Tag: Sumalatha Ambareesh

  • ಎಲ್ಲೆಲ್ಲಿ ಪಂಚ್ ಕೊಡ್ಬೇಕು ಅನ್ನೋದ್ರಲ್ಲಿ ಮೋದಿ ಮಾಸ್ಟರ್ : ಸುಮಲತಾ

    ಎಲ್ಲೆಲ್ಲಿ ಪಂಚ್ ಕೊಡ್ಬೇಕು ಅನ್ನೋದ್ರಲ್ಲಿ ಮೋದಿ ಮಾಸ್ಟರ್ : ಸುಮಲತಾ

    ಬೆಂಗಳೂರು: ಎಲ್ಲೆಲ್ಲಿ ಪಂಚ್ ಕೊಡಬೇಕು, ಎಲ್ಲೆಲ್ಲಿ ಗಂಭೀರವಾಗಿ ಮಾತನಾಡಬೇಕು ಎನ್ನುವ ವಿಚಾರದಲ್ಲಿ ಮೋದಿ ಮಾಸ್ಟರ್ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಮಾತುಗಳನ್ನು ಹೊಸದಾಗಿ ನಾನು ಕೇಳುತ್ತಿಲ್ಲ. ಕಾರ್ಯಕ್ರಮದಲ್ಲಿ 50 ಸಾವಿರ ಜನ ಇದ್ದರೇ ಅವರ ಒಂದು ಮಾತಿನಿಂದಾಗಿ 45 ಸಾವಿರ ಜನ ಅವರ ಪರವಾಗುತ್ತಾರೆ. ಮೋದಿ ಮಾತುಗಳಲ್ಲಿ ನಿಜವಾಗಿಯೂ ತೂಕವಿರುತ್ತದೆ. ನಾನು ಪಾರ್ಲಿಮೆಂಟ್‍ನಲ್ಲಿ ಅವರ ಮಾತುಗಳನ್ನು ಕೇಳಿದ್ದೇನೆ ಸಾಕಷ್ಟು ಕಲಿತಿದ್ದೇನೆ. ಬಹಳ ತೂಕವಾಗಿ ಮಾತನಾಡುತ್ತಾರೆ. ವಿಷಯವನ್ನು ಅರ್ಥ ಮಾಡಿಕೊಂಡು ಚೆನ್ನಾಗಿ ಮಾತನಾಡ್ತಾರೆ ಎಂದು ಪ್ರಶಂಸಿಸಿದರು.

    ಬೆಂಗಳೂರು ಮೈಸೂರು ರಸ್ತೆ ಹೆದ್ದಾರಿ (Mysuru Bengaluru Highway) ಇಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು ಮಂಡ್ಯ (Mandya) ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. 118 ಕಿ.ಮೀ ಅಷ್ಟು ಉದ್ದದ ಹೈವೇ ಇದ್ದಾಗಿದ್ದು, ಎಲ್ಲಿ ಬೇಕಾದರೂ ಉದ್ಘಾಟನೆ ಮಾಡಬಹುದಿತ್ತು. ಆದರೂ ಮಂಡ್ಯವನ್ನ ಉದ್ಘಾಟನೆಗಾಗಿ ಆಯ್ಕೆ ಮಾಡಿದ್ದಾರೆ. ಮಂಡ್ಯದ ಪ್ರಾಮುಖ್ಯತೆ ಏನು ಎಂದು ಪ್ರಧಾನಮಂತ್ರಿ ಅವರು ಗುರುತಿಸಿದ್ದಾರೆ. ಹಾಗಾಗಿ ಮಂಡ್ಯದಲ್ಲಿ ಉದ್ಘಾಟನೆ ಇಟ್ಕೊಂಡಿದ್ದಾರೆ, ಇದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು ಎಂದರು.

    ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಡ್ಯಕ್ಕೆ ಬರುತ್ತಿದ್ದಾರೆ. ಒಂದು ರೋಡ್ ಶೋ ಕೂಡ ಮಾಡ್ತಾರೆ. ನಾನು ಗೆಜ್ಜಲಗೆರೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಮುಖ್ಯ ಕಾರ್ಯಕ್ರಮದ ವೇದಿಕೆಯಲ್ಲಿ ನಾವು ಮೋದಿ ಅವರನ್ನ ಸ್ವಾಗತ ಮಾಡುತ್ತೇವೆ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಒಳ್ಳೆಯ ರಸ್ತೆ ನಿರ್ಮಾಣ ಆಗಿದೆ. ನಾನು ಇದೇ ರಸ್ತೆಯಲ್ಲಿ ಓಡಾಡ್ತಿದ್ದೇನೆ. ಮಂಡ್ಯಕ್ಕೆ ಮೊದಲೆಲ್ಲ ಎರಡು ಗಂಟೆ ಹಿಡಿಯುತ್ತಿತ್ತು. ಈಗ ಕಡಿಮೆ ಅವಧಿಯಲ್ಲಿ ನಾನೇ ಮಂಡ್ಯಕ್ಕೆ ಹೋಗಿ ಬರುತ್ತಿದ್ದೇನೆ. ಇದು ಎಲ್ಲರೂ ಮೆಚ್ಚುವಂತಹ ರಸ್ತೆ ಎಂದು ಸಂತಸ ವ್ಯಕ್ತಪಡಿಸಿದರು.

    ಮಂಡ್ಯ ರಸ್ತೆ ನಿರ್ಮಾಣ ವಿಚಾರದಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜ್ಯೋತಿಷಿ ಒಬ್ಬರಿಗೆ ಕನಸು ಬಿತ್ತಂತೆ ನಿಮಗೆ ಮಗು ಆಗುತ್ತೆ ಅಂತ. ಅದೇ ರೀತಿ ತಂದೆ, ತಾಯಿಗೆ ಜ್ಯೋತಿಷಿ ಹೇಳಿದ ಹಾಗೆ ಮಗು ಆಯಿತಂತೆ. ಈಗ ಕ್ರೆಡಿಟ್ ಜ್ಯೋತಿಷಿಗೆ ಹೋಗಬೇಕಾ, ಆ ತಂದೆ ತಾಯಿಗೆ ಹೋಗಬೇಕಾ? ಈ ರೀತಿ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ತುಂಬಾ ಜನ ಇರುತ್ತಾರೆ? ಈ ವಿಚಾರದಲ್ಲಿ ಕ್ರೆಡಿಟ್ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಜನರಿಗೆ ಚೆನ್ನಾಗಿ ಗೊತ್ತಿದೆ, ಯಾರಿಗೆ ಕ್ರೆಡಿಟ್ ಕೊಡಬೇಕು ಅಂತ ಜೆಡಿಎಸ್ ಹಾಗೂ ಕಾಂಗ್ರೆಸ್‍ಗೆ ಟಾಂಗ್ ನೀಡಿದರು. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಮಂಟಪದಲ್ಲೇ ಮಲಗಿಬಿಟ್ಟ ವರ – ಮದುವೆ ಕ್ಯಾನ್ಸಲ್ ಮಾಡಿದ್ಲು ವಧು

    ಸಾಕಷ್ಟು ಯೋಜನೆಗಳು ನಮಗೆ ಬಂದಿದೆ. ಏರ್‌ಪೋರ್ಟ್ ಉದ್ಘಾಟನೆ ಮಾಡೋದಕ್ಕೆ 20 ವರ್ಷ ಕಳೆಯಿತು. ಇಂತಹ ರಸ್ತೆಯನ್ನು ಕೇವಲ 4 ವರ್ಷದಲ್ಲಿ ಮಾಡಲಾಗಿದೆ. ಈ ಕ್ರೆಡಿಟ್ ಯಾರಿಗೆ ತಲುಪಬೇಕು ಅವರಿಗೆ ತಲುಪುತ್ತೆ. ಬೇರೆಯವರ ಥರ ನನಗೆ ಕ್ರೆಡಿಟ್ ಮುಖ್ಯವಲ್ಲ. ಜನರಿಗೆ ಯಾವ ರೀತಿ ಅನುಕೂಲ ಆಗುತ್ತದೆ ಎನ್ನುವ ದೃಷ್ಟಿಯಿಂದ ಮಾತ್ರ ನೋಡಬೇಕು ಎಂದರು. ಇದನ್ನೂ ಓದಿ: ದಶಪಥ ಹೆದ್ದಾರಿ ಲೋಕಾರ್ಪಣೆ – ಜನರಿಗೆ ಸಿದ್ಧವಾಗ್ತಿದೆ 60 ಕ್ವಿಂಟಲ್ ಬಾತ್, 25 ಕ್ವಿಂಟಲ್ ಮೊಸರನ್ನ

  • ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ: ಸುಮಲತಾ

    ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ: ಸುಮಲತಾ

    ಮಂಡ್ಯ: ಅಂಬರೀಶ್, ನಾನು, ಅಭಿಷೇಕ್ ಕುಟುಂಬ ರಾಜಕೀಯ ಮಾಡಲ್ಲ. ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಸ್ಪಷ್ಟಪಡಿಸಿದರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಬೆಂಬಲಿಗರು, ಅಂಬರೀಶ್ (Abhishek Ambareesh) ಅವರ ಅಭಿಮಾನಿಗಳಿಗೆ ಒಂದು ನೆಲೆಕೊಡಿಸಬೇಕು. ಆ ಜವಾಬ್ದಾರಿ ನನ್ನ ಮೇಲೆ ಇದೆ. ನಮ್ಮ ಪಕ್ಷಕ್ಕೆ ಸೇರಿ ಎಂದು ನನ್ನ ಎಲ್ಲಾ ಕಡೆಯಿಂದ ಆಹ್ವಾನ ಬಂದಿದೆ ಎಂದರು. ಇದನ್ನೂ ಓದಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ: ಸುಮಲತಾ

    ನನ್ನ ಬೆಂಬಲಿಗರು ಸಭೆ ಮಾಡಿದ್ದಾರೆ. ನಾನು ಬೆಂಬಲಿಗರಿಗೆ ಹೇಳಿದ್ದೆ, ಒತ್ತಡಕ್ಕೆ ಮಣಿಯಬೇಡಿ, ನಿಮ್ಮ ಭವಿಷ್ಯವೂ ಬೇಕು. ನೋಡಿ ಮಂಡ್ಯ ಅಭಿವೃದ್ಧಿಗೆ ನನ್ನ ಕೈ ಜೋಡಿಸುತ್ತೀರಾ ಎಂದಿದ್ದೆ. ನಮ್ಮ ಕುಟುಂಬದಲ್ಲಿ ಕುಟುಂಬ ರಾಜಕೀಯ ಮಾಡಿಲ್ಲ. ಚಾಮುಂಡಿ ತಾಯಿ ಮೇಲೆ ಆಣೆ ನಾನು ಅಭಿಷೇಕ್‍ಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ ಎಂದು ಹೇಳಿದರು.

    ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ. ಎರಡು ಪಕ್ಷಗಳಿಂದ ಅಭಿಷೇಕ್‍ಗೆ ಮಂಡ್ಯ, ಮದ್ದೂರಿನಿಂದ ಆಹ್ವಾನ ಬಂದಿತ್ತು. ಅಭಿಷೇಕ್, ಈಗ ನಮ್ಮ ತಾಯಿ ಕೆಲಸ ಮಾಡ್ತಾ ಇದ್ದಾರೆ. ಅವರು ರಾಜಕೀಯ ಮಾಡಲಿ. ನಾನು ರಾಜಕೀಯಕ್ಕೆ ಬರಬೇಕು ಎಂದ್ರೆ ಒಂದು ಪಕ್ಷ ಸೇರಿ ಕಾರ್ಯಕರ್ತನಾಗಿ ದುಡಿದು ಚುನಾವಣೆಗೆ ನಿಲ್ಲುತ್ತೇನೆ ಎಂದು ಅಭಿ ಹೇಳಿದ್ದಾನೆ ಎಂದು ತಿಳಿಸಿದರು.

    ಈ ವರ್ಷ ಅಭಿ ಮದುವೆ ಆಗ್ತಾನೆ. ಸಿನಿಮಾ ಮಾಡ್ತಾನೆ ಅಷ್ಟೇ. ಅಭಿಯನ್ನು ಸಿನಿಮಾಗೂ ನಾವು ತಂದಿಲ್ಲ. ಬೇರೆ ನಿರ್ಮಾಪಕರು ಬಂದು ಸಿನಿಮಾ ಮಾಡಿದ್ದು ಎಂದು ಮಗನ ಬಗ್ಗೆಯೂ ಸ್ಪಷ್ಟನೆ ನೀಡಿದರು.

  • ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ: ಸುಮಲತಾ

    ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ: ಸುಮಲತಾ

    ಮಂಡ್ಯ: ನಾನು ನನ್ನ ಸಂಪೂರ್ಣ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿಯ (PM Narendra Modi) ನೇತೃತ್ವದ ಸರ್ಕಾರಕ್ಕೆ ನೀಡುತ್ತೇನೆ ಎಂದು ಸಂಸದೆ ಸುಮಲತಾ (Sumalatha Ambareesh)  ಅಧಿಕೃತವಾಗಿ ಘೋಷಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಪಕ್ಷೇತರ ಸದಸ್ಯೆ. ಈ ಜಿಲ್ಲೆಯಲ್ಲಿ ಸಾಕಷ್ಟು ಯೋಜನೆಗಳನ್ನು ನಾನು ಜಾರಿಗೆ ತಂದಿದ್ದೇನೆ. ಈ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರವೇ ಕಾರಣ. ಈ ಕಾರಣಕ್ಕೆ ನಾನು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ನೀಡುತ್ತೇನೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

    ಮಂಡ್ಯದ ಕಲುಷಿತ ರಾಜಕೀಯವನ್ನು ಸ್ವಚ್ಛಗೊಳಿಸಲು ನಾನು ಮೋದಿ ಅವರಿಗೆ ಬೆಂಬಲ ನೀಡುತ್ತೇನೆ. ನನ್ನ ನಿರ್ಧಾರದಲ್ಲಿ ರಿಸ್ಕ್ ಇರಬಹುದು. ಆದರೆ ಜನರ ಅಭಿವೃದ್ಧಿ‌ ಮುಖ್ಯ. ಈ ಕಾರಣಕ್ಕೆ ನಾನು ರಿಸ್ಕ್‌ ತೆಗೆದುಕೊಂಡು ನಿರ್ಧಾರ ಮಾಡಿದ್ದೇನೆ. ಇದನ್ನೂ ಓದಿ: ನನಗೆ ರಾಜಕೀಯ ಅನಿವಾರ್ಯ ಅಲ್ಲ ಆಕಸ್ಮಿಕ: ಸುಮಲತಾ

    ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ. ನಾನು ಭಾರತೀಯ ಎಂದು ತಲೆ ಎತ್ತುವಂತೆ ಮೋದಿ ಮಾಡಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆದಾಗ ಕೆಆರ್‍ಎಸ್‍ನಲ್ಲಿ ಬಾಗಿನ ಅರ್ಪಿಸಿದ್ದರು. ಅದಕ್ಕೂ ಮೊದಲು ದೆಹಲಿಯಲ್ಲಿ ನನ್ನ ಭೇಟಿ ಮಾಡಿ ಮಂಡ್ಯಗೆ ಏನು ಮಾಡಬೇಕೆಂದು ನನ್ನ ಕೇಳಿದ್ದರು. ಆಗ ಮೈಶುಗರ್ ಕಾರ್ಖಾನೆ ಓಪನ್ ಮಾಡಿಸಿ ಎಂದೆ. ಆಗ ಪರ ವಿರೋಧ ಎಲ್ಲವೂ ಬಂದಿತ್ತು. ಆದರೂ ಯಡಿಯೂರಪ್ಪ ಅವರು ಸುಮಲತಾ ಹೇಳಿದ್ದಾರೆ ಎಂದು ಮೈಶುಗರ್ ಓಪನ್ ಮಾಡಿಸಿದರು. ಬೊಮ್ಮಾಯಿ ಅವರು 50 ಕೋಟಿಯನ್ನು ನೀಡಿದರು. ಈ ಅಭಿವೃದ್ಧಿ ಆಗಿದ್ದು ಬಿಜೆಪಿಯಿಂದ. ನನಗೆ ಬಿಜೆಪಿ ಬೆಂಬಲ ನೀಡಿದೆ. ಅಭಿವೃದ್ಧಿ ಆಗಬೇಕು ಅಂದರೆ ಬಿಜೆಪಿ ಬೇಕು. ಅದಕ್ಕೆ ನಾನು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇನೆ ಎಂದು ತಿಳಿಸಿದರು.

    ಈ ವೇಳೆ ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗೆ, ನಾನು ಪಕ್ಷೇತರ ಸದಸ್ಯೆ ಆಗಿದ್ದೇನೆ. ಪಕ್ಷೇತರ ಸದಸ್ಯರು ಜಯಗಳಿಸಿದ 6 ತಿಂಗಳ ಒಳಗಡೆ ಸೇರಿದರೆ ಮಾತ್ರ ಅದು ಮಾನ್ಯವಾಗುತ್ತದೆ. ಈ ಕಾನೂನು ಸಮಸ್ಯೆ ಇರುವ ಕಾರಣ ನಾನು ಈಗ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ಜೆ.ಪಿ ನಡ್ಡಾ ಭೇಟಿಯಾದ ಸುಮಲತಾ- ಬಹುತೇಕ ಬಿಜೆಪಿ ಸೇರ್ಪಡೆ ಖಚಿತ

    ಜೆ.ಪಿ ನಡ್ಡಾ ಭೇಟಿಯಾದ ಸುಮಲತಾ- ಬಹುತೇಕ ಬಿಜೆಪಿ ಸೇರ್ಪಡೆ ಖಚಿತ

    ಮಂಡ್ಯ: ಕಳೆದ ಲೋಕಸಭಾ ಚುನಾವಣೆ (Loksabha Election) ಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಸ್ವಾಭಿಮಾನದ ಹೆಸರಿನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಸುಮಲತಾ ಅಂಬರೀಶ್ ರಾಜಕೀಯ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ನಾಲ್ಕು ವರ್ಷಗಳಿಂದಲೂ ಯಾವುದೇ ಪಕ್ಷ ಸೇರದೆ ಸ್ವತಂತ್ರವಾಗಿಯೇ ಉಳಿದಿದ್ದ ರೆಬೆಲ್ ಲೇಡಿ, ಇದೀಗ ತೀರ್ಮಾನವೊಂದಕ್ಕೆ ಬಂದಿದ್ದಾರೆ.

    2023ರ ಮಹಾಸಮರದ ಹೊಸ್ತಿಲಲ್ಲಿ ಮಂಡ್ಯ ಅಖಾಡ ರಂಗೇರಿದೆ. ಮಂಡ್ಯ ಕಬ್ಜಗೆ ಕಣ್ಣಿಟ್ಟಿರುವ ಬಿಜೆಪಿಗೆ ಪಕ್ಷೇತರ ಸಂಸದೆ ಸುಮಲತಾ (Sumalatha Ambareesh) ಸೇರ್ತಾರೆ. ಈ ಮೂಲಕ ಬಿಜೆಪಿಗೆ ಬಲ ತುಂಬ್ತಾರೆ ಎಂಬ ಸುದ್ದಿಗೆ ಈಗ ಕಾವು ಜೋರಾಗಿದೆ. ದಶಪಥ ಹೆದ್ದಾರಿ ಲೋಕಾರ್ಪಣೆಗೆ ಮೋದಿ ಮಂಡ್ಯಕ್ಕೆ ಆಗಮನ ಹೊತ್ತಲ್ಲೇ ಸುಮಲತಾ ಬಿಜೆಪಿ ಸೇರ್ಪಡೆ ಗೊಳ್ತಾರಾ..? ಅನ್ನೋ ಸುದ್ದಿ ಹರಿದಾಡುತ್ತಿರೋ ಬೆನ್ನಲ್ಲೇ, ಪಾಂಡವಪುರ ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು (C.S Puttaraju), ಹೊಸದೊಂದು ಸುದ್ದಿ ಹರಿದುಬಿಟ್ಟರು. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಭಾಯಿ ಭಾಯಿ, ಕುಟುಂಬದ ಪಕ್ಷಗಳು – ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ :ಜೆಪಿ ನಡ್ಡಾ

    ಭಾನುವಾರ ಪ್ರಧಾನಿ (Narendra Modi) ಆಗಮಿಸುತ್ತಿರೋ ಹೊತ್ತಲ್ಲೇ ಪಕ್ಷ ಸೇರ್ಪಡೆಗೆ ಸಂಸದೆ ಸುಮಲತಾ ಬಯಸಿದ್ದರು. ಆದರೆ ಇದು ಸರ್ಕಾರಿ ಕಾರ್ಯಕ್ರಮ ಆಗಿರೋದ್ರಿಂದ ಇಂದೇ ಪಕ್ಷ ಸೇರಲು ಬಯಸಿದ್ದಾರೆ ಅಂತ ಪುಟ್ಟರಾಜು ಹೇಳಿದ್ದಾರೆ. ಈ ಬೆನ್ನಲ್ಲೇ ಇಂದು ಮಧ್ಯಾಹ್ನ 12 ಗಂಟೆಗೆ ಮಂಡ್ಯದ ತಮ್ಮ ನಿವಾಸದಲ್ಲಿ ಸುಮಲತಾ ಸುದ್ದಿಗೋಷ್ಟಿ ಕರೆದಿದ್ದು, ಬಿಜೆಪಿ ಸೇರೋ ಬಗ್ಗೆ ನಿರ್ಧಾರ ಪ್ರಕಟಿಸೋ ಸಾಧ್ಯತೆಗಳಿವೆ.

    ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಗುರುವಾರ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J.P Nadda) ಅವರನ್ನು ಸಂಸದೆ ಸುಮಲತಾ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇಂದು ಆಪ್ತೇಷ್ಠರ ಅಭಿಪ್ರಾಯವನ್ನು ಸುಮಲತಾ ಸಂಗ್ರಹಿಸಲಿದ್ದು, ಆ ನಂತರ ಬಿಜೆಪಿ ಸೇರೋದಾ…? ಅಥವಾ ಬೇಡ್ವಾ…? ಅನ್ನೋದನ್ನು ನಿರ್ಧರಿಸಲಿದ್ದಾರೆ. ಬಿಜೆಪಿಗೆ ಸುಮಲತಾ ಬಂದರೆ ಅನುಕೂಲವಾಗಲಿದೆ ಅನ್ನೋದು ಸುಮಲತಾ ಬೆಂಬಲಿಗರ ಲೆಕ್ಕಾಚಾರವಾಗಿದೆ.

    ಸುಮಲತಾ ಬಿಜೆಪಿ ಸೇರಿದ್ರೆ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ಸುಮಲತಾ ಆಪ್ತರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಒಟ್ಟಾರೆ ಇಷ್ಟು ದಿನ ವದಂತಿ ಆಗಿದ್ದ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಇಂದು ಸಂಸದೆ ಅಂತಿಮ ಮುದ್ರೆ ಒತ್ತುತ್ತಾರಾ ಕಾದು ನೋಡಬೇಕಿದೆ.

  • ಲಾಭ, ನಷ್ಟ ನೋಡಿ ಅಲ್ಲ, ಜೊತೆ ಇರುವವರ ಬಗ್ಗೆಯೂ ನೋಡ್ಕೊಂಡು ನಿರ್ಧಾರ: ಸುಮಲತಾ

    ಲಾಭ, ನಷ್ಟ ನೋಡಿ ಅಲ್ಲ, ಜೊತೆ ಇರುವವರ ಬಗ್ಗೆಯೂ ನೋಡ್ಕೊಂಡು ನಿರ್ಧಾರ: ಸುಮಲತಾ

    ಬೆಂಗಳೂರು: ನನ್ನ ಲಾಭ ನಷ್ಟ ನೋಡಿ ನಿರ್ಧಾರ ಮಾಡಲ್ಲ. ನನ್ನ ಜತೆ ಇರುವವರ ಬಗ್ಗೆಯೂ ನೋಡಿಕೊಂಡೇ ಪಕ್ಷ ಸೇರುವ ಬಗ್ಗೆ ನಿರ್ಧಾರ ಮಾಡಬೇಕಿದೆ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹೇಳಿದರು.

    ಇಂದು ಬೆಂಗಳೂರಿನಲ್ಲಿ (Bengaluru) ಮಾಜಿ ಸಿಎಂ ಎಸ್.ಎಂ ಕೃಷ್ಣ (S. M. Krishna) ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ ಬಿಜೆಪಿ (BJP) ಸೇರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಸಂಸದೆ ಸ್ಪಷ್ಟನೆ ಕೊಟ್ಟರು. ಇವತ್ತು ಮಂಡ್ಯದಿಂದ (Mandya) ಹಲವರು ಬಂದಿದ್ದಾರೆ. ಎಲ್ಲರ ಜತೆ ಚರ್ಚೆ ಮಾಡುತ್ತೇನೆ. ನಾನು ಯಾವುದೇ ತೀರ್ಮಾನ ಇನ್ನೂ ಮಾಡಿಲ್ಲ. ಇನ್ನೂ ಹಲವರ ಜೊತೆ, ವರಿಷ್ಠರ ಜತೆ ಚರ್ಚೆ ಮಾಡಬೇಕು ಎಂದರು. ಇದನ್ನೂ ಓದಿ: ನಟ, ನಟಿಯರ ಹೆಸರಿನಲ್ಲಿ ಭಾರೀ ವಂಚನೆ : ಬೆಚ್ಚಿದ ದೆಹಲಿ ಪೊಲೀಸ್

     

    ಎಸ್‌.ಎಂ ಕೃಷ್ಣ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಎಸ್‌.ಎಂ.ಕೆ ಅವರು ನಮ್ಮ ಜಿಲ್ಲೆಯ ಹಿರಿಯ ನಾಯಕರು, ಟಾಲೆಸ್ಟ್ ನಾಯಕರು. ಅವರಿಗೆ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಬಂದಿದೆ. ನಾನು ಅವರನ್ನು ಭೇಟಿ ಮಾಡಿರಲಿಲ್ಲ. ಇವತ್ತು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಆದರೆ ಇಲ್ಲಿ ಯಾವುದೇ ರಾಜಕೀಯ ವಿಚಾರ ಮಾತಾಡಿಲ್ಲ ಎಂದರು. ಇದನ್ನೂ ಓದಿ: ‘ಲವ್ ಲಿ’ ಎನ್ನುತ್ತಾ ಡಬ್ಬಿಂಗ್ ಕೆಲಸದಲ್ಲಿ ತೊಡಗಿದ ವಸಿಷ್ಠ ಸಿಂಹ

  • ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ: ಸುಮಲತಾ ಅಂಬರೀಶ್

    ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ: ಸುಮಲತಾ ಅಂಬರೀಶ್

    ಮಂಡ್ಯ: ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ. ನಾನು ಪೂರ್ಣ ಪ್ರಮಾಣದಲ್ಲಿ ಇಲ್ಲೇ ಇರಲು ಬರಲಿಲ್ಲ. ಚುನಾವಣೆಗೆ ನಿಲ್ಲುವ ಬಗೆಗೆ ಆಗಲಿ, ರಾಜಕೀಯ ಪಕ್ಷ ಸೇರುವ ಬಗೆಗೆ ಆಗಲಿ ಅಥವಾ ಸ್ವತಂತ್ರವಾಗಿ ಉಳಿಯುವ ಬಗೆಗೆ ಆಗಲಿ ಇನ್ನೂ ನಿರ್ಧಾರವಾಗಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹೇಳಿದ್ದಾರೆ.

    ರಾಜ್ಯ ರಾಜಕಾರಣಕ್ಕೆ ಸಂಸದೆ ಸುಮಲತಾ ಅಂಬರೀಶ್ ಬರಬೇಕು ಎಂಬ ಬೆಂಬಲಿಗರ ನಿರ್ಧಾರ ವಿಚಾರವಾಗಿ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ನಿಲ್ಲಬೇಕು ಎಂಬುದು ಅಷ್ಟು ಸುಲಭವಾದ ವಿಚಾರವಲ್ಲ. ಅದೊಂದು ದೊಡ್ಡ ನಿರ್ಧಾರವಾಗುತ್ತದೆ. ಚುನಾವಣೆಗೆ ಎಷ್ಟು ದಿನವಿದೆ ಎನ್ನುವುದು ಮುಖ್ಯವಲ್ಲ. ಆದರೆ ಅನುಕೂಲಕರ ವಾತಾವರಣ ಎಷ್ಟಿದೆ ಎಂಬುವುದು ಮುಖ್ಯ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂಬುವುದನ್ನು ಹೇಳಲು ಇದು ಸಮಯವಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ರಾಜೀನಾಮೆ – ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಮಂತ್ರಿ ಸ್ಥಾನ?

    ರಾಜಕಾರಣಕ್ಕೆ ಬರುವಂತೆ ಬಿಜೆಪಿ (BJP), ಕಾಂಗ್ರೆಸ್ (Congress) ಪಕ್ಷಗಳು ನನಗೆ ಆಹ್ವಾನವನ್ನು ನೀಡಿದೆ. ಆ ಪಕ್ಷದ ನಾಯಕರು ನನ್ನ ಜೊತೆ ಈ ಕುರಿತು ಮಾತನಾಡಿದ್ದಾರೆ. ದಶಪಥ ಹೆದ್ದಾರಿ ಉದ್ಘಾಟನೆ ವೇಳೆ ಸಂಸದೆಯಾಗಿ ಪ್ರಧಾನಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.

    ಮಂಡ್ಯ (Mandya) ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಅವರು ಆ ಸ್ಥಾನಕ್ಕೆ ಹೋಗಲು ಅಂಬರೀಶ್ ಕೊಡುಗೆ ಏನು ಎಂಬುವುದನ್ನು ನೆನಪು ಮಾಡಿಕೊಳ್ಳಬೇಕು. ಅವರು ಯಾವ ಉದ್ದೇಶದಿಂದ ನನ್ನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬಾರದು ಎಂದು ಹೇಳಿದ್ದಾರೋ ಗೊತ್ತಿಲ್ಲ. ನಾನು ಕೆಲವು ವಿಚಾರದಲ್ಲಿ ಬಿಜೆಪಿಗೆ ಬೆಂಬಲವನ್ನು ನೀಡುತ್ತೇನೆ. ಅದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದರು.

    sumalatha ambarish

     

     

    ಪಕ್ಷ ಸೇರುವ ಬಗೆಗೆ ಆಗಲಿ, ಚುನಾವಣೆಗೆ (Election) ನಿಲ್ಲುವ ಬಗೆಗೆ ಆಗಲಿ ನಾನು ಮತ್ತೊಮ್ಮೆ ಜನಾಭಿಪ್ರಾಯವನ್ನು ಕೇಳುತ್ತೇನೆ. ಒಂದು ನಿರ್ಧಾರವನ್ನು ತೆಗೆದುಕೊಂಡಾಗ ಅದಕ್ಕೆ ವಿರೋಧ ಎನ್ನವುದು ಇದ್ದೇ ಇರುತ್ತದೆ. ಹಾಗಾಗಿ ಎಲ್ಲರ ಅಭಿಪ್ರಾಯವನ್ನು ಪಡೆಯಲು ಆಗುವುದಿಲ್ಲ. ಸಮಯ ಬಂದಾಗ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿಕೆಯನ್ನು ನೀಡಿದರು. ಇದನ್ನೂ ಓದಿ: ಎಎಪಿಗೆ ಗುಡ್‌ಬೈ; ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಬಿಜೆಪಿ ಸೇರ್ಪಡೆ

  • ಮಂಡ್ಯದಲ್ಲಿ ಶುರುವಾಯ್ತು ಆಹ್ವಾನ ಪಾಲಿಟಿಕ್ಸ್..!

    ಮಂಡ್ಯದಲ್ಲಿ ಶುರುವಾಯ್ತು ಆಹ್ವಾನ ಪಾಲಿಟಿಕ್ಸ್..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k