Tag: Sukhoi

  • ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ

    ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ

    ಭಾರತದ ರಕ್ಷಣಾ ಉಪಕರಣಗಳ ಖರೀದಿ ಸಮಿತಿ (DAC), ಇತ್ತೀಚೆಗಷ್ಟೇ ಸುಮಾರು 45,000 ಕೋಟಿ ರೂ. ಮೌಲ್ಯದ ವಿವಿಧ ಆಯುಧಗಳ ಖರೀದಿಗೆ ಒಪ್ಪಿಗೆ ಸೂಚಿಸಿದೆ. ಅನುಮೋದನೆ ಪಡೆದ ಆಯುಧಗಳಲ್ಲಿ, ಕಡಿಮೆ ವ್ಯಾಪ್ತಿಯ, ಗಾಳಿಯಿಂದ ಭೂಮಿಗೆ ದಾಳಿ ನಡೆಸಬಲ್ಲ ಧ್ರುವಾಸ್ತ್ರ ಕ್ಷಿಪಣಿಗಳು, ಭಾರತ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಾಣದ 12 ಸುಖೋಯ್‌-30 MKI ಯುದ್ಧ ವಿಮಾನಗಳೂ ಸೇರಿವೆ. ಅದರೊಂದಿಗೆ ಆರ್ಟಿಲರಿ ಗನ್‌ಗಳು ಮತ್ತು ರೇಡಾರ್‌ಗಳನ್ನ ಕ್ಷಿಪ್ರವಾಗಿ ಸಾಗಿಸಲು ಅತ್ಯವಶ್ಯಕವಾದ ಹೈ ಮೊಬಿಲಿಟಿ ವೆಹಿಕಲ್ (HMV) ಹಾಗೂ ಗನ್ ಟೋವಿಂಗ್ ವೆಹಿಕಲ್ಸ್‌ಗಳನ್ನ (GTV) ಖರೀದಿಸಲು ಅನುಮೋದನೆ ನೀಡಿದೆ. ಜೊತೆಗೆ ಭಾರತೀಯ ನೌಕಾಪಡೆಯ ಬಳಕೆಗೆ ಹೊಸ ತಲೆಮಾರಿನ ಸಮೀಕ್ಷಾ ಹಡಗುಗಳ ಖರೀದಿಗೂ ಅನುಮತಿ ಲಭಿಸಿದೆ.

    ಈ ಸಂಬಂಧ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯ, ಎಲ್ಲ ಖರೀದಿಯನ್ನೂ ಭಾರತೀಯ ಮೂಲಗಳಿಂದ ನಡೆಸಲಾಗುವುದು ಎಂದಿದ್ದು, ಇದು ಭಾರತದ ‘ಆತ್ಮನಿರ್ಭರ ಭಾರತ’ ಯೋಜನೆಗೆ ಪೂರಕವಾಗಿದೆ ಎಂದಿದೆ. ‘ಬೈ ಇಂಡಿಯನ್’ ವರ್ಗದ ಖರೀದಿಯಲ್ಲಿನ ಆಯುಧಗಳು ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣವಾಗಿರುವುದಿಲ್ಲ. ಆದರೂ ಅವುಗಳ ನಿರ್ಮಾಣದಲ್ಲಿ ಕನಿಷ್ಠ 60% ಭಾರತೀಯ ನಿರ್ಮಾಣದ್ದಾಗಿರಬೇಕು ಎನ್ನುವ ಗುರಿ ಹೊಂದಲಾಗಿದೆ. ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಹಲವು ರಕ್ಷಣಾ ಉತ್ಪನ್ನಗಳಲ್ಲಿ 50% ನಷ್ಟು ಭಾರತೀಯ ನಿರ್ಮಾಣವನ್ನ ಸಾಧಿಸುವ ಗುರಿ ಹೊಂದುವ ಬದಲು, ದೇಶ ಕನಿಷ್ಠ 60% – 65% ಸ್ವದೇಶೀ ನಿರ್ಮಾಣ ಗುರಿ ಸಾಧಿಸಬೇಕು ಎಂದು ಕರೆ ನೀಡಿದ್ದಾರೆ. ಈ ಮೂಲಕ ಆ ಉತ್ಪನ್ನಗಳು ಹೆಚ್ಚು-ಹೆಚ್ಚು ಭಾರತೀಯ ನಿರ್ಮಾಣದ್ದಾಗಿರಲಿವೆ.

    ಧ್ರುವಾಸ್ತ್ರ: ಗಾಳಿಯಿಂದ ಭೂಮಿಗೆ ದಾಳಿ ನಡೆಸುವ ಕ್ಷಿಪಣಿ
    ಇತ್ತೀಚಿನ ವರದಿಗಳ ಪ್ರಕಾರ, ಭಾರತದ ದೇಶೀಯ ನಿರ್ಮಾಣದ ಹೆಲಿಕಾಪ್ಟರ್ ಲಾಂಚ್ಡ್ ನಾಗ್ (ಹೆಲಿನಾ) ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ಎಲ್ಲ ಪರೀಕ್ಷೆಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೆಲಿನಾ ಭಾರತೀಯ ಭೂಸೇನೆಯ ಆವೃತ್ತಿಯಾದರೆ, ಭಾರತೀಯ ವಾಯುಪಡೆಯ ಆವೃತ್ತಿಯನ್ನ ಧ್ರುವಾಸ್ತ್ರ ಎಂದು ಕರೆಯಲಾಗುತ್ತದೆ. ಈ ಧ್ರುವಾಸ್ತ್ರವೂ ತನ್ನ ಆರಂಭಿಕ ಪ್ರಾಯೋಗಿಕ ಪರೀಕ್ಷೆಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

    ಹೆಲಿನಾ ಮತ್ತು ಧ್ರುವಾಸ್ತ್ರಗಳು 3ನೇ ತಲೆಮಾರಿನ ಆ್ಯಂಟಿ ಟ್ಯಾಂಕ್ ನಿರ್ದೇಶಿತ ಕ್ಷಿಪಣಿಗಳಾಗಿದ್ದು, ಶತ್ರುಗಳ ವಿರುದ್ಧ ನೇರವಾಗಿ ಅಥವಾ‌ ಗಾಳಿಯಿಂದಲೇ ದಾಳಿ ನಡೆಸಬಲ್ಲವು. ಹೆಲಿನಾ ಕ್ಷಿಪಣಿಗಳನ್ನು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ಧ್ರುವದಿಂದ ಉಡಾವಣೆಗೊಳಿಸಲಾಗುತ್ತದೆ. ಎಎಲ್ಎಚ್ ಧ್ರುವ ಅವಳಿ ಲಾಂಚರ್‌ಗಳನ್ನ ಹೊಂದಿದ್ದು, ಎರಡು ಬದಿಯಲ್ಲೂ ಒಂದೊಂದು ಲಾಂಚರ್‌ಗಳನ್ನು ಹೊಂದಿದೆ. ಇದು ಒಟ್ಟು 8 ಕ್ಷಿಪಣಿಗಳನ್ನ ಒಯ್ಯುವ ಸಾಮರ್ಥ್ಯ ಗಳಿಸಿದೆ. ಪ್ರತಿಯೊಂದು ಕ್ಷಿಪಣಿಗೂ 1 ಕೋಟಿ ರೂ.ಗಿಂತಲೂ ಕಡಿಮೆ ಬೆಲೆಯಿರುತ್ತದೆ.

    ಧ್ರುವಾಸ್ತ್ರ ಕ್ಷಿಪಣಿ 500 ಮೀಟರ್‌ಗಳಷ್ಟು ಕನಿಷ್ಠ ವ್ಯಾಪ್ತಿ ಹಾಗೂ 7 ಕಿಮೀಗಳ ಗರಿಷ್ಠ ವ್ಯಾಪ್ತಿಯನ್ನ ಒಳಗೊಂಡಿದೆ. ಇದನ್ನ ಗರಿಷ್ಠ 4 ಕಿಮೀ ಗಳಷ್ಟು ಎತ್ತರದಿಂದ ಉಡಾವಣೆಗೊಳಿಸಬಹುದಾಗಿದೆ. ಪ್ರತಿ ಗಂಟೆಗೆ 70 ಕಿಮೀ ಗಳಷ್ಟು ವೇಗದಲ್ಲಿ ನಿಖರವಾಗಿ ದಾಳಿ ನಡೆಸಬಲ್ಲದು. ಈ ಕ್ಷಿಪಣಿಯಲ್ಲಿ ವಿಶೇಷ ಸಿಡಿತಲೆಯಿದ್ದು, ಶತ್ರುಗಳ ಟ್ಯಾಂಕ್‌ಗಳ ರಕ್ಷಣಾ ವ್ಯವಸ್ಥೆಯನ್ನ ಭೇದಿಸುವ ಸಾಮರ್ಥ್ಯ ಹೊಂದಿದೆ. ಶತ್ರು ವಾಹನಗಳು ಸಾಮಾನ್ಯ ರಕ್ಷಣಾ ವ್ಯವಸ್ಥೆ ಹೊಂದಿದ್ದರೂ, ಎಕ್ಸ್‌ಪ್ಲೋಸಿವ್ ರಿಯಾಕ್ಟಿವ್ ಆರ್ಮರ್ ಹೊಂದಿದ್ದರೂ ಅವುಗಳನ್ನ ಈ ಸಿಡಿತಲೆ ಭೇದಿಸಬಲ್ಲದು.

    ಧ್ರುವಾಸ್ತ್ರವನ್ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್‌ಮೆಂಟ್ ಪ್ರೋಗ್ರಾಮ್ (IGMDP) ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯ ಮತ್ತು ನಂಬಿಕಾರ್ಹತೆಯನ್ನ ಪರೀಕ್ಷಿಸಲು ಹಲವು ಪರೀಕ್ಷೆಗಳು, ಪ್ರಯೋಗಗಳನ್ನ ಕೈಗೊಳ್ಳಲಾಗಿದೆ. ಈ ಕ್ಷಿಪಣಿ ವ್ಯವಸ್ಥೆಯನ್ನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ಧಿ ಪಡಿಸಿರುವ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಧ್ರುವ ಹಾಗೂ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (LCH) ಹೆಲಿಕಾಪ್ಟರ್‌ಗಳಿಗೆ ಅಳವಡಿಸಲಾಗುತ್ತದೆ.

    ಧ್ರುವಾಸ್ತ್ರದಲ್ಲಿ ಒಂದು ಇಮೇಜಿಂಗ್ ಇನ್‌ಫ್ರಾರೆಡ್ ಸೀಕರ್ ವ್ಯವಸ್ಥೆ ಇದ್ದು, ಇದು ಶತ್ರುವಿನಿಂದ ಬರುವ ಉಷ್ಣತೆಯ ಆಧಾರದಲ್ಲಿ ಕ್ಷಿಪಣಿಯನ್ನ ಗುರಿಯೆಡೆಗೆ ನಿರ್ದೇಶಿಸುತ್ತದೆ. ಇದು ಗುರಿ ಹೊರಸೂಸುವ ಉಷ್ಣತೆ ಮತ್ತು ಇನ್‌ಫ್ರಾರೆಡ್ (ಅತಿಗೆಂಪು) ವಿಕಿರಣವನ್ನ ಗುರುತಿಸುವ ಮೂಲಕ ಕಾರ್ಯಾಚರಿಸುತ್ತದೆ. ಪ್ರತಿಯೊಂದು ವಸ್ತುವೂ ಬೆರಳಚ್ಚಿನ ರೀತಿಯಲ್ಲಿ ಅದರದ್ದೇ ಆದ ಉಷ್ಣತೆ (ಹೀಟ್ ಸಿಗ್ನೇಚರ್) ಹೊಂದಿದೆ. ಕ್ಷಿಪಣಿಯ ಸೀಕರ್ ಈ ಹೀಟ್ ಸಿಗ್ನೇಚರ್ ಛಾಯಾಚಿತ್ರಗಳನ್ನು ತೆಗೆದು, ಅವುಗಳನ್ನು ಬಳಸಿಕೊಂಡು ಕ್ಷಿಪಣಿಯನ್ನು ಆ ಗುರಿಯೆಡೆಗೆ ನಿಖರವಾಗಿ ನಿರ್ದೇಶಿಸುತ್ತದೆ. ಆ ಮೂಲಕ, ಇನ್‌ಫ್ರಾರೆಡ್ ಸೀಕರ್ ಗುರಿಯನ್ನು ಅದು ಹೊರಸೂಸುವ ಉಷ್ಣತೆಯ ಆಧಾರದಲ್ಲಿ ‘ವೀಕ್ಷಿಸಿ’, ಅದರೆಡೆಗೆ ಕ್ಷಿಪಣಿಯನ್ನ ಕರಾರುವಾಕ್ಕಾಗಿ ದಾಳಿ ನಡೆಸುವಂತೆ ಮಾಡುತ್ತದೆ. ಈ ತಂತ್ರಜ್ಞಾನ ಸಾಮಾನ್ಯವಾಗಿ ಉಷ್ಣತೆಯನ್ನ ಸೂಸುವ ವಸ್ತುಗಳಾದ ವಾಹನಗಳು, ವಿಮಾನಗಳು ಅಥವಾ ಕಟ್ಟಡಗಳ ಮೇಲೆ ದಾಳಿ ನಡೆಸಲು ಪೂರಕವಾಗಿದೆ.

    ಧ್ರುವಾಸ್ತ್ರ ಕ್ಷಿಪಣಿ 43 ಕೆಜಿ ತೂಕ ಹೊಂದಿದೆ. ಇದು ಇದರ ಮೂಲ ವಿನ್ಯಾಸವಾದ ನಾಗ್ ಕ್ಷಿಪಣಿಯಷ್ಟೇ ತೂಕ ಹೊಂದಿದೆ. ಇದರ ಸಿಡಿತಲೆ 8 ಕೆಜಿಗಳಷ್ಟು ತೂಕವಿದೆ. ಇದು ಅಂದಾಜು 1.85 – 1.9 ಮೀಟರ್ (6 ಅಡಿ) ಉದ್ದವಿದ್ದು, 0.16-0.2 ಮೀಟರ್ (8 ಇಂಚ್) ವ್ಯಾಸವನ್ನ ಒಳಗೊಂಡಿರುತ್ತದೆ.

    ಮಾಹಿತಿ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Sukhoi, Mirage Fighter Jets Crash: ವಿಮಾನ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮ

    Sukhoi, Mirage Fighter Jets Crash: ವಿಮಾನ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮ

    ಬೆಳಗಾವಿ: ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ ಭಾರತೀಯ ಯುದ್ದ ವಿಮಾನಗಳು ಪರಸ್ಪರ ಡಿಕ್ಕಿ ಪ್ರಕರಣದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮರಾದ ಘಟನೆ ನಡೆದಿದೆ.

    ನಗರದ ಗಣೇಶಪುರದ ಸಂಭಾಜೀ ನಗರದ ನಿವಾಸಿ, ವಿಂಗ್ ಕಮಾಂಡರ್‌ ಹನುಮಂತರಾವ್ (Hanumanth Rao Sarathi) ಹುತಾತ್ಮರಾಗಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿ ಭಾರತೀಯ ವಾಯು ಪಡೆ (IAF) ವಿಷಾದ ವ್ಯಕ್ತಪಡಿಸಿದೆ. ಇದನ್ನೂ ಓದಿ: Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ

    ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಗಣೇಶಪುರದ ಹನುಮಂತರಾವ್ ಮನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವಿಂಗ್ ಕಮಾಂಡರ್ ಸಾವಿನ‌ ಸುದ್ದಿ ತಿಳಿದ ಹನುಮಂತರಾವ್ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಮಧ್ಯಪ್ರದೇಶದ ಮೊರೆನಾ ಸಮೀಪ ಸುಖೋಯ್‌ 30 (Sukhoi) ಹಾಗೂ ಒಂದು ಮಿರಾಜ್‌ 2000 (Mirage) ಯುದ್ಧವಿಮಾನ ಪತನವಾಗಿತ್ತು. ಈ ಎರಡೂ ವಿಮಾನಗಳು ಗ್ವಾಲಿಯರ್‌ ವಾಯುನೆಲೆಯಿಂದ ಟೇಕಾಫ್‌ ಆಗಿದ್ದವು. ಘಟನೆಗೆ ಕಾರಣ ತಿಳಿಯಲು ಭಾರತೀಯ ವಾಯುಪಡೆ ತನಿಖೆಗೆ ಆದೇಶ ಮಾಡಿದೆ. ಇದನ್ನೂ ಓದಿ: Plane Crash: ಬೆಂಕಿ ಕಾಣಿಸಿಕೊಂಡು ಪತನಗೊಂಡ ಚಾರ್ಟರ್ಡ್ ವಿಮಾನ – ಪೈಲಟ್‍ಗಾಗಿ ಹುಡುಕಾಟ

    ವಾಯು ಪಡೆಯ ವಿಮಾನ ಸ್ಥಳಕ್ಕೆ ಧಾವಿಸಿ ‍‍ಪರಿಶೀಲನೆ ನಡೆಸಿತು. ಘಟನೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚೀನಾದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ತೈವಾನ್‌?

    ಚೀನಾದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ತೈವಾನ್‌?

    ತೈಪೆ: ತಂಟೆಕೋರ ಚೀನಾಗೆ ಭಾರೀ ಹಿನ್ನಡೆಯಾಗಿದ್ದು‌, ತೈವಾನ್ ಭೂ ಪ್ರದೇಶದಲ್ಲಿ ಚೀನಾದ ಯುದ್ಧ ವಿಮಾನವೊಂದು ಪತನಗೊಂಡಿದೆ.

    ರಷ್ಯಾ ನಿರ್ಮಿತ ಸುಖೋಯ್‌ 35 ವಿಮಾನ ತೈವಾನ್‌ನ ಕರಾವಳಿ ಪ್ರದೇಶದ ಗುವಾಂಗ್ಸಿ ಎಂಬಲ್ಲಿ ಬಿದ್ದಿದೆ. ಈ ವಿಮಾನ ಯಾವ ಕಾರಣಕ್ಕೆ ಬಿದ್ದಿದೆ ಎಂಬುದಕ್ಕೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ.

    https://twitter.com/NewsLineIFE/status/1301775622658637826

    ಸಾಮಾಜಿಕ ಜಾಲತಾಣದಲ್ಲಿ ವಾಯುಗಡಿ ಉಲ್ಲಂಘಿಸಿ ತನ್ನ ಭೂ ಪ್ರದೇಶದಲ್ಲಿ ಹಾರಾಟ ಮಾಡಿದ್ದಕ್ಕೆ ತೈವಾನ್‌ನ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಯುದ್ಧ ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ.

    ತೈವಾನ್‌ ವಿಮಾನವನ್ನು ಹೊಡೆದು ಹಾಕಿದ್ಯಾ ಅಥವಾ ತಾಂತ್ರಿಕ ಕಾರಣದಿಂದ ವಿಮಾನ ಪತನಗೊಂಡಿದ್ಯಾ ಎಂಬುವುದು ಇನ್ನು ಸ್ಪಷ್ಟವಾಗಿಲ್ಲ. ಎರಡು ಸರ್ಕಾರಗಳು ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಸಾಧಾರಣವಾಗಿ ಸುಖೋಯ್‌ ಅತ್ಯಾಧುನಿಕ ವಿಮಾನವಾಗಿದ್ದು ಮಿಗ್‌ ರೀತಿ ಪತನವಾಗುವ ಸಾಧ್ಯತೆ ಕಡಿಮೆ.

    https://twitter.com/AseemRuhel/status/1301783068869644288

    ಈ ಕುರಿತು ಟ್ವಿಟರ್‌ನಲ್ಲಿಯೂ ಭಾರಿ ಚರ್ಚೆಯಾಗುತ್ತಿದ್ದು, #Taiwan ಹಾಗೂ #Su-35 ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.

  • ಪಾಕಿನಿಂದ ಹಾರಿ ಬಂದ ವಿಮಾನವನ್ನು ಬಲವಂತವಾಗಿ ಇಳಿಸಿದ ವಾಯುಸೇನೆ

    ಪಾಕಿನಿಂದ ಹಾರಿ ಬಂದ ವಿಮಾನವನ್ನು ಬಲವಂತವಾಗಿ ಇಳಿಸಿದ ವಾಯುಸೇನೆ

    ನವದೆಹಲಿ: ಪಾಕಿಸ್ತಾನದಿಂದ ಹಾರಿ ಬಂದ ಜಾರ್ಜಿಯದ ಸರಕು ಸಾಗಾಣೆ ವಿಮಾನವನ್ನು ಭಾರತೀಯ ವಾಯುಸೇನೆ ಬಲವಂತವಾಗಿ ಇಳಿಸಿದ ಘಟನೆ ಜೈಪುರದಲ್ಲಿ ನಡೆದಿದೆ.

    ಜಾರ್ಜಿಯಾದ ಆಂಟೋನೋವ್ ಎಎನ್-12 ಹೆಸರಿನ ಬೃಹತ್ ಸರಕು ವಿಮಾನವು ಟಿಬಿಲಿಸಿಯಿಂದ ಕರಾಚಿ ಮಾರ್ಗವಾಗಿ ದೆಹಲಿಯಲ್ಲಿ ಇಳಿಯಬೇಕಿತ್ತು. ಆದರೆ ಏರ್ ಟ್ರಾಫಿಕ್ ಸರ್ವಿಸಸ್(ಎಟಿಎಸ್) ನೀಡಿದ್ದ ಅಧಿಕೃತ ಮಾರ್ಗವನ್ನು ಬದಲಾಯಿಸಿ ಶುಕ್ರವಾರ ಮಧ್ಯಾಹ್ನ 3:30 ವೇಳೆಗೆ ಗುಜರಾತಿನ ಕಛ್ ವಾಯು ನೆಲೆಯನ್ನು ವಿಮಾನ ಪ್ರವೇಶಿಸಿತ್ತು.

    70 ಕಿ.ಮೀ ದೂರದಲ್ಲಿ ಭಾರತದ ವಾಯುಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಕೂಡಲೇ ಭಾರತದ ವಾಯುಪಡೆ ಕೂಡಲೇ ಜಾಗೃತಗೊಂಡಿತ್ತು. ನಿಯಂತ್ರಣ ಕೊಠಡಿಗಳಿಂದ ರೇಡಿಯೊ ಕರೆಗಳನ್ನು ಮಾಡಿದರೂ ವಿಮಾನದ ಪೈಲಟ್ ಯಾವುದೇ ಪ್ರತಿಕ್ರಿಯೆ ನೀಡದೇ ಮುನ್ನುಗ್ಗಿಸುತ್ತಿದ್ದ.

    ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಉತ್ತರ ಭಾರತದ್ಯಾಂತ ಅಲರ್ಟ್ ಘೋಷಿಸಲಾಯಿತು. ಕೂಡಲೇ ರಾಜಸ್ಥಾನ ಜೋಧ್‍ಪುರ ಮತ್ತು ಉತ್ತರ ಪ್ರದೇಶದಲ್ಲಿರುವ ರಾಯ್‍ಬರೇಲಿ ವಾಯು ನೆಲೆಯಿಂದ ಎರಡು ಸುಖೋಯ್ ಯುದ್ಧ ವಿಮಾನಗಳನ್ನು ಕಳುಹಿಸಿ 27 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಕಾರ್ಗೋ ವಿಮಾನವನ್ನು ಬಲವಂತವಾಗಿ ಸಂಜೆ 4:30ಕ್ಕೆ ಜೈಪುರದಲ್ಲಿ ಇಳಿಸಲಾಯಿತು.

    ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಇಬ್ಬರು ಪೈಲಟ್, ಆರು ಸಿಬ್ಬಂದಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು, ಗುಪ್ತಚರ ದಳದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ವಿಮಾನ ವಾಯು ಮಾರ್ಗವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಲವಂತವಾಗಿ ಇಳಿಸಿಲಾಗಿತ್ತು. ಇದು ಗಂಭೀರವಾದ ಉಲ್ಲಂಘನೆ ಅಲ್ಲ. ವಿಚಾರಣೆ ಬಳಿಕ  ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ವಿಮಾನ ಜೈಪುರದಲ್ಲಿ ಲ್ಯಾಂಡ್ ಆಗದೇ ಇದ್ದರೆ ಯುದ್ಧ ವಿಮಾನಗಳು ಸರಕು ವಿಮಾನವನ್ನು ಹೊಡೆದು ಉರುಳಿಸಲು ಮುಂದಾಗಿತ್ತು.