Tag: sukma

  • ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ಇಬ್ಬರು CRPF ಸಿಬ್ಬಂದಿ ಸಾವು

    ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ಇಬ್ಬರು CRPF ಸಿಬ್ಬಂದಿ ಸಾವು

    ರಾಯ್ಪುರ: ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟದಲ್ಲಿ ಇಬ್ಬರು ಸಿಆರ್‌ಪಿಎಫ್ (CRPF) ಸಿಬ್ಬಂದಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ (Chhattisgarh) ಸುಕ್ಮಾ (Sukma) ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

    ಸುಕ್ಮಾ ಜಿಲ್ಲೆಯ ಸಿಲ್ಗರ್ ಮತ್ತು ತೆಕುಲಗುಡೆಮ್ ಗ್ರಾಮಗಳ ನಡುವೆ ನಕ್ಸಲರು ಐಇಡಿ ಅಳವಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ನೌಕಪಡೆಯಿಂದ ಭಾರತದ 22 ಮೀನುಗಾರರ ಅರೆಸ್ಟ್

    ಸಿಆರ್‌ಪಿಎಫ್‌ನ ಕೋಬ್ರಾ 201 ಬೆಟಾಲಿಯನ್‌ನ ಸಿಬ್ಬಂದಿ, ಸಿಲ್ಗರ್‌ನಿಂದ ಟೇಕುಲಗುಡೆಮ್ ಕ್ಯಾಂಪ್‌ಗಳಿಗೆ ಅದರ ರಸ್ತೆ ಉದ್ಘಾಟನೆಯ ಅಂಗವಾಗಿ ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ ಐಇಡಿ ಸ್ಫೋಟಗೊಂಡು ಘಟನೆ ನಡೆದಿದೆ. ಇದನ್ನೂ ಓದಿ: NEET ಪರೀಕ್ಷಾ ಅಕ್ರಮ ಕೇಸ್:‌ ʻಸಾಲ್ವರ್‌ ಗ್ಯಾಂಗ್‌ʼ ಕೆಲಸ ಏನಾಗಿತ್ತು? ಮಾಸ್ಟರ್‌ ಮೈಂಡ್‌ ಮಾಫಿಯಾಗೆ ಸಿಲುಕಿದ್ದು ಹೇಗೆ?

    ಘಟನೆಯಲ್ಲಿ ಮೃತಪಟ್ಟ ಸಿಬ್ಬಂದಿಯನ್ನು ಕೇರಳದ ತಿರುವನಂತಪುರದ ವಿಷ್ಣು ಆರ್ (35) ಮತ್ತು ಉತ್ತರ ಪ್ರದೇಶದ ಕಾನ್ಪುರದ ಶೈಲೇಂದ್ರ (29) ಎಂದು ಗುರುತಿಸಲಾಗಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇಳಿವಯಸ್ಸಲ್ಲೂ ದೇವೇಗೌಡರಿಗೆ ಕೊಡಬಾರದ ನೋವು ಕೊಡ್ತಿದ್ದಾರೆ: ಹೆಚ್‍ಡಿಕೆ

  • ಗೆಲುವನ್ನು ಸುಕ್ಮಾ ಯೋಧರಿಗೆ ಅರ್ಪಿಸಿದ ಬಿಜೆಪಿ- ಸಂಭ್ರಮಾಚರಣೆ ಬೇಡವೆಂದು ನಿರ್ಧಾರ

    ಗೆಲುವನ್ನು ಸುಕ್ಮಾ ಯೋಧರಿಗೆ ಅರ್ಪಿಸಿದ ಬಿಜೆಪಿ- ಸಂಭ್ರಮಾಚರಣೆ ಬೇಡವೆಂದು ನಿರ್ಧಾರ

    ನವದೆಹಲಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. ಹೀಗಾಗಿ ಬಿಜೆಪಿ ಗೆಲುವು ಬಹುತೇಕ ಖಚಿತವಾಗಿದ್ದು, ಆದ್ರೆ ಈ ಗೆಲುವನ್ನು ಆಚರಿಸದೇ ಇರಲು ಬಿಜೆಪಿ ನಿರ್ಧರಿಸಿದೆ.

    ಕಳೆದ ಸೋಮವಾರ ಸುಕ್ಮಾದಲ್ಲಿ ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು. ಈ ವೇಳೆ ಸುಮಾರು 25 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಬಿಜೆಪಿಗೆ ದೊರೆತ ಜಯವನ್ನು ಆಚರಿಸಲ್ಲ ಅಂತಾ ದೆಹಲಿಯ ಬಿಜೆಪಿ ಮುಖಂಡ ಮನೋಜ್ ತಿವಾರಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ದೆಹಲಿಯಲ್ಲಿ ಸಿಕ್ಕ ಈ ವಿಜಯವನ್ನು ಮಡಿದ ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ಸೈನಿಕರಿಗೆ ಅರ್ಪಿಸುವುದಾಗಿ ಅವರು ಹೇಳಿದ್ದಾರೆ.

    ಸದ್ಯ ಒಟ್ಟು 270 ಸ್ಥಾನಗಳಲ್ಲಿ ಬಿಜೆಪಿ 180ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮೂರನೇ ಬಾರಿ ಮೂರು ಪಾಲಿಕೆಯ ಗದ್ದುಗೆಯನ್ನು ಏರಲಿದೆ.

  • ನಕ್ಸಲರು ರಕ್ತಪಾತ ನಡೆಸಿದ್ದು ಹೇಗೆ? ಹೃದಯ ಕಲಕುವ ಸಿಆರ್‍ಪಿಎಫ್ ಯೋಧನ ಮಾತುಗಳನ್ನು ಓದಿ

    ನಕ್ಸಲರು ರಕ್ತಪಾತ ನಡೆಸಿದ್ದು ಹೇಗೆ? ಹೃದಯ ಕಲಕುವ ಸಿಆರ್‍ಪಿಎಫ್ ಯೋಧನ ಮಾತುಗಳನ್ನು ಓದಿ

    ರಾಯ್‍ಪುರ್: ಛತ್ತೀಸ್‍ಗಢದ ಸುಕ್ಮಾದಲ್ಲಿ ರಸ್ತೆ ಮಾರ್ಗ ತೆರವು ವೇಳೆ ಗಸ್ತಿನಲ್ಲಿದ್ದ ಸಿಆರ್‍ಪಿಎಫ್ ಯೋಧರ ಮೇಲೆ ನಕ್ಸಲರು ದಾಳಿ ನಡೆಸಿದ್ದು, 25 ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.  ಇಂದು ಗೃಹಸಚಿವ ರಾಜನಾಥ್ ಸಿಂಗ್ ಸುಕ್ಮಾ ಜಿಲ್ಲೆಗೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ್ರು.

    ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ಯೋಧರು ಮತ್ತು ನಕ್ಸಲರ ನಡುವೆ ಸೋಮವಾರ ಮಧ್ಯಾಹ್ನ ಈ ಗುಂಡಿನ ದಾಳಿ ನಡೆದಿತ್ತು.

    ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಯೋಧರೊಬ್ಬರು ಹೇಳಿಕೆ ನೀಡಿದ್ದು, ಸುಮಾರು 300 ನಕ್ಸಲರು ಯೋಧರ ಮೇಲೆ ದಾಳಿ  ಮಾಡಿದ್ರು ಎಂದು ಹೇಳಿದ್ದಾರೆ. ದಾಳಿಗೂ ಮುನ್ನ ನಕ್ಸಲರು ಸ್ಥಳೀಯರನ್ನು ಕಳುಹಿಸಿ ಯೋಧರಿರುವ ಸ್ಥಳದ ಬಗ್ಗೆ ಮಾಹಿತಿ ಪಡೆದಿದ್ರು ಎಂದು ಯೋಧ ಶೇರ್ ಮೊಹಮದ್ ಹೇಳಿದ್ದಾರೆ.

    ಮಧ್ಯಾಹ್ನ 12.25ರ ವೇಳೆಗೆ ಈ ದಾಳಿ ನಡೆಯಿತು. ನಾವು 150 ಮಂದಿ ಇದ್ವಿ, ನಮ್ಮನ್ನು ಸುತ್ತುಗಟ್ಟಿ ಅವರು ದಾಳಿ ನಡೆಸಿದ್ರು, ನಾನು 3-4 ನಕ್ಸಲರ ಎದೆಗೆ ಗುಂಡಿನ ದಾಳಿ ನಡೆಸಿದ್ದೇನೆ ಎಂದು ಅವರು ತಿಳಿಸಿದರು.

    300 ಕ್ಕೂ ಹೆಚ್ಚು ಮಂದಿ ದಾಳಿ ಮಾಡಿದ್ರು. ಅವರಲ್ಲಿ ಗ್ರಾಮಸ್ಥರು, ಮಹಿಳೆಯರು ಹಾಗೂ ಕಪ್ಪು ಸಮವಸ್ತ್ರ ಧರಿಸಿದ್ದವರು ಇದ್ರು. ಅವರ ಬಳಿ ರಾಕೆಟ್ ಲಾಂಚರ್, ಎಕೆ47, ಐಎನ್‍ಎಸ್‍ಎಎಸ್ ರೈಫಲ್‍ಗಳಿದ್ದವು. ನಾವೂ ಕೂಡ ಅವರಲ್ಲಿ ಸಾಕಷ್ಟು ಮಂದಿಯನ್ನ ಹತ್ಯೆಗೈದೆವು. ನಕ್ಸಲರು ತಮ್ಮ ರಕ್ಷಣೆಗೆ ಗ್ರಾಮಸ್ಥರನ್ನು ಬಳಸಿಕೊಂಡ್ರು ಎಂದು ಅವರು ತಿಳಿಸಿದ್ದಾರೆ.

    ಈ ದಾಳಿ ವೇಳೆ ನಕ್ಸಲರು ಯೋಧರ ಬಳಿಯಿದ್ದ ರೈಫಲ್‍ಗಳನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ.

     

  • ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ: 24 ಮಂದಿ ಸಿಆರ್‍ಪಿಎಫ್ ಯೋಧರು ಹುತಾತ್ಮ

    ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ: 24 ಮಂದಿ ಸಿಆರ್‍ಪಿಎಫ್ ಯೋಧರು ಹುತಾತ್ಮ

    ರಾಯ್ ಪುರ್: ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ನಡೆಸಿದ ದಾಳಿಯಲ್ಲಿ 24 ಮಂದಿ ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

    ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ದಾಳಿ ನಡೆದಿತ್ತು. ಮಧ್ಯಾಹ್ನ ನಡೆದ ಈ ಚಕಮಕಿಯಲ್ಲಿ 24 ಮಂದಿ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಘಟನೆಯಲ್ಲಿ ಆರು ಮಂದಿ ಸಿಆರ್ ಪಿಎಫ್ ಯೋಧರು ಗಾಯಗೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ಗಾಯಗೊಂಡವರನ್ನು ಕರೆತರಲು ಹೆಲಿಕಾಪ್ಟರ್ ಅನ್ನು ರವಾನಿಸಲಾಗಿದ್ದು, ಎನ್‍ಕೌಂಟರ್ ಕಾರ್ಯಾಚರಣೆ ಈಗಲೂ ಮುಂದುವರಿಯುತ್ತಿದೆ.

    ಸಿಆರ್‍ಪಿಎಫ್ ಯೋಧರು ಇಲ್ಲಿನ ಅರಣ್ಯದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಕ್ಸಲರು ಯೋಧರ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.