Tag: Sukhbir Singh Badal

  • ಶಿರೋಮಣಿ ಅಕಾಲಿ ದಳ ಅಧ್ಯಕ್ಷರಾಗಿ ಸುಖಬೀರ್ ಸಿಂಗ್ ಬಾದಲ್ ಮರು ಆಯ್ಕೆ

    ಶಿರೋಮಣಿ ಅಕಾಲಿ ದಳ ಅಧ್ಯಕ್ಷರಾಗಿ ಸುಖಬೀರ್ ಸಿಂಗ್ ಬಾದಲ್ ಮರು ಆಯ್ಕೆ

    ಅಮೃತಸರ: ಶಿರೋಮಣಿ ಅಕಾಲಿ ದಳ ತನ್ನ ಹಿರಿಯ ನಾಯಕ ಸುಖಬೀರ್ ಸಿಂಗ್ ಬಾದಲ್ ಅವರನ್ನು ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇಂದು ಅಮೃತಸರದಲ್ಲಿ ನಡೆದ ಸಾಂಗಠನಿಕ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಧಾರ್ಮಿಕ ದುರಾಚಾರ (ತನ್ಖೈಯಾ) ಆರೋಪದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಕಳೆದ ವರ್ಷ ಆಗಸ್ಟ್ 30ರಂದು, ಸಿಖ್ ಧರ್ಮದ ಸರ್ವೋಚ್ಚ ಆಧ್ಯಾತ್ಮಿಕ ಸಂಸ್ಥೆಯಾದ ಅಕಾಲ್ ತಖ್ತ್, ಸುಖಬೀರ್ ಸಿಂಗ್ ಬಾದಲ್ ಅವರನ್ನು 2007ರಿಂದ 2017ರವರೆಗೆ ಎಸ್‌ಎಡಿ ಸರ್ಕಾರದ ಅವಧಿಯಲ್ಲಿ ಮಾಡಿದ ತಪ್ಪುಗಳಿಗಾಗಿ ಧಾರ್ಮಿಕ ದುರಾಚಾರಕ್ಕೆ ಒಳಗಾದವರು ಎಂದು ಘೋಷಿಸಿತ್ತು. ಈ ಆರೋಪಗಳು, 2015ರಲ್ಲಿ ಗುರು ಗ್ರಂಥ ಸಾಹಿಬ್‌ನ ಅಪವಿತ್ರತೆಗೆ ಸಂಬಂಧಿಸಿದ ಘಟನೆಗಳು ಮತ್ತು ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಕ್ಷಮಾದಾನ ನೀಡಿದ್ದಕ್ಕೆ ಸಂಬಂಧಿಸಿದ್ದವು. ಇದನ್ನೂ ಓದಿ: Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!

    ಈ ಘಟನೆಯ ನಂತರ, ಬಾದಲ್ ತಮ್ಮ ರಾಜೀನಾಮೆಯನ್ನು ಪಕ್ಷದ ಕಾರ್ಯಕಾರಿ ಸಮಿತಿಗೆ ಸಲ್ಲಿಸಿದ್ದರು. ಇದನ್ನು ಈ ವರ್ಷ ಜನವರಿಯಲ್ಲಿ ಸ್ವೀಕರಿಸಲಾಯಿತು. ಬಳಿಕ ಅಕಾಲ್ ತಖ್ತ್ನ ಆದೇಶದಂತೆ, ಬಾದಲ್ ಅವರು ತಮ್ಮ ಶಿಕ್ಷೆಯ ಭಾಗವಾಗಿ ಡಿಸೆಂಬರ್ 2024ರಲ್ಲಿ ಅಮೃತಸರದ ಸ್ವರ್ಣಮಂದಿರದಲ್ಲಿ ಸೇವೆ ಸಲ್ಲಿಸಿದರು. ಇದರಲ್ಲಿ ಒಂದು ದಿನ, ಗೋಲ್ಡನ್ ಟೆಂಪಲ್‌ನ ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುವಾಗ ಮಾಜಿ ಖಲಿಸ್ತಾನಿ ಉಗ್ರಗಾಮಿ ನಾರಾಯಣ್ ಸಿಂಗ್ ಚೌರಾ ಎಂಬಾತನಿಂದ ಗುಂಡಿನ ದಾಳಿಗೆ ಗುರಿಯಾಗಿದ್ದರು. ಆದರೆ, ಈ ದಾಳಿಯಲ್ಲಿ ಬಾದಲ್ ಗಾಯಗೊಳ್ಳದೇ ತಪ್ಪಿಸಿಕೊಂಡಿದ್ದರು. ಇದನ್ನೂ ಓದಿ: ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್‌ ಗೌಡ – ರಜತ್‌ ನಡುವೆ ಬಿರುಕು?

    ಪಕ್ಷದ ಮೂಲಗಳ ಪ್ರಕಾರ, ಚಂಡೀಗಢದಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸುಖಬೀರ್ ಬಾದಲ್ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳಿಸಲಾಯಿತು. ಇಂದು ಅಮೃತಸರದಲ್ಲಿ ನಡೆದ ಸಾಮಾನ್ಯ ಪ್ರತಿನಿಧಿಗಳ ಸಭೆಯಲ್ಲಿ ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾದ 567 ಪ್ರತಿನಿಧಿಗಳು ತಮ್ಮ ಮತವನ್ನು ಬಾದಲ್ ಪರವಾಗಿ ಚಲಾಯಿಸಿದರು. ಸುಖಬೀರ್ ಬಾದಲ್ ಅವರಿಗೆ ಹಿಂದೂಗಳು ಮತ್ತು ದಲಿತರಲ್ಲಿ ಸ್ವೀಕಾರಾರ್ಹತೆ ಇದೆ ಎಂದು ಪ್ರತಿನಿಧಿಗಳು ಹೇಳಿದ್ದಾರೆ. ಇದನ್ನೂ ಓದಿ: ಗೆಳತಿಯನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟು ಹಾಸ್ಟೆಲ್‌ಗೆ ತಂದು ಸಿಕ್ಕಿಬಿದ್ದ ಯುವಕ!

    ಸುಖಬೀರ್ ಬಾದಲ್ ಅವರು 2008ರಲ್ಲಿ ಎಸ್‌ಎಡಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ಅವರ ತಂದೆ ಮತ್ತು ಪಕ್ಷದ ಪಿತಾಮಹ ಪ್ರಕಾಶ್ ಸಿಂಗ್ ಬಾದಲ್ ಅಧ್ಯಕ್ಷರಾಗಿದ್ದರು. ಅಂದಿನಿಂದ ಕಳೆದ ವರ್ಷ ಆ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಅವರು ಪಕ್ಷವನ್ನು ಮುನ್ನಡೆಸುತ್ತಿದ್ದರು. ಈಗ ಮತ್ತೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

  • ಪಂಜಾಬ್ ಮಾಜಿ ಡಿಸಿಎಂ ಮೇಲೆ ಗುಂಡಿನ ದಾಳಿ; ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ

    ಪಂಜಾಬ್ ಮಾಜಿ ಡಿಸಿಎಂ ಮೇಲೆ ಗುಂಡಿನ ದಾಳಿ; ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ

    – ಪಾತ್ರೆ, ಬೂಟು ಸ್ವಚ್ಛಗೊಳಿಸುವ, ಟಾಯ್ಲೆಟ್ ತೊಳೆಯುವ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಡಿಸಿಎಂ

    ಚಂಡೀಗಢ: ಅಮೃತಸರದಲ್ಲಿರುವ (Amritsar) ಗೋಲ್ಡನ್ ಟೆಂಪಲ್‌ನ (Golden Temple) ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ (Sukhbir Singh Badal) ಮೇಲೆ ಗುಂಡಿನ ದಾಳಿ ನಡೆದಿದೆ.

    ಬಾದಲ್ ಅವರು ಶಿರೋಮಣಿ ಅಕಾಲಿ ದಳದ (Shiromani Akali Dal) ನಾಯಕ. ಪಂಜಾಬ್ ಮಾಜಿ ಉಪಮುಖ್ಯಮಂತ್ರಿಯಾಗಿ (Punjab Former DCM) ಕಾರ್ಯನಿರ್ವಹಿಸಿದ್ದರು. ಇದೀಗ ಧಾರ್ಮಿಕ ಶಿಕ್ಷೆಯ ಭಾಗವಾಗಿ ಗೋಲ್ಡನ್ ಟೆಂಪಲ್‌ನ ಪ್ರವೇಶದ್ವಾರದ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು (ಡಿ.04) ಬೆಳಿಗ್ಗೆ ತಪಸ್ಸಿಗೆ ಕುಳಿತಾಗ ಗುಂಡಿನ ದಾಳಿ ಮೂಲಕ ಕೊಲೆಗೆ ಯತ್ನಿಸಲಾಗಿದೆ.ಇದನ್ನೂ ಓದಿ: ತೆಲಂಗಾಣ ಗೋದಾವರಿ ನದಿ ಪಾತ್ರದ ಬಳಿ ಭೂಕಂಪನ

    ಆರೋಪಿಯನ್ನು ಅಮೃತಸರದಿಂದ ಸುಮಾರು 75 ಕಿ.ಮೀ ದೂರದಲ್ಲಿರುವ ಗುರುದಾಸ್‌ಪುರ ಜಿಲ್ಲೆಯ ದಾಲ್ ಖಾಲ್ಸಾದ ನರೇನ್ ಸಿಂಗ್ ಚೋರ್ಹಾ ಎಂದು ಗುರುತಿಸಲಾಗಿದ್ದು, ಗುಂಡು ಹಾರಿಸಿದಾಗ ಅಲ್ಲಿನ ಜನರು ಆತನ ಮೇಲೆ ಹಲ್ಲೆ ನಡೆಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಾದಲ್ ಅವರು 2007 ರಿಂದ 2017 ರವರೆಗೆ ಪಂಜಾಬ್‌ನ ಉಪಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುವಂತಹ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಆದ್ದರಿಂದ ಬಾದಲ್ ಅವರಿಗೆ ಹಾಗೂ ಅಕಾಲಿದಳದ ಇನ್ನಿತರ ನಾಯಕರಿಗೆ `ತಂಖಾ’ (ಧಾರ್ಮಿಕ ಶಿಕ್ಷೆ) ಘೋಷಿಸಲಾಗಿತ್ತು. `ಸೇವಾದರ್’ ಅಡಿಯಲ್ಲಿ ಪಾತ್ರೆ ತೊಳೆಯಲು, ಬೂಟು ಸ್ವಚ್ಛಗೊಳಿಸಲು ತಿಳಿಸಲಾಗಿತ್ತು. ನಿನ್ನೆ (ಡಿ.03) ಗೋಲ್ಡನ್ ಟೆಂಪಲ್‌ನಲ್ಲಿ ತಪಸ್ಸನ್ನು ಆರಂಭಿಸಿದ್ದರು.

    ಕಳೆದ ಎರಡು ದಿನಗಳಿಂದ ಬಾದಲ್ ಒಂದು ಕೈಯಲ್ಲಿ ಈಟಿ ಹಿಡಿದು, ನೀಲಿ `ಸೇವಾದರ್’ ಸಮವಸ್ತ್ರವನ್ನು ಧರಿಸಿ ಗೋಲ್ಡನ್ ಟೆಂಪಲ್‌ನ ಗೇಟ್ ಬಳಿ ವ್ಹೀಲ್ ಚೇರ್‌ನಲ್ಲಿ ಕುಳಿತಿದ್ದರು.

    ಸಿಸಿಟಿವಿ ದೃಶ್ಯಗಳಲ್ಲಿ ದಾಳಿಕೋರ ನಿಧಾನವಾಗಿ ಗೇಟ್ ಬಳಿ ಬಂದು ಬಂದೂಕನ್ನು ಹೊರತೆಗೆಯುತ್ತಾನೆ. ಬಳಿಕ ಗುಂಡಿನ ದಾಳಿ ನಡೆಸಿರುವುದು ಸೆರೆಯಾಗಿದೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ನರೇನ್ ಸಿಂಗ್ (Naren Singh) ಖಲಿಸ್ತಾನಿ ಭಯೋತ್ಪಾದಕರ ಗುಂಪು ಬಬ್ಬರ್ ಖಾಲ್ಸಾ ಜೊತೆ ಸಂಪರ್ಕ ಹೊಂದಿದ್ದಾನೆ. 2004ರಲ್ಲಿ 94 ಅಡಿ ಸುರಂಗವನ್ನು ಅಗೆದು ಜೈಲಿನಿಂದ ತಪ್ಪಿಸಿಕೊಂಡಿದ್ದ ಬುರೈಲ್ ಜೈಲ್ ಬ್ರೇಕ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಬಬ್ಬರ್ ಖಾಲ್ಸಾ ಜೊತೆ ಸಂಬಂಧವಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳೆಗೆ ಸಿಕ್ತು ನಿವೇಶನ; ಸಿಎಂ ಮುಂದೆ ಗೋಳಾಡಿದ್ದ ರಾಬಿಯಾ

  • ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಚಂಡೀಗಢ: ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಇತರ ಪಕ್ಷಗಳ ವಿರುದ್ಧ ಕ್ಷುಲ್ಲಕವಾಗಿ ಆರೋಪಗಳನ್ನು ಮಾಡಿದ್ದ ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಂಜಾಬ್ ಮುಖ್ಯ ಚುನಾವಣಾಧಿಕಾರಿ ಅವರು ಸಾಹಿಬ್ಜಾದಾ ಅಜಿತ್ ಸಿಂಗ್ ನಗರದ ಹಿರಿಯ ಎಸ್‌ಪಿಗೆ ಆದೇಶ ಹೊರಡಿಸಿದ್ದಾರೆ.

    ಶಿರೋಮಣಿ ಅಕಾಲಿ ದಳದ ದೂರಿನನ್ವಯ ಕೇಜ್ರಿವಾಲ್ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಹಾಗೂ ಇತರೆ ಪಕ್ಷಗಳ ವಿರುದ್ಧ ಕ್ಷುಲ್ಲಕವಾಗಿ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರು ಚುನಾವಣಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ದಂಡದ ಕ್ರಮಕ್ಕೆ ಕೋರಿ ಆಮ್ ಆದ್ಮಿ ಪಕ್ಷ (ಎಎಪಿ) ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನ ನಂತರ ಈ ಘಟನೆ ನಡೆದಿದೆ. ಇದನ್ನೂ ಓದಿ: ದೇಶದ ಮೊದಲ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳು ಮೋದಿ ಸರ್ಕಾರದಿಂದ ಪೂರ್ಣ: ಅಮಿತ್ ಶಾ

    ಪ್ರಚಾರ ಮುಗಿದ ನಂತರವೂ ಮಾನಸಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿಧು ಮೂಸ್ ವಾಲಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎಎಪಿ ದೂರಿನ ಆಧಾರದ ಮೇಲೆ ಮಾನ್ಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೂಚ್ ಬೆಹಾರ್ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವವರ ಮೊಣಕಾಲು ಮುರಿಯುತ್ತೇವೆ: ಉದಯನ್ ಗುಹಾ

  • ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ

    ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ

    ಚಂಡೀಗಢ: ಪಂಜಾಬ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಮೃತಸರ ಪೂರ್ವ ಕ್ಷೇತ್ರದಿಂದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ಶಿರೋಮಣಿ ಅಕಾಲಿದಳ (ಎಸ್‍ಎಡಿ) ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಸ್ಪರ್ಧಿಸಲಿದ್ದಾರೆ.

    ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು, ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಸಿಧು ಅವರ ದುರಹಂಕಾರವನ್ನು ಅಡಗಿಸಲಿದ್ದಾರೆ ಎಂದು ಹೇಳಿದ್ದಾರೆ. ಸುಖಬೀರ್ ಸಿಂಗ್ ಬಾದಲ್ ಅವರು ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಸೋದರ ಮಾವ ಆಗಿದ್ದಾರೆ. ಇದನ್ನೂ ಓದಿ: ನೈಟ್ ಕರ್ಫ್ಯೂ ನಡುವೆ ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ

    ಅಮೃತಸರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಖಬೀರ್ ಸಿಂಗ್ ಬಾದಲ್, ಸಿಧು ಅವರ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ಮಜಿಥಿಯಾ ಖಚಿತಪಡಿಸಿಕೊಳ್ಳುತ್ತಾರೆ. ಎಸ್‍ಎಡಿ ಮುಖ್ಯಸ್ಥರು ಮುಂದಿನ ತಿಂಗಳ ಚುನಾವಣೆಯಲ್ಲಿ ಮಜಿತಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಮನೆಯ ಹೊರಗೆ ಎಸೆದ – ಆರೋಪಿ ಅರೆಸ್ಟ್

    ಡ್ರಗ್ಸ್ ಪ್ರಕರಣದಲ್ಲಿ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇತ್ತೀಚೆಗಷ್ಟೇ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬಿಕ್ರಮ್ ಸಿಂಗ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರದ್ದುಗೊಳಿಸಿತ್ತು. ಆದರೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾರಣ ಮೂರು ದಿನಗಳ ಕಾಲ ರಕ್ಷಣೆ ನೀಡಲಾಗಿತ್ತು.