Tag: Sumalata Ambarish

  • ಒಡಿಶಾದಲ್ಲಿ ಭೀಕರ ರೈಲು ದುರಂತ: ಯಶ್, ಸುಮಲತಾ ಸೇರಿದಂತೆ ಹಲವರ ಸಂತಾಪ

    ಒಡಿಶಾದಲ್ಲಿ ಭೀಕರ ರೈಲು ದುರಂತ: ಯಶ್, ಸುಮಲತಾ ಸೇರಿದಂತೆ ಹಲವರ ಸಂತಾಪ

    ಡಿಶಾದಲ್ಲಿ (Odisha Train Tragedy) ಶುಕ್ರವಾರ ಸಂಜೆ ಸಂಭವಿಸಿದ ರೈಲು ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸ್ಯಾಂಡಲ್ ವುಡ್, ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ನಟ ಯಶ್ (Yash) , ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ (Sumalata Ambarish) ಸೇರಿದಂತೆ ಹಲವು ಸೋಷಿಯಲ್ ಮೀಡಿಯಾಗಳ ಮೂಲಕ ಸಂತಾಪ (condolence) ವ್ಯಕ್ತ ಪಡಿಸಿದ್ದಾರೆ. ಅಗಲಿದ ಕುಟುಂಬಕ್ಕೆ ನೋವು ಭರಿಸುವಂತಹ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥನೆ ಮಾಡಿದ್ದಾರೆ.

    ಚೆನ್ನೈ-ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿದ್ದವು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿತು. 12841 ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ಪಶ್ಚಿಮ ಬಂಗಾಳದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಆಗಮಿಸುತ್ತಿದ್ದ ಈ ರೈಲು ಒಡಿಶಾದಲ್ಲಿ ಯಶವಂತಪುರ ಪ್ಯಾಸೆಂಜರ್ ರೈಲು ಹಾಗೂ ಸರಕು ಸಾಗಾಣೆ ರೈಲಿಗೆ ಡಿಕ್ಕಿ ಹೊಡೆದಿತ್ತು. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ, ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣ ಗಾಯಗಳಾದ ಪ್ರಯಾಣಿಕರಿಗೆ 50,000 ರೂ. ಪರಿಹಾರವನ್ನು ರೈಲ್ವೇ ಇಲಾಖೆ ಘೋಷಿಸಿದೆ.

     

    ಅಪಘಾತದ ಸ್ಥಳದಲ್ಲಿ ರಕ್ಷಣಾ ತಂಡಗಳು ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. 3 ಎನ್‌ಡಿಆರ್‌ಎಫ್‌, 4 ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ 50 ಅಂಬುಲೆನ್ಸ್‌ಗಳು ನಿರಂತರ ಓಡಾಟ ಮಾಡುತ್ತಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸ್ಥಳೀಯ ಜನ ಕೂಡ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಒಡಿಶಾ ರೈಲು ಅಪಘಾತ ಸಹಾಯವಾಣಿ ಆರಂಭಿಸಲಾಗಿದೆ. ಗಾಯಾಳುಗಳು, ಮೃತಪಟ್ಟವರ ಮಾಹಿತಿ ಪಡೆಯಲು ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ.

  • ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧವಾದ ಸುಮಲತಾ ಅಂಬರೀಶ್

    ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧವಾದ ಸುಮಲತಾ ಅಂಬರೀಶ್

    ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದ (Mandya) ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದ ನಟಿ, ಸಂಸದೆ ಸುಮಲತಾ ಅಂಬರೀಶ್ (Sumalata Ambarish), ಆ ಚುನಾವಣೆಯ ಫಲಿತಾಂಶವನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಜೊತೆಗೆ ಮುಂದಿನ ಲೋಕಸಭಾ (Lok Sabha) ಚುನಾವಣೆಯಲ್ಲಿ ಮತ್ತೆ ಪುಟಿದೇಳುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ವಿರುದ್ಧ ಮಾತನಾಡುವವರಿಗೂ ಅವರು ಬಿಸಿ ಮುಟ್ಟಿಸಿದ್ದಾರೆ. ಸುಮಲತಾ ಅಂಬರೀಶ್ ತಮ್ಮ ಫೇಸ್ ಬುಕ್ ನಲ್ಲಿ ಬರೆದದ್ದು ಹೀಗಿದೆ..

    ತಮ್ಮೆಲ್ಲರಿಗೂ ಗೊತ್ತಿರುವಂತೆ ನಾನು 10 ಮಾರ್ಚ್ 2023 ರಂದು ಪತ್ರಿಕಾಗೋಷ್ಠಿ ಕರೆದು ಬಿಜೆಪಿಗೆ ನನ್ನ ಬೆಂಬಲವನ್ನು ಘೋಚಿಸಿದ್ದೆ. ಚುನಾವಣೆ (Elections) ದಿನಾಂಕ ಘೋಷಣೆಯಾದ ನಂತರ ಪಕ್ಷವು ಏಪ್ರಿಲ್ 18 ರಂದು ಅಭ್ಯರ್ಥಿಗಳನ್ನು ಘೋಷಣೆ ಮಾಡಿತು. ಪಕ್ಷವು ಘೋಷಣೆ ಮಾಡಿದ ನನ್ನ ಕ್ಷೇತ್ರದ ಎಲ್ಲ ಅಭ್ಯರ್ಥಿಗಳು ಫಸ್ಟ್ ಟೈಮ್ ಚುನಾವಣೆ ಎದುರಿಸಿದವರು. ಆದರೂ ಎದುರಾಳಿಗಳ ವಿರುದ್ಧ ಸಮರ್ಥವಾಗಿ ಹೋರಾಟ ಮಾಡಿದ್ದಾರೆ. ಅಲ್ಲದೇ ಪ್ರಚಾರಕ್ಕೆ ನಮಗಿದ್ದದ್ದು ಎರಡ್ಮೂರು ವಾರಗಳಷ್ಟೇ ಸಮಯ. ಆದರೂ ಹೊಸ ಪಡೆಯನ್ನು ಕಟ್ಟಿಕೊಂಡು ಹೋರಾಟ ಮಾಡಿದ್ದೇವೆ. ಪರಿಣಾಮ ಮೊದಲ ಬಾರಿಗೆ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಮತ್ತು ಮಳವಳ್ಳಿಯಲ್ಲಿ ಬಿಜೆಪಿಗೆ ಮತಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ಮಂಡ್ಯದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೇ ಆಡಳಿತ ವಿರೋಧಿ ಅಲೆ ಮತ್ತು ಕಾಂಗ್ರೆಸ್ ಅಲೆ ಹೆಚ್ಚಾಗಿದ್ದರಿಂದ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಹಾಗಾಗಿ ಪಕ್ಷಕ್ಕೆ ಆಗಿರುವ ಸೋಲನ್ನು ಒಪ್ಪಿಕೊಂಡು, ಆತ್ಮಾವಲೋಕನದ ಜೊತೆಗೆ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ. ಇದನ್ನೂ ಓದಿ:‘ಯಶ್ 19’ ಸಿನಿಮಾದ ಫೋಟೋ ಲೀಕ್? ರಾಕಿ ಭಾಯ್ ನಯಾ ಲುಕ್

    ಮಾರ್ಚ್ 10 ರಂದು ನಾನು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ‘ನಾನು ರಿಸ್ಕ್ ತಗೆದುಕೊಳ್ಳುತ್ತಿದ್ದೇನೆ. ಇದು ರಿಸ್ಕ್ ಎಂದು ನನಗೆ ಗೊತ್ತಿದೆ’ ಎಂದು ಮಾಧ್ಯಮಗಳ ಮುಂದೆಯೇ  ಅವತ್ತೆ ಸ್ಪಷ್ಟ ಪಡಿಸಿದ್ದೆ. ಪಕ್ಷದ ಸೋಲಿಗೆ ಇಷ್ಟೆಲ್ಲ ಕಾರಣಗಳು ಇದ್ದರೂ, ನೀವು ನಿಮ್ಮದೇ ಆದ ರೀತಿಯಲ್ಲಿ ಲೆಕ್ಕಾಚಾರ ಹಾಕುತ್ತೀದ್ದೀರಿ. ಸುಳ್ಳು ಸಂದೇಶಗಳನ್ನು ಹರಡುತ್ತಿದ್ದೀರಿ. ನೀವೇ ಸುದ್ದಿಯನ್ನು ಸೃಷ್ಟಿಸಿ ಜನರಿಗೆ ತಪ್ಪು ಮಾಹಿತಿಯನ್ನು ನೀಡುವುದು ಎಷ್ಟು ಸರಿ? ನಾನು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಇಷ್ಟಪಡುತ್ತೇನೆ. ಮುಂದಿನ ಚುನಾವಣೆಯಲ್ಲಿ ನನ್ನ ಭವಿಷ್ಯ ಅಥವಾ 24X7 ರಾಜಕಾರಣದ ಲೆಕ್ಕಾಚಾರ ಹಾಕುತ್ತಾ ಕೂರುವವಳು ನಾನಲ್ಲ.  ನನ್ನ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸಿದ್ದರೆ ಬಹುಶಃ ನನ್ನ ನಿಲುವೇ ಬೇರೆಯದ್ದಾಗಿಯೇ ಇರುತ್ತಿತ್ತು. ಆ ರೀತಿ ಮಾಡುವುದಕ್ಕೆ ನಾನು ಇಷ್ಟ ಪಡುವುದಿಲ್ಲ.  ನನ್ನ ಆತ್ಮಸಾಕ್ಷಿ ಆಧಾರದ ಮೇಲೆ ನಾನು ನನ್ನ ನಿರ್ಧಾರಗಳನ್ನು ತಗೆದುಕೊಳ್ಳುತ್ತೇನೆ ಮತ್ತು ನನ್ನ ಕ್ಷೇತ್ರಕ್ಕೆ ಒಳ್ಳೆದಾಗುವಂತಹ ಯೋಚನೆಯನ್ನು ಮಾತ್ರ ಮಾಡುತ್ತೇನೆ. ನಾನು ಎಂದಿಗೂ ನನ್ನ ನಿರ್ಧಾರಕ್ಕೆ ಬದ್ಧಳಾಗಿರುತ್ತೇನೆ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಯಾವತ್ತಿಗೂ ನಂಬಿಕೆ ಇರಲಿದೆ ಎಂದು ಮತ್ತೆ ಪುನರುಚ್ಚಿಸುತ್ತೇನೆ.

    ನಿಮ್ಮ ಗ್ರಹಿಕೆಗಳನ್ನು ದಯವಿಟ್ಟು ಸರಿಪಡಿಸಿಕೊಳ್ಳಿ. ಇಲ್ಲಿ ಪ್ರಮುಖವಾಗಿ ಒಂದು ಅಂಶವನ್ನು ಮರೆಯಬಾರದು. ನನ್ನ ಸ್ವಾಭಿಮಾನಿ ಕ್ಷೇತ್ರದಲ್ಲಿ ನಾನು ಈವರೆಗೂ ಏಕಾಂಗಿಯಾಗಿ ಹೋರಾಟ ಮಾಡುತ್ತಿರುವುದು ಕ್ಷೇತ್ರದ ಭ್ರಷ್ಟ ಹಾಗೂ ದುರಹಂಕಾರಿ ವರ್ತನೆಯ ಶಾಸಕರು ವಿರುದ್ಧ. ನನ್ನ ಈ ಸತತ ಹೋರಾಟವನ್ನು ಗಮನಿಸಿರುವ ನನ್ನ ಸ್ವಾಭಿಮಾನಿ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಆ ಪಾರ್ಟಿಯಲ್ಲಿ ಗೆದ್ದಿರುವುದು ಒಬ್ಬರೇ ಒಬ್ಬರು. ಅವರೂ ಹೊಸಬರು. ಹೌದು, ನನ್ನ ನ್ಯಾಯಯುತ ಹೋರಾಟದ ಲಾಭವನ್ನು ನನ್ನ ಜಿಲ್ಲೆಯ ಕಾಂಗ್ರೆಸ್ ಪಡೆದುಕೊಂಡಿದೆ. ಅದು ನನ್ನ ಸ್ವಾಭಿಮಾನಿ ಮಂಡ್ಯದ ಜನರೇ ನೀಡಿದ ಜನಾದೇಶವಾಗಿದ್ದರಿಂದ ಅದನ್ನು ಗೌರವಿಸುತ್ತೇನೆ. ರಾಜಕೀಯ, ರಾಜಕಾರಣ ಮತ್ತು ತಂತ್ರಗಳು ಒಂದು ನಿರ್ದಿಷ್ಟ ಮಟ್ಟಿಗೆ ಕೆಲಸ ಮಾಡುತ್ತೇವೆ ಎಂದು ನಾನು ದೃಢವಾಗಿ ನಂಬುತ್ತೇನೆ. ಆದರೆ, ಅಂತಿಮವಾಗಿ ಯಾವುದೇ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ವ್ಯಕ್ತಿ ಗೆಲ್ಲಬೇಕು ವಿನಃ ಪಕ್ಷಗಳು ಅಥವಾ ನಾಯಕರಲ್ಲ.

    ಸದ್ಯ ನನ್ನ ಮುಂದೆ ಎರಡು ಗುರಿಗಳಿವೆ. ಮುಂದೆ ಮತ್ತೊಂದು ಮಹಾ ಚುನಾವಣೆಯಿದೆ. ನನ್ನ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಿ, ಚುನಾವಣೆಯಲ್ಲಿ ಗೆಲ್ಲಲು ಶ್ರಮಿಸುತ್ತೇವೆ. ಬಿಜೆಪಿ ಪಕ್ಷವು ಹಿಂದೆಂದಿಗಿಂತಲೂ ಬಲವಾಗಿ ಮತ್ತು ಅಚ್ಚರಿಯ ರೀತಿಯಲ್ಲಿ ಪುಟಿದೇಳಲಿದೆ ಮತ್ತು ವಿಜಯಶಾಲಿಯಾಗಿ ಹೊರಹೊಮ್ಮಲಿದೆ ಎನ್ನುವುದು ನನ್ನ ಅಚಲ ನಂಬಿಕೆಯಾಗಿದೆ. ಮತ್ತೊಂದು ಸಲ ಹೇಳುತ್ತೇನೆ, ನನ್ನ ನಿರ್ಧಾರ ಮತ್ತು ಪರಿಣಾಮಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಹಾಗಾಗಿ ಈ ವಿಷಯದಲ್ಲಿ ನನಗೆ ವಿಷಾದವಿಲ್ಲ. ಕೆಟ್ಟ ಹಾಗೂ ನೆಗೆಟಿವ್ ಸುದ್ದಿ ಪ್ರಸಾರ ಮಾಡುವವರ ಜೊತೆಗೆ ಟ್ರೋಲ್ ಮಾಡುವವರು ದಯವಿಟ್ಟು ಆರೋಗ್ಯವಂಥ ಮನಸ್ಸು ಬೆಳೆಸಿಕೊಳ್ಳಿ. ವಿಶ್ರಾಂತಿ ತಗೆದುಕೊಂಡು ಆರೋಗ್ಯ ವೃದ್ಧಿಸಿಕೊಳ್ಳಿ. ನಿಮ್ಮ ಟ್ರೋಲ್ ಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆಯೇ ಹೊರತು, ಅದರಿಂದ ನನ್ನ ಕೆಲಸಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿಮ್ಮ ಅಗ್ಗದ ಮಾತುಗಳು, ನಿಂದನೆಯ ನುಡಿಗಳು, ನೀವು ಬಳಸುವ ಪದಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತಿವೆ. ದಯವಿಟ್ಟು ನಿಮ್ಮ ಈ ನಡವಳಿಕೆಯ ಮೂಲಕ ನಿಮ್ಮ ತಂದೆ ತಾಯಿಯನ್ನು ಅವಮಾನಿಸಬೇಡಿ. ಆರೋಗ್ಯವಂತ ಮತ್ತು ಸಕಾರಾತ್ಮಕ ಟೀಕೆ, ಟಿಪ್ಪಣಿ, ಚರ್ಚೆಗಳಿಗೆ ಯಾವತ್ತಿಗೂ ಈ ನೆಲದಲ್ಲಿ ಸ್ವಾಗತವಿದೆ. ನೀವು ಅಂದುಕೊಂಡಿರುವ ವಿಜಯವನ್ನು ಆನಂದಿಸಿ ಮತ್ತು ಆಚರಿಸಿ. ಮುಂದಿನ ಬಾರಿ ಪ್ರಬಲ ಹೋರಾಟಕ್ಕೆ ಸಿದ್ಧರಾಗಿರಿ.

    ಜೈ ಹಿಂದ್, ಜೈ ಕರ್ನಾಟಕ, ಜೈ ಮಂಡ್ಯ

  • ಮೋದಿಗೆ ಬೆಲ್ಲದ ಉಡುಗೊರೆ ನೀಡಿ ಮುಖದಲ್ಲಿ ಮಂದಹಾಸ ತರಿಸಿದ ಸಂಸದೆ ಸುಮಲತಾ

    ಮೋದಿಗೆ ಬೆಲ್ಲದ ಉಡುಗೊರೆ ನೀಡಿ ಮುಖದಲ್ಲಿ ಮಂದಹಾಸ ತರಿಸಿದ ಸಂಸದೆ ಸುಮಲತಾ

    ನ್ನಡದ ಹಿರಿಯ ನಟಿ, ಮಂಡ್ಯ (Mandya) ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ (Sumalata Ambarish), ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಉಡುಗೊರೆಯಾಗಿ ಬೆಲ್ಲ (Organic Jaggery) ನೀಡಿದರು. ಇಂದು ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಗೆ ಉಡುಗೊರೆಯಾಗಿ ಬೆಲ್ಲ ನೀಡಿದಾಗ, ಪ್ರಧಾನಿ ಮುಖದಲ್ಲಿ ಮಂದಹಾಸವಿತ್ತು. ಅಲ್ಲದೇ, ಪಕ್ಕದಲ್ಲೇ ಇದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಕ್ಷಣ ಹೊತ್ತು ಉಡುಗೊರೆ ಬಗ್ಗೆ ವಿವರಿಸಿದ್ದು ವಿಶೇಷವಾಗಿತ್ತು.

    ಈ ಕುರಿತಾಗಿ ಸುಮಲತಾ ಅಂಬರೀಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ, ‘ನನ್ನ ಸ್ವಾಭಿಮಾನಿ ಮಂಡ್ಯ ಕ್ಷೇತ್ರದಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ, ಮಂಡ್ಯದ ಗುರುತಾಗಿರುವ ‘ಬೆಲ್ಲ’ವನ್ನು ಉಡುಗೊರೆಯಾಗಿ ನೀಡಿದೆ. ಮಾನ್ಯ ಪ್ರಧಾನ ಮಂತ್ರಿಗಳು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಈ ನೆಲದ ಅಸ್ಮಿತೆಯಾಗಿರುವ ಬೆಲ್ಲದ ಉಡುಗೊರೆಯನ್ನು ಸ್ವೀಕರಿಸಿದ್ದು ಸಂಭ್ರಮ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲಿಂಗಭೈರವಿ ದೇವಿಯ ಮೋರೆ ಹೋದ ಸಮಂತಾ

    ಮಂಡ್ಯ ಸಕ್ಕರೆ ಮತ್ತು ಬೆಲ್ಲದ ನಾಡು. ಕಬ್ಬು ಈ ಭಾಗದ ಪ್ರಮುಖ ಬೆಳೆಯೂ ಹೌದು. ಸುಮಲತಾ ಸಂಸದೆಯಾದ ನಂತರ ಮಂಡ್ಯದಲ್ಲಿ ತಯಾರಾಗುವ ಬೆಲ್ಲದ ಬಗ್ಗೆ ಸಂಸತ್ತಿನಲ್ಲೂ ಮಾತನಾಡಿದ್ದರು. ಬೆಲ್ಲದ ಹಿರಿಮೆಯನ್ನು ಎತ್ತಿ ಹಿಡಿದಿದ್ದರು. ಅಲ್ಲದೇ, ಸಾವಯವ ಬೆಲ್ಲಕ್ಕೆ ಬೆಂಬಲ ಬೆಲೆ ಘೋಷಿಸಿಬೇಕೆಂದು ಸಂಸತ್ತಿನಲ್ಲಿ ಮನವಿ ಕೂಡ ಮಾಡಿದ್ದರು. ಕಬ್ಬು ಬೆಳೆಗಾರರ ಅನೇಕ ಹೋರಾಟಗಳಲ್ಲಿ ಭಾಗಿಯಾದವರು. ಹಾಗಾಗಿ ರೈತರ ಪರವಾಗಿ ಬೆಲ್ಲವನ್ನು ಪ್ರಧಾನಿಗೆ ನೀಡಿದ್ದಾರೆ.

    ಪ್ರಧಾನಿಗೆ ಇಂದು ನೀಡಿದ ಉಡುಗೊರೆಯಲ್ಲಿ ಬೆಲ್ಲದುಡುಗೊರೆ ವಿಶೇಷವಾಗಿತ್ತು. ಅಲಂಕೃತ ಬುಟ್ಟಿಯಲ್ಲಿ ಬೆಲ್ಲದ ಚೌಕಾಕೃತಿಯ ತುಂಡುಗಳನ್ನು ಹಾಕಿ, ಸಾವಯವಬೆಲ್ಲವನ್ನೂ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಬೆಲ್ಲದ ಕುರಿತು ಕೆಲ ಹೊತ್ತು ಮಾತೂ ಆಡಿದರು. ಈ ಸಂದರ್ಭದಲ್ಲಿ ಅಭಿಮಾನಿಗಳಿಂದ ಜೋರಾದ ಚಪ್ಪಾಳೆ ಕೂಡ ಕೇಳಿ ಬಂತು.

     

  • ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ: ತಾಂಬೂಲ ಬದಲಿಸಿಕೊಂಡ ಕುಟುಂಬ

    ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ: ತಾಂಬೂಲ ಬದಲಿಸಿಕೊಂಡ ಕುಟುಂಬ

    ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಬಗ್ಗೆ ಹಲವು ದಿನಗಳಿಂದ ಗಾಸಿಪ್ ಕಾಲಂನಲ್ಲಿ ಸುದ್ದಿ ಹರಿದಾಡುತ್ತಿತ್ತು. ಮೊನ್ನೆಯಷ್ಟೇ ಅಂಥದ್ದೇನೂ ಇಲ್ಲ ಎಂದೇ ಸುಮಲತಾ ಅಂಬರೀಶ್ ಹೇಳಿದ್ದರು. ಹುಡುಗಿಯನ್ನು ನೀವೇ ಹುಡುಕಿಕೊಡಿ ಎಂದೂ ತಮಾಷೆಯಾಗಿ ಅಭಿಷೇಕ್ ಹೇಳಿದ್ದರು. ಆದರೆ, ಅಭಿಷೇಕ್ ಅವರ ಎಂಗೇಜ್ ಮೆಂಟ್ ಕುರಿತು ಅವರ ಆಪ್ತರು ಖಚಿತ ಪಡಿಸಿದ್ದಾರೆ. ನಿನ್ನೆ ಅಂಬರೀಶ್ ಅವರ ಮನೆಯಲ್ಲೇ ತಾಂಬೂಲ ಬದಲಿಸಿಕೊಳ್ಳುವ ಶಾಸ್ತ್ರ ಕೂಡ ಮುಗಿದಿದೆ. ಡಿಸೆಂಬರ್ 11 ರಂದು ಅಭಿಷೇಕ್ ಎಂಗೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ.

    ಹಲವು ವರ್ಷಗಳಿಂದ ಪರಿಚಯವಿರುವ ತಮ್ಮ ಗೆಳತಿಯನ್ನೇ ಅಭಿಷೇಕ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಎನ್ನುತ್ತವೆ ಆಪ್ತ ಮೂಲಗಳು. ಅಭಿಷೇಕ್ ಎಂಗೇಜ್ ಮೆಂಟ್ ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿದ್ದು, ಈಗಾಗಲೇ ರಜನಿಕಾಂತ್ ಸೇರಿದಂತೆ ದಕ್ಷಿಣದ ಹಲವು ದಿಗ್ಗಜರಿಗೆ ಆಹ್ವಾನ ಕೂಡ ಹೋಗಿದೆಯಂತೆ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್

    ಅಭಿಷೇಕ್ ಅಂಬರೀಶ್ ಅವರ ಸ್ನೇಹಿತೆಯಾಗಿರುವ ಅವಿವಾ ಬಿದ್ದಪ್ಪ ಅವರೇ ಅಭಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿಯಾಗಿದ್ದಾರೆ. ಹಲವು ವರ್ಷಗಳಿಂದ ಅಭಿಷೇಕ್ ಮತ್ತು ಅವಿದಾ ಫ್ರೆಂಡ್ಸ್ ಎನ್ನುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಈ ಗೆಳೆತನವೇ ಪ್ರೇಮಕ್ಕೆ ತಿರುಗಿ ಇದೀಗ ಹಸಮಣೆ ಹತ್ತಿಸುತ್ತಿದೆ.

    ನಿನ್ನೆಯಷ್ಟೇ ಅಭಿಷೇಕ್ ಅವರ ಹೊಸ ಸಿನಿಮಾದ ಮುಹೂರ್ತವಾಗಿದ್ದು, ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಭಿ ಅವರ ಎಂಗೇಜ್ ಮೆಂಟ್ ಮುಗಿದ ನಂತರ ಚಿತ್ರೀಕರಣ ಶುರು ಆಗಲಿದೆ. ಅಲ್ಲದೇ, ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲೂ ಅಭಿ ನಟಿಸಿದ್ದು, ಈ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನಾಳೆ ಸುಮಲತಾ ಅಂಬರೀಶ್ ಹುಟ್ಟುಹಬ್ಬ: ತಾಯಿಯ ಬರ್ತ್‌ಡೇಗೆ ಅಭಿಷೇಕ್ ಕೊಡ್ತಿರೋ ಗಿಫ್ಟ್ ಏನು?

    ನಾಳೆ ಸುಮಲತಾ ಅಂಬರೀಶ್ ಹುಟ್ಟುಹಬ್ಬ: ತಾಯಿಯ ಬರ್ತ್‌ಡೇಗೆ ಅಭಿಷೇಕ್ ಕೊಡ್ತಿರೋ ಗಿಫ್ಟ್ ಏನು?

    ಸ್ಯಾಂಡಲ್ ವುಡ್ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ನಾಳೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಹುಟ್ಟು ಹಬ್ಬಕ್ಕಾಗಿ ಅಭಿಷೇಕ್ ಅಂಬರೀಶ್ ಅವರ ಹೊಸ ಸಿನಿಮಾದ ಹಲವು ಘೋಷಣೆಗಳು ಆಗುತ್ತಿದ್ದು, ಆ ಸಿನಿಮಾದ ಮೋಷನ್ ಪೋಸ್ಟರ್ ಮತ್ತು ನಿರ್ಮಾಪಕರ ಹೆಸರು ಹುಟ್ಟುಹಬ್ಬದ ಉಡುಗೊರೆ ಆಗಲಿವೆ.

    ನಾಳೆ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸ್ಮಾರಕದ ಮುಂದೆ ಹೊಸ ಸಿನಿಮಾದ ಮೋಷನ್ ಪೋಸ್ಟರ್ ಮತ್ತು ನಿರ್ಮಾಪಕರ ಹೆಸರನ್ನು ಘೋಷಿಸಲಾಗುತ್ತಿದ್ದು, ಈ ಸಿನಿಮಾವನ್ನು ಮದಗಜ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಅಂಬರೀಶ್ ಅವರ ಹುಟ್ಟು ಹಬ್ಬದಂದು ಸಿನಿಮಾ ಘೋಷಣೆ ಮಾಡಲಾಗಿತ್ತು. ಇದನ್ನೂ ಓದಿ:ಸೌತ್ ಸ್ಟಾರ್ ವಿಜಯ್ ದೇವರಕೊಂಡ ವಿರುದ್ಧ ಸಿಡಿದೆದ್ದ ಬಾಲಿವುಡ್ ಥಿಯೇಟರ್ ಮಾಲೀಕ

    ಅಭಿಷೇಕ್ ಅವರ ನಾಲ್ಕನೇ ಸಿನಿಮಾ ಇದಾಗಿದ್ದು, ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿರ್ದೇಶಕ ಮಹೇಶ್ ಕುಮಾರ್, ‘ಕಳೆದ ಬಾರಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದೇವು. ಈ ಬಾರಿ ಮೋಷನ್ ಪೋಸ್ಟರ್ ಮತ್ತು ನಿರ್ಮಾಪಕ ಹೆಸರು ಘೋಷಣೆ ಮಾಡುತ್ತಿದ್ದೇವೆ. ಭಾರತೀಯ ಸಿನಿಮಾ ರಂಗದಲ್ಲಿ ನಾನಾ ಭಾಷೆಯ ಸಿನಿಮಾಗಳನ್ನು ಮಾಡಿರುವ ಹೆಸರಾಂತ ನಿರ್ಮಾಣ ಸಂಸ್ಥೆಯು ಈ ಚಿತ್ರವನ್ನು ತಯಾರು ಮಾಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 4 ವರ್ಷದ ಬಳಿಕ ಆರಂಭವಾಯಿತು ಮೈಶುಗರ್ ಕಾರ್ಖಾನೆ

    4 ವರ್ಷದ ಬಳಿಕ ಆರಂಭವಾಯಿತು ಮೈಶುಗರ್ ಕಾರ್ಖಾನೆ

    ಮಂಡ್ಯ: ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮಂಡ್ಯದ ಮೈಶುಗರ್ 4 ವರ್ಷದ ಬಳಿಕ ಆರಂಭವಾಗಿದೆ. ಸಚಿವ ಸಂಪುಟ ಸಭೆ ನಿರ್ಣಯದಂತೆ ಹಾಗೂ ಸರ್ಕಾರದ ಭರವಸೆಯಂತೆ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಇಂದು ಮುನ್ನುಡಿ ಬರೆಯಲಾಯಿತು.

    ಸಂಪ್ರದಾಯದಂತೆ ಪೂಜೆ, ಗಣಪತಿ ಹೋಮದ ಮೂಲಕ ಕಾರ್ಖಾನೆ ಬಾಯ್ಲರ್‍ಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಇದಕ್ಕಾಗಿ ಕಾರ್ಖಾನೆಯನ್ನು ಶುದ್ಧಿ ಮಾಡಿ, ಹೂವು, ತಳಿರು-ತೋರಣ ಕಟ್ಟಿ, ನವ ವಧುವಿನಂತೆ ಸಿಂಗಾರ ಮಾಡಲಾಗಿತ್ತು. ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡ, ಸಂಸದೆ ಸುಮಲತಾ, ಜಿಲ್ಲಾಡಳಿತದ ಅಧಿಕಾರಿಗಳು, ರೈತರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೌಕರರು ಭಾಗಿಯಾಗಿದ್ದರು.

    ಬಂದ್ ಆಗಿದ್ದು ಯಾಕೆ?
    ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಅಂದರೆ ಅದು ಮಂಡ್ಯದ ಮೈಶುಗರ್ ಕಾರ್ಖಾನೆ. ಒಂದು ಕಾಲದಲ್ಲಿ ಗತವೈಭವಕ್ಕೆ ಕಾರಣವಾಗಿದ್ದ ಈ ಕಾರ್ಖಾನೆ ಕೊಡುವ ದರವೇ ಇಡೀ ರಾಜ್ಯದ ಕಬ್ಬಿನ ದರವನ್ನು ನಿರ್ಧಾರ ಮಾಡುತ್ತಿತ್ತು. ಅಂತಹ ಇತಿಹಾಸ ಪ್ರಸಿದ್ಧ ಕಾರ್ಖಾನೆ ಅವ್ಯಾಹತ ಭ್ರಷ್ಟಾಚಾರ, ರಾಜಕೀಯ ಹಪಾಹಪಿಗೆ ನಶಿಸುವ ಹಂತ ತಲುಪಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಖಾನೆ ಸಂಪೂರ್ಣ ಸ್ಥಬ್ಧವಾಗಿತ್ತು. ಇದನ್ನೂ ಓದಿ: ಪ್ರವೀಣ್ ಹತ್ಯೆಗೈದ ಆರೋಪಿಗಳ ಬಂಧನ- ಪೊಲೀಸ್ ಇಲಾಖೆಗೆ ಕುಟುಂಬಸ್ಥರು ಧನ್ಯವಾದ

    ಕಾರ್ಖಾನೆ ಸ್ಥಗಿತದಿಂದ ಇಡೀ ಮಂಡ್ಯ ಜಿಲ್ಲೆಯ ಆರ್ಥಿಕ ಸ್ಥಿತಿ ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕಾರ್ಖಾನೆ ಆರಂಭಕ್ಕೆ ನಿರಂತರವಾಗಿ, ಸಾಕಷ್ಟು ಹೋರಾಟಗಳು ನಡೆದಿದ್ವು. ಕಾಲಕಳೆದಂತೆ ಮೈಶುಗರ್ ವಿಚಾರವಾಗಿ ನಡೆಯುತ್ತಿದ್ದ ಹೋರಾಟಗಳು ಕೂಡ ಕವಲೊಡೆದು ಗೊಂದಲದ ಗೂಡಾಗಿತ್ತು. ಕೆಲವರು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಕ್ಕೆ ಪಟ್ಟು ಹಿಡಿದಿದ್ದರೆ, ಮತ್ತೆ ಕೆಲವರು ಖಾಸಗಿಯಾದರೂ ಸರಿ, ಓ ಅಂಡ್ ಎಂ ಆದರೂ ಸರಿ. ಹೇಗಾದರೂ ಆಗಲಿ ಮೊದಲು ಕಾರ್ಖಾನೆ ಆರಂಭವಾಗಲಿ ಅಂತ ಒತ್ತಾಯಿಸಿದ್ದರು. ಇದು ಸರ್ಕಾರಕ್ಕೂ ತಲೆ ನೋವಾಗಿ ಪರಿಣಮಿಸಿತ್ತು. ಈ ಹಿಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸುವ ನಿರ್ಧಾರ ಮಾಡಿದ್ದರು.

    ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. 20 ಕೋಟಿ ವೆಚ್ಚದಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನು 10 ದಿನದೊಳಗೆ ಪ್ರಾಯೋಗಿಕವಾಗಿ ಕಬ್ಬು ನುರಿಸುವ ಕಾರ್ಯ ಆರಂಭಿಸಲಾಗುತ್ತದೆ. ಸಣ್ಣಪುಟ್ಟ ತಾಂತ್ರಿಕ ದೋಷ ಸರಿಪಡಿಸಿಕೊಂಡು 15-20 ದಿನಗಳಲ್ಲಿ ಸಿಎಂ ಮೂಲಕವೇ ಅಧಿಕೃತವಾಗಿ ಕಾರ್ಖಾನೆ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ಕೊಟ್ಟು ಪುನರಾರಂಭ ಮಾಡಲಾಗುತ್ತದೆ ಅಂತ ಸಚಿವರು ಭರವಸೆ ನೀಡಿದ್ದರು. ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ

    ಮೈಶುಗರ್ ಕಾರ್ಖಾನೆಯಲ್ಲಿ ನಡೆದ ಪೂಜೆಯಿಂದ ಜಿಲ್ಲೆಯ ಜನಪ್ರತಿನಿಧಿಗಳು, ರೈತರಲ್ಲಿ ಸಂತಸ ಮನೆ ಮಾಡಿದೆ. ಹೇಗಾದರೂ ಮಾಡಿ ಕಾರ್ಖಾನೆ ಆರಂಭಕ್ಕೆ ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಋಣಿಯಾರುತ್ತೇನೆ. ನಾನು ಸಂಸದೆಯಾಗಿ 3 ವರ್ಷ ಆದರೂ, ಇಂದಿನ ಸಂತಸದ ದಿನ ಯಾವತ್ತೂ ಇಲ್ಲ ಅಂತಾ ಸಂಸದೆ ಸುಮಲತಾ ಅಂಬರೀಶ್ ಹೇಳಿದರೆ, ರೈತ ನಾಯಕಿ ಸುನಂದ ಜಯರಾಂ ಮಾತ್ರ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೆವು. ಸರ್ಕಾರ ಕೊಟ್ಟ ಭರವಸೆಯಂತೆ ಕಾರ್ಖಾನೆ ಆರಂಭಕ್ಕೆ ಮುಂದಾಗಿದೆ. ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸಿರುವುದು ಸ್ವಾಗತಾರ್ಹ. ಸರ್ಕಾರದ ನಿರ್ಧಾರಕ್ಕೆ ಅಭಿನಂದಿಸುತ್ತೇವೆ ಅಂತಾ ಸಂತಸ ವ್ಯಕ್ತಪಡಿಸಿದರು. ಮಂಡ್ಯ ಜನರ ಬಹು ದಿನಗಳ ಕನಸು ಈಡೇರುವ ಕಾಲಕ್ಕೆ ಕ್ಷಣಗಣನೆ ಆರಂಭವಾಗಿದೆ

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಿಎಂ ಪದ ಬಳಕೆ ತಪ್ಪು, ಕೆಲಸವನ್ನ ಟೀಕಿಸಲಿ: ಶಾಸಕಿ ಪೂರ್ಣಿಮಾ

    ಮಾಜಿ ಸಿಎಂ ಪದ ಬಳಕೆ ತಪ್ಪು, ಕೆಲಸವನ್ನ ಟೀಕಿಸಲಿ: ಶಾಸಕಿ ಪೂರ್ಣಿಮಾ

    ಚಿತ್ರದುರ್ಗ: ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸುವಾಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪದ ಬಳಕೆ ತಪ್ಪು. ಸಂಸದೆಯವರ ಕೆಲಸಗಳ ಟೀಕಿಸಲಿ, ಅವರ ಹೇಳಿಕೆಗಳನ್ನು ಖಂಡಿಸಲಿ. ಆದ್ರೆ ಮಹಿಳಾ ಸಂಸದರ ಬಗ್ಗೆ ಮಾತನಾಡುವಾಗ ಬಳಕೆ ಸರಿಯಾಗಿರಬೇಕೆಂದು ಬಿಜೆಪಿ ಶಾಸಕಿ ಪೂರ್ಣಿಮಾ ಹೇಳಿದ್ದಾರೆ.

    ಸಂಸದರ ಹೇಳಿಕೆಗಳ ತಪ್ಪಿದ್ರೆ ರಾಜಕೀಯವಾಗಿ ಟೀಕಿಸಲಿ. ಟೀಕೆ ಮಾಡುವ ಆಡುವ ಮಾತುಗಳು ಬೇರೆ ಅರ್ಥ ನೀಡುವಂತಿರಬಾರದು. ಮುಂದಿನ ದಿನಗಳಲ್ಲಿ ರಾಜಕಾರಣಿಗಳು ಹೇಗೆ ಇರಬೇಕು ಎಂಬುದನ್ನ ನೋಡಿ ಕಲಿಯುವ ಜನರು ಇರ್ತಾರೆ. ಕುಮಾರಸ್ವಾಮಿ ಅವರು ಸರಳತೆಗೆ ಎಲ್ಲರಿಗೂ ಇಷ್ಟ ಆಗ್ತಾರೆ. ಕೆಲವೊಮ್ಮೆ ಕೋಪದಲ್ಲಿ ಮಾತನಾಡುವಾಗ ಸರಿಯಾದ ಪದ ಬಳಸಲಿ ಅನ್ನೋದು ನನ್ನ ಅಭಿಪ್ರಾಯ ಎಂದರು. ಇದನ್ನೂ ಓದಿ: ಇಂದು ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ

    ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?:ಕೆಆರ್‍ಎಸ್ ಜಲಾಶಯದ ಗೇಟ್ ಗೆ ಮಂಡ್ಯ ಸಂಸದರನ್ನು ಮಲಗಿಸಿಬಿಟ್ಟರೆ ನೀರು ಹೋಗುವುದು ನಿಲ್ಲಬಹುದೇನೊ? ಅನುಕಂಪದ ಅಲೆ ಮೇಲೆ ಮಂಡ್ಯ ಸಂಸದೆಯಾಗಿ ಆಯ್ಕೆಯಾದ ಮೇಲೆ ಜನರ ಕೆಲಸ ಮಾಡಬೇಕು. ಇಲ್ಲದಿದ್ರೆ, ಮುಂದಿನ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ – ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್ ಅಂದ್ರು ಸಂಸದೆ

  • ಸುಮಲತಾ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ: ಅಶ್ವಥ್ ನಾರಾಯಣ್

    ಸುಮಲತಾ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ: ಅಶ್ವಥ್ ನಾರಾಯಣ್

    ಮಂಡ್ಯ: ಫಲಿತಾಂಶ ಬರುವುದಕ್ಕೂ ಮುನ್ನವೇ, ಸುಮಲತಾ ಅಂಬರೀಶ್ ಗೆಲುವಿಗೆ ಸಹಕರಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರಿಗೆ ಧನ್ಯವಾದಗಳು ಎಂದು ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.

    ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯ ನಂತರ ಮಾತನಾಡಿದ ಅಶ್ವಥ್ ನಾರಾಯಣ್, ಸುಮಲತಾ ಈಗಾಗಲೇ ಗೆದ್ದಾಗಿದೆ. ಫಲಿತಾಂಶ ಬರುವುದೊಂದೆ ಬಾಕಿ ಉಳಿದಿದೆ. ನಾಗಮಂಗಲ ಮತ್ತು ಕೆ.ಆರ್ ಪೇಟೆಗೆ ತಾಲೂಕುಗಳಿಗೆ ಭೇಟಿ ನೀಡಿ ವರದಿ ಪಡೆದಿದ್ದೇನೆ. ಸುಮಲತಾ ಎಲ್ಲ ಕಡೆ ಲೀಡ್ ಪಡೆಯುತ್ತಾರೆ. ಹೀಗಾಗಿ ಅವರು ಗೆಲ್ಲುವುದು ನಿಶ್ಚಿತ ಎಂದು ಹೇಳಿ ಅಭಿನಂದನೆ ತಿಳಿಸಿದರು.

    ಕೆ.ಆರ್ ಪೇಟೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಗೆದ್ದು ಅಧಿಕಾರಕ್ಕೆ ಬರುತ್ತಾರೆ ಎಂದು ಅಶ್ವಥ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನಿಂದ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಅಖಾಡಕ್ಕೆ ಧುಮುಕಿದ್ದರು.
    ಏಪ್ರಿಲ್ 18 ರಂದು ಮಂಡ್ಯದಲ್ಲಿ ಎರಡನೇ ಹಂತದಲ್ಲಿ ಲೋಕಸಭಾ ಚುನಾವಣೆ ನಡೆದಿದ್ದು, ಮೇ 23 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

  • ಸುಮಲತಾ ಅಂಬರೀಶ್ ಮುಂದೆ ‘ಪಂಚ’ ಪ್ರಶ್ನೆಗಳನ್ನಿಟ್ಟ ಜೆಡಿಎಸ್ ಕಾರ್ಯಕರ್ತರು

    ಸುಮಲತಾ ಅಂಬರೀಶ್ ಮುಂದೆ ‘ಪಂಚ’ ಪ್ರಶ್ನೆಗಳನ್ನಿಟ್ಟ ಜೆಡಿಎಸ್ ಕಾರ್ಯಕರ್ತರು

    ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ಮೈತ್ರಿಯಲ್ಲಿ ಸೀಟುಗಳ ಹಂಚಿಕೆಯಲ್ಲಿ ಒಮ್ಮತವೇ ಬರುತ್ತಿಲ್ಲ. ಈ ಎಲ್ಲದರ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿಗೆ ಕಬ್ಬಿಣದ ಕಡಲೆಯಾದಂತೆ ಆಗಿದೆ. ಚುನಾವಣೆಗೆ ಸ್ಪರ್ಧಿಸಲು ನಟಿ ಸುಮಲತಾ ಅಂಬರೀಶ್ ಮುಂದಾಗಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೈತ್ರಿಯ ಜೆಡಿಎಸ್ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಅಖಾಡಕ್ಕಿಳಿಸಲು ಸಿದ್ಧಗೊಂಡಿದೆ. ಅಂಬರೀಶ್ ಅಭಿಮಾನಿಗಳಾಗಿರುವ ಜೆಡಿಎಸ್ ಕಾರ್ಯಕರ್ತರು ಸುಮಲತಾರ ಮುಂದೆ ಪಂಚ ಪ್ರಶ್ನೆಗಳನ್ನು ಇಟ್ಟಿದ್ದಾರೆ.

    ಪಂಚ ಪ್ರಶ್ನೆಗಳು:
    ಪ್ರಶ್ನೆ 1: ಅಂಬರೀಶಣ್ಣ ಬದುಕಿದ್ದಾಗ ನನ್ನ ಕುಟುಂಬಸ್ಥರನ್ನು ರಾಜಕೀಯಕ್ಕೆ ಕರೆತರಲ್ಲ ಅಂದಿದ್ರು. ಅವರ ಮಾತಿಗೆ ಕಿಂಚಿತ್ತೂ ಬೆಲೆ ಕೊಡಲ್ವಾ..?
    ಪ್ರಶ್ನೆ 2: ಕಳೆದ ಬಾರಿ ಮನೆ ಬಾಗಿಲಿಗೆ ಬಿ-ಫಾರಂ ಕೊಟ್ಟಿದ್ರೂ ಎಲೆಕ್ಷನ್‍ನಿಂದ ದೂರ ಉಳಿದಿದ್ದು ನಿಮಗೆ ಮರೆತು ಹೋಯ್ತಾ..?
    ಪ್ರಶ್ನೆ 3: ಮಂಡ್ಯ ಜನರ ಋಣ ತೀರಿಸಲು ರಾಜಕೀಯನೇ ಬೇಕಾ…? ಎನ್‍ಜಿಓ ತೆರೆದು ಸಹಾಯ ಮಾಡೋಕೆ ಆಗಲ್ವಾ..?
    ಪ್ರಶ್ನೆ 4: ಅಂಬರೀಶ್ ನಿಧನರಾದಾಗ ಕುಮಾರಣ್ಣ ಸಾಮಾನ್ಯ ಅಭಿಮಾನಿಯಂತೆ ಮಂಡ್ಯದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಮರೆತು ಹೋಯ್ತಾ..?
    ಪ್ರಶ್ನೆ 5: ಅಂಬಿ ಅಣ್ಣನ ಅಗಲಿಕೆಯನ್ನೇ ಬಂಡವಾಳ ಮಾಡಿಕೊಂಡ ನಿಮ್ಮನ್ನ ಗೆಲ್ಲಿಸಬೇಕಾ..? ನೇರವಾಗಿ ಹೇಳಿಬಿಡಿ.. (ಅಂಬರೀಶ್ ಅಣ್ಣನ ಹೆಸರಿನಲ್ಲಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ಕಟ್ಟಬೇಕು ಎಂದ ಕುಮಾರಣ್ಣನ ಗೆಲ್ಲಿಸಬೇಕೋ..? ಅಥವಾ ನಿಮ್ಮನ್ನ ಗೆಲ್ಲಿಸಬೇಕಾ..?)

    ಹೀಗೆ ಸಾಮಾಜಿಕ ಜಾಲತಾಣದ ಮೂಲಕ ಜೆಡಿಎಸ್ ಕಾರ್ಯಕರ್ತರು ಸುಮಲತಾರಿಗೆ ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಕೇಳಿಕೊಂಡಿದ್ದಾರೆ. ಇತ್ತ ಸುಮಲತಾ ಅಂಬರೀಶ್ ಮಂಡ್ಯದಲ್ಲಿರುವ ಶಿಫ್ಟ್ ಆಗುತ್ತಿದ್ದು, ಚುನಾವಣೆಗೆ ಸ್ಪರ್ಧಿಸೋದು ಖಂಡಿತ ಎಂದು ಹೇಳಿದ್ದಾರೆ.

    ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಂಡ್ಯದಿಂದ ಮೊಮ್ಮಗ ನಿಖಿಲ್ ಕುಮಾರ್ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಇತ್ತ ನಿಖಿಲ್ ಕುಮಾರ್ ಸಹ ಮಂಡ್ಯದಲ್ಲಿ ಮಿಂಚಿನಂತೆ ಸಂಚಾರ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv