Tag: Suhasini

  • ಬಾಂಡ್ ರವಿಯಾಗಿ ಕಾಣಿಸಿಕೊಂಡ ಡಬ್ಬಿಂಗ್ ಮುಗಿಸಿದ ಪ್ರಮೋದ್

    ಬಾಂಡ್ ರವಿಯಾಗಿ ಕಾಣಿಸಿಕೊಂಡ ಡಬ್ಬಿಂಗ್ ಮುಗಿಸಿದ ಪ್ರಮೋದ್

    ನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟ ಪ್ರಮೋದ್ ನಟನೆಯ ಬಾಂಡ್ ರವಿ ಸಿನಿಮಾದ ಡಬ್ಬಿಂಗ್ ಕಂಪ್ಲೀಟ್ ಆಗಿದ್ದು, ಶೀರ್ಘದಲ್ಲಿ ಚಿತ್ರ ತೆರೆಗೆ ಬರಲಿದೆ. ಹನ್ನೊಂದು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಎಸ್.ಪಿ. ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದೊಂದು ಆಕ್ಷನ್ ಲವ್ ಸ್ಟೋರಿ ಸಿನಿಮಾವಾಗಿದೆ.

    ಈ ಹಿಂದೆ ಮಾದ ಮಾನಸಿ ಸಿನಿಮಾ ನಿರ್ಮಾಣ ಮಾಡಿದ್ದ ನರಸಿಂಹಮೂರ್ತಿ ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್‌ನ ಅಡಿ ಬಾಂಡ್ ರವಿ ಸಿನಿಮಾಗೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅಪ್ಪು ಅಭಿಮಾನಿಯಾಗಿ ಬಾಂಡ್ ರವಿಯಾಗಿ ನಟಿಸಿರುವ ಪ್ರಮೋದ್ ಗೆ ಜೋಡಿಯಾಗಿ ಕಾಜಲ್ ಕುಂದರ್  ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ ಮಂಗಳೂರು ಭಾಗದಲ್ಲಿ ಸುಮಾರು 50 ದಿನಗಳ‌ ಕಾಲ ಚಿತ್ರೀಕರಣ ಮಾಡಲಾಗಿದ್ದು,  ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್ ಮತ್ತು ದೇವ್ ಎನ್. ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಸಿನಿಮಾಕ್ಕಿದೆ. ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ನಟಿ ಸುಹಾಸಿನಿ, ಶೋಭರಾಜ್, ಯಶಾ ಶಿವಕುಮಾರ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಗುರು ಕಶ್ಯಪ್ ಅವರು ಈ ಚಿತ್ರದ ಸಂಭಾಷಣೆ ಬರೆದಿದ್ದರು, ಆದರೆ ಅವರು ಇಂದು ದೈಹಿಕವಾಗಿ ಇಲ್ಲ. ಎಸ್ ಕೆ ರಾವ್ ಛಾಯಾಗ್ರಹಣ, ಅನುಪ್ ಸೀಳಿನ್ ಸಂಗೀತ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ಲಕ್ಷಣ ಇಲ್ಲದಿದ್ರೂ ಸುಹಾಸಿನಿ ಪುತ್ರ ಸ್ವಯಂ ಗೃಹಬಂಧನ

    ಕೊರೊನಾ ಲಕ್ಷಣ ಇಲ್ಲದಿದ್ರೂ ಸುಹಾಸಿನಿ ಪುತ್ರ ಸ್ವಯಂ ಗೃಹಬಂಧನ

    – ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

    ಚೆನ್ನೈ: ಕೊರೊನಾ ವೈರಸ್ ಭಯದಿಂದ ವಿದೇಶದಿಂದ ಬಂದಂತಹವರು ಸೀಲ್ ಹಾಕಿಸಿಕೊಂಡು ಸ್ವತಃ ಗೃಹಬಂಧನಕ್ಕೆ ಒಳಗಾಗುತ್ತಿದ್ದಾರೆ. ಈಗಾಗಲೇ ಅನೇಕ ನಟ-ನಟಿಯರು ಶೂಟಿಂಗ್ ಕ್ಯಾನ್ಸಲ್ ಮಾಡಿ ಸ್ವತಃ ಗೃಹಬಂಧನ ವಿಧಿಸಿಕೊಳ್ಳುತ್ತಿದ್ದಾರೆ. ಇದೀಗ ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ ಪುತ್ರ ಕೂಡ ತಾವೇ ಗೃಹ ಬಂಧನಕ್ಕೆ ಒಳಗಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಸುಹಾಸಿನಿ ಪುತ್ರ ನಂದನ್ ಮಣಿರತ್ನಂ ಇಂಗ್ಲೆಂಡ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದರೆ ಕೊರೊನಾ ವೈರಸ್ ವಿದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಎಲ್ಲರೂ ವಿದೇಶದಿಂದ ವಾಪಸ್ ಬರುತ್ತಿದ್ದಾರೆ. ಅದೇ ರೀತಿ ನಟಿ ಸುಹಾಸಿನಿ ಪುತ್ರ ನಂದನ್ ಕೂಡ ವಾಪಸ್ ಆಗಿದ್ದಾರೆ.

    ವಿದೇಶದಿಂದ ವಾಪಸ್ ಬರುವ ಪ್ರತಿಯೊಬ್ಬರ ಕೈಗೂ ‘Home Quarantained’ ಸ್ಟ್ಯಾಂಪ್ ಹಾಕಲಾಗುತ್ತಿದೆ. ಅವರು ಎಲ್ಲಿಯೂ ಓಡಾಡದೆ ಸ್ವಯಂ ನಿರ್ಬಂಧದಲ್ಲಿ ಇರಬೇಕು. ಹಾಗಾಗಿ ವಿದೇಶದಿಂದ ವಾಪಸ್ ಆದ ನಟಿ ಸುಹಾಸಿನಿ ಪುತ್ರ ನಂದನ್ ಕೂಡ ಈಗ ಗೃಹ ಬಂಧನದಲ್ಲಿ ಇದ್ದಾರೆ.

    https://www.instagram.com/p/B-BNscOjhFx/

    ನಟಿ ಸುಹಾಸಿನಿ ಪ್ರತ್ಯೇಕ ವಾಸ ಮಾಡುತ್ತಿರುವ ಮಗನೊಂದಿಗೆ ಮಾತನಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಎಲ್ಲರಿಗೂ ನಮಸ್ತೆ, ನನ್ನ ಮಗ ನಂದನ್ ಮಣಿರತ್ನಂ ಲಂಡನ್‍ನಿಂದ ಮಾರ್ಚ್ 18ರಂದು ವಾಪಸ್ ಬಂದಿದ್ದು, ಅಂದಿನಿಂದ ಗೃಹಬಂಧನಲ್ಲಿದ್ದಾನೆ ಎಂದು ಮಗನೊಂದಿಗೆ ಹೊರಗಡೆ ನಿಂತು ಮಾತನಾಡಿದ್ದಾರೆ. ನಂತರ ನಂದನ್ ಮಾತನಾಡಿ, ‘ನಾನು ಕಳೆದ ಐದು ದಿನಗಳಿಂದ ಮನೆಯಲ್ಲಿ ಒಂದು ರೂಮಿನಲ್ಲಿ ಇದ್ದೇನೆ. ನಾನು ರೂಮಿನಿಂದ ಹೊರಗೆ ಬರುತ್ತಿಲ್ಲ. ಬುಧವಾರದಿಂದ ಗೃಹ ಬಂಧನದಲ್ಲಿದ್ದೇನೆ. ಈಗಾಗಲೇ ಐದು ದಿನಗಳು ಕಳೆದಿವೆ. ಇನ್ನೂ 9 ದಿನ ಹೀಗೆ ಇರುತ್ತೇನೆ. ಇದರಿಂದ ನನಗೆ ಬೋರ್ ಆಗುತ್ತದೆ. ಆದರೆ ಪ್ರತಿಯೊಬ್ಬರ ರಕ್ಷಣೆ ಮುಖ್ಯ’ ಎಂದಿದ್ದಾರೆ.

    ನಂದನ್‍ಗೆ ಯಾವುದೇ ರೀತಿಯ ಕೊರೊನಾ ವೈರಸ್ ಲಕ್ಷಣಗಳಿಲ್ಲ. ಆದರೂ 14 ದಿನಗಳವರೆಗೂ ಈ ರೀತಿ ಪ್ರತ್ಯೇಕ ವಾಸ ಮಾಡುತ್ತಿದ್ದಾರೆ. ಇನ್ನೂ ನಂದನ್‍ಗೆ ರೂಮ್ ಬಳಿ ಊಟ ಇಡಲಾಗುತ್ತದೆ. ಊಟ ಆದ ಬಳಿಕ ತಟ್ಟೆಯನ್ನು ಬಿಸಿ ನೀರಿನಲ್ಲಿ ತೊಳೆಯುತ್ತಿದ್ದಾರೆ. ಅಲ್ಲದೇ ಅವರಿಗೆ ಊಟ ನೀಡಿದವರು ಕೂಡ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುತ್ತಾರೆ. ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಕೇರಳದ ಕರಾವಳಿಯಲ್ಲಿ ಡ್ಯುಯೆಟ್ ಹಾಡಿದ ಅಂಬಿ-ಸುಹಾಸಿನಿ

    ಕೇರಳದ ಕರಾವಳಿಯಲ್ಲಿ ಡ್ಯುಯೆಟ್ ಹಾಡಿದ ಅಂಬಿ-ಸುಹಾಸಿನಿ

    ಬೆಂಗಳೂರು: ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈಗ ಅವರು ಹಿರಿಯ ನಟಿ ಸುಹಾಸಿನಿ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.

    ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಚಿತ್ರೀಕರಣ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಅಂಬರೀಶ್ ರಾಜಕೀಯ ಬಿಟ್ಟು ತಮ್ಮನ್ನು ತಾವು ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಚಿತ್ರದ ಶೂಟಿಂಗ್ ಸತತವಾಗಿ ನಡೆಯುತ್ತಿದೆ.

    ಈಗ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್ ಕೇರಳದಲ್ಲಿ ನಡೆಯುತ್ತದೆ. ಕೇರಳದ ಕರಾವಳಿಯಲ್ಲಿ ಅಂಬರೀಶ್ ಮತ್ತು ನಟಿ ಸುಹಾಸಿನಿ ಅವರ ಪಾತ್ರದ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತದೆ. ಈ ವೇಳೆ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಇದು ಹಾಡಿನ ಶೂಟಿಂಗ್ ಎನ್ನಲಾಗಿದೆ.

    ಈಗಾಗಲೇ ಚಿತ್ರತಂಡ ಬಹುತೇಕ ಅಂದರೆ ಸಿನಿಮಾದಲ್ಲಿ ಸುದೀಪ್ ಮತ್ತು ಶ್ರುತಿ ಹರಿಹರನ್ ಅವರ ಪಾತ್ರದ ಶೂಟಿಂಗ್ ಮುಗಿಸಿದ್ದು, ಚಿತ್ರೀಕರಣ ಅಂತಿಮ ಘಟ್ಟ ತಲುಪಿದೆ. ಈ ಸಿನಿಮಾದಲ್ಲಿ ನಟ ಅಂಬರೀಶ್ ನಾಯಕರಾಗಿದ್ದಾರೆ. ಅಂಬರೀಶ್ ಅವರು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದರು ಎಂಬ ಪಾತ್ರವನ್ನು ಸುದೀಪ್ ನಿರ್ವಹಿಸುತ್ತಿದ್ದಾರೆ.

    `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾವನ್ನು ಜ್ಯಾಕ್ ಮಂಜು ನಿರ್ಮಾಣ ಮಾಡುತ್ತಿದ್ದು, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ತಮಿಳಿನ `ಪವರ್ ಪಾಂಡಿ’ ಸಿನಿಮಾದ ಚಿತ್ರದ ರಿಮೇಕ್ ಆಗಿದೆ.

  • ಮಗನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೇಳಿದ ನಟಿ ಸುಹಾಸಿನಿ

    ಮಗನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೇಳಿದ ನಟಿ ಸುಹಾಸಿನಿ

    ಬೆಂಗಳೂರು: ಬಹುಭಾಷ ನಟಿ ಸುಹಾಸಿನಿಯ ಮಗ ನಂದನ್ ಅವರನ್ನ ಇಟಲಿಯ ಬೆಲ್ಯುನೊ ನಗರದಲ್ಲಿ ದರೋಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಹಾಸಿನಿ ತನ್ನ ಮಗನಿಗಾಗಿ ಸಹಾಯ ಕೇಳಿದ್ದರು.

    ವೆನಿಸ್ ಏರ್‍ಪೋರ್ಟ್ ಹತ್ತಿರ ಯಾರಾದರೂ ಇದ್ದರೆ ನನ್ನ ಮಗನಿಗೆ ಸಹಾಯ ಮಾಡಲು ಆಗುತ್ತಾ? ಬೆಲ್ಯುನೊ ನಗರದಲ್ಲಿ ಆತನನ್ನು ದರೋಡೆ ಮಾಡಲಾಗಿದೆ. ಮಗ ಏರ್‍ಪೋರ್ಟ್‍ಗೆ ಹೋಗಲು ಸಹಾಯ ಮಾಡಿ ಎಂದು ಟ್ವೀಟ್ ಮಾಡುತ್ತಾ ನಂದನ್‍ಯಿರುವ ಜಾಗವನ್ನು ವಿವರಿಸಿದ್ದರು. ವೆನಿಸ್ ಸ್ಟ ಮಾರ್ಕ್ ಸ್ಕ್ವೇರ್ ಪೊಲೀಸ್ ಸ್ಟೇಷನ್ ಹತ್ತಿರ ಇರುವವರು ಅವನಿಗೆ ಸಹಾಯ ಮಾಡಿ ಎಂದು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದರು.

    ಸಹಾಯ ಮಾಡುವ ಬದಲು ಜನರು ಸುಹಾಸಿನಿಯವರ ಮಗನಿಗೆ ಅನಾವಶ್ಯಕವಾಗಿ ಕರೆಗಳನ್ನು ಮಾಡುತ್ತಿದ್ದರು. ಕರೆ ಮಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತಾ ವೆನಿಸ್‍ನಲ್ಲಿರುವ ಜನರು ಸಹಾಯ ಮಾಡಲು ಆಗುವುದ್ದಿಲ್ಲ ಎಂದರೆ ನಾನು ಮೊದಲು ಪೋಸ್ಟ್ ಮಾಡಿದ ನಂಬರ್‍ಗೆ ಕರೆ ಮಾಡಬೇಡಿ. ಅವನ ಮೊಬೈಲ್ ಬ್ಯಾಟರಿ ಕಡಿಮೆಯಾಗುತ್ತಿದೆ. ಹೀಗಾಗಿ ಅವನು ಎಲ್ಲರ ಕಾಂಟ್ಯಾಕ್ಟ್ ಕಳೆದುಕೊಳುತ್ತಾನೆ. ಈಗಾಗಲೇ ತೊಂದರೆಯಲ್ಲಿ ಇರುವ ವ್ಯಕ್ತಿಗೆ ಅನಾವಶ್ಯಕವಾಗಿ ಕರೆ ಮಾಡುವ ಮೂಲಕ ತೊಂದರೆ ನೀಡುವುದನ್ನು ನಿಲ್ಲಿಸಿ ಎಂದು ಮತ್ತೆ ಟ್ವೀಟ್‍ನಲ್ಲಿ ಬರೆದುಕೊಂಡಿದ್ದರು.

    ಬಹಳ ಬೇಗ ವ್ಯಕ್ತಿಯೊಬ್ಬ ನಂದನ್‍ಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ. ನಂತರ ಸಹಾಯಕ್ಕಾಗಿ ಬಂದ ಜನರಿಗೆ ಸುಹಾಸಿನಿ ಧನ್ಯವಾದ ತಿಳಿಸಿದ್ದಾರೆ. ನಮ್ಮ ಮಗ ಇಂದು ರಾತ್ರಿ ಸುರಕ್ಷಿತವಾಗಿ ಹೋಟೆಲ್ ತಲುಪಿದ್ದಾನೆ ಎಂದು ಸುಹಾಸಿನಿ ತಮ್ಮ ಕೊನೆಯ ಟ್ವೀಟ್ ಪೋಸ್ಟ್ ಮಾಡಿದ್ದರು.