Tag: suicide

  • ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ (S S Rajamouli)ಮೇಲೆ ಗಂಭೀರ ಆರೋಪ ಮಾಡಿ, ಆತ್ಮಹತ್ಯೆಗೆ ಶರಣಾಗಿದ್ದಾರೆ ಖ್ಯಾತ ನಿರ್ಮಾಪಕ ಶ್ರೀನಿವಾಸ್ ರಾವ್. ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಯಮದೊಂಗ (Yamadonga) ಸಿನಿಮಾವನ್ನು ಶ್ರೀನಿವಾಸ್ ರಾವ್  (Srinivas Rao)ನಿರ್ಮಾಣ ಮಾಡಿದ್ದರು.

    ಎಸ್.ಎಸ್ ರಾಜಮೌಳಿಯ ಆತ್ಮಿಯ ಸ್ನೇಹಿತನೂ ಆಗಿದ್ದ ಶ್ರೀನಿವಾಸ್ ರಾವ್‍ ಡೆತ್ ನೋಟ್ ಮತ್ತು ಸಾಯುವ ಮುನ್ನ ವಿಡಿಯೋವೊಂದನ್ನು ಮಾಡಿ, ತನ್ನ ಸಾವಿಗೆ ರಾಜಮೌಳಿ ಮತ್ತು ಅವರ ಪತ್ನಿ ರಮಾ ಕಾರಣ ಅಂತ ಹೇಳಿಕೊಂಡಿದ್ದಾರೆ. ಜೊತೆಗೆ ರಾಜಮೌಳಿ ಮತ್ತು ತನ್ನ ನಡುವಿನ ಲವ್ ಸ್ಟೋರಿಯನ್ನು ಶ್ರೀನಿವಾಸ್ ಹಂಚಿಕೊಂಡಿದ್ದಾರೆ.

    ರಾಜಮೌಳಿ ಮತ್ತು ನಾನು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದೆವು.  ಆ ಹುಡುಗಿಯನ್ನು ರಾಜಮೌಳಿ ತ್ಯಾಗ ಮಾಡುವಂತೆ ನನಗೆ ಹೇಳಿದ. ಹಾಗಾಗಿ ನಾನು ಆ ಹುಡುಗಿಯನ್ನು ರಾಜಮೌಳಿಗೆ ಬಿಟ್ಟು ಕೊಟ್ಟೆ. ಅಲ್ಲಿಂದ ನಾನು ಮದುವೆ ಆಗಿಲ್ಲ. ರಾಜಮೌಳಿಗೂ ನನಗೂ 34 ವರ್ಷದ ಸ್ನೇಹ.  ಇತ್ತೀಚೆಗೆ ಸಣ್ಣ ಮನಸ್ತಾಪ ಆಯಿತು. ನಾನು ನಮ್ಮ ಲವ್ ಸ್ಟೋರಿಯನ್ನು ಸಿನಿಮಾ ಮಾಡೋದಾಗಿ ಹೇಳಿದೆ. ಅಲ್ಲಿಂದ ರಾಜಮೌಳಿ ನಿರಂತರವಾಗಿ ನನಗೆ ಟಾರ್ಚರ್ ಮಾಡಲು ಶುರು ಮಾಡಿದ ಅಂತ ಡೆತ್ ನೋಟ್ ನಲ್ಲಿ  ಶ್ರೀನಿವಾಸ್ ರಾವ್ ಬರೆದಿದ್ದಾರೆ.

    ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರಾಜಮೌಳಿ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಈವರೆಗೂ ಶ್ರೀನಿವಾಸ್ ರಾವ್ ಅವರ ಮೃತದೇಹ ಸಿಕ್ಕಿಲ್ಲ ಅನ್ನೋ ಮಾಹಿತಿಯೂ ಇದೆ.

  • ಕಳಿಂಗ ವಿವಿ ವಿದ್ಯಾರ್ಥಿನಿ ಆತ್ಮಹತ್ಯೆ – ಲಕ್ನೋದಲ್ಲಿ 21 ವರ್ಷದ ಯುವಕನ ಬಂಧಿಸಿದ ಪೊಲೀಸರು

    ಕಳಿಂಗ ವಿವಿ ವಿದ್ಯಾರ್ಥಿನಿ ಆತ್ಮಹತ್ಯೆ – ಲಕ್ನೋದಲ್ಲಿ 21 ವರ್ಷದ ಯುವಕನ ಬಂಧಿಸಿದ ಪೊಲೀಸರು

    – ಕಳಿಂಗ ವಿವಿಯಲ್ಲಿ ಬಿಗಿಭದ್ರತೆ

    ಭುವನೇಶ್ವರ: ತೃತೀಯ ವರ್ಷದ ಬಿ.ಟೆಕ್ (B.tech) ವಿದ್ಯಾರ್ಥಿನಿ (Student) ತನ್ನ ಹಾಸ್ಟೆಲ್ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಸ್ಸಾದ (Odissa) ಕಳಿಂಗ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆ (KIIT) ಕಾಲೇಜಿನಲ್ಲಿ ನಡೆದಿದೆ.

    ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಆಕೆಯನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಆದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿದ್ಯಾರ್ಥಿನಿಯ ಸಂಬಂಧಿಕರು ಇನ್ಫೋಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ : ಮಹಾಕುಂಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಕುಟುಂಬ ಪುಣ್ಯಸ್ನಾನ

    ವಿದ್ಯಾರ್ಥಿನಿಯು ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಕಾಲೇಜು ಆಡಳಿತ ಮಂಡಳಿ ಆರೋಪಿಸಿದ್ದು, ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದೆ.

    ಭುವನೇಶ್ವರ ಡಿಸಿಪಿ ಪಿನಕ್ ಮಿಶ್ರಾ ಮಾಧ್ಯಮಗಳೊಂದಿಗೆ ಮಾತನಾಡಿ, ಆತ್ಮಹತ್ಯೆ ಪ್ರಚೋದನೆಯಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತನ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇನ್ನಿತರ ಇಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ : 10ಕ್ಕೂ ಹೆಚ್ಚು ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ – ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

    ವಿದ್ಯಾರ್ಥಿನಿ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ, ಕೆಲವು ನೇಪಾಳಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಜಮಾವಣೆಗೊಂಡು ನ್ಯಾಯಕ್ಕಾಗಿ ಒತ್ತಾಯಿಸಿದರು. ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿ ವಾತಾವರಣ ತಿಳಿಗೊಳಿಸಿದೆ ಎಂದು ಕಳಿಂಗ ವಿವಿ ತಿಳಿಸಿದೆ.

  • ಇನ್‌ಸ್ಟಾಗ್ರಾಂ ಪ್ರೀತಿ ತಂದ ಫಜೀತಿ – ಪತಿ ಬಿಟ್ಟು ಬಂದಿದ್ದ ಗೃಹಿಣಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ

    ಇನ್‌ಸ್ಟಾಗ್ರಾಂ ಪ್ರೀತಿ ತಂದ ಫಜೀತಿ – ಪತಿ ಬಿಟ್ಟು ಬಂದಿದ್ದ ಗೃಹಿಣಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ

    – ಸ್ಪರ್ಧಾತ್ಮಕ ಪರೀಕ್ಷೆ ಓದುತ್ತೇನೆಂದು ಬಾಡಿಗೆ ಮನೆಯಲ್ಲಿದ್ದ ಮಹಿಳೆ

    ಧಾರವಾಡ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಂದಿಗೆ ಪ್ರೀತಿಗೆ ಬಿದ್ದ ಗೃಹಿಣಿ ತನ್ನ ಪತಿ ಬಿಟ್ಟು ಬಂದು ವರ್ಷದ ಬಳಿಕ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಧಾರವಾಡದ ಶ್ರೀನಗರ 1ನೇ ಕ್ರಾಸ್‌ನ ಮನೆಯಲ್ಲಿ ಘಟನೆ ನಡೆದಿದ್ದು, ಶ್ವೇತಾ ಗುದಗಾಪುರ (24) ನೇಣಿಗೆ ಶರಣಾದ ಗೃಹಿಣಿ.

    ರಾಮದುರ್ಗ ಮೂಲದ ಶ್ವೇತಾ ಪತಿಯನ್ನು ಬಿಟ್ಟು ಧಾರವಾಡಕ್ಕೆ ಬಂದು ಕಳೆದ ಒಂದು ವರ್ಷದಿಂದ ವಾಸವಾಗಿದ್ದರು. ರಾಮದುರ್ಗದ ವಿಶ್ವನಾಥ ಜೊತೆಗೆ ಐದು ವರ್ಷದ ಹಿಂದೆ ವಿವಾಹವಾಗಿತ್ತು. ಆದರೆ ಎರಡು ವರ್ಷದಿಂದ ಪತಿಯಿಂದ ದೂರವಾಗಿದ್ದರು.

    ಇನ್‌ಸ್ಟ್ರಾಗ್ರಾಮ್ ಪ್ರೀತಿಗೆ ಶ್ವೇತ ಮರುಳಾಗಿದ್ದರು. ಧಾರವಾಡ ಮೂಲದ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದರು. ಬಳಿಕ ಪತಿಗೆ ಡೈವರ್ಸ್ ನೋಟಿಸ್ ಕಳುಹಿಸಿದ್ದರು. ಇನ್‌ಸ್ಟ್ರಾಗ್ರಾಮ್‌ನಲ್ಲಿ ಈಕೆಗೆ ಯುವಕ ಪರಿಚಯವಾಗಿದ್ದ. ಯುವಕನೊಂದಿಗಿನ ಪರಿಚಯ ಪ್ರೀತಿಗೆ ತಿರುಗಿತ್ತು.

    ಯುವಕನ ನಂಬಿ ಪತಿ ಬಿಟ್ಟು ಶ್ವೇತಾ ಬಂದಿದ್ದರು. ಧಾರವಾಡದ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ಓದಿಕೊಳ್ಳೋದಾಗಿ ಬಾಡಿಗೆ ಮನೆಯಲ್ಲಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಮಕ್ಕಳೇ ನಮ್ಮನ್ನು ಕ್ಷಮಿಸಿ – ಘಟಪ್ರಭಾ ಸೇತುವೆಗೆ ನೇಣು ಬಿಗಿದು ದಂಪತಿ ಆತ್ಮಹತ್ಯೆ

    ಮಕ್ಕಳೇ ನಮ್ಮನ್ನು ಕ್ಷಮಿಸಿ – ಘಟಪ್ರಭಾ ಸೇತುವೆಗೆ ನೇಣು ಬಿಗಿದು ದಂಪತಿ ಆತ್ಮಹತ್ಯೆ

    ಬಾಗಲಕೋಟೆ: ಸಾಲಭಾದೆ ತಾಳಲಾರದೇ ದಂಪತಿ (Couple) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಜರುಗಿದೆ.

    ಮೃತರನ್ನ ಮಲ್ಲಪ್ಪ ಲಾಳಿ(56), ಮಹಾದೇವಿ(51) ಆತ್ಮಹತ್ಯೆಗೆ ಶರಣಾದ ದಂಪತಿಗಳು. ಘಟಪ್ರಭಾ ನದಿಗೆ (Ghataprabha River) ಅಡ್ಡಲಾಗಿ ನಿರ್ಮಿಸಿರುವ ಯಾದಬಾಡ ಸೇತುವೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

     

    ದಂಪತಿ ಒಂದು ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ‌ ನಡೆಸುತ್ತಿದ್ದರು. ಈ ಮೃತ ದಂಪತಿಗೆ ಇಬ್ಬರು‌ ಮಕ್ಕಳಿದ್ದರು. ಮಕ್ಕಳ ಮದುವೆಗಾಗಿ ದಂಪತಿ ಅಲ್ಲಲ್ಲಿ ಸಾಲ ಮಾಡಿದ್ದರು. ಸಾಲ ನೀಡಿದವರ ಕಿರುಕುಳ ತಾಳಲಾರದೇ ದಂಪತಿ ಬುಧವಾರ ರಾತ್ರಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಗೆ ಹಗ್ಗಕಟ್ಟಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿ ಉಸ್ತುವಾರಿ – ದೇವಿ ಕನಸಲ್ಲಿ ಬಂದು ಮೊಹಮ್ಮದ್‌ ಅಲಿಗೆ ಹೇಳಿದ್ದೇನು?

    ಡೆತ್‌ ನೋಟ್ ಮುಧೋಳ ಪೊಲೀಸರ ಕೈ ಸೇದಿದೆ. ಇದರಲ್ಲಿ ಸಾಲ ಕೊಟ್ಟು ಕಿರುಕುಳ ನೀಡಿದವರ ಹೆಸರುಗಳ‌ ಮಾಹಿತಿ ನೀಡಿದ್ದಾರೆ. ಕೊನೆಗೆ ಮಕ್ಕಳಿಗೆ “ನಮ್ಮನ್ನು ಕ್ಷಮಿಸಿ” ಎಂದು ಬರೆದು ದಂಪತಿ ನೇಣಿಗೆ ಶರಣಾಗಿದ್ದಾರೆ. ಮುಧೋಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

     

  • ಮೆಟ್ರೋ ಹಳಿ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ನಿವೃತ್ತ ಯೋಧ

    ಮೆಟ್ರೋ ಹಳಿ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ನಿವೃತ್ತ ಯೋಧ

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಆತ್ಮಹತ್ಯೆಗೆ ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ (Jalahalli Metro Station) ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಇಂದು (ಜ.20) ಬೆಳಗ್ಗೆ 10:30 ರ ಸುಮಾರಿಗೆ ಜಾಲಹಳ್ಳಿ ಮೆಟ್ರೋ ನಿಲ್ದಾಣದ ಪ್ಲಾಟ್‌ಟ್‌ಫಾರಂಗೆ ರೈಲು ಆಗಮಿಸುತ್ತಿದ್ದಂತೆ ಹಳಿಗೆ ಜಿಗಿದು ಹಳಿ ಮೇಲೆ ಅಡ್ಡಲಾಗಿ ಮಲಗಿದ್ದಾರೆ. ಕೂಡಲೇ ಎಚ್ಚೆತ್ತ ಬಿಎಂಆರ್‌ಸಿಎಲ್ (BMRCL) ಸಿಬ್ಬಂದಿ ತುರ್ತು ಟ್ರಿಪ್ ಸಿಸ್ಟಮ್ ಇಟಿಎಸ್ ಅನ್ನು ಸ್ಥಗಿತಗೊಳಿಸಿ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

    ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಬಿಹಾರ ಮೂಲದ ವಾಯುಪಡೆ ನಿವೃತ್ತ ಯೋಧ 49 ವರ್ಷದ ಅನಿಲ್ ಕುಮಾರ್ ಪಾಂಡೆ ಎನ್ನುವುದು ತಿಳಿದುಬಂದಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರುವ ಜಾಲಹಳ್ಳಿ ಭದ್ರತಾ ವಿಭಾಗದ ಸಿಬ್ಬಂದಿ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮದ್ಯಪ್ರಿಯರಿಗೆ ಸರ್ಕಾರದಿಂದ ಶಾಕ್ | ಇಂದಿನಿಂದಲೇ ದರ ಏರಿಕೆ – ಯಾವುದು ಎಷ್ಟು?

     

    ಘಟನೆಯಿಂದಾಗಿ ಕೆಲ ಕಾಲ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಯಶವಂತಪುರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಮಾತ್ರ ಸಂಚಾರ ಕಲ್ಪಿಸಲಾಗಿತ್ತು.

    ಅನಿಲ್‌ ಕುಮಾರ್ ಪಾಂಡೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಒಂದು ವಾರದ ಹಿಂದೆಯಷ್ಟೇ ಚಿಕಿತ್ಸೆ ಪಡೆದು ಮನೆಗೆ ವಾಪಸ್‌ ಬಂದಿದ್ದರು. ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿದು ಮೆಟ್ರೋ ನಿಲ್ದಾಣಕ್ಕೆ ಕುಟುಂಬ ಆಗಮಿಸಿತ್ತು. ಈಗ ಮತ್ತೆ ಪಾಂಡೆಯನ್ನು ಸೇನಾ ಆಸ್ಪತ್ರೆಗೆ ದಾಖಲಿಸಲು ಕುಟುಂಬಸ್ಥರು ಮುಂದಾಗಿದ್ದಾರೆ.

    ಮೆಟ್ರೋ ಹಳಿಗೆ ಜಿಗಿದಿದ್ದಕ್ಕೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

  • ಪೆಟ್ರೋಲ್‌ ಸುರಿದು ಟೆಕ್ಕಿ ಯುವತಿ ಆತ್ಮಹತ್ಯೆ

    ಪೆಟ್ರೋಲ್‌ ಸುರಿದು ಟೆಕ್ಕಿ ಯುವತಿ ಆತ್ಮಹತ್ಯೆ

    ಬೆಂಗಳೂರು: ಪೆಟ್ರೋಲ್ (Petrol) ಸುರಿದುಕೊಂಡು ಟೆಕ್ಕಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಸುಹಾಸಿ ಸಿಂಗ್ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಯುವತಿಯ ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಜ.12 ರಂದು ಹೋಟೆಲಿನಲ್ಲಿ ಯುವತಿ ಪೆಟ್ರೋಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಹಾಸಿ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮಾವ ಪ್ರವೀಣ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಲವ್‌ ಜಿಹಾದ್‌ ಆರೋಪ – 9ನೇ ಕ್ಲಾಸ್‌ ವಿದ್ಯಾರ್ಥಿನಿ ಆತ್ಮಹತ್ಯೆ

    ಏನಿದು ಪ್ರಕರಣ?
    ಸುಹಾಸಿ ಸಿಂಗ್‌ ಮತ್ತು ಪ್ರವೀಣ್‌ ಸಿಂಗ್‌ ಸಂಬಂಧಿಗಳು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಉತ್ತಮ ಸಂಬಂಧ ಬೆಳೆದಿದೆ. ಇಬ್ಬರು ಒಟ್ಟಿಗೆ ಹೊರಗಡೆ ಹೋಗುತ್ತಿದ್ದರು. ಹೀಗೆ ಹೊರಗಡೆ ಹೋಗಿದ್ದಾಗ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದನ್ನೂ ಓದಿ: Saif Ali Khan Stabbed| ಮನೆಯ ಕೆಲಸದಾಕೆಯ ಜೊತೆ ದಾಳಿಕೋರನಿಗೆ ಇತ್ತಾ ಸಂಬಂಧ?

    ಇಬ್ಬರು ಹಲವಾರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರವೀಣ್‌ ಸಿಂಗ್‌ ವಿಡಿಯೋ ರೆಕಾರ್ಡ್‌ ಮಾಡಿದ್ದಾನೆ. ನಂತರ ವಿಡಿಯೋವನ್ನು ಇಟ್ಟುಕೊಂಡು ಸುಹಾಸಿಯನ್ನು ಬ್ಲ್ಯಾಕ್‌ ಮೇಲ್‌ ಮಾಡಿ ಲೈಂಗಿಕ ಕ್ರಿಯೆಗೆ ಬರುವಂತೆ ಆಹ್ವಾನಿಸುತ್ತಿದ್ದ. ಒಂದು ವೇಳೆ ಸಹಕರಿಸದೇ ಇದ್ದರೆ ವಿಡಿಯೋವನ್ನು ಪೋಷಕರಿಗೆ ತಿಳಿಸುವುದಾಗಿ ಬೆದರಿಸುತ್ತಿದ್ದ. ಬೆದರಿಕೆಗೆ ಬಗ್ಗಿ ಪ್ರವೀಣ್‌ ಹೇಳಿದಾಗ ಸುಹಾಸಿ ಬರುತ್ತಿದ್ದಳು.

    ಕೆಲ ತಿಂಗಳಿನಿಂದಲ ಸುಹಾಸಿ ಸಿಂಗ್‌ ಬೇರೊಬ್ಬ ಹುಡುಗನ ಜೊತೆ ಸುತ್ತಾಟ ಆರಂಭಿಸಿದ್ದಳು. ಈ ವಿಚಾರ ಪ್ರವೀಣ್‌ಗೆ ಗೊತ್ತಾಗಿದೆ. ಜನವರಿ 12 ರಂದು ಪ್ರವೀಣ್‌ ಹೋಟೆಲಿಗೆ ಬರುವಂತೆ ಆಹ್ವಾನಿಸಿದ್ದಾನೆ. ಈ ಆಹ್ವಾನವನ್ನು ಆಕೆ ತಿರಸ್ಕರಿಸಿದ್ದಾಳೆ. ಈ ವೇಳೆ ಪ್ರವೀಣ್‌ ಬಾರದೇ ಇದ್ದರೆ ವಿಡಿಯೋ ವೈರಲ್‌ ಮಾಡುತ್ತಿದ್ದೇನೆ ಎಂದು ಬೆದರಿಸಿದ್ದಾನೆ.

    ಈತನ ಬ್ಲ್ಯಾಕ್‌ಮೇಲ್‌ಗೆ ಹೆದರಿ ಸುಹಾಸಿ ಎಚ್‌ಎಎಲ್‌ ಬಳಿ ಹೋಟೆಲಿಗೆ ಪೆಟ್ರೋಲ್‌ ಜೊತೆ ಬಂದಿದ್ದಾಳೆ. ಪ್ರವೀಣ್‌ ನೋಡಿದ ಈಗೆ ಹೋಟೆಲಿನಲ್ಲೇ ಪೆಟ್ರೋಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಪ್ರವೀಣ್‌ ಆಕೆಯನ್ನು ರಕ್ಷಿಸಿದ್ದಾನೆ. ಗಂಭೀರ ಗಾಯಗೊಂಡ ಸುಹಾಸಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

    ಪ್ರಕರಣ ತಿಳಿದ ಬಳಿಕ ಪ್ರವೀಣ್‌ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

     

  • ಇಬ್ಬರು ಮಕ್ಕಳನ್ನು ಹತ್ಯೆಗೈದು ಬೆಂಗಳೂರಿನ ಟೆಕ್ಕಿ, ಪತ್ನಿ ಆತ್ಮಹತ್ಯೆ

    ಇಬ್ಬರು ಮಕ್ಕಳನ್ನು ಹತ್ಯೆಗೈದು ಬೆಂಗಳೂರಿನ ಟೆಕ್ಕಿ, ಪತ್ನಿ ಆತ್ಮಹತ್ಯೆ

    ಬೆಂಗಳೂರು: ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ದಂಪತಿ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಬೆಂಗಳೂರಿನ (Bengaluru) ಸದಾಶಿವ ನಗರದ ಆರ್.ಎಂ.ವಿ ಎರಡನೇ ಹಂತದ ಟೆಂಪಲ್ ರಸ್ತೆಯಲ್ಲಿ ನಡೆದಿದೆ.

    ಪತಿ ಅನೂಪ್‌ (38), ರಾಖಿ(35), ಅನುಪ್ರಿಯಾ (5) ವರ್ಷ ಮತ್ತು ಪ್ರಿಯಾಂಶ್ (2) ಮೃತಪಟ್ಟಿದ್ದಾರೆ. ಅನೂಪ್‌ ಉತ್ತರ ಪ್ರದೇಶ (Uttar Pradesh) ಮೂಲದವರಾಗಿದ್ದು ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಕನ್ಸಲ್ಟೆಂಟ್‌ (Software Consultant) ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಮನೆಗೆ ಕೆಲಸವರು ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

    ರಾತ್ರಿ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ದಂಪತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸದಾಶಿವ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಸತತ 40 ಗಂಟೆ ಡಿಜಿಟಲ್ ಅರೆಸ್ಟ್ – ಕರಾಳ ಅನುಭವ ಹಂಚಿಕೊಂಡ ಖ್ಯಾತ ಯೂಟ್ಯೂಬರ್!

    ಅನೂಪ್ ಮನೆಯಲ್ಲಿ ಮೂರು ಜನ ಕೆಲಸ ಮಾಡುತ್ತಿದ್ದರು. ಅನುಪ್ರಿಯಾಗೆ ಆರೋಗ್ಯ ಸಮಸ್ಯೆ ಇತ್ತು. ಈ ವಿಚಾರಕ್ಕೆ ದಂಪತಿ ಬಹಳ ಬೇಸರದಲ್ಲಿದ್ದರು.

    ಇಂದು ಬೆಳಗ್ಗೆ 11 ಗಂಟೆಗೆ ಪಾಂಡಿಚೇರಿಗೆ ಹೋಗಲಿದ್ದೇವೆ. ಬೇಗ ಕೆಲಸಕ್ಕೆ ಬನ್ನು ಎಂದು ಕೆಲಸದವರಿಗೆ ಅನೂಪ್ ಹೇಳಿದ್ದರು. ಹೀಗಾಗಿ ಇಂದು ಬೆಳಗ್ಗೆ ಕೆಲಸವರು ಮನೆಗೆ ಬಂದಿದ್ದಾರೆ. ಭಾನುವಾರ ಸಹ ಪ್ಯಾಕಿಂಗ್ ಮಾಡಲು ಕೆಲಸದವರನ್ನು ಕರೆಸಿಕೊಂಡಿದ್ದರು. ಇದನ್ನೂ ಓದಿ: ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!

     

    ಮೂವರು ಕೆಲಸಗಾರರ ಪೈಕಿ ಇಬ್ಬರು ಅಡುಗೆಗೆ ನಿಯೋಜನೆಗೊಂಡಿದ್ದರೆ ಒಬ್ಬರು ಮಗು ನೋಡಿಕೊಳ್ಳಲು ಇದ್ದರು. ಮೂವರಿಗೂ ತಿಂಗಳಿಗೆ 15 ಸಾವಿರ ರೂ. ಸಂಬಳ ನೀಡುತ್ತಿದ್ದರು. ಟೆಕ್ಕಿ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು.

    ಮೊದಲ ಮಗುವಿಗೆ ಮಾನಸಿಕ ತೊಂದರೆ ಇದ್ದ ಕಾರಣ ದಂಪತಿ ಬಹಳ ಕುಗ್ಗಿ ಹೋಗಿದ್ದರು. ನಿನ್ನೆ ರಾತ್ರಿ 10 ಗಂಟೆಯವರೆಗೂ ದಂಪತಿ ಖುಷಿಯಾಗಿಯೇ ಇದ್ದರು ಎಂದು ಕೆಲಸದವರು ತಿಳಿಸಿದ್ದಾರೆ.

    ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿಧಿ ವಿಜ್ಞಾನ ಪ್ರಾಯೋಗಾಲಯದ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಯಾಕೆ ಆತ್ಮಹತ್ಯೆಗೆ ಶರಣಾದರು ಎನ್ನುವುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಿದರು.

  • ನಿರ್ಮಿತಿ ಕೇಂದ್ರದ ಎಂಜಿನಿಯರ್ ನೇಣಿಗೆ ಶರಣು

    ನಿರ್ಮಿತಿ ಕೇಂದ್ರದ ಎಂಜಿನಿಯರ್ ನೇಣಿಗೆ ಶರಣು

    ಗದಗ: ನಿರ್ಮಿತಿ ಕೇಂದ್ರದ‌ (Nirmithi Kendra) ಪಾಜೆಕ್ಟ್‌ ಎಂಜಿನಿಯರ್‌ ಖಾಸಗಿ‌ ಹೋಟೆಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಗರದ ಹೊಸ ಬಸ್ ನಿಲ್ದಾಣದ (Gadag Bus Stand) ಬಳಿ ನಡೆದಿದೆ.

    ಪಲ್ಲವಿ ಲಾಡ್ಜ್‌ನ ರೂಮ್ ನಂಬರ್ 513 ರಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಶಂಕರಗೌಡ ಪಾಟೀಲ(54) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೂಲ ಹಾತಲಗೇರಿ ನಿವಾಸಿಯಾಗಿದ್ದು, ಹತ್ತಾರು ವರ್ಷಗಳಿಂದ ಗದಗ ನಗರದ ಹಾತಲಗೇರಿ ನಾಕಾ ಬಳಿಯ ನಿವಾಸಿಯಾಗಿದ್ದರು. ಗದಗ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್‌ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ರೋಣ ತಾಲೂಕಿನ ನಿರ್ಮಿತಿ ಕೇಂದ್ರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

    ಇಂದು (ಡಿ.03) ಬೆಳಿಗ್ಗೆ 7:30 ರ ಸುಮಾರಿಗೆ ಸೈಟ್ ವಿಸಿಟ್ ಮಾಡಿ ಬರುವುದಾಗಿ ಮನೆಯವರ‌ ಬಳಿ ಹೇಳಿ ಹೊರಬಂದಿದ್ದಾರೆ‌. ಮನೆಯಿಂದ ಬಂದು ಪಲ್ಲವಿ ಲಾಡ್ಜ್‌ನಲ್ಲಿ ಹಗ್ಗದೊಂದಿಗೆ ನೇಣಿಗೆ ಶರಣಾಗಿದ್ದಾರೆ.

     

    ಶಂಕರಗೌಡನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ‌. ಆದರೆ ಆತ್ಮಹತ್ಯೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಶಂಕರ್‌ಗೌಡ ಪಾಟೀಲ ಯಾವುದೇ ಸಾಲ‌ ಮಾಡಿರಲಿಲ್ಲ. ಬೇರೆ ಯಾರಿಗೋ ಲೇವಾದೇವಿ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿಕೊಂಡು ತಾನು ಜವಾಬ್ದಾರಿ ತೆಗೆದುಕೊಂಡಿದ್ದರು. ಅವರು ಸಮಯಕ್ಕೆ ಸರಿಯಾಗಿ ಹಣ ಕೊಡದಕ್ಕೆ ಜವಾಬ್ದಾರಿ ಉಸ್ತುವಾರಿ ವಹಿಸಿಕೊಂಡಿದ್ದ ಶಂಕರಗೌಡ ಅವರನ್ನು ಪೀಡಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

    ಶಂಕರಗೌಡ ಸಾಲದ ಬಗ್ಗೆ ಅಥವಾ ಕೆಲಸ, ಅಧಿಕಾರಿಗಳು, ಸಿಬ್ಬಂದಿಗಳು ಕಿರುಕುಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ಕೊಠಡಿಗೆ ಪೊಲೀಸರು ನಮ್ಮನ್ನು ಬಿಡಲಿಲ್ಲ. ಹೀಗಾಗಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಇದೆ. ಸಣ್ಣ ಪುಟ್ಟ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಈ ಬಗ್ಗೆ ತನಿಖೆ ಆಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

    ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ತನಿಖೆ ನಂತರ ಎಂಜಿನಿಯರ್ ಸಾವಿನ ಸತ್ಯಾಂಶ ಹೊರಬೀಳಲಿದೆ.

  • ಆತ್ಮಹತ್ಯೆಗೆ ಶರಣಾದ ಸಚಿನ್ ಗುತ್ತಿಗೆದಾರನಲ್ವಾ? ಕೇಸ್ ಮುಚ್ಚಿ ಹಾಕಲು ಸರ್ಕಾರದಿಂದ ಸಂಚು?

    ಆತ್ಮಹತ್ಯೆಗೆ ಶರಣಾದ ಸಚಿನ್ ಗುತ್ತಿಗೆದಾರನಲ್ವಾ? ಕೇಸ್ ಮುಚ್ಚಿ ಹಾಕಲು ಸರ್ಕಾರದಿಂದ ಸಂಚು?

    – ಬೀದರ್‌ ಗುತ್ತಿಗೆದಾರರ ಸಂಘದಿಂದ ಸ್ಪಷ್ಟನೆ
    – ಪ್ರಭಾವಿಗಳ ಕೈವಾಡವಿದೆ ಎಂದ ಸಹೋದರಿ

    ಬೀದರ್‌/ಕಲಬುರಗಿ/ ಬೆಂಗಳೂರು: ಸರ್ಕಾರಕ್ಕೆ ತಲೆಬಿಸಿ ಉಂಟು ಮಾಡಿರುವ ಸಚಿನ್ ಪಂಚಾಳ್ (Sachin Panchal) ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಸಲಿಗೆ ಸಚಿನ್ ಪಂಚಾಳ್ ಗುತ್ತಿಗೆದಾರನೇ (Contractor) ಅಲ್ಲ ಎಂಬ ಮಾಹಿತಿಯನ್ನು ಗುತ್ತಿಗೆದಾರರ ಸಂಘದ ಬೀದರ್ ಘಟಕ ಹಂಚಿಕೊಂಡಿದೆ.

    ಇದಕ್ಕೆ ಪೂರಕವಾಗಿ ಸಚಿನ್ ಪಂಚಾಳ ಕುಟುಂಬ ಸಹ, ಸಚಿನ್ ಗುತ್ತಿಗೆದಾರ ಎಂದು ನಾವು ಹೇಳಿಲ್ಲ ಎಂದಿದೆ.ಆದರೆ ಸಚಿನ್ ಅವರ ಕಲಬುರಗಿ ಕಚೇರಿಯಿಂದ ಎಲ್ಲಾ ದಾಖಲೆಗಳು ಕಳುವಾಗಿವೆ.ಈ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿದೆ ಹೀಗಾಗಿ ಸಚಿನ್ ಪ್ರಕರಣವನ್ನು ಸರ್ಕಾರ ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕೆಲಸ ಮಾಡ್ತಿದೆ ಎಂದು ಸಚಿನ್ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ 6 ಮಂದಿ ವಿರುದ್ಧ ಎಫ್‍ಐಆರ್

     
    ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಲೆದಂಡಕ್ಕೆ ಆಗ್ರಹಿಸಿ ಕಲಬುರಗಿಯಲ್ಲಿ ವಿಶ್ವಕರ್ಮ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿತು. ಆದರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸ್ಪಷ್ಟಪಡಿಸಿದ್ದಾರೆ.

    ಪ್ರಿಯಾಂಕ್ ರಾಜೀನಾಮೆ ಕೇಳುವ ಧೈರ್ಯ ನಿಮಗಿಲ್ಲ ಎಂದು ಚಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ. ಸಿಎಂ ತಾಕತ್‌ಗೆ ಸವಾಲ್ ಹಾಕಿದ್ದಾರೆ.

    ಸಚಿನ್ ಕೇಸಲ್ಲಿ ಸುಪಾರಿ ಕಿಲ್ಲರ್ ವಿಷಯದ ಜೊತೆ ಹನಿಟ್ರ್ಯಾಪ್‌ ವಿಚಾರವೂ ಇದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಚಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

     

  • ಹೊಸ ವರ್ಷದಂದೇ ಮನೆಯಲ್ಲೇ ನೇಣು ಬಿಗಿದು ಯುವತಿ ಆತ್ಮಹತ್ಯೆ

    ಹೊಸ ವರ್ಷದಂದೇ ಮನೆಯಲ್ಲೇ ನೇಣು ಬಿಗಿದು ಯುವತಿ ಆತ್ಮಹತ್ಯೆ

    ಬೆಂಗಳೂರು: ಹೊಸ ವರ್ಷದಂದೇ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Bagalagunte Police Station) ನಡೆದಿದೆ.

    ರುಚಿತಾ(24) ಆತ್ಮಹತ್ಯೆಗೆ ಶರಣಾದ ಯುವತಿ. ಇಂದು (ಜ.1) ಮಧ್ಯಾಹ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇದನ್ನೂ ಓದಿ: ಪಾರ್ಟಿ ಮೂಡಲ್ಲಿದ್ದ ಪ್ರಿಯತಮನಿಗೆ ಏಕಾಏಕಿ ಚಾಕು ಇರಿದ ಪ್ರೇಯಸಿ!

    ಬೆಂಗಳೂರಿನಲ್ಲಿರುವ (Bengaluru) ಪ್ರಖ್ಯಾತ ಫಾರ್ಮಾ ಕಂಪನಿಯಲ್ಲಿ ರುಚಿತಾ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಈಗ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.