ಮಂಗಳೂರು: ರಾಜ್ಯಾದ್ಯಂತ ಸದ್ದು ಮಾಡಿದ್ದ ಧರ್ಮಸ್ಥಳ (Dharmasthala) ಬುರುಡೆ ಪ್ರಕರಣ ತನಿಖೆ ಬಹುತೇಕ ಅಂತ್ಯದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (ಅ.27) ಮತ್ತೊಂದು ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ (SIT) ನೋಟಿಸ್ ನೀಡಿತ್ತು. ಆದರೆ ಸುಜಾತ್ ಭಟ್ (Sujatha Bhat) ಹೊರತುಪಡಿಸಿ, ಇನ್ನುಳಿದ ನಾಲ್ವರು ವಿಚಾರಣೆಗೆ ಗೈರಾಗಿದ್ದಾರೆ.
ಸೋಮವಾರ ಬೆಳಗ್ಗೆ 10:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್, ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ ಹಾಗೂ ಸುಜಾತ್ ಭಟ್‌ಗೆ ಬಿಎನ್‌ಎಸ್ 35(3) ಅಡಿಯಲ್ಲಿ ನೋಟಿಸ್ ಜಾರಿ ಮಾಡಿತ್ತು. ತನಿಖೆಯಲ್ಲಿ ಕಂಡುಕೊಂಡಂತೆ ಪ್ರಕರಣದ ಕುರಿತಂತೆ ಹಲವು ಸಂಗತಿಗಳನ್ನು ಮತ್ತು ಸಂದರ್ಭಗಳನ್ನು ತಮ್ಮಿಂದ ಖಚಿತಪಡಿಸಿಕೊಳ್ಳಲು ನಿಮ್ಮನ್ನು ವಿಚಾರಿಸುವುದು ಅಗತ್ಯವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದರು. ಜೊತೆಗೆ ವಿಚಾರಣೆಗೆ ಹಾಜರಾಗದಿದ್ದರೆ, ಬಂಧನ ಮಾಡುವ ಎಚ್ಚರಿಕೆಯನ್ನೂ ನೀಡಿದ್ದರು.ಇದನ್ನೂ ಓದಿ: ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ: ಹೈಕೋರ್ಟ್
ವಿಚಾರಣೆ ಸಂಬಂಧ ಬೆಳ್ಳಂಬೆಳಗ್ಗೆ ಸುಜಾತ್ ಭಟ್ ಬೆಂಗಳೂರಿನಿಂದ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿದ್ದರು. ಬುರುಡೆ ಗ್ಯಾಂಗ್ ಗೈರಾಗಿರುವುದನ್ನು ಕಂಡು ಎಸ್‌ಐಟಿ ಮಧ್ಯಾಹ್ನ 2 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಡೆಡ್‌ಲೈನ್ ನೀಡಿದ್ದರು. ಅದಕ್ಕೂ ಬಗ್ಗದ ಗ್ಯಾಂಗ್ ಕೊನೆಗೆ ವಿಚಾರಣೆಗೆ ಹಾಜರಾಗದೇ ತಮ್ಮ ವಕೀಲರನ್ನು ಕಳುಹಿಸಿದ್ದರು.
ತಿಮರೋಡಿ ಪರ ವಕೀಲರಾದ ಅಂಬಿಕಾ ಪ್ರಭು ಹಾಗೂ ತಂಡ ಆಗಮಿಸಿ, ಮಹೇಶ್ ಶೆಟ್ಟಿ ತಿಮರೋಡಿ ಇಂದು ವಿಚಾರಣೆಗೆ ಬರಲು ಆಗಲ್ಲ, ಹೀಗಾಗಿ ನಾಲ್ವರಿಗೂ ಏಳು ದಿನ ಸಮಯ ಕೊಡಿ ಎಂದು ಎಸ್‌ಐಟಿ ಬಳಿ ಕೇಳಿಕೊಂಡಿದ್ದರು. ಅದರಂತೆ ಎಸ್‌ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಗೆ ಏಳು ದಿನ ಹಾಗೂ ಇನ್ನುಳಿದ ಮೂವರು ನಾಲ್ಕು ದಿನದ ಒಳಗೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡಿದ್ದಾರೆ.ಇದನ್ನೂ ಓದಿ: ಮೊರಾದಾಬಾದ್ ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ – ಓರ್ವ ಮಹಿಳೆ ಸಾವು, ಆರು ಮಂದಿಗೆ ಗಾಯ









