Tag: suhana Syed

  • ಮಂತ್ರ ಮಾಂಗಲ್ಯ; ರಂಗಭೂಮಿ ಕಲಾವಿದನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಹಾನಾ ಸೈಯದ್

    ಮಂತ್ರ ಮಾಂಗಲ್ಯ; ರಂಗಭೂಮಿ ಕಲಾವಿದನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಹಾನಾ ಸೈಯದ್

    – ಪೊಲೀಸ್ ಸರ್ಪಗಾವಲಿನಲ್ಲಿ ಸುಹಾನಾ ಮದುವೆ

    ನಪ್ರಿಯ ರಿಯಾಲಿಟಿ ಶೋ ಸರಿಗಮಪದ ಮೂಲಕ ಜನಪ್ರಿಯರಾಗಿದ್ದ ಸಾಗರದ ಗಾಯಕಿ ಸುಹಾನಾ ಸೈಯ್ಯದ್ ಹಾಗೂ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾದರು. ಇಬ್ಬರ ಧರ್ಮ ಬೇರೆ ಬೇರೆಯಾಗಿದ್ದರೂ ಧೈರ್ಯವಾಗಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಹಿಜಬ್ ಧರಿಸಿ ಹಿಂದೂ ಭಜನೆಯನ್ನು ಸುಹಾನ ಹಾಡುವಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರ ಸರ್ಪಗಾವಲಿನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

  • ಬುರ್ಕಾ ಧರಿಸಿ ಮಹದೇಶ್ವರನ ಭಕ್ತಿಗೀತೆ ಹಾಡಿದ ವಿದ್ಯಾರ್ಥಿನಿ – ಗೀತೆಗೆ ಶಿಳ್ಳೆ, ಚಪ್ಪಾಳೆ

    ಬುರ್ಕಾ ಧರಿಸಿ ಮಹದೇಶ್ವರನ ಭಕ್ತಿಗೀತೆ ಹಾಡಿದ ವಿದ್ಯಾರ್ಥಿನಿ – ಗೀತೆಗೆ ಶಿಳ್ಳೆ, ಚಪ್ಪಾಳೆ

    ಚಾಮರಾಜನಗರ: ಇಲ್ಲಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು (Muslim Student) ಬುರ್ಕಾ ಧರಿಸಿ ಮಹದೇಶ್ವರನ ಭಕ್ತಿಗೀತೆ (Mahadeshwara Devotional Song) ಹಾಡುವ ಮೂಲಕ ಸಾಮರಸ್ಯ ಬೆಸೆಯುವ ಕೆಲಸ ಮಾಡಿದ್ದಾರೆ.

    ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಭಾರತೀಯ ಪರಿವರ್ತನ ಸಂಘದಿಂದ ಆಯೋಜನೆ ಮಾಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿ ಪ್ರಾರ್ಥನಾ ಗೀತೆ ಹಾಡಿ ಸಭಿಕರ ಮನಗೆದ್ದಿದ್ದಾರೆ. ಇದನ್ನೂ ಓದಿ: ಜಿಲ್ಲಾ ಕೇಂದ್ರಗಳಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಾಗಾರ: ಸಚಿವ ನಿರಾಣಿ

    ಚಾಮರಾಜನಗರ (Chamarajanagar) ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಮ್ಮೆ ಬಸೀರಾ, `ಸೋಜುಗಾದ ಸೂಜು ಮಲ್ಲಿಗೆ.. ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡು ಮಲ್ಲಿಗೆ’ ಭಕ್ತಿ ಗೀತೆ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿನಿ ಹಾಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಮನಸೋತು ಶಿಳ್ಳೆ-ಚಪ್ಪಾಳೆಯ ಮಳೆಗರೆದಿದ್ದಾರೆ. ಇದನ್ನೂ ಓದಿ: ಪ್ರಧಾನಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ – 33 ಲಕ್ಷ ಚಂದಾದಾರರಿದ್ದ 3 ಯೂಟ್ಯೂಬ್ ಚಾನೆಲ್ ಪತ್ತೆ

    ಈ ಹಿಂದೆ ಸರಿಗಮಪ ಆಡಿಷನ್‌ನಲ್ಲಿ ಮುಸ್ಲಿಂ ಮಹಿಳಾ ಗಾಯಕಿ ಸುಹಾನಾ ಸೈಯದ್ (Suhana Syed) ಅವರು, `ಮುಕುಂದ ಮುರಾರಿ’ ಸಿನಿಮಾದ `ನೀನೆ ರಾಮ, ನೀನೆ ಶಾಮ, ನೀನೆ ಅಲ್ಲಾ, ನೀನೆ ಏಸು’ ಗೀತೆ ಹಾಡುವ ಮೂಲಕ ರಾಜ್ಯಾದ್ಯಂತ ಜನರ ಮನ ಗೆದ್ದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸ್ಯಾಂಡಲ್‌ವುಡ್‌ನಲ್ಲಿ ಸುಹಾನ ಸೈಯದ್ ಪ್ರಯಾಣ ಆರಂಭ!

    ಸ್ಯಾಂಡಲ್‌ವುಡ್‌ನಲ್ಲಿ ಸುಹಾನ ಸೈಯದ್ ಪ್ರಯಾಣ ಆರಂಭ!

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿದ ಎಷ್ಟೋ ಸ್ಪರ್ಧಿಗಳು ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಈಗ ಸುಹಾನ ಸೈಯದ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಗಾಯಕಿಯಾಗಿ ಮಿಂಚಲು ತಯಾರಿದ್ದಾರೆ.

    ಸುಹಾನ ಸೈಯದ್ ಗೆ ‘ಸ್ಟೇಟ್‍ಮೆಂಟ್ 8\11’ ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಇದೊಂದು ದೇಶಭಕ್ತಿ ಹಾಡಗಿದ್ದು, ‘ನರನಾಡಿ ನುಡಿಯುತ್ತೆ ಹಿಂದುಸ್ತಾನ್’ ಎಂಬ ಹಾಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

    ಸ್ಟೇಟ್‍ಮೆಂಟ್ 8\11 ಹೊಸಬರ ಸಿನಿಮಾವಾಗಿದ್ದು, ಹೇಮಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಪ್ಪಿ ಪ್ರಸಾದ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಈ ಹಾಡು ಒಂದು ಪ್ರಮುಖ ಅಂಶವಾಗಿದ್ದು, ಕಾರ್ಯಕ್ರಮದಲ್ಲಿ ಸುಹಾನ ಅವರ ಹಾಡು ಇಷ್ಟಪಟ್ಟು ಚಿತ್ರತಂಡ ಅವರಿಗೆ ಹಾಡಲು ಅವಕಾಶ ನೀಡಿದ್ದಾರೆ.

    ಈ ಹಿಂದೆ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿದ್ದ ಮೆಹಬೂಬ್ ಸಾಬ್, ಸಂಚಿತ್ ಹೆಗ್ಡೆ, ಅಂಕಿತಾ ಕುಂಡು ಹೀಗೆ ಹಲವಾರು ಸ್ಪರ್ಧಿಗಳು ದೊಡ್ಡ ದೊಡ್ಡ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಈಗ ಸುಹಾನ ಸೈಯದ್ ಕೂಡ ಇವರ ಗುಂಪಿಗೆ ಸೇರಿಕೊಂಡಿದ್ದಾರೆ.

  • ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ, ಸುಹಾನ ಅಂದ್ರೆ ಹೆಮ್ಮೆ: ಸುದೀಪ್

    ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ, ಸುಹಾನ ಅಂದ್ರೆ ಹೆಮ್ಮೆ: ಸುದೀಪ್

    ಮಂಡ್ಯ; ಸುಹಾನ ಅಂದ್ರೆ ನಮ್ಮ ಹೆಮ್ಮೆ. ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ. ಸುಹಾನ ಅವರು ಜೀವನದಲ್ಲಿ ಚೆನ್ನಾಗಿ ಇರುತ್ತಾರೆ. ಸಂಗೀತ ಕಾರ್ಯಕ್ರಮದಲ್ಲಿ ಅವರು ಮುಂದುವರೆಯುತ್ತಾರೆ ಸುದೀಪ್ ಹೇಳಿದ್ದಾರೆ.

    ಹೆಬ್ಬುಲಿ ಚಿತ್ರದ ಯಶಸ್ಸನ್ನ ಆಚರಿಸಲು ಮಂಡ್ಯದ ಮಹಾವೀರ ಚಿತ್ರಮಂದಿರಕ್ಕೆ ಸುದೀಪ್ ಆಗಮಿಸಿದ್ದರು. ಚಿತ್ರದ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ. ಕರ್ನಾಟಕದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ತಿಳಿಸಿದರು.

    ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಡಬ್ಬಿಂಗ್ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, ನಮಗೆ ತಂದೆ-ತಾಯಿ ಅಂದ್ರೆ ತುಂಬಾ ಪ್ರೀತಿ. ಪ್ರಪಂಚದ ಯಾವುದೇ ಭಾಗದಲ್ಲಿ ಇದ್ರು ಅವರಿಗೆ ಕರೆ ಮಾಡಿ ಮಾತನಾಡುತ್ತೇವೆ. ದಿಢೀರ್ ಅಂತಾ ಹೋರಾಟ ಹಮ್ಮಿಕೊಂಡಿದ್ರಿಂದ ಭಾಗಿಯಾಗಲು ಆಗಲಿಲ್ಲ. ಆದರೆ ನಾವು ಚಿತ್ರರಂಗ ಬಿಟ್ಟುಕೊಡ್ತೀವಾ? ನಾವು ಎಲ್ಲೆ ಇದ್ರು ಹೋರಾಟ ಮಾಡ್ತಿವಿ ಎಂದು ಹೇಳಿದರು.

    ಇನ್ನು ದರ್ಶನ್ ಅವರ ಬಗ್ಗೆ ಮಾತನಾಡಲು ನಿರಾಕರಿಸಿದ ಸುದೀಪ್ ಕೈ ಮುಗಿದು ಮುಂದೆ ಸಾಗಿದರು. ತಮ್ಮ ನೆಚ್ಚಿನ ನಾಯಕ ನಟ ಸುದೀಪ್ ಅವರನ್ನು ನೋಡಲು ಚಿತ್ರಮಂದಿರದ ಮುಂಭಾಗದಲ್ಲಿ ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದರು.