Tag: suicide

  • ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ

    ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ

    ಬೆಂಗಳೂರು: ನಗರದಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಗೀತಾ (37) ಆತ್ಮಹತ್ಯೆಗೆ ಶರಣಾದ ಮಹಿಳೆ. ಪತಿ ಮುರುಳಿ ಮೋಹನ್ ವಿರುದ್ದ ಪತ್ನಿ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಪತಿಯೇ ನೇಣು ಬಿಗಿದು‌ ಪತ್ನಿ ಕೊಲೆ ಮಾಡಿರುವ ಆರೋಪ ಹೊರಿಸಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೀತಾ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 17 ವರ್ಷಗಳ ಹಿಂದೆ ಗೀತಾ ಮದುವೆಯಾಗಿದ್ದರು. ಕಳೆದ ಕೆಲ ತಿಂಗಳಿನಿಂದ ಪತಿ ಜೊತೆ ಕಲಹವಾಗಿತ್ತು.

    ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಮರಾಜಪೇಟೆ| ಕ್ಷುಲ್ಲಕ ಕಾರಣಕ್ಕೆ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

    ಚಾಮರಾಜಪೇಟೆ| ಕ್ಷುಲ್ಲಕ ಕಾರಣಕ್ಕೆ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕಾಲೇಜು ವಿದ್ಯಾರ್ಥಿನಿ (College Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆಯಲ್ಲಿ (Chamarajpet) ನಡೆದಿದೆ.

    ಶ್ರಾವ್ಯ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಖಾಸಗಿ ಕಾಲೇಜೊಂದರಲ್ಲಿ ಮೊದಲ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ನಿಜವಾದ ಕಳ್ಳ ಸಚಿವ ಬೈರತಿ ಸುರೇಶ್: ಛಲವಾದಿ ನಾರಾಯಣಸ್ವಾಮಿ

    ಅಮ್ಮ ನಿಂದಿಸಿದ್ದಕ್ಕೆ ಕೋಪಗೊಂಡು ವಿದ್ಯಾರ್ಥಿನಿ ನೇಣುಬಿಗಿದುಕೋಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಚಾಮರಾಜಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಯಚೂರು | ನಾರಾಯಣಪುರಿಂದ ಕೃಷ್ಣಾ ನದಿಗೆ 1.03 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

  • ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ- ಸಾವಿನ ಸುತ್ತ ಅನುಮಾನದ ಹುತ್ತ

    ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ- ಸಾವಿನ ಸುತ್ತ ಅನುಮಾನದ ಹುತ್ತ

    ಚಿಕ್ಕೋಡಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು ಇದು ಆತ್ಮಹತ್ಯೆಯಲ್ಲ (Suicide) ಕೊಲೆ (Murder) ಎಂಬ ಆರೋಪ ಕೇಳಿ ಬಂದಿದೆ.

    ಬೆಳಗಾವಿ (Belagavi) ಜಿಲ್ಲೆಯ ರಾಯಭಾಗ ತಾಲೂಕಿನ ಯಬರಟ್ಟಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು ಗ್ರಾಮದ 25 ವರ್ಷದ ಯುವಕ ಪ್ರವೀಣ್ ಒಡೆಯರ ಮಂಗಳವಾರ ರಾತ್ರಿ ಮನೆಯಿಂದ ಗೆಳೆಯರೊಂದಿಗೆ ಹೋಗಿದ್ದು ಶವವಾಗಿ ಪತ್ತೆಯಾಗಿದ್ದಾನೆ.

     

    ಮನೆಯಲ್ಲಿ ಯಾವುದೇ ಮನಸ್ತಾಪ ಇಲ್ಲದೇ ಸಂತೋಷದಲ್ಲಿದ್ದ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇತನನ್ನು ಯಾರೋ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಗೋಲ್ಮಾಲ್ ಆರೋಪ – ಲೋಕಾಯುಕ್ತಕ್ಕೆ ದೂರು

    ಸ್ಥಳಕ್ಕೆ ಹಾರೋಗೇರಿ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದು ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಟೆಕ್ಕಿ ಆತ್ಮಹತ್ಯೆ – ಕೆಲಸದ ಒತ್ತಡ ಕಾರಣ?

    ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಟೆಕ್ಕಿ ಆತ್ಮಹತ್ಯೆ – ಕೆಲಸದ ಒತ್ತಡ ಕಾರಣ?

    ಚೆನ್ನೈ: ಖಿನ್ನತೆಯಿಂದ ಬಳಲುತ್ತಿದ್ದ 38 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ (Chennai Techie) ಚೆನ್ನೈನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಾರ್ತಿಕೇಯನ್ ತನಗೆ ತಾನೇ ವಿದ್ಯುತ್ ಪ್ರವಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಪತ್ನಿ ಗುರುವಾರ ಲೈವ್ ವೈರ್‌ಗೆ ಸಿಕ್ಕು ಬಿದ್ದಿರುವುದನ್ನು ಕಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    ಮೂಲತಃ ತಮಿಳುನಾಡಿನ ತೇಣಿ ಜಿಲ್ಲೆಯವರಾದ ಕಾರ್ತಿಕೇಯನ್, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದರು. ಕಳೆದ 15 ವರ್ಷಗಳಿಂದ ಚೆನ್ನೈನ ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿದ್ದ. ಇತ್ತೀಚೆಗೆ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ.

    ಕಾರ್ತಿಕೇಯನ್ ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದ ಎಂದು ಕೆಲವು ವರದಿಗಳು ಹೇಳಿವೆ. ಆದರೆ ಕುಟುಂಬ ಮತ್ತು ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಪೊಲೀಸ್ ಅಧಿಕಾರಿಯೊಬ್ಬರು, ನಾವು ಆತ್ಮಹತ್ಯೆಗೆ ಕಾರಣವನ್ನು ತನಿಖೆ ಮಾಡುತ್ತಿದ್ದೇವೆ. ಅವರು ಇತ್ತೀಚೆಗೆ ಹೊಸ ಕಂಪನಿಗೆ ಶಿಫ್ಟ್ ಆಗಿದ್ದರು. ಡೆತ್‌ನೋಟ್‌ನಲ್ಲಿ, ಅವರು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಸಂದೇಶವನ್ನು ಬರೆದಿದ್ದಾರೆ.

    ಘಟನೆ ವೇಳೆ ಕಾರ್ತಿಕೇಯನ್ ಮನೆಯಲ್ಲಿ ಒಬ್ಬರೇ ಇದ್ದರು. ಪತ್ನಿ ಕೆ.ಜಯರಾಣಿ ಸೋಮವಾರ ಚೆನ್ನೈನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ತಿರುನಲ್ಲೂರು ದೇವಸ್ಥಾನಕ್ಕೆ ತೆರಳಿದ್ದರು. ಮಕ್ಕಳನ್ನು ತನ್ನ ತಾಯಿಯಿದ್ದ ಮನೆಯಲ್ಲಿ ಬಿಟ್ಟಿದ್ದರು. ಗುರುವಾರ ರಾತ್ರಿ ವಾಪಸ್ ಬಂದು ಮನೆ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬೇರೆ ಕೀ ಬಳಸಿ ಮನೆ ಬಾಗಿಲು ತೆರೆದಾಗ ಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಇದನ್ನೂ ಓದಿ: ಕಾರವಾರದಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು – ಉದ್ಯಮಿಯ ಬರ್ಬರ ಹತ್ಯೆ, ಮಚ್ಚಿನೇಟಿಂದ ಪತ್ನಿ ಗಂಭೀರ

  • ಬೆಳ್ತಂಗಡಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

    ಬೆಳ್ತಂಗಡಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

    ಮಂಗಳೂರು: ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಬಳಿ ನಡೆದಿದೆ.

    ಕಾಶಿಪಟ್ನದ ಉರ್ದುಗುಡ್ಡೆ ನಿವಾಸಿಗಳಾದ ನೊಣಯ್ಯ ಪೂಜಾರಿ (63) ಹಾಗೂ ಪತ್ನಿ ಬೇಬಿ (46) ಆತ್ಮಹತ್ಯೆ ಮಾಡಿಕೊಂಡವರು. ನಿನ್ನೆ ತಡರಾತ್ರಿ ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ

    ನೋಣಯ್ಯ ಪೂಜಾರಿಯ ಮೊದಲ ಪತ್ನಿ ಹತ್ತು ವರ್ಷದ ಹಿಂದೆ ಸಾವನ್ನಪ್ಪಿದ್ದರು. ಬಳಿಕ ಬೇಬಿ ಅವರನ್ನ ಎರಡನೇ ಮದುವೆಯಾಗಿದ್ದರು. ಕಳೆದ ಐದು ವರ್ಷದಿಂದ ನೊಣಯ್ಯ ಪೂಜಾರಿ ತಲೆನೋವಿನಿಂದ ಬಳಲುತ್ತಿದ್ದು ಇದರಿಂದ ನೊಂದಿದ್ದರು.

    ಇತ್ತ ಪತ್ನಿ ಬೇಬಿಯೂ ಮಕ್ಕಳಾಗಿರಲಿಲ್ಲ ಅನ್ನೋ ಕೊರಗಿನಲ್ಲಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Davanagere Violence | ಕಲ್ಲು ತೂರಾಟ – ಗಣೇಶ ಸಮಿತಿ 8 ಜನ ಸೇರಿ 18 ಮಂದಿಗೆ ನ್ಯಾಯಾಂಗ ಬಂಧನ

  • ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ

    ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ

    ಬಾಲಿವುಡ್‌ ನಟಿ ಮಲೈಕಾ ಅರೋರಾ (Malaika Arora) ತಂದೆ ಅನಿಲ್‌ ಅರೋರಾ (Anil Arora) ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈ ಬಾಂದ್ರಾದ ತಮ್ಮ ಮನೆಯ ಟೆರೇಸ್‌ನಿಂದ ಹಾರಿ ಆತ್ಯಹತ್ಯೆ (Suicide) ಮಾಡಿಕೊಂಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಿರಣ್ ರಾಜ್‌ ಸ್ಥಿತಿ ಈಗ ಹೇಗಿದೆ?- ಅವಘಡದ ಬಗ್ಗೆ ವಿವರಿಸಿದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್

    ಇಂದು (ಸೆ.11) ಬೆಳಗ್ಗೆ ತಮ್ಮ ಮನೆಯ 7ನೇ ಮಹಡಿಯಿಂದ ಬಿದ್ದು ಮಲೈಕಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ನಿವಾಸದ ಬಳಿ ಪೊಲೀಸರ ಜೊತೆ ನಟಿಯ ಮಾಜಿ ಪತಿ ಅರ್ಬಾಜ್‌ ಖಾನ್‌ (Arbaaz Khan) ಕೂಡ ಭೇಟಿ ನೀಡಿದ್ದಾರೆ.

    ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅನಿಲ್‌ ಅರೋರಾ ಅವರ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ

    ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ

    ಶಿವಮೊಗ್ಗ: ಒಂದೇ ಕುಟುಂಬದ (Family) ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ (Shivamogga) ಕ್ಲಾರ್ಕ್ ಪೇಟೆಯಲ್ಲಿ ನಡೆದಿದೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಸೃಜನ್ ಲೋಕೇಶ್ ನಿರ್ದೇಶನದ ‘ಜಿಎಸ್‌ಟಿ’ ಸಿನಿಮಾ

    ಮೃತರನ್ನು ಭುವನೇಶ್ವರಿ (52), ಭುವನೇಶ್ವರಿ ಸಹೋದರ ಮಾರುತಿ (28) ಭುವನೇಶ್ವರಿ ಮಗ ದರ್ಶನ್ (22) ಎಂದು ಗುರುತಿಸಲಾಗಿದೆ. ಭುವನೇಶ್ವರಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಸಹೋದರ ಮಾರುತಿ ಗುಜರಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ.

    ಭಾನುವಾರ ಎಂದಿನಂತೆ ಎಲ್ಲರೂ ಕೆಲಸ ಮಾಡಿಕೊಂಡು ಮನೆಗೆ ಬಂದಿದ್ದರು. ರಾತ್ರಿಯೇ ಮೂರು ಮಂದಿ ವಿಷ (Poison) ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸಂಬಂಧಿಕರು ಕರೆ ಮಾಡಿದಾಗ ಯಾರೊಬ್ಬರು ಸ್ವೀಕರಿಸಿರಲಿಲ್ಲ. ಕೆಲಸಕ್ಕೂ ಹೋಗಿರಲಿಲ್ಲ. ಹಾಗಾಗಿ ಇಂದು ಮನೆ ಬಳಿ ಆಕೆಯ ಮತ್ತೊಬ್ಬ ಸಹೋದರ ಬಂದು ಬಾಗಿಲು ತೆರೆದು ನೋಡಿದಾಗ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

    ವಿಷಯ ತಿಳಿದು ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದರು. ಇನ್ನು ಮೂವರ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಮನೆಯ ಬಳಿ ದೊಡ್ಡ ಸಂಖ್ಯೆಯ ಜನ ನೆರೆದಿದ್ದರು. ಪೊಲೀಸರ ತನಿಖೆಯಿಂದಷ್ಟೇ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.

  • 1 ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆ – ಈಗ ಇನ್ಸ್‌ಪೆಕ್ಟರ್‌ ನೇಣಿಗೆ ಶರಣು

    1 ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆ – ಈಗ ಇನ್ಸ್‌ಪೆಕ್ಟರ್‌ ನೇಣಿಗೆ ಶರಣು

    ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ತಿಮ್ಮೇಗೌಡ (Thimme Gowda) ಒಂದು ತಿಂಗಳ ಹಿಂದೆಯಷ್ಟೇ ಸಿಸಿಬಿಯ (CCB) ಆರ್ಥಿಕ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್‌ ಆಗಿ ವರ್ಗಾವಣೆಯಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ

    98ರ ಬ್ಯಾಚ್‌ ಅಧಿಕಾರಿಯಾಗಿದ್ದ ತಿಮ್ಮೇಗೌಡ ಬಿಡದಿಯಲ್ಲಿ(Bidadi) ಇನ್ಸ್‌ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ತಿಮ್ಮೇಗೌಡ ಬಹಳ ಟೆನ್ಶನ್‌ನಲ್ಲಿ ಇದ್ದರು.

    ಬಿಡದಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ಯಾವ ಕಾರಣಕ್ಕೆ ಟೆನ್ಷನ್‌ನಲ್ಲಿ ಇದ್ದೇನೆ ಎನ್ನುವುದರ ಬಗ್ಗೆ ಯಾರ ಜೊತೆಗೂ ಹೇಳಿಕೊಂಡಿರಲಿಲ್ಲ. ಇದನ್ನೂ ಓದಿ: ನಿಗದಿಯಾಗಿದ್ದ ಕೊಪ್ಪಳ, ವಿಜಯನಗರ ಸಿಎಂ ಪ್ರವಾಸ ದಿಢೀರ್‌ ರದ್ದು

    ವಾಸವಾಗಿದ್ದ ಮನೆಯಿಂದ 15 ಕಿ.ಮೀ ದೂರದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಲ್ನೋಟಕ್ಕೆ ಹಣಕಾಸು ತೊಂದರೆಯಿಂದ ಆತ್ಮಹತ್ಮೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

  • ಅಂತರ್ಜಾತಿ ಮದುವೆಗೆ ಪೋಷಕರ ವಿರೋಧ; ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ

    ಅಂತರ್ಜಾತಿ ಮದುವೆಗೆ ಪೋಷಕರ ವಿರೋಧ; ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ

    ಬಳ್ಳಾರಿ: ಅಂತರ್ಜಾತಿ ಮದುವೆಗೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ (Bellary) ಜಿಲ್ಲೆಯ ಸಿರಗುಪ್ಪ ಪಟ್ಟಣದಲ್ಲಿ ನಡೆದಿದೆ.

    ರಾಜ (23) ಹಾಗೂ ಪವಿತ್ರ (20) ಮೃತ ದುರ್ದೈವಿಗಳು. ಮೃತರಿಬ್ಬರೂ ಸಿರಗುಪ್ಪ ಪಟ್ಟಣದ ನಿವಾಸಿಗಳು. ಸಿರಗುಪ್ಪದ ಆದೋನಿ ರಸ್ತೆಯ ಜಮೀನೊಂದರಲ್ಲಿ ರಾಜ ಹಾಗೂ ಪವಿತ್ರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಮ್ಮನ ಸಾವಿನ ಅಗಲಿಕೆಯಿಂದ ಮನನೊಂದು ಅಣ್ಣ, ತಂಗಿ ಆತ್ಮಹತ್ಯೆ

    ಇವರಿಬ್ಬರೂ ಅನ್ಯ ಜಾತಿಯವರಾಗಿದ್ದಕ್ಕೆ ಎರಡೂ ಮನೆಯಲ್ಲಿ ಮದುವೆಗೆ ವಿರೋಧ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ತಡರಾತ್ರಿ ಮನೆ ಬಿಟ್ಟು ಬಂದಿದ್ದರು. ಪೋಷಕರ ವಿರೋಧಕ್ಕೆ ಮನನೊಂದು ಬೆಳಗಿನ ಜಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಿರಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

  • ಅಮ್ಮನ ಸಾವಿನ ಅಗಲಿಕೆಯಿಂದ ಮನನೊಂದು ಅಣ್ಣ, ತಂಗಿ ಆತ್ಮಹತ್ಯೆ

    ಅಮ್ಮನ ಸಾವಿನ ಅಗಲಿಕೆಯಿಂದ ಮನನೊಂದು ಅಣ್ಣ, ತಂಗಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಅಮ್ಮನ ಸಾವಿನ ನೋವು ತಾಳಲಾರದೇ ಅಣ್ಣ (Brother) ಮತ್ತು ತಂಗಿ (Sister) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ.

    ಶಿಡ್ಲಘಟ್ಟ ನಗರದ ಶೆಟ್ಟಪ್ಪನ ತೋಪಿನ ಬಳಿಯ ರೈಲ್ವೇ ಹಳಿಗಳ ಬಳಿ ಘಟನೆ ನಡೆದಿದ್ದು, ಮೃತರು ಅಣ್ಣ ಪ್ರಭು ಮತ್ತು ತಂಗಿ ನವ್ಯ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸೈನಿಕರಿಗೆ ಸೆಲ್ಯೂಟ್‌: ಕೇವಲ 16 ಗಂಟೆಯಲ್ಲಿ 24 ಟನ್‌ ಸಾಮರ್ಥ್ಯದ 190 ಅಡಿ ಉದ್ದದ ಸೇತುವೆ ರೆಡಿ!

     

    ಶಿಡ್ಲಘಟ್ಟದ ಪ್ರೇಮ ನಗರದ ನಿವಾಸಿಗಳಾಗಿರುವ ಪ್ರಭು ಮತ್ತು ನವ್ಯ ಆತ್ಮಹತ್ಯೆ ಶರಣಾಗುವ ಮುನ್ನ ಒಬ್ಬರ ಕೈಯನ್ನು ಒಬ್ಬರು ದಾರದಿಂದ ಕಟ್ಟಿಕೊಂಡು ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ.

    ಇತ್ತೀಚೆಗೆ ತಾಯಿಯ ಮರಣದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದ ಇಬ್ಬರು ತಾಯಿಯ ಸಾವಿನ ಅಗಲಿಕೆಯ ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.