Tag: Sumalatha Ambareesh

  • ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ: ಸುಮಲತಾ

    ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ: ಸುಮಲತಾ

    ಮಂಡ್ಯ: ಗಣಿಗಾರಿಕೆ ವಿರುದ್ಧ ದಳಪತಿ ಹಾಗೂ ಸಂಸದೆ ಸಮಲತಾ ನಡುವೆ ನಡೆಯುತ್ತಿರುವ ಜಟಾಪಟಿ ಸದ್ಯ ನಿಲ್ಲುವಂತೆ ಕಾಣಿಸುತ್ತಿಲ್ಲ. ಕೆಲ ತಿಂಗಳ ಹಿಂದೆ ಕೆಆರ್‍ಎಸ್ ಡ್ಯಾಂ ಸುತ್ತಮುತ್ತ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿದ್ದ ಮಂಡ್ಯ ಸಂಸದೆ ಸುಮಲತಾ ಕೊನೆಗೂ ಗಣಿಗಾರಿಕೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಮಂಡ್ಯ ದಳಪತಿಗಳು ಸಂಸದೆ ಸುಮಲತಾ ವಿರುದ್ಧ ಅಭಿವೃದ್ದಿ ಕುಂಠಿತ ಆರೋಪ ಮಾಡಿದರೆ, ಇತ್ತ ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ ಎಂದು ಗುಡುಗಿದ್ದಾರೆ.

    ದಳಪತಿಗಳ ಆರೋಪಕ್ಕೆ ಸಂಸದೆ ಸುಮಲತಾ ಕಿಡಿಕಾರಿದ್ದು, ಅಕ್ರಮ ಗಣಿಗಾರಿಕೆ ವಿರುದ್ಧದ ನನ್ನ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಅಕ್ರಮ ನಿಲ್ಲಿಸಿ, ಅಭಿವೃದ್ದಿ ತಾನಾಗಿಯೇ ಆಗುತ್ತೆ. ಸರ್ಕಾರಕ್ಕೆ ಬರಬೇಕಿದ್ದ ಕೋಟ್ಯಂತರ ರೂ. ಹಣ ಯಾರೋ ನಾಲ್ಕು ಜನರ ಜೇಬು ಸೇರುತ್ತಿದೆ ಎಂದು ದಳಪತಿಗಳಿಗೆ ಟಾಂಗ್ ನೀಡಿದರು. ಅಷ್ಟೇ ಅಲ್ಲ ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿರುವುದರಿಂದಲೇ 67 ಕೋಟಿ ರೂಪಾಯಿ ಕಾಮಗಾರಿಯನ್ನು ಮಾಡಲಾಗಿದೆ. ಬೇಕಿದ್ರೆ ಆರ್.ಟಿ.ಐ ನಲ್ಲಿ ಮಾಹಿತಿ ತೆಗೆದು ನೋಡಿ ಎಂದು ಮತ್ತೆ ಡ್ಯಾಂ ಬಿರುಕು ಬಿಟ್ಟಿತ್ತು ಎಂದು ಸಂಸದೆ ಪುನರುಚ್ಚಿಸಿದ್ದಾರೆ.

    ಮಂಡ್ಯದ ಜೀವನಾಡಿ ಕೆ.ಆರ್.ಎಸ್ ಡ್ಯಾಂ ಬಿರುಕು ಬಿಟ್ಟಿದ್ದು, ಡ್ಯಾಂ ಸುತ್ತ ನಡೆಯುತ್ತಿರುವ ಗಣಿಗಾರಿಕೆಯೇ ಇದಕ್ಕೆ ಕಾರಣ ಎಂದು ಮಂಡ್ಯ ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ಈ ಹಿಂದೆ ತಿರುಗಿ ಬಿದ್ದಿದ್ದರು. ಬಳಿಕ ಗಣಿಗಾರಿಕೆ ಸ್ಥಳಕ್ಕೆ ಖುದ್ದು ತೆರಳಿದ್ದ ಸಂಸದೆ ಸುಮಲತಾ ಗಣಿಗಾರಿಕೆಯ ಪ್ರಮಾಣವನ್ನು ಜನರ ಮುಂದಿಟ್ಟಿದ್ದರು. ಕೆಆರ್‍ಎಸ್ ಸುತ್ತ ನಡೆಯುತ್ತಿದ್ದ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಲ್ಲಿಯೂ ಯಶಸ್ವಿಯಾಗಿದ್ದರು.

    ಕಳೆದ ಎರಡ್ಮೂರು ದಿನಗಳ ಹಿಂದೆಯಷ್ಟೇ ಗಣಿಗಾರಿಕೆ ಸ್ಥಳಗಳಲ್ಲಿ ಸ್ಫೋಟಕ ವಸ್ತುಗಳಿರುವುದನ್ನು ಬಾಂಬ್ ನಿಸ್ಕ್ರೀಯ ತಂಡ ಪತ್ತೆ ಹಚ್ಚಿತ್ತು. ಇದೀಗ ಮತ್ತೆ ದಳಪತಿಗಳು ಗಣಿಗಾರಿಕೆಗೆ ಅವಕಾಶ ಮಾಡಿ ಕೊಡಬೇಕು ಎಂದು ಆಗ್ರಹಿಸುತ್ತಿದ್ದು, ಜಿಲ್ಲೆಯಲ್ಲಿ ಅಭಿವೃದ್ದಿ ಕುಂಠಿತವಾಗುತ್ತಿದೆ. ಜಿಲ್ಲೆಯ ಜನರು ದುಪ್ಪಟ್ಟು ನೀಡಿ ಕಟ್ಟಡ ಕೆಲಸದ ಮೆಟಿರೀಯಲ್ ತರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆಗಳನ್ನು ಸಕ್ರಮ ಮಾಡಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಸಂಸದೆ ಸುಮಲತಾ ವಿರುದ್ಧ ಕಿಡಿಕಾರಿದ್ದಾರೆ.

  • 2 ವರ್ಷದ ಬಳಿಕ ದರ್ಶನ್, ಅಭಿ ಜೊತೆ ಸುಮಲತಾ ತಿರುಪತಿ ಭೇಟಿ

    2 ವರ್ಷದ ಬಳಿಕ ದರ್ಶನ್, ಅಭಿ ಜೊತೆ ಸುಮಲತಾ ತಿರುಪತಿ ಭೇಟಿ

    ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪುತ್ರ ಅಭಿಷೇಕ್ ಅಂಬರೀಶ್ ಜೊತೆ ತಿರುಪತಿಗೆ ಭೇಟಿ ನೀಡಿದ್ದಾರೆ.

    ಈ ಸಂಬಂಧ ತಮ್ಮ ಇನ್ಸ್ ಸ್ಟಾ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡು 2 ವರ್ಷಗಳ ಬಳಿಕ ತಿಮ್ಮಪ್ಪನ ದರ್ಶನ ಪಡೆದಿರುವುದಾಗಿ ತಿಳಿಸಿದ್ದಾರೆ.

    ಸುಮಾರು 2 ವರ್ಷಗಳ ನಂತರ ತಿರುಪತಿ ವೆಂಕಟೇಶ್ವರ ದೇವರ ದಿವ್ಯ ದರ್ಶನವನ್ನು ಪಡೆದೆ. ನನ್ನ ಹುಡುಗರಾದ ದರ್ಶನ್ ತೂಗುದೀಪ ಶ್ರೀನಿವಾಸ್, ಅಭಿಷೇಕ್ ಅಂಬರೀಶ್ ಮತ್ತು ಸ್ನೇಹಿತರ ಜೊತೆ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಇಲ್ಲಿಗೆ ಬರುವುದೆಂದರೆ ನನಗೆ ತುಂಬಾನೆ ಖುಷಿ ನೀಡುತ್ತದೆ. ಅಲ್ಲದೆ ಇಲ್ಲಿಗೆ ಭೇಟಿ ನೀಡಿದರೆ ಒಂದು ರೀತಿಯಲ್ಲಿ ಮನಸ್ಸಿಗೆ ಶಾಂತಿ ಸಿಗುತ್ತದೆ. ಅಲ್ಲದೆ ಎಲ್ಲರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿರುವುದಾಗಿ ಸುಮಲತಾ ಇನ್ ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಂಜನ ಅಪ್ಪ, ಅಮ್ಮನ ಜೊತೆ ಮದುವೆ ಬಗ್ಗೆ ಮಾತನಾಡಿದ್ದೇನೆ: ದಿವ್ಯಾ ಸುರೇಶ್

    ಕೆಲ ದಿನಗಳ ಹಿಂದೆ ಕೆಆರ್‍ಎಸ್ ಆಣೆಕಟ್ಟು ಸುತ್ತ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಲೋಕಸಭೆಯಲ್ಲಿ ಸುಮಲತಾ ದನಿ ಎತ್ತಿದ್ದರು. ಕೆಆರ್ ಎಸ್ ಸುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದಕ್ಕಾಗಿ ರಾಸಾಯನಿಕ ಸ್ಫೋಟಕಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲದ ಗುಣಮಟ್ಟ ಕುಸಿದಿದೆ. ಬೆಳೆಗಳ ಮೇಲೆ ಪರಿಣಾಮ ಬೀರಿದೆ. ವಾಯುಮಾಲಿನ್ಯದಿಂದ ಜನರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುಬೇಕು ಎಂದು ಆಗ್ರಹಿಸಿದ್ದರು. ರಾಜಕೀಯ ಜಂಜಾಟಗಳಿಂದ ಮನಸ್ಸಿಗೆ ಶಾಂತಿ ಸಿಗಲೆಂದು ಸಂಸದೆ ತಿರುಪತಿಗೆ ಭೇಟಿ ಕೊಟ್ಟಿದ್ದಾರೆ.

  • ಸುಮಲತಾ ಅಂಬರೀಶ್‍ಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ: ರವೀಂದ್ರ ಶ್ರೀಕಂಠಯ್ಯ

    ಸುಮಲತಾ ಅಂಬರೀಶ್‍ಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ: ರವೀಂದ್ರ ಶ್ರೀಕಂಠಯ್ಯ

    ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಎಲ್ಲರಿಗೂ ತೊಂದರೆ ಕೊಟ್ಟು, ಜಿಲ್ಲಾ ವ್ಯವಸ್ಥೆಯನ್ನೇ ಅಲ್ಲೋಲ- ಕಲ್ಲೋಲ ಮಾಡುತ್ತಿದ್ದಾರೆ. ಅವರಿಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತೊಮ್ಮೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಂಡ್ಯ ತಾಲೂಕಿನ ಪೀ ಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಗಣಿಗಾರಿಕೆ ನಡೆದುಕೊಂಡು ಬಂದಿದೆ. ಇದೀಗ ಸಕ್ರಮ – ಅಕ್ರಮ ಎಲ್ಲಾ ಗಣಿಗಾರಿಕೆಗಳು ನಿಂತು ಹೋಗಿವೆ. ಇದರಿಂದ ಕಾಮಗಾರಿಗಳಿಗೆ ಮೆಟಿರಿಯಲ್‍ಗಳು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿ ಕೆಲಸಗಳು ನಿಂತು ಹೋಗಿವೆ. ಈ ಮೂಲಕ ಸುಮಲತಾ ಅಂಬರೀಶ್ ಎಲ್ಲರಿಗೂ ತೊಂದರೆ ಕೊಟ್ಟು ಜಿಲ್ಲೆಯ ವ್ಯವಸ್ಥೆಯನ್ನು ಅಲ್ಲೋಲ-ಕಲ್ಲೋಲ ಮಾಡಿದ್ದಾರೆ.

    ಸಂಸದ ಯೋಚನೆ ತುಘಲಕ್ ಸಂಸ್ಕೃತಿ ರೀತಿಯಲ್ಲಿ ಇದೆ. ನಾವು ಮನುಷ್ಯರ ಜೊತೆ ಬದುಕುತ್ತಿದ್ದೇವೆ, ವಿಶ್ವಾಸದಿಂದ ಇರಬೇಕು. ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಬೇಕು, ಕಾನೂನು ಬದ್ಧವಾಗಿ ರಾಜಧನ ನಿಗದಿಮಾಡಿ ಕಾಮಗಾರಿಗಳಿಗೆ ಮೆಟಿರೀಯಲ್ ಸಿಗುವ ರೀತಿ ಮಾಡಬೇಕು. ಮಂತ್ರಿ ಆಗಿರುವ ನಾರಾಯಣಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಅವರು ಕೇವಲ ಕೆಆರ್‍ಪೇಟೆ ಕ್ಷೇತ್ರವಲ್ಲದೇ ಜಿಲ್ಲೆಯ ಅಭಿವೃದ್ಧಿ ಕಡೆಯೂ ಸಹ ಗಮನವರಿಸಬೇಕು ಎಂದು ಮನವಿ ಮಾಡಿದರು.

  • 15 ವರ್ಷಗಳಿಂದ ಜಯಪ್ರದಾರಿಂದ ಅನ್ಯಾಯ – ವಿಜಯಲಕ್ಷ್ಮಿ

    15 ವರ್ಷಗಳಿಂದ ಜಯಪ್ರದಾರಿಂದ ಅನ್ಯಾಯ – ವಿಜಯಲಕ್ಷ್ಮಿ

    – ಸುಮಲತಾ ಒಂದು ಫೋನ್ ಮಾಡಿದ್ರೆ ಸಮಸ್ಯೆ ಪರಿಹಾರ
    – ಸಹೋದರಿಗೆ ನ್ಯಾಯ ಕೊಡಿಸಿ

    ಚೆನ್ನೈ: ನಟಿ ಜಯಪ್ರದಾ ಅವರ ಕುಟುಂಬದಿಂದ ನನ್ನ ಅಕ್ಕನಿಗೆ ಮೋಸ ಆಗಿದೆ. 15 ವರ್ಷಗಳಿಂದ ಯಾವುದೇ ಜೀವನಾಂಶ ಕೊಟ್ಟಿಲ್ಲ, ದಯಮಾಡಿ ಯಾರಾದ್ರೂ ಸುಮಲತಾ ಅವರ ಜೊತೆ ಮಾತನಾಡಿಸಿ ಅಂತ ವೀಡಿಯೋದಲ್ಲಿ ನಟಿ ವಿಜಯಲಕ್ಷ್ಮೀ ಹೇಳಿದ್ದಾರೆ.

    15 ವರ್ಷಗಳಿಂದ ನಾವು ತಮಿಳುನಾಡಲ್ಲಿ ಇದ್ದೇವೆ. ಸೋದರಿ ಉಷಾದೇವಿ ಅವರು ವಿಚ್ಛೇದನ ಹಾಕಬೇಕು ಎಂದರೆ ನಾವು ಇಲ್ಲಿಂದಲೇ ಮಾಡಬೇಕಿದೆ. ಹೀಗಾಗಿ ನಾವು ಇಲ್ಲಿಯೇ 15 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗುತ್ತಿದೆ. ಉಷಾದೇವಿ ಅವರಿಗೆ ನ್ಯಾಯವನ್ನು ಕೊಡಿಸಬೇಕು. ದಯಮಾಡಿ ಸುಮತಲಾ ಅಂಬರೀಶ್ ಅವರ ಗಮನಕ್ಕೆ ಈ ವಿಚಾರವನ್ನು ತನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.

    15 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡ ಜಯಪ್ರದಾ ಅವರು 15 ವರ್ಷಗಳಿಂದ ಸೋದರಿಯ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ. ಈ ಕುರಿತಾಗಿ ನನಗೆ ತುಂಬಾ ನೋವು ಇದೆ. ಈ ವಿಚಾರವನ್ನು ನಾವು ಯವಗ ಕೋರ್ಟ್‍ಗೆ ತೆಗೆದುಕೊಂಡು ಹೋದರು ರಾಜ್‍ಬಾಬು ಅವರು ಕೊರ್ಟ್‍ಗೆ ಬರುವುದಿಲ್ಲ. ಚಿತ್ರರಂಗದಲ್ಲಿ ಇರುವ ಹಿರಿಯರನ್ನು ಇಟ್ಟುಕೊಂಡು ಮಾತನಾಡೋಣ ಎಂದರೆ ಅದು ಸಾಧ್ಯವಾಗುತ್ತಿಲ್ಲ. ಅವರು ಕರ್ನಾಟಕದವರು ಕನ್ನಡದ ಹಿರಿಯರೊಂದಿಗೆ ಮಾತನಾಡಲು ಹೇಳಿ ಎಂದು ಹೇಳುತ್ತಿದ್ದಾರೆ. ಈ ನೋವನ್ನು ನಾವು 15 ವರ್ಷಗಳಿಂದ ಹೋತ್ತುಕೊಂಡು ಬರುತ್ತಿದ್ದೇವೆ. ಈ ವಿಚಾರವನ್ನು ಹೇಗೆ ಅಂತ್ಯಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ಎಂದಿದ್ದಾರೆ.

    ಸೋದರಿ ಉಷಾದೇವಿ ಆರೋಗ್ಯ ಬಹಳ ಗಂಭೀರವಾಗಿದೆ. ಚಿಕಿತ್ಸೆಗೆ ತುಂಬಾ ಹಣ ಖರ್ಚಾಗುತ್ತದೆ. ಸಹಾಯ ಮಾಡಿ ಎಂದು ನಾನು ವೀಡಿಯೋವನ್ನು ಹಾಕುವಾಗ ತುಂಬಾ ಟೀಕೆ ಆಗುತ್ತಿದೆ. ಉಷಾದೇವಿ ಅವರ ಮಗನನ್ನು ನೋಡಿ 15 ವರ್ಷಗಳಾಗಿವೆ. ಹಲವರಿಗೆ ವಿಚ್ಛೇದನವಾಗಿದೆ. ಅವರೆಲ್ಲ ಆ ಕಷ್ಟವನ್ನು ದಾಟಿಕೊಂಡು ಬಂದು ಜೀವನ ನಡೆಸುತ್ತಿದ್ದಾರೆ. ಆದರೆ ಉಷಾದೇವಿ ಅವರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಅಂಬರೀಶ್ ಅವರನ್ನು ನಾನು ಸಂಪರ್ಕಿಸಲು ಪ್ರಯತ್ನಿಸಿದೆ ಆದರೆ ಅದು ಸಾಧ್ಯವಾಗಲಿಲ್ಲ. ಈ ವೀಡಿಯೋನ ದಯವಿಟ್ಟು ಸಂಸದೆ ಸುಮಲತಾ ಅವರಿಗೆ ತಲುಪಿಸಿ. ಅವರು ಒಂದು ಫೋನ್ ಮಾಡಿದರೆ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ. ದಯಮಾಡಿ ಯಾರಾದರೂ ಸುಮಲತಾ ಅವರ ಜೊತೆ ಮಾತನಾಡಿಸಿ ಅಂತ ವಿಜಯಲಕ್ಷ್ಮಿ ವೀಡಿಯೋದಲ್ಲಿ ಮನವಿ ಮಾಡಿದ್ದಾರೆ.

  • ಕೆಆರ್‌ಎಸ್‌ ಸುತ್ತಲಿನ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ- ಕೇಂದ್ರ ಸಚಿವರಿಗೆ ಸುಮಲತಾ ಮನವಿ

    ಕೆಆರ್‌ಎಸ್‌ ಸುತ್ತಲಿನ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ- ಕೇಂದ್ರ ಸಚಿವರಿಗೆ ಸುಮಲತಾ ಮನವಿ

    ನವದೆಹಲಿ: ವಿಶ್ವವಿಖ್ಯಾತ ಕೆಆರ್‌ಎಸ್‌ ಅಣೆಕಟ್ಟೆಯ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಸಂಸದೆ ಸುಮಲತಾ ಅಂಬರೀಶ್ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿರುವ ಸಂಸದೆ, ಡ್ಯಾಂ ಸುತ್ತಮುತ್ತಲ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅತಿರೇಕದ ಅಕ್ರಮ ಗಣಿಗಾರಿಕೆಯಿಂದ ಸಮಸ್ಯೆಯಾಗುತ್ತಿದೆ. ಗಣಿಗಾರಿಕೆಯಿಂದ ಡ್ಯಾಂ ಮೇಲಾಗುತ್ತಿರುವ ಪರಿಣಾಮಗಳು ಹಾಗೂ ಮುಂದೆ ಸಂಭವಿಸಬಹುದಾದ ಅಪಾಯ ಕುರಿತ ಅಂಶಗಳನ್ನು ಸಚಿವರಿಗೆ ತಿಳಿಸಿದ್ದಾರೆ.

    ಗಣಿಗಾರಿಕೆ ಕುರಿತು ತನಿಖೆ ನಡೆಸಲು ಮತ್ತು ಪರಿಹರಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ಇಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ, ಕೆಆರ್‌ಎಸ್‌ ಅಣೆಕಟ್ಟೆಗೆ ಅಕ್ರಮ ಗಣಿಗಾರಿಕೆಯಿಂದ ಬಂದೊದಗಿರುವ ಅಪಾಯವನ್ನು ಅವರ ಗಮನಕ್ಕೆ ತಂದು, ಈ ವಿಚಾರವಾಗಿ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ ಎಂದು ಬರೆದುಕೊಂಡಿದ್ದಾರೆ.

  • ತನ್ನನ್ನು ಕಾಪಾಡುವಂತೆ ಕನ್ನಂಬಾಡಿ ಕೂಗಿ ಹೇಳುತ್ತಿದೆ: ಸುಮಲತಾ

    ತನ್ನನ್ನು ಕಾಪಾಡುವಂತೆ ಕನ್ನಂಬಾಡಿ ಕೂಗಿ ಹೇಳುತ್ತಿದೆ: ಸುಮಲತಾ

    – ಗೋಡೆ ಕುಸಿದಿದ್ದು ಎಲ್ಲಿ? ಅಧಿಕಾರಿಗಳು ಹೇಳಿದ್ದೇನು?

    ನವದೆಹಲಿ: ಕನ್ನಂಬಾಡಿ ಅಣೆಕಟ್ಟು ಗೋಡೆ ಕುಸಿದಿರುವುದು ರೆಡ್ ಅಲರ್ಟ್ ಸಂದೇಶ, ತನ್ನನ್ನು ಕಾಪಾಡುವಂತೆ ಡ್ಯಾಂ ಕೂಗಿ ಹೇಳುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಕೆಆರ್‌ಎಸ್ ಡ್ಯಾಂ ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ರೀತಿಯ ಡ್ಯಾಂ ಮುಂದೆ ನಿರ್ಮಿಸಲು ಸಾಧ್ಯವಿಲ್ಲ, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

    ಗೋಡೆ ಕುಸಿದಿದೆ ಎಂದು ನಿರ್ಲಕ್ಷ್ಯ ಮಾಡಿ ಸುಮ್ಮನೆ ಕೋರಲು ಸಾಧ್ಯವಿಲ್ಲ, ಕಿಡ್ನಿಗೆ ಇನ್ಫೆಕ್ಷನ್ ಆಗಿದೆ ಲಿವರ್‌ಗೆ ಏನು ಆಗಲ್ಲ ಅಥವ ಕೊರೊನಾ ಚೀನಾದಲ್ಲಿದೆ ಭಾರತದಲ್ಲಿ ಏನು ಆಗಲ್ಲ ಅಂತಾ ಸುಮ್ನೆ ಕೂತರೆ ಆಗುತ್ತಾ? ಹಾಗೇ ಗೋಡೆ ಕುಸಿತ ಅನ್ನೊದು ಎಚ್ಚರಿಕೆ ಸಂದೇಶವಾಗಿದ್ದು ಈಗಲೇ ಮುನ್ನೆಚ್ಚರಿಕೆ ವಹಿಸಬೇಕು. ಸರ್ಕಾರಕ್ಕೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಂಗೂ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ. ಒಬ್ಬೊಬ್ಬ ಅಧಿಕಾರಿ ಒಂದೊಂದು ಮಾಹಿತಿ ನೀಡುತ್ತಿದ್ದಾರೆ. ಗೋಡೆ ಕುಸಿತದ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ ಎಂದರು.

    ಕೆಆರ್‌ಎಸ್ ವಿಚಾರದಲ್ಲಿ ನಾವು ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ, ಈ ವಿಚಾರದಲ್ಲಿ ರಾಜಕೀಯ ಮಾಡಿದವರು ಗೋಡೆ ಕುಸಿತದ ಬಗ್ಗೆ ಏನ್ ಹೇಳ್ತಾರೆ ಅಂತಾ ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕುಟುಕಿದರು. ಕೆಆರ್‌ಎಸ್ ಸದ್ಯಕ್ಕೆ ಸೇಫಾಗಿದ್ದು ಅದು ಮುಂದೆಯೂ ಸುರಕ್ಷಿತವಾಗಿರಬೇಕು ಎನ್ನುವುದು ನಮ್ಮ ಬಯಕೆ ಎಂದು ಸುಮಲತಾ ಹೇಳಿದರು. ಇದನ್ನೂ ಓದಿ:  KRS ಡ್ಯಾಂ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿತ

    ಗೋಡೆ ಕುಸಿದಿದ್ದು ಎಲ್ಲಿ? ಅಧಿಕಾರಿಗಳು ಹೇಳಿದ್ದೇನು?

    ಕೆಆರ್‌ಎಸ್ ಡ್ಯಾಂನ 80 ಪ್ಲಸ್ ಅಡಿ ಗೇಟುಗಳ ಬಳಿಯಲ್ಲಿರುವ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿತಗೊಂಡಿದ್ದು, ಡ್ಯಾಂನಿಂದ ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆಗೆ ಹೋಗಲು ಈ ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. ಡ್ಯಾಂ ಭದ್ರತೆ ದೃಷ್ಟಿಯಿಂದ ಹಲವು ವರ್ಷದ ಹಿಂದೆಯೇ ಮೆಟ್ಟಿಲ ಮೇಲೆ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು. ಸತತ ಮಳೆಯಿಂದಾಗಿ ಕಲ್ಲುಗಳು ಕುಸಿದಿವೆ ಎನ್ನಲಾಗಿದೆ. ಇದನ್ನೂ ಓದಿ: ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ: ಸುಮಲತಾ

    ಯಾರೂ ಆತಂಕಪಡುವ ಅಗತ್ಯವಿಲ್ಲ. ಇದು ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆಗೆ ಹೋಗುವ ಮಾರ್ಗದ ಮೆಟ್ಟಿಲುಗಳ ಬಳಿ ಕಲ್ಲು ಕುಸಿದಿವೆ. ಇದಕ್ಕೂ ಅಣೆಕಟ್ಟೆಗೂ ಯಾವುದೇ ಸಂಬಂಧವಿಲ್ಲ. ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರೋದರಿಂದ ಕಲ್ಲುಗಳು ಕುಸಿದಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  • KRS ಬಿರುಕು ವಿಚಾರದಲ್ಲಿ ಸುಮಲತಾ ದ್ವಂದ್ವ- ದೊಡ್ಡವರ ಬಗ್ಗೆ ಮಾತಾಡಲ್ಲ ಅಂದ್ರು ಹೆಚ್‍ಡಿಕೆ

    KRS ಬಿರುಕು ವಿಚಾರದಲ್ಲಿ ಸುಮಲತಾ ದ್ವಂದ್ವ- ದೊಡ್ಡವರ ಬಗ್ಗೆ ಮಾತಾಡಲ್ಲ ಅಂದ್ರು ಹೆಚ್‍ಡಿಕೆ

    – ಗಣಿ ಅಕ್ರಮ ಬಗ್ಗೆ ಜು.30ರೊಳಗೆ ವರದಿಗೆ ಸೂಚನೆ

    ಬೆಂಗಳೂರು: ಮಂಡ್ಯದ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಸಮರ ಮತ್ತಷ್ಟು ಹೊಸ ರೂಪ ಪಡೆದುಕೊಂಡಿದೆ. ಅಕ್ರಮ ಗಣಿಗಾರಿಕೆಯಿಂದ ಕೆಆರ್‍ಎಸ್ ಡ್ಯಾಂಗೆ ಹಾನಿಯ ಬಗ್ಗೆ ಸಂಸದೆ ಸುಮಲತಾ ದ್ವಂದ್ವ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂದಿದ್ರು. ಆದ್ರೆ ಇಂದು ಕೆಆರ್‍ಎಸ್ ಡ್ಯಾಂ ಪರಿಶೀಲನೆ ವೇಳೆ, ಡ್ಯಾಂ ಬಿರುಕು ಬಿಟ್ಟಿದೆ ಎಂದು ನಾನು ಹೇಳಿಲ್ಲ. ಬಿರುಕು ಬಿಟ್ಟಿದಿಯೇ ಎಂದು ನಾನು ಪ್ರಶ್ನಿಸಿದ್ದೆ ಎಂದು ಹೇಳಿದರು.

    ಅಧಿಕಾರಿಗಳ ಜೊತೆ ಸಭೆ ನಡೆಸಿ, ಮಾಹಿತಿ ಪಡೆದರು. ಡ್ಯಾಮ್ ಬಿರುಕೇ ಆಗಿಲ್ಲ ಅನ್ನೋದು ಅಸತ್ಯ. ಈಗ ಸಣ್ಣಪುಟ್ಟ ಬಿರುಕು ಅಂತೇವೆ, ಮುಂದೆ ಅವೇ ಬಹಳ ಮುಖ್ಯ ಆಗುತ್ತೆ. ಗ್ರೋಟಿಂಗ್ ಅನ್ನೋದನ್ನ ಯಾಕೆ ಮಾಡ್ತೀರಿ? 67 ಕೋಟಿಯಲ್ಲಿ ಏನು ಮಾಡಿದ್ರಿ? ಅಕ್ರಮ ಗಣಿಗಾರಿಕೆ ಬ್ಲಾಸ್ಟಿಂಗ್‍ನಿಂದ ಡ್ಯಾಂಗೆ ಏನೂ ಆಗಲ್ವಾ? ಎಂದು ಕ್ಲಾಸ್ ತೆಗೆದುಕೊಂಡರು. 7 ದಿನದಲ್ಲಿ ಮಾಹಿತಿ ಕೊಡೋದಾಗಿ ಅಧಿಕಾರಿಗಳು ಹೇಳಿದರು.

    ಸಂಜೆ ಶ್ರೀರಂಗಪಟ್ಟಣದ ಬೇಬಿಬೆಟ್ಟಕ್ಕೂ ಸಂಸದೆ ಸುಮಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ನೂರಾರು ರೈತ ಸಂಘದ ಕಾರ್ಯಕರ್ತರು ಜಮಾಯಿಸಿದ್ರು. ನಮ್ಮ ಬದುಕು ಗಣಿಗಾರಿಕೆಯಿಂದಲೇ ನಡೆಯುತ್ತಿದೆ. ಸಾವಿರಾರು ಜನ ಗಣಿಗಾರಿಕೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಕೈಕುಳಿ ಗಣಿಗಾರಿಕೆಗೆ ಅನುಮತಿ ಕೊಡುವಂತೆ ಮನವಿ ಮಾಡಿದರು. ಗಣಿ ಮಾಲೀಕರು ಕೂಡ ಮನವಿ ಸಲ್ಲಿಸಿದ್ರು. ಗಣಿಗಾರಿಕೆಯಿಂದ ಡ್ಯಾಮ್‍ಗೆ ಅಪಾಯ ಇದ್ಯಾ ಇಲ್ವಾ..? ಅಂತ ಟ್ರಯಲ್ ಬ್ಲಾಸ್ಟ್ ನಲ್ಲಿ ಸ್ಪಷ್ಟತೆ ಸಿಗಲಿದೆ. ವಿರೋಧಿಸುತ್ತಿರುವ ರೈತರ ಮನವೊಲಿಸ್ತೇನೆ ಎಂದರು.

    ಈ ಮದ್ಯೆ, ಸುಮಲತಾ ಭೇಟಿ ಬಳಿಕ ಮಂಡ್ಯದಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಸ್ಥಳ ಪರಿಶೀಲಿಸಿ, ಬರಬೇಕಾಗಿರುವ ರಾಜಧನ ಹಾಗೂ ದಂಡ ವಸೂಲಾತಿ ಬಗ್ಗೆ ಜುಲೈ 30ರೊಳಗೆ ವರದಿ ಸಲ್ಲಿಸಲು ಗಣಿ ಸಚಿವ ಮುರುಗೇಶ್ ನಿರಾಣಿ ಆದೇಶಿಸಿದ್ದಾರೆ.

    ಮಾಜಿ ಸಿಎಂ ಹೆಚ್‍ಡಿಕೆ ವಿರುದ್ಧ ಮತ್ತೆ ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ. ಕಣ್ಣೀರು ಹಾಕುವುದು ಯಾರು ಎಂಬುದು ಜನರಿಗೆ ಗೊತ್ತು. ಪ್ರತಿ ಚುನಾವಣೆಯಲ್ಲೂ ಕಣ್ಣೀರು ಹಾಕುವ ಕಾರ್ಡ್ ಪ್ಲೇ ಆಗಿದ್ದಾರೆ. ನನಗೆ ಕಣ್ಣೀರ ರಾಜಕೀಯ ಬೇಕಿಲ್ಲ. ನನ್ನ ವಿರುದ್ಧ ಸೊಂಟದ ಭಾಷೆ ಬಳಸಿದ್ದಾರೆ. ವೀಡಿಯೋ, ಫೋಟೋ ಎಡಿಟ್ ಮಾಡೋರು ಮಾಡಲಿ. ಇದಕ್ಕೆಲ್ಲ ನಾನು ಜಗ್ಗಲ್ಲ, ಕುಗ್ಗಲ್ಲ ಎಂದು ತಿರುಗೇಟು ಕೊಟ್ಟರು.

    ಸುಮಲತಾ ಬಗ್ಗೆ ಮಾತನಾಡಲು ಮಾಜಿ ಸಿಎಂ ಕುಮಾರಸ್ವಾಮಿ ನಿರಾಕರಿಸಿದ್ದಾರೆ. ಚನ್ನಪಟ್ಟಣದಲ್ಲಿ ಪ್ರತಿಕ್ರಿಯೆ ಕೇಳಿದಾಗ, ದೊಡ್ಡವರ ವಿಷಯವನ್ನ ನನ್ನ ಬಳಿ ಕೇಳಬೇಡಿ. ಮಾತನಾಡುವ ವಿಚಾರ ಏನು ಇಲ್ಲ ಅಂದ್ರು. ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಮಾತನಾಡಿ, ನಿಮ್ಮ ಕಿತ್ತಾಟ, ಒಳಜಗಳದಿಂದ ರಾಜ್ಯವನ್ನ ಹಾಳು ಮಾಡಬೇಡಿ ಅಂದ್ರೆ, ಸಚಿವ ಬಿಸಿ ಪಾಟೀಲ್, ನಿಮ್ಮ ರಾಜಕೀಯಕ್ಕೆ ಕನ್ನಂಬಾಡಿ ಕಟ್ಟೆ ಬೇಕಿತ್ತಾ ಅಂದ್ರು.

  • ಪುಣೆಯ ಟೆಕ್ನಿಕಲ್ ಟೀಂ ಗಣಿಗಾರಿಕೆ ಬಂದ್ ಮಾಡುವಂತೆ ಸೂಚನೆ ನೀಡಿತ್ತು: ರಮೇಶ್‍ಬಾಬು ಬಂಡಿಸಿದ್ದೇಗೌಡ

    ಪುಣೆಯ ಟೆಕ್ನಿಕಲ್ ಟೀಂ ಗಣಿಗಾರಿಕೆ ಬಂದ್ ಮಾಡುವಂತೆ ಸೂಚನೆ ನೀಡಿತ್ತು: ರಮೇಶ್‍ಬಾಬು ಬಂಡಿಸಿದ್ದೇಗೌಡ

    ಮಂಡ್ಯ: ನಾನು ಎರಡು ಬಾರಿ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕನಾಗಿದ್ದೆ. ನಮ್ಮ ಕಾಲದಲ್ಲೂ ಕೆಆರ್‌ಎಸ್ ಅಣೆಕಟ್ಟೆ ಬಗ್ಗೆ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದವು ಆಗ ಪುಣೆಯಿಂದ ಬಂದಿದ್ದಂತಹ ಟೆಕ್ನಿಕಲ್ ಟೀಂ ಕೆಆರ್‌ಎಸ್ ಬಳಿ ಗಣಿಗಾರಿಕೆ ಬಂದ್ ಮಾಡಿಸುವಂತೆ ಸೂಚನೆ ನೀಡಿತ್ತು ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಮಾಜಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಹೇಳಿದ್ದಾರೆ.

    ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್‍ಬಾಬು ಬಂಡಿಸಿದ್ದೇಗೌಡರು, ನಾನು ಶಾಸಕನಾಗಿದ್ದಾಗ ಟೆಕ್ನಿಕಲ್ ಟೀಂ ಮಾಡಿ ಅದನ್ನು ಸರ್ವೆ ಮಾಡಿಸಲಾಗಿತ್ತು. ಪುಣೆಯಿಂದ ಬಂದಿದ್ದಂತಹ ಟೆಕ್ನಿಕಲ್ ಟೀಂ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಬಂದ್ ಮಾಡಿಸಬೇಕು ಎಂದು ಸೂಚಿಸಿತ್ತು. ಅಂದಿನ ಜಿಲ್ಲಾಧಿಕಾರಿಗಳು ಅದರ ಬಗ್ಗೆ ಕ್ರಮ ತೆಗೆದುಕೊಂಡಿದ್ದರು. ನಂತರ ಸರ್ಕಾರ ಬದಲಾವಣೆ ಆಗಿದೆ. ಅದರ ನಿಲುವು ಬದಲಾವಣೆ ಆಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ: ಸುಮಲತಾ

    ಈಗ ಮತ್ತೆ ಕೆಆರ್‌ಎಸ್ ಎದುರಾಗುವ ಸಮಸ್ಯೆ ಬಗ್ಗೆ ಚರ್ಚೆ ಆರಂಭವಾಗಿದೆ. ಸರ್ಕಾರ ಒಂದು ಟೆಕ್ನಿಕಲ್ ಟೀಂ ಮಾಡಲಿ. ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಿ. ಇದು ಬಿಟ್ಟು ಅನವಶ್ಯಕವಾಗಿ ರಸ್ತೆಯಲ್ಲಿ ನಿಲ್ಲುವುದರಿಂದ ಜನಸಾಮಾನ್ಯರು ನಮ್ಮ ಮೇಲೆ ಇಟ್ಟ ಗೌರವ ಕಡಿಮೆ ಆಗುತ್ತೆ. ಸಣ್ಣಪುಟ್ಟ ಸಮಸ್ಯೆ ಬಿಟ್ಟರೆ ಕೆಆರ್‍ಎಸ್‍ನಲ್ಲಿ ಬೇರೆ ಸಮಸ್ಯೆಗಳಿಲ್ಲ. ಮುಂದೆ ಇದೇ ಸಣ್ಣಪುಟ್ಟ ಸಮಸ್ಯೆ ದೊಡ್ಡದಾಗಬಾರದು ಎಂದು ರಮೇಶ್‍ಬಾಬು ಬಂಡಿಸಿದ್ದೇಗೌಡ ತಿಳಿಹೇಳಿದರು.

  • ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ: ಸುಮಲತಾ

    ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ: ಸುಮಲತಾ

    – 10 ವರ್ಷದ ನಂತರ ಅಪಾಯವಾದರೆ ಹೊಣೆ ಯಾರು?
    – ನನ್ನ ಹೇಳಿಕೆಯನ್ನು ತಿರುಚಿ, ತೇಜೋವಧೆ

    ಮಂಡ್ಯ: ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಮಂಡ್ಯದ ಕೆಆರ್‌ಎಸ್ ಕಾವೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ ಅಂಬರೀಶ್, ಡ್ಯಾಂ ಎಷ್ಟು ಲೈನ್ ಇದೆ, ಎಷ್ಟು ವಿಸ್ತಾರವಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲಿ ಸಣ್ಣಪುಟ್ಟ ಬಿರುಕು ಕೂಡ ಆಗುತ್ತೆ. ಏರ್ ಕ್ರ್ಯಾಕ್ ಅಂತಾ ಕೂಡ ಹೇಳ್ತಾರೆ. ಗ್ರೌಟಿಂಗ್ ಮೂಲಕ ಅದನ್ನು ಮುಚ್ಚುತ್ತಾರೆ. ಆದರೆ ಬಿರುಕಾಗಿರೋದು ಸತ್ಯ, ಅದನ್ನು ಗ್ರೌಟಿಂಗ್ ಮೂಲಕ ಮುಚ್ಚುತ್ತಿದ್ದಾರೆ ಎಂದು ತಿಳಿಸಿದರು.

    ಅಪಾಯ ಪ್ರಮಾಣ ಪತ್ರದ ಬಗ್ಗೆ ಸರ್ಟಿಫಿಕೇಟ್ ಕೊಡುವ ಅಧಿಕಾರಿ ನಾವಲ್ಲ ಅಂತಾ ನೀರಾವರಿ ಅಧಿಕಾರಿಗಳು ಹೇಳಿದ್ದಾರೆ. ಸರ್ಟಿಫಿಕೇಟ್ ಕೊಡಲೂ ನಮ್ಮಲ್ಲಿ ಯಾರಿಗೂ ಅಧಿಕಾರವಿಲ್ಲ. ಅವರದ್ದೆ ಆದ ಟೆಕ್ನಿಕಲ್ ಕಮಿಟಿ ಬರಬೇಕಿದೆ. ಕ್ರ್ಯಾಕ್ ಆಗುವ ಮುಂಚೆ ಎಚ್ಚರಿಕೆ ವಹಿಸಬೇಕಿದೆ. ಕೊರೊನಾ ಬಂದು 10 ದಿನದ ನಂತರ ಆಸ್ಪತ್ರೆಗೆ ಹೋದ್ರೆ ಏನು ಪ್ರಯೋಜನ? ಮೊದಲೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಹಾಗೆ ಇದು ಕೂಡ ಇವತ್ತು, ನಾಳೆ ಅಪಾಯ ಇಲ್ಲ. ಐದು, ಹತ್ತು ವರ್ಷದ ನಂತರ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

    ಕೆಆರ್‍ಎಸ್ ಅಣೆಕಟ್ಟೆಯ 20 ಕಿ.ಮೀ. ರೆಡಿಯಸ್ ನಲ್ಲಿ ಗಣಿಗಾರಿಕೆ ನಡೆಯಬಾರದು. ಈಗಾಗಲೇ ಈ ಬಗ್ಗೆ ಮೈನಿಂಗ್ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ನಾನು ಲೀಗಲ್ ಆಗಿರೋ ಗಣಿಗಾರಿಕೆ ರದ್ದು ಮಾಡಿ ಅಂತಾ ಹೇಳಿಲ್ಲ. ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಾಗುವ ರೀತಿ ಇದ್ದರೆ ಗಣಿಗಾರಿಕೆ ಬೇಡ ಎಂದು ಹೇಳಿದ್ದೇನೆ. 2019 ರಲ್ಲೇ ಸಂಸತ್‍ನಲ್ಲಿ ಈ ಪ್ರಸ್ತಾಪವನ್ನು ಇಟ್ಟಿದ್ದೆ. ಆರಂಭದಿಂದಲೂ ನನ್ನ ಹೇಳಿಕೆಯನ್ನು ತಿರುಚಲಾಗುತ್ತಿದೆ. ನನ್ನ ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ ಎಂದು ವಿರೋಧಿಸಿದವರಿಗೆ ತಿರುಗೇಟು ನೀಡಿದರು.

    ಅಧ್ಯಯನ ನಡೆಯಬೇಕು: ಪೊಲೀಸ್, ಮೈನಿಂಗ್, ಡ್ಯಾಂ ಸೆಕ್ಯೂರಿಟಿ ಟೀಂ ಎಲ್ಲರೂ ಕೂಡ ಒಟ್ಟಿಗೆ ಸೇರಿ ಕೆಲಸ ಮಾಡಬೇಕು. ಕಣ್ಣಿಗೆ ಕಾಣುವ ರೀತಿ ಬಿರುಕು ಕಾಣುತ್ತಿಲ್ಲ. ಇದರ ಬಗ್ಗೆ ವಿಸ್ತ್ರತ ಅಧ್ಯಯನ ಆಗಬೇಕಿದೆ. ಸಣ್ಣ ಪುಟ್ಟ ಬಿರುಕು ಆಗತ್ತೆ. ಬಿರುಕೇ ಆಗಿಲ್ಲ ಅನ್ನೋದು ಅಸತ್ಯ. ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗ ಸಣ್ಣಪುಟ್ಟ ಬಿರುಕು ಮುಂದಿನ ದಿನಗಳಲ್ಲಿ ಬಹಳ ಮುಖ್ಯವಾಗುತ್ತದೆ. ಅಪಾಯ ಪ್ರಮಾಣ ಪತ್ರ ನಾವು ಬೀಡಲು ಸಾಧ್ಯವಿಲ್ಲ ಅಂತಾ ಅಧಿಕಾರಿಗಳು ಹೇಳುತ್ತಾರೆ. ಜಾರ್ಖಂಡ್ ತಂಡ ಟ್ರಯಲ್ ಬ್ಲಾಸ್ಟ್ ಪರೀಕ್ಷೆ ಆಗೋ ವರೆಗೆ ನಾವು ಕಾಯಬೇಕು. ಮೈಸೂರು ಅರಸರು ಹಣವಿಲ್ಲದ ಸಮಯದಲ್ಲಿ ಕಟ್ಟಿದ್ದಾರೆ. ಇವತ್ತು ಅಪಾಯವಿಲ್ಲ ಎಂದರೂ ಮುಂದಿನದಿನ ಇರೋದಿಲ್ವಾ? ಅದನ್ನು ಕಾಪಾಡಿಕೊಳ್ಳಬೇಕು ಅಂತಾ ಹೇಳೋದು ತಪ್ಪಾ? ನಾನು ಕಾಳಜಿ ವಹಿಸೋದೇ ತಪ್ಪಾ. ಗಣಿಗಾರಿಕೆ ಟ್ರಯಲ್ ಬ್ಲಾಸ್ಟ್ ಪರೀಕ್ಷೆ ನಡೆಯುವವರೆಗೂ ನಿಲ್ಲಿಸಬೇಕು. ನಾನು ಸಂಬಂಧ ಪಟ್ಟ ಸಚಿವರ ಜತೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ:ವಿಧಾನಸೌಧಕ್ಕೆ ಇರುವ ಸೇಫ್ಟಿ KRSಗೆ ಇಲ್ಲ: ಸುಮಲತಾ ಆತಂಕ

    ಪಾರ್ಟಿ ನಿಷೇಧಿಸಿ: ಗಣಿಗಾರಿಕೆ ಸಂಪೂರ್ಣ ವಾಗಿ ನಿಷೇಧಿಸಿ ಅಂತಾ ನಾನು ಹೇಳೋದಿಲ್ಲ. ಅದರೆ ಅಣೆಕಟ್ಟೆಗೆ ಯಾವುದೇ ಧಕ್ಕೆಯಾಗಬಾರದು. ಅದಕ್ಕೆ ಸಂಬಂಧಿಸಿದ ಕ್ರಮ ಕೈಗೊಳ್ಳಬೇಕು. ಭದ್ರತಾ ಲೋಪದ ಗಮನಹರಿಸಬೇಕಿದೆ. ಪೊಲೀಸ್ ಇಲಾಖೆ, ನೀರಾವರಿ ನಿಗಮ, ಗಣಿ ಇಲಾಖೆ ಡ್ಯಾಂ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳವೇಕು. ಅಧಿಕಾರಿಗಳಾಗಲಿ ಎಂಪಿ ಆಗಲಿ, ಎಂಎಲ್‍ಎ ಆಗಲಿ ಯಾಕೆ ಪಾರ್ಟಿ ನಡೆಸಬೇಕು.? ಅವರಿಗೂ ಕ್ರಮ ಕೈಗೊಳ್ಳಬೇಕು. ಕಾವೇರಿ ಹಿನ್ನಿರಿನಲ್ಲಿ ಪಾರ್ಟಿ ಮಾಡಬಾರದು. ಇದನ್ನು ತಡೆಯುವ ಜವಾಬ್ದಾರಿ ಯಾರದ್ದೂ ಅನ್ನೋದೇ ಪ್ರಶ್ನೆ. ಹಾಗಾಗಿ ಇಲ್ಲಿ ಎಲ್ಲಾ ಇಲಾಖೆಗಳ ಜವಾಬ್ದಾರಿಯೂ ಇದೆ. ನನ್ನ ಬಳಿ ಇದ್ದ ತಾಂತ್ರಿಕ ಆಧಾರದ ಮೇಲೆ ನಾನು ಹೇಳಿಕೆ ನೀಡಿದ್ದೆ. ಜೊತೆಗೆ ಕೆಲವರ ಸಲಹೆ ಹಿನ್ನೆಲೆಯಲ್ಲಿ ಅಣೆಕಟ್ಟೆ ಸುರಕ್ಷತೆಯ ಆತಂಕ ವ್ಯಕ್ತಪಡಿಸಿದ್ದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆಗೂ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಗೆ ತಂದಿದ್ದಕ್ಕೂ ಏನು ಸಂಬಂಧ: ಸುಮಲತಾ

    ಮುಂದೆ ದೊಡ್ಡ ಹೋರಾಟ: ಈ ಬಗ್ಗೆ ನನ್ನದು ಒಂಟಿ ಧ್ವನಿ ಅಲ್ಲ. ಜವಾಬ್ದಾರಿ ಇರುವ ಎಲ್ಲಾರೂ ನನ್ನ ಜೊತೆ ಇರುತ್ತಾರೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಹೋರಾಟವಾಗಲಿದೆ. ಕೆಆರ್‍ಎಸ್‍ಗಿಂತ ದೊಡ್ಡದು ಗಣಿಗಾರಿಕೆಯಲ್ಲ. ತಾಂತ್ರಿಕ ಟೀಂ ಟ್ರಯಲ್ ಬ್ಲಸ್ಟ್ ಪರೀಕ್ಷೆ ನಡೆಸಲಿದೆ. ರೈತರು ಕೂಡ ಪರೀಕ್ಷೆ ನಡೆಸುವವರೆಗೆ ತಾಳ್ಮೆ ಇಟ್ಟುಕೊಳ್ಳಬೇಕು. ಮೊದಲು ಜಾರ್ಖಾಂಡ್ ಟೀಂ ಬ್ಲಾಸ್ಟ್ ಪರೀಕ್ಷೆ ನಡೆಸಲಿ ನೋಡೋಣ. ನಾನು ಬಿರುಕಿನ ಬಗ್ಗೆ ಹೇಳಿದ ಮೇಲೆಯೇ ವಿವಾದ ಆಗಿದ್ದು. ನಾನು ಸುಮ್ಮನೆ ಇರಬಹುದಾಗಿತ್ತು ಆಲ್ವಾ? ನಾನೇ ಎಲ್ಲಾ ಸಾಧಿಸಬೇಕು ಅಂತಾ ಹೇಳುತ್ತಿಲ್ಲ. ನನ್ನ ಧ್ವನಿ ಇಲ್ಲಿಗೆ ಕೊನೆಯಾಗುವುದಿಲ್ಲ. ಮುಂದಿನ ದಿನಗಳಲ್ಲೂ ಹೋರಾಟ ನಡೆಯಲಿದೆ. ಬಿರುಕು ಬಿಟ್ಟಿದೆ ಎಂದು ಹೇಳಿದಕ್ಕೆ ಈಗ ದುರಸ್ತಿ ಕೆಲಸ ಮಾಡುತ್ತಿದ್ದಾರೆ. ಶಾಸಕರ ನಟೋರಿಯಸ್ ಅನ್ನೋ ಪದ ಹಾಸ್ಯಾಸ್ಪದ ಪದ. ಈ ಬಗ್ಗೆ ಇನ್ನೂ ಅತಂಕ ದೂರವಾಗಿಲ್ಲ. ನನ್ನ ಆತಂಕ ಇನ್ನೂ ಹಾಗೆ ಇದೆ. ನನ್ನ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

  • ಕಣ್ಣೀರು ಹಾಕಿ ಚುನಾವಣಾ ಪ್ರಚಾರ ಮಾಡೋರು ಯಾರೆಂದು ರಾಜ್ಯದ ಜನತೆಗೆ ಗೊತ್ತಿದೆ: ಸುಮಲತಾ

    ಕಣ್ಣೀರು ಹಾಕಿ ಚುನಾವಣಾ ಪ್ರಚಾರ ಮಾಡೋರು ಯಾರೆಂದು ರಾಜ್ಯದ ಜನತೆಗೆ ಗೊತ್ತಿದೆ: ಸುಮಲತಾ

    – ಇದು ಸುಮಲತಾv/sಜೆಡಿಎಸ್ ಅಲ್ಲ, ಸುಮಲತಾv/sಅಕ್ರಮ ಗಣಿಗಾರಿಕೆ
    – ಬಿಲೋದಿ ಬೆಲ್ಟ್ ಭಾಷೆ ಶುರುವಾಗಿದೆ

    ಮೈಸೂರು: ಕೆಆರ್‍ಎಸ್ ಬಿರುಕಿನ ವಿಚಾರ ಸುಮಲತಾ ವರ್ಸಸ್ ಜೆಡಿಎಸ್ ಅಲ್ಲ. ಬದಲಾಗಿ ಸುಮಲತಾ ವರ್ಸಸ್ ಅಕ್ರಮ ಗಣಿಗಾರಿಕೆ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ನನ್ನ ಮಾತಿಗೆ ಹೆದರಿ ಪ್ರಕರಣ ಡೈವರ್ಟ್ ಮಾಡುವ ಯತ್ನ ಮಾಡ್ತಿದ್ದಾರೆ. ಇದು ಜನರಿಗೆ ಅರ್ಥವಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಕಣ್ಣೀರು ಹಾಕಿ ಮತ ಪಡೆಯೋದು, ಕಣ್ಣೀರು ಹಾಕಿ ಚುನಾವಣಾ ಪ್ರಚಾರ ಮಾಡೋದು ಯಾರ ಕೆಲಸ ಅಂತ ರಾಜ್ಯದ ಜನರಿಗೆ ಗೊತ್ತಿದೆ. ನನಗೆ ಅಂತಹ ಕಣ್ಣೀರಿನ ಪಾಲಿಟಿಕ್ಸ್ ಬೇಕಾಗಿಲ್ಲ. ನನ್ನ ಮೇಲಿನ ಆರೋಪಗಳ ಅಸ್ತ್ರಗಳು ಮುಗಿದಿವೆ. ಹೀಗಾಗಿ ಈಗ ಸೊಂಟದ ಕೆಳಗಿನ ಭಾಷೆ ಶುರು ಮಾಡಿದ್ದಾರೆ. ಫೋಟೋ ಎಡಿಟ್, ವೀಡಿಯೋ ಎಡಿಟ್ ಮಾಡಲಿ. ಇದು ಅವರಿಗೆ ಹೊಸದಲ್ಲ. ಹೀಗೆ ಮಾಡಿ ನನಗೆ ಹೆದರಿಸು ವ್ಯರ್ಥ ಪ್ರಯತ್ನ ಸಾಗಿದೆ. ನಾನು ಇದಕ್ಕೆ ಹೆದರಲ್ಲ, ಕುಗ್ಗಲ್ಲ ಎಂದು ಎಚ್ಚರಿಸಿದ್ದಾರೆ.

    ಜಲಾಶಯದ ಬಿರುಕಿನ ವಿಚಾರ ಮಾತನಾಡಿದ್ರೆ ಅಂಬರೀಶ್ ಪ್ರಾರ್ಥಿವ ಶರೀರದ ವಿಚಾರ ಮಾತಾಡುತ್ತಾರೆ. ಇದೇ ವಿಚಾರ ಅವರು ಮಾತಾಡಿ ಮಾತಾಡಿ ಚುನಾವಣೆಯಲ್ಲಿ ಪಾಠ ಕಲಿತಿದ್ದಾರೆ. ಇನ್ನೂ ಮಾತಾಡಲಿ ಬಿಡಿ. ಕೆಆರ್ ಎಸ್ ವಿಚಾರದಲ್ಲಿ ಧ್ವನಿ ಎತ್ತಿದ್ದಕ್ಕೆ ನಾನು ಯಾಕೆ ಕ್ಷಮೆ ಕೇಳಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಧಾನಸೌಧಕ್ಕೆ ಇರುವ ಸೇಫ್ಟಿ KRSಗೆ ಇಲ್ಲ: ಸುಮಲತಾ ಆತಂಕ

    ಅಕ್ರಮ ಗಣಿಗಾರಿಕೆ ಪರ ಇರುವವರು ಮಹಿಳೆಯನ್ನು ಅವಮಾನಿಸುವವರು ಮಂಡ್ಯ ಜನರ ಕ್ಷಮೆ ಕೇಳಲಿ. ಮೊನ್ನೆ ಜಲಾಶಯದ ಬಿರುಕಿನ ವಿಚಾರದಲ್ಲಿ ಬಂದಿರೋ ರೀಪೋರ್ಟ್ ತಜ್ಞರ ವರದಿಯಲ್ಲ. ಅದು ಅಧಿಕಾರಿಗಳ ವರದಿ ಅಷ್ಟೆ ಎಂದರು.