Tag: suicide

  • ಕೆ ಸುಧಾಕರ್‌ ಹೆಸರು ಬರೆದು ಕಾರು ಚಾಲಕ ಆತ್ಮಹತ್ಯೆ

    ಕೆ ಸುಧಾಕರ್‌ ಹೆಸರು ಬರೆದು ಕಾರು ಚಾಲಕ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಮಾಜಿ ಸಚಿವ, ಬಿಜೆಪಿ ಸಂಸದ ಸುಧಾಕರ್‌ (K. Sudhakar) ಹೆಸರನ್ನು ಡೆತ್‌ನೋಟ್‌ನಲ್ಲಿ (Death Note) ಉಲ್ಲೇಖಿಸಿ ಕಾರು ಚಾಲಕರೊಬ್ಬರು (Car Driver) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಬಾಬು (32) ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲಾ ಪಂಚಾಯತಿ ಸಿಇಒ ಕಾರು ಚಾಲಕನಾಗಿದ್ದ ಬಾಬು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತಿ ಸಭಾಂಗಣದ ಹಿಂಭಾಗದಲ್ಲಿರುವ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನನ್ನ ಸಾವಿಗೆ ಸಂಸದ ಡಾ ಕೆ ಸುಧಾಕರ್ ಕಾರಣ. ಚಿಕ್ಕಕಾಡಿಗಾನಹಳ್ಳಿ ನಾಗೇಶ್ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 25 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತಿ ಲೆಕ್ಕ ಸಹಾಯಕರ ವಿರುದ್ದವೂ ಡೆತ್‌ ನೋಟ್‌ನಲ್ಲಿ ಬಾಬು ಹಲವು ಆರೋಪ ಮಾಡಿದ್ದಾರೆ.

    ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

  • ಫೇಸ್‌ಬುಕ್‌ನಲ್ಲಿ ವಿದಾಯದ ಪೋಸ್ಟ್ ಹಾಕಿ ಅಂತರ್ಜಾತಿ ವಿವಾಹವಾಗಿದ್ದ ಜೋಡಿ ಆತ್ಮಹತ್ಯೆ

    ಫೇಸ್‌ಬುಕ್‌ನಲ್ಲಿ ವಿದಾಯದ ಪೋಸ್ಟ್ ಹಾಕಿ ಅಂತರ್ಜಾತಿ ವಿವಾಹವಾಗಿದ್ದ ಜೋಡಿ ಆತ್ಮಹತ್ಯೆ

    ಪಾಟ್ನಾ: ಮದುವೆಯಾದ 8 ತಿಂಗಳಿಗೆ ಅಂತರ್ಜಾತಿ ಮದುವೆಯಾಗಿದ್ದ ಜೋಡಿ ಫೇಸ್‌ಬುಕ್‌ನಲ್ಲಿ (Facebook) ವಿದಾಯದ ಪೋಸ್ಟ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ (Bihar)  ಬೇಗುಸರಾಯ್‌ನಲ್ಲಿ ನಡೆದಿದೆ.

    ಬಹದ್ದೂರ್‌ಪುರ ಗ್ರಾಮದ ಶುಭಂ ಕುಮಾರ್ (19) ಹಾಗೂ ಆತನ ಪತ್ನಿ ಮುನ್ನಿ ಕುಮಾರಿ (18) ಮೃತರೆಂದು ಗುರುತಿಸಲಾಗಿದೆ. ಕೆಲ ವರ್ಷದ ಹಿಂದೆ ಇನ್ಸ್ಟಾಗ್ರಾಂ ಮೂಲಕ ಇವರಿಬ್ಬರ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿ, 2024ರ ಅಕ್ಟೋಬರ್‌ನಲ್ಲಿ ಮನೆಯವರ ವಿರೋಧದ ನಡುವೆಯೇ ಇಬ್ಬರು ಓಡಿಹೋಗಿ ವಿವಾಹವಾಗಿದ್ದರು. ಇದನ್ನೂ ಓದಿ: Tumakuru | ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

    ಮದುವೆಯ ನಂತರ, ಮುನ್ನಿ ಮನೆಯವರು ಇದನ್ನು ವಿರೋಧಿಸಿದ್ದರು. ಅಲ್ಲದೇ ರಾಜಿ ಪಂಚಾಯಿತಿ ನಡೆಸಿ, ಯುವತಿಯ ಸಿಂಧೂರವನ್ನು ಅಳಿಸಿ, ಆಕೆಯನ್ನು ಮನೆಯವರು ಕರೆದುಕೊಂಡು ಹೋಗಿದ್ದರು. ಬಳಿಕ ಡಿಸೆಂಬರ್‌ನಲ್ಲಿ ಮತ್ತೆ ಒಂದಾಗಿ, ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ

    ದಂಪತಿಯ ಸಂಬಂಧಿಕರೊಬ್ಬರು ಮಗುವಿನ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿ, ಶುಭಂ ಮನೆಗೆ ಬಂದಿದ್ದರು. ಈ ವೇಳೆ ಅವರು ಎಷ್ಟೇ ಬಾಗಿಲು ಬಡಿದರೂ, ತೆರೆಯದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದಾಗ ಶುಭಂ ನೇಣು ಬಿಗಿದುಕೊಂಡಿದ್ದ. ಆತನ ಪತ್ನಿ ಮುನ್ನಿ ಹಾಸಿಗೆಯ ಮೇಲೆ ನಿರ್ಜೀವವಾಗಿ ಬಿದ್ದಿದ್ದದನ್ನು ಗಮನಿಸಿದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ನಟ ಪ್ರಥಮ್‌ಗೆ ಜೀವಬೆದರಿಕೆ ಕೇಸ್‌ – ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಇಬ್ಬರ ವಿರುದ್ಧ FIR

    ಈ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ಶುಭಂ, ಇಬ್ಬರ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ `ಅಲ್ವಿದಾ’ ಅಂದರೆ ಗುಡ್‌ಬೈ ಎಂದು ಬರೆದುಕೊಂಡಿದ್ದ ಎನ್ನಲಾಗಿದೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಬಹದ್ದೂರ್‌ಪುರ ಗ್ರಾಮದಲ್ಲಿ ವಿವಾಹಿತ ದಂಪತಿಗಳಾದ ಶುಭಂ ಕುಮಾರ್ ಮತ್ತು ಮುನ್ನಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಘಟನೆ ಸಂಬಂಧ ತನಿಖೆ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

  • Bengaluru | ರಸ್ತೆಬದಿ ನಿಂತಿದ್ದ ವಾಹನಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

    Bengaluru | ರಸ್ತೆಬದಿ ನಿಂತಿದ್ದ ವಾಹನಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

    ಬೆಂಗಳೂರು: ರಸ್ತೆಬದಿ ನಿಂತಿದ್ದ ವಾಹನಕ್ಕೆ ತಡರಾತ್ರಿ ನೇಣು ಬಿಗಿದುಕೊಂಡು ಯುವಕ (Youth) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ.

    ನವೀನ್ (30) ಆತ್ಮಹತ್ಯೆಗೆ ಶರಣಾದ ಯುವಕ. ನವೀನ್ ಮೊದಲಿಗೆ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ರಕ್ತ ಸ್ರಾವವಾಗಿದ್ದರೂ ಸಾವನ್ನಪ್ಪದ ಹಿನ್ನೆಲೆ ರಸ್ತೆಬದಿ ನಿಂತಿದ್ದ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ | ಲೋಕಸಭೆಯಲ್ಲಿಂದು 16 ಗಂಟೆಗಳ ಮ್ಯಾರಥಾನ್‌ ಚರ್ಚೆ, ಪ್ರಧಾನಿ ಮೋದಿ ಭಾಗಿ

    ನವೀನ್ ಈ ಹಿಂದೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಪೊಲೀಸರು ಪತ್ತೆಮಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ನಿರಂತರ ಮಳೆ – ಅಪಾಯಮಟ್ಟ ಮೀರಿ ಹರಿಯುತ್ತಿದೆ ತುಂಗಭದ್ರಾ ನದಿ

  • 2 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ನೇಣಿಗೆ ಶರಣು

    2 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ನೇಣಿಗೆ ಶರಣು

    ಮಂಡ್ಯ: ಎರಡು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ (Love Marriage) ಗೃಹಿಣಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಪಾಂಡವಪುರ (Pandavapura) ತಾಲೂಕಿನ ಕೆನ್ನಾಳುನಲ್ಲಿ ನಡೆದಿದೆ.

    ಪೂಜಾ (25) ಸಾವಿಗೀಡಾದ ಗೃಹಿಣಿ. ಪೋಷಕರ ವಿರೋಧದ ನಡುವೆಯೂ ಕೆನ್ನಾಳು ಗ್ರಾಮದ ಅಭಿನಂದನ್ ಜೊತೆ ಪೂಜಾ ಮದುವೆಯಾಗಿದ್ದಳು. ಮದುವೆ ಬಳಿಕ ಗಂಡನ ಮನೆಯವರಿಂದ ಕಿರುಕುಳ ನೀಡಿದ್ದಾರೆ ಎಂದು ಪೂಜಾ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಸೌಮ್ಯ ರೇಪ್ & ಮರ್ಡರ್ ಕೇಸ್ | ಕಣ್ಣೂರು ಸೆಂಟ್ರಲ್ ಜೈಲ್‌ನಿಂದ ಪರಾರಿಯಾಗಿದ್ದ ಆರೋಪಿ ಅರೆಸ್ಟ್

    ಗುರುವಾರ ರಾತ್ರಿ ಕೊಲೆ ಮಾಡಿ ನೇಣು ಬಿಗಿದಿದ್ದಾರೆ. ಗಂಡನೇ ಕೊಲೆ ಮಾಡಿ ಈ ಕೃತ್ಯ ಎಸಗಿದ್ದಾನೆ ಎಂದು ಪೂಜಾ ಕುಟುಂಬಸ್ಥರು ದೂರಿದ್ದಾರೆ. ಇದನ್ನೂ ಓದಿ: ಅಂದು ಇಂಡಿಯಾ ಔಟ್ ಇಂದು ಸೇನಾ ಕಚೇರಿಯಲ್ಲೇ ದೊಡ್ಡ ಕಟೌಟ್| ಇದು ಮೋದಿ ಮ್ಯಾಜಿಕ್

    ಪೂಜಾ ಮತಪಟ್ಟ ಬಳಿಕವೂ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ. ತಡ ಯಾಕೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಪೋಷಕರ ಪ್ರತಿಭಟನೆಯ ಬಳಿಕ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

  • ಮಗನ ಸಾವಿನಿಂದ ಮನನೊಂದ ತಾಯಿ – ಮೃತದೇಹ ಸಿಗುವ ಮುನ್ನವೇ ಕೆರೆಗೆ ಹಾರಿ ಆತ್ಮಹತ್ಯೆ

    ಮಗನ ಸಾವಿನಿಂದ ಮನನೊಂದ ತಾಯಿ – ಮೃತದೇಹ ಸಿಗುವ ಮುನ್ನವೇ ಕೆರೆಗೆ ಹಾರಿ ಆತ್ಮಹತ್ಯೆ

    ಚಿಕ್ಕಮಗಳೂರು: ಮಗನ ಸಾವಿನಿಂದ ಮನನೊಂದ ತಾಯಿ, ಮೃತದೇಹ ಸಿಗುವ ಮುನ್ನವೇ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ (Kalasa) ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ.

    ಮೃತರನ್ನ ರವಿಕಲಾ (48) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಭದ್ರಾ ನದಿಗೆ ಬಿದ್ದ ಪರಿಣಾಮ ರವಿಕಲಾ ಪುತ್ರ ಶಮಂತ್ (23) ಸಾವನ್ನಪ್ಪಿದ್ದ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಮತ್ತೊಂದು ರಹಸ್ಯ ಸ್ಫೋಟ, ಕೊಲೆಯಾದ 15 ನಿಮಿಷಕ್ಕೆ ಎ1 ಜಗ್ಗ ಎಸ್ಕೇಪ್‌

    ಮಲೆನಾಡಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಪಿಕಪ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದು ಪಕ್ಕದಲ್ಲೇ ಹರಿಯುತ್ತಿದ್ದ ಭದ್ರಾ ನದಿಗೆ (Bhadra River) ಉರುಳಿ ಬಿದ್ದು ಶಮಂತ್ ಸಾವನ್ನಪ್ಪಿದ್ದ. ಶಮಂತ್ ಪಿಕಪ್‌ನಲ್ಲಿ ಕಾಫಿ ತೋಟಕ್ಕೆ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದ. ಗುರುವಾರ ಸಂಜೆ ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಗ್ರಾಮಕ್ಕೆ ಹೋಗುವಾಗ ಈ ಅವಘಡ ಸಂಭವಿಸಿತ್ತು. ಇದನ್ನೂ ಓದಿ: ರಸ್ತೆ ಕುಸಿದು ಉಕ್ಕಿ ಹರಿದ ನೀರು – ಮಾನವ ಸೇತುವೆ ನಿರ್ಮಿಸಿ 35 ಶಾಲಾ ಮಕ್ಕಳನ್ನು ರಸ್ತೆ ದಾಟಿಸಿದ ಗ್ರಾಮಸ್ಥರು

    ನಿರಂತರ ಮಳೆ ಸುರಿಯುತ್ತಿದ್ದರಿಂದ ಭದ್ರಾ ನದಿಯಿಂದ ಜೀಪ್ ಮೇಲೆತ್ತುವ ಕಾರ್ಯಾಚರಣೆಗೂ ತೊಂದರೆಯಾಗಿತ್ತು. ಭದ್ರಾ ನದಿ ಬಳಿ ಬಂದಿದ್ದ ಶಮಂತ್ ತಾಯಿ ಮಗನ ನೆನೆದು ಕಣ್ಣೀರಿಟ್ಟಿದ್ದರು. ಆದರೆ, ಮಗನ ಮೃತದೇಹ ಸಿಗುವ ಮುನ್ನವೇ ರಾತ್ರಿ ವೇಳೆ ಮನೆಯ ಹಿಂದಿನ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾವೇರಿ ನದಿಗೆ ಹಾರಿ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ – 3 ದಿನಗಳ ಬಳಿಕ ಶವ ಪತ್ತೆ

    ಕಾವೇರಿ ನದಿಗೆ ಹಾರಿ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ – 3 ದಿನಗಳ ಬಳಿಕ ಶವ ಪತ್ತೆ

    ಚಾಮರಾಜನಗರ: ಕಾವೇರಿ ನದಿಗೆ (Cauvery River) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಗ್ರಾಮ ಲೆಕ್ಕಾಧಿಕಾರಿಯ (VA) ಶವ ಮೂರು ದಿನಗಳ ಬಳಿಕ ಪತ್ತೆಯಾದ ಘಟನೆ ಚಾಮರಾಜನಗರ (Chamarajanagara) ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಯಡಕುರಿಯಾ ಬಳಿ ಪತ್ತೆಯಾಗಿದೆ.

    ಕೊಳ್ಳೇಗಾಲ ತಾಲೂಕಿನ ಚೆಲುವನಹಳ್ಳಿ ಗ್ರಾಮದ ನಿವಾಸಿ ನಿರಂಜನ್ ಕುಮಾರ್ ಮೃತರೆಂದು ಗುರುತಿಸಲಾಗಿದೆ. ನಿರಂಜನ್ ಅವರು ಮಂಡ್ಯ ಜಿಲ್ಲೆಯ ಬಿ.ಜಿ ಪುರ ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು. ಇದನ್ನೂ ಓದಿ: ಪ್ರಭು ಚೌಹಾಣ್ ಪುತ್ರ ಯುವತಿಗೆ ವಂಚನೆ ಆರೋಪ – ಇಬ್ಬರೂ ಒಂದೇ ರೂಮ್‌ನಲ್ಲಿದ್ದ ಬಗ್ಗೆ ಸಾಕ್ಷಿ ಬಿಡುಗಡೆ

    ನಿರಂಜನ್ ಕುಮಾರ್, ಜೂನ್ 17ರಂದು ಮಧ್ಯಾಹ್ನವರೆಗೆ ಕರ್ತವ್ಯ ನಿರ್ವಹಿಸಿ, ಬಳಿಕ ಕಾವೇರಿಪುರದ ಕಾವೇರಿ ಸೇತುವೆ ಬಳಿ ತನ್ನ ಬೈಕ್ ನಿಲ್ಲಿಸಿ ನದಿಗೆ ಹಾರಿದ್ದರು ಎಂದು ಹೇಳಲಾಗಿದೆ. ಇದನ್ನೂ ಓದಿ: ಅನುಯಾಯಿಗಳಿಗೆ ಬೆತ್ತದಿಂದ ಹೊಡೆದು, ಮೂತ್ರ ಕುಡಿಸಿದ ಸ್ವಯಂಘೋಷಿತ ಬಾಬಾ

    ನಂತರ, ಅಗ್ನಿಶಾಮಕ ದಳ ಮತ್ತು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ನಿರಂತರ ಹುಡುಕಾಟದ ಬಳಿಕ ನಿರಂಜನ್ ಮೃತದೇಹ ಯಡಕುರಿಯಾ ಬಳಿ ಪತ್ತೆಯಾಗಿದೆ. ಇದೀಗ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಹಮದಾಬಾದ್ | ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ

    ಅಹಮದಾಬಾದ್ | ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ

    ಗಾಂಧಿನಗರ: ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‌ನ (Gujarat) ಅಹಮದಾಬಾದ್‌ನ (Ahmedabad) ಬಾವ್ಲಾ ತಾಲೂಕಿನಲ್ಲಿ ನಡೆದಿದೆ.

    ಮೃತರನ್ನು ಬಾಗೋದರಾ (Bagodara) ಬಸ್ ನಿಲ್ದಾಣದ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ರಿಕ್ಷಾ ಚಾಲಕ ವಿಪುಲ್ ಕಾಂಜಿ ವಾಘೇಲಾ (34), ಅವರ ಪತ್ನಿ ಸೋನಾಲ್ (26), ಮಕ್ಕಳಾದ ಕರೀನಾ ಅಲಿ ಸಿಮ್ರಾನ್ (11), ಮಯೂರ (5) ಮತ್ತು ರಾಜ್‌ಕುಮಾರ್ (8) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಯಾರೀ ಕೇರಳ ನರ್ಸ್‌ ನಿಮಿಷಾ ಪ್ರಿಯಾ; ಯೆಮನ್‌ನಲ್ಲಿ ಗಲ್ಲುಶಿಕ್ಷೆಯೇ ಯಾಕೆ – ಏನಿದು ಸ್ಟೋರಿ!?

    ಈ ಕುಟುಂಬದವರು ಮೂಲತಃ ಧೋಲ್ಕಾದ ಬಾರ್ಕೋಥಾದ ದೇವಿಪೂಜಕ್ ವಾಸ್ ಪ್ರದೇಶದವರಾಗಿದ್ದು, ಸ್ವಲ್ಪ ಸಮಯ ಹಿಂದೆ ಬಾಗೋದ್ರಾಗೆ ಬಂದು ನೆಲೆಸಿದ್ದರು. ವಿಪುಲ್ ಅವರು ಆಟೋ ಓಡಿಸಿ, ಬಂದ ಹಣದಲ್ಲಿ ಜೀವನವನ್ನು ಸಾಗಿಸುತ್ತಿದ್ದರು. ವಿಫುಲ್, ಶನಿವಾರ ತಡರಾತ್ರಿ ಮೂವರು ಮಕ್ಕಳು ಹಾಗೂ ಪತ್ನಿಯೊಂದಿಗೆ ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ | ಬಾಯ್ಸ್ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್ ಕೇಸ್ – ಬಾಗಲಕೋಟೆ ಆರೋಪಿಗೆ ಜಾಮೀನು

    ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ಆರ್ಥಿಕ ಸಮಸ್ಯೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.

  • ಪುಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ – ಕೆಲಸದ ಒತ್ತಡವೇ ಕಾರಣ ಅಂತ ಡೆತ್ ನೋಟ್ ಬರೆದಿಟ್ಟು ಸೂಸೈಡ್

    ಪುಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ – ಕೆಲಸದ ಒತ್ತಡವೇ ಕಾರಣ ಅಂತ ಡೆತ್ ನೋಟ್ ಬರೆದಿಟ್ಟು ಸೂಸೈಡ್

    ಮುಂಬೈ: ಕೆಲಸದ ಒತ್ತಡವೇ ಕಾರಣ ಅಂತ ಡೆತ್‌ನೋಟ್ ಬರೆದಿಟ್ಟು ಬ್ಯಾಂಕ್ ಮ್ಯಾನೇಜರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ (Pune) ನಡೆದಿದೆ.

    ಜಿಲ್ಲೆಯ ಬಾರಾಮತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ (Bank Manger) ಶಿವಶಂಕರ್ ಮಿತ್ರ (40) ಕಚೇರಿಯಲ್ಲಿಯೇ ಗುರುವಾರ ತಡರಾತ್ರಿ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಇದನ್ನೂ ಓದಿ: 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ವ್ಯಾಕ್ಸಿನ್ – ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

    ಮಿತ್ರ ಅವರು ಆರೋಗ್ಯ ಸಮಸ್ಯೆಗಳು ಮತ್ತು ಕೆಲಸದ ಒತ್ತಡದಿಂದಾಗಿ ಜುಲೈ 11ರಂದು ಬ್ಯಾಂಕ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಆಫೀಸ್‌ನ ನೋಟಿಸ್ ಪಿರೇಡನ್ನು ಮಾಡುತ್ತಿದ್ದರು. ಇದನ್ನೂ ಓದಿ: ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ

    ಸಂಜೆ ಕೆಲಸದ ಮುಗಿದ ಬಳಿಕ ಮಿತ್ರ ಅವರು ನಾನೇ ಬ್ಯಾಂಕ್ ಬೀಗ ಹಾಕುವುದಾಗಿ ಹೇಳಿ ಎಲ್ಲರನ್ನು ಕಳುಹಿಸಿದ್ದರು. ಅಲ್ಲದೇ ಈ ಮೊದಲೇ ಅವರು ಸಹೊದ್ಯೋಗಿಯೊಂದಿಗೆ ಹಗ್ಗ ತರಲು ಹೇಳಿದ್ದರು ಎನ್ನಲಾಗಿದೆ. ಬ್ಯಾಂಕ್ ವಾಚ್‌ಮ್ಯಾನ್ ಸಹ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು.

    ಇದನ್ನೇ ಕಾಯುತ್ತಿದ್ದ ಮಿತ್ರ ಅವರು 10 ಗಂಟೆ ಸುಮಾರಿಗೆ ಅದೇ ಹಗ್ಗದಿಂದ ಕಚೇರಿಯ ಸೀಲಿಂಗ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ದೃಶ್ಯವು ಬ್ಯಾಂಕ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಾಸನ | 2 ಕಾರುಗಳ ನಡುವೆ ಭೀಕರ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ

    ಮಿತ್ರ ಅವರು ಮನೆಗೆ ಹಿಂತಿರುಗದಿದ್ದಾಗ ಅವರ ಪತ್ನಿ ಫೋನ್ ಕರೆ ಸಹ ಮಾಡಿದ್ದರು. ಇದ್ಯಾವುದಕ್ಕೂ ಪ್ರತಿಕ್ರಿಯಿಸದ ಕಾರಣ ಗಾಬರಿಗೊಂಡ ಪತ್ನಿ ಬ್ಯಾಂಕ್ ಬಳಿ ತೆರಳಿದ್ದರು. ಬ್ಯಾಂಕ್ ಒಳಗಡೆ ಲೈಟ್ ಉರಿಯುತ್ತಿದ್ದದ್ದನ್ನು ಗಮನಿಸಿದ ಅವರು ಪತಿಯನ್ನು ಕರೆದಿದ್ದರು. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅವರು ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    ಬಳಿಕ ಸಿಬ್ಬಂದಿ ಬ್ಯಾಂಕ್ ತೆರೆದಾಗ ಮಿತ್ರಾ ಅವರು ಸೀಲಿಂಗ್‌ಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಡೆತ್‌ನೋಟ್ ಪತ್ತೆಯಾಗಿತ್ತು.

    ಡೆತ್‌ನೋಟ್‌ನಲ್ಲಿ ಕೆಲಸದ ಒತ್ತಡದಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ. ಡೆತ್‌ನೋಟ್ ವಶಪಡಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

  • Hassan | ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು

    Hassan | ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು

    ಹಾಸನ: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹಿನ್ನೆಲೆ ನೇಣು ಬಿಗಿದುಕೊಂಡು ಪೊಲೀಸ್ ಕಾನ್ಸ್‌ಟೇಬಲ್ (Police Constable) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಹೊರವಲಯದ ಗೆಂಡೆಕಟ್ಟೆ ಫಾರೆಸ್ಟ್ ಬಳಿ ನಡೆದಿದೆ.

    ನಟೇಶ್ (38) ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್‌ಟೇಬಲ್. ಮೂಲತಃ ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ ನಟೇಶ್, 2008ನೇ ಸಾಲಿನಲ್ಲಿ ನಾಗರಿಕ ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದರು. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ನಟೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 3 ತಿಂಗಳಿನಿಂದ ಮೂಳೆ ಕ್ಯಾನ್ಸರ್ (Bone Cancer) ಖಾಯಿಲೆಯಿಂದ ಬಳಲುತ್ತಿದ್ದ ನಟೇಶ್ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ಸರ್ಕಾರಿ ಕಚೇರಿ ನವೀಕರಣಕ್ಕೂ ಅನುದಾನ ಕೊರತೆ – ಸಿಬ್ಬಂದಿಯೇ ದೇಣಿಗೆ ಸಂಗ್ರಹಿಸಿ ಕಚೇರಿ ದುರಸ್ತಿ

    ಕಳೆದ ಒಂದು ವಾರದಿಂದ ನಟೇಶ್ ಹಾಸನ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬುಧವಾರ ಸಂಜೆ ಆಸ್ಪತ್ರೆಯಿಂದ ಕಾಣೆಯಾಗಿದ್ದ ನಟೇಶ್, ಗೆಂಡೆಕಟ್ಟೆ ಅರಣ್ಯ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮುಖ್ಯಪೇದೆಯಾಗಿ ಮುಂಬಡ್ತಿ ಪಡೆದಿದ್ದ ನಟೇಶ್ ಹೊಳೆನರಸಿಪುರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ – 5 ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಣೆ

  • ನಮ್ಮಿಬ್ಬರನ್ನು ದೂರ ಮಾಡ್ತಾರೆ ಎಂಬ ಭಯದಲ್ಲಿ ಕಾಲುವೆಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ

    ನಮ್ಮಿಬ್ಬರನ್ನು ದೂರ ಮಾಡ್ತಾರೆ ಎಂಬ ಭಯದಲ್ಲಿ ಕಾಲುವೆಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ

    ಕೊಪ್ಪಳ: ಪೋಷಕರು ಹಾಗೂ ಪೊಲೀಸರು ನಮ್ಮಿಬ್ಬರನ್ನು ದೂರ ಮಾಡ್ತಾರೆ ಎಂಬ ಆತಂಕದಲ್ಲಿ ಕಾಲುವೆಗೆ ಜಿಗಿದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳದ ಮುನಿರಾಬಾದ್ ಗ್ರಾಮದ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದ ಪ್ರವೀಣ ಕುಮಾರ(18) ಹಾಗೂ ಸಾಣಾಪುರ ಗ್ರಾಮದ ಅಂಜಲಿ (18) ಮೃತರು.ಇದನ್ನೂ ಓದಿ: ಬಾಹುಬಲಿಗೆ ದಶಕದ ಸಂಭ್ರಮ: ಗುಡ್‌ನ್ಯೂಸ್ ಕೊಟ್ಟ ಜಕ್ಕಣ್ಣ

    ಪಾಲಕರು ವಿರೋಧಿಸಿದ್ದಕ್ಕೆ ಅಪ್ರಾಪ್ತ ಪ್ರೇಮಿಗಳು ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

    ಕಳೆದ 2 ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮೊದಲು ಪ್ರವೀಣಕುಮಾರ್ ಕುಟುಂಬ ಸಾಣಾಪೂರ ಗ್ರಾಮದಲ್ಲಿ ವಾಸವಿತ್ತು. ಈ ವೇಳೆ ಅಂಜಲಿ ಪರಿಚಯವಾಗಿ ಪ್ರೀತಿ ಹುಟ್ಟಿಕೊಂಡಿತ್ತು. ಇತ್ತೀಚಿಗೆ ಪ್ರವೀಣಕುಮಾರ್ ಅಂಜಲಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಆಗ ಪ್ರವೀಣ ತಾಯಿ ಅಂಜಲಿಯನ್ನು ಅವರ ಮನೆಗೆ ಬಿಟ್ಟು ಬರುವಂತೆ ತಿಳಿಸಿದ್ದರು. ಅದರಂತೆ ಪ್ರವೀಣ ಬಿಟ್ಟು ಬಂದಿದ್ದ.

    ಇದೆಲ್ಲ ಆದ ಬಳಿಕ ಇತ್ತೀಚಿಗೆ ಅಂಜಲಿ ಜೊತೆಗೆ ಮನೆ ಬಿಟ್ಟು ಹೋಗಿದ್ದ. ಈ ವೇಳೆ ಅವರಿಬ್ಬರೂ ಹಗರಿಬೊಮ್ಮನಹಳ್ಳಿಯಲ್ಲಿರುವುದು ಕುಟುಂಬಸ್ಥರಿಗೆ ಗೊತ್ತಾಗಿತ್ತು. ಆಗ ಪ್ರವೀಣಕುಮಾರ್ ತಾಯಿ ಊರಿಗೆ ಬರಲು ಕಾರನ್ನು ಕಳುಹಿಸಿಕೊಟ್ಟಿದ್ದರು. ಕಾರಿನಲ್ಲಿ ಬರುವಾಗ ಮುನಿರಾಬಾದ್ ಬಳಿ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಹೇಳಿ ಇವರಿಬ್ಬರೂ ನೇರವಾಗಿ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಕಾರಂಜಿ ಕೆರೆಯಲ್ಲಿ ಮತ್ಸ್ಯಾಗಾರ ಬದಲಿಗೆ ಪೆಂಗ್ವಿನ್ ಪಾರ್ಕ್ ನಿರ್ಮಿಸಲು ಮುಂದಾದ ಸರ್ಕಾರ