Tag: suicide

  • ಕೌಟುಂಬಿಕ ಕಲಹ ಶಂಕೆ – ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

    ಕೌಟುಂಬಿಕ ಕಲಹ ಶಂಕೆ – ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

    ಬಳ್ಳಾರಿ: ಮೂವರು ಮಕ್ಕಳೊಂದಿಗೆ ತಾಯಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ (Ballary) ಜಿಲ್ಲೆಯ ಕುರುಗೋಡು (Kurugodu) ತಾಲೂಕಿನ ಬರದನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಾಯಿ ಸಿದ್ದಮ್ಮ (30), ಮಕ್ಕಳಾದ ಅಭಿಗ್ನ (8), ಅವಣಿ (6) ಹಾಗೂ ಆರ್ಯ (4) ಮೃತರು. ಇದನ್ನೂ ಓದಿ: ಟರ್ಕಿಯಲ್ಲಿ 2 ಏರ್ ಬಲೂನ್ ಅವಘಡ- ಪೈಲಟ್ ಸಾವು, 31 ಪ್ರವಾಸಿಗರಿಗೆ ಗಾಯ

    ಬೆಳಗಾವಿ (Belagavi) ಮೂಲದ ಸಿದ್ದಮ್ಮ, ಪತಿ ಕುಮಾರ್ ಹಾಗೂ ಮೂವರು ಮಕ್ಕಳೊಂದಿಗೆ ಕುರಿ ಮೇಯಿಸಲು ಬಳ್ಳಾರಿಗೆ ಬಂದಿದ್ದರು. ಸಿದ್ದಮ್ಮ ಕುಟುಂಬವು ಬರದನಹಳ್ಳಿಯ ರಾಘವೇಂದ್ರ ಎನ್ನುವವರ ಜಮೀನಿನಲ್ಲೇ ಕುರಿ ಕಟ್ಟಿ ಹಾಕುತ್ತಿದ್ದರು. ಇವರು ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಬಂದು, 3-4 ತಿಂಗಳು ಇಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಇದನ್ನೂ ಓದಿ: ಜ್ವಾಲಾಮುಖಿ ಸ್ಫೋಟ – ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ವಾಪಸ್

    ಸೋಮವಾರ ಸಿದ್ದಮ್ಮ ಮತ್ತು ಪತಿ ಕುಮಾರ್ ನಡುವೆ ಗಲಾಟೆ ಆಗಿದೆ ಎನ್ನಲಾಗಿದೆ. ಗಲಾಟೆ ಬಳಿಕ ಬೆಳಗ್ಗೆ ಸಿದ್ದಮ್ಮ ಮೂವರು ಮಕ್ಕಳ ಸಮೇತ ಕುರಿ ಮೇಯಿಸಲು ಹೋಗಿದ್ದರು. ಕುರಿ ಮೇಯಿಸಲು ಹೋದಾಗಲೇ ಮಕ್ಕಳ ಸಮೇತ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಮಕ್ಕಳನ್ನ ಕೃಷಿ ಹೊಂಡಕ್ಕೆ ತಳ್ಳಿ, ಬಳಿಕ ಸಿದ್ದಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಸಾವು ಗೆದ್ದು ಬಂದಿದ್ದ ವಿಶ್ವಾಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

    ಕುರಿಗಳು ಹಟ್ಟಿಗೆ ಬಾರದೇ ಇದ್ದುದ್ದರಿಂದ ಅನುಮಾನಗೊಂಡು ಪತಿ ಕುಮಾರ್ ಹುಡುಕಾಟ ನಡೆಸಿದ್ದರು. ಈ ವೇಳೆ ಕೃಷಿ ಹೊಂಡದ ಬಳಿಯೇ ನಿಂತಿದ್ದ ಕುರಿಗಳನ್ನ ಕಂಡು ಗಾಬರಿಗೊಂಡಿದ್ದರು. ಪತ್ನಿ ಹಾಗೂ ಮಕ್ಕಳು ಕಾಣದೇ ಇದ್ದಾಗ ಕೃಷಿ ಹೊಂಡದಲ್ಲಿ ಇಣುಕಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗಾಬರಿಗೊಂಡ ಪತಿ ಕುಮಾರ್ ಕೂಡಲೇ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಏನಿಲ್ಲ ಏನಿಲ್ಲ ಅನ್ನುತ್ತಲೇ ಒಂದೇ ಕಾರ್‌ನಲ್ಲಿ ಹೊರಟ ರಶ್ಮಿಕಾ, ದೇವರಕೊಂಡ

    ಘಟನಾ ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೃತ ಸಿದ್ದಮ್ಮಳ ಸಹೋದರ ನೀಡಿದ ದೂರಿನನ್ವಯ ಕುರುಗೋಡು ಪೊಲೀಸ್ ಠಾಣೆಯಲ್ಲಿ (Kurugodu Police Station) ಪ್ರಕರಣ ದಾಖಲಾಗಿದೆ.

  • ಮ್ಯಾನೇಜರ್‌ ಕಿರುಕುಳ – ಕೆರೆಗೆ ಹಾರಿ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಮ್ಯಾನೇಜರ್‌ ಕಿರುಕುಳ – ಕೆರೆಗೆ ಹಾರಿ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಬೆಂಗಳೂರು: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು (Techie) ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ನಿಖಿಲ್ ಸೋಮವಂಶಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಅಗರ ಕೆರೆಯಲ್ಲಿ ಶವ (Agara Lake) ಪತ್ತೆಯಾಗಿದ್ದು ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

    ನಿಖಿಲ್‌ ಐಐಎಸ್‌ಸಿ ಪದವೀಧರನಾಗಿದ್ದು ಕೋರಮಂಗಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅಸಹಜ ಸಾವು ಪ್ರಕರಣದ ಅಡಿ ಹೆಚ್ಎಸ್ಆರ್‌ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶ | ಕಾರಿನಲ್ಲೇ ಉಸಿರುಗಟ್ಟಿ ನಾಲ್ವರು ಮಕ್ಕಳು ಸಾವು

     

    ನಿಖಿಲ್ ಸೋಮವಂಶಿ ಆತ್ಮಹತ್ಯೆಗೆ ಮ್ಯಾನೇಜರ್‌ ನೀಡಿದ ಟಾರ್ಚರ್‌ ಕಾರಣ ಎಂದು ಸಹದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ. ನಿಖಿಲ್ ಕಾಲೇಜು ದಿನಗಳಿಂದಲೇ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದರು. ಆದರೆ ಅಮೆರಿಕ ಮೂಲದ ಮ್ಯಾನೇಜರ್‌ ಹೊಸದಾಗಿ ಸೇರಿದ ಉದ್ಯೋಗಿಗಳಿಗೆ ಬಹಳ ಕಿರುಕುಳ ನೀಡುತ್ತಿದ್ದರು. ಈ ಕಿರುಕುಳದಿಂದ ಬೇಸತ್ತು ಹಲವು ಮಂದಿ ರಾಜೀನಾಮೆ ನೀಡಿದ್ದಾರೆ ಎಂದು ದೂರಿದ್ದಾರೆ.  ಇದನ್ನೂ ಓದಿ: ಮಹಿಳೆ ಕೊಲೆ ಮಾಡಿ ಬೈಕ್ ಅಪಘಾತವೆಂದು ಬಿಂಬಿಸಿದ ಪತಿ, ಮಾವ, ಅತ್ತೆ ಅರೆಸ್ಟ್

    ಕಂಪನಿ ನಷ್ಟದಲ್ಲಿತ್ತು, ಉದ್ಯೋಗಿಗಳು ರಾಜೀನಾಮೆ ನೀಡಿದ್ದರು. ಹೀಗಾಗಿ ಕೆಲಸದ ಒತ್ತಡ ಜಾಸ್ತಿ ಇತ್ತು. ಈ ಕಾರಣಕ್ಕೆ ಮ್ಯಾನೇಜರ್‌ ಉದ್ಯೋಗಿಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

  • ಉಡುಪಿ: ಬಾವಿಗೆ ಹಾರಿದ ತಂದೆ, ರಕ್ಷಣೆಗೆ ಹೋದ ಪುತ್ರ – ಇಬ್ಬರೂ ದುರಂತ ಅಂತ್ಯ

    ಉಡುಪಿ: ಬಾವಿಗೆ ಹಾರಿದ ತಂದೆ, ರಕ್ಷಣೆಗೆ ಹೋದ ಪುತ್ರ – ಇಬ್ಬರೂ ದುರಂತ ಅಂತ್ಯ

    – ಪತ್ನಿ ಸ್ಥಿತಿ ಗಂಭೀರ

    ಉಡುಪಿ: ಬಡತನ ಮತ್ತು ಸಾಲದ ಸುಳಿಗೆ ಸಿಲುಕಿ ಮನನೊಂದು ಬಾವಿಗೆ ಹಾರಿದ ಅಪ್ಪನ ಜೊತೆ, ರಕ್ಷಿಸಲು ಹೋದ ಮಗನೂ ಸಾವನ್ನಪ್ಪಿರುವ ಘಟನೆ ಉಡುಪಿಯ ಕೋಟೇಶ್ವರದಲ್ಲಿ ನಡೆದಿದೆ. ಪತಿ ಹಾಗೂ ಮಗನನ್ನು ರಕ್ಷಿಸಲು ಮುಂದಾದ ಪತ್ನಿ ಕೂಡ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ.

    ಕೋಟೇಶ್ವರದ ಅಂಕದಕಟ್ಟೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಧವ ದೇವಾಡಿಗ ಹಲವಾರು ಕಡೆ ಸಾಲ ಮಾಡಿದ್ದರು. ಬಡ್ಡಿ ಕಟ್ಟಲಾರದೆ, ಸಾಲ ಪಡೆದ ಹಣ ತೀರಿಸಲಾಗದೆ ಪರಿತಪಿಸುತ್ತಿದ್ದರು. ಇಂದು ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ಮಾಧವ ದೇವಾಡಿಗ ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದಾರೆ. ಈ ವಿಚಾರ ತಿಳಿದ ಮಗ ಪ್ರಸಾದ, ತಂದೆಯ ರಕ್ಷಣೆಗಾಗಿ ಬಾವಿಗೆ ಹಾರಿದ್ದಾನೆ. ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ತಾರಾ ದೇವಾಡಿಗ ಬಾವಿಗೆ ಹಾರಿ ಇಬ್ಬರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ಪತಿ ಮತ್ತು ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ತಾಯಿ ತಾರಾ ದೇವಾಡಿಗ ಅವರಿಗೆ ಈಜು ಬರುತ್ತಿದ್ದ ಕಾರಣ, ಬಾವಿಯೊಳಗಿದ್ದ ಪೈಪ್ ಮೂಲಕ ರಕ್ಷಣೆ ಪಡೆದಿದ್ದಾರೆ. ಅಕ್ಕಪಕ್ಕದ ಮನೆಯವರು ಕೂಡಲೇ ಅಗ್ನಿಶಾಮಕದಳಕ್ಕೆ ಫೋನ್ ಮಾಡಿದ್ದಾರೆ. ಅಗ್ನಿಶಾಮಕ ದಳದವರು ತಾರಾ ದೇವಾಡಿಗ ಅವರನ್ನು ರಕ್ಷಣೆ ಮಾಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಪ್ರಾಥಮಿಕ ವರದಿ ಇದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ತಾರಾ ದೇವಾಡಿಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

  • ಮಗುವಿನ ಕಾಲಿಗೆ ಪೆಟ್ಟು – ಮಗುಗೆ ಏನಾಗುತ್ತೋ ಅನ್ನೋ ಆತಂಕದಲ್ಲಿ 12ರ ಬಾಲಕ ಆತ್ಮಹತ್ಯೆ

    ಮಗುವಿನ ಕಾಲಿಗೆ ಪೆಟ್ಟು – ಮಗುಗೆ ಏನಾಗುತ್ತೋ ಅನ್ನೋ ಆತಂಕದಲ್ಲಿ 12ರ ಬಾಲಕ ಆತ್ಮಹತ್ಯೆ

    ಚಾಮರಾಜನಗರ: ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ 12 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

    ಮೃತ ಬಾಲಕನು ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿರುವ ಶೀಲಾ ಅವರ ಪುತ್ರ ಪ್ರಜ್ವಲ್. ಬಾಲಕ ತನ್ನ ಸಂಬಂಧಿಕರ ಮಗುವಾದ ಅಭಿಷೇಕ್ ಜೊತೆ ಆಟವಾಡುತ್ತಿದ್ದ. ಆಕಸ್ಮಿಕವಾಗಿ ಆ ಮಗುವಿನ ಕಾಲಿಗೆ ಪೆಟ್ಟಾಗಿತ್ತು. ಈ ವೇಳೆ ಮಗುವಿನ ಪೋಷಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇದರಿಂದ ಆತಂಕಗೊಂಡ ಪ್ರಜ್ವಲ್, ಮಗುವಿಗೆ ಏನಾದರೂ ಆಗಿದೆಯೇ ಎಂಬ ಭೀತಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ವೇಲ್‌ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಅಕ್ಕಪಕ್ಕದವರು ತಕ್ಷಣ ಸ್ಪಂದಿಸಿ ಪ್ರಜ್ವಲ್‌ನ್ನು ಲೊಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು. ಬಳಿಕ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾಗ ತಪಾಸಣೆ ನಡೆಸಿದ ವೈದ್ಯರು ಪ್ರಜ್ವಲ್ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಸಂಬಂಧ ಪ್ರಜ್ವಲ್‌ನ ಸೋದರ ಮಾವ ರಂಗಸ್ವಾಮಿ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

  • ದಲಿತ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಸೂಸೈಡ್‌ ಆರೋಪ

    ದಲಿತ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಸೂಸೈಡ್‌ ಆರೋಪ

    ಹಾವೇರಿ: ದಲಿತ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮುಸ್ಲಿಂ ವ್ಯಕ್ತಿಯೊಬ್ಬ ಕಾಲ್ ಮಾಡಿ ಕಿರುಕುಳ ಕೊಟ್ಟ ಹಿನ್ನೆಲೆ‌ ಯುವತಿ ನೇಣಿಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

    ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಚಿಕ್ಕಮಲ್ಲೂರು ಗ್ರಾಮದ ಯುವತಿ ಶಿಲ್ಪಾ (22) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳಗಾವಿಯಲ್ಲಿ ಬಿಸಿಎ ವಿಧ್ಯಾಭ್ಯಾಸ ಮಾಡುತ್ತಿದ್ದ ತಾನಿದ್ದ ಹಾಸ್ಟೆಲ್‌ನಲ್ಲಿಯೇ ನೇಣಿಗೆ ಶರಣಾಗಿದ್ದಳು. ಪ್ರಾರಂಭದಲ್ಲಿ ಶಿಲ್ಲಾ ಆತ್ಮಹತ್ಯೆಗೆ ಕಾರಣ ತಿಳಿದುಬಂದಿರಲಿಲ್ಲ. ಆದರೆ ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಈಗ ಬಯಲಾಗಿದೆ. ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌, ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

    ಶಿಲ್ಪಾ ಶಿಗ್ಗಾಂವಿ ಪಟ್ಟಣದ ನವೀನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು‌. ನವೀನ್ ಶಿಗ್ಗಾಂವಿಯ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಫರ್ನಿಚರ್ ಅಂಗಡಿ ಮಾಲೀಕನೆ ರಂಜಾನ್ ನದಾಫ್‌. ಕೆಲ ದಿನಗಳ ಹಿಂದಷ್ಟೇ ನವೀನ್ ಮೇಲೆ ಫರ್ನಿಚರ್ ಅಂಗಡಿಯಲ್ಲಿ‌ ಕಳ್ಳತನ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಿಟ್ಟಾಗಿದ್ದ ಅಂಗಡಿ ಮಾಲೀಕ ರಂಜಾನ್, ನವೀನ್ ಮೊಬೈಲ್ ಕಸಿದುಕೊಂಡಿದ್ದ. ಮೊಬೈಲ್ ನೋಡಿದಾಗ ನವೀನ್ ಶಿಲ್ಪಾ ಜೊತೆ ಚಾಟಿಂಗ್ ಮಾಡಿರೋದು ಗೊತ್ತಾಗಿದೆ.‌ ನವೀನ್ ಮೊಬೈಲ್‌ನಲ್ಲಿದ್ದ ಶಿಲ್ಪಾ ನಂಬರ್ ತೆಗೆದುಕೊಂಡು ರಂಜಾನ್, ಆಕೆಗೆ ಕರೆ ಮಾಡಿ ಟಾರ್ಚರ್ ಮಾಡಿದ್ದ. ನವೀನ್ ನಿನಗೆ ದುಡ್ಡು ಕಳಿಸಿದ್ದಾನೆ. ನಿಮಗೆ ದುಡ್ಡು ಎಲ್ಲಿಂದ ಬಂತು? ನಮ್ಮ ಫರ್ನಿಚರ್ ಅಂಗಡಿಯಲ್ಲಿ ಕಳ್ಳತನ ಮಾಡಿ ನವೀನ್ ನಿನಗೆ ಹಣ‌ ಕಳಿಸಿದ್ದಾನೆ. ಇದನ್ನ ಬಹಿರಂಗ ಮಾಡ್ತೀನಿ. ನಿಮ್ ತಂದೆ ತಾಯಿಗೂ ಹೇಳ್ತೀನಿ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.‌

    ಫರ್ನಿಚರ್ ಅಂಗಡಿ ಮಾಲೀಕನನ್ನು ಬಂಧಿಸಲು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.‌ ನವೀನ್ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಯುವಕನ ಮನೆಯಲ್ಲಿ ಬಹಳ ಬಡತನ ಇತ್ತು. ಅವರ ತಾಯಿಗೆ ಔಷಧಿ ಕೊಡಿಸಬೇಕಿತ್ತು. ನವೀನ್‌ಗೆ ಅಂಗಡಿ ಮಾಲೀಕ ಸಂಬಳವನ್ನೇ ಕೊಟ್ಟಿಲ್ಲ. ಹೀಗಾಗಿ, ಅಂಗಡಿಯಲ್ಲಿ ಸ್ವಲ್ಪ ವಸ್ತು ಕಳ್ಳತನ ಮಾಡಿ ತಾಯಿಗೆ ಔಷಧಿ ಕೊಡಿಸಿದ್ದಾನೆ. ಅದಕ್ಕಾಗಿಯೇ ನವೀನ್‌ಗೆ ಹೊಡೆದು ರಂಜಾನ್ ಪೊಲೀಸ್ ಕಂಪ್ಲೆಂಟ್ ಮಾಡಿದ್ದಾನೆ. ಯುವಕನ ಮೊಬೈಲ್ ಕಸಿದುಕೊಂಡು ಅದರಲ್ಲಿ ಶಿಲ್ಪಾ ನಂಬರ್ ತಗೊಂಡು ಟಾರ್ಚರ್ ಮಾಡಿದ್ದಾನೆ. ಇದರಿಂದ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದಾಳೆ. ಆರೋಪಿಯನ್ನು ಬಂಧಿಸಿ ಎಂದು ಮುತಾಲಿಕ್‌ ಒತ್ತಾಯಿಸಿದ್ದಾರೆ.

  • ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ವಿರಾಜಪೇಟೆ ಶಾಸಕ ಪೊನ್ನಣ್ಣ ಹೆಸರು ಥಳಕು

    ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ವಿರಾಜಪೇಟೆ ಶಾಸಕ ಪೊನ್ನಣ್ಣ ಹೆಸರು ಥಳಕು

    – ಡೆತ್‌ನೋಟ್ ಬರೆದಿಟ್ಟು ವಿನಯ್ ಸೋಮಯ್ಯ ಆತ್ಮಹತ್ಯೆ
    – ಗ್ರೂಪಿನ ಅಡ್ಮಿನ್‌ ಆಗಿದ್ದಕ್ಕೆ ನನ್ನ ಮೇಲೆ ಎಫ್‌ಐಆರ್‌
    – ಒಬ್ಬರು 1 ರೂ. ನೀಡಿದ್ರೆ ಪತ್ನಿ, ಮಗಳಿಗೆ ಸಹಾಯವಾಗುತ್ತೆ

    ಬೆಂಗಳೂರು: ಬೆಂಗಳೂರಿನಲ್ಲಿ ಮಡಿಕೇರಿಯ (Madikeri) ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ವಿನಯ್‌ ಸೋಮಯ್ಯ (Vinay Somaiah) ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದು ಡೆತ್‌ನೋಟ್‌ನಲ್ಲಿ ವಿರಾಜಪೇಟೆಯ ಕಾಂಗ್ರೆಸ್‌ ಶಾಸಕ ಪೊನ್ನಣ್ಣ (A.S. Ponnanna) ಹೆಸರನ್ನು ಉಲ್ಲೇಖಿಸಿದ್ದಾರೆ.

    ನಾನು ಯಾವುದೇ ತಪ್ಪು ಮಾಡದೇ ಇದ್ದರೂ ನಾನು ವಾಟ್ಸಪ್‌ ಗ್ರೂಪಿನ ಅಡ್ಮಿನ್‌ ಆಗಿದ್ದಕ್ಕೆ ನನ್ನ ಮೇಲೆ ಸುಳ್ಳು ಎಫ್‌ಐಆರ್‌ (FIR) ದಾಖಲು ಮಾಡಲಾಗಿದೆ. ಶಾಸಕ ಪೊನ್ನಣ್ಣ ಆದೇಶದಂತೆ ಪೊಲೀಸರು ನಡೆದುಕೊಂಡಿದ್ದಾರೆ. ಮಡಿಕೇರಿಯ ಕಾಂಗ್ರೆಸ್‌ ಶಾಸಕ ಮಂಥರ್‌ ಗೌಡ ಅವರು ನನಗೆ ಕಾಲ್‌ ಮಾಡಿ ಬೆದರಿಸಿದ್ದಾರೆ. ನನ್ನ ಆತ್ಮಹತ್ಯೆಗೆ ತೆನ್ನೀರ ಮಹೀನಾ ಕಾರಣ ಎಂದು ಡೆತ್‌ನೋಟ್‌ನಲ್ಲಿ ವಿನಯ್‌ ಬರೆದಿದ್ದಾರೆ.

    ಸಾವಿಗೂ ಮುನ್ನ ವಿನಯ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿದ್ದಾರೆ. ರಾಜಕೀಯ ಪ್ರೇರಿತ ಎಫ್‌ಐಆರ್‌ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ನಾಗವಾರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತ ನೇಣಿಗೆ ಶರಣು

    ಎಲ್ಲರಿಗೂ ನನ್ನ ಕೊನೆಯ ನಮಸ್ತೇ,
    ನಾನು ವಿನಯ್ ಕೆಎಸ್‌ 2 ತಿಂಗಳಿನಿಂದ ನನ್ನ ಮನಸ್ಸೇ ಹತೋಟಿಗೆ ಬರುತಿಲ್ಲ, ಯಾರೋ ಒಬ್ಬರು “ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು ವಾಟ್ಸಪ್‌ ಗ್ರೂಪಿನಲ್ಲಿ ಹಾಕಿದ ವಾಟ್ಸಪ್‌ ಮೆಸೇಜ್‌ಗೆ ಅಡ್ಮಿನ್‌ ಆದ ನಮ್ಮನ್ನು (ನನ್ನ ಅಡ್ಮಿನ್ ಮಾಡಿದ್ದು 5 ದಿನಗಳ ಹಿಂದೆ) ಹೊಣೆ ಮಾಡಿ ರಾಜಕೀಯ ಪ್ರೇರಿತ ಎಫ್‌ಐಆರ್‌ ಹಾಕಿ ಸಮಾಜಕ್ಕೆ ನಮ್ಮನ್ನು ಕಿಡಿಗೇಡಿಗಳು ಅಂತ ಪರಿಚಯಿಸಿ, ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ ತೆನ್ನೀರ ಮಹೀನಾ ಅವರು ನನ್ನ ಸಾವಿಗೆ ನೇರ ಹೊಣೆ.

    ನಮ್ಮ ಮೇಲೆ ಎಫ್‌ಐಆರ್‌ ಹಾಕಿ ಕಿಡಿಗೇಡಿಗಳು ಅಂತ ಇಡೀ ಕೊಡಗಿಗೆ ವೈರಲ್ ಮಾಡಿದ್ದು ಕೂಡಾ ಇವನೇ, ಅದು ಕೂಡಾ ನಮ್ಮ ಫೋಟೋ ಹಾಕಿ, ನಮ್ಮ ಫೋಟೋವನ್ನು ನಮ್ಮ ಅನುಮತಿ ಇಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಉಪಯೋಗಿಸುತ್ತಾರೆ? ಅದು ಕೂಡಾ ಆರೋಪ ಸಾಬೀತು ಆಗದೇ, ಅದನ್ನು ನೋಡಿದ ನಮ್ಮ ಮನೆಯವರು ಹಾಗೂ ಸಂಬಧಿಕರಿಗೆ ಹೇಗೆ ಅನ್ನಿಸಿರಬಹುದು ಅಂತ ನೀವೇ ಊಹಿಸಿಕೊಳ್ಳಿ.

    ಎಫ್‌ಐಆರ್‌ ಆದ ದಿನದಿಂದ ಜಾಮೀನು ಸಿಗುವ ತನಕ ನಾನು ನನ್ನ ಅಮ್ಮನ ಜೊತೆ ಮಾತನಾಡಿಲ್ಲ. ಈ ತೆನ್ನೀರ ಮಹೀನಾ ಕಾರಣಕ್ಕಾಗಿ ಜೀವ ಕಳೆದುಕೊಳ್ಳುತಿರುವ ವ್ಯಕ್ತಿ ನಾನು ಮೊದಲಿಗನಲ್ಲ. ಅವರನ್ನೇ ಕೇಳಿ, ಅವರ ಮಡದಿ ಆಸ್ಪತ್ರೆಗೆ ಸೇರಿದ ದಿನವೇ ಇನ್ನೊಂದು ಆತ್ಮಹತ್ಯೆ ನಡೆಯಿತು. ಆ ಆತ್ಮಹತ್ಯೆಗೂ ತನ್ನೀರ ಮಹೀನಾ ಹಾಗೂ ಅವನ ಮಡದಿಗೆ ಏನು ಸಂಬಂಧ ಅಂತ. ಆ ಆತ್ಮಹತ್ಯೆಯ ತನಿಖೆ ಆಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಆ ಆತ್ಮಹತ್ಯೆ ಯ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕು.

    ಆ ಗ್ರೂಪಿನಲ್ಲಿ ಇರುವ ಯಾರನ್ನು ಬೇಕಾದರೂ ಕೇಳಿ. ನನ್ನ ಒಂದು ಮೆಸೇಜ್ ಕೂಡಾ ಯಾರ ತೇಜೋವಧೆ ಮಾಡುವ ಹಾಗೆ ಇರಲಿಲ್ಲ. ನಾವು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದಕ್ಕಾಗಿ ಕೆಲವು ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿ ನನ್ನ ಮೇಲೆ ಎಫ್‌ಐಆರ್‌ ಹಾಕಿದರು. ನಂತರ ಜಾಮೀನು ಸಿಕ್ಕಿದ ನಂತರ ಕೂಡಾ ನನ್ನ ಕಸಿನ್‌ ಹಾಗೂ ಸ್ನೇಹಿತರಿಗೆ ಕರೆ ಮಾಡಿ ಅವರ ಮನೆಗೆ ಹೋಗಿ ನನ್ನ ಅರೆಸ್ಟ್ ಮಾಡಲು ಮಡಿಕೇರಿಯ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಶುಕ್ರವಾರ ಜಾಮೀನು ಸಿಕ್ಕಿದರೂ ಕೂಡಾ ಶನಿವಾರ ನನ್ನ ಸ್ನೇಹಿತನ ಮನೆಗೆ ಹೋಗಿ ನನ್ನ ಬಗ್ಗೆ ವಿಚಾರಿಸುವ ಅವಶ್ಯಕತೆ ಏನಿತ್ತು? ಇದೆಲ್ಲಾ ವಿರಾಜಪೇಟೆಯ ಶಾಸಕ ಪೊನ್ನಣ್ಣನ ಆದೇಶ ಅಂತ ಸ್ವಂತ ಮಡಿಕೇರಿಯ ಒಬ್ಬ ಪೊಲೀಸ್ ಪೇದೆ ಹೇಳಿದರು.

    ನಂತರ ನನ್ನ ಸ್ನೇಹಿತನಿಗೆ ಪೊನ್ನಣ್ಣ ವಿನಯ್ ಅನ್ನೋ ಒಬ್ಬ ಕಾಲ್‌ ಮಾಡಿದ್ದ ನನಗೆ ಹಾಗೂ ಕೊಡವ ಹಾಗೂ ಗೌಡ ನಡುವೆ ಗಲಾಟೆ ಬಗ್ಗೆ ನನ್ನ ಜೊತೆ ಮಾತಾಡಿದ್ದು ಅಂತ ಸುಳ್ಳು ಆರೋಪ ಮಾಡಿದ್ದಾರೆ. ನಾನು ಕಾಲ್‌ ಮಾಡಿದ್ದೇ ಆದಲ್ಲಿ ಕಾಲ್‌ ರೆಕಾರ್ಡ್ ತೋರಿಸಲಿ. ಇದನ್ನೂ ಓದಿ: ತಿಂಗಳಲ್ಲಿ 70 ಸಲ ನನ್ನ ಲೊಕೇಶನ್‌ ತೆಗೆಸುತ್ತಾರೆ: ಎಸ್‌ಪಿ ಮುಂದೆ ರಾಯಚೂರು ಬಿಜೆಪಿ ಶಾಸಕ ಅಳಲು

    ನಾನು ಮೆಸೇಜ್ ಮಾಡಿದ್ದು ನಿಜ, ಅದು ಕೂಡಾ ಯಾರೋ ಕಳಿಸಿದ ಆಕ್ಷೇಪಾರ್ಹ ವಾಯ್ಸ್‌ ಮೆಸೇಜ್ ಅವರಿಗೆ ಕಳಿಸಿ, ಅವರಿಗೆ ವಿಷಯ ತಿಳಿಸಿದ್ದು, ಅದರ ಸ್ಕ್ರೀನ್‌ ಶಾಟ್‌ ಕೂಡಾ ಕಳುಹಿಸಿದ್ದೇನೆ. ಆದರೆ ಅದರ ಬಗ್ಗೆ ಎಫ್‌ಐಆರ್‌ ಮಾಡದೇ ಯಾರೋ ಹಾಕಿದ ಫೋಟೋಗೆ ನಮ್ಮ ಮೇಲೆ ಎಫ್‌ಐಆರ್‌ ಹಾಕಿದ್ದು ಯಾವ ನ್ಯಾಯ?

    ನಾನು ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಬಗ್ಗೆ ಗ್ರೂಪಿನಲ್ಲಿ ಕೇಳಿದ್ದಕ್ಕೆ ಮಡಿಕೇರಿಯ ಶಾಸಕ ಮಂಥರ್ ಗೌಡ ನನಗೆ ಕಾಲ್‌ ಮಾಡಿ ಹಾಗೆಲ್ಲ ಗ್ರೂಪಿನಲ್ಲಿ ಯಾಕೆ ಮೆಸೇಜ್ ಹಾಕ್ತಿಯ ಅಂತ ಅವರೇ ನಂಗೆ ಗದರಿದ್ದಾರೆ. ಏನಿದ್ರೂ ನನಗೆ ಹೇಳು, ಗ್ರೂಪ್‌ನಲ್ಲಿ ಹಾಕಿದ್ರೆ ಸರಿ ಇರಲ್ಲಾ ಅಂತ ನನಗೆ ಹೇಳಿದ್ದಾರೆ. ಪೂರಕ ಸಾಕ್ಷಿ ವಾಟ್ಸಪ್‌ ಕಾಲ್‌, ರಿಜಿಸ್ಟರ್‌ ಸ್ಕ್ರೀನ್‌ಶಾಟ್‌ ಕಳುಹಿಸಿದ್ದೇನೆ. ಅದರಲ್ಲಿ ನೀವೇ ನೋಡಿ ನಾನು ಅವರಿಗೆ ಕಾಲ್‌ ಮಾಡಿದ್ದಾ ಅಥವಾ ಅವರು ನನಗೆ ಕಾಲ್‌ ಮಾಡಿದ್ದಾ ಅಂತ. ಬೇಕಾದರೆ ಅವರ ವಾಟ್ಸಪ್‌ ಕಾಲ್‌ ಚೆಕ್ ಮಾಡಿ.

    ಅದಲ್ಲದೇ ಹರೀಶ್ ಪೂವಯ್ಯ ಇವನು ಮಾರ್ಚ್ 11 ಕ್ಕೆ ಪೆರ್ಮೆರ ಕೊಡವ ಹಾಗೂ ನಂಗ ಕೊಡಗ್ ರ ಕೊಡವ ಮಕ್ಕ ಗ್ರೂಪಿನಲ್ಲಿ ಪುನಃ ಪುನಃ ನಮ್ಮ ಫೋಟೋ ಹಾಕಿ ಕಿಡಿಗೇಡಿಗಳು ಅಂತ ನಮ್ಮ ತೇಜೋವಧೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ತೆನ್ನೀರ ಮಹೀನಾ. ಅವನು ಬರೆದ ಆರ್ಟಿಕಲ್‌ ಅನ್ನು ಕೆಲವು ರಾಜಕೀಯ ಪ್ರೇರಿತ ಜನರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಮ್ಮ ತೇಜೋವಧೆ ಮಾಡುತ್ತಿದ್ದಾರೆ. ಅದು ಕೂಡಾ ಜಾಮೀನು ಆಗಿ ಎಫ್‌ಐಆರ್‌ ಮೇಲೆಯೇ ಮಾನ್ಯ ಹೈಕೋರ್ಟ್‌ನಿಂದ ತಡೆ ಬಂದ ಮೇಲೆ ಕೂಡಾ ಇವರು ನಮ್ಮನ್ನು ಕಿಡಿಗೇಡಿಗಳು ಅಂತ ಕರೆಯೋದು ಎಷ್ಟು ಸರಿ? ಕೆಲವು ಮೂಲಗಳಿಂದ ತಿಳಿದ ವಿಷಯ ಏನೆಂದರೆ, ನಮ್ಮ ಮೇಲೆ ರೌಡಿ ಶೀಟರ್ ಓಪನ್‌ ಮಾಡುವ ಹುನ್ನಾರ ಕೂಡಾ ನಡೆದಿದೆ. ಇವರಿಗೆಲ್ಲಾ ಸರಿಯಾದ ಶಿಕ್ಷೆ ಆಗಬೇಕು. ಆಗಲೇ ನನ್ನ ಸಾವಿಗೆ ನ್ಯಾಯ ದೊರಕುವುದು.

    ಕರ್ನಾಟಕ ಬಿಜೆಪಿ ಕುಟುಂಬಕ್ಕೆ ಹಾಗೂ ಕಾರ್ಯಕರ್ತರಲ್ಲಿ ನನ್ನ ಒಂದು ಬೇಡಿಕೆ. ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ನನ್ನ ಕುಟುಂಬಕ್ಕೆ ನಿಮ್ಮ ಕೈಲಾದಷ್ಟು ಸಾಮಾಜಿಕವಾಗಿ, ಹಾಗೂ ಆರ್ಥಿಕವಾಗಿ (ಪ್ರತೀ ಒಬ್ಬರು ಒಂದು ರೂಪಾಯಿ ಕೊಟ್ಟರೂ ಅದು ನನ್ನ ಮಡದಿಯ ಹಾಗೂ ಮಗಳ ಭವಿಷ್ಯಕ್ಕೆ ಸಹಾಯವಾಗುತ್ತೆ) ಸಹಾಯ ಮಾಡಿ ನನ್ನ ತಾಯಿ, ಮಡದಿ, ಮಗಳು ಹಾಗೂ ನಮ್ಮ ಕುಟುಂಬಕ್ಕೆ ನನ್ನ ಸಾವಿನ ಸಮಯದಲ್ಲಿ ಟರ್ಚರ್‌ ಕೊಡದೇ ಎಲ್ಲಾ ಕಾರ್ಯ ಸುಸೂತ್ರವಾಗಿ ನಡೆಯಲು ಸಹಾಯ ಮಾಡಿ.

    ಇದು ನನ್ನ ಕಳಕಳಿಯ ವಿನಂತಿ. ಯಾರೂ ಕೂಡಾ ನನ್ನ ಸಾವಿಗೆ ರಜೆ ಹಾಕಿ ದೂರದೂರಿಂದ ಬರುವ ಅವಶ್ಯಕತೆ ಇಲ್ಲ. ನೀವೆಲ್ಲಿದ್ದೀರೋ ಅಲ್ಲಿಂದಲೇ ನಮ್ಮ ಕುಟುಂಬಕ್ಕೆ ಆಶೀರ್ವದಿಸಿ. ಚಲನ್ ಅಣ್ಣ, ವಿಷ್ಣು ಅಣ್ಣ, ಹಾಗೂ ಸಚಿನ್ ಅಣ್ಣ ನನ್ನ ಮನೆಯವರೊಂದಿಗೆ ನಿಂತು ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಡಿ. ನನ್ನ ಮೇಲೆ ಎಫ್‌ಐಆರ್‌ ಹಾಕಿದಾಗ ನನ್ನ ಬೆಂಬಲಕ್ಕೆ ನಿಂತ ಪ್ರತಾಪ್ ಸಿಂಹ, ಕೆಜಿ ಬೋಪಯ್ಯ, ಅಪ್ಪಚ್ಚು ರಂಜನ್, ಚಲನ್, ಸಚಿನ್, ರಾಕೇಶ್ ದೇವಯ್ಯ, ಅಡ್ವೋಕೇಟ್ ನಿಶಾಂತ್, ಅಡ್ವೋಕೇಟ್ ಮೋಹನ್, ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು.

    ನನ್ನ ಸಾವು ಮುಂದೆ ಆಗುವ ರಾಜಕೀಯ ಪ್ರೇರಿತ ಎಫ್‌ಐಆರ್‌ ಒಂದು ಪಾಠವಾಗಬೇಕು ಹಾಗೂ ಪೊಲೀಸ್ ನವರು ಸ್ವಲ್ಪ ವಿಚಾರ ಮಾಡಿ ಎಫ್‌ಐಆರ್‌ ಹಾಕಬೇಕು. ಯಾರೋ ಒಬ್ಬರು ದೂರು ದಾಖಲಿಸಿದರು ಅಂತ ಸುಖಾ ಸುಮ್ಮನೆ ಎಫ್‌ಐಆರ್‌ ಹಾಕುವುದು ಎಷ್ಟು ಸರಿ?

    ಈ ಮೆಸೇಜ್ ಅನ್ನು ಎಲ್ಲಾ ಸಾಮಾಜಿಕ ಜಾಲತಣದಲ್ಲಿ ಹಾಕಿ. ಇದರಿಂದಾಗಿ ಅಮಾಯಕರ ಮೇಲೆ ರಾಜಕೀಯ ಪ್ರೇರಿತ ಎಫ್‌ಐಆರ್‌ ಹಾಕುವುದು ಕೊನೆಗೊಳ್ಳಲಿ. ನಾನು ನಮ್ಮ ಮನೆಯವರಿಗೆ ಏನೂ ಬರೆಯುತಿಲ್ಲ, ಯಾಕೆಂದರೆ ನನಗೆ ಅವರಿಗೆ ಏನು ಹೇಳುವುದೆಂದು ತಿಳಿಯುತಿಲ್ಲ.

    ಎಲ್ಲರೂ ಯೋಚಿಸಬಹುದು ಘಟನೆ ಆಗಿ ಇಷ್ಟು ದಿನ ಆದ ಮೇಲೆ ಇವನಿಗೆ ಏನಾಯಿತು ಅಂತ, ನಾನು ಒಮ್ಮೆ ನನ್ನ ಮನೆಗೆ ಹೋಗಿ ಬರೋದನ್ನ ಕಾಯುತಿದ್ದೆ. ನನ್ನ ಮನೆಗೆ ಹೋಗಿ ಎಲ್ಲಾ ಕುಟುಂಬದವರ ಜೊತೆ ಕಳೆದ ಒಳ್ಳೆಯ ಸಮಯದ ನೆನಪಿನಲ್ಲಿ ನಾನು ವಿದಾಯ ಹೇಳುತಿದ್ದೇನೆ. ಸಾಧ್ಯವಾದರೆ ಎಲ್ಲರೂ ನನ್ನನ್ನು ಕ್ಷಮಿಸಿಬಿಡಿ.

    ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಹೋಗುತಿದ್ದೇನೆ. ಇಂತಿ ನಿಮ್ಮ ವಿನಯ್‌ ಕೆಎಸ್‌

  • ಚಾ.ನಗರ| ಮದುವೆಗೆ ಹೆಣ್ಣು ಸಿಗದೇ ಖಿನ್ನತೆ – ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರಾಣಿಬಿಟ್ಟ ಯುವಕ

    ಚಾ.ನಗರ| ಮದುವೆಗೆ ಹೆಣ್ಣು ಸಿಗದೇ ಖಿನ್ನತೆ – ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರಾಣಿಬಿಟ್ಟ ಯುವಕ

    – ತಾಯಿ ಕಣ್ಣೆದುರೇ ಯುವಕ ದಾರುಣ ಸಾವು

    ಚಾಮರಾಜನಗರ: ಮದುವೆಯಾಗಲು ಹೆಣ್ಣು ಸಿಗಲಿಲ್ಲ ಅಂತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರಾಣ ಬಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಟಿಸಿ ಹುಂಡಿ ಬಳಿ ನಡೆದಿದೆ.

    ಮಸಣಶೆಟ್ಟಿ (27) ಸಾವನ್ನಪ್ಪಿದ ಯುವಕ. ಹೆಣ್ಣು ಸಿಗದೇ ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯುತ್ ಕಂಬ ಏರಿದ್ದ. ಕಂಬದಿಂದ ಕೆಳಗಿಳಿಯುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಇಳಿಯುವ ವೇಳೆ ಆಯತಪ್ಪಿ ವಿದ್ಯುತ್ ವೈರ್ ತಗುಲಿ ಯುವಕ ಸಾವನ್ನಪ್ಪಿದ್ದಾನೆ.

    ಮದುವೆಗೆ ಹೆಣ್ಣು ಸಿಕ್ಕಿಲ್ಲವೆಂದು ಮಸಣಶೆಟ್ಟಿ ಕುಡಿತದ ದಾಸನಾಗಿದ್ದ. ಮಸಣಶೆಟ್ಟಿಯದ್ದು ಚಿಕ್ಕಮನೆ ಹಾಗೂ ಆಸ್ತಿ ಜಮೀನು ಇಲ್ಲ ಎಂಬ ಕಾರಣ ಎರಡು ಬಾರಿ ನೋಡಿ ಬಂದ ಹೆಣ್ಣಿನ ಕಡೆಯವರು ರಿಜೆಕ್ಟ್ ಮಾಡಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಾಗಿದ್ದ. ಇಂದು ಬೆಳಗ್ಗೆ ಹೈಟೆನ್ಷನ್ ಕಂಬ ಏರಿದ್ದ. ಕಂಬವನ್ನು ಏರಿ ತನ್ನ ತಾಯಿ ಎದುರೇ ಸಾವಿಗೆ ಶರಣಾಗಿದ್ದಾನೆ.

    ಮಗನ ಸಾವನ್ನ ಕಣ್ಣಾರೆ ಕಂಡು ತಾಯಿ ದಿಗ್ಭ್ರಾಂತರಾಗಿದ್ದಾರೆ. ಸದ್ಯ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಮಸಣಶೆಟ್ಟಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಪುತ್ರರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ನೇಣಿಗೆ ಶರಣಾದ ತಂದೆ

    ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಪುತ್ರರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ನೇಣಿಗೆ ಶರಣಾದ ತಂದೆ

    ಹೈದರಾಬಾದ್‌: ಪರೀಕ್ಷೆಯಲ್ಲಿ (Exam) ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಮಕ್ಕಳನ್ನು ಒಎನ್‌ಜಿಸಿ ಉದ್ಯೋಗಿಯೊಬ್ಬ ಹತ್ಯೆಗೈದ ಘಟನೆ ಆಂಧ್ರಪ್ರದೇಶದ (Andhra Pradesh) ಕಾಕಿನಾಡದಲ್ಲಿ ನಡೆದಿದೆ.

    37 ವರ್ಷದ ಒಎನ್‌ಜಿಸಿ ಉದ್ಯೋಗಿ ಚಂದ್ರಶೇಖರ್‌ ಇಬ್ಬರು ಅಪ್ರಾಪ್ತ ಪುತ್ರರನ್ನು ಕೊಂದು ನಂತರ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ತಂದೆ ವಿ. ಚಂದ್ರ ಕಿಶೋರ್ ಇಬ್ಬರು ಬಾಲಕರನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನಟ ಪ್ರಭುದೇವ

     

    ಪುತ್ರರ ಶೈಕ್ಷಣಿಕ ಸಾಧನೆಯಿಂದ ಚಂದ್ರಶೇಖರ್‌ ನಿರಾಶೆಗೊಂಡಿದ್ದರು. ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ಕಷ್ಟವಾಗಲಿದೆ ಎಂದು ಭಾವಿಸಿ ಮಕ್ಕಳನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ವಿಧಿವಿಜ್ಞಾನ ತಂಡ ಮನೆಗೆ ಆಗಮಿಸಿ ಪರಿಶೀಲಿಸಿದೆ. ಈ ಘಟನೆಗೆ ನಿಖರವಾದ ಕಾರಣಗಳನ್ನು ಪತ್ತೆ ಹಚ್ಚಲು  ತನಿಖೆ ಆರಂಭವಾಗಿದೆ.

    ಕಿಶೋರ್ ಅವರ ಪತ್ನಿಯ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪತಿ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಮಕ್ಕಳು ಬಕೆಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

     

  • ಪರೀಕ್ಷೆಯಲ್ಲಿ ನಕಲು| ಪೋಷಕರ ಸಮ್ಮುಖದಲ್ಲಿ ಸಿಸಿಟಿವಿ ಪರೀಕ್ಷಿಸಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿನಿ

    ಪರೀಕ್ಷೆಯಲ್ಲಿ ನಕಲು| ಪೋಷಕರ ಸಮ್ಮುಖದಲ್ಲಿ ಸಿಸಿಟಿವಿ ಪರೀಕ್ಷಿಸಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿನಿ

    ಬಾಗಲಕೋಟೆ: ವಿಜ್ಞಾನ ಪರೀಕ್ಷೆಯಲ್ಲಿ (Science Exam) ವಿದ್ಯಾರ್ಥಿನಿ ನಕಲು ಮಾಡಿ ಸಿಕ್ಕು ಬಿದ್ದು, ಪೋಷಕರ‌ ಸಮ್ಮುಖದಲ್ಲಿ ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ (Student) ಕೆರೆ ನೀರಿಗೆ ಬಿದ್ದು ಜೀವ ಬಿಟ್ಟಿರುವ ಘಟನೆ ಮುಧೋಳ (Mudhol) ನಗರದಲ್ಲಿ ನಡೆದಿದೆ.

    ಶಾರದಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ವರ್ಷ ಓದುತ್ತಿದ್ದ ತೇಜಸ್ವಿನಿ ದೊಡಮನಿ ನೀರಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಜಾತ್ರೆಯಲ್ಲಿ ಕೇಂದ್ರ ಸಚಿವರ ಮಗಳಿಗೆ ಕಿರುಕುಳ – ಓರ್ವ ಆರೋಪಿ ಬಂಧನ

     

    ಫೆ.27 ರಂದು ಕಾಲೇಜಿನಲ್ಲಿ ಪರೀಕ್ಷೆ ನಡೆದಿತ್ತು. ಈ ವೇಳೆ ನಕಲು (Copy) ಮಾಡುವ ತೇಜಸ್ವಿನಿ ಸಿಕ್ಕಿ ಬಿದ್ದಿದ್ದಳು. ಕೂಡಲೇ ಸಿಬ್ಬಂದಿ ತೇಜಸ್ವಿನಿಯನ್ನು ಪ್ರಶ್ನೆ ಮಾಡಿ ಬುದ್ಧಿವಾದ ಹೇಳಿದ್ದರು.

    ಬುದ್ಧಿವಾದ ಹೇಳಿದ ವಿಚಾರವನ್ನು ತೇಜಸ್ವಿನಿ ಮನೆಗೆ ಬಂದು ತಿಳಿಸಿದ್ದಾಳೆ. ವಿಚಾರ ತಿಳಿದ ಪೋಷಕರು ಮರುದಿನ ಶಾಲೆಗೆ ಬಂದು ಮಗಳನ್ನು ಪ್ರಶ್ನಿಸಿದ್ದು ಯಾಕೆ ಎಂದು ಕೇಳಿದ್ದಾರೆ. ಇದಕ್ಕೆ ಸಿಬ್ಬಂದಿ ಪರೀಕ್ಷೆಯಲ್ಲಿ ಆಕೆ ನಕಲು ಮಾಡುತ್ತಿದ್ದಳು ಎಂಬ ವಿಚಾರವನ್ನು ತಿಳಿಸುತ್ತಾರೆ.

     

    ಸಿಬ್ಬಂದಿ ಹೇಳಿದರೂ ತೇಜಸ್ವಿನಿ ನಾನು ನಕಲು ಮಾಡಿಲ್ಲ ಎಂದು ವಾದಿಸಿದ್ದಾಳೆ. ಈ ಸಂದರ್ಭದಲ್ಲಿ ಕಾಲೇಜು ಸಿಬ್ಬಂದಿ ಸಿಸಿ ಕ್ಯಾಮೆರಾ ಪರೀಕ್ಷಿಸಲು ಮುಂದಾದಾಗ ಕಾಲೇಜಿನಿಂದಲೇ ತೇಜಸ್ವಿನಿ ಓಡಿ ಹೋಗಿದ್ದಳು. ಈ ಬಗ್ಗೆ ತೇಜಸ್ವಿನಿ ಪೋಷಕರು ಮುಧೋಳ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

    ಇಂದು ತೇಜಸ್ವಿನಿ ನಗರದ ಮಹಾರಾಣಿ ಕರೆಯಲ್ಲಿ ಶವವಾಗಿ‌ ಪತ್ತೆಯಾಗಿದ್ದಾಳೆ. ತನಿಖೆ ನಡೆಸಿದ ಪೊಲೀಸರು ಕಾಲೇಜಿನಿಂದ ಹೊರಹೋದ ರಸ್ತೆಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ತೇಜಸ್ವಿನಿ ವೇಗವಾಗಿ ಕೆರೆ ಕಡೆ ಹೆಜ್ಜೆ ಹಾಕುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಗ ತೇಜಸ್ವಿನಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

     

  • ಕೋಲ್ಕತ್ತಾ| ತಂದೆ, ಮಗಳು ನೇಣಿಗೆ ಶರಣು – ಮಗಳ ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ

    ಕೋಲ್ಕತ್ತಾ: ಕೋಲ್ಕತ್ತಾದ (Kolkata) ಪರ್ಣಶ್ರೀ (Parnashree) ಪ್ರದೇಶದಲ್ಲಿ ತಂದೆ, ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮಗಳ ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಪಶ್ಚಿಮ ಬಂಗಾಳದ (West Bengal) ದಕ್ಷಿಣ 24 ಪರಗಣ ಜಿಲ್ಲೆಯ ರಾಮೇಶ್ವರಪುರ ನಿವಾಸಿಗಳಾದ ಸಜನ್ ದಾಸ್ (53), ಶ್ರೀಜಾ ದಾಸ್ (22) ತಂದೆ, ಮಗಳು ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಮಲಾ ಪೌಲ್ ಪ್ಯಾಂಟ್‌ಲೆಸ್ ಫೋಟೋಶೂಟ್ ನೋಡಿ ಕಾಲೆಳೆದ ನೆಟ್ಟಿಗರು

    ಸಜನ್, ಚಿಮಣಿ ಹಾಗೂ ವಾಟರ್ ಪ್ಯೂರಿಫೈಯರ್‌ಗಳ ರಿಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಮಗಳು ಶ್ರೀಜಾ ಹುಟ್ಟಿನಿಂದಲೇ ಆಟಿಸಂ ಖಾಯಿಲೆಯಿಂದ ಬಳಲುತ್ತಿದ್ದರಿಂದ ನಿರಂತರ ಔಷಧಿಗಳನ್ನು ಪಡೆಯುತ್ತಿದ್ದಳು. ಸಜನ್ ತಮ್ಮ ಮಗಳ ಅನಾರೋಗ್ಯದ ಬಗ್ಗೆ ಮತ್ತು ವೈದ್ಯಕೀಯ ಖರ್ಚಿನ ಬಗ್ಗೆ ಚಿಂತಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 15 ವರ್ಷ ಹಳೆಯ ವಾಹನಗಳಿಗೆ ಇನ್ಮುಂದೆ ಸಿಗಲ್ಲ ಪೆಟ್ರೋಲ್‌, ಡೀಸೆಲ್‌ – ದೆಹಲಿಯಲ್ಲಿ ಹೊಸ ರೂಲ್ಸ್‌

    ಸಜನ್ ಫೆ.28 ರಂದು ಮಗಳನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಧ್ಯಾಹ್ನ ಆಸ್ಪತ್ರೆಗೆ ತಲುಪಿರುವ ಬಗ್ಗೆ ಪತ್ನಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಸಜನ್, ಪತ್ನಿಯ ಕರೆ ಸ್ವೀಕರಿಸದಿದ್ದಾಗ ಗಾಬರಿಗೊಂಡ ಪತ್ನಿ ಕುಟುಂಬದ ಸ್ನೇಹಿತ ರಂಜಿತ್ ಕುಮಾರ್ ಸಿಂಗ್‌ಗೆ ಮಾಹಿತಿ ನೀಡಿದ್ದರು. ರಂಜಿತ್, ಸಜನ್ ಅಂಗಡಿ ಬಳಿ ತೆರಳಿ ಬಾಗಿಲು ತೆರೆದಾಗ ತಂದೆ, ಮಗಳು ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ. ಬಳಿಕ ಅವರು ಸಜನ್ ಪತ್ನಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾ.8 ರಿಂದ ಮಣಿಪುರದ ಮುಕ್ತ ಸಂಚಾರಕ್ಕೆ ಅಮಿತ್ ಶಾ ಸೂಚನೆ

    ಘಟನಾ ಸ್ಥಳಕ್ಕೆ ಪರ್ಣಶ್ರೀ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು, ವರದಿಗಳ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.