Tag: suicides

  • ಕಂಪೆನಿಯ 10 ಮಹಡಿಯಿಂದ ಟೆಕ್ಕಿ ಜಿಗಿದಿದ್ದು ಯಾಕೆ: ಪೋಷಕರು ಬಿಚ್ಚಿಟ್ಟರು ನಿಖರ ಕಾರಣ

    ಕಂಪೆನಿಯ 10 ಮಹಡಿಯಿಂದ ಟೆಕ್ಕಿ ಜಿಗಿದಿದ್ದು ಯಾಕೆ: ಪೋಷಕರು ಬಿಚ್ಚಿಟ್ಟರು ನಿಖರ ಕಾರಣ

    ಬೆಂಗಳೂರು: ಹುಟ್ಟುಹಬ್ಬವನ್ನು ಆಚರಿಸಿ ನಗರದಲ್ಲಿ ಕೆಲಸ ಮಾಡುತ್ತಿದ್ದ ಕಂಪೆನಿಯ 10ನೇ ಮಹಡಿಯಿಂದ ಗೋವಾ ಮೂಲದ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕೆ ನಿಖರ ಕಾರಣ ಸಿಕ್ಕಿದೆ.

    ಮಗಳು ಗೀತಾಂಜಲಿಯ ಶವ ಪಡೆಯಲು ಗೋವಾದಿಂದ ಪೋಷಕರು ಬೆಂಗಳೂರಿಗೆ ಬಂದಿದ್ದ ವೇಳೆ ಮಾರತ್ತಹಳ್ಳಿ ಪೊಲೀಸರು ವಿಚಾರಣೆ ನಡೆಸಿದಾಗ ಆತ್ಮಹತ್ಯೆಗೆ ಕಾರಣವನ್ನು ತಿಳಿಸಿದ್ದಾರೆ.

    ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಗೋವಾದಲ್ಲಿರುವ ನಮ್ಮ ಮನೆಗೆ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೀತಾಂಜಲಿ ಬಂದಿದ್ದಳು. ಹುಟ್ಟುಹಬ್ಬದ ದಿನವಾದ ಮಂಗಳವಾರ ಗೀತಾಂಜಲಿಗೆ ನಾವು ನಿಶ್ಚಿತಾರ್ಥ ಮಾಡಿದ್ದೆವು. ಆದರೆ ಆಕೆಗೆ ಈ ಮದುವೆ ಇಷ್ಟವಿರಲಿಲ್ಲ. ಆದರೂ ವಿವಾಹ ನಿಶ್ಚಯಕ್ಕೆ ನಾವು ಬಲವಂತವಾಗಿ ಆಕೆಯನ್ನು ಒಪ್ಪಿಸಿದ್ದೆವು. ನಮ್ಮ ನಿರ್ಧಾರದಿಂದ ಆಕೆ ಮನನೊಂದಿದ್ದಳು. ಈ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ತಿಳಿಸಿದ್ದಾರೆ.

    ಪೊಲೀಸ್ ತನಿಖೆಯ ವೇಳೆ ಗೀತಾಂಜಲಿ ವ್ಯಕ್ತಿಯೊಬ್ಬರನ್ನು ಪ್ರೀತಿಸಿದ್ದ ವಿಚಾರವೂ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    27 ವರ್ಷದ ಗೀತಾಂಜಲಿ ನಗರದ ಬೆಳ್ಳಂದೂರಿನ ಸೆಸ್ನಾ ಟೆಕ್ ಪಾರ್ಕ್ ನಲ್ಲಿರೊ ಅಡ್ವೊ ಆಪ್ಟಿಕ್ ನೆಟ್ ವರ್ಕ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ತಮ್ಮನ ಜೊತೆ ಎಚ್‍ಎಚ್‍ಎಸ್‍ಆರ್ ಲೇಔಟ್ ನಲ್ಲಿ ವಾಸವಾಗಿದ್ದ ಗೀತಾಂಜಲಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೋವಾಕ್ಕೆ ತೆರಳಿದ್ದರು. ಪೋಷಕರ ಜೊತೆ ರಾತ್ರಿ ಬರ್ತ್ ಡೇ ಪಾರ್ಟಿ ಆಚರಿಸಿದ್ದ ಗೀತಾಂಜಲಿ ಬೆಳಗ್ಗೆ 8.30ರ ವಿಮಾನದಲ್ಲಿ ತಮ್ಮ, ಚಿಕ್ಕಮ್ಮನ ಜೊತೆ ಬೆಂಗಳೂರಿಗೆ ಬಂದಿದ್ದರು.

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿದು ನೇರವಾಗಿ ಮಾರತ್ತಹಳ್ಳಿಯ ಕಂಪನಿಗೆ ಬಂದಿದ್ದ ಗೀತಾಂಜಲಿ ನಂತರ ತಮ್ಮ ಮತ್ತು ಚಿಕ್ಕಮ್ಮನನ್ನು ಬನ್ನೇರುಘಟ್ಟ ರಸ್ತೆಯ ಮನೆಗೆ ಕಳುಹಿಸಿ ಕೆಲಸಕ್ಕೆ ಹೋಗಿದ್ದರು. ಬಳಿಕ ಮನೆಗೆ ಫೋನ್ ಮಾಡಿ ಬೆಂಗಳೂರು ತಲುಪಿದ್ದೇನೆ ಎಂದು ಹೇಳಿ ಕಂಪೆನಿಯನ್ನು ಪ್ರವೇಶಿಸಿದ್ದಾರೆ. ಕಂಪೆನಿಯ ಒಳಗಡೆ ಪ್ರವೇಶಿಸಿದ್ದರೂ ಯಾರ ಜೊತೆ ಮಾತನಾಡದೇ ಮಧ್ಯಾಹ್ನ 12.30ಕ್ಕೆ ನೇರವಾಗಿ 10ನೇ ಮಹಡಿಗೆ ತೆರಳಿ ಗೀತಾಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

  • ರಾತ್ರಿ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿ ಬೆಳಗ್ಗೆ ಕಂಪೆನಿಯ 10 ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ

    ರಾತ್ರಿ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿ ಬೆಳಗ್ಗೆ ಕಂಪೆನಿಯ 10 ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ

    ಬೆಂಗಳೂರು: ಮಂಗಳವಾರ ರಾತ್ರಿ ಗೋವಾದಲ್ಲಿ ಹುಟ್ಟುಹಬ್ಬವನ್ನು ಆಚರಿಸಿ ಇಂದು ಬೆಳಗ್ಗೆ ನಗರಕ್ಕೆ ಬಂದಿದ್ದ ಮಹಿಳಾ ಟೆಕ್ಕಿಯೊಬ್ಬರು ತಾನು ಕೆಲಸ ಮಾಡುತ್ತಿದ್ದ ಕಂಪೆನಿಯ 10 ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಗೀತಾಂಜಲಿ(27) ಆತ್ಮಹತ್ಯೆಗೆ ಶರಣಾದ ಮಹಿಳಾ ಟೆಕ್ಕಿ. ಗೀತಾಂಜಲಿ ನಗರದ ಬೆಳ್ಳಂದೂರಿನ ಸೆಸ್ನಾ ಟೆಕ್ ಪಾರ್ಕ್ ನಲ್ಲಿರೊ ಅಡ್ವೊ ಆಪ್ಟಿಕ್ ನೆಟ್ ವರ್ಕ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

    ಏನಿದು ಪ್ರಕರಣ?
    ಗೋವಾ ಮೂಲದ ಗೀತಾಂಜಲಿ ತಮ್ಮನ ಜೊತೆ ಎಚ್‍ಎಚ್‍ಎಸ್‍ಆರ್ ಲೇಔಟ್ ನಲ್ಲಿ ವಾಸವಾಗಿದ್ದರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೀತಾಂಜಲಿ ಗೋವಾಕ್ಕೆ ತೆರಳಿದ್ದರು. ಪೋಷಕರ ಜೊತೆ ರಾತ್ರಿ ಬರ್ತ್ ಡೇ ಪಾರ್ಟಿ ಆಚರಿಸಿದ್ದ ಗೀತಾಂಜಲಿ ಬೆಳಗ್ಗೆ 8.30ರ ವಿಮಾನದಲ್ಲಿ ತಮ್ಮ, ಚಿಕ್ಕಮ್ಮನ ಜೊತೆ ಬೆಂಗಳೂರಿಗೆ ಬಂದಿದ್ದರು.

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿದು ನೇರವಾಗಿ ಮಾರತ್ತಹಳ್ಳಿಯ ಕಂಪನಿಗೆ ಬಂದಿದ್ದ ಗೀತಾಂಜಲಿ ನಂತರ ತಮ್ಮ ಮತ್ತು ಚಿಕ್ಕಮ್ಮನನ್ನು ಬನ್ನೇರುಘಟ್ಟ ರಸ್ತೆಯ ಮನೆಗೆ ಕಳುಹಿಸಿ ಕೆಲಸಕ್ಕೆ ಹೋಗಿದ್ದರು. ಬಳಿಕ ಮನೆಗೆ ಫೋನ್ ಮಾಡಿ ಬೆಂಗಳೂರು ತಲುಪಿದ್ದೇನೆ ಎಂದು ಹೇಳಿ ಕಂಪೆನಿಯನ್ನು ಪ್ರವೇಶಿಸಿದ್ದಾರೆ. ಕಂಪೆನಿಯ ಒಳಗಡೆ ಪ್ರವೇಶಿಸಿದ್ದರೂ ಯಾರ ಜೊತೆ ಮಾತನಾಡದೇ 11.30ಕ್ಕೆ ನೇರವಾಗಿ 10ನೇ ಮಹಡಿಗೆ ತೆರಳಿ ಗೀತಾಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಾರತ್ತಹಳ್ಳಿ ಪೊಲೀಸರು ಈಗ ಗೀತಾಂಜಲಿ ಮೊಬೈಲ್ ಕರೆಗಳನ್ನು ಪರಿಶೀಲಿಸುತ್ತಿದ್ದು, ಸಹೋದ್ಯೋಗಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. 6 ತಿಂಗಳ ಹಿಂದೆ ಕಂಪೆನಿಗೆ ಸೇರಿದ್ದ ಗೀತಾಂಜಲಿ ಮಂಗಳವಾರ ಮತ್ತು ಗುರುವಾರ ರಜೆ ಹಾಕಿದ್ದರು. ರಜೆ ಹಾಕಿದ್ದರೂ ಅವರು ಇಂದು ಗೋವಾದಿಂದ ಮರಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

    https://www.youtube.com/watch?v=6yT49Ani9xI

  • ನಕ್ಸಲ್ ಮಾಹಿತಿದಾರ ಎಂದು ಶಂಕಿಸಿ ಪೊಲೀಸರಿಂದ ಎಫ್‍ಐಆರ್ -ಮನನೊಂದ ರೈತ ಆತ್ಮಹತ್ಯೆ

    ನಕ್ಸಲ್ ಮಾಹಿತಿದಾರ ಎಂದು ಶಂಕಿಸಿ ಪೊಲೀಸರಿಂದ ಎಫ್‍ಐಆರ್ -ಮನನೊಂದ ರೈತ ಆತ್ಮಹತ್ಯೆ

    ಚಿಕ್ಕಮಗಳೂರು: ನಕ್ಸಲರ ಮಾಹಿತಿದಾರ ಎಂದು ಶಂಕಿಸಿ ಪೊಲೀಸರು ಎಫ್‍ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಮನನೊಂದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

    62 ವರ್ಷದ ಮಾತೊಳ್ಳಿ ಸತೀಶ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಇವರು ಶೃಂಗೇರಿಯ ನಕ್ಸಲ್ ಪೀಡಿತ ಪ್ರದೇಶದ ನಿವಾಸಿಯಾಗಿದ್ದರು. ಈ ಪ್ರದೇಶದಲ್ಲಿ ಹಲವು ಬಾರಿ ನಕ್ಸಲ್ ಪರ ಘೋಷಣೆಗಳನ್ನು ಹೊಂದಿರುವ ಕರಪತ್ರಗಳು ಪತ್ತೆಯಾಗಿದ್ದವು.

    ಸತೀಶ್ ನಕ್ಸಲರಿಗೆ ಮಾಹಿತಿ ನೀಡಿವ ವ್ಯಕ್ತಿ ಎಂದು ಶಂಕಿಸಿ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ಸತೀಶ್ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಅಲ್ಲದೇ ಹಲವು ಬಾರಿ ಅವರನ್ನ ಠಾಣೆಗೆ ಕರೆಸಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿದ್ದರು ಎಂದು ಸ್ಥಳೀಯ ರೈತ ಮುಖಂಡರು ಆರೋಪಿಸಿದ್ದಾರೆ.

    ಪೊಲೀಸರ ಕಿರುಕುಳದಿಂದ ಬೇಸತ್ತ ಸತೀಶ್ ಕಳೆದ ಎರಡು ತಿಂಗಳಿನಿಂದ ಮನೆ ಬಿಟ್ಟು ಹೋಗಿದ್ದರು. ಆದರೆ ಗುರುವಾರ ಸಂಜೆ ಮನೆಗೆ ಆಗಮಿಸಿದ ಸತೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸತೀಶ್ ಅವರ ಆತ್ಮಹತ್ಯೆಗೆ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ಕಾರಣವೆಂದು ಶೃಂಗೇರಿ ರೈತ ಮುಖಂಡರು ಹಾಗೂ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ. ಅಲ್ಲದೇ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ರನ್ನು ಅಮಾನತುಗೊಳಿಸಿ, ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಅಗ್ರಹಿಸಿದ್ದಾರೆ.

    ಈ ಕುರಿತು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಗೃಹಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ವಿರುದ್ಧ ದೂರು ನೀಡಿದ್ದು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.