– ಸುಜಾತಾ ಭಟ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆಂದು ಆಕ್ಷೇಪ
ಉಡುಪಿ: ಧರ್ಮಸ್ಥಳದಲ್ಲಿ (Dharmasthala) ನಾಪತ್ತೆಯಾಗಿದ್ದಾರೆ ಎನ್ನಲಾದ ಅನನ್ಯಾ ಭಟ್ (Ananya Bhat) ಎಂಬಿಬಿಎಸ್ ಓದೇ ಇಲ್ಲ, ಇದೆಲ್ಲ ಕಟ್ಟುಕಥೆಯೆಂದು ಪರ್ಕಳದ ನಗರಸಭೆ ಮಾಜಿ ಸದಸ್ಯ ಮಹೇಶ್ ಠಾಕೂರ್ (Mahesh Thakur) ಹೇಳಿದ್ದಾರೆ.
ಅನನ್ಯಾ ಭಟ್ ನನ್ನ ಮಗಳು ಎಂದು ಸುಜಾಜಾ ಭಟ್ ಹೇಳುತ್ತಿದ್ದಾರೆ. 2003ರಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಮಾಡುತ್ತಿರುವ ಬಗ್ಗೆಯೂ ಹೇಳಿದ್ದರು. ಈ ಬಗ್ಗೆ ನಾನು ಕೂಲಂಕುಷವಾಗಿ ಹೊರವಲಯದಲ್ಲಿ ಪರಿಶೀಲಿಸಿದಾಗ ಇದು ಅಕ್ಷರಶಃ ಸುಳ್ಳು ಎಂದು ತಿಳಿಯಿತು. ಅಲ್ಲಿ ವಿಚಾರಿಸಿದಾಗ ಆ ಹೆಸರಿನ ವಿದ್ಯಾರ್ಥಿ ಎಂಬಿಬಿಎಸ್ ಮಾಡ್ತಿರಲಿಲ್ಲ ಎಂದು ತಿಳಿಯಿತು ಅಂತ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಜೀವಕ್ಕೆ ಹಾನಿಯಾದ್ರೆ ರಾಜ್ಯ ಸರ್ಕಾರ, ಇಡೀ ಬಿಜೆಪಿ ಹೊಣೆ: ತಿಮರೋಡಿ ಫಸ್ಟ್ ರಿಯಾಕ್ಷನ್
ಇಷ್ಟು ದೊಡ್ಡ ಕ್ಷೇತ್ರದ ಬಗ್ಗೆ ಹಾಗೂ ನಮ್ಮ ಊರಿನ ಪಕ್ಕದಲ್ಲಿರುವ ಉಪಾಧ್ಯಾಯ ಬಗ್ಗೆ ಹೇಳುತ್ತಿರುವುದನ್ನು ಗಮನಿಸಿದಾಗ ಇದು ಕಟ್ಟುಕಥೆಯೆಂದು ಗೊತ್ತಾಗುತ್ತದೆ. ಇಲ್ಲದ ಮಗಳನ್ನು ಸೃಷ್ಟಿಸಿ, ಪವಿತ್ರ ಕ್ಷೇತ್ರದ ಮೇಲೆ ಆರೋಪ ಮಾಡಿರುವುದೆಲ್ಲ ಸುಳ್ಳು. ಇದನ್ನು ಯಾರೂ ಸಹ ನಂಬಬಾರದು. ಇದನ್ನು ವಿರೋಧಿಸಬೇಕು. ಇದು ಸರಿಯಲ್ಲ ಎಂದು ನಾವು ಮನೆಯಲ್ಲಿ ಕೂತು ಹೇಳೋದಲ್ಲ. ಗಂಟಾಘೋಷವಾಗಿ ಇದು ಸುಳ್ಳು ಎಂದು ಹೇಳಬೇಕು ಎಂದಿದ್ದಾರೆ.
ಸುಜಾತ ಭಟ್ ಅವರು ತುಂಬಾ ವಯಸ್ಸಾದವರು, ಅವರಿಗೆ ವಯಸ್ಸಿನ ಸಮಸ್ಯೆಗಳಿರಬಹುದು. ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯು ಇನ್ನೊಂದು ಬಾರಿ ನೀಡಿದ ಹೇಳಿಕೆಗೆ ಸರಿ ಹೊಂದುತ್ತಿಲ್ಲ. ಆದ್ದರಿಂದ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಅವರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿದ್ದಾರೆ.
ಸುಜಾತಾ ಭಟ್ ಹೇಳುತ್ತಿರುವುದೆಲ್ಲ ಕಟ್ಟುಕಥೆ. ಪರ್ಕಳದ ನಿವಾಸಿಯಾಗಿ ಹಾಗೂ ಮಾಜಿ ನಗರಸಭೆಯ ಸದಸ್ಯನಾಗಿದ್ದರಿಂದ ನನಗೆ ಇಲ್ಲಿನ ವಿಚಾರ ತಿಳಿದಿದೆ. ಇವೆಲ್ಲವು ಮುಂದೆ, ಹಿಂದೆ ಇಲ್ಲದ ಕಟ್ಟುಕಥೆ ಅಂತ ಹೇಳಿದ್ದಾರೆ.
ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣದ (Ananya Bhat Case) ತನಿಖೆಯನ್ನು ಅಧಿಕೃತವಾಗಿ ಎಸ್‌ಐಟಿಗೆ (SIT) ಹಸ್ತಾಂತರಿಸಲಾಗಿದೆ.
ಡಿಜಿ & ಐಜಿಪಿ ಆದೇಶದಂತೆ ಮುಂದಿನ ವಿಚಾರಣೆಗಾಗಿ ಅನನ್ಯಾ ಭಟ್ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.
2003ರಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಅನನ್ಯ ಭಟ್ ಕಾಣೆಯಾಗಿದ್ದ ಬಗ್ಗೆ ತಾಯಿ ಸುಜಾತ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ದೂರು ಅರ್ಜಿಯ ತನಿಖೆಯನ್ನು ಎಸ್‌ಐಟಿಗೆ ಹಸ್ತಾಂತರಿಸಿ ಆದೇಶಿಸಲಾಗಿದೆ.
– ಮನೆ ಖಾಲಿ ಮಾಡೋಕೆ ಹೇಳ್ತಿದ್ದಾರೆ, ನಾನು ಏನ್ ತಪ್ಪು ಮಾಡಿದ್ದೀನಿ?
ಬೆಂಗಳೂರು: ನಾನು ಯಾರ ಹಣಕ್ಕಾಗಿಯೂ ಹೀಗೆ ಮಾಡಿಲ್ಲ. ನನ್ನ ಮಗಳು ಇಲ್ಲ ಅಂತಾ ಕೊರಗುತ್ತಿದ್ದೀನಿ. ಇದ್ದಿದ್ರೆ ನನ್ನ ನೋಡಿಕೊಳ್ಳುತ್ತಿದ್ದಳು ಎಂದು ಸುಜಾತಾ ಭಟ್ (Sujatha Bhat) ಕಣ್ಣೀರು ಹಾಕಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡುವಾಗ, ತಮ್ಮ ಬಗ್ಗೆ ಹೊರಗಡೆ ಕೇಳಿಬರುತ್ತಿರುವ ಮಾತುಗಳನ್ನು ನೆನೆದು ಕಣ್ಣೀರಿಟ್ಟರು. ಯಾವ ಹಣಕ್ಕಾಗಿ ಮಾಡಿಲ್ಲ. ಏನಕ್ಕೆ ಹಣ ತೆಗೆದುಕೊಳ್ಳಬೇಕು? ಯಾರ ಹತ್ತಿರ ಯಾಕೆ ತೆಗೆದುಕೊಳ್ಳಬೇಕು? ಯಾರ ಹತ್ತಿರ ಭಿಕ್ಷೆ ಬೇಡಿದ್ದೇನೆ. ಯಾರು ಕೊಡ್ತಾರೆ ಹಣ ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ಇದನ್ನೂ ಓದಿ: ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್
ಪಾರ್ಕ್ನಲ್ಲಿ ಜ್ಯೂಸ್ ಮಾರಾಟದ ಬಗ್ಗೆ ಮಾತನಾಡಿ, ಬೆಳಗ್ಗೆ 2:30 ಕ್ಕೆ ಎದ್ದೇಳುತ್ತೇನೆ. ಎಲ್ಲಾ ರೆಡಿ ಮಾಡಿಕೊಂಡು ಹೋಗ್ತೀನಿ. ಸ್ವಾಭಿಮಾನಿಯಾಗಿ ಬದುಕಿದ್ದೀನಿ. ಕಾಲ್ಪನಿಕ ಆಗಿದ್ರೆ ನಿಮ್ಹಾನ್ಸ್‌ಗೆ ಕರೆದುಕೊಂಡು ಹಾಕಬೇಕಿತ್ತು. ನಕ್ಸಲೆಟ್ ಅಂತಾರೆ. ವಯಸ್ಸಾಗಿದೆ ಅನ್ನೋದಕ್ಕಾದ್ರು ಮರ್ಯಾದೆ ಕೊಡಬೇಕಲ್ಲ. ನನ್ನ ಮಗಳು ಇದ್ದಿದ್ದು ನಿಜ. 9 ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡಿದ್ದೀನಿ. ಒಂದು ತಿಂಗಳ ಮಗುವನ್ನ ನದಿಯಲ್ಲಿ ಹಾಕ್ತಿದ್ರು. ನೋವಾಗುತ್ತೆ ಅಲ್ವಾ. ನಾನು ಸತ್ತು ಹೋಗಿದ್ದಾಳೆ ಅಂದ್ಮೇಲೆ ಡೆತ್ ಸರ್ಟಿಫಿಕೇಟ್ ಡಿಕ್ಲೇರ್ ಮಾಡೋಕೆ ಹೇಳಲಿ. ಅವರ ಮನೆ ಬಾಗಿಲಿಗೆ ಹೋಗಿಲ್ಲ. ಮನೆ ಕೆಲಸ ಮಾಡಿದ್ದೀನಿ. ನನ್ನನ್ನ ಸಾಕಿದ್ರೆ ಅವರು ನನ್ನ ಬಗ್ಗೆ ಮಾತನಾಡಬೇಕು ಎಂದು ಟೀಕೆಗಳಿಗೆ ನೊಂದು ನುಡಿದರು.
ರಂಗಪ್ರಸಾದ್‌ರನ್ನ ನಾನು ನೋಡಿಕೊಂಡಿದ್ದೇನೆ. ನನಗೆ ಬಟ್ಟೆ ಇಲ್ಲದಿದ್ದರೂ ಪರವಾಗಿಲ್ಲ, ಅವರಿಗೆ ಎಲ್ಲಾ ಮಾಡಿದ್ದೇನೆ. ನನ್ನ ಕಣ್ಣೆದುರಲ್ಲೇ ಸತ್ತು ಹೋಗಿದ್ದಾರೆ. ನನ್ನ ಮಗಳು ಕಣ್ಣೆದುರು ಇದ್ರೆ ಹೇಗಿರುತ್ತಿದ್ದಳು. ನಾನು ಯಾರ ದುಡ್ಡಿಗಾಗಿ ಮಾಡುತ್ತಿಲ್ಲ. ನನಗೆ ದುಡ್ಡಿನ ಅವಶ್ಯಕತೆ ಇಲ್ಲ. ಯಾರೋ ಪುಣ್ಯಾತ್ಮರು ಊಟ ಹಾಕ್ತಾರೆ. ಮಕ್ಕಳಿದ್ರೂ ತಂದೆಯನ್ನ ನೋಡಿಕೊಳ್ಳಲಿಲ್ಲ. ಇನ್ಸುಲಿನ್ ಕೊಡಿಸಲು ಆಗಿಲ್ಲ ಅಂದ್ರೆ ತಂದೆ ಎಷ್ಟು ನೋವನ್ನ ಅನುಭವಿಸರಬೇಕು. ಸಾಯೋ ಹಿಂದಿನ ದಿನವೂ ಎಷ್ಟು ಕಷ್ಟ ಪಡುತ್ತಿದ್ದೀಯ ಅಂತಿದ್ರು ಎಂದು ನೆನೆದು ಕಣ್ಣೀರಿಟ್ಟರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
ಯಾವ ಹೋರಾಟಗಾರರು ನನ್ನ ಸಂಪರ್ಕದಲ್ಲಿಲ್ಲ. ನಾನೇ ವಕೀಲರನ್ನ ಸಂಪರ್ಕಿಸಿ ಅಪ್ರೋಚ್ ಮಾಡಿದ್ದೇನೆ. ಒಂದು ಲೆಟರ್ ಕೊಡೋಣ ಅಂದ್ರು ಹೋದ್ವಿ. ನನ್ನ ಮಗಳ ಅಸ್ಥಿ ಕೊಡಿ ಅಂತಾ ಕೇಳಿದ್ದೇನೆ. ನಾನು ತನಿಖೆ ಮಾಡಿ ಅಂತಾ ಹೇಳಿಲ್ಲ. ಧರ್ಮಸ್ಥಳದಲ್ಲಿ ಆಗಿದೆ ಅಂತಾ ಎಲ್ಲೂ ಹೇಳಿಲ್ಲ. ದಾಖಲೆಗಳನ್ನ ನಾನು ಏನು ಕೊಟ್ಟಿಲ್ಲ. ನಾನು ಏನ್ ಕೇಳಿದ್ದೀನಿ ಅದಕ್ಕೆ ಅವರು ಬದ್ಧರಾಗಿದ್ದಾರೆ. ಅಸ್ಥಿ ಸಿಕ್ಕಿದ್ರೆ ಡಿಎನ್‌ಎ ಟೆಸ್ಟ್ ಮಾಡಿ ಕೊಡಿಸಿ. ಹಿಂದೂ ಸನಾತನ ಸಂಪ್ರದಾಯಂತೆ ಅಂತ್ಯಕ್ರಿಯೆ ಮಾಡ್ತೀನಿ. ತನಿಖೆ ಮಾಡಿ ಅಂತಾ ಹೇಳಿಲ್ಲ. ಆಗ ಇಲ್ಲದೇ ಇರೋ ತನಿಖೆ ಈಗ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ನನಗೆ ಯಾರ ಮೇಲೂ ಅನುಮಾನ ಇದೆ ಅಂತಾ ಹೇಳಿಲ್ಲ, ಹೇಳ್ತಾನೆ ಇಲ್ಲ. ಇಷ್ಟು ವರ್ಷ ಇಲ್ಲದೇ ಇರೋದ್ರಿಂದ ನನ್ನ ಮಗಳು ಇಲ್ಲ ಅಂದುಕೊಂಡಿದ್ದೇನೆ. ನನ್ನ ಮಗಳು ಸತ್ತು ಹೋಗಿದ್ದಾಳೆ ಅಂತಾನೆ ಡಿಕ್ಲೇರ್ ಮಾಡಿಕೊಂಡಿದ್ದೇನೆ. ನನ್ನ ಆತ್ಮಕ್ಕೆ ನನ್ನ ಮಗಳು ಇಲ್ಲ ಅಂದುಕೊಂಡಿದ್ದೇನೆ. ಈಗ ಒಂಟಿಯಾಗಿ ಬದುಕುತ್ತಿದ್ದೀನಿ. ದಿನ ಬೆಳಗಾದ್ರೆ ನಾನು ಮಾನಸಿಕವಾಗಿ ಕೊರಗುತ್ತಿದ್ದೇನೆ. ನನ್ನ ಮಗಳು ಇಲ್ಲ ಅಂತಾ ಕೊರಗುತ್ತಿದ್ದೀನಿ. ಇದ್ದಿದ್ರೆ ನನ್ನ ನೋಡಿಕೊಳ್ತಿದ್ದಳು. ನನ್ನ ಮಗಳು ಇದ್ದಿದ್ದು ನಿಜ, ಹುಟ್ಟಿದ್ದು ಸತ್ಯ. ಅನಿಲ್ ಭಟ್‌ಗೆ ಹುಟ್ಟಿದ್ದು ಸತ್ಯ. ಇದು ಕಾಲ್ಪನಿಕವಲ್ಲ… ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಬೇಸರದಿಂದ ನುಡಿದರು.
ಅರವಿಂದ್‌ಗೆ ಮಗುವನ್ನ ಕೊಡಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, ನಾನು ಕೊಡೋಕೆ ಕಾರಣ ಇಲ್ಲ. ನನ್ನ ತಂದೆಯ ಫ್ಯಾಮಿಲಿ ಅವರು ಕಾರಣ, ನನ್ನ ಅಕ್ಕಂದಿರು. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನ ನೀರಲ್ಲಿ ಯಾಕೆ ಬಿಡಲಿ. ಅವತ್ತೆ ನಾನು ಕರೆದುಕೊಂಡು ಹೋಗಿ ಸಾಕಬಹುದಾಗಿತ್ತಲ್ಲ. ನನಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಬೇರೆಯವರಿಗೆ ಹಾಕಿದ ಬಟ್ಟೆಯನ್ನ ನನಗೆ ಕೊಡ್ತಿದ್ದರು. ನನಗೆ ಒಳ್ಳೆಯ ಬಟ್ಟೆ ಕೊಡಿಸುತ್ತಿರಲಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಮಾಡಿದ್ದಾರೆ ಎಂದು ಹೇಳಿದರು.
ಇವತ್ತು ಮಾತನಾಡುತ್ತಿದ್ದನಲ್ಲ. ಅವನ ಹೆಂಡ್ತಿಗೆ ಸೀರೆ ಕೊಡಿಸೋಕೆ 2 ಸಾವಿರ ತೆಗೆದುಕೊಂಡಿದ್ದಾರೆ. ಅವರ ಮದುವೆಯಲ್ಲಿ ನನಗೆ ಯಾರೋ ಹಾಕಿದ ಹಳೆಯ ಸೀರೆ ಕೊಟ್ಟಿದ್ದಾರೆ. ನನಗೆ ತುಂಬ ನೋವಾಗಿದೆ. ನೋವು ಅನುಭವಿಸಿದ್ದೀನಿ. ಯಾರ ಹತ್ತಿರನೂ ಹೇಳಿಕೊಳ್ಳಲಿಕ್ಕೆ ಇಷ್ಟ ಇಲ್ಲ. ದುಡ್ಡು ಯಾವ ದುಡ್ಡು, ನನ್ನ ಬ್ಯಾಂಕ್ ಬ್ಯಾಲೆನ್ಸ್ ತೋರಿಸಲಾ? ದುಡಿದು ತಿನ್ನುತ್ತೀನಿ. ಒಂದೊತ್ತು ಊಟ ಇಲ್ಲ ಅಂದ್ರೂ ಇರ್ತೀನಿ. ಎರಡು ದಿನದಿಂದ ಊಟ ಇಲ್ಲ. ಮನೆಯಿಂದ ಹೊರಗೆ ಹೋಗೋಕೆ ಆಗ್ತಿಲ್ಲ. ಮನೆ ಖಾಲಿ ಮಾಡೋಕೆ ಹೇಳ್ತಿದ್ದಾರೆ. ನಾನು ಏನ್ ತಪ್ಪು ಮಾಡಿದ್ದೀನಿ. ಮಗಳು ಇಲ್ಲ ಅನ್ನೋದನ್ನ ಹೇಳೋದೆ ತಪ್ಪಾ? ಮನೆ ಖಾಲಿ ಮಾಡಿಸೋಕೆ ಯಾರು ಇವರು? ನಾನೇನು ಕ್ರೈಂ ಮಾಡಿದ್ದೀನಿ. ಕಳ್ಳತನನಾ..? ಕೊಲೆನಾ..? ಬದುಕೋದೆ ತಪ್ಪಾ..? ಯಾರ ಕೊಡ್ತಾರೆ ಅಂತೆ ದುಡ್ಡು? ಯಾವ ದುಡ್ಡು? ಇಷ್ಟು ವರ್ಷ ಸಣ್ಣಪುಟ್ಟ ಕೆಲಸ ಮಾಡಿ ಬದುಕಿದ್ದೀನಿ. ನಾನು ಯಾರ ಹತ್ತಿರನು ಕೈ ಚಾಚಿಲ್ಲ. ಮನೆಯಲ್ಲಿ ಅಕ್ಕಿ ಇದ್ಯಾ ಬೆಳೆ ಇದ್ಯಾ ಅಂತಾ ಯಾರು ಕೇಳಿಲ್ಲ. ಭಿಕ್ಷೆ ಎತ್ತಿಲ್ಲ. ಮಗಳು ಇಲ್ಲ ಅನ್ನೋ ನೋವು, ಇದು ಕಾಲ್ಪನಿಕ ಅಲ್ಲ. ಹೇಗೆ ಮಗಳು ಇಲ್ಲ ಅಂತಾ ಹೇಳೋಕೆ ಸಾಧ್ಯ. ಕಾಲ್ಪನಿಕ ಅಂತಾರೆ ಇವರು ಯಾರು ಹೇಳೋಕೆ? 9 ತಿಂಗಳು ಏನ್ ಕಷ್ಟದಲ್ಲಿ ಎತ್ತಿದ್ದೀನಿ ಅನ್ನೋದು ನನಗೆ ಗೊತ್ತು. ತಾಯಿ ಆದವಳಿಗೆ ಗೊತ್ತಿರಲ್ವಾ? ತಪ್ಪಲ್ವಾ ಹೇಳೋದು ಎಂದು ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ರಂಗಪ್ರಸಾದ್ ಅವರ ಫೋಟೊ ತೋರಿಸಿದರು. ಜೊತೆಗೆ ತನ್ನ ತಾಯಿ ಫೋಟೊವನ್ನು ತೋರಿಸಿ, ನನ್ನ ಅಮ್ಮನಿಗೂ ಅನನ್ಯಾ ಭಟ್‌ಗೂ ಹೋಲಿಕೆ ಇಲ್ವಾ ಎಂದು ಕೇಳಿದರು.
– ತನಿಖೆ ಮಾಡಿ ಅಂತ ಎಲ್ಲೂ ಹೇಳಿಲ್ಲ; ಮಗಳ ಅಸ್ಥಿ ಸಿಕ್ಕರೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡ್ತೀನಿ – ಅನಾಮಿಕ ವ್ಯಕ್ತಿ ಧನ್ಯವಾದ ಎಂದ ಸುಜಾತಾ ಭಟ್
ಬೆಂಗಳೂರು: ನನ್ನ ಮಗಳು ಅನನ್ಯಾ ಭಟ್ (Ananya Bhat) ಇದ್ದಿದ್ದು ಸತ್ಯ. ಅನನ್ಯಾ ಬಗ್ಗೆ ತನಿಖೆ ಮಾಡಿ ಅಂತ ಎಲ್ಲೂ ಹೇಳಿಲ್ಲ. ಮಗಳ ಅಸ್ಥಿ ಸಿಕ್ಕರೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡ್ತೀನಿ ಎಂದು ಸುಜಾತಾ ಭಟ್ (Sujatha Bhat) ಹೇಳಿದರು.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಸುಜಾತಾ ಭಟ್, ನನ್ನ ಮಗಳು ಧರ್ಮಸ್ಥಳದಲ್ಲಿ (Dharmasthala) ಕಾಣೆಯಾಗಿದ್ದಾಳೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯ್ತು. ದೂರು ತೆಗೆದುಕೊಂಡಿಲ್ಲ. ನಿಮ್ಮ ಮಗಳು ಎಲ್ಲಿ ಹೋಗಿದ್ದಾಳೆ ನೋಡಿ, ಹುಡುಕಾಟ ನಡೆಸೋಕೆ ಆಗಲ್ಲ ಅಂದ್ರು. ಈಗ ಅನಾಮಿಕ ಕೋರ್ಟ್‌ಗೆ ಹೋಗಿದ್ದನ್ನ ನಾನು ಟಿವಿಯಲ್ಲಿ ನೋಡಿದೆ. ನನ್ನ ಮಗಳ ಮೃತದೇಹ ಸಿಕ್ಕಿದ್ರೆ ಡಿಎನ್‌ಎ ಟೆಸ್ಟ್ ಮಾಡಿಸಿ ಕೊಡಿ ಅಂತಾ ಕೇಳಿದ್ದೇನೆ. ನಾನು ತನಿಖೆ ಮಾಡಿ ಅಂತಾ ಹೇಳಿಲ್ಲ. ಅನನ್ಯ ಭಟ್ ಇದ್ದಿದ್ದು ಸತ್ಯ. ಅಸ್ತಿ ಸಿಕ್ಕಿದ್ರೆ ಸನಾತನ ಹಿಂದೂ ಸಂಪ್ರಾದಯಂತೆ ಮಾಡ್ತೀನಿ ಅಂತಾ ಹೋಗಿರೋದು. ನಾನು ತನಿಖೆ ಮಾಡಿ ಅಂತಾ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರಪಂಚದಲ್ಲಿ ಒಂದೇ ರೀತಿ 7 ಜನ ಇರ್ತಾರೆ, ಫೋಟೋಗಳಿಗೆ ಸಾಮ್ಯತೆ ಇರಬಹುದು: ಸುಜಾತ ಭಟ್
ಎಂಬಿಬಿಎಸ್ ಓದಿಲ್ಲ ಅನ್ನೋ ರೆಕಾರ್ಡನ್ನೇ ಕಾಣೆ ಮಾಡಿಸಿದ್ದಾರೆ. ಸುರತ್ಕಲ್‌ನಲ್ಲಿರುವ ಮನೆಯನ್ನ ಸುಟ್ಟು ಹಾಕಿದ್ದಾರೆ. ಅರವಿಂದ್, ವಿಮಲಾ ನನ್ನ ಮಗಳನ್ನ ಸಾಕಿದ್ರು. 1983 ರಲ್ಲಿ ನನ್ನ ಮಗಳು ಜನನವಾಗಿದ್ದು. ಅನಿಲ್ ಭಟ್ ಎನ್ನುವವರನ್ನ ಮನೆಯವರಿಗೆ ಗೊತ್ತಿಲ್ಲದಂತೆ ಮದುವೆಯಾಗಿದ್ದೆ. ಇದರಿಂದ ನಮ್ಮ ಕುಟುಂಬದಿಂದ ಬೆದರಿಕೆ ಇತ್ತು ಎಂದು ತಿಳಿಸಿದರು.
ಒಂದು ಹುಡುಗಿಯಂತೆ 7 ಜನ ಇರುತ್ತಾರೆ. ಅವರು ಯಾರು ಅಂತಾನೆ ಗೊತ್ತಿಲ್ಲ. ಯಾವ ಅಲ್ಬಂ ಮನೆಯಲ್ಲಿ ಇಲ್ಲ. ನನ್ನ ಬಳಿ ಇದ್ದಿದ್ದು ಪಾಸ್‌ಪೋರ್ಟ್ ಫೋಟೊ. ಅಡ್ಮಿಷನ್ ಮಾಡಿಸಲು ಆ ಫೋಟೊ ಇಟ್ಟುಕೊಂಡಿದ್ದೆ. 2003ರಲ್ಲಿ ನನ್ನ ಮಗಳು ಕಾಣೆಯಾಗಿದ್ದಳು. ನನ್ನ ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯ್ತು. ದೂರು ತೆಗೆದುಕೊಂಡಿಲ್ಲ. ಧರ್ಮಸ್ಥಳ ವ್ಯಕ್ತಿಯೊಬ್ಬರ ಬಳಿ ಕೇಳಿದಾಗ, ನಿನ್ನ ಮಗಳನ್ನ ಹುಡುಕಿಕೊ ಅಂತಾ ಹೇಳಿದ್ರು ಎಂದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
ಕೆಲವರು ನಿಮ್ಮ ಮಗಳನ್ನ ಇಲ್ಲಿ ನೋಡಿದ್ದೀನಿ ಅಂತಾ ನನ್ನ ಕರೆದುಕೊಂಡು ಹೋದ್ರು. ಕಣ್ಣಿಗೆ ಬಟ್ಟೆ ಕಟ್ಟಿದ್ರು. ರಾತ್ರಿ ಎಲ್ಲಾ ಕೂಡಿ ಹಾಕಿದ್ರು. ರೂಮಿನಿಂಗ ಹೊರಗೆ ಕರೆದುಕೊಂಡ ಬಂದ್ರು. ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿದ್ರು. ನನ್ನ ಮಗಳನ್ನ ತೋರಿಸಿ ಅಂತಾ ಕೇಳಿದೆ. ಮರಿಯಾದೆಯಾಗಿ ಇಲ್ಲಿಂದ ಹೋಗಿ ಅಂತಾ ಹೇಳಿದ್ರು. ಮತ್ತೊಬ್ಬ ನನ್ನ ತಲೆಗೆ ಹೊಡೆದನು. ಆಗ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಆ ಆನಾಮಿಕ ವ್ಯಕ್ತಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಕಾಂಟ್ರ್ಯಾಕ್ಟ್ ಬೇಸಿಕ್‌ನಲ್ಲಿ ಕೆಲಸ ಮಾಡೋಳು. ನನ್ನ ಫ್ಯಾಮಿಲಿಯಲ್ಲಿ ಯಾರೂ ನನ್ನ ಓದಿಸಲಿಲ್ಲ. ನನ್ನ ಫ್ಯಾಮಿಲಿಯಿಂದ ಸಾಕಷ್ಟು ಟಾರ್ಚರ್ ಅನುಭಿಸಿದ್ದೇನೆ. ಮೂರನೇ ಅಕ್ಕನ ಮದುವೆ ಬಳಿಕ ನಾನು ಮನೆ ಬಿಟ್ಟು ಬಂದೆ ಎಂದು ವಿವರಿಸಿದರು. ಇದನ್ನೂ ಓದಿ: Exclusive ಸುಜಾತ ಭಟ್ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್
ವಸಂತಿ ಯಾರೆಂದು ಗೊತ್ತಿಲ್ಲ. ಅವರನ್ನ ನೋಡಿಲ್ಲ. ಅವರ ಅಣ್ಣನೂ ಗೊತ್ತಿಲ್ಲ. ನನಗೂ ಅವರಿಗೂ ಸಂಬಂಧವಿಲ್ಲ. ಕೆಂಗೇರಿಯಲ್ಲಿ ರಂಗಪ್ರಸಾದ್ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದೆ. ಅವರ ಮಗನ ಬಗ್ಗೆ ಗೊತ್ತಿಲ್ಲ, ಅವಳು ಸತ್ತಿರುವ ಬಗ್ಗೆ ಗೊತ್ತಿಲ್ಲ. ವಸಂತಿ ಅವರ ಯಾವ ಅಲ್ಬಂ ಕೂಡ ಇಲ್ಲ ಎಂದರು.
ಬೆಂಗಳೂರು: ಪ್ರಪಂಚದಲ್ಲಿ 7 ಜನ ಒಂದೇ ರೀತಿಯಲ್ಲಿ ಇರುತ್ತಾರೆ. ಅದರಲ್ಲಿ ಅನನ್ಯ ಭಟ್ (Ananya Bhat) ವಾಸಂತಿ (Vasanthi) ಫೋಟೋಗಳಿಗೆ ಸಾಮ್ಯತೆ ಇರಬಹುದು ಅಷ್ಟೇ ಎಂದು ಸುಜಾತ ಭಟ್ (Sujatha Bhat) ಹೇಳಿದ್ದಾರೆ.
ವಾಸಂತಿ ಅವರ ಸಹೋದರ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಸುಜಾತ ಭಟ್ ಪ್ರತಿಕ್ರಿಯಿಸಿದ್ದಾರೆ. ಎರಡು ಫೋಟೋದಲ್ಲಿರುವ ಡ್ರೆಸ್ (Dress) ಒಂದೇ ರೀತಿ ಇದೆಯಲ್ವಾ ಎಂಬ ಆರೋಪಕ್ಕೆ 7 ಜನರ ಜೊತೆಗೂ ಒಂದೇ ರೀತಿಯ ಡ್ರೆಸ್ ಇರಬಹುದಲ್ವಾ ಎಂದು ಉತ್ತರಿಸಿದ್ದಾರೆ. ಇದನ್ನೂಓದಿ: Exclusive ಸುಜಾತ ಭಟ್ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರವಿಜಯ್
ಸುಜಾತ ಭಟ್ ಹೇಳಿದ್ದೇನು?
ನನಗೂ ವಿಜಯಗೂ ಯಾವುದೇ ಸಂಬಂಧ ಇಲ್ಲ. ನಾನು ಯಾವುದೇ ಫೋಟೋ ಕಳವು ಮಾಡಿಲ್ಲ. ನಾನು ತೋರಿಸಿದ್ದು ನನ್ನ ಮಗಳ ಫೋಟೋ. ಬೇರೆಯವರ ಫೋಟೋ ತೋರಿಸಿ ನನಗೆ ಏನಾಗಬೇಕು. ನನಗೆ ಪ್ರಜ್ಞೆ ಇದೆ.
ರಂಗಪ್ರಸಾದ್ ಸಾಯೋವರೆಗೂ ನಾನೇ ಅವರನ್ನು ನೋಡಿಕೊಂಡಿದ್ದೇನೆ. ರಂಗಪ್ರಸಾದ್ ಮತ್ತು ಶ್ರೀವತ್ಸರನ್ನು ಹುಡುಕಿಕೊಂಡು ಪೊಲೀಸರು ಬಂದಿದ್ದರು. ಆ ಸಂದರ್ಭದಲ್ಲಿ ನಾನೇ ಅವರಿಗೆ ಆಶ್ರಯ ನೀಡಿದ್ದೇನೆ. ನನಗೆ ವಾಸಂತಿ ಯಾರು ಎನ್ನುವುದೇ ಗೊತ್ತಿಲ್ಲ.ನಾನು ಆಕೆಯನ್ನು ನೋಡಿಯೇ ಇಲ್ಲ.
– ಕುಟುಂಬದ ಜೊತೆ ಚರ್ಚಿಸಿ ಮುಂದೆ ಕಾನೂನು ಸಮರ – ನನ್ನ ತಂಗಿ ಅವರ ಮಗಳಾಗಲು ಹೇಗೆ ಸಾಧ್ಯ?
ಮಡಿಕೇರಿ: ನನ್ನ ತಂಗಿಯ ಫೋಟೋವನ್ನು ಇಟ್ಟುಕೊಂಡು ಸುಜಾತ ಭಟ್ (Sujatha Bhat) ತನ್ನ ಮಗಳು ಅನನ್ಯಾ ಭಟ್ (Ananya Bhat) ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವಾಸಂತಿ (Vasanthi) ಅವರ ಸಹೋದರ ವಿಜಯ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ತಂಗಿಯ ಫೋಟೋವನ್ನು ದುರ್ಬಳಕೆ ಮಾಡಲಾಗುತ್ತಿದೆ. ವಾಸಂತಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳಲ್ಲ. ಆಕೆ ಕೊಡವ ಸಮಾಜಕ್ಕೆ ಸೇರಿದವಳು. ನನ್ನ ತಂಗಿಯ ಫೋಟೋ ನೋಡಿ ನಾವು ಆಘಾತಗೊಂಡಿದ್ದೇವೆ ಎಂದು ತಿಳಿಸಿದರು.
ನನ್ನ ತಂಗಿ ಮತ್ತು ಶ್ರೀವತ್ಸ ಪ್ರೀತಿಸಿ 2007 ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಒಂದೇ ತಿಂಗಳಿಗೆ ವಿರಾಜಪೇಟೆಗೆ ಆಗಮಿಸಿದ್ದರು. ನಂತರ ಅವರು ಕೆದ್ದಮುಳ್ಳುರು ಗ್ರಾಮದ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಪರಿಚಿತ ಶವ ಪತ್ತೆಯಾದ ಬಳಿಕ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮೃತದೇಹದಲ್ಲಿದ್ದ ಬಟ್ಟೆ ಹಾಗೂ ಅವರ ಚಹರೆಗಳನ್ನು ತೋರಿಸಿದಾಗ ನನ್ನ ಸಹೋದರಿ ಎನ್ನುವುದು ದೃಢಪಟ್ಟಿತ್ತು ಎಂದು ಹೇಳಿದರು. ಇದನ್ನೂಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
ನನ್ನ ತಂಗಿಯನ್ನು ಅವರು ತನ್ನ ಮಗಳು ಎಂದು ಹೇಗೆ ಹೇಳುತ್ತಾರೆ? ಆ ಫೋಟೋ ನೋಡಿದರೆ 100% ನನ್ನ ತಂಗಿ ಎನ್ನುವುದು ಗೊತ್ತಾಗುತ್ತದೆ. ಈಗ ಎಸ್‌ಐಟಿಯವರು ತನಿಖೆ ನಡೆಸುತ್ತಿದ್ದಾರೆ. ಮುಂದೆ ಕುಟುಂಬದರ ಜೊತೆ ಚರ್ಚಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿಂತೆ ಯಾವುದೇ ದಾಖಲೆಯನ್ನು ಸುಜಾತ ಭಟ್ ಬಿಡುಗಡೆ ಮಾಡಿರಲಿಲ್ಲ. ಕೊನೆಗೆ ಯಾವುದಾದರೂ ಫೋಟೋ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸುಜಾತ ಭಟ್ ಫೋಟೋ ಬಿಡುಗಡೆ ಮಾಡಿದ್ದರು. ಆದರೆ ಈಗ ಬಿಡುಗಡೆಯಾದ ಫೋಟೋ ಮೃತಪಟ್ಟ ವ್ಯಕ್ತಿಯ ಫೋಟೋ ಎನ್ನವ ವಿಚಾರ ಬೆಳಕಿಗೆ ಬಂದಿದೆ.
ಸುಜಾತ ಭಟ್ ಹೇಳಿದ್ದೇನು?
ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ತಮ್ಮ ಮಗಳು ಅನನ್ಯಾ ಭಟ್ 2003ರಲ್ಲಿ ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಳು. ಇಬ್ಬರು ಸ್ನೇಹಿತರು ಬಟ್ಟೆ ತರಲು ಹೋಗುತ್ತೇವೆ ಎಂದು ಹೇಳಿ ದೇವಾಲಯದ ಬಳಿ ಬಿಟ್ಟುಹೋಗಿದ್ದು, ವಾಪಸ್ ಬಂದಾಗ ಅನನ್ಯಾ ಇರಲಿಲ್ಲ. ಅಂದಿನಿಂದ ಅನನ್ಯಾ ನಾಪತ್ತೆಯಾಗಿದ್ದಾಳೆ.
ಮಗಳು ನಾಪತ್ತೆಯಾದ ಬಳಿಕ ದೂರು ನೀಡಲು ಹೋದಾಗ ಅಂದಿನ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ನನಗೆ ಧರ್ಮಸ್ಥಳದಲ್ಲಿ ಹೊಡೆಯಲಾಗಿತ್ತು ಎಂದೆಲ್ಲ ಆರೋಪ ಮಾಡಿದ್ದರು.
ಬೆಂಗಳೂರು: ಧರ್ಮಸ್ಥಳ ಪ್ರಕರಣ (Dharmasthala Case) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನನ್ನ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಸುಜಾತ ಭಟ್ (Sujatha Bhat) ಆಕೆಯ ಫೋಟೋ ಬಿಡುಗಡೆ ಮಾಡಿದ್ದರು. ಆದ್ರೇ ಈ ಫೋಟೋದ ಮೂಲವನ್ನು ಬೆನ್ನತ್ತಿದಾಗ ಅಸಲಿಯತ್ತು ಬಹಿರಂಗಗೊಂಡಿದೆ.
ನನ್ನ ಮಗಳು ಅನನ್ಯಾ ಭಟ್ (Ananya Bhat) ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, 2003ರಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಕಾಣೆಯಾಗಿದ್ದಳು. ಈ ಬಗ್ಗೆ ದೂರು ನೀಡಲು ಹೋದಾಗ ಅಂದಿನ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ನನಗೆ ಧರ್ಮಸ್ಥಳದಲ್ಲಿ ಹೊಡೆಯಲಾಗಿತ್ತು ಎಂದೆಲ್ಲ ಸುಜಾತ ಭಟ್ ಆರೋಪ ಮಾಡಿದ್ದರು. ಇದನ್ನೂ ಓದಿ: ರೈಲಿಗೂ ಲಗೇಜ್ ಪಾಲಿಸಿ – ಲಗೇಜ್ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?
ನಾಪತ್ತೆಯಾಗಿದ್ದ ಮಗಳು ಅನನ್ಯಾ ಭಟ್ ಫೋಟೋ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸುಜಾತ ಭಟ್ ಫೋಟೋವೊಂದನ್ನು ಬಿಡುಗಡೆ ಮಾಡಿದ್ದರು. ಆದರೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇವಳೇ ನನ್ನ ಮಗಳು ಅನನ್ಯಾ ಭಟ್ ಅಂತ ಮೊನ್ನೆಯಷ್ಟೇ ವಕೀಲರ ಸಮ್ಮುಖದಲ್ಲಿ ಸುಜಾತ ಭಟ್ ಬಿಡುಗಡೆ ಮಾಡಿದ್ದರು.
ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿದ್ದ ಸುಜಾತಾ ಭಟ್ ಬೆಂಗಳೂರಿನ ರಂಗಪ್ರಸಾದ್ ಎಂಬುವರ ಮನೆಯಲ್ಲಿ ಕೇರ್ ಟೇಕರ್ ಆಗಿದ್ದರು. ಈ ರಂಗಪ್ರಸಾದ್ ಎಂಬುವವರ ಸೊಸೆಯೇ ವಾಸಂತಿ ಅನ್ನೋ ಸುದ್ದಿ ಈಗ ಹರಿದಾಡುತ್ತಿದೆ. ರಂಗಪ್ರಸಾದ್ ಅವರ ಪುತ್ರ ಶ್ರೀವತ್ಸ ಎಂಬುವವರ ಪತ್ನಿಯಾಗಿದ್ದ ವಾಸಂತಿ 2007ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ರು ಎನ್ನಲಾಗಿದೆ. ಇದೀಗ ರಂಗಪ್ರಸಾದ್ ಹಾಗೂ ಮಗ, ಸೊಸೆ ಎಲ್ಲರೂ ಸಾವನ್ನಪ್ಪಿದ್ದು, ವಾಸಂತಿ ಕಾಲೇಜು ದಿನಗಳ ಫೋಟೋವನ್ನು ಇಟ್ಟುಕೊಂಡಿದ್ದ ಸುಜತಾ ತನ್ನ ಮಗಳು ಎಂದು ಬಿಂಬಿಸೋಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಾಕು ಪ್ರಾಣಿಗಳಿಗಾಗಿ ಬ್ಲಡ್ ಬ್ಯಾಂಕ್ ನೆಟ್‌ವರ್ಕ್ – ಏನಿದು ಕೇಂದ್ರದ ಹೊಸ ಯೋಜನೆ?
ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ 1999ರಿಂದ 2007ವರೆಗೆ ಸುಜಾತಭಟ್, ಪ್ರಭಾಕರ್ ಬಾಳಿಗ ಎಂಬುವರ ಜೊತೆಗೆ ಇದ್ದರೆಂದು ಹೇಳಲಾಗಿದೆ. ಆದ್ರೆ, ಇವರನ್ನು ಕಂಡ ನೆರೆ ಹೊರೆಯವರು ಹೇಳೋ ಪ್ರಕಾರ, ಅವರಿಗೆ ಮಕ್ಕಳೇ ಇರಲಿಲ್ಲ. ನಾಯಿಗಳನ್ನೇ ಮಕ್ಕಳಂತೆ ಸಾಕುತ್ತಿದ್ದರು ಅಂತ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಪ್ರಭಾಕರ್ ಬಾಳಿಗ ಸ್ನೇಹಿತರೂ ಕೂಡ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಅವರ ಪ್ರಕಾರವೂ ಸುಜಾತ ಭಟ್‌ಗೆ ಮಕ್ಕಳೇ ಇರಲಿಲ್ಲ.
ಇನ್ನು, ಈ ಎಲ್ಲಾ ಆರೋಪ ಸಂಬಂಧ ಪಬ್ಲಿಕ್ ಟಿವಿಗೆ ಸುಜಾತಾ ಭಟ್ ಎಕ್ಸ್ಕ್ಲೂಸಿವ್ ರಿಯಾಕ್ಷನ್ ಕೊಟ್ಟಿದ್ದಾರೆ. ನಾನು ಹೇಳಿರುವುದೆಲ್ಲವೂ ಸತ್ಯ. ಅನನ್ಯಾ ಭಟ್ ಫೋಟೋವನ್ನೇ ನಾನು ತೋರಿಸಿದ್ದೇನೆ. ನನಗೆ ಮಕ್ಕಳಿದ್ದಾರೆ. ಅನಿಲ್ ಭಟ್ ಎಂಬುವವರ ಜೊತೆ ನಾನು ವಿವಾಹವಾಗಿದ್ದೆ. ನಮ್ಮಿಬ್ಬರಿಗೆ ಜನಿಸಿದ ಮಗಳೇ ಈ ಅನನ್ಯಾ ಭಟ್. ಇನ್ನು ವಾಸಂತಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಬೆನ್ನತ್ತಿರುವ ಎಸ್‌ಐಟಿಗೆ ದಾಖಲಾಗ್ತಿರುವ ಪ್ರಕರಣಗಳು ಗೊಂದಲವಾಗಿಯೇ ಇದೆ.
– ಪಬ್ಲಿಕ್ ಟಿವಿಯೊಂದಿಗೆ ಸುಜಾತ ಭಟ್ ಎಕ್ಸ್‌ಕ್ಲೂಸಿವ್ ಮಾತು
ಬೆಂಗಳೂರು: ನನ್ನ ಮಗಳದ್ದು ಒಂದು ಸಣ್ಣ ಫೋಟೋ ಇದೆ. ಆ ಫೋಟೋದಲ್ಲಿರುವವಳೇ ನನ್ನ ಮಗಳು ಎಂದು ಸುಜಾತ ಭಟ್ (Sujatha Bhat) ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅನನ್ಯ ಭಟ್ (Ananya Bhat) ನನ್ನ ಮಗಳು. 1983ರಲ್ಲಿ ಉಡುಪಿಯ ಹತ್ತಿರದ ಪರೀಖದಲ್ಲಿ ಆಕೆ ಜನಿಸಿದ್ದಳು. ನನ್ನ ಮಗಳ ಫೋಟೋವನ್ನು ಈಗಾಗಲೇ ಕೊಟ್ಟಿದ್ದೇನೆ. ನನ್ನ ಹತ್ತಿರ ಆಕೆಯ ಒಂದು ಸಣ್ಣ ಫೋಟೋ ಇರೋದು. ಹುಡುಕಾಡಿ ಅದನ್ನ ಕೊಟ್ಟಿದ್ದೇನೆ. ಈಗ ನನ್ನ ಹೊಟ್ಟೆಯಲ್ಲಿ ಹುಟ್ಟಿದವಳನ್ನು ಮಗಳೇ ಅಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುಜಾತಾ ಭಟ್‌ಗೆ ಮಗಳೇ ಇರಲಿಲ್ಲ ಎಂದ ನೆರೆಹೊರೆಯವರು
ನನಗೆ ಒಬ್ಬಳೇ ಮಗಳು ಇರೋದು. ನನ್ನ ಪತಿ ಅನಿಲ್ ಭಟ್. ಅವರು ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದರು. ನಾನು ಕೊಟ್ಟಿರುವ ಫೋಟೋ ವಾಸಂತಿ ಅನ್ನುವವರದ್ದು ಅಲ್ಲ. ಅವರು ಯಾರು ಅಂತಾನೆ ನನಗೆ ಗೊತ್ತಿಲ್ಲ. ಅವರಿಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.
ನನ್ನ ಮಗಳನ್ನ ಬೇರೆ ಕಡೆ ಓದಿಸುತ್ತಿದ್ದೆ. ನನಗೆ ಕುಟುಂಬ ಬೆದರಿಕೆ ಇದ್ದಿದ್ದರಿಂದ ಮಗಳನ್ನು ಬೇರೆ ಕಡೆ ಓದಿಸುತ್ತಿದ್ದೆ ಎಂದು ಹೇಳಿದ್ದಾರೆ.
ನನ್ನ ಅಕ್ಕನ ಮದುವೆಗೂ ಮುನ್ನ ಅನಿಲ್ ಭಟ್ ಅವರನ್ನು ಮದುವೆಯಾಗಿದ್ದೆ. ಈ ವಿಚಾರ ನನ್ನ ಕುಟುಂಬದವರಿಗೆ ತಿಳಿದಿರಲಿಲ್ಲ. ಬಳಿಕ ನಾನು ಮಗುವಿಗೆ ಜನ್ಮ ನೀಡಿದ್ದೆ. ಈ ವಿಚಾರ ತಿಳಿದು ನನ್ನ ಮಗಳನ್ನು ಕುಟುಂಬದವರು ತೆಗೆದುಕೊಂಡು ಹೋಗಿ ನದಿಯಲ್ಲಿ ಬಿಡಲು ನೋಡಿದ್ದರು. ಆಗ ಮಗುವನ್ನು ನೋಡಿ ಅರವಿಂದ್, ವಿಮಲ ಅವರು ನನ್ನ ಮಗುವನ್ನು ತೆಗೆದುಕೊಂಡ ಬಳಿ ನನ್ನನ್ನು ಸಂಪರ್ಕಿಸಿದ್ದರು. ಬಳಿಕ ಮಗುವನ್ನ ಬೆಳೆಸೋಕೆ ಅವರಿಗೆ ಕೊಟ್ಟಿದ್ದೆ. ಆ ದಂಪತಿ ನನ್ನ ಮಗಳನ್ನು ಓದಿಸಿದ್ದರು ಎಂದು ಹೇಳಿದ್ದಾರೆ.
ಅಕ್ಕನ ಮದುವೆ ಆದ್ಮೇಲೆ ಮಗಳನ್ನು ಕರೆದುಕೊಂಡು ಬಂದೆ. 7ನೇ ತರಗತಿ ಆದ್ಮೇಲೆ ಆಕೆಯನ್ನು ಕರೆದುಕೊಂಡು ಬಂದೆ. ಬಳಿಕ 8ನೇ ತರಗತಿಯಿಂದ ಮಗಳು ನನ್ನ ಬಳಿ ಇದ್ದಳು. ನಂತರ ನನ್ನನ್ನು ಕೋಲ್ಕತ್ತಾದ ಸೇಟು ಮನೆಗೆ ಪರಿಚಯಸ್ಥರೊಬ್ಬರು ಕಳುಹಿಸಿಕೊಟ್ಟಿದ್ದರು. ಗುತ್ತಿಗೆ ಆಧಾರದ ಮೇಲೆ ಅಲ್ಲಿ ನಾನು ಕೆಲಸ ಮಾಡ್ತಿದ್ದೆ. ಕೆಲವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
ನಾನೇ ಮಗಳನ್ನು ಕೋಲ್ಕತ್ತಾಗೆ ಕರೆದುಕೊಂಡು ಹೋದೆ. ನಾನು ಬೇರೆ ಅವರಿಗೆ ಎಷ್ಟು ತೊಂದರೆ ಕೊಡಲಿ ಎಂದು ಅರವಿಂದ್ ಅವರ ಬಳಿಯಿಂದ ನನ್ನ ಮಗಳನ್ನು ಕರೆದುಕೊಂಡು ಹೋದೆ. ಕೋಲ್ಕತ್ತಾದಲ್ಲೇ 12ನೇ ತರಗತಿವರೆಗೆ ಓದಿದ್ದಳು. ಆಮೇಲೆ ಪ್ರಭಾಕರ್ ಎಂಬುವವರು ಜೊತೆ ರಿಪ್ಪನ್‌ಪೇಟೆಗೆ ಬಂದೆ. ಅನನ್ಯಳನ್ನ ಕೋಲ್ಕತ್ತಾದಲ್ಲೇ ಬಿಟ್ಟು ಬಂದಿದ್ದೆ. ನಂತರ ನಾನು ಮಗಳ ಬಳಿ ಹೋಗಿ ಬಂದು ಮಾಡ್ತಿದ್ದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ ಸಸಿಕಾಂತ್ ಸೆಂಥಿಲ್: ಜನಾರ್ದನ ರೆಡ್ಡಿ
ರಿಪ್ಪನ್‌ಪೇಟೆಯಲ್ಲಿ ಪ್ರಭಾಕರ್ ಎನ್ನುವವರ ತಾಯಿಗೆ ಕ್ಯಾನ್ಸರ್ ಆಗಿದ್ದರಿಂದ ಅವರನ್ನು ನೋಡಿಕೊಳ್ಳಲು ಬಂದಿದ್ದೆ. ನನ್ನ ಪರಿಚಯಸ್ಥರೊಬ್ಬರು ಈ ವಿಚಾರ ತಿಳಿಸಿ, ಅವರ ತಾಯಿಯನ್ನು ನೋಡಿಕೊಳ್ಳಲು ಜನ ಬೇಕು ಹೇಳಿದ್ದಕ್ಕೆ ನಾನು ಮಗಳನ್ನು ಬಿಟ್ಟು ಬಂದಿದ್ದೆ. ಯಾರಿಗೂ ಹೇಳದೆ ಮದುವೆ ಆಗಿದ್ದಕ್ಕೆ ನನಗೆ ತಂದೆಯ ಕುಟುಂಬಸ್ಥರು ಟಾರ್ಚರ್ ಕೊಡ್ತಿದ್ದರು ಎಂದಿದ್ದಾರೆ.
ನನ್ನ ಮಗಳನ್ನು ವಾಪಾಸ್ ಕೋಲ್ಕತ್ತಾದಿಂದ 2003 ಜೂನ್, ಜುಲೈನಲ್ಲಿ ಕರೆದುಕೊಂಡು ಬಂದೆ. ಕೋಲ್ಕತ್ತಾದ ಸೇಟು ಎನ್ನುವವರು ನನ್ನ ಮಗಳನ್ನು ನೋಡಿಕೊಳ್ಳುತ್ತಿದ್ದರು. ಆಕೆಯನ್ನು ಅಡ್ಮಿಷನ್ ಮಾಡಿಸುವ ಸಂದರ್ಭದಲ್ಲಿ ಮಾತ್ರ ರಿಪ್ಪನ್‌ಪೇಟೆಗೆ ಕರೆದುಕೊಂಡು ಬಂದಿದ್ದೆ. ಆಕೆಯನ್ನು ಕಸ್ತೂರಬಾ ಮೆಡಿಕಲ್ ಕಾಲೇಜಿಗೆ ಸೇರಿಸಲು ಕರೆದುಕೊಂಡು ಬಂದಿದ್ದೆ. ಮಗಳು ರ‍್ಯಾಂಕ್ ಸ್ಟೂಡೆಂಟ್ ಆಗಿದ್ದರಿಂದ ಅಡ್ಮಿಷನ್ ಮಾಡಲು ಕರೆದುಕೊಂಡು ಬಂದೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡುತ್ತಿದ್ದಾಗ ಸುಜಾತ ಭಟ್ ಅವರ ಸಂಪರ್ಕ ಕಡಿತಗೊಂಡಿದೆ.
– ಧರ್ಮಸ್ಥಳ ಶವ ಅಗೆತ ಪ್ರಕರಣಕ್ಕೆ ಟ್ವಿಸ್ಟ್; ರಿಪ್ಪನ್‌ಪೇಟೆಯ ವ್ಯಕ್ತಿಯ ಜೊತೆ ವಾಸವಿದ್ದ ಸುಜಾತಾ ಭಟ್? – ನೆರೆಹೊರೆಯವರು ಹೇಳಿದ್ದೇನು?
ಶಿವಮೊಗ್ಗ: ಧರ್ಮಸ್ಥಳದ ಅನನ್ಯಾ ಭಟ್ ಪ್ರಕರಣ ರಾಜ್ಯಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೂ ರಿಪ್ಪನ್‌ಪೇಟೆಗೂ ಲಿಂಕ್ ಇರುವ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣ (Dharmasthala Mass Burial Case) ಎಸ್‌ಐಟಿ ಕಾರ್ಯಾಚರಣೆಯ ಶೋಧದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಈ ನಡುವೆ ಅನನ್ಯಾ ಭಟ್ ನಾಪತ್ತೆ ಪ್ರಕರಣದ ಬಗ್ಗೆ ಅವರ ತಾಯಿ ಸುಜಾತಾ ಭಟ್ (Sujatha Bhat) ಎಸ್‌ಐಟಿಗೆ ದೂರು ನೀಡಿದ್ದರು. ಅದರೆ, ಸುಜಾತಾ ಭಟ್ ಶಿವಮೊಗ್ಗದಲ್ಲಿಯೂ ಕೆಲ ವರ್ಷ ವಾಸವಾಗಿದ್ದರು. ಈ ವೇಳೆ ಸುಜಾತಾ ಭಟ್ ಪುತ್ರಿ ಅನನ್ಯಾ ಭಟ್ ಬಗ್ಗೆ ಸ್ಥಳೀಯರಿಗೆ ಮಾಹಿತಿಯೇ ಇದ್ದಿಲ್ಲವೆಂಬ ಅಂಶ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
1999 ರಿಂದ 2007 ರವರೆಗೆ ರಿಪ್ಪನ್ ಪೇಟೆಯಲ್ಲಿ ವಾಸವಿದ್ದ ಪ್ರಭಾಕರ್ ಬಾಳಿಗ ಅವರ ಜೊತೆ ಸುಜಾತಾ ಭಟ್ 18 ವರ್ಷವಾಸವಿದ್ದರು. ದಂಪತಿ, ನಾಯಿಗಳನ್ನು ಮಕ್ಕಳು ಎಂದು ಸಾಕುತ್ತಿದ್ದರು. ಸ್ಥಳೀಯರ ಪ್ರಕಾರ, ಸುಜಾತಾ ಭಟ್ ಹಾಗೂ ಪ್ರಭಾಕರ್ ಬಾಳಿಗ ಅವರಿಗೆ ಮಕ್ಕಳೇ ಇರಲಿಲ್ಲವಂತೆ. ಅಲ್ಲದೆ, ಸುಜಾತಾ ಇರುವಷ್ಟು ದಿನ ಅಕ್ಕಪಕ್ಕದ ಜನರೊಂದಿಗೆ ಹಾಗೂ ಬ್ರಾಹ್ಮಣ ಸಮಾಜ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿಲ್ಲ.
ಧರ್ಮಸ್ಥಳ ಶವ ಅಗೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗೆದ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಪತ್ತೆಯಾಗದಿರುವ ಅಂಶ ಒಂದೆಡೆಯಾದರೆ. ಇತ್ತ ನಾಪತ್ತೆಯಾದವರ ಬಗ್ಗೆ ಎಸ್‌ಐಟಿಗೆ ದೂರು ನೀಡಿದವರ ಬಗ್ಗೆ ಬಗೆದಷ್ಟು ಅಂಶಗಳು ಬಯಲಾಗುತ್ತಿವೆ.