Tag: sumalatha amabarish

  • ಸುಮಲತಾ ಅಂಬರೀಶ್‌ಗೆ ಬಿಜೆಪಿ ಪಕ್ಷ ಸೇರ್ಪಡೆ ಆಹ್ವಾನ ನೀಡಿದ್ದೇವೆ: ಅಶ್ವಥ್ ನಾರಾಯಣ

    ಸುಮಲತಾ ಅಂಬರೀಶ್‌ಗೆ ಬಿಜೆಪಿ ಪಕ್ಷ ಸೇರ್ಪಡೆ ಆಹ್ವಾನ ನೀಡಿದ್ದೇವೆ: ಅಶ್ವಥ್ ನಾರಾಯಣ

    ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Amabarish) ಅವರನ್ನು ಬಿಜೆಪಿಗೆ (BJP) ಆಹ್ವಾನ ಮಾಡಲಾಗಿದೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Ashwath Narayan) ತಿಳಿಸಿದ್ದಾರೆ.

    ಸುಮಲತಾ ಅಂಬರೀಶ್ ಬಿಜೆಪಿಯ ಅಸೋಸಿಯೇಟ್ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸುಮಲತಾ ಅಂಬರೀಶ್ ನಮ್ಮ ಪಕ್ಷಕ್ಕೆ ಅಸೋಸಿಯೇಟ್ ಆದರೆ ಸಂತೋಷವೇ. ಅದನ್ನು ನಾವು ಸ್ವಾಗತ ಮಾಡುತ್ತೇವೆ. ಈಗಾಗಲೇ ಸುಮಲತಾ ಅವರಿಗೆ ಬಿಜೆಪಿಗೆ ಆಹ್ವಾನ ಕೊಟ್ಟಿದ್ದೇವೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಖಚಿತ: ಧ್ರುವನಾರಾಯಣ್

    ಸುಮಲತಾ ಅವರು ಸ್ವತಂತ್ರವಾಗಿ ಗೆದ್ದಿರುವ ಅಭ್ಯರ್ಥಿ. ಅವರು ಯಾರಿಗೆ ಬೇಕಾದರೂ ಬೆಂಬಲ ಕೊಡಬಹುದು. ಇದರಿಂದ ಡಿಕೆಶಿಗೆ ಏನು ಸಮಸ್ಯೆ? ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಬಹಿರಂಗವಾಗಿ ಹೇಳಲಿ ಎಂದು ಟಾಂಗ್ ನೀಡಿದರು.

    ನಾವೇ ಸುಮಲತಾ ಅವರಿಗೆ ಬಿಕೆಪಿ ಪಕ್ಷಕ್ಕೆ ಆಹ್ವಾನ ಕೊಟ್ಟಿದ್ದೇವೆ. ಬೆಂಬಲಿಗರ ಜೊತೆ ಮಾತನಾಡಿ, ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಅವರನ್ನು ಪ್ರೀತಿಯಿಂದ ಸ್ವಾಗತ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: 4 ವರ್ಷಗಳ ಬಳಿಕ ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ಕನಿಷ್ಠ ಉಷ್ಣಾಂಶ ಕುಸಿತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಕ್ರಮ ಗಣಿಗಾರಿಕೆ ನಿಲ್ಲಿಸುವುದು ನನ್ನ ಹೋರಾಟ: ಸುಮಲತಾ

    ಅಕ್ರಮ ಗಣಿಗಾರಿಕೆ ನಿಲ್ಲಿಸುವುದು ನನ್ನ ಹೋರಾಟ: ಸುಮಲತಾ

    -ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ

    ಬೆಂಗಳೂರು: ನನ್ನ ಹೋರಾಟ ನನ್ನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವುದಾಗಿದೆ. ನನ್ನ ಹೋರಾಟದತ್ತ ನನ್ನ ಗಮನ ಇರುತ್ತಷ್ಟೇ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಇದನ್ನೂ ಓದಿ: ಸುಮಲತಾ ಬೆನ್ನಲ್ಲೇ ಅಕ್ರಮ ಗಣಿಗಳ ಮೇಲೆ ತಹಶೀಲ್ದಾರ್ ದಾಳಿ

    ರಾಜಭವನ ಎದುರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಮಸ್ಯೆ ಸೃಷ್ಟಿಸಿಲ್ಲ, ಯಾರು ಸಮಸ್ಯೆ ಸೃಷ್ಟಿಸಿದಾರೋ ಅವರು ಅರ್ಥ ಮಾಡ್ಕೊಂಡ್ರೆ ಸಾಕು. ಅಕ್ರಮ ಗಣಿಗಾರಿಕೆ ನಿಲ್ಲಿಸುವ ವಿಚಾರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಕಷ್ಟ ಅಂತ ನನಗೂ ಗೊತ್ತು. ಆದರೆ ನನ್ನ ಪ್ರಯತ್ನ ನಾನು ಮಾಡುತ್ತೇನೆ. ಸಂಸತ್ ನಲ್ಲೂ ಮಂಡ್ಯ ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪ ಮಾಡ್ತೇನೆ. ಈ ಸಂಬಂಧ ಸಿಎಂ ಅವರನ್ನೂ, ಗಣಿ ಸಚಿವರನ್ನೂ ಭೇಟಿ ಮಾಡ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 5ನೇ ತರಗತಿ ಮಕ್ಕಳಿಗೆ ಶಾಲೆಯಿಂದಲೇ ಉಚಿತ ಕಾಂಡೋಮ್- ಪೋಷಕರು ಆಕ್ರೋಶ

    ಅಕ್ರಮ ಗಣಿಗಾರಿಕೆ ಬಗ್ಗೆ ಎಲ್ಲರ ಗಮನಕ್ಕೆ ತಂದಿದ್ದೇನೆ. ನನ್ನ ಹೋರಾಟ ನನ್ನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವುದಾಗಿದೆ. ನನ್ನ ಹೋರಾಟದತ್ತ ನನ್ನ ಗಮನ ಇರುತ್ತದೆ. ನಾನು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ಅಂಬರೀಷ್ ಅವರ ಲಕ್ಷಾಂತರ ಅಭಿಮಾನಿಗಳಿಗೂ ನೋವಾಗಿದೆ. ಆದರೆ ನಾವು ಅವರ ದಾರಿಯಲ್ಲಿ ಹೋಗುವುದು ಬೇಡ ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತೇನೆ ಎಂದು ಮನವಿ ಮಾಡಿದ್ದಾರೆ.

  • ರೆಬೆಲ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್- ಮುಂದಿನ ವರ್ಷ ಶುರು ಅಭಿಷೇಕ್ ಸಿನಿ ಸೌಂಡ್!

    ರೆಬೆಲ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್- ಮುಂದಿನ ವರ್ಷ ಶುರು ಅಭಿಷೇಕ್ ಸಿನಿ ಸೌಂಡ್!

    ಬೆಂಗಳೂರು: ಅದೊಂದು ಕಾಲವಿತ್ತು. ತಿಂಗಳಿಗೆ ಎರಡೆರಡು ಅಂಬರೀಶ್ ಸಿನಿಮಾಗಳು ರಿಲೀಸ್ ಅಗುತ್ತಿದ್ದವು. ಆ ಎರಡೂ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದವು. ಅದು ರೆಬೆಲ್ ಸ್ಟಾರ್ ಗಿದ್ದ ಅಭಿಮಾನಿಗಳ ಪ್ರೀತಿ. ಈಗ ಅದೇ ಪ್ರೀತಿಯನ್ನು ಪಡೆಯಲು ರೆಡಿಯಾಗುತ್ತಿದ್ದಾರೆ ಅಂಬಿಯ ಏಕೈಕ ಮಗ ಅಭಿಷೇಕ್.

    ಹೌದು. ಇನ್ನು ಕೆಲವು ವರ್ಷಗಳಲ್ಲಿ ಅಭಿಷೇಕ್ ಹೀರೋ ಆಗಿ ಎಂಟ್ರಿ ಕೊಡುವುದು ಖಚಿತವಾಗಿದೆ. ದೊಡ್ಡ ದೊಡ್ಡ ನಿರ್ಮಾಪಕರು ಅಂಬಿ ಮನೆ ಮುಂದೆ ಜೂನಿಯರ್ ರೆಬೆಲ್ ಸ್ಟಾರ್ ಕಾಲ್ ಶಿಟ್ ಗಾಗಿ ಕಾದು ಕುಳಿತ್ತಿದ್ದಾರೆ.


    ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ದಂಪತಿ ಪ್ರೀತಿಯ ಪುತ್ರನಾದ ಅಭಿ, ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಮ್ಮಿ. ಕೆಲವು ಸಿನಿಮಾ ಪಾರ್ಟಿಗಳಲ್ಲಿ ಅಪ್ಪ ಅಮ್ಮನ ಜೊತೆ ಪೋಸ್ ಕೊಟ್ಟಿದ್ದು ಬಿಟ್ಟರೆ ಗಾಂಧಿನಗರದಿಂದ ಈ ಹುಡುಗ ಬಲು ದೂರ ದೂರ. ಅಂಬಿ ಮಗನೂ ಹೀರೋ ಆಗುತ್ತಾನಾ ಎನ್ನುವ ಪ್ರಶ್ನೆ ಅಗಾಗ ಕೇಳುತ್ತಿದ್ದವು. ಈಗ ಆ ಪ್ರೆಶ್ನೆಗೆ ಸರಿಯಾದ ಉತ್ತರ ಸಿಗುವ ಕಾಲ ಸನಿಹವಾಗಿದೆ.

    ಕಥೆ-ಚಿತ್ರಕಥೆ ರೆಡಿ ಮಾಡಿಕೊಳ್ಳದೆಯೇ, ನಿರ್ದೇಶಕ ಯಾರೆಂಬುದನ್ನು ಕನ್ಫರ್ಮ್ ಮಾಡಿಕೊಳ್ಳದೆಯೇ ಪ್ರೋಡ್ಯೂಸರ್ ಗಳು ಅಂಬಿ ಪುತ್ರ ಅಭಿಷೇಕ್ ಗಾಗಿ ಬಲೆ ಬೀಸಿದ್ದಾರೆ. ಸರ್ ನಿಮ್ಮ ಮಗನ್ನ ನಮ್ಮ ಬ್ಯಾನರ್‍ನಲ್ಲಿ ಇಂಟ್ರೊಡ್ಯೂಸ್ ಮಾಡಿ. ಗ್ರ್ಯಾಂಡ್ ಆಗಿ ಲಾಂಚ್ ಮಾಡ್ತೇವೆ ಎಂದು ಬೇಡಿಕೆ ಇಡುತ್ತಿದ್ದಾರಂತೆ. ಗಾಂಧಿನಗರ ಆಫ್ ದಿ ರೆರ್ಕಾಡ್ ಸಮಾಚಾರವೇನಂದ್ರೆ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾದಲ್ಲಿ ಅಭಿಷೇಕ್ ನಟಿಸುತ್ತಾರೆ ಅನ್ನೊ ಸುದ್ದಿ.

    ಪ್ರಿನ್ಸ್, ಐರಾವತ ಸೇರಿದಂತೆ ಅನೇಕ ಅದ್ಧೂರಿ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಸಂದೇಶ್ ನಾಗರಾಜ್, ಅಭಿಷೇಕ್‍ಗಾಗಿ ಸಿನಿಮಾ ಮಾಡಲಿದ್ದಾರಂತೆ. ಅಂಬರೀಶ್ ಜೊತೆ ಒಂದು ಸುತ್ತಿನ ಮಾತುತೆಯನ್ನೂ ಕೂಡ ಸಂದೇಶ್ ನಾಗರಾಜ್ ಮಾಡಿದ್ದಾರಂತೆ. ಇಂತದೊಂದು ಸಮಾಚಾರ ಸದ್ಯ ಗಾಂಧಿನಗರದ ತುಂಬಾ ಸದ್ದು ಮಾಡುತ್ತಿದೆ. ಅಭಿಷೇಕ್ ಅವರ ಮೊದಲ ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನು ಖ್ಯಾತ ನಿರ್ದೇಶಕರಾದ ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ವಹಿಸಿಕೊಳ್ಳುವ ಸಾಧ್ಯತೆ ಇದ್ದು, ಬರುವ ಜನವರಿ ತಿಂಗಳು ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

    ಇಂತಹ ಸುದ್ದಿ ಹಬ್ಬಿರುವಾಗಲೇ ಅಭಿಷೇಕ್ ಜಿಮ್‍ನಲ್ಲಿ ಮತ್ತು ಮಾರ್ಷಲ್ ಆರ್ಟ್‍ನಲ್ಲಿ ಕಸರತ್ತು ಮಾಡುತ್ತಿರುವ ಕೆಲ ಫೋಟೋಗಳು ವೈರಲ್ ಆಗಿವೆ. ಈ ಫೋಟೋ ನೋಡಿದ ಮಂದಿ ಓಹೋ ಅಭಿಷೇಕ್ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಒಟ್ಟಾರೆಯಾಗಿ ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಹಾಗೂ ಅಂಬಿ ಸ್ನೇಹದ ಕಡಲಲ್ಲಿ ತೇಲಾಡುತ್ತಿರುವ ಸ್ನೇಹಿತರಿಗೆ ಅಭಿಷೇಕ್ ಸಿನಿಮಾ ರಂಗಕ್ಕೆ ಬರುತ್ತಿರುವ ಸಮಾಚಾರ ಮಂಡ್ಯದ ಸಿಹಿ ಬೆಲ್ಲ ಸವಿದಂತಾಗುತ್ತಿದೆ. ಆದಷ್ಟು ಬೇಗ ಅಭಿಷೇಕ್ ಚಿತ್ರರಂಗಕ್ಕೆ ಬರಲಿ, ಅಂಬಿಯಂತೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲಿ ಅನ್ನೊದೆ ಕೋಟಿ ಕೋಟಿ ಅಭಿಮಾನಿಗಳ ಆಶಯ.