Tag: Sumalatha Ambareesh

  • ಮಂಡ್ಯದಲ್ಲಿ ಶುರುವಾಯ್ತು ಇನ್‍ವೈಟ್ ಪಾಲಿಟಿಕ್ಸ್- ಸುಮಲತಾ ಶ್ರೀರಂಗಪಟ್ಟಣದಿಂದ ಸ್ಫರ್ಧೆಗೆ ಆಹ್ವಾನ

    ಮಂಡ್ಯದಲ್ಲಿ ಶುರುವಾಯ್ತು ಇನ್‍ವೈಟ್ ಪಾಲಿಟಿಕ್ಸ್- ಸುಮಲತಾ ಶ್ರೀರಂಗಪಟ್ಟಣದಿಂದ ಸ್ಫರ್ಧೆಗೆ ಆಹ್ವಾನ

    ಮಂಡ್ಯ: ಜಿಲ್ಲೆಯಲ್ಲಿ ಚುನಾವಣೆ (Vidhanasabha Election) ಯ ಅಖಾಡ ಗರಿಗೆದರಿದೆ. ಆಪ್ತರುಗಳು ತಮ್ಮ ನಾಯಕರನ್ನು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ನಾಯಕಿಯನ್ನು ಅವರ ಆಪ್ತರು ಪಕ್ಷಕ್ಕೆ ಆಹ್ವಾನ ಮಾಡುವುದರ ಜೊತೆಗೆ ಆ ಒಂದು ಕ್ಷೇತ್ರದಲ್ಲಿ ಸ್ಪರ್ಧೆಗೂ ಸಹ ಆಹ್ವಾನಿಸಿದ್ದಾರೆ.

    ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವು ಬಾಕಿ ಇದೆ. ಹೀಗಿದ್ದರೂ ಸಹ ರಾಜ್ಯದಲ್ಲಿ 3 ರಾಜಕೀಯ ಪಕ್ಷದವರು ಫುಲ್ ಆ್ಯಕ್ಟೀವ್ ಆಗಿ ಮತದಾರರನ್ನು ಸೆಳೆಯಲು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ. ಅದರಲ್ಲೂ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಫುಲ್ ಆ್ಯಕ್ಟೀವ್. ಮುಖಂಡರು ತಮ್ಮ ನಾಯಕರಿಗೆ ತಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನಿಸ್ತಿದ್ದಾರೆ.

    ಆರಂಭದಲ್ಲಿ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಗುರುಚರಣ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿ (DK Shivakumar) ಮದ್ದೂರು ಕ್ಷೇತ್ರ (Maddur Constituency) ದಿಂದ ಸ್ಪರ್ಧಿಸುವಂತೆ ಆಹ್ವಾನಿಸಿದರು. ಇದಾದ ನಂತರ ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಅವರು ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನಿಸಿದರು. ಇದೀಗ ಸಂಸದೆ ಸುಮಲತಾ ಅಂಬರೀಶ್ ಅವರ ಸರದಿ. ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಹಾಗೂ ಸುಮಲತಾ ಅಂಬರೀಶ್ (Sumalatha Ambareesh) ಆಪ್ತ ಇಂಡುವಾಳು ಸಚ್ಚಿದಾನಂದ ಬಿಜೆಪಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ.

    ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪ್ರಮುಖ ಟ್ರಂಪ್ ಕಾರ್ಡ್ ಆಗಿರುವ ಇಂಡುವಾಳು ಸಚ್ಚಿದಾನಂದ ಅವರು ಕ್ಷೇತ್ರದ್ಯಾಂತ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯ್ತಿ ಹಳ್ಳಿಗಳಲ್ಲಿ ಕಾಲಿಗೆ ಚಕ್ರಕ್ಕೆ ಕಟ್ಟಿಕೊಂಡು ತಿರುಗುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಲು ಪ್ರಮುಖ ಕಾರಣ ಎಂದ್ರೆ ಇದೇ ಇಂಡುವಾಳು ಸಚ್ಚಿದಾನಂದ. ಇದನ್ನೂ ಓದಿ: 2 ಬಾರಿ ಆಪರೇಷನ್ ಆದ್ರೂ ಆರೋಗ್ಯ ಲೆಕ್ಕಿಸದೇ ಪಕ್ಷಕ್ಕಾಗಿ ಹೋರಾಟ: ರೇವಣ್ಣ ಭಾವುಕ

    ಸುಮಲತಾ ಅಂಬರೀಶ್ ಆಪ್ತ ವಲಯದಲ್ಲಿ ಇರುವ ಸಚ್ಚಿದಾನಂದ ಕಳೆದ ಎರಡು ತಿಂಗಳ ಹಿಂದೆ ಬಿಜೆಪಿ ಸೇರ್ಪಡೆಯಾಗಿದ್ರು. ಇದೀಗ ಸಚ್ಚಿದಾನಂದ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ಪಕ್ಷಕ್ಕೆ ಆಹ್ವಾನ ಮಾಡಿದ್ದು, ಸುಮಲತಾ ಅವರು ಬಿಜೆಪಿಗೆ ಬಂದರೆ ಅನುಕೂಲವಾಗುತ್ತೆ ಎಂದು ಹೇಳಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರ (Srinrangapatna Contituency) ದಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧೆ ಮಾಡಿದ್ದರೆ ನಾನು ಸ್ವಾಗತ ಮಾಡುತ್ತೇನೆ ಎಂದು ಸಚ್ಚಿದಾನಂದ ಹೇಳಿದ್ದಾರೆ.

    ಮಂಡ್ಯದಲ್ಲಿ ಆಹ್ವಾನ ಪಾಲಿಟಿಕ್ಸ್ ಜೋರಾಗಿದ್ದು, ಸುಮಲತಾ ಅಂಬರೀಶ್‍ಗೆ ಅವರ ಆಪ್ತ ಇಂಡುವಾಳು ಸಚ್ಚಿದಾನಂದ ಬಿಜೆಪಿಗೆ ಆಹ್ವಾನಿಸಿದ್ದು ಸುಮಲತಾ ಅಂಬರೀಶ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸುಮಲತಾ ಜೊತೆ ನಮ್ಮ ಕಾರ್ಯಕರ್ತರು ಗುರುತಿಸಿಕೊಳ್ಳಬೇಡಿ: ಮಂಡ್ಯ ಕಾಂಗ್ರೆಸ್

    ಸುಮಲತಾ ಜೊತೆ ನಮ್ಮ ಕಾರ್ಯಕರ್ತರು ಗುರುತಿಸಿಕೊಳ್ಳಬೇಡಿ: ಮಂಡ್ಯ ಕಾಂಗ್ರೆಸ್

    ಮಂಡ್ಯ: ಸಂಸದೆ ಸುಮಲತಾ (MP Sumalatha Ambareesh) ಜೊತೆ ಇನ್ಮುಂದೆ ಗುರುತಿಸಿಕೊಳ್ಳಬೇಡಿ, ಸುಮಲತಾ ಬೆಂಬಲಿಗರು ನಡೆಸುವ ಸಭೆಗೆ ಯಾರು ಹೋಗಬೇಡಿ. ಸುಮಲತಾ ಬೆಂಬಲಿಗರು ಕಾಂಗ್ರೆಸ್ಸಿಗರನ್ನು ನಿಮ್ಮ ಸಭೆಗೆ ಕರೆಯಲೂಬೇಡಿ ಎಂದು ಮಂಡ್ಯದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ.

    ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರ ಸಭೆ ಬಳಿಕ ಎಚ್ಚೆತ್ತಿರುವ ಮಂಡ್ಯ ಜಿಲ್ಲೆಯ ಕಾಂಗ್ರೆಸ್ (Mandya Congress) ನಾಯಕರು ಈ ರೀತಿಯ ಆದೇಶವನ್ನು ಹೊರಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದರು. ಇಷ್ಟಾದ್ರು ಸಹ ಕಾಂಗ್ರೆಸ್‍ನ ಕೆಲ ಮುಖಂಡರು ಸುಮಲತಾ ಅಂಬರೀಶ್ ಜೊತೆ ಹಾಗೂ ಆಪ್ತರ ಜೊತೆ ಗುರುತಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರಿಸಿದೆ. ಸುಮಲತಾ ಅವರ ಬೆಂಬಲಿಗರು ನಡೆಸುವ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸುವುದು ಹಾಗೂ ಅವರ ಜೊತೆ ಗುರುತಿಸಿಕೊಳ್ಳುವುದು ಸರಿಯಲ್ಲ. ಇದನ್ನೂ ಓದಿ: ಕಾರ್ಯಕಾರಿಣಿಯಲ್ಲಿ ಅಚ್ಚರಿ- ಬಿಎಸ್‍ವೈ, ಬಿಎಲ್‍ಎಸ್ ಕೈಕೈ ಹಿಡಿದು ಆತ್ಮೀಯ ಚರ್ಚೆ

    ಸುಮಲತಾ ಅವರ ರಾಜಕೀಯ ತೀರ್ಮಾನಗಳಿಗೆ ನಮ್ಮ ಪಕ್ಷದ ಅಭಿಪ್ರಾಯವಿಲ್ಲ. ಎಂಪಿ ಚುನಾವಣೆ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿ ಸುಮಲತಾ ಅವರು ತಟಸ್ಥವಾಗಿದ್ದಾರೆ. ಕಾಂಗ್ರೆಸ್ ಆ ಎಲ್ಲ ಎಲೆಕ್ಷನ್‍ಗಳಲ್ಲಿ ಹೋರಾಟ ಮಾಡಿದೆ. ಆದ್ದರಿಂದ ಅವರ ಸಭೆಗಳಿಗೆ ಹೋಗುವುದು ಸಮಂಜಸವಲ್ಲ. ಅದರ ಅವಶ್ಯಕತೆಯೂ ಇಲ್ಲ. ಸುಮಲತಾ ಅವರ ಮಾತುಗಳು ಎಲ್ಲಾ ಬಿಜೆಪಿ ಸರ್ಕಾರ (BJP Government) ಪರವಾಗಿ ಇವೆ. ಕಾಂಗ್ರೆಸ್‍ನ್ನು ಬೆಂಬಲಿಸುವ ಒಂದು ಹೇಳಿಕೆಯನ್ನು ಅವರು ಕೊಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ಮುಖಂಡರು ಅವರ ಸಭೆಗಳಿಗೆ ಹಾಗೂ ಅವರೊಂದಿಗೆ ಗುರುತಿಸಿಕೊಳ್ಳುವುದು ಸರಿಯಲ್ಲ ಎಂದು ಪತ್ರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಉಲ್ಲೇಖ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಂಎಲ್‍ಎ ಚುನಾವಣೆಗೆ ಸುಮಲತಾ ಸ್ಪರ್ಧೆ- ಮಂಗಳವಾರ ಮಹತ್ವದ ಸಭೆ

    ಎಂಎಲ್‍ಎ ಚುನಾವಣೆಗೆ ಸುಮಲತಾ ಸ್ಪರ್ಧೆ- ಮಂಗಳವಾರ ಮಹತ್ವದ ಸಭೆ

    ಮಂಡ್ಯ: ಸಂಸದೆ ಸುಮಲತಾ (MP Sumalatha Ambareesh) ಯಾವ ಪಕ್ಷ ಸೇರುತ್ತಾರೆ ಎಂಬ ಚರ್ಚೆಗಳು ಜೋರಾಗಿದೆ. ಈ ಹೊತ್ತಿನಲ್ಲಿಯೇ ಸಂಸದೆ ಸುಮಲತಾ ಬೆಂಬಲಿಗರು ಹಾಗೂ ಅಭಿಮಾನಿಗಳು ಮಹತ್ವದ ಸಭೆಯನ್ನ ಮಂಗಳವಾರ ಕರೆದಿದ್ದು, ಎಲ್ಲರ ಚಿತ್ತ ಆ ಸಭೆಯತ್ತ ನೆಟ್ಟಿದೆ.

    ಸುಮಲತಾ ಕಳೆದ ಲೋಕಸಭಾ ಚುನಾವಣೆ (Loksabha Election) ಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಬಿಜೆಪಿ, ರಾಜ್ಯ ರೈತ ಸಂಘ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಿಂದೆ ನಿಂತು ಸುಮಲತಾ ಗೆಲುವಿಗೆ ಕಾರಣರಾಗಿದ್ದರು. ಸದ್ಯ ಮುಂದಿನ ವಿಧಾನಸಭೆ ಚುನಾವಣೆ (Vidhanasabha Election) ಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿ ಕೊಡ್ತಾರಾ ಎಂಬ ಚರ್ಚೆಯಾಗ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ರಾಯಚೂರಿನಿಂದ ಸ್ಪರ್ಧಿಸಲು ಆಹ್ವಾನ – ಆಸ್ತಿ ಮಾರಲು ಮುಂದಾದ ಅಭಿಮಾನಿ

    sumalatha ambarish

    ಆ ಚರ್ಚೆಗೆ ಪುಷ್ಠಿ ನೀಡುವಂತೆ ಸಂಸದೆ ಸುಮಲತಾ ಹೇಳಿಕೆಗಳನ್ನು ನೀಡುತ್ತಿದ್ದು, ಸಮಯ ಬಂದಾಗ ನಿರ್ಧಾರ ಮಾಡುತ್ತೇನೆ ಎನ್ನುತ್ತಿದ್ದಾರೆ. ಯಾವಾಗ ಸಂಸದೆ ಸುಮಲತಾ ಆ ಹೇಳಿಕೆ ಕೊಟ್ಟರು ಇದೀಗ ಅವರ ಬೆಂಬಲಿಗರು ಸಭೆ ನಡೆಸಲು ತೀರ್ಮಾನಿಸಿದ್ದಾರೆ.

    ನಾಳೆ (ಮಂಗಳವಾರ ಬೆಳಗ್ಗೆ) 11 ಗಂಟೆಗೆ ಸುಮಲತಾ ಬೆಂಬಲಿಗರಾದ ಹನಕೆರೆ ಶಶಿಕುಮಾರ್, ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಮಂಡ್ಯದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಸಂಸದೆ ಸುಮಲತಾ ರಾಜ್ಯ ರಾಜಕಾರಣಕ್ಕೆ ಬರಬೇಕು, ಬರೋದಿದ್ದರೆ ಯಾವ ಪಕ್ಷವನ್ನ ಸೇರ್ಪಡೆಯಾಗಬೇಕು ಎಂದು ಚರ್ಚಿಸಲಿದ್ದಾರೆ. ಬಳಿಕ ಸಂಸದೆ ಸುಮಲತಾಗೆ ಸಭೆಯ ನಿರ್ಣಯವನ್ನ ಮಂಡಿಸಿ ಅಂತಿಮವಾಗಿ ಸುಮಲತಾ ತಮ್ಮ ನಿರ್ಧಾರವನ್ನ ತಿಳಿಸಲಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೇದಿಕೆಗೆ ಸುಮಲತಾ ಬಂದಿದ್ದಕ್ಕೆ ಕಿತ್ತಾಟ – ಕೈಕೈ ಮಿಲಾಯಿಸಿದ ಗ್ರಾಮಸ್ಥರು

    ವೇದಿಕೆಗೆ ಸುಮಲತಾ ಬಂದಿದ್ದಕ್ಕೆ ಕಿತ್ತಾಟ – ಕೈಕೈ ಮಿಲಾಯಿಸಿದ ಗ್ರಾಮಸ್ಥರು

    ಮಂಡ್ಯ: ದೇವಸ್ಥಾನ (Temple) ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ (Sumalatha Ambareesh) ವೇದಿಕೆ ಏರುವ ವಿಚಾರಕ್ಕೆ ಗ್ರಾಮಸ್ಥರಲ್ಲಿ ವಾಗ್ವಾದ ನಡೆದಿದ್ದು, ಬಳಿಕ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಬಿ.ಗೌಡಗೆರೆ ಗ್ರಾಮದಲ್ಲಿ ನಡೆದಿದೆ.

    ಮಂಡ್ಯ (Mandya) ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಮಹದೇಶ್ವರ ದೇವಾಲಯ ಉದ್ಘಾಟನೆ ವೇಳೆ ಸುಮಲತಾ ಬೆಂಬಲಿಗರು ಹಾಗೂ ಮತ್ತೊಂದು ಬಣಗಳ ನಡುವೆ ವಾಗ್ವಾದ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದನ್ನೂ ಓದಿ: ಮಾಧುಸ್ವಾಮಿ ಮೊದಲು ಮಾತಾಡಲಿ- ಸಚಿವರ ಹೇಳಿಕೆಗೆ ಸಿಎಂ ವ್ಯಂಗ್ಯ

    ದೇವಾಲಯ ಉದ್ಘಾಟನೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ವೇದಿಕೆ ನಿರ್ಮಿಸಲಾಗಿತ್ತು. ಈ ವೇದಿಕೆಗೆ ರಾಜಕೀಯ ಮುಖಂಡರನ್ನು ಹತ್ತಿಸಬಾರದು ಎಂದು ಮೊದಲೇ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ನಡುವೆಯೂ ಸಂಸದೆ ಸುಮಲತಾರನ್ನ ವೇದಿಕೆಗೆ ಕರತೆತಂದಿದ್ದರಿಂದ ಗ್ರಾಮಸ್ಥರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇದನ್ನೂ ಓದಿ: ಗಲ್ಲಾಪೆಟ್ಟಿಗೆಯಲ್ಲಿ 16 ಸಾವಿರ ಕೋಟಿ ಬಾಚಿದ `ಅವತಾರ್ 2′ ಸಿನಿಮಾ

    ಯಾಕೆ ಸುಮಲತಾರನ್ನ ವೇದಿಕೆ ಹತ್ತಿಸುತ್ತೀರಾ? ಎಂದು ಕೆಲವರು ಪ್ರಶ್ನಿಸಿ ವಾಗ್ವಾದಕ್ಕಿಳಿದರು. ಪರಿಸ್ಥಿತಿ ಮಿತಿ ಮಿರಿ ಎರಡು ಬಣದವರು ಕಿತ್ತಾಟಕ್ಕಿಳಿದರು. ಒಂದು ಗುಂಪಿನ ವಿರೋಧದ ನಡುವೆಯೂ ಮತ್ತೊಂದು ಗುಂಪು ಸುಮಲತಾರನ್ನ ವೇದಿಕೆಗೆ ಕರೆತಂದಿತು. ಬಳಿಕ ವೇದಿಕೆಯಲ್ಲಿ ಮಾತನಾಡಿ ಸುಮಲತಾ ಕಾರ್ಯಕ್ರಮದಿಂದ ನಿರ್ಗಮಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಕೆಶಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಹಿಂದಿದೆ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್!

    ಡಿಕೆಶಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಹಿಂದಿದೆ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್!

    ಮಂಡ್ಯ: ಇಷ್ಟು ದಿನಗಳ ಕಾಲ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar) ಕನಕಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ ಎಂದು ಮಾತ್ರ ಎನ್ನಲಾಗುತ್ತಿತ್ತು ಆದ್ರೆ ಇದೀಗ ಡಿಕೆ ಮಂಡ್ಯದ (Mandya) ಮದ್ದೂರು (Maddur) ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳು ಓಡಾಡುತ್ತಿವೆ. ಈ ಲೆಕ್ಕಾಚಾರದಲ್ಲಿ ಡಿಕೆಶಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಹಾಕಿಕೊಂಡಿದ್ದಾರೆ ಎಂಬ ವಿಚಾರ ಪ್ರಸ್ತಾಪವಾಗುತ್ತಿದೆ.

    ಸದ್ಯ ಕನಕಪುರ ಡಿ.ಕೆ.ಶಿವಕುಮಾರ್ ಗೆಲುವು ಪಡೆಯಲು ಅತ್ಯಂತ ಸುಲಭ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ತಮ್ಮ ಡಿ.ಕೆ.ಸುರೇಶ್, ಅಥವಾ ಕುಟುಂಬದ ಬೇರೊಬ್ಬ ಸದಸ್ಯನನ್ನು ಸ್ಪರ್ಧೆ ಮಾಡಿಸಿ ಕುಟುಂಬಸ್ಥರಿಗೆ ರಾಜ್ಯ ರಾಜಕಾರಣದ ಭವಿಷ್ಯ ಕಲ್ಪಿಸಿಕೊಡುವುದು ಒಂದು ತಂತ್ರವಾಗಿದೆ. ಇದನ್ನೂ ಓದಿ: ರಂಗೇರಿದ ಚುನಾವಣಾ ಅಖಾಡ- ಡಿಕೆಶಿ ಭೇಟಿ ಬೆನ್ನಲ್ಲೇ ಶಿವರಾಮೇಗೌಡ ಶಕ್ತಿ ಪ್ರದರ್ಶನ

    ಇನ್ನೂ ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡಿ ಡಿಕೆ ವಿರುದ್ಧ ತಿರುಗಿ ಬಿದ್ದಿರುವ ಸಂಸದೆ ಸುಮಲತಾ ಅಂಬರೀಶ್‍ಗೆ (Sumalatha Ambareesh) ಟಕ್ಕರ್ ನೀಡಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಡಿಕೆಶಿ, ಸುಮಲತಾ ಅಂಬರೀಶ್ ಬಿಜೆಪಿಯ ಅಸೋಸಿಯೇಟ್ ಮೆಂಬರ್ ಎಂದು ಹೇಳಿದ್ರು. ಇದಕ್ಕೆ ಪ್ರತಿಯಾಗಿ ಸುಮಲತಾ ಅವರು ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೀಗ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ, ಅದು ಸಹ ಮದ್ದೂರು ಅಥವಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಹೀಗಾಗಿ ಡಿಕೆಶಿ ಅವರೇ ಸ್ವತಃ ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಮೂಲಕ ಸುಮಲತಾ ಅಂಬರೀಶ್ ಅವರ ರಾಜ್ಯ ರಾಜಕೀಯದ ಓಟಕ್ಕೆ ಬ್ರೇಕ್ ಹಾಕಲು ಹೊರಟಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಕಾವು ಪಡೆದ ರಾಜಕೀಯ – ಕನಕಪುರದ ಬಂಡೆ ಮದ್ದೂರಿನಲ್ಲಿ ಸ್ಪರ್ಧೆ?

    ಸುಮಲತಾ ಅಂಬರೀಶ್ ಮದ್ದೂರು ಕ್ಷೇತ್ರ ಬಿಟ್ಟು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರೆ, ಮಂಡ್ಯ ಕ್ಷೇತ್ರದಿಂದ ಚೆಲುವನಾರಾಯಣಸ್ವಾಮಿ ಅವರನ್ನು ನಿಲ್ಲಿಸಿ ನಾಗಮಂಗಲ ಕ್ಷೇತ್ರದಿಂದ ಎಲ್.ಆರ್.ಶಿವರಾಮೇಗೌಡ ಅವರನ್ನು ನಿಲ್ಲಿಸುವ ಲೆಕ್ಕಾಚಾರವಿದೆ. ಈ ಲೆಕ್ಕಾಚಾರದ ಮುಖಾಂತರ ಡಿಕೆಶಿ ಮದ್ದೂರು ಹಾಗೂ ಮಂಡ್ಯ ವಿಧಾನಸಭಾ ಕ್ಷೇಗಳಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಚಕ್ರವ್ಯೂಹ ಹೆಣೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಡ್ಯದಲ್ಲಿ ಕಾವು ಪಡೆದ ರಾಜಕೀಯ – ಕನಕಪುರದ ಬಂಡೆ ಮದ್ದೂರಿನಲ್ಲಿ ಸ್ಪರ್ಧೆ?

    ಮಂಡ್ಯದಲ್ಲಿ ಕಾವು ಪಡೆದ ರಾಜಕೀಯ – ಕನಕಪುರದ ಬಂಡೆ ಮದ್ದೂರಿನಲ್ಲಿ ಸ್ಪರ್ಧೆ?

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಸಂಕ್ರಾಂತಿ ಮುಗಿಯುತ್ತಿದ್ದ ಹಾಗೆ ರಾಜಕೀಯ ಬೆಳವಣಿಗೆ ಗರಿಗೆದರಿವೆ. ಕನಕಪುರದ ಬಂಡೆ ಡಿ.ಕೆ ಶಿವಕುಮಾರ್‌ ಮದ್ದೂರಿನಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಶುರುವಾಗಿದೆ.

    ಒಂದು ಕಡೆ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ರಾಜ್ಯ ರಾಜಕೀಯದ ಎಂಟ್ರಿ ಕುರಿತು ಸುಳಿವು ನೀಡಿದ್ರೆ, ಮತ್ತೊಂದೆಡೆ ರೆಬಲ್ ಲೇಡಿ ಮಾದರಿಯಲ್ಲಿ ಸ್ವಾಭಿಮಾನದ ಹೆಸರಿನ ಮೂಲಕ ಎಲ್.ಆರ್.ಶಿವರಾಮೇಗೌಡ (L. R. Shivarame Gowda)  ಕಹಳೆ ಊದಲು ಮುಂದಾಗಿದ್ದಾರೆ. ಇದರ ನಡುವೆ ಜಾತಿ ಹಾಗೂ ಸಿಎಂ ಅಸ್ತ್ರ ಬಳಸಿಕೊಂಡು ಮಂಡ್ಯದಲ್ಲಿ ಕನಕಪುರದ ಬಂಡೆ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಸಾಕಷ್ಟು ಸದ್ದು ಮಾಡುತ್ತಿದೆ.

    ಒಕ್ಕಲಿಗ ಜಾತಿ ಹಾಗೂ ಸಿಎಂ ಅಸ್ತ್ರವನ್ನು ಮುಂದಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಒಂದು ಲೆಕ್ಕಾಚಾರ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ (H.D Kumarswamy) ಮುಖ್ಯಮಂತ್ರಿ ಆಗ್ತಾರೆ ಎಂದು ಒಕ್ಕಲಿಗ ಸಮೂದಾಯ ಮಂಡ್ಯ ಜಿಲ್ಲೆಯ 7 ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ರು. ಇದೀಗ ಡಿಕೆಶಿ ಸಹ ಅದೇ ಹಾದಿಯಲ್ಲಿ ಹೊರಟಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರುಚರಣ್ ಹಾಗೂ ಕಾಂಗ್ರೆಸ್‍ನ ನಾಯಕರು ಡಿಕೆಶಿ ಅವರಿಗೆ ಮದ್ದೂರಿನಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ. ಡಿಕೆ ಸಹ ಎರಡು ಮೂರು ದಿನಗಳ ನಂತರ ನಿರ್ಧಾರ ಹೇಳ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈವರೆಗೂ ನಾನು ತಟಸ್ಥವಾಗಿದ್ದೇನೆ, ಸ್ಪರ್ಧೆ ಬಗ್ಗೆ ಮುಂದೆ ತೀರ್ಮಾನ: ಸುಮಲತಾ

     

     

     

     

     

     

     

     

    ಒಂದು ಕಡೆ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ನೀಡುತ್ತಿದ್ರೆ, ಇನ್ನೊಂದೆಡೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ನಾಗಮಂಗಲ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸ್ವಾಭಿಮಾನದ ಹೆಸರಿನಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಕ್ಷೇತ್ರದ್ಯಾಂತ ಓಡಾಡುತ್ತಿದ್ದಾರೆ. ನಾಗಮಂಗಲ ಕ್ಷೇತ್ರದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಾಭಿಮಾನಿ ಪರ್ವ ಕಾರ್ಯಕ್ರಮ ನಡೆಸಿ ಜನರಿಗೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಾ ಇದೀನಿ ನನ್ನ ಬೆಂಬಲಿಸಿ ಎಂದು ಜನರಲ್ಲಿ ಕೇಳಿಕೊಳ್ಳುತ್ತಾ ಇದ್ದಾರೆ. ಈ ನಡುವೆ ಶಿವರಾಮೇಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು (D.K Shivakumar) ಭೇಟಿಯಾಗಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ ಶಿವರಾಮೇಗೌಡ ಕಾಂಗ್ರೆಸ್‍ನಿಂದ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಮಂಡ್ಯ ರಾಜಕೀಯದಲ್ಲಿ ಓಡಾಡುತ್ತಿದೆ.

    ರಾಜ್ಯ ಮಾತ್ರವಲ್ಲ ಇಂಡಿಯಾದ ರಾಜಕೀಯ ಚಿತ್ರಣ ಬೇರೆ ಆದ್ರೆ ಸಕ್ಕರೆ ನಾಡು ಮಂಡ್ಯದ ರಾಜಕೀಯವೇ ಬೇರೆ. ಇದಕ್ಕೆ ಉದಾಹರಣೆಗೆ ಎಂದ್ರೆ ಕಳೆದ ಲೋಕಸಭಾ ಚುನಾವಣೆಯೇ ಸಾಕ್ಷಿ. ಇದೀಗ ಅಂತಹದೊಂದು ಜಿದ್ದಾಜಿದ್ದಿನ ರಾಜಕಾರಣಕ್ಕೆ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಸಾಕ್ಷಿಯಾಗಲು 2023ರ ವಿಧಾನಸಭಾ ಚುನಾವಣೆಯ ವೇದಿಕೆ ಸಜ್ಜುಗೊಳ್ಳುತ್ತಿದೆ. ಸದ್ಯ ಎಂಪಿಯಾಗಿ ರಾಷ್ಟ್ರ ರಾಜಕೀಯದಲ್ಲಿ ಆಕ್ಟೀವ್ ಆಗಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸುಳಿವನ್ನು ನೀಡುತ್ತಿದ್ದಾರೆ. ಸದ್ಯ ಪಕ್ಷೇತರವಾಗಿ ಉಳಿದಿರುವ ಸುಮಲತಾ ಅಂಬರೀಶ್ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಲೆಕ್ಕಾಚಾರವನ್ನು ಸುಮಲತಾ ಹಾಕಿಕೊಂಡಂತೆ ಕಾಣುತ್ತಿದೆ. ಸುಮಲತಾ ಅಂಬರೀಶ್ ಅವರು ಎಂಎಲ್‍ಎ ಚುನಾವಣೆಯ ಸ್ಪರ್ಧೆಯನ್ನು ತಳ್ಳಿ ಹಾಕುತ್ತಿಲ್ಲ. ನಾನು ಎಂಪಿಯಾಗಿ ಬರಬೇಕು ಅಂದುಕೊಂಡಿರಲಿಲ್ಲ, ಅದೇ ರೀತಿ ಮುಂದೆ ಸಂದರ್ಭಕ್ಕೆ ಅನುಗುಣವಾಗಿ ನಾನು ತೀರ್ಮಾನ ಮಾಡುತ್ತೇನೆ ಎಂದು ಸುಮಲತಾ ಹೇಳಿದ್ದಾರೆ. ಇನ್ನೊಂದೆಡೆ ಸುಮಲತಾ ಎಂಎಲ್‍ಎ ಚುನಾವಣೆ ಸ್ಪರ್ಧೆಯ ಸಂಬಂಧ ಇನ್ನೇರಡು ದಿನಗಳಲ್ಲಿ ಸಭೆಯನ್ನು ಸುಮಲತಾ ಬೆಂಬಲಿಗರು ಮಾಡ್ತಾ ಇದ್ದಾರೆ. ಇವೆಲ್ಲವನ್ನು ನೋಡಿದ್ರೆ ಸುಮಲತಾ ಅಂಬರೀಶ್ ಅವರು ಎಂಎಲ್‍ಎ ಎಲೆಕ್ಷನ್ ಸ್ಪರ್ಧೆ ಮಾಡುವುದು ಖಚಿತ ಎಂದು ಅನ್ನಿಸುತ್ತಿದೆ. ಇದನ್ನೂ ಓದಿ: ನಮ್ಮಪ್ಪ ಸಿದ್ರಾಮಯ್ಯ ಅಂತ ಹೆಸರಿಟ್ಟಿಲ್ವಾ, ಸಿದ್ರಾಮುಲ್ಲಾ ಅನ್ನೋಕೆ ಇವನ್ಯಾರು: ಸಿ.ಟಿ.ರವಿ ವಿರುದ್ಧ ಸಿದ್ದರಾಮಯ್ಯ ಕಿಡಿ

    ಒಟ್ಟಾರೆ ಮಂಡ್ಯದಲ್ಲಿ ರಾಜಕೀಯದ ಕಾವು ರಣ-ರಣ ಎನ್ನುತ್ತಿದ್ದು, ಸುಮಲತಾ, ಶಿವರಾಮೇಗೌಡ, ಡಿಕೆ ಮಂಡ್ಯ ರಾಜಕೀಯಕ್ಕೆ ಮತ್ತಷ್ಟು ಮೆರಗು ನೀಡಿದ್ದಾರೆ. ಮುಂದೆ ಸಕ್ಕರೆ ನಾಡಿನ ರಾಜಕೀಯ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಈವರೆಗೂ ನಾನು ತಟಸ್ಥವಾಗಿದ್ದೇನೆ, ಸ್ಪರ್ಧೆ ಬಗ್ಗೆ ಮುಂದೆ ತೀರ್ಮಾನ: ಸುಮಲತಾ

    ಈವರೆಗೂ ನಾನು ತಟಸ್ಥವಾಗಿದ್ದೇನೆ, ಸ್ಪರ್ಧೆ ಬಗ್ಗೆ ಮುಂದೆ ತೀರ್ಮಾನ: ಸುಮಲತಾ

    ಮೈಸೂರು: ನಾನು ಈವರೆಗೂ ತಟಸ್ಥವಾಗಿದ್ದು, ಎಲ್ಲರೂ ಚುನಾವಣೆಗೆ (Election) ನಿಲ್ಲುವಂತೆ ಕೇಳುತ್ತಿದ್ದಾರೆ. ಸ್ಫರ್ಧೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ (Sumalatha Ambareesh) ಹೇಳಿದ್ದಾರೆ.

    ಮೈಸೂರಿನ (Mysuru) ವಿಜಯನಗರದ ಕಾಳಿದಾಸ ರಸ್ತೆಯಿಂದ ಹೆಬ್ಬಾಳು ರಿಂಗ್ ರಸ್ತೆ ಸಂಪರ್ಕಿಸುವ 3.5 ಕಿ.ಮೀ ರಸ್ತೆಗೆ ʼಅಂಬರೀಶ್ ರಸ್ತೆʼ ಎಂದು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದರು.

    ಅಂಬರೀಶ್‌ ಅವರಿಗೆ ಮೈಸೂರು ಇಷ್ಟವಾದ ಸ್ಥಳವಾಗಿದ್ದು 3.5 ಕಿಮೀ ಉದ್ದದ ರಸ್ತೆಗೆ ʼಅಂಬರೀಶ್‌ʼ ಹೆಸರಿಟ್ಟಿದ್ದಾರೆ. ಅವರ ಕುಟುಂಬ ಮೈಸೂರಿನಲ್ಲಿದ್ದು, ಅಭಿಮಾನಿಗಳ ಬೇಡಿಕೆಯಿಂದ ಈ ರಸ್ತೆಗೆ ಹೆಸರು ಬಂದಿದೆ. ಮೈಸೂರು ಬೆಂಗಳೂರು ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹೆಸರಿಡುವಂತೆ ನಾನೇ ಪತ್ರ ಬರೆದಿದ್ದೇನೆ. ಅವರ ಹೆಸರು ಸೂಕ್ತ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕರವೇ ಪ್ರವೀಣ್ ಶೆಟ್ಟಿ ಪುತ್ರನ ಸಿನಿಮಾಗೆ ಹಾಡಿದ ಗಾಯಕಿ ಮಂಗ್ಲಿ

    ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಲೋಕಸಭೆ ಚುನಾವಣೆ ಆಕಸ್ಮಿಕವಾಗಿ ನಡೆದಿದೆ. ಎಲ್ಲರೂ ಚುನಾವಣೆಗೆ ನಿಲ್ಲುವಂತೆ ಕೇಳುತ್ತಿದ್ದಾರೆ. ಬೆಂಬಲಿಗರು ಸಭೆ ನಡೆಸಿರುವ ಬಗ್ಗೆ ಗೊತ್ತಿಲ್ಲ. ಅಂಬರೀಶ್‌ ಬೆಂಬಲಿಗರು ಸಭೆ ನಡೆಸಿದ್ದಾರೆ. ಮಂಡ್ಯದ ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲುವ ಒಲವು ಇದೆ ಎಂದು ಹೇಳಿದರು.

    ಪುತ್ರ ಚುನಾವಣೆಗೆ ಸ್ಪರ್ಧೆ ಮಾಡುವುದು ಬಿಡುವುದು ಅವನಿಗೆ ಬಿಟ್ಟ ವಿಚಾರ. ನಾನು ಚುನಾವಣೆಗೆ ಬಂದಿದ್ದೇ ಆಕಸ್ಮಿಕ. ಹಣೆ ಬರಹ ಯಾವ ರೀತಿ ಇರುತ್ತದೋ ಆ ರೀತಿ ಆಗುತ್ತದೆ ಎಂದರು.

    ಈ ಕಾರ್ಯಕ್ರಮದಲ್ಲಿ ಅಂಬರೀಶ್ ಪುತ್ರ ಅಭಿಷೇಕ್, ಸ್ಥಳೀಯ ಶಾಸಕ ಎಲ್ ನಾಗೇಂದ್ರ, ಮೇಯರ್ ಶಿವಕುಮಾರ್ ಸೇರಿ ಹಲವರು ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಂಎಲ್‍ಎ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ ಸುಮಲತಾ ಅಂಬರೀಶ್?‌

    ಎಂಎಲ್‍ಎ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ ಸುಮಲತಾ ಅಂಬರೀಶ್?‌

    ಮಂಡ್ಯ: ಕಳೆದ ಲೋಕಸಭಾ ಚುನಾವಣೆ (Lokasabha Election) ಯಲ್ಲಿ ಮಂಡ್ಯದಲ್ಲಿ ಕಹಳೆ ಊದಿ ದಳಪತಿಗಳಿಗೆ ಸೆಡ್ಡು ಹೊಡೆದಿದ್ದ ಸಂಸದೆ ಸುಮಲತಾ ಅಂಬರೀಶ್ (Sumalatha Ambreesh), ಇದೀಗ ಯಾವ ಪಕ್ಷ ಸೇರ್ಪಡೆ ಆಗುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಮುಂಬರುವ ಎಂಎಲ್‍ಎ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಗಾಳಿ ಸುದ್ದಿಗಳು ಸಹ ಹರಿದಾಡುತ್ತಿವೆ. ಇದಕ್ಕೆ ಪುಷ್ಟಿ ನೀಡಲು ರೆಬೆಲ್ ಲೇಡಿ ಬೆಂಬಲಿಗರು ಮುಂದಾಗಿದ್ದಾರೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿ ಸಕ್ಕರೆನಾಡು ಮಂಡ್ಯ (Mandya) ಜಿಲ್ಲೆ ಅಕ್ಷರಶಃ ರಾಜಕೀಯ ರಣರಂಗವಾಗಿ ಬದಲಾಗಿತ್ತು. ಇಡೀ ಇಂಡಿಯಾದಲ್ಲಿ ಚುನಾವಣಾ ಕದನ ಇದ್ರು ಸಹ ಜನರ ಕಣ್ಣು ಮಾತ್ರ ಮಂಡ್ಯದ ಕಡೆ ಮೂಡಿತ್ತು. ಇದಕ್ಕೆ ಪ್ರಮುಖ ಕಾರಣ ಎಂದ್ರೆ ಸುಮಲತಾ ಅಂಬರೀಶ್ ಅವರು ಸ್ವಾಭಿಮಾನದ ಹೆಸರಲ್ಲಿ ಕಹಳೆಯ ಗುರುತಿಗೆ ಸ್ಪರ್ಧೆ ಮಾಡಿದ್ದ.

    ಜೆಡಿಎಸ್ (JDS) ಪಕ್ಷದಿಂದ ತೆನೆ ಹೊತ್ತ ರೈತ ಮಹಿಳೆಯ ಗುರುತಿನಿಂದ ಸ್ಪರ್ಧೆ ಮಾಡಿದ್ದ ನಿಖಿಲ್ ಕುಮಾರಸ್ವಾಮಿ. ಇವರಿಬ್ಬರ ಲೋಕಸಭಾ ಸಭಾ ಚುನಾವಣೆಯ ಕದನ ಮಂಡ್ಯ ರಾಜಕೀಯದ ಜೊತೆಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಂಚಲನವನ್ನು ಉಂಟುಮಾಡಿತು. ಚುನಾವಣಾ ಕದನದ ಉದ್ದಕ್ಕೂ ಮಾತಿನ ವಾಗ್ದಾಳಿಯ ಮೂಲಕ ಎರಡು ಕಡೆಯಿಂದ ಅಸ್ತ್ರಕ್ಕೆ ಪ್ರತ್ಯಸ್ತ್ರಗಳನ್ನು ಬಿಡುವ ಮೂಲಕ ರಣರಂಗದ ಕುತೂಹಲವನ್ನು ಹೆಚ್ಚಿಸಿದ್ರು. ಅಂತಿಮವಾಗಿ ಸುಮಲತಾ ಗೆಲುವು ಸಾಧಿಸುವ ಮೂಲಕ ಸಂಸದೆ ಗದ್ದುಗೆ ಏರುವುದರ ಜೊತೆಗೆ ದಳಪತಿಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ರು. ಇದನ್ನೂ ಓದಿ: Will You Marry Me – ಆರೆಂಜ್ ಆರ್ಮಿ ಒಡತಿ ಕಾವ್ಯ ಮಾರನ್‍ಗೆ ಮದುವೆ ಪ್ರಸ್ತಾಪವಿಟ್ಟ ಪ್ರೇಕ್ಷಕ

    sumalatha ambarish

    ಸುಮಲತಾ ಅಂಬರೀಶ್ ಸಂಸದರಾಗಿ ನಾಲ್ಕು ವರ್ಷಗಳು ಸಮೀಪಿಸುತ್ತಾ ಇವೆ. ಈ ಹೊತ್ತಿನಲ್ಲಿ ಸುಮಲತಾ ಅಂಬರೀಶ್ ಬಹಿರಂಗವಾಗಿ ಬೆಂಬಲಿಸಿದ ಬಿಜೆಪಿ ಸೇರ್ತಾರಾ? ಅಥವಾ ಜೆಡಿಎಸ್ ಹಾಗೂ ಕಾಂಗ್ರೆಸ್‍ (Congress) ನ ಮೈತ್ರಿ ಮನೆಯ ಹಿಂಬಾಗಿಲಿನಿಂದ ಸಪೋರ್ಟ್ ಮಾಡಿದ್ದ ಕಾಂಗ್ರೆಸ್ ನಾಯಕರ ಜೊತೆ ಕೈ ಪಕ್ಷ ಸೇರುತ್ತಾರಾ? ಎಂಬದರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಒಂದು ಕಡೆ ಸುಮಲತಾ ಅಂಬರೀಶ್ ಪಕ್ಷ ಸೇರ್ಪಡೆಯ ಪ್ರಶ್ನೆಗಳು ಮೂಡುತ್ತಿದ್ರೆ ಇನ್ನೊಂದೆಡೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ಅಥವಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಗಾಳಿ ಸುದ್ದಿಗಳು ಸಹ ಹರಡುತ್ತಿವೆ. ಇದಕ್ಕೆ ಪೂರಕ ಎಂಬಂತೆ ಸುಮಲತಾ ಅಂಬರೀಶ್ ಸಹ ಸನ್ನಿವೇಶಕ್ಕೆ ಅನುಗುಣವಾಗಿ ನಿರ್ಧಾರ ಮಾಡುವುದಾಗಿ ಹೇಳಿದ್ರು.

    ಇನ್ನೊಂದೆಡೆ ಸುಮಲತಾ ಆಪ್ತರು ಹಾಗೂ ಬೆಂಬಲಿಗರು ಸುಮಲತಾ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು. ಕಮಾಲ್ ಮಾಡಿ ಶಾಸಕಿಯಾಗಿ ಸಚಿವರಾಗಬೇಕು. ಅಲ್ಲದೇ ಯಾವುದಾದರೂ ಪಕ್ಷ ಸೇರ್ಪಡೆಯಾಗುವುದು ಅನಿವಾರ್ಯ ಆಗಿದೆ. ಹೀಗಾಗಿ ಸುಮಲತಾ ಯಾವುದಾದರೂ ಪಕ್ಷ ಸೇರ್ಪಡೆ ಆದ್ರು ಸಹ ನಾವು ಬೆಂಬಲಿಸುತ್ತೇವೆ ಎಂದಿದ್ದಾರೆ. ಹೀಗಾಗಿ ರೆಬೆಲ್ ಲೇಡಿಯ ಆಪ್ತ ಬಳಗ ಸುಮಲತಾ ಅಂಬರೀಶ್ ಅಭಿಮಾನಿಗಳು ಹಾಗೂ ಸ್ವಾಭಿಮಾನಿ ಪಡೆಯ ಪದಾಧಿಕಾರಿಗಳ ಸಭೆಯನ್ನು ಕರೆಯಲು ಮುಂದಾಗಿದೆ. ಈ ಸಭೆಯಲ್ಲಿ ಸುಮಲತಾ ಸ್ಪರ್ಧೆ ಕುರಿತು ಹಾಗೂ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಇದನ್ನೂ ಓದಿ: ಶನಿವಾರ ರಾಜ್ಯಕ್ಕೆ ಮತ್ತೆ ಜೆ.ಪಿ ನಡ್ಡಾ ಎಂಟ್ರಿ – ಬೂತ್ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ

    ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಕಹಳೆ ಸದ್ದಿನಿಂದ ಸಕ್ಕರೆ ನಾಡಿನ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ಸಿಯಾಗಿದ್ದ ಸುಮಲತಾ ಇದೀಗ ಎಂಎಲ್‍ಎ ಚುನಾವಣೆ ಮೂಲಕ ಮತ್ತೊಂದು ಅಧ್ಯಾಯ ಬರೆಯಲು ಮುಂದಾಗುತ್ತಾರಾ? ಅಥವಾ ನಾನು ರಾಜ್ಯ ರಾಜಕೀಯ ಬರಲ್ಲ ನಾನು ರಾಷ್ಟ್ರ ರಾಜಕೀಯದಲ್ಲೇ ಇರ್ತೀನಿ ಎಂಬ ಉತ್ತರ ಕೊಡ್ತಾರಾ ಎನ್ನುವುದನ್ನು ಸದ್ಯದಲ್ಲೇ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲೋಕಸಭಾ ಚುನಾವಣೆಯಲ್ಲಿ ದಳಪತಿಗಳಿಗೆ ನಡುಕ ಹುಟ್ಟಿಸಿದ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಎಂಟ್ರಿ?

    ಲೋಕಸಭಾ ಚುನಾವಣೆಯಲ್ಲಿ ದಳಪತಿಗಳಿಗೆ ನಡುಕ ಹುಟ್ಟಿಸಿದ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಎಂಟ್ರಿ?

    ಮಂಡ್ಯ: ಕಳೆದ ಲೋಕಸಭಾ ಚುನಾವಣೆಯ ವೇಳೆ ಇಂಡಿಯಾದ ರಾಜಕೀಯವೇ ಒಂದು ತೂಕ ಆದ್ರೆ ಮಂಡ್ಯದ (Mandya) ರಾಜಕೀಯವೇ ಮತ್ತೊಂದು ತೂಕ ಎಂದು ರಾಷ್ಟ್ರ ರಾಜಕೀಯಕ್ಕೆ ಪರಿಚಯ ಮಾಡಿಕೊಟ್ಟ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh), ಇದೀಗ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಅಧ್ಯಾಯವನ್ನು ಬರೆಯಲು ಮುಂದಾಗಿದ್ದಾರೆ.

    ಕಳೆದ ಲೋಕಸಭಾ ಚುನಾವಣೆಯ ವೇಳೆ ಒಂದು ಕಡೆ ಮೋದಿ ಮೇನಿಯಾ ಸದ್ದು ಮಾಡಿತ್ತು. ಈ ಸದ್ದಿನ ಮಧ್ಯೆ ಜನರ ಕಿವಿಯನ್ನು ಅರಳುವಂತೆ ಮಾಡಿದ್ದು ಸುಮಲತಾ ಅಂಬರೀಶ್ ಅವರ ಸ್ವಾಭಿಮಾನಿ ಕಹಳೆಯ ಶಬ್ಧ. ಹೌದು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಅಕ್ಷರಶಃ ರಾಜಕೀಯ ರಣರಂಗವಾಗಿ ಬದಲಾಗಿತ್ತು. ಇದಕ್ಕೆ ಜೆಡಿಎಸ್ (JDS) ಹಾಗೂ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿಯಾಗಿ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumarswamy) ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಹಾಗೂ ಸ್ವಾಭಿಮಾನದ ಹೆಸರಿನಲ್ಲಿ ಸ್ಪರ್ಧೆ ಮಾಡಿದ್ದ ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್. ಇವರಿಬ್ಬರ ಸ್ಪರ್ಧೆ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇಡೀ ದೇಶದಲ್ಲಿ ಆ ವೇಳೆ ಹೈವೋಲ್ಟೇಜ್ ಕ್ರಿಯೇಟ್ ಮಾಡಿದ ಕ್ಷೇತ್ರ ಅಂದ್ರೆ ಅದು ಮಂಡ್ಯ ಆಗಿತ್ತು. ಅಷ್ಟರ ಮಟ್ಟಿಗೆ ನಿಖಿಲ್ ಹಾಗೂ ಸುಮಲತಾ ಅಂಬರೀಶ್ ಅವರ ನಡುವೆ ಫೈಟ್ ನಡೆಯಿತು. ಇಡೀ ಸರ್ಕಾರ ಹಾಗೂ ಎಲ್ಲಾ ಶಾಸಕರು ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ಮಾಡಿದ್ತು. ಆದ್ರೆ ಸುಮಲತಾ ಅಂಬರೀಶ್ ಅವರ ಸ್ವಾಭಿಮಾನದ ಕಹಳೆಗೆ ಜನರು ಉಘೇ ಉಘೇ ಎಂದ ಕಾರಣ ಸುಮಲತಾ ಅಂಬರೀಶ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲವನ್ನು ದಾಖಲಿಸಿದ್ದರು. ಈ ಚುನಾವಣೆಯ ಬಳಿಕ ಜೆಡಿಎಸ್ ಭದ್ರ ಕೋಟೆಯಾಗಿದ್ದ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ದಳಪತಿಗಳ ವಿರುದ್ಧ ಗುಡುಗಲು ಸಹ ಶುರ ಮಾಡಿದ್ರು. ಇದನ್ನೂ ಓದಿ: ಬಿಜೆಪಿಯ ಆಪರೇಷನ್ ಓಲ್ಡ್ ಮೈಸೂರಿಗೆ ಸಂಸದೆ ಸುಮಲತಾ ಡಾಕ್ಟರ್ – ಡಿಕೆಶಿಗೆ ಟ್ರಬಲ್?

    ಲೋಕಸಭಾ ಚುನಾವಣೆಯ ಮೂಲಕ ದಳಪತಿಗಳಿಗೆ ನಡುಕ ಹುಟ್ಟಿಸಿದ ಸುಮಲತಾ ಅಂಬರೀಶ್ ಇದೀಗ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸೂಚನೆಯನ್ನು ಸಹ ನೀಡಿದ್ದು ಈ ಮೂಲಕ ಜೆಡಿಎಸ್ ನಾಯಕರಿಗೆ ಮತ್ತೊಮ್ಮೆ ರಾಜಕೀಯದಲ್ಲಿ ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾಗಿದ್ದಾರೆ. ಇಷ್ಟು ದಿನ ನೀವು ರಾಜ್ಯ ರಾಜಕೀಯಕ್ಕೆ ಬರ್ತೀರಾ ಮೇಡಂ ಎಂದು ಸುಮಲತಾ ಅವರನ್ನು ಕೇಳಿದ್ರೆ, ಇಲ್ಲ ನಾನು ಎಂಪಿ ಆಗಿಯೇ ಇರ್ತೀನಿ ಎಂದು ಹೇಳ್ತಾ ಇದ್ರು. ಆದ್ರೆ ಇದೀಗ ನಾನು ರಾಜಕೀಯಕ್ಕೆ ಬರುವ ನಿರ್ಧಾರವನ್ನು ಮಾಡಿ ಇರಲಿಲ್ಲ. ಇದೀಗ ರಾಜಕೀಯಕ್ಕೆ ಬಂದು ಮಂಡ್ಯ ಜನರ ಆಶೀರ್ವಾದದಿಂದ ಗೆದ್ದು ಎಂಪಿಯಾಗಿದ್ದೇನೆ. ಯಾವುದನ್ನು ಮೊದಲೇ ನಿರ್ಧಾರ ಮಾಡಲು ಆಗಲ್ಲ. ಎಂಎಲ್‍ಎ ಚುನಾವಣೆ ಇನ್ನೂ ದೂರ ಇದೆ. ದೇವರ ಆಶೀರ್ವಾದ ಇದ್ರೆ ಏನು ಬೇಕಾದ್ರು ಆಗಬಹುದು. ಮುಂದೆ ನಾನು ಸಂದರ್ಭಕ್ಕೆ ಅನುಗುಣವಾಗಿ ನಾನು ನಿರ್ಧಾರ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಲ್ಲದೇ, ಮಂಡ್ಯದ ಏಳು ಕ್ಷೇತ್ರಗಳು ನನ್ನದೇ ಏನು ಬೇಕಾದ್ರು ಆಗಬಹುದು ಎನ್ನುವ ಮೂಲಕ ಮುಂಬರುವ ಎಂಎಲ್‍ಎ ಚುನಾವಣೆಯಲ್ಲಿ ಸ್ಪರ್ಧೆಯ ಸೂಚನೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ನಮೋ ಅಶ್ವಮೇಧಯಾಗ ಶುರು – ಯುವ ಮತದಾರರೇ ಮೋದಿ ಟಾರ್ಗೆಟ್

    ಒಂದು ಕಡೆ ತಾವು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಸಣ್ಣ ಹಿಂಟ್ ಕೊಟ್ರೆ, ಇನ್ನೊಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ (D.K Shivakumar) ಸಹ ತಿರುಗೇಟು ಕೊಟ್ಟಿದ್ದಾರೆ. ಸುಮಲತಾ ಅಂಬರೀಶ್ ಬಿಜೆಪಿ ಪಕ್ಷದ ಅಸೋಸಿಯೇಟ್ ಮೆಂಬರ್ ಎಂಬ ಡಿಕೆಶಿ ಹೇಳಿಕೆಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದೇನೆ. ಮೊದಲು ಕಾಂಗ್ರೆಸ್‍ನಿಂದಲೇ ಟಿಕೆಟ್ ಕೇಳಿದ್ದೆ, ಆಗ ಡಿ.ಕೆ.ಶಿವಕುಮಾರ್ ಅವರೇ ಟಿಕೆಟ್ ಕೊಡಲು ಆಗಲ್ಲ ಎಂದಿದ್ದು. ಪಕ್ಷೇತರವಾಗಿ ಗೆದ್ದ ಶರತ್ ಬಚ್ಚೇಗೌಡ ಅವರಿಗೆ ಅಭಿನಂದನೆ ಸಲ್ಲಿಸಿದ್ರು. ಆದ್ರೆ ನಾನು ಗೆದ್ದ ಬಳಿಕ ನಿಮ್ಮ ನಡೆ ಏನು ಎಂದು ಶಿವಕುಮಾರ್ ಅವರು ಕೇಳಲಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ನನ್ನ ಕೇಳಬಹುದಾಗಿತ್ತು. ಆದ್ರೆ ಇದ್ಯಾವುದನ್ನು ಕೇಳದೇ ನನ್ನ ಬಿಜೆಪಿಯ ಅಸೋಸಿಯೇಟ್ ಮೆಂಬರ್ ಎನ್ನುವುದು ಸರಿಯಲ್ಲ. ಇದನ್ನು ನೋಡಿದ್ರೆ ಡಿ.ಕೆ.ಶಿವಕುಮಾರ್ ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂಬಂತೆ ಕಾಣುತ್ತಿದೆ ಎಂದು ಸುಮಲತಾ ಡಿಕೆಶಿ ಮೇಲೆಯೇ ಆರೋಪ ಮಾಡಿದ್ದಾರೆ.

    ಒಟ್ಟಾರೆ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸುಮಲತಾ ಅಂಬರೀಶ್ ಇದೀಗ ರಾಜ್ಯ ರಾಜಕಾರಣಕ್ಕೆ ಇಳಿಯುವ ತಯಾರಿಯಲ್ಲಿದ್ದಾರೆ. ಒಂದು ವೇಳೆ ಸುಮಲತಾ ಅಂಬರೀಶ್ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ರು ಸಹ ಯಾವ ಕ್ಷೇತ್ರದಿಂದ, ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಅಥವಾ ಪಕ್ಷೇತರವಾಗಿಯೇ ಸ್ಪರ್ಧೆ ಮಾಡುತ್ತಾರಾ ಎಂಬ ಯಕ್ಷ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಹುಟ್ಟುಹಾಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನು ಬಿಜೆಪಿ ಸೇರ್ಪಡೆ ಬಗ್ಗೆ ಯೋಚನೆ ಮಾಡಿಲ್ಲ: ಸುಮಲತಾ

    ನಾನು ಬಿಜೆಪಿ ಸೇರ್ಪಡೆ ಬಗ್ಗೆ ಯೋಚನೆ ಮಾಡಿಲ್ಲ: ಸುಮಲತಾ

    ಮಂಡ್ಯ: ನಾನು ಬಿಜೆಪಿ (BJP) ಸೇರ್ಪಡೆಯ ಬಗ್ಗೆ ಯೋಚನೆ ಮಾಡಿಲ್ಲ. ಬಿಜೆಪಿ ನಾಯಕರು ಸಹ ಈ ಬಗ್ಗೆ ಮಾತನಾಡಿದ್ದಾರೆ ನಾನು ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹೇಳಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆ ವಿಚಾರ ಇಲ್ಲ. ಫ್ಲೆಕ್ಸ್ ನಲ್ಲಿ ಅವರವರ ಅಭಿಮಾನಕ್ಕೆ ಫೋಟೋ ಹಾಕಿದ್ದಾರೆ ಅಷ್ಟೇ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸಚ್ಚಿದಾನಂದ (Sacchidananda) ಗೆ ನನ್ನ ಬೆಂಬಲ ಇದೆ ಎನ್ನುವುದು ಸೀಕ್ರೆಟ್ ಇಲ್ಲ ಸಚ್ಚಿದಾನಂದಗೆ ನನ್ನ ಬೆಂಬಲ ಇದೆ ಎಂದು ಓಪನ್ ಆಗಿ ಘೋಷಣೆ ಮಾಡಿದ್ದೇನೆ. ಹೀಗಾಗಿ ಸಚ್ಚಿ ಬ್ಯಾನರ್ ನಲ್ಲಿ ನನ್ನ ಫೋಟೋ ಹಾಕಿಕೊಂಡಿದ್ದಾರೆ ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿಕೊಂಡರೆ ನಾನು ಏನು ಮಾಡೋಕೆ ಆಗಲ್ಲ ಎಂದರು. ಇದನ್ನೂ ಓದಿ: ನಡೆಯದೇ ಹೋಯ್ತಾ ವರುಣಾ ರಾಜಕೀಯ ಮಹಾಯುದ್ಧ – ವಿಜಯೇಂದ್ರ ವರುಣಾ ಪಥ ಬದಲು!

    ಪಕ್ಷ ಸೇರ್ಪಡೆಯ ಬಗ್ಗೆ ನಾನು ಯಾವುದೇ ಸಭೆ ಮಾಡುತ್ತಿಲ್ಲ, ನಾನು ಹೋದ ಕಡೆ ಜನರನ್ನು ಪಕ್ಷ ಸೇರ್ಪಡೆ ಬಗ್ಗೆ ಕೇಳ್ತಾ ಇದ್ದೀನಿ. ಜನರು ಸಹ ಈ ಬಗ್ಗೆ ಕೇಳ್ತಾ ಇದ್ದಾರೆ. ಜನರು ಸಹ ಸದ್ಯಕ್ಕೆ ಹೀಗೆ ಇರಿ ಎಂದು ಹೇಳುತ್ತಾ ಇದ್ದಾರೆ. ನಾನು ಯಾವುದೇ ನಿರ್ಧಾರ ಮಾಡಲ್ಲ, ಜನರು ಪಕ್ಷ ಸೇರ್ಪಡೆ ಬಗ್ಗೆ ನಿರ್ಧಾರ ಮಾಡ್ತಾರೆ. ಪಕ್ಷಕ್ಕೆ ಸೇರುವ ಪರಿಸ್ಥಿತಿ ಬಂದಾಗ ಹೇಗೆ ಮಾಡಬೇಕೆಂದು ಯೋಚನೆ ಮಾಡ್ತೀನಿ. ಯೋಗೇಶ್ವರ್ (Yogeshwar) ಅವರಿಗೆ ಬಿಜೆಪಿಗೆ ನಾನು ಬರಬೇಕು ಎಂಬ ಆಸೆ ಇದೆ ಅದೇ ರೀತಿ ಹಲವು ನಾಯಕರು ನನ್ನನ್ನು ಮಾತಾಡಿಸಿದ್ದಾರೆ. ಇಲ್ಲಿಯವರೆಗೆ ನಾನು ಆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k