇದೆ. ಇದೆಲ್ಲವನ್ನು ಬಿಟ್ಟು ಬೀದಿ ಜಗಳ ಆಡುವುದು ಎಷ್ಟು ಸರಿ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

    ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಸತ್ಯ ಎಂದ ಅವರು, ಕೆ.ಆರ್.ಎಸ್ ಗೆ ಹಾನಿಯುಂಟು ಮಾಡುವ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯ ಕೊನೆಯಲ್ಲಿ ಅಕ್ರಮಗಣಿಗಾರಿಕೆ ಬಯಲಿಗೆ ಬಂತು. ಅವರು ಕೂಡ ತನಿಖೆಗೆ ಆದೇಶ ಕೊಟ್ಟಿದ್ದರು. ಆ ಬಳಿಕ ಕುಮಾರಸ್ವಾಮಿ ನಂತರ ಯಡಿಯೂರಪ್ಪ ಸಿಎಂ ಆದರು. ಅದು ಅಲ್ಲಿಗೆ ನಿಂತು ಹೋಯಿತು. ಸರ್ಕಾರ ಹೀಗೆ ಉದಾಸೀನ ಮಾಡಿದರೆ ಈ ರೀತಿ ಕೆಸರೆರೆಚಾಟ ನಡೆಯುತ್ತಾ ಇರುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದರು. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

  • ಮಂಡ್ಯ ರಾಜಕೀಯಕ್ಕೆ ಎಸ್.ಎಂ ಕೃಷ್ಣ ಎಂಟ್ರಿ..!

    ಮಂಡ್ಯ ರಾಜಕೀಯಕ್ಕೆ ಎಸ್.ಎಂ ಕೃಷ್ಣ ಎಂಟ್ರಿ..!

    ಬೆಂಗಳೂರು: ಈ ಬಾರಿಯ ಲೋಕಸಮರದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವ ಮಂಡ್ಯ ಕ್ಷೇತ್ರದಲ್ಲಿ ನಟಿ ಸುಮಲತಾ ಅಂಬರೀಶ್ ಅವರನ್ನು ಮನವೊಲಿಸಲು ಬಿಜೆಪಿ ರಣತಂತ್ರ ಹೂಡುತ್ತಿದೆ.

    ಸುಮಲತಾ ವಿರುದ್ಧ ಬಿಜೆಪಿ ಸ್ಪರ್ಧೆ ಮಾಡುವುದು, ಬಿಡುವುದು ಬೇರೆ ವಿಚಾರವಾಗಿದೆ. ಆದ್ರೆ ಬಿಜೆಪಿ ರಾಜ್ಯಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಇಂದು ಮಹತ್ವದ ಸಭೆ ಕರೆದಿದ್ದು, ಮಂಡ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಅವರು ಮಂಡ್ಯ ರಣಕಣದ ಕುರಿತು ಸಲಹೆ ನೀಡಲಿದ್ದಾರೆ ಎನ್ನಲಾಗಿದೆ.

    ಸುಮಲತಾ ಅವರನ್ನು ಮನವೊಲಿಸುವ ಕೆಲಸವನ್ನು ಮಾಜಿ ಡಿಸಿಎಂ ಆಗಿರುವ ಆರ್ ಅಶೋಕ್ ಹೆಗಲಿಗೆ ನೀಡಲಿದ್ದಾರೆ. ಒಂದು ವೇಳೆ ಸುಮಲತಾ ಅವರು ಪಕ್ಷೇತರರಾಗಿ ನಿಂತರೆ ಅವರಿಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುವ ಪ್ಲಾನ್ ಕೂಡ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಒಟ್ಟಿನಲ್ಲಿ ಬಿಎಸ್‍ವೈ ಇಂದು ನಡೆಸುವ ಸಭೆಯ ಬಗ್ಗೆ ರಾಜ್ಯ ನಾಯಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.

    ಇತ್ತ ಸುಮಲತಾ ಅವರು ಇಂದು ಕೂಡ ಮಂಡ್ಯದಲ್ಲಿ ಕ್ಷೇತ್ರ ಪ್ರವಾಸ ಮಾಡಲಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಕೋಡಿಶೆಟ್ಟಿಪುರದ ಮಾರಮ್ಮನ ದೇವಾಲಯ ಪುನರ್ ಪ್ರತಿಷ್ಠಾಪನೆ ಹಾಗೂ ನವಗ್ರಹ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಒಂದು ತಿಂಗಳಿಂದ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ನೆಪದಲ್ಲಿ ಅವರು ಕೈ ಮುಂಡರನ್ನ ಭೇಟಿ ಮಾಡುತ್ತಿದ್ದಾರೆ.

    ನಾಗಮಂಗಲ ತಾಲೂಕಿನಲ್ಲೂ ಸುಮಲತಾ ಇಂದು ಸಂಚಾರ ಮಾಡಲಿದ್ದು, ಗಂಗವಾಡಿ, ಟಿ.ಚನ್ನಾಪುರ, ತೆಂಗಿನಭಾಗ ಗ್ರಾಮಗಳಿಗೆ ತೆರಳಲಿದ್ದಾರೆ. ಗ್ರಾಮದ ಜಾತ್ರಾ ಮಹೋತ್ಸವದಲ್ಲೂ ಭಾಗಿಯಾಗಲಿದ್ದಾರೆ. ಈ ಮೂಲಕ ಜನರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಟುಂಬ ರಾಜಕಾರಣಕ್ಕೆ ಸಚಿವ ಜಿಟಿಡಿಯಿಂದ ಹೊಸ ವ್ಯಾಖ್ಯಾನ

    ಕುಟುಂಬ ರಾಜಕಾರಣಕ್ಕೆ ಸಚಿವ ಜಿಟಿಡಿಯಿಂದ ಹೊಸ ವ್ಯಾಖ್ಯಾನ

    ಮೈಸೂರು: ಕುಟುಂಬ ರಾಜಕಾರಣ ಈಗ ವಿಷಯವಲ್ಲ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬ ಈಗ ಒಂದಲ್ಲ. ಅವರು ಬೇರೆ ಬೇರೆಯಾಗಿ ಸಾಕಷ್ಟು ವರ್ಷವಾಗಿದೆ ಎಂದು ಸಚಿವ ಜಿ.ಟಿ ದೇವೇಗೌಡ ಕುಟುಂಬ ರಾಜಕಾರಣಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಮಕ್ಕಳಾದ ಬಾಲಕೃಷ್ಣ ಅವರ ಕುಟುಂಬವೇ ಬೇರೆ. ರೇವಣ್ಣ ಅವರ ಕುಟುಂಬವೆ ಬೇರೆ. ಕುಮಾರಸ್ವಾಮಿ ಅವರ ಕುಟುಂಬವೇ ಬೇರೆ. ಇಲ್ಲಿ ನಾಮ ನಿರ್ದೇಶನ ಮಾಡುತ್ತಿಲ್ಲ ಅಂದ್ರು.

    ಕುಟುಂಬಕ್ಕೂ ಮಿಗಿಲಾಗಿ ಜನರ ಮುಂದೆ ಹೋಗಿ ಅವರು ಆಯ್ಕೆಯಾಗುತ್ತಿದ್ದಾರೆ. ದೇವೇಗೌಡರ ಕುಟುಂಬದಲ್ಲಿ ಮಾತ್ರ ಕುಟುಂಬ ರಾಜಕಾರಣ ಇಲ್ಲ. ದೇಶದ ಸಾಕಷ್ಟು ರಾಜ್ಯಗಳಲ್ಲಿ ಕುಟುಂಬ ರಾಜಕಾರಣ ಇದೆ ಎಂದು ಅವರು ಹೇಳಿದ್ರು.

    ಸುಮಲತಾ ಬಗ್ಗೆ ಸಚಿವ ರೇವಣ್ಣ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬಾಯಿಗೆ ಬಂದಂತೆ ಮಾತನಾಡುವವರಿಗೆಲ್ಲ ಈಗ ಉತ್ತರ ಕೊಡಲು ಸಾಧ್ಯವಿಲ್ಲ. ಯಾರು ಕೂಡ ಇನ್ನೊಬ್ಬರನ್ನು ನೋವಾಗುವ ರೀತಿ ಮಾತನಾಡಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಈ ವಿಚಾರದಲ್ಲಿ ಯಾರು ತುಟಿ ಬಿಚ್ಚಬಾರದು ಎಂದು ಹೇಳಿದ್ದಾರೆ. ಇದರಿಂದ ನನ್ನನ್ನು ಕಟ್ಟಿ ಹಾಕಿದಾಗೆ ಆಗಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರವಾಗಿ ನಾನು ಯಾವ ಪ್ರತಿಕ್ರಿಯೆ ನೀಡಲ್ಲ ಎಂದು ಜಿಟಿಡಿ ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv