Tag: suicide bombing

  • ಪಾಕ್ ರಾಜಧಾನಿಯಲ್ಲಿ ಆತ್ಮಹತ್ಯಾ ಸ್ಫೋಟ – ಪೊಲೀಸ್ ಸಾವು, ಹಲವರಿಗೆ ಗಾಯ

    ಪಾಕ್ ರಾಜಧಾನಿಯಲ್ಲಿ ಆತ್ಮಹತ್ಯಾ ಸ್ಫೋಟ – ಪೊಲೀಸ್ ಸಾವು, ಹಲವರಿಗೆ ಗಾಯ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ರಾಜಧಾನಿ ಇಸ್ಲಾಮಾಬಾದ್‌ನಲ್ಲಿ (Islamabad) ಶುಕ್ರವಾರ ಆತ್ಮಹತ್ಯಾ ಸ್ಫೋಟ (Suicide Bombing) ನಡೆಸಲಾಗಿದ್ದು, ಭೀಕರ ಘಟನೆಯಲ್ಲಿ ಒಬ್ಬ ಪೊಲೀಸ್ ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.

    ಇಸ್ಲಾಮಾಬಾದ್‌ನ ಐ-10/4 ಸೆಕ್ಟರ್ ಬಳಿ ಸ್ಫೋಟ ಉಂಟಾಗಿದೆ. ಘಟನೆಯ ಬಳಿಕ ಸ್ಥಳಕ್ಕೆ ವಿಶೇಷ ಭಯೋತ್ಪಾದನಾ ನಿಗ್ರಹ ಪಡೆ ಧಾವಿಸಿದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದೂರದರ್ಶನಗಳ ದೃಶ್ಯಾವಳಿಗಳಲ್ಲಿ ಛಿದ್ರಗೊಂಡಿರುವ ವಾಹನವೊಂದು ಬೆಂಕಿಯಲ್ಲಿ ಉರಿಯುತ್ತಿರುವುದನ್ನು ತೋರಿಸಿದೆ. ಇದನ್ನೂ ಓದಿ: ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ

    ಘಟನೆಯಲ್ಲಿ ಸಾವನ್ನಪ್ಪಿರುವ ಅಧಿಕಾರಿಯನ್ನು ಹೆಡ್ ಕಾನ್ಸ್ಟೇಬಲ್ ಆದಿಲ್ ಹುಸೇನ್ ಎಂದು ಗುರುತಿಸಿದ್ದಾರೆ. ವರದಿಗಳ ಪ್ರಕಾರ ಇಂದು ಬೆಳಗ್ಗೆ 10:15ರ ವೇಳೆಗೆ ಒಬ್ಬ ಮಹಿಳೆ ಹಾಗೂ ಪುರುಷ ಪ್ರಯಾಣಿಸುತ್ತಿದ್ದ ವಾಹನವನ್ನು ಪೊಲೀಸರು ಗುರುತಿಸಿದ್ದಾರೆ. ಅನುಮಾನಾಸ್ಪದವಾಗಿ ಕಂಡ ವಾಹನವನ್ನು ಅಧಿಕಾರಿಗಳು ತಪಾಸಣೆ ನಡೆಸಲು ಮುಂದಾದಾಗ ದಂಪತಿ ವಾಹನದಿಂದ ಹೊರಬಂದಿದ್ದಾರೆ. ಬಳಿಕ ಪುರುಷ ಯಾವುದೋ ನೆಪ ಹೇಳಿ ಮತ್ತೆ ಕಾರಿನೊಳಗೆ ಹೋಗಿದ್ದು, ಈ ವೇಳೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಕೊರೊನಾ ಆತಂಕ, ಖಾಸಗಿ ಆಸ್ಪತ್ರೆಗಳು ಆ್ಯಕ್ಟಿವ್ – ಕಳೆದ ಬಾರಿಯ ಬಿಲ್ ಕ್ಲಿಯರ್ ಮಾಡಲು ಸರ್ಕಾರಕ್ಕೆ ಮನವಿ

    ಸ್ಫೋಟ ಉಂಟಾದಾಗ ಪಕ್ಕದಲ್ಲಿದ್ದ ಅಧಿಕಾರಿ ಸಾವನ್ನಪ್ಪಿದ್ದಾರೆ. ಸುತ್ತಮುತ್ತಲಿದ್ದ ನಾಲ್ವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಉಪ ಮಹಾನಿರೀಕ್ಷಕ ಸೊಹೈಲ್ ಜಾಫರ್ ಚಟ್ತಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಫ್ಘಾನಿಸ್ತಾನದ ಟಿ20 ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಬಾಂಬ್ ಸ್ಫೋಟ

    ಅಫ್ಘಾನಿಸ್ತಾನದ ಟಿ20 ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಬಾಂಬ್ ಸ್ಫೋಟ

    ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಶಪಜೀಜಾ ಕ್ರಿಕೆಟ್ ಲೀಗ್ ಟಿ20 ಪಂದ್ಯದ ವೇಳೆ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದೆ.

    ಬ್ಯಾಂಡ್-ಎ-ಅಮೀರ್ ಡ್ರ‍್ಯಾಗನ್ ಹಾಗೂ ಪಮೀರ್ ಝಲ್ಮಿ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆಯೇ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಸದ್ಯ ಎಲ್ಲಾ ಆಟಗಾರರೂ ಸುರಕ್ಷಿತರಾಗಿದ್ದು, ಅವರನ್ನು ರಕ್ಷಣೆಗೆ ಬಂಕರ್‌ಗೆ ಸಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು

    ಸ್ಫೋಟ ಸಂಭವಿಸುತ್ತಲೇ ಕ್ರೀಡಾಂಗಣದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಜನರು ಪ್ರಾಣಾಪಾಯದಿಂದ ರಕ್ಷಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳಿಗೆ ಗುಂಪಾಗಿ ಧಾವಿಸಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿಯಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: MIG-21 ವಿಮಾನವನ್ನು ಸೇವೆಯಿಂದ ವಜಾಗೊಳಿಸೋದು ಯಾವಾಗ? – ವರುಣ್ ಗಾಂಧಿ

    2 ದಿನಗಳ ಹಿಂದೆಯಷ್ಟೇ ಕಾಬೂಲ್ ಗುರುದ್ವಾರ ಕಾರ್ಟೆ ಪರ್ವಾನ್ ಗೇಟ್ ಬಳಿ ಸ್ಫೋಟ ಸಂಭವಿಸಿತ್ತು. ಇದರ ಬೆನ್ನಲ್ಲೇ ಇದೀಗ ಕ್ರೀಡಾಂಗಣದಲ್ಲಿ ಸ್ಫೋಟ ಸಂಭವಿಸಿದೆ. ಸಾರ್ವಕನಿಕರು ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಬಾಂಬ್ ಸ್ಫೋಟದಂತಹ ಘಟನೆಗಳು ಆಗಾಗ ಮರುಕಳಿಸುತ್ತಿರುವುದು ಆಫ್ಘನ್ನರಲ್ಲಿ ನಡುಕ ಉಂಟು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್ ಆಸ್ಪತ್ರೆಯಲ್ಲಿ ಮಹಿಳಾ ಬಾಂಬರ್ ದಾಳಿಗೆ 6 ಬಲಿ

    ಪಾಕ್ ಆಸ್ಪತ್ರೆಯಲ್ಲಿ ಮಹಿಳಾ ಬಾಂಬರ್ ದಾಳಿಗೆ 6 ಬಲಿ

    ಇಸ್ಲಾಮಾಬಾದ್: ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಎರಡು ಕಡೆ ಭಯೋತ್ಪಾದಕ ದಾಳಿ ನಡೆದಿದ್ದು, ಎಂಟು ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ.

    ಭಾನುವಾರ ಬೆಳಗ್ಗೆ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಮೊದಲು ದಾಳಿ ನಡೆದಿದ್ದು, ಜಿಲ್ಲೆಯ ಪೊಲೀಸ್ ಚೆಕ್‍ಪೋಸ್ಟ್ ಗೆ ಬೈಕಿನಲ್ಲಿ ಬಂದ ಕೆಲವು ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು.

    ನಂತರ ಈ ಪೊಲೀಸ್ ಮೃತದೇಹವನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಈ ಸಮಯದಲ್ಲಿ ಆಸ್ಪತ್ರೆಯ ಮುಖ್ಯ ದ್ವಾರಕ್ಕೆ ಬಂದ ಮಹಿಳಾ ಆತ್ಮಾಹುತಿ ಬಾಂಬರ್ ದಾಳಿ ಮಾಡಿದ್ದಾಳೆ. ಈ ದಾಳಿಯಲ್ಲಿ ಮತ್ತೆ ಇಬ್ಬರು ಪೊಲೀಸರು ಮತ್ತು ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಸಿಬ್ಬಂದಿಗಳು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಲೀಮ್ ರಿಯಾಜ್ ಹೇಳಿದ್ದಾರೆ.

    ಈ ಬಾಂಬ್ ದಾಳಿಗೆ ಸುಮಾರು ಏಳು ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಬಳಸಲಾಗಿದೆ ಮತ್ತು ಆತ್ಮಾಹುತಿ ಬಾಂಬರ್ ಒಬ್ಬ ಮಹಿಳೆ ಎಂದು ತಿಳಿದು ಬಂದಿದೆ. ನಮಗೆ ಅವಳ ತಲೆಬುರುಡೆ ಮತ್ತು ಕಾಲುಗಳನ್ನು ಸಿಕ್ಕಿವೆ ಎಂದು ರಿಯಾಜ್ ಹೇಳಿದ್ದಾರೆ.

    ಆತ್ಮಾಹುತಿ ಬಾಂಬ್ ಸ್ಫೋಟದ ನಂತರ ರಕ್ಷಣಾ ತಂಡಗಳು ಮೃತ ದೇಹಗಳನ್ನು ಸ್ಥಳಾಂತರ ಮಾಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಗಾಯಗೊಂಡರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇನ್ನೂ ಈ ದಾಳಿಯ ಹೊಣೆಯನ್ನು ತೆಹ್ರೀಕ್ ಇ-ತಾಲಿಬಾನ್ ಎಂಬ ಉಗ್ರ ಸಂಘಟನೆ ಹೊತ್ತುಗೊಂಡಿದ್ದು, ಈ ಗುಂಪಿನ ನಾಯಕ ಒಮರ್ ಖೋರಸಾನಿ ಎಂಬ ಉಗ್ರ ಪತ್ರಕರ್ತರಿಗೆ ಕಳುಹಿಸಿದ ಸಂಕ್ಷಿಪ್ತ ಸಂದೇಶದಲ್ಲಿ ಈ ದಾಳಿಯನ್ನು ನಾವೇ ಮಾಡಿದ್ದು ಎಂದು ಖಚಿತಪಡಿಸಿದ್ದಾನೆ.

    ತೆಹ್ರೀಕ್ ಇ-ತಾಲಿಬಾನ್ ಎಂಬ ಉಗ್ರ ಸಂಘಟನೆ 2007 ರಲ್ಲಿ ರಚನೆಯಾದಾಗಿದ್ದು, ಪಾಕಿಸ್ತಾನ ಮತ್ತು ಅದರ ಮಿತ್ರ ರಾಷ್ಟ್ರಗಳೊಂದಿಗೆ ಹೋರಾಡುತ್ತಿದೆ. ಈ ಸಂಘಟನೆ ಇಸ್ಲಾಮಿಕ್ ಕಾನೂನುಗಳನ್ನು ಕಟ್ಟುನಿಟ್ಟಾಗಿ ದೇಶದ ಮೇಲೆ ಹೇರುವ ಗುರಿಯನ್ನು ಹೊಂದಿದೆ.