Tag: sujatha

  • ಟಿಎಂಸಿ ಸೇರಿದ ಪತ್ನಿಗೆ ಡಿವೋರ್ಸ್ ನೀಡಲು ಮುಂದಾದ ಬಿಜೆಪಿ ಸಂಸದ

    ಟಿಎಂಸಿ ಸೇರಿದ ಪತ್ನಿಗೆ ಡಿವೋರ್ಸ್ ನೀಡಲು ಮುಂದಾದ ಬಿಜೆಪಿ ಸಂಸದ

    ಕೋಲ್ಕತ್ತಾ: ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಪಕ್ಷದ ಸೌಮಿತ್ರ ಖಾನ್ ಅವರು ತಮ್ಮ ಪತ್ನಿ ಸುಜಾತಾ ಮಂಡಲ್ ಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ.

    ಹೌದು. ಸುಜಾತಾ ಅವರು ಟಿಎಂಸಿಗೆ ಸೇರ್ಪಡೆಯಾದ ಕೆಲವೇ ಗಂಟೆಗಳಲ್ಲಿ ಸೌಮಿತ್ರಾ, ಪತ್ನಿಗೆ ವಿಚ್ಛೇದನ ನೋಟಿಸ್ ಕಳುಹಿಸಲು ನಿರ್ಧರಿಸಿದ್ದಾರೆ. ಸೌಮಿತ್ರಾ ಅವರು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮತ್ತು ಬಿಷ್ಣುಪುರದ ಸಂಸದರಾಗಿದ್ದಾರೆ.

    ಸುಜಾತಾ ಅವರು ಇಂದು ಕೋಲ್ಕತ್ತಾದಲ್ಲಿ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಕುಟುಂಬದಲ್ಲಿನ ದ್ವೇಷವನ್ನು ಬಹಿರಂಗಪಡಿಸಿದ್ದಾರೆ. ಪತ್ನಿಯ ಈ ವರ್ತನೆಯಿಂದ ಬೇಸತ್ತ ಸೌಮಿತ್ರ ಖಾನ್, ಸುಜಾತಾ ಅವರಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ. ಜೊತೆಗೆ ಬಿಷ್ಣುಪುರದ ಬಾರ್ಜೋರಾದಲ್ಲಿ ಸುಜಾತಾ ಅವರ ಕಾರು ಮತ್ತು ಮನೆಯ ಭದ್ರತೆಯನ್ನು ಹಿಂಪಡೆಯಲಾಗಿದೆ.

    ಸುಜಾತಾ ಮಂಡಲ್ ಖಾನ್ ಅವರು ಇಂದು ತೃಣಮೂಲ ಸಂಸದ ಸೌಗತಾ ರಾಯ್ ಮತ್ತು ವಕ್ತಾರ ಕುನಾಲ್ ಘೋಷ್ ಅವರ ಸಮ್ಮುಖದಲ್ಲಿ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಲು ಸಾಕಷ್ಟು ಶ್ರಮಿಸಿದ್ದೇನೆ. ಆದರೆ ಸದ್ಯಕ್ಕೆ ಮೂಲ ಬಿಜೆಪಿಗರಿಗೇ ಪಕ್ಷದಲ್ಲಿ ಬೆಲೆ ಗೌರವ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಇಂದು ನಾನು ಪಕ್ಷವನ್ನು ತ್ಯಜಿಸುತ್ತಿದ್ದೇನೆ. ಅಲ್ಲದೆ ಓರ್ವ ಮಹಿಳೆಯಾಗಿ ನನಗೆ ಆ ಪಕ್ಷದಲ್ಲಿರುವುದು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಟಿಎಂಸಿ ಪಕ್ಷದ ಪ್ರಬಲ ನಾಯಕ ಹಾಗೂ ಮಾಜಿ ಶಾಸಕ ಸುವೆಂಧು ಅಧಿಕಾರಿ ತಮ್ಮ ಮಾತೃಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಬೆನ್ನಿಗೆ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಪತ್ನಿ ಟಿಎಂಸಿಗೆ ಸೇರ್ಪಡೆಯಾಗಿರುವುದು ಇದೀಗ ರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿದೆ.

  • ಕಿವುಡ, ಮೂಕ ಮಗಳಿಗೆ ತರಬೇತಿ – ಬಡ ಮಕ್ಕಳಿಗಾಗಿ `ವಿಶೇಷ’ ಶಾಲೆಯೇ ಆರಂಭಿಸಿದ್ದಾರೆ ವಿಜಯಪುರದ ಸುಜಾತ

    ಕಿವುಡ, ಮೂಕ ಮಗಳಿಗೆ ತರಬೇತಿ – ಬಡ ಮಕ್ಕಳಿಗಾಗಿ `ವಿಶೇಷ’ ಶಾಲೆಯೇ ಆರಂಭಿಸಿದ್ದಾರೆ ವಿಜಯಪುರದ ಸುಜಾತ

    ವಿಜಯಪುರ: ಮಕ್ಕಳು ಹುಟ್ಟು ಕಿವುಡು, ಮೂಕರು ಅಂತಾದ್ರೆ ಹೆತ್ತವರ ಕರುಳು ಚುರ್ ಅನ್ನುತ್ತದೆ. ಕೆಲವರು ಇದರಿಂದ ನೊಂದು ವಿದ್ಯಾಭ್ಯಾಸ ಜಾಸ್ತಿ ಕೊಡಿಸೋಕೆ ಆಗಲ್ಲ. ಆದ್ರೆ ವಿಜಯಪುರದ ಮಹಿಳೆಯೊಬ್ಬರು ಮಗಳಿಗೂ ತರಬೇತಿ ಕೊಡಿಸಿ, ತಾವೂ ತರಬೇತಿ ಪಡೆದು ಕಿವುಡ, ಮೂಕ ಮಕ್ಕಳಿಗಾಗಿ ಶಾಲೆಯನ್ನೇ ತೆರೆದು, ಪಬ್ಲಿಕ್ ಹೀರೋ ಆಗಿದ್ದಾರೆ.

    ಸುಜಾತ ಅವರ ಪುತ್ರಿ ಸ್ವಪ್ನಾಗೆ ಮೂರು ವರ್ಷವಾದರೂ ಮಾತು ಬಂದಿರಲಿಲ್ಲ. ವೈದ್ಯರ ಬಳಿ ತೋರಿಸಿದಾಗ ಕ್ರಮೇಣ ಬರುತ್ತೆ ಅಂದಿದ್ರೂ ಹುಸಿಯಾಯ್ತು. ಜೊತೆಗೆ ಕಿವಿಯೂ ಕೇಳ್ತಿರಲಿಲ್ಲ. ನೊಂದ ಶಿವಾನಂದ-ಸುಜಾತ ದಂಪತಿ ತಮ್ಮ ಮಗಳಿಗೆ ಮೈಸೂರಿನ ಮಾನಸಗಂಗೋತ್ರಿ ಮೂಕ ಮತ್ತು ಕಿವುಡ ತರಬೇತಿ ಶಾಲೆಯಲ್ಲಿ ಶಿಕ್ಷಣ ಕೊಡಿಸಿದ್ರು. ಆಸ್ತಿಪಾಸ್ತಿಯನ್ನೆಲ್ಲಾ ಮಾರಿ 3 ವರ್ಷ ಮೈಸೂರಿನಲ್ಲಿ ಉಳಿದರು. ಮಗಳ ಜೊತೆಗೆ ಸುಜಾತ ಅವರೂ ತರಬೇತಿ ಪಡೆದರು.

    3 ವರ್ಷಗಳ ಬಳಿಕ ವಿಜಯಪುರಕ್ಕೆ ಮರಳಿ, ಮನೆಯಲ್ಲೇ ಮಗಳಿಗೆ ತರಬೇತಿ ಪ್ರಾರಂಭಿಸಿದರು. ಸುದ್ದಿ ತಿಳಿದ ನೆರೆಹೊರೆಯ ಮೂವರು ಮಕ್ಕಳು ತರಬೇತಿಗೆ ಬಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಜಾತ, ಇಂಥ ವಿಶೇಷ ಮಕ್ಕಳಿಗಾಗಿ 2008ರಲ್ಲಿ ಮಗಳ ಹೆಸರಿನಲ್ಲೇ ಶಾಲೆಯನ್ನೇ ತೆರೆದರು. ಇದೀಗ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಮತ್ತು ವಿಜಯಪುರದ ಜಿಲ್ಲೆಗಳ ಒಟ್ಟು 62 ಮಕ್ಕಳು ತರಬೇತಿ ಪಡೀತಿದ್ದಾರೆ ಎಂದು ಪೋಷಕರಾದ ಗೀತಾ ಹೇಳಿದ್ದಾರೆ.

    1 ರಿಂದ 3 ನೇ ತರಗತಿವರೆಗೆ ಮಕ್ಕಳಿಗೆ ಉಚಿತ ವಸತಿ, ತರಬೇತಿ ಸೇರಿದಂತೆ ಊಟ, ಉಪಹಾರವನ್ನು ಶಿವಾನಂದ ದಂಪತಿ ನೀಡ್ತಿದ್ದಾರೆ. ನಮ್ಮೀ ಸೇವೆಯಿಂದಾದ್ರೂ ದೇವರು ಕಣ್ತೆರೆದು ಮಗಳಿಗೆ ಮಾತು ಕೊಡ್ಲಿ ಅಂತ ಪ್ರಾರ್ಥಿಸ್ತಿದ್ದಾರೆ.

    https://www.youtube.com/watch?v=HLbBmAShhk0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv