Tag: Sukhoi-30

  • IAF Jets Crashː ವಾಯುಸೇನಾ ವಿಮಾನಗಳು ಪತನ – ಬ್ಲ್ಯಾಕ್‌ ಬಾಕ್ಸ್‌ ಪತ್ತೆ

    IAF Jets Crashː ವಾಯುಸೇನಾ ವಿಮಾನಗಳು ಪತನ – ಬ್ಲ್ಯಾಕ್‌ ಬಾಕ್ಸ್‌ ಪತ್ತೆ

    ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ತಾಲೀಮು ನಡೆಸುತ್ತಿದ್ದ ವೇಳೆ ಪತನಗೊಂಡಿದ್ದ ಸುಖೋಯ್-30 ಹಾಗೂ ಮಿರಾಜ್-2000 ಭಾರತೀಯ ಯುದ್ಧ ವಿಮಾನಗಳ (Fighter Jets) ಬ್ಲ್ಯಾಕ್‌ಬಾಕ್ಸ್ (ಡೇಟಾ ರೆಕಾರ್ಡರ್) (Black Box) ಭಾನುವಾರ ಪತ್ತೆಯಾಗಿದೆ.

    ಸುಖೋಯ್-30 (Sukhoi 30) ಹಾಗೂ ಮಿರಾಜ್-2000 (Mirage 2000) ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ಟೇಕಾಫ್ ಆಗಿ ತಾಲೀಮು ನಡೆಸುತ್ತಿದ್ದವು. ಬೆಳಗ್ಗೆ 5:30ರ ಸುಮಾರಿಗೆ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಮಧ್ಯಪ್ರದೇಶದ ಮೊರೆನಾ ಬಳಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪತನಗೊಂಡಿದ್ದವು. ಪರಿಣಾಮ ಮಿರಾಜ್-2000 ಯುದ್ಧ ವಿಮಾನದಲ್ಲಿದ್ದ ಪೈಲಟ್ ಮೃತಪಟ್ಟಿದ್ದರು. ಇದನ್ನೂ ಓದಿ: ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ

    ಘಟನೆ ಬಳಿಕ ಮಿರಾಜ್ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಸುಖೋಯ್ ವಿಮಾನದ ಬ್ಲ್ಯಾಕ್ ಬಾಕ್ಸ್‌ನ ಒಂದು ಭಾಗ ಪತ್ತೆಯಾಗಿದ್ದು, ಉಳಿದ ಭಾಗವು ಭರತ್ ಪುರದಲ್ಲಿ ಬಿದ್ದಿರಬಹುದು ಎಂದು ಮೊರೆನಾ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಬಗ್ರಿ ಹೇಳಿದ್ದಾರೆ. ಇದನ್ನೂ ಓದಿ: Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ

    Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ

    ವಿಮಾನಗಳು ತಾಲೀಮು ನಡೆಸುತ್ತಿದ್ದ ಸಂದರ್ಭದಲ್ಲಿ ಗಾಳಿಯಲ್ಲಿ ಡಿಕ್ಕಿ ಹೊಡೆದಿರುವ ಸಾಧ್ಯತೆಯಿದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ. ಆದರೆ ಐಎಎಫ್‌ನಿಂದ (IAF) ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ

    Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ (Gwalior) ತಾಲೀಮು ನಡೆಸುತ್ತಿದ್ದ ಭಾರತದ ವಾಯುಸೇನೆಯ ವಿಮಾನಗಳಾದ ಸುಖೋಯ್-30 (Sukhoi-30) ಮತ್ತು ಮಿರಾಜ್ 2000 (Mirage 2000) ವಿಮಾನಗಳು ಡಿಕ್ಕಿ ಹೊಡೆದುಕೊಂಡು ಪತನಗೊಂಡ ಪರಿಣಾಮ, ಮಿರಾಜ್ 2000 ಯುದ್ಧ ವಿಮಾನದಲ್ಲಿದ್ದ ಪೈಲಟ್ (Pilot) ಮೃತಪಟ್ಟಿರುವುದಾಗಿ ವಾಯುಸೇನೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ತಾಲೀಮು ನಡೆಸುತ್ತಿದ್ದವು. ಬೆಳಗ್ಗೆ 5:30ರ ಸುಮಾರಿಗೆ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಮಧ್ಯಪ್ರದೇಶದ ಮೊರೆನಾ ಬಳಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪತನಗೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ವರದಿಯಾಗಿದೆ. ಇದನ್ನೂ ಓದಿ: Plane Crash: ಬೆಂಕಿ ಕಾಣಿಸಿಕೊಂಡು ಪತನಗೊಂಡ ಚಾರ್ಟರ್ಡ್ ವಿಮಾನ – ಪೈಲಟ್‍ಗಾಗಿ ಹುಡುಕಾಟ

    ಸುಖೋಯ್-30 ವಿಮಾನದಲ್ಲಿ ಇಬ್ಬರು ಪೈಲಟ್ ಮತ್ತು ಮಿರಾಜ್‍ನಲ್ಲಿ ಓರ್ವ ಪೈಲಟ್ ಇದ್ದರು. ಈ ಪೈಕಿ ಸುಖೋಯ್-30 ವಿಮಾನದಲ್ಲಿದ್ದ ಇಬ್ಬರು ಪೈಲಟ್‍ಗಳು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿರಾಜ್ 2000ನಲ್ಲಿದ್ದ ಓರ್ವ ಪೈಲಟ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವಾಯುಸೇನೆ ಮಾಹಿತಿ ಹಂಚಿಕೊಂಡಿದೆ. ಘಟನೆಯ ತನಿಖೆಗೆ ಐಎಎಫ್ (IAF) ಸೂಚಿಸಿದೆ.

    ಘಟನೆ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಿಗೆ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ (V.R Chaudhari) ಮಾಹಿತಿ ನೀಡಿದ್ದು, ರಾಜನಾಥ್ ಸಿಂಗ್ ಅವರು ಪೈಲಟ್‍ಗಳ ಯೋಗಕ್ಷೇಮವನ್ನು ವಿಚಾರಿಸಿದರು. ಬಳಿಕ ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ.

    ಸುಖೋಯ್-30 ಮತ್ತು ಮಿರಾಜ್ 2000 ವಿಮಾನಗಳು ಪತನಗೊಂಡ ಸ್ಥಳದಿಂದ 100 ಕಿ.ಮೀ ದೂರದಲ್ಲಿರುವ ಭರತ್‍ಪುರದಲ್ಲಿ ಮತ್ತೊಂದು ವಿಮಾನ ದುರಂತ ಸಂಭವಿಸಿದೆ. ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: AirCraft Crash: ವಾಯು ಸೇನೆಯ ಸುಖೋಯ್-30, ಮಿರಾಜ್ 2000 ವಿಮಾನ ಪತನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • AirCraft Crash: ವಾಯು ಸೇನೆಯ ಸುಖೋಯ್-30, ಮಿರಾಜ್ 2000 ವಿಮಾನ ಪತನ

    AirCraft Crash: ವಾಯು ಸೇನೆಯ ಸುಖೋಯ್-30, ಮಿರಾಜ್ 2000 ವಿಮಾನ ಪತನ

    ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ತಾಲೀಮು ನಡೆಸುತ್ತಿದ್ದ ಭಾರತದ ವಾಯು ಸೇನೆಯ ವಿಮಾನಗಳಾದ ಸುಖೋಯ್-30 (Sukhoi-30) ಮತ್ತು ಮಿರಾಜ್ 2000 (Mirage 2000) ವಿಮಾನಗಳು ಪತನಗೊಂಡಿದೆ.

    ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ತಾಲೀಮು ನಡೆಸುತ್ತಿದ್ದವು. ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಡಿಕ್ಕಿ ಹೊಡೆದುಕೊಂಡು ಮಧ್ಯಪ್ರದೇಶದ ಮೊರೆನಾ (Madhya Pradeshs Morena) ಬಳಿ ಪತನಗೊಂಡಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಭಯೋತ್ಪಾದಕ ಗುಂಡಿನ ದಾಳಿಗೆ 7 ಮಂದಿ ಬಲಿ, 10 ಮಂದಿಗೆ ಗಾಯ

    ಯುದ್ದ ವಿಮಾನಗಳು ಪತನಗೊಂಡಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದೆ. ಸುಖೋಯ್ ವಿಮಾನದಲ್ಲಿ ಇಬ್ಬರು ಪೈಲಟ್ ಮತ್ತು ಮೀರಾಜ್‍ನಲ್ಲಿ ಓರ್ವ ಪೈಲಟ್ ಇದ್ದ ಬಗ್ಗೆ ಮಾಹಿತಿ ಹೊರಬಂದಿದ್ದು, ಸದ್ಯ ಇಬ್ಬರು ಪೈಲಟ್ ಸುರಕ್ಷಿತವಾಗಿರುವ ಬಗ್ಗೆ ವರದಿಯಾಗಿದೆ. ಘಟನೆಯ ತನಿಖೆಗೆ ಐಎಎಫ್ ಸೂಚಿಸಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯದಿಂದ ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಾಗಿದೆ. ಇದನ್ನೂ ಓದಿ: ಕಚೇರಿಗೆ ನಡೆದುಕೊಂಡು ಹೋಗ್ತಿದ್ದಾಗ ಕಟ್ಟಡ ಉರುಳಿ ಬಿದ್ದು ಮಹಿಳಾ ಟೆಕ್ಕಿ ದುರ್ಮರಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚೀನಾ ಗಡಿಯ ಬಳಿ ವಾಯುಸೇನೆಯ ಸುಖೋಯ್-30 ಯುದ್ಧ ವಿಮಾನ ನಾಪತ್ತೆ

    ಚೀನಾ ಗಡಿಯ ಬಳಿ ವಾಯುಸೇನೆಯ ಸುಖೋಯ್-30 ಯುದ್ಧ ವಿಮಾನ ನಾಪತ್ತೆ

    ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ಯುದ್ಧ ವಿಮಾನ ಸುಖೋಯ್-30 ನಾಪತ್ತೆಯಾಗಿದೆ.

    ಇಂದು ಬೆಳಿಗ್ಗೆ ಅಸ್ಸಾಂನ ತೇಜ್‍ಪುರ್ ಬಳಿ ಚೀನಾ ಗಡಿಯ ಸಮೀಪ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನ ನಾಪತ್ತೆಯಾಗಿದೆ. ಬೆಳಿಗ್ಗೆ 9.30ಕ್ಕೆ ಟೇಕ್ ಆಫ್ ಆದ ವಿಮಾನ ಅರುಣಾಚಲಪ್ರದೇಶದ ದೌಲಾಸಾಂಗ್ ಪ್ರದೇಶದ ಬಳಿ ವಿಮಾನ ಕಾಣೆಯಾಗಿದೆ. ವಿಮಾನ ಕೊನೆಯ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದು ಸುಮಾರು 11.30ರ ವೇಳೆಗೆ ತೇಜ್‍ಪುರ್‍ನಿಂದ 60 ಕಿ.ಮೀ ದೂರದಲ್ಲಿದ್ದಾಗ ಎಂದು ವರದಿಯಾಗಿದೆ.

    ವಿಮಾನದಲ್ಲಿ ಇಬ್ಬರು ಪೈಲಟ್‍ಗಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತೇಜ್‍ಪುರ್ ವಾಯುಪಡೆ ನಿಲ್ದಾಣ ಚೀನಾ ಗಡಿಯಿಂದ ಸುಮಾರು 172 ಕಿ.ಮೀ ದೂರದಲ್ಲಿದೆ.

    ಇದೇ ವರ್ಷ ಮಾರ್ಚ್ ನಲ್ಲಿ ಸುಖೋಯ್-30 ಯುದ್ಧವಿಮಾನ ರಾಜಸ್ಥಾನದ ಬರ್ಮರ್ ವಾಯುನೆಲೆ ಬಳಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಇಬ್ಬರು ಪೈಲೆಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದರು.

    ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.