Tag: suit

  • ಸೂರ್ಯನ ಪೂರ್ಣ ಚಿತ್ರ ಸೆರೆಹಿಡಿದ ಆದಿತ್ಯ-L1

    ಸೂರ್ಯನ ಪೂರ್ಣ ಚಿತ್ರ ಸೆರೆಹಿಡಿದ ಆದಿತ್ಯ-L1

    ಬೆಂಗಳೂರು: ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಮಿಷನ್ ಆದಿತ್ಯ-ಎಲ್ 1 (Aditya L1) ಬಾಹ್ಯಾಕಾಶ ನೌಕೆಯು ಸೂರ್ಯನ ಪೂರ್ಣ ಚಿತ್ರಣವನ್ನು ಸೆರೆಹಿಡಿದಿದೆ.

    ಆದಿತ್ಯ ಎಲ್‌-1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (ಸೋಲಾರ್ ಅಲ್ಟ್ರಾ ವಯೊಲೆಟ್‌ ಇಮೇಜ್‌ ಟೆಲಿಸ್ಕೋಪ್‌- SUIT) ಸೂರ್ಯನ ಡಿಸ್ಕ್‌ನ ಆರಂಭಿಕ ಸಂಪೂರ್ಣ ಚಿತ್ರಗಳನ್ನು ಸೆರೆಹಿಡಿಯುವ ಶ್ಲಾಘನೀಯ ಸಾಧನೆಯನ್ನು ಮಾಡಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈ ಮಾಹಿತಿಯನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

    ಸೂರ್ಯನನ್ನು ನೇರಳಾತೀತ ವರ್ಣಪಟಲದೊಳಗೆ ವೀಕ್ಷಿಸಲು ವಿನ್ಯಾಸಗೊಳಿಸಲಾದ ಮಹತ್ವದ ಸಾಧನವಾಗಿರುವ SUIT ಪೇಲೋಡ್ ಅನ್ನು ಕಳೆದ ತಿಂಗಳು ನವೆಂಬರ್ 20 ರಂದು ಸಕ್ರಿಯಗೊಳಿಸಲಾಗಿದೆ. ಇದು ಸೂರ್ಯನ ಕ್ರೋಮೋಸ್ಪಿಯರ್ ಮತ್ತು ಪರಿವರ್ತನೆಯ ಪ್ರದೇಶದ ಪರೀಕ್ಷೆಯಲ್ಲಿ ಸಹಾಯ ಮಾಡುತ್ತದೆ.

    ಸೂರ್ಯಶಿಕಾರಿಗೆ ಹೊರಟಿರುವ ಆದಿತ್ಯ-ಎಲ್1 ಮಿಷನ್ ಮೂಲಕ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಇಸ್ರೋ ತಿಳಿಸಿದೆ. ಫೋಟೋಗಳು – ಸಮೀಪದ ನೇರಳಾತೀತ ತರಂಗಾಂತರಗಳಲ್ಲಿ – ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಸಂಕೀರ್ಣ ವಿವರಗಳಿಗೆ ಪ್ರವರ್ತಕ ಒಳನೋಟಗಳನ್ನು ಒದಗಿಸುತ್ತವೆ ಎಂದು ಇಸ್ರೋ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

    ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ಅಥವಾ SUIT ಉಪಕರಣವು 200-400 nm (ನ್ಯಾನೋಮೀಟರ್) ತರಂಗಾಂತರ ವ್ಯಾಪ್ತಿಯಲ್ಲಿ ಚಿತ್ರಗಳನ್ನು ಸೆರೆಹಿಡಿದಿದೆ. ವಿವಿಧ ವೈಜ್ಞಾನಿಕ ಶೋಧಕಗಳನ್ನು ಬಳಸಿಕೊಂಡು ಈ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು SUIT ಸೆರೆಹಿಡಿಯುತ್ತದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

    ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ಆದಿತ್ಯ-L1 ಏಳು ಪೇಲೋಡ್‌ಗಳೊಂದಿಗೆ ಉಡಾವಣೆಗೊಂಡಿತ್ತು. TL1I ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್‌ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿತ್ತು.

  • ದೂರು ನೀಡಿದರೂ ಉರ್ಫಿ ಡೋಂಟ್ ಕೇರ್ : ಮೊಬೈಲ್ ಮೂಲಕ ಪ್ರತಿಭಟಿಸಿದ ನಟಿ

    ದೂರು ನೀಡಿದರೂ ಉರ್ಫಿ ಡೋಂಟ್ ಕೇರ್ : ಮೊಬೈಲ್ ಮೂಲಕ ಪ್ರತಿಭಟಿಸಿದ ನಟಿ

    ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಮೇಲೆ ಅನೇಕ ದೂರುಗಳು ಸಲ್ಲಿಕೆಯಾಗಿದ್ದವು. ಅರೆಬರೆ ಡ್ರೆಸ್ ಹಾಕಿ, ಸಮಾಜದ ನೋಟವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಕಿಡಿಕಾರಿದ್ದರು. ಹಾಗಾಗಿ ಮೊನ್ನೆಯಷ್ಟೇ ಅವರು ಗೌರಮ್ಮನ ರೀತಿಯಲ್ಲಿ ಬಟ್ಟೆ ಧರಿಸಿದ್ದರು. ಈ ಬದಲಾವಣೆ ಕಂಡು ಬಹುತೇಕರು ಅಚ್ಚರಿ ಪಡಿಸಿದ್ದರು. ದೂರಿಗೆ ಉರ್ಫಿ ಹೆದರಿಕೊಂಡು ಬದಲಾಗಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ಉರ್ಫಿ ಬದಲಾಗಿಲ್ಲ.

    ದೂರು ನೀಡಿದವರ ವಿರುದ್ಧವೇ ಪ್ರತಿಭಟನೆ ಅನ್ನುವಂತೆ ಉರ್ಫಿ ಇದೀಗ ಮತ್ತೆ ತಮ್ಮ ನಿತ್ಯದ ಕಸುಬು ಶುರು ಮಾಡಿದ್ದಾರೆ. ಎಂದಿನಂತೆ ತಮ್ಮಿಷ್ಟದ ಕಾಸ್ಟ್ಯೂಮ್ ತೊಟ್ಟು ಪ್ರತಿಭಟಿಸಿದ್ದಾರೆ. ಮೊಬೈಲ್ ಮೂಲಕ ತಮ್ಮ ಮಾನ ಮುಚ್ಚುವಂತೆ ಬಟ್ಟೆ ಹಾಕಿಕೊಂಡು ಮತ್ತೆ ಬೀದಿಗೆ ಇಳಿದಿದ್ದಾರೆ. ತಾವು ಯಾರಿಗೂ ಹೆದರುವುದಿಲ್ಲ ಮತ್ತೆ ತಮ್ಮಿಷ್ಟದಂತೆಯೇ ಬದುಕುವುದಾಗಿಯೂ ಅವರು ಈ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ:ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

     

    ಬಾಲಿವುಡ್ ನಟಿ, ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಮುಂಬೈ ಬೀದಿಯಲ್ಲಿ ಬಿಕಿನಿ ಧರಿಸಿ ಓಡಾಡಿದರು ಎನ್ನುವ ಕಾರಣಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ಈ ವಿಷಯ ತಿಳಿಯುತ್ತಿದ್ದಂತೆಯೇ ಉರ್ಫಿ ಗರಂ ಆಗಿದ್ದರು. ಅತ್ಯಾಚಾರಿಗಳ ಮೇಲೆ ದೂರು ಕೊಡಿ, ನನ್ನ ಮೇಲಲ್ಲ ಎಂದು ದೂರು ನೀಡಿದವರು ವಿರುದ್ಧ ಮಾತನಾಡಿದ್ದರು.

    ನಾನು ತಾಲಿಬಾನ್ ನಲ್ಲಿ ವಾಸಿಸುತ್ತಿಲ್ಲ. ಭಾರತದಲ್ಲಿ ಬದುಕುತ್ತಿರುವೆ. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ನಮಗಿಷ್ಟ ಬಂದಂತೆ ಬಟ್ಟೆ ಧರಿಸಲು ಅವಕಾಶವಿಲ್ಲವಾ? ಎಂದು ಅವರು ಕೇಳಿದ್ದಾರೆ. ಬಿಕಿನಿ ಧರಿಸಿದರೆ ನಿಮಗೆ ಸಮಸ್ಯೆ ಆಗುತ್ತದೆ ಅಂತಾದರೆ ಕಣ್ಣು ಮುಚ್ಚಿಕೊಂಡು ಓಡಾಡಿ ಎಂದು ಉರ್ಫಿ ಪುಕ್ಕಟೆ ಸಲಹೆಯನ್ನೂ ಕೊಟ್ಟಿದ್ದಾರೆ. ಯಾರು ಏನೇ ಹೇಳಿದರೂ, ದೂರು ಕೊಟ್ಟರು ನಾನು ನನ್ನಿಷ್ಟದಂತೆಯೇ ಬಟ್ಟೆಯನ್ನೇ ಧರಿಸುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ.

    ಉರ್ಫಿಗೆ ವಾರಕ್ಕೊಂದು ಗಲಾಟೆ ಮಾಡಿಕೊಳ್ಳದೇ ಇದ್ದರೆ, ನಿದ್ದೆಯೇ ಬರುವುದಿಲ್ಲ ಅನಿಸುತ್ತದೆ. ಹಾಗಾಗಿಯೇ ಏನಾದರೂ ಒಂದು ವಿಷಯ ತಗೆದುಕೊಂಡು ರಸ್ತೆಯಲ್ಲೇ ಬಾಯಿಗೆ ಬಂದಂತೆ ಮಾತನಾಡುತ್ತಲೇ ಇರುತ್ತಾರೆ. ದೂರಿನ ವಿಚಾರವನ್ನೂ ಅವರು ಹಾದಿ ರಂಪ, ಬೀದಿ ರಂಪ ಮಾಡಿದ್ದಾರೆ. ಕೊಳಕಾದ ಭಾಷೆಯಲ್ಲೇ ದೂರು ನೀಡಿದವರ ವಿರುದ್ಧ ಮಾತನಾಡಿದ್ದಾರೆ. ಅವರು ಬೈದಿರುವ ವಿಡಿಯೋಗಳು ವೈರಲ್ ಕೂಡ ಆಗಿವೆ.

    Live Tv
    [brid partner=56869869 player=32851 video=960834 autoplay=true]

  • ದೂರು ಕೊಟ್ಟವರ ವಿರುದ್ಧ ಗರಂ ಆದ ಉರ್ಫಿ: ಬಿಕಿನಿಯಲ್ಲೇ ಓಡಾಡ್ತೀನಿ ಎಂದ ನಟಿ

    ದೂರು ಕೊಟ್ಟವರ ವಿರುದ್ಧ ಗರಂ ಆದ ಉರ್ಫಿ: ಬಿಕಿನಿಯಲ್ಲೇ ಓಡಾಡ್ತೀನಿ ಎಂದ ನಟಿ

    ಬಾಲಿವುಡ್ ನಟಿ, ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಮುಂಬೈ ಬೀದಿಯಲ್ಲಿ ಬಿಕಿನಿ ಧರಿಸಿ ಓಡಾಡಿದರು ಎನ್ನುವ ಕಾರಣಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಉರ್ಫಿ ಗರಂ ಆಗಿದ್ದಾರೆ.  ಅತ್ಯಾಚಾರಿಗಳ ಮೇಲೆ ದೂರು ಕೊಡಿ, ನನ್ನ ಮೇಲಲ್ಲ ಎಂದು ದೂರು ನೀಡಿದವರು ವಿರುದ್ಧ ಮಾತನಾಡಿದ್ದಾರೆ. ನನ್ನ ದೇಹ, ನನ್ನ ಬಟ್ಟೆ ಯಾವ ರೀತಿಯಾದರೂ ಧರಿಸುತ್ತೇನೆ. ನಿಮಗೇನು ಸಮಸ್ಯೆ ಎಂದು ಅವರು ಕೇಳಿದ್ದಾರೆ.

    ನಾನು ತಾಲಿಬಾನ್ ನಲ್ಲಿ ವಾಸಿಸುತ್ತಿಲ್ಲ. ಭಾರತದಲ್ಲಿ ಬದುಕುತ್ತಿರುವೆ. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ನಮಗಿಷ್ಟ ಬಂದಂತೆ ಬಟ್ಟೆ ಧರಿಸಲು ಅವಕಾಶವಿಲ್ಲವಾ? ಎಂದು ಅವರು ಕೇಳಿದ್ದಾರೆ. ಬಿಕಿನಿ ಧರಿಸಿದರೆ ನಿಮಗೆ ಸಮಸ್ಯೆ ಆಗುತ್ತದೆ ಅಂತಾದರೆ ಕಣ್ಣು ಮುಚ್ಚಿಕೊಂಡು ಓಡಾಡಿ ಎಂದು ಉರ್ಫಿ ಪುಕ್ಕಟೆ ಸಲಹೆಯನ್ನೂ ಕೊಟ್ಟಿದ್ದಾರೆ. ಯಾರು ಏನೇ ಹೇಳಿದರೂ, ದೂರು ಕೊಟ್ಟರು ನಾನು ನನ್ನಿಷ್ಟದಂತೆಯೇ ಬಟ್ಟೆಯನ್ನೇ ಧರಿಸುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗ ಶೌರ್ಯ ಮದುವೆ

    ಉರ್ಫಿಗೆ ವಾರಕ್ಕೊಂದು ಗಲಾಟೆ ಮಾಡಿಕೊಳ್ಳದೇ ಇದ್ದರೆ, ನಿದ್ದೆಯೇ ಬರುವುದಿಲ್ಲ ಅನಿಸುತ್ತದೆ. ಹಾಗಾಗಿಯೇ ಏನಾದರೂ ಒಂದು ವಿಷಯ ತಗೆದುಕೊಂಡು ರಸ್ತೆಯಲ್ಲೇ ಬಾಯಿಗೆ ಬಂದಂತೆ ಮಾತನಾಡುತ್ತಲೇ ಇರುತ್ತಾರೆ. ದೂರಿನ ವಿಚಾರವನ್ನೂ ಅವರು ಹಾದಿ ರಂಪ, ಬೀದಿ ರಂಪ ಮಾಡಿದ್ದಾರೆ. ಕೊಳಕಾದ ಭಾಷೆಯಲ್ಲೇ ದೂರು ನೀಡಿದವರ ವಿರುದ್ಧ ಮಾತನಾಡಿದ್ದಾರೆ. ಅವರು ಬೈದಿರುವ ವಿಡಿಯೋಗಳು ವೈರಲ್ ಕೂಡ ಆಗಿವೆ.

    Live Tv
    [brid partner=56869869 player=32851 video=960834 autoplay=true]

  • ಯೂತ್‌ಫುಲ್ ಲೈಫ್‌ನಲ್ಲಿ ಕಲರ್‌ಫುಲ್ ವಾಚ್‌ಗಳ ಕಾರುಬಾರು

    ಯೂತ್‌ಫುಲ್ ಲೈಫ್‌ನಲ್ಲಿ ಕಲರ್‌ಫುಲ್ ವಾಚ್‌ಗಳ ಕಾರುಬಾರು

    ತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಲುಕ್ ನೀಡುವ ವಾಚ್‌ಗಳಿಗಿಂತ ಸ್ಮಾರ್ಟ್ ವಾಚ್‌ಗಳು ಹೆಚ್ಚು ಟ್ರೆಂಡಿಯಾಗಿವೆ. ಇವು ನೂತನ ತಂತ್ರಜ್ಞಾನಗಳೊಂದಿಗೆ ವಿಶಿಷ್ಟ ರೂಪದಲ್ಲಿ ಕೆಲಸ ನಿರ್ವಹಿಸುತ್ತಿವೆ. ಅದಕ್ಕಾಗಿಯೇ ಉತ್ತಮ ಗುಣಮಟ್ಟ ಹಾಗೂ ದೀರ್ಘಕಾಲ ಬಾಳಿಕೆ ಬರುವ ವಾಚ್‌ಗಳು ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ದೊರೆಯುತ್ತಿವೆ.

    ಬ್ಲೂಟೂತ್ ಕನೆಕ್ಟ್ ಸ್ಮಾರ್ಟ್ ವಾಚ್, ಮೆಟಲ್ ಬಾಡಿ ವಾಚ್, ಡಿಜಿಟಲ್ ವಾಚ್, ಚೈನ್ ವಾಚ್ ಹೀಗೆ ವಿವಿಧ ಬಗೆಯ ವಾಚ್‌ಗಳು ಯುವ ಸಮೂಹದ ಅಚ್ಚುಮೆಚ್ಚಾಗಿವೆ. ಅವುಗಳ ವೈಶಿಷ್ಟ್ಯ ಹೇಗಿದೆ ಎಂಬುದನ್ನಿಲ್ಲಿ ನೋಡಿ…‌ ಇದನ್ನೂ ಓದಿ: ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ

    ಬ್ಲೂಟೂತ್ ಸ್ಮಾರ್ಟ್ ವಾಚ್:
    ಇದು ಮೊಬೈಲ್ ಬ್ಲೂಟೂತ್ ಸಂಪರ್ಕದೊಂದಿಗೆ ಕೆಲಸ ನಿರ್ವಹಿಸುವ ಸ್ಮಾರ್ಟ್ ವಾಚ್. ಈ ವಾಚ್ ಕಪ್ಪು, ಬಿಳಿ ಶೈನ್ ಹಾಗೂ ಬ್ರೌನ್ ಬಣ್ಣಗಳಲ್ಲಿ ಇರುತ್ತದೆ. ಯುವಕ, ಯುವತಿಯರ ಕೈಗೆ ಇದು ಆಕರ್ಷಕ ಪ್ರೀಮಿಯಂ ನೋಟವನ್ನು ನೀಡುತ್ತದೆ.

    ವಾಟರ್‌ಪ್ರೂಫ್ ವಾಚ್
    ನಿಮ್ಮ ಫಿಟ್ನೆಸ್ ಮತ್ತು ಆರೋಗ್ಯವನ್ನು ಟ್ರ‍್ಯಾಕ್ ಮಾಡುವುದಕ್ಕೂ ಈ ವಾಚ್ ಉಪಯೋಗ ಆಗಲಿದೆ. ಉತ್ತಮ ವೈಶಿಷ್ಟ್ಯ ಹೊಂದಿದ್ದು, ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಹಾಗೂ ನಾವು ನಡೆಯುವ ಹೆಜ್ಜೆಗಳನ್ನೂ ಮಾನಿಟರ್ ಮಾಡುತ್ತದೆ.

    ಮೆಟಲ್ ಬಾಡಿ ವಾಚ್:
    ಈ ವಾಚ್ ಮೆಟಲ್ ಬಾಡಿ ಮತ್ತು ಲೆದರ್ ಸ್ಟ್ರಾಪ್, ಫುಲ್ ಟಚ್ ಹೊಂದಿರುತ್ತವೆ. ಇದು ಇಂದಿನ ಟ್ರೆಂಡಿಯೊಂದಿಗೆ ಸಾಂಪ್ರದಾಯಿಕ ಉಡುಗೆಗಳಿಗೂ ಹೊಸ ಲುಕ್ ಕೊಡುತ್ತೆ. ಇದನ್ನೂ ಓದಿ: ಕಲರ್‌ಫುಲ್ ಸೀರೆಗೆ ಮ್ಯಾಚಿಂಗ್ ಮಿಂಚಿಂಗ್ – ಬೊಂಬಾಟ್ ಬ್ಲೌಸ್‍ಗಳ ಸ್ಲೀವ್ಸ್ ಡಿಸೈನ್

    ಡಿಜಿಟಲ್ ವಾಚ್:
    ವಿದ್ಯುತ್ ಮೀಟರ್ ನಂತೆಯೇ ನಿಮಿಷ, ಸೆಕೆಂಡುಗಳು ಹಾಗೂ ಗಂಟೆ ಸಮಯವನ್ನೂ ತೋರಿಸುವ ಈ ಡಿಜಿಟಲ್ ವಾಚ್ ಹೆಚ್ಚು ಯೂತ್‌ಫುಲ್ ಆಗಿದೆ. ಜೊತೆಗೆ ಕಲರ್ ಫ್ಲ್ಯಾಶ್‌ ಸಹ ಹೊಂದಿದ್ದು, ಅಲಾರಂ ಸೆಟ್ಟಿಂಗ್ಸ್ ಸಹ ಇರುತ್ತದೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದ ಯುವಜನರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

    ಡ್ರೆಸ್‌ವಾಚ್
    ಸೂಟ್ ಡ್ರೆಸ್‌ಗಳಿಗೆ ಪಕ್ಕಾ ಲುಕ್ ನೀಡುವ ವಾಚ್. ನೀವು ಯಾವುದೇ ಸೂಟ್ ಧರಿಸಿದ್ರೂ ಅದರ ಔಟ್‌ಲುಕ್ ಫಿಟ್ ಆಗಿ ಕಾಣಬೇಕು ಅಂದ್ರೆ ಈ ರೀತಿಯ ವಾಚ್ ಧರಿಸಲೇ ಬೇಕು. ಆದರೆ ಟ್ರೆಂಟ್ ಬಯಸುವವರು ಇದನ್ನ ಹೆಚ್ಚು ಇಷ್ಟಪಡಲ್ಲ.

    Live Tv
    [brid partner=56869869 player=32851 video=960834 autoplay=true]

  • ಹೂಬ್ಲೋಟ್ ವಾಚ್ ಕಮಿಷನ್ ಆದ್ರೆ ಮೋದಿ ಸೂಟ್ ಏನು?- ಶಾ ಗೆ ಸಿದ್ದರಾಮಯ್ಯ ಪ್ರಶ್ನೆ

    ಹೂಬ್ಲೋಟ್ ವಾಚ್ ಕಮಿಷನ್ ಆದ್ರೆ ಮೋದಿ ಸೂಟ್ ಏನು?- ಶಾ ಗೆ ಸಿದ್ದರಾಮಯ್ಯ ಪ್ರಶ್ನೆ

    ಬೆಂಗಳೂರು: ದಾವಣಗೆರೆ ರೈತ ಸಮಾವೇಶದಲ್ಲಿ ಮೋದಿ ಭಾಗವಹಿಸುವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಿಎಂ ಸಿದ್ದರಾಮಯ್ಯ ಟ್ವೀಟ್ ವಾರ್ ಗೆ ಇಳಿದಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, ವಾಚ್ ಬಗ್ಗೆ ದಾಖಲೆ ನಿಮ್ಮ ಬಳಿ ಇದ್ರೆ ಬಿಡುಗಡೆ ಮಾಡಿ. ಆದ್ರೆ ಅದೇ ಲಾಜಿಕ್ ಪಿಎಂ ಅವರ ಸೂಟ್ ಗೂ ಕೂಡ ಅನ್ವಯ ಆಗಲ್ಲವೇ ಅಂತಾ ಪ್ರಶ್ನಿಸಿದ್ದಾರೆ.

    ಬಿಜೆಪಿ ಅಧಿಕಾರಕ್ಕೆ ಬಂದರೆ ಮುಷ್ಠಿ ಅಕ್ಕಿಯೇ ಗತಿ. ನಾವು ಪ್ರತಿಯೊಬ್ಬರಿಗೂ 7 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಅನ್ನಭಾಗ್ಯ ವಿರೋಧಿಗಳ ಬಗ್ಗೆ ಎಚ್ಚರವಿರಲಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಟ್ಯಾಗ್ ಮಾಡಿ ಸಿಎಂ ಟಾಂಗ್ ಕೊಟ್ಟಿದ್ದಾರೆ.

    ಬಡ ಹಾಗೂ ಮಧ್ಯಮ ವರ್ಗಕ್ಕೆ ಸೇರಿದ 12 ಸಾವಿರ ಕೋಟಿ ರೂ. ಹಣದೊಂದಿಗೆ ಚೋಟಾ ಮೋದಿ(ನೀರವ್ ಮೋದಿ) ಓಡಿಹೋಗಿದ್ದಾನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

    ಡಿಸೆಂಬರ್ 15ರೊಳಗೆ ಮಹದಾಯಿ ಸಮಸ್ಯೆ ಬಗೆಹರಿಸೋದಾಗಿ ಬಿಎಸ್ ಯಡಿಯೂರಪ್ಪ ಮಾತು ಕೋಟ್ಟು ವಿಫಲರಾಗಿದ್ದಾರೆ. ಪ್ರಧಾನಿ ಮಧ್ಯಪ್ರವೇಶಿಸಬಹುದಿತ್ತು. ಆದ್ರೆ ಆ ಇಚ್ಛೆ ಅವರಿಗಿಲ್ಲ. ಈಗ ಮತದಾರರನ್ನ ಬ್ಲಾಕ್‍ಮೇಲ್ ಮಾಡ್ತಿದ್ದಾರೆ. ನೀವು ಮತ ಹಾಕೋವರೆಗೆ ಸಮಸ್ಯೆ ಬಗೆಹರಿಸಲ್ಲ ಅಂತಿದ್ದಾರೆ ಎಂದು ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಅಮಿತ್ ಶಾ ಹೇಳಿಕೆ ನೀಡಿದ್ದರು.

  • ದುಬೈ ಪ್ರವಾಸ- ಸೂಟ್‍ನಲ್ಲಿ ಮಿಂಚಿದ ಸಿಎಂ

    ದುಬೈ ಪ್ರವಾಸ- ಸೂಟ್‍ನಲ್ಲಿ ಮಿಂಚಿದ ಸಿಎಂ

    ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಮೂರು ದಿನಗಳ ಪ್ರವಾಸಕ್ಕಾಗಿ ದುಬೈಗೆ ತೆರಳುತ್ತಿದ್ದು, ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಸಿಎಂಗೆ ಬೀಳ್ಕೊಡುಗೆ ನೀಡಿದ್ರು.

    ದುಬೈ ಪ್ರವಾಸದ ಹಿನ್ನೆಲೆಯಲ್ಲಿ ಹೊಸ ಸ್ಟೈಲ್ ನಲ್ಲಿ ಸಿಎಂ ಸಿದ್ದರಾಮಯ್ಯ ಮಿಂಚಿದ್ರು. ದುಬೈ ಪ್ರವಾಸಕ್ಕೆ ಪಂಚೆ ಬದಲು ಸೂಟ್ ಧರಿಸಿದ್ರು.

    ಇಂದು ಕೆಂಪೇಗೌಡ ಏರ್‍ಪೋರ್ಟ್‍ನಿಂದ ಸಿಎಂ ದುಬೈಗೆ ತೆರಳಲಿದ್ದು, ಭಾನುವಾರ ಸಂಜೆ ವಾಪಸ್ ಆಗಲಿದ್ದಾರೆ. ಮೂರು ದಿನಗಳ ಕಾಲ ದುಬೈನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ದುಬೈಗೆ ತೆರಳಿ ಇಂದು ವಿಶ್ರಾಂತಿ ಪಡೆದು, ನಾಳೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಅಬುಧಾಬಿ ಪ್ರವಾಸ ಕೈಗೊಳ್ಳಲಿದ್ದು, ಶೇಕ್ ಜೈದಾ ಮಸೀದಿಗೆ ಭೇಟಿ ನೀಡಲಿದ್ದಾರೆ.

    ಶನಿವಾರ ಸಂಜೆ ಅಲ್ಲಿನ ಉದ್ಯಮಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯ ನಂತರ ಭಾನುವಾರ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.