Tag: Sumalatha Ambareesh

  • ಏನಮ್ಮ ನಿಮ್ಮಿಬ್ಬರ ಮಧ್ಯೆ ಜಟಾಪಟಿ ಜೋರಾಗಿದೆ- ಸುಮಲತಾಗೆ ಸಿದ್ದರಾಮಯ್ಯ ಪ್ರಶ್ನೆ

    ಏನಮ್ಮ ನಿಮ್ಮಿಬ್ಬರ ಮಧ್ಯೆ ಜಟಾಪಟಿ ಜೋರಾಗಿದೆ- ಸುಮಲತಾಗೆ ಸಿದ್ದರಾಮಯ್ಯ ಪ್ರಶ್ನೆ

    – ವಿಪಕ್ಷ ನಾಯಕರನ್ನ ಮಂಡ್ಯಕ್ಕೆ ಆಹ್ವಾನಿಸಿದ ಸಂಸದೆ

    ಬೆಂಗಳೂರು: ಇಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸಂಸದೆ ಸುಮಲತಾ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಇಬ್ಬರಿಗೊಬ್ಬರು ಎದುರಾಗಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಏನಮ್ಮ ನಿಮ್ಮಿಬ್ಬರ ಮಧ್ಯೆ ಜಟಾಪಟಿ ಜೋರಗಿದೆ ಎಂದು ಪ್ರಶ್ನಿಸಿದ್ದಾರೆ.

    ರಾಜ್ಯಪಾಲರ ಪ್ರಮಾಣವಚನ ಸ್ವೀಕಾರ ಹಿನ್ನೆಲೆ ರಾಜಭವನದ ಗಾಜಿನಮನೆಯಲ್ಲಿ ಎದುರು ಸಿಕ್ಕಾಗ ಸಿದ್ದರಾಮಯ್ಯ ಸುಮಲತಾ ಒಬ್ಬರಿಗೊಬ್ಬರು ಎದುರಾಗಿದ್ದಾರೆ. ಈ ವೇಳೆ ಸಿದ್ದರಾಮಯದ್ಯನವರನ್ನು ಮಂಡ್ಯಕ್ಕೆ ಬರುವಂತೆ ಸುಮಲತಾ ಆಹ್ವಾನಿಸಿದ್ದಾರೆ.

    ಇದಕ್ಕೂ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ಗಣಿಗಾರಿಕೆ ಕದನದ ಕುರಿತು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಏನಮ್ಮ ನಿಮ್ಮಿಬ್ಬರ ಮಧ್ಯೆ ಜಟಾಪಟಿ ಜೋರಾಗಿದೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಸುಮಲತಾ, ಏನಿಲ್ಲ ಸರ್ ಹಾಗೇ ಸ್ವಲ್ಪ ನಡೀತಿದೆ ಎಂದು ಹೇಳಿದ್ದಾರೆ. ಬಳಿಕ ಮಂಡ್ಯಕ್ಕೆ ನೀವು ಒಂದು ಬಾರಿ ಭೇಟಿ ಕೊಡಿ ಸರ್ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಆಗ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಆಯ್ತು ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಈ ಮೂಲಕ ಮಂಡ್ಯ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟದಲ್ಲಿ ಸಿದ್ದರಾಮಯ್ಯ ಬೆಂಬಲವನ್ನು ಸುಮಲತಾ ಕೋರಿದ್ದಾರೆ. ಸಿದ್ದರಾಮಯ್ಯನವರನ್ನು ಮಂಡ್ಯಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಈ ಕುರಿತು ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದೆ.

  • ಆತಂಕ ಹುಟ್ಟಿಸೋ ಚೀಪ್ ಪಾಪ್ಯುಲಾರಿಟಿ ಬಗ್ಗೆ ಮಾತಾಡೋಕೆ ಇಷ್ಟವಿಲ್ಲ- ಸುಮಲತಾಗೆ ಡಿಕೆಶಿ ಟಾಂಗ್

    ಆತಂಕ ಹುಟ್ಟಿಸೋ ಚೀಪ್ ಪಾಪ್ಯುಲಾರಿಟಿ ಬಗ್ಗೆ ಮಾತಾಡೋಕೆ ಇಷ್ಟವಿಲ್ಲ- ಸುಮಲತಾಗೆ ಡಿಕೆಶಿ ಟಾಂಗ್

    ಬೆಂಗಳೂರು: ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಸುಮಲತಾ ಕಿತ್ತಾಟದಲ್ಲಿ ಕುಮಾರಸ್ವಾಮಿ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬ್ಯಾಟ್ ಬೀಸಿದ್ದಾರೆ. ಸಂಸದೆ ಸುಮಲತಾ ಅವರದ್ದು ಚೀಪ್ ಪಾಪ್ಯುಲಾರಿಟಿ ಅಂತ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಯಾವ ಗಣಿಗಾರಿಕೆ ವಿಚಾರವೂ ಗೊತ್ತಿಲ್ಲ. ನಾನು ಸ್ವಲ್ಪ ದಿನ ಮಂಡ್ಯ ಉಸ್ತುವಾರಿ ಮಂತ್ರಿ ಆಗಿದ್ದೆ. ಆಗ ಯಾರೂ ನನ್ನ ಬಳಿ ಬಂದು ಗಣಿಗಾರಿಕೆ ಸುದ್ದಿ ಮಾತಾಡಿರಲಿಲ್ಲ. ಎಲ್ಲೋ 10-15 ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರೋ ಗಣಿಗಾರಿಕೆಗೂ ಡ್ಯಾಂಗೂ ಸಂಬಂಧವಿಲ್ಲ. ಯಾವುದೇ ವ್ಯತ್ಯಾಸ ಆಗಲ್ಲ. ಗಣಿಗಾರಿಕೆ ಮಾಡಲು ಅನೇಕ ನಿಯಮ, ಲೆಕ್ಕಾಚಾರ ಇವೆ. ಇದನ್ನ ನೋಡಿಕೊಳ್ಳಲು ಗಣಿ ಇಲಾಖೆ ಇದೆ. ಇದಕ್ಕಾಗಿ ನೂರಾರು ಜನ ಎಂಜಿನಿಯರ್ ಗಳನ್ನ ನೇಮಕ ಮಾಡಿದ್ದು, ಅವರು ನೋಡಿಕೊಳ್ತಾರೆ ಎಂದರು.

    ಜನರಿಗೆ ಆತಂಕ ಮೂಡಿಸುವ ಕೆಲಸ ಯಾರೂ ಮಾಡಬಾರದು. ಬಿರುಕು ಬಿಟ್ಟಿದೆ ಅಂತ ಆತಂಕ ಹುಟ್ಟಿಸೋ ಚೀಪ್ ಪಾಪ್ಯುಲರಿಟಿ ಬಗ್ಗೆ ಮಾತಾಡೋಕೆ ನನಗೆ ಇಷ್ಟ ಇಲ್ಲ ಅಂತ ಸುಮಲತಾ ವಿರುದ್ಧ ಕಿಡಿಕಾರಿದ್ರು. ಇದು ಅತ್ಯಂತ ಸೂಕ್ಷ್ಮವಾದ ವಿಚಾರ. ಈ ದೇಶ, ಈ ರಾಜ್ಯದ ಆಸ್ತಿ. ಆಸ್ತಿ ಬಗ್ಗೆ ನಾವು ಜವಾಬ್ದಾರಿ ಸ್ಥಾನದಲ್ಲಿ ಇರೋರು ಎಚ್ಚರಿಕೆಯಿಂದ ಮಾತಾಡಬೇಕು. ನಾವೆಲ್ಲ ಕಾವೇರಿ, ಅರ್ಕಾವತಿ ಹೊಳೆ ಪಕ್ಕ ಇರೋರು ನಮಗೆ ಅ ಆತಂಕ ಗೊತ್ತು ಅಂದ್ರು. ಇದನ್ನೂ ಓದಿ: ನಮ್ಮ ಹುಡುಗ, ದೂರದ ಸಂಬಂಧಿ- ಕಪಾಳಮೋಕ್ಷ ವಿಚಾರಕ್ಕೆ ಡಿಕೆಶಿ ಸ್ಪಷ್ಟನೆ

    ಗಣಿಗಾರಿಕೆಯಿಂದ ಡ್ಯಾಂಗೆ ತೊಂದರೆ ಇಲ್ಲವಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಆ ಸುದ್ದಿಯೇ ನನಗೆ ಗೊತ್ತಿಲ್ಲ. ಯಾರೂ ನನ್ನ ಬಳಿ ಆ ವಿಚಾರವಾಗಿ ಚರ್ಚೆ ಮಾಡಿಲ್ಲ. ಅ ಬಗ್ಗೆ ನನಗೇನು ಗೊತ್ತಿಲ್ಲ ಅಂತ ತಿಳಿಸಿದ್ರು.

  • KRS ಬಿರುಕು ಬಿಟ್ಟಿಲ್ಲ, ಸುಮಲತಾ, ಕುಮಾರಸ್ವಾಮಿಯವರದ್ದು ಬೇರೆನೋ ಅಜೆಂಡಾ ಇದೆ: ಆರ್.ಅಶೋಕ್

    KRS ಬಿರುಕು ಬಿಟ್ಟಿಲ್ಲ, ಸುಮಲತಾ, ಕುಮಾರಸ್ವಾಮಿಯವರದ್ದು ಬೇರೆನೋ ಅಜೆಂಡಾ ಇದೆ: ಆರ್.ಅಶೋಕ್

    ಬೆಂಗಳೂರು: ಕೆಆರ್‍ಎಸ್ ವಿಚಾರದ ಬಗ್ಗೆ ಸರ್ಕಾರ ಮೌನ ವಹಿಸಿಲ್ಲ, ಈಗಾಗಲೇ ಸ್ಪಷ್ಟಪಡಿಸಿದೆ. ಕೆಆರ್‍ಎಸ್ ಬಿರುಕು ಬಿಟ್ಟಿಲ್ಲ, ನೀರಾವರಿ ತಜ್ಞರು ಸಹ ಈ ಬಗ್ಗೆ ವರದಿ ಕೊಟ್ಟಿದ್ದಾರೆ. ಕೆಆರ್‍ಎಸ್ ಡ್ಯಾಂ ಸುರಕ್ಷಿತವಾಗಿದೆ. ಇದನ್ನು ರಾಜಕೀಯ ದಾಳವನ್ನಾಗಿ ಬಳಸಬಾರದು. ಇದರೆ ಬಗ್ಗೆ ಯಾರಿಗೂ ನೋವುಂಟು ಮಾಡಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

    ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜಟಾಪಟಿ ವಿಚಾರ ಸಂಬಂಧ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಹಾಗೂ ಸುಮಲತಾ ಇಬ್ಬರ ಜಟಾಪಟಿ ಲೋಕಸಭಾ ಚುನಾವಣೆಯ ರಿಫ್ಲೆಕ್ಷನ್. ಬೇರೆ ಏನಾದರೂ ಇದ್ದರೆ ಮಾತನಾಡಿಕೊಳ್ಳಲಿ, ಕೆಆರ್‍ಎಸ್ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ. ಕೆಆರ್‍ಎಸ್ ಬಿರುಕು ಬಿಟ್ಟಿದೆ ಎಂದರೆ ಸ್ಥಳೀಯರು ಆತಂಕಗೊಳ್ಳುತ್ತಾರೆ ಎಂದು ವಿನಂತಿಸಿದರು.

    ಕೆಆರ್‍ಎಸ್ ಬಗ್ಗೆ ಹೇಳಬೇಕಾಗಿರುವುದು ಸರ್ಕಾರ. ಅದನ್ನು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಕುಮಾರಸ್ವಾಮಿಯವರಾಗಲಿ, ಸುಮಲತಾ ಅವರಾಗಲಿ ಕೆಆರ್‍ಎಸ್ ಬಗ್ಗೆ ಏನಾದರೂ ಕೇಳುವುದಾದರೆ ಸರ್ಕಾರವಿದೆ, ಇದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಲಿದೆ ಎಂದರು.

    ಇವರಿಬ್ಬರ ಜಟಾಪಟಿ ಕೆಆರ್‍ಎಸ್ ವಿಚಾರವಾಗಿ ಅಲ್ಲ, ಬೇರೆ ಏನೋ ಅಜೆಂಡಾ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ವೈಯಕ್ತಿಕವಾಗಿ ವಾದ ನಡೆಯುತ್ತಿದೆ. ಸದ್ಯಕ್ಕೆ ಇದು ನಿಲ್ಲುವುದಿಲ್ಲ ಅನ್ನಿಸುತ್ತಿದೆ. ಇಲ್ಲಿಗೇ ಮುಕ್ತಾಯ ಮಾಡಿ ಎಂದು ವಿನಂತಿ ಮಾಡುತ್ತೇನೆ ಎಂದರು.

  • ಹೆಚ್‍ಡಿಕೆ V/s ಸುಮಲತಾ – ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ

    ಹೆಚ್‍ಡಿಕೆ V/s ಸುಮಲತಾ – ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ

    ಕಲಬುರಗಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸಮಲತಾ ನಡುವಿನ ಕದನದ ಕುರಿತು ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದರು. ದಿ.ಅಂಬರೀಶ್ ಅವರ ಸ್ಮಾರಕ ಆಗುವ ವೇಳೆ ನನ್ನ ಕರ್ತವ್ಯ ಮಾಡಿದ್ದೇನೆ. ಆ ಕೆಲಸ ನನಗೆ ಸಮಾಧಾನ ಮತ್ತು ತೃಪ್ತಿ ತಂದಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಕುಮಾರಸ್ವಾಮಿ ಮತ್ತು ಸುಮಲತಾ ಅವರು ಈಗ ಅವರು ಪರಸ್ಪರ ಕಚ್ಚಾಟ, ಬಡಿದಾಟ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಅಣ್ಣ ತಮ್ಮರಂತೆ ಬದುಕೋದನ್ನ ಕಲಿಯಬೇಕಿದೆ. ಮಂಡ್ಯ ಸಹ ರಾಜ್ಯದ ಒಂದು ಭಾಗ. ಹಾಗಾಗಿ ಅಲ್ಲಿಯ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಇಬ್ಬರಿಗೂ ಮುಖ್ಯಮಂತ್ರಿಗಳು ಸಲಹೆ ನೀಡಿದರು.

    ಇಂದು ಬೆಳಗ್ಗೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿಕೆ ಖಂಡಿಸಿ, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಕ್‍ಲೈನ್ ನಿವಾಸದ ಮುಂದೆ ಸೇರಿದ್ದ ಜೆಡಿಎಸ್ ಕಾರ್ಯಕರ್ತರು, ರಾಕ್‍ಲೈನ್ ವೆಂಕಟೇಶ್ ಬಹಿರಂಗವಾಗಿ ಕುಮಾರಸ್ವಾಮಿ ಅವರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು. ಇದನ್ನೂ ಓದಿ:  ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ?: ರಾಕ್‍ಲೈನ್ ವೆಂಕಟೇಶ್

    ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ರಾಕ್‍ಲೈನ್ ವೆಂಕಟೇಶ್, ನಾನು ಯಾರಿಗೂ ನೋವುಂಟು ಮಾಡಿಲ್ಲ. ಕುಮಾರಸ್ವಾಮಿ ಅವರಿಗೆ ನೋವು ಉಂಟಾಗುವ ಮಾತುಗಳನ್ನು ಆಡಿಲ್ಲ. ಹಾಗಾಗಿ ನಾನ್ಯಾಕೆ ಕ್ಷಮೆ ಕೇಳಬೇಕೆಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ: ಸುಮಲತಾ

  • ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ: ಸುಮಲತಾ

    ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ: ಸುಮಲತಾ

    ಬೆಂಗಳೂರು: ಕೆಲವರು ಮಹಿಳೆಯರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲಾರರು. ಸತ್ಯದ ಪರವಾಗಿ ನಿಂತಾಗ ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ:
    ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲಾರರು. ಭ್ರಷ್ಟರು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ, ಒತ್ತಡ, ಕಿರುಕುಳ ಕೊಡಬಲ್ಲರು. ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನಿವಾಸಕ್ಕೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾಗಿದ್ದು, ಆಕ್ರೋಶ ಹೊರ ಹಾಕುತ್ತಿದ್ದಾರೆ. ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆ ಇಂದು ರಾಕ್‍ಲೈನ್ ವೆಂಕಟೇಶ್ ನಿವಾಸದ ಮುಂದೆ ಅಪಾರ ಪ್ರಮಾಣದ ಕಾರ್ಯಕರ್ತರು ಸೇರ್ಪಡೆಯಾಗಿದ್ದರು. ಜೆಡಿಎಸ್ ಕಾರ್ಯಕರ್ತರ ಮುತ್ತಿಗೆ ಹಿನ್ನೆಲೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿರುವ ರಾಕ್‍ಲೈನ್ ವೆಂಕಟೇಶ್ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ. ಕೆಎಸ್‍ಆರ್‍ಪಿ ಪೊಲೀಸರು, ಸ್ಥಳೀಯ ಠಾಣೆಯ ಪೊಲೀಸರ ನಿಯೋಜನೆ ಮಾಡಲಾಗಿದ್ದು, ರಾಕ್‍ಲೈನ್ ಮನೆ ಸಂಪರ್ಕಿಸುವ ರಸ್ತೆಗೆ ಬ್ಯಾರಿಕೇಡ್ ಹಾಕಲಾಗಿದೆ. ಇದನ್ನೂ ಓದಿ:  ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ?: ರಾಕ್‍ಲೈನ್ ವೆಂಕಟೇಶ್

    ರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆ ನಮಗೂ ಅಭಿಮಾನವಿದೆ. ಕುಮಾರಸ್ವಾಮಿ ಬಗ್ಗೆ ಮಾತಾಡೋಕೆ ನೀವು ಯಾರು? ನೀವು ಚಿತ್ರರಂಗದ ಬಗ್ಗೆ ಮಾತ್ರ ಮಾತನಾಡಿ. ಕುಮಾರಸ್ವಾಮಿ ಅವರ ಬಳಿ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾನಿರತ ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದರು. ಸದ್ಯ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ನಾನು ಮೈಸೂರು ಸಂಸದ ಎನ್ನುವ ಬಗ್ಗೆ ಜನರಲ್ಲಿ ಗೊಂದಲವಿಲ್ಲ- ಸುಮಲತಾಗೆ ಪ್ರತಾಪ್ ಸಿಂಹ ತಿರುಗೇಟು

    ನಾನು ಮೈಸೂರು ಸಂಸದ ಎನ್ನುವ ಬಗ್ಗೆ ಜನರಲ್ಲಿ ಗೊಂದಲವಿಲ್ಲ- ಸುಮಲತಾಗೆ ಪ್ರತಾಪ್ ಸಿಂಹ ತಿರುಗೇಟು

    ಮಡಿಕೇರಿ: ನಾನು ಮೈಸೂರು ಸಂಸದ ಎಂಬುದರ ಬಗ್ಗೆ ಜನರಲ್ಲಿ ಗೊಂದಲವಿಲ್ಲ ಎಂದು ಕೊಡಗು, ಮೈಸೂರು ಸಂಸದ ಪ್ರತಾಪ್ ಸಿಂಹ ಸಂಸದೆ ಸುಮಲತಾ ಅವರಿಗೆ ತಿರುಗೇಟು ನೀಡಿದ್ದಾರೆ.

    ಪ್ರತಾಪ್ ಸಿಂಹ ಮೈಸೂರು ಸಂಸದರೋ ಅಥವಾ ಮಂಡ್ಯ ಸಂಸದರೋ ಎಂಬ ಸುಮಲತಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಮೈಸೂರಿನಲ್ಲೇ ವಾಸವಾಗಿದ್ದೇನೆ, ಕ್ಷೇತ್ರದಲ್ಲೇ ಇದ್ದು ಅಭಿವೃದ್ಧಿ ಕೆಲಸ ಮಾಡುತ್ತಿರುತ್ತೇನೆ. ಸಂಸದೆ ಬಗ್ಗೆ ಮಂಡ್ಯದವರಿಗೆ ಗೊಂದಲ ಇರುತ್ತದೆ. ಅವರಿಗೆ ಮತ ಹಾಕಿದ ಜನರಿಗೆ ಗೊಂದಲವಿರುತ್ತದೆ. ಅವರು ಮಂಡ್ಯದಲ್ಲಿ ಇದ್ದಾರೋ? ಇಲ್ಲವೋ ಎಂಬ ಗೊಂದಲವಿರುತ್ತದೆ ಎಂದರು. ಇದನ್ನೂ ಓದಿ: ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ: ಅಭಿಷೇಕ್ ಅಂಬರೀಶ್

    ನೀವು ಬಿಜೆಪಿ ಸಂಸದರಾ, ಜೆಡಿಎಸ್ ಸಂಸದರಾ ಎಂಬ ಸುಮಲತಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಮಂಡ್ಯದಲ್ಲಿ ಒಂದು ಕಟ್ಟೆ ಇರಬಹುದು. ಆದರೆ ಅದಕ್ಕೆ ಕೊಡಗಿನಿಂದಲೇ ನೀರು ಹೋಗಬೇಕು, ಕೊಡಗಿನ ಉಪಕೃತ ಅಣೆಕಟ್ಟೆ ಅದು ಕೆಆರ್ ಎಸ್. ಇಡೀ ರಾಜ್ಯಕ್ಕೆ ಸಂಬಂಧಿಸಿದ ವಿಷಯವನ್ನು ನೀವು ಸುಮ್ಮನೆ ವಿಷಯಾಂತರ ಮಾಡಬೇಡಿ. ಬಿರುಕು ಬಿಟ್ಟಿದೆ ಎಂದು ಹೇಳುವ ಮೊದಲು ನೀವು ಪರಿಶೀಲನೆ ಮಾಡಿದ್ದೀರಾ? ಅದು ತಪ್ಪು ಮಾಹಿತಿಯಾಗಿದ್ದರೆ, ತಪ್ಪು ಎಂದು ಒಪ್ಪಿಕೊಳ್ಳಿ ಎಂದರು. ಇದನ್ನೂ ಓದಿ: ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವ್ರ ಹೆಸರು ಬಳಸ್ತಿದ್ದೀರಿ: ಸುಮಲತಾ ಕಿಡಿ

    ಕೊರೊನಾ ಸಂದರ್ಭದಲ್ಲಿ ರಾಜಕಾರಣ ಮಾಡಿಕೊಂಡು ಮಹಿಳಾ ಅಧಿಕಾರಿಯನ್ನು ಅವಮಾನ ಮಾಡಿ, ಎಲ್ಲ ಸೇರಿಕೊಂಡು ವರ್ಗಾವಣೆ ಮಾಡಿದ್ದೀರಿ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಇದು ಮೈಸೂರಿನ ವಿಷಯ ಅದು ನಿಮಗ್ಯಾಕೆ ಎಂದು ತಿರುಗೇಟು ನೀಡಿದರು.

  • ನಾನು ಸಿಎಂ ಆಗಿದ್ದಕ್ಕೆ ಅಂಬರೀಶ್ ಸ್ಮಾರಕ ಆಗಿದ್ದು: ಕುಮಾರಸ್ವಾಮಿ

    ನಾನು ಸಿಎಂ ಆಗಿದ್ದಕ್ಕೆ ಅಂಬರೀಶ್ ಸ್ಮಾರಕ ಆಗಿದ್ದು: ಕುಮಾರಸ್ವಾಮಿ

    ಮಂಡ್ಯ: ನಾನು ಸಿಎಂ ಆಗಿದ್ದಕ್ಕೆ ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದು, ಅವರಿಗೆ ಸ್ಮಾರಕ ನಿರ್ಮಾಣ ಮಾಡಿದೆ. ಅದೇ ಬಿಜೆಪಿ ಸರ್ಕಾರ ವಿಷ್ಣುವರ್ಧನ್ ಅವರಿಗೆ ಏನು ಮಾಡಿದರೆಂದು ನೋಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

    ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಕ್ಕೆ ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಗೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟೆ, ಬೆಂಗಳೂರಿನಲ್ಲಿ ಅಂಬರೀಶ್ ಅವರ ಸಮಾಧಿಗೆ ಜಾಗ ನೀಡಿದೆ. ಆದರೆ ವಿಷ್ಣುವರ್ಧನ್ ಅವರು ನಿಧನರಾದಾಗ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ಗೋತ್ತು. ಇಂದಿಗೂ ಸಹ ವಿಷ್ಟುವರ್ಧನ್ ಅವರಿಗೆ ಸರಿಯಾಗಿ ಸ್ಮಾರಕ ಕಟ್ಟಲು ಆಗಿಲ್ಲ. ಇದನ್ನು ಸುಮಲತಾ ಅವರು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಮಣ್ಣಾಗಿ ಹೋಗುತ್ತಾರೆ ಎಂದು ಹೇಳಲು ಹೋಗಬಾರದು ಎಂದರು. ಇದನ್ನೂ ಓದಿ: ಸುಮಲತಾ ನಟೋರಿಯಸ್, ಸಂಸದ ಸ್ಥಾನಕ್ಕೆ ಅರ್ಹರಲ್ಲ: ರವೀಂದ್ರ ಶ್ರೀಕಂಠಯ್ಯ

    ನಾನು ಸಿಎಂ ಆಗಿದ್ದ ವೇಳೆಯಲ್ಲಿ ಯಾವುದೇ ಅಕ್ರಮ ಗಣಿಗಾರಿಗೆ ಅನುಮತಿ ನೀಡಿರಲಿಲ್ಲ. ಬೇಬಿ ಬೆಟ್ಟದಲ್ಲಿ ಸಂಪೂರ್ಣ ಗಣಿಗಾರಿಕೆಯನ್ನು ನಿಷೇಧ ಮಾಡಿದ್ದೆ. ಸುಮ್ಮನೆ ಆರೋಪಗಳನ್ನು ನನ್ನ ಮೇಲೆ ಮಾಡಬಾರದು. ಕೆಆರ್‍ಎಸ್ ಅಣೆಕಟ್ಟೆ ಇನ್ನೂ 100 ವರ್ಷವಾದರೂ ಏನೂ ಆಗಲ್ಲ, ಸುಭದ್ರವಾಗಿ ಇರುತ್ತದೆ ಯಾರು ಏನೇನೋ ಹೇಳಬಾರದು ಎಂದು ಸುಮಲತಾ ಅವರಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

    ಸುಮಲತಾ ಅವರ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ಸುಧೀರ್ಘವಾಗಿ ಮಾತನಾಡಿದ್ದಾರೆ. ನನ್ನ ತೇಜೋವಧೆ ಮಾಡಿದರು ಸಹ ಯಾರೂ ನನ್ನ ಮುಗಿಸಲು ಸಾಧ್ಯವಿಲ್ಲ. ನಾವು ಸದಾ ಜನರು ಮತ್ತು ರೈತರ ಪರವಾಗಿ ಇರುತ್ತೇನೆ, ಜನರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.

    ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿದ ಹೆಚ್‍ಡಿಕೆ
    ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ.ಮಾದೇಗೌಡ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಜಿ.ಮಾದೇಗೌಡ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

    ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಸದ್ಯ ಜಿ.ಮಾದೇಗೌಡರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ಮಾದೇಗೌಡರನ್ನು ನೋಡಿ, ಬಳಿಕ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂದು ವೈದ್ಯರ ಬಳಿ ಮಾಹಿತಿಯನ್ನು ಪಡೆದುಕೊಂಡರು.

    ಬಳಿಕ ಮಾತನಾಡಿದ ಕುಮಾರಸ್ವಾಮಿ, ಮಾದೇಗೌಡರ ಆರೋಗ್ಯದಲ್ಲಿ ಸ್ವಲ್ಪ ಹೇರುಪೇರಾಗಿದೆ. ಅವರ ಆರೋಗ್ಯ ಸರಿಪಡಿಸಲು ವೈದ್ಯರು ಸಹ ಚಿಕಿತ್ಸೆ ಮುಂದುವರೆಸುತ್ತಿದ್ದಾರೆ. ಮಾದೇಗೌಡರು ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಹಾಗೂ ಕಾವೇರಿ ವಿಚಾರದಲ್ಲಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಇಂತಹ ವ್ಯಕ್ತಿ ಆದಷ್ಟು ಬೇಗ ಗುಣಮುಖರಾಗಬೇಕು. ಅವರು ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಭಗವಂತನಲ್ಲಿ ಪಾರ್ಥನೆ ಮಾಡುತ್ತೇನೆ ಎಂದರು.

  • ಅಂಬರೀಶ್‍ಗೆ ನಾನೇನು ಗುಲಾಮನಾಗಿದ್ನಾ: ಫೋಟೋ ವೈರಲ್‍ಗೆ ಹೆಚ್‍ಡಿಕೆ ಪ್ರಶ್ನೆ

    ಅಂಬರೀಶ್‍ಗೆ ನಾನೇನು ಗುಲಾಮನಾಗಿದ್ನಾ: ಫೋಟೋ ವೈರಲ್‍ಗೆ ಹೆಚ್‍ಡಿಕೆ ಪ್ರಶ್ನೆ

    ರಾಮನಗರ: ನಾನು ಸಾರ್ವಜನಿಕರ ಮುಂದೆ ಕೂಡ ಕೈಕಟ್ಟಿ ನಿಲ್ಲುತ್ತೇನೆ. ಅಂಬರೀಶ್ ಮುಂದೆ ಕೈ ಕಟ್ಟಿ ನಿಂತ್ರೆ ಅವರಿಗೆ ನಾನೇನು ಗುಲಾಮನಾಗಿದ್ನ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ಅಂಬರೀಶ್ ಮುಂದೆ ಕುಮಾರಸ್ವಾಮಿ ಕೈಕಟ್ಟಿ ನಿಂತ ಫೋಟೋ ವೈರಲ್ ವಿಚಾರ ಸಂಬಂಧ ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯಕ್ಕೆ ಮಾಧ್ಯಮದವರು ಹೆಚ್ಚಿನ ಮನ್ನಣೆ ಕೊಡುವ ಅವಶ್ಯಕತೆ ಇಲ್ಲ. ನಾನು ಕಳೆದ ಎರಡು ದಿನದ ಹಿಂದೆ ಹೇಳಿದ್ದ ಹೇಳಿಕೆಗೆ ಸ್ಕೋಪ್ ಕೊಡುವ ಅವಶ್ಯಕತೆ ಇಲ್ಲ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿಗೆ ಅದರ ಬಗ್ಗೆ ಮಾಧ್ಯಮದವರು ಗಮನಹರಿಸಬೇಕು ಎಂದರು.

    ಭ್ರಷ್ಟಾಚಾರದ ವಿಷಯದಲ್ಲಿ ಕುಮಾರಸ್ವಾಮಿ ಅಂಬಾಸಿಡರ್ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದು ನಾನು ಭ್ರಷ್ಟಾಚಾರದಲ್ಲಿ ಅಂಬಾಸಿಡರ್. ಅನೇಕ ವರ್ಷಗಳಿಂದ ನಾನು ನಮ್ಮ ಕುಟುಂಬ ಭ್ರಷ್ಟಾಚಾರದ ವಿಷಯದಲ್ಲಿ ಹೋರಾಟ ಮಾಡ್ತಿದ್ದೇವೆ. ಭ್ರಷ್ಟ ಅಧಿಕಾರಿಗಳು, ಭ್ರಷ್ಟಾಚಾರದ ವಿರುದ್ಧ ದಾಖಲೆ ಸಮೇತ ಹೋರಾಟ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

    ಇದೇ ವೇಳೆ ಸುಮಲತಾ ಬಗ್ಗೆ ಗೌರವ ತೋರಿ ಮಾತನಾಡಿದ ಕುಮಾರಸ್ವಾಮಿ, ಆ ಹೆಣ್ಣು ಮಗಳ ಬಗ್ಗೆ ಇದೀಗ ಚರ್ಚೆ ಬೇಡ. ಮುಂದಿನ ಚುನಾವಣೆ ಸಂಧರ್ಭದಲ್ಲಿ ನಾನು ಮಾತಾಡ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

  • ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

    ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

    ಕೋಲಾರ: ಸಂಸದೆ ಸುಮಲತಾ ಅಂಬರೀಶ್ ಅವರಿಗೆ ರಾಜಕರಾಣದಲ್ಲಿ ಅನುಭವದ ಕೊರತೆ ಇದೆ ಎಂದು ಜೆಡಿಎಸ್ ಮುಖಂಡ, ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಎಲ್ಲಿ ಭ್ರಷ್ಟಾಚಾರ ಇರುತ್ತೋ ಅಲ್ಲಿ ಹೆಚ್‍ಡಿಕೆ ಇರ್ತಾರೆ ಅನ್ನೋ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿ, ಸುಮಲತಾಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ. ಜೆಡಿಎಸ್ ಪಕ್ಷ, ಕುಮಾರಸ್ವಾಮಿ, ದೇವೇಗೌಡರು, ರಾಜ್ಯದ ಸಂಪತ್ತನ್ನು ಉಳಿಸುವ ಕೆಲಸ ಮಾಡಿದ್ದೇವೆ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸುಮಲತಾ ನಟೋರಿಯಸ್, ಸಂಸದ ಸ್ಥಾನಕ್ಕೆ ಅರ್ಹರಲ್ಲ: ರವೀಂದ್ರ ಶ್ರೀಕಂಠಯ್ಯ

    ಪ್ರಜ್ವಲ್ ರೇವಣ್ಣರನ್ನು ಸುಮಲತಾ ಹೊಗಳಿದ ಬಗ್ಗೆ ಮಾತನಾಡಿ, ನನ್ನ ತಮ್ಮನ ಬಗ್ಗೆ ಸುಮಲತಾ ಪೊಲಿಟಿಕಲ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಅದಕ್ಕೆ ಅಭಿನಂದನೆ. ಮಂಡ್ಯದ ಸಂಸದರನ್ನಾಗಿ ಜನ ಆಯ್ಕೆ ಮಾಡಿದ್ದಾರೆ ಜನರ ಋಣ ತೀರಿಸಿಕೊಳ್ಳುವ ಕೆಲಸ ಮಾಡಿ. ಈ ರೀತಿಯ ವೈಯಕ್ತಿಕ ಕೆಸರೆರಚಾಟ ಮಾಡಿಕೊಂಡು ಟೀಕೆ ಮಾಡುವುದು ಬೇಡ ಎಂದರು.

    ಎಲ್ಲಿ ಗೆದ್ದಿದ್ದಾರೋ ಅಲ್ಲೇ ಸೋಲಿಸುತ್ತೇನೆ ಎಂಬ ಹೆಚ್‍ಡಿಕೆ ಹೇಳಿಕೆ ಬಗ್ಗೆ ಮಾತನಾಡಿ, ನಾನು ಮಂಡ್ಯದ ಚುನಾವಣೆಯಲ್ಲಿ ಸೋತಿದ್ದೇನೆ ನಾನು ಸೋಲು ಒಪ್ಪಿಕೊಂಡಿದ್ದೇನೆ. ಆದರೆ ಐದುಮುಕ್ಕಾಲು ಲಕ್ಷ ಜನ ಮತ ಹಾಕಿದ್ದಾರೆ ಬೇಜಾರಿಲ್ಲ. ಸಂಸದರಾಗಿದ್ದಾರೆ ಅದರ ಋಣ ತೀರಿಸುವ ಕೆಲಸ ಮಾಡಲಿ ಎಂದು ನಿಖಿಲ್ ವಾಕ್ಸಮರ ಮುಂದುವರಿಸಿದರು. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

    ಇದೇ ವೇಳೆ ಮಂಡ್ಯದಲ್ಲಿನ ಬೆಳವಣಿಗೆ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡುತ್ತಾ ಕೆಆರ್‍ಎಸ್ ಡ್ಯಾಂಗೆ ಕಲ್ಲು ಹೊಡೆಯುವ ಕೆಲಸ ಮಾಡದಂತೆ ಸಂಸದೆ ಸುಮಾಲತಾಗೆ ಸಲಹೆ ನೀಡಿದರು. ಕೆಆರ್‍ಎಸ್ ಡ್ಯಾಂಗೆ ತನ್ನದೆ ಆದ ಇತಿಹಾಸವಿದೆ. ಮೀಡಿಯಾ ಮುಂದೆ ಫೋಕಸ್ ಗಾಗಿ ಮಂಡ್ಯದ ಜನತೆಯಲ್ಲಿ ಆತಂಕ ಸೃಷ್ಟಿ ಮಾಡಬೇಡಿ. ಕೆ.ಆರ್.ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ವಿಚಾರವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಡ್ಯಾಂ ಬಿರುಕು ಬಿಟ್ಟಿದ್ದರೆ ಟೆಕ್ನಿಕಲ್ ಟೀಂ ಇದೆ. ಸರ್ಕಾರ ಅದರ ಬಗ್ಗೆ ಉತ್ತರ ಕೊಡ್ತಾರೆ. ಆದರೆ ಈ ರೀತಿ ಗೊಂದಲ ಸೃಷ್ಟಿಮಾಡಬಾರದು ಎಂದು ತಿಳಿ ಹೇಳಿದರು.

  • ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

    ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

    – ಅಮಾವಾಸ್ಯೆ, ಹುಣ್ಣಿಮೆಗೆ ಬರುವ ಸಂಸದೆ ಸುಮಲತಾ

    ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಬಂದಿದ್ದೇ ಕುಮಾರಸ್ವಾಮಿ. ಆ ಫೋಟೋಗಳನ್ನು ಕೂಡ ವೈರಲ್ ಮಾಡಲಿ ಎಂದು ಜೆಡಿಎಸ್ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಆಗ್ರಹಿಸಿದ್ದಾರೆ.

    ಅಂಬರೀಶ್ ಮುಂದೆ ಕುಮಾರಸ್ವಾಮಿ ಕೈ ಕಟ್ಟಿನಿಂತಿರುವ ಫೋಟೋ ವೈರಲ್ ವಿಚಾರ ಜೆಡಿಎಸ್ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಂಎಲ್‍ಸಿ, ಎಲ್ಲಾ ಫೋಟೋಗಳನ್ನು ವೈರಲ್ ಮಾಡುವಂತೆ ಒತ್ತಾಯಿಸಿದ್ದಾರೆ. ಅಂಬರೀಶ್ ಒಳ್ಳೆಯ ನಟ, ಅವರಿಗೆ ಎಲ್ಲರೂ ಗೌರವ ಕೊಡುತ್ತೇವೆ. ಕುಮಾರಸ್ವಾಮಿ ಅವರು ಸಹ ಗೌರವ ಕೊಡುತ್ತಿದ್ದರು. ಅದನ್ನು ಹೀಗೆ ಫೋಟೋ ವೈರಲ್ ಮಾಡೋದು ಸರಿಯಲ್ಲ ಎಮದು ಕಿಡಿಕಾರಿದರು.

    ಅಂಬರೀಶ್‍ಗೆ ಜೆಡಿಎಸ್ ರಾಜಕೀಯ ಮರುಜೀವ ಕೊಟ್ಟಿದೆ. ಅವರನ್ನು ಸಂಸದರನ್ನಾಗಿ ಮಾಡಿದ ಫೋಟೋವನ್ನು ಕೂಡ ವೈರಲ್ ಮಾಡಲಿ. ಆ ದಿನಗಳಲ್ಲಿ ಕುಮಾರಸ್ವಾಮಿ ಅವರನ್ನು ಹೇಗೆ ನೋಡುತ್ತಿದ್ದರು ಅನ್ನೋದನ್ನು ವೈರಲ್ ಮಾಡಲಿ. ಅಂಬರೀಶ್ ಅವರ ಪಾರ್ಥಿವ ಶರೀರವನ್ನು ತಂದಿದ್ದೆ ಕುಮಾರಸ್ವಾಮಿ, ಆಗ ಸುಮಲತಾ ಬೇಡಾ ಅಂತ ಹೇಳಿದ್ರು. ಈ ಫೋಟೋವನ್ನು ಸಹ ವೈರಲ್ ಮಾಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ V/S ಕುಮಾರಸ್ವಾಮಿ – ಹೆಚ್‍ಡಿಕೆ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

    ಅಮಾವಾಸ್ಯೆ-ಹುಣ್ಣಿಮೆಗೆ ಬರುವ ಸಂಸದೆ ಸುಮಲತಾ. ಕೊರೋನಾ ಕಾಲದಲ್ಲೂ ಸಂಸದೆ ಕೆಲಸ ಮಾಡಲ್ಲ. ನಾಲ್ಕು ತಿಂಗಳಲ್ಲಿ ಬಂದಿದ್ದೆ ನಾಲ್ಕು ದಿನ. ಈ ನಾಲ್ಕು ದಿನದಲ್ಲಿ ಇದ್ದಿದ್ದೇ ಒಂದೊಂದು ಗಂಟೆ. ಚುನಾವಣೆಯಲ್ಲಿ ಮಂಡ್ಯದಲ್ಲೇ ಇರ್ತೀನಿ ಅಂತಾ ಹೇಳಿದ್ರು. ಗೆದ್ದಾಗಿನಿಂದ ಇಲ್ಲಿಯವರೆಗೆ ಎಷ್ಟು ದಿನ ಉಳಿದುಕೊಂಡಿದ್ದಾರೆ. ಒಂದು ರಾತ್ರಿ-ಬೆಳಗ್ಗೆಯೂ ಇಲ್ಲಿಯೂ ಮಂಡ್ಯದಲ್ಲಿ ಇಲ್ಲ ಎಂದು ಕೆಟಿಎಸ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಂಬರೀಶ್ ಮುಂದೆ ಹೆಚ್‍ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್

    ಫೋಟೋ ವೈರಲ್:
    ನಟ ಅಂಬರೀಶ್ ಮುಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೈಕಟ್ಟಿ ನಿಂತ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಂಸದೆ ಸುಮಲತಾ ಮತ್ತು ಅಂಬರೀಶ್ ಬೆಂಬಲಿಗರು ಪೇಜ್ ಗಳಲ್ಲಿ ವಿವಿಧ ಬರಹಗಳಡಿ ಈ ಫೋಟೋ ಶೇರ್ ಮಾಡಲಾಗಿದೆ. ಇದನ್ನೂ ಓದಿ: ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ

    ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುಮಲತಾ, ನಮ್ಮ ಪಕ್ಷ ನಿಮ್ಮಂತಹ ಸಾವಿರಾರೂ ಲೀಡರ್ ಗಳನ್ನು ತಯಾರು ಮಾಡಿದೆ ಅಂತ ಹೇಳುತ್ತಾರೆ. ನೀವು ಸಾವಿರಾರರು ಜನರನ್ನು ತಯಾರು ಮಾಡಿಸಿರಬಹುದು. ಆದ್ರೆ ನಿಮ್ಮ ಈ ರೀತಿಯ ನಡವಳಿಕೆ, ಮಾತುಗಳಿಂದಲೇ ಎಷ್ಟೋ ಒಳ್ಳೆಯ ಜನ ಬೇರೆ ಪಕ್ಷ ಸೇರಿಕೊಂಡಿದ್ದಾರೆ. ನಿಮ್ಮ ಮಾತುಗಳಿಂದಲೇ ಅವರೆಲ್ಲ ನಿಮ್ಮ ಪಕ್ಷ ತೊರೆದಿರೋದು. ನೀವು ತಯಾರು ಮಾಡಿರುವ ಸಾವಿರಾರರು ಜನ, ಅದಕ್ಕಿಂತ ದೊಡ್ಡವರು ಅಂಬರೀಶ್ ಅವರ ಮುಂದೆ ಕೈ ಕಟ್ಟಿ ನಮ್ಮ ಮನೆಯಲ್ಲಿ ನಿಂತಿರೋದನ್ನು ಹಲವು ವರ್ಷ ನೋಡಿದ್ದೇನೆ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಫೋಟೋ ವೈರಲ್ ಮಾಡುವ ಮೂಲಕ ಸುಮಲತಾ ಬೆಂಬಲಿಗರು ದಳಪತಿಗಳಿಗೆ ಟಕ್ಕರ್ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ಸುಮಲತಾ ಅಭಿಮಾನಿಗಳಿಗೆ ಹೆಚ್‍ಡಿಕೆ ಅಭಿಮಾನಿಗಳ ತಿರುಗೇಟು