Tag: sumalataha ambareesh

  • ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದ್ರೂ ಆಗಲ್ಲ: ಸುಮಲತಾ

    ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದ್ರೂ ಆಗಲ್ಲ: ಸುಮಲತಾ

    – ಪ್ರತಾಪ್ ಸಿಂಹ ವಿರುದ್ಧ ಸಂಸದೆ ವಾಗ್ದಾಳಿ

    ಮಂಡ್ಯ: ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದರೂ ಆಗಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ.

    ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ ಅವರಿಗೆ ಅಕ್ರಮ ಗಣಿಗಾರಿಕೆ ನಿಂತಾಗಿನಿಂದ ಎಲ್ಲೋ ಅವರಿಗೆ ಎಫೆಕ್ಟ್ ಆಗಿದೆ ಅನ್ನಿಸುತ್ತೆ. ಲಾಜಿಕ್ ಇಲ್ಲದ ಮಾತುಗಳನ್ನು ಅವರು ಮಾತನಾಡುತ್ತಿದ್ದಾರೆ. ನನ್ನ ಸುತ್ತ ಅಕ್ರಮ ನಡೆಯುತ್ತಿದೆ ಎಂಬ ಶಂಕೆ ಇದ್ದರೆ ಪೊಲೀಸ್‍ಗೆ ಕಂಪ್ಲೇಟ್ ಮಾಡಲಿ. ಅದನ್ನು ಎಲ್ಲಿ ಚಾಲೆಂಜ್ ಮಾಡಬೇಕು, ಎಲ್ಲಿ ಉತ್ತರ ಕೊಡಬೇಕು ಅಲ್ಲಿ ಕೊಡುತ್ತೇನೆ ಎಂದರು.

    ಅವರಿಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ. ಲೆಟರ್ ಮಿಸ್ ಯೂಸ್ ಆದರೆ ನನ್ನ ಗಮನಕ್ಕೆ ತರಬಹುದಿತ್ತು. ಅದನ್ನು ಬಿಟ್ಟು ಹೀಗೆಲ್ಲಾ ಮಾತನಾಡುವುದು ಸರಿಯಲ್ಲ. ಅವರ ಮಾತಿನಿಂದ ನನ್ನ ಆತ್ಮಸ್ಥೈರ್ಯ ಕುಗ್ಗಲ್ಲ. ನನ್ನ ಆತ್ಮಸ್ಥೈರ್ಯ ಕುಗ್ಗಿಸಬೇಕು ಅಂದ್ರೆ 10 ಜನ್ಮ ಎತ್ತಿ ಬಂದರೂ ಆಗಲ್ಲ. ಈ ರೀತಿಯ ಕಾಮೆಂಟ್ ಮಾಡುವವರಿಂದ ಇನ್ನಷ್ಟು ಶಕ್ತಿ ಬರುತ್ತದೆ. ಅವರ ಮಾತಿನಿಂದ ನನಗೆ ಬ್ಯಾಟರ್ ಚಾರ್ಜ್ ಮಾಡಿದಂತೆ ಆಗುತ್ತದೆ. ನನ್ನ ಮೇಲೆ ಕ್ರಿಮಿನಲ್ ಕೇಸ್ ಹಾಕುವುದು ಹಾಸ್ಯಾಸ್ಪದ ಎನ್ನಿಸುತ್ತದೆ. ಅವರ ಮಾತಿಗೆ ಏನು ಹೇಳಬೇಕು ಅಂತಾ ನನಗೆ ಗೊತ್ತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ವೈದ್ಯಕೀಯ ಸೀಟ್‍ನಲ್ಲಿ OBC ಶೇ.27, EWSಗೆ ಶೇ.10 ಮೀಸಲಾತಿ

    ಗಣಿಗಾರಿಕೆ ವಿಷಯ ಎತ್ತಿದಾಗ ಎಲ್ಲಾ ಶಾಸಕರು ದಿಶಾ ಸಭೆ ಬರುತ್ತೀರಾ. ಬೇರೆ ಸಮಸ್ಯೆ ಕುರಿತು ಮಾತನಾಡಲು ಬರುವುದಿಲ್ಲ. ಮನ್‍ಮುಲ್ ಹಗರಣದ ಬಗ್ಗೆ ಅವರು ತುಟಿ ಬಿಚ್ಚಲ್ಲ. ಶ್ರೀರಂಗಪಟ್ಟಣ ಶಾಸಕರಿಗೆ ನನ್ನ ಬಗ್ಗೆ ಮಾತನಾಡಿದರೆ ಮೈಲೇಜ್ ಸಿಗಬಹುದು. ಅದೇ ಕಾರಣಕ್ಕೆ ಅವರು ನನ್ನ ಹೆಸರನ್ನು ಮಂತ್ರದ ರೀತಿ ಹೇಳುತ್ತಿದ್ದಾರೆ. ದಿಶಾ ಸಭೆ ನಡೆಸಲು ನಿಮಗೆ ಹಕ್ಕಿಲ್ಲ ಎನ್ನುತ್ತಾರೆ. ಈ ಪ್ರಪಂಚದಲ್ಲಿ ಒಳ್ಳೆಯದಕ್ಕಿಂದ ಕೆಟ್ಟದನ್ನು ಮಾಡುವವರು ಸಿಗುತ್ತಾರೆ ಎಂದು ಅಂಬರೀಶ್ ಅವರು ಹೇಳುತ್ತಿದ್ದರು. ಕೆಟ್ಟದ್ದನ್ನು ಕೆಲವರು ಮಾಡಲಿ ನಾವು ಒಳ್ಳೆಯದು ಮಾಡೋಣ. ಹಿಂದೆ ದುಷ್ಟರನ್ನು ಸಂಹಾರ ಮಾಡಲು ದೇವತೆಗಳು ಹುಟ್ಟಿ ಬರುತ್ತಿದ್ದರು. ರಾವಣಾಸುರ ಆಗಲಿ, ಮಹಿಷಾಸುರ ಆಗಲಿ ಬೇಕಿದ್ರೆ, ಅದನ್ನು ಸಂಹಾರ ಮಾಡಲು ನಾನು ಮಹಿಷ ಮರ್ದಿನಿ ಆಗುತ್ತೇನೆ ಎಂದು ತಿಳಿಸಿದರು.

    ಜೆಡಿಎಸ್ ಅವರನ್ನು ನನ್ನ ವಿರೋಧಿಗಳು ಎಂದು ಹೇಳಲ್ಲಾ. ಇವರು ಜಿಲ್ಲೆಯ ಜನರ ವಿರೋಧಿಗಳು. ಭ್ರಷ್ಟಾಚಾರದ ವಿರುದ್ಧದ ರಾಯಬಾರಿ ಆಗಿ ಬರುವವರನ್ನು ಈ ರೀತಿ ಟಾರ್ಗೆಟ್ ಮಾಡುತ್ತಾರೆ. ಇವರು ಜನರಿಗೆ ಯಾವ ಸೇವೆ ಮಾಡುತ್ತಾರೆ. ಇಂತಹ ಜನಪ್ರತಿಗಳನ್ನು ಆಯ್ಕೆ ಮಾಡಿದ್ದಕ್ಕೆ ಜನರು ಪಶ್ಚಾತ್ತಾಪ ಪಡಬೇಕು. ಇವರಿಂದ ಯಾವಾಗ ವಿಮುಕ್ತಿ ಯಾವಗ ಸಿಗುತ್ತದೆ ಎಂದು ಜನರು ಕಾಯುತ್ತಾ ಇದ್ದಾರೆ. ಇದಕ್ಕೆ ಹೆಚ್ಚು ದಿನ ಕಾಯಬೇಕಿಲ್ಲ, ಈ ಕೆಲಸ ತುಂಬಾ ಬೇಗನೇ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಲಿಷ್ಠ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸದಂತೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹ

    ಮೈಸೂರಿನ ದಿಶಾ ಸಭೆಗೆ ನಾನು ಉಪಾಧ್ಯಕ್ಷೆ ಆಗುತ್ತೇನೆ. ನಾನು ಪ್ರತಾಪ್ ಸಿಂಹ ಜೊತೆ ಹೇಳಿದಾಗ, ಅವರು ತಾಲೂಕು ಮಟ್ಟದಲ್ಲಿ ಸಭೆ ಮಾಡಿ ಎಂದರು. ರಾಷ್ಟ್ರೀಯ ಹೆದ್ದಾರಿ ನನ್ನ ಯೋಜನೆ ಎಂದು ಪ್ರತಾಪ್ ಸಿಂಹ ಹೇಳುತ್ತಾರೆ. ನಾನು ಎಲ್ಲೂ ಇದು ನನ್ನ ಯೋಜನೆ ಎಂದು ಹೇಳಿಲ್ಲ. ಈ ಕಾಮಗಾರಿ ಮಂಡ್ಯ ವ್ಯಾಪ್ತಿಯಲ್ಲಿ 58 ಕಿಮೀ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಡಿ ಎಂದು ನಾನು ಕೇಳುತ್ತಿದ್ದೇನೆ. ನನ್ನ ಜಿಲ್ಲೆಯ ಜನರಿಗೆ ಸಮಸ್ಯೆ ಕೊಟ್ಟರೆ ನಾನು ಪಶ್ನೆ ಮಾಡುವ ಅಧಿಕಾರ ಇಲ್ಲವಾ..? ಪ್ರತಾಪ್ ಇದು ಮೈಸೂರಿನ ಕಾಮಗಾರಿ ಅಂತಾರೆ. ಹಾಗಿದ್ದರೆ ಈ ಕಾಮಗಾರಿಯನ್ನು ಆಕಾಶದ ಮೇಲೆ ಕಟ್ಟಿದ್ದಾರಾ..? ಮಂಡ್ಯದ ರೈತರು ಜಮೀನು ಕೊಟ್ಟಿಲ್ವಾ..? ಅವರಿಗೆ ಸಮಸ್ಯೆ ಕೊಟ್ಟುಕೊಂಡು, ಇದು ಮೈಸೂರಿನ ಕಾಮಗಾರಿ ಎಂದರೆ. ನೀವೇನೂ ಆಕಾಶದಲ್ಲಿ ಹಾರಿ ಹೋಗುತ್ತಿಲ್ಲವಲ್ಲ. 58 ಕಿಮೀ ಮಂಡ್ಯ ಮುಖಾಂತರವೇ ಹೋಗಬೇಕು. ನೀವು ಇಲ್ಲಿಯ ಜನಕ್ಕೆ ಅನ್ಯಾಯ ಮಾಡಿ ನಮ್ಮ ಯೋಜನೆ ಅಂದರೆ ಹೇಗೆ..? ನಿಮ್ಮ ಯೋಜನೆ ಆದ್ರೆ ಸರಿಯಾಗಿ ಮಾಡಿ, ಜನರಿಗೆ ಯಾಕ್ ತೊಂದರೆ ಕೊಡುತ್ತೀರಾ..? ಮಂಡ್ಯ ಜನರನ್ನು ಲೆಕ್ಕಿಸದೇ ಇದು ಮೈಸೂರಿಗೆ ಎಂದರೆ ನಾವು ಒಪ್ಪುವುದಕ್ಕೆ ತಯಾರಿಲ್ಲ. ಮೊದಲು ಮಂಡ್ಯ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಿ. ಪ್ರತಾಪ್ ಸಿಂಹ ವ್ಯಾಪ್ತಿ ಎಲ್ಲಿದೆ, ಅವರ ಅಧಿಕಾರ ಎಲ್ಲಿದೆ ಅಲ್ಲಿಗೆ ಸೀಮಿತ ಆಗೋದನ್ನು ಕಲಿಯಬೇಕು ಎಂದರು.

  • ಏನ್ ಬೇಕಾದ್ರೂ ಚರ್ಚೆ ಮಾಡಲಿ, ಆದ್ರೆ ಪದ ಬಳಕೆ ಸರಿಯಾಗಿರಲಿ: ಈಶ್ವರಪ್ಪ

    ಏನ್ ಬೇಕಾದ್ರೂ ಚರ್ಚೆ ಮಾಡಲಿ, ಆದ್ರೆ ಪದ ಬಳಕೆ ಸರಿಯಾಗಿರಲಿ: ಈಶ್ವರಪ್ಪ

    ಬೀದರ್: ಇಬ್ಬರು ಏನು ಬೇಕಾದ್ರು ಚರ್ಚೆ ಮಾಡಲಿ, ಆದರೆ ನೋಡಿಕೊಂಡು ಪದಗಳನ್ನು ಬಳಸಬೇಕು ಎಂದು ಸಚಿವ ಈಶ್ವರಪ್ಪ ಅವರು ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬುದ್ಧಿವಾದ ಹೇಳಿದ್ದಾರೆ.

    ಸುಮಲತಾ ವರ್ಸ್‍ಸ್ ಹೆಚ್‍ಡಿಕೆ ಆರೋಪ-ಪ್ರತ್ಯಾರೋಪಕ್ಕೆ ಈಶ್ವರಪ್ಪ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಈ ವಿಚಾರವಾಗಿ ಬೀದರ್ ನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಇಬ್ಬರ ಸಮರಕ್ಕೆ ಯಾವ ಪದ ಬಳಸಬೇಕು ಎಂದು ನನಗೂ ಗೊತ್ತಾಗುತ್ತಿಲ್ಲ. ಹೀಗಾಗಿ ಇಬ್ಬರು ಬಳಸುವ ಪದದಿಂದಾಗಿ ನನಗೆ ತುಂಬ ನೋವಾಗಿದೆ. ಇಬ್ಬರು ಏನು ಬೇಕಾದ್ರು ಚರ್ಚೆ ಮಾಡಲಿ, ಆದರೆ ನೋಡಿಕೊಂಡು ಪದಗಳನ್ನು ಬಳಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

    ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರು ಮಂತ್ರಿ ಸ್ಥಾನ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿ, ಮೋದಿ ದೇಶಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ದೇಶದ ಇತಿಹಾಸದಲ್ಲಿಯೇ ಐಎಎಸ್, ಐಪಿಎಸ್, ದಲಿತ, ಹಿಂದುಳಿದ ವರ್ಗ ಸೇರಿದಂತೆ ಎಲ್ಲರಿಗೂ ಮಂತ್ರಿ ಮಂಡಲದಲ್ಲಿ ಮೋದಿ ಅವಕಾಶ ನೀಡಿದ್ದಾರೆ ಎಂದರು.  ಇದನ್ನೂ ಓದಿ: ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ

    ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ರಾಜ್ಯದ ಆರು ಜನಕ್ಕೆ ಅವಕಾಶ ನೀಡಿದ್ದಾರೆ. ಈ ಮೂಲಕ ರಾಜ್ಯದ ಎಲ್ಲಾ ಭಾಗಗಳಿಗೆ ಮೋದಿ ಕೊಡುಗೆ ನೀಡಿದ್ದು ವಿಶೇಷವಾಗಿದೆ. ಹೀಗಾಗಿ ನಾನು ರಾಜ್ಯದ ಜನರ ಪರವಾಗಿ ಮೋದಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ V/S ಕುಮಾರಸ್ವಾಮಿ – ಹೆಚ್‍ಡಿಕೆ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

    ಇದೇ ವೇಳೆ ಕಾಂಗ್ರೆಸ್ಸಿನಲ್ಲಿ ಸಿಎಂ ಕೂಗಿನ ಬಗ್ಗೆ ಮಾತನಾಡಿದ ಈಶ್ವರಪ್ಪ, ಬಿಜೆಪಿಗೆ ಹೇಳೋರು ಕೇಳೋರು ಇದ್ದಾರೆ. ಆದರೆ ಕಾಂಗ್ರೆಸ್ಸಿನವರಿಗೆ ಹೇಳೋರು ಇಲ್ಲಾ, ಕೇಳೋರು ಯಾರೂ ಇಲ್ಲ. ಹೀಗಾಗಿ ಕಾಂಗ್ರೆಸ್ಸಿನಲ್ಲಿ ನಾನೇ ಸಿಎಂ, ನಾನೇ ಅಭ್ಯರ್ಥಿ ಎಂದು ಹೇಳಬಹುದು. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೈ ನಾಯಕರ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ರು.