Tag: Suhana

  • ಅಮಿತಾಭ್ ಮನೆಗೆ ಸೊಸೆಯಾಗಲಿದ್ದಾರಾ ಶಾರುಖ್ ಖಾನ್ ಮಗಳು

    ಅಮಿತಾಭ್ ಮನೆಗೆ ಸೊಸೆಯಾಗಲಿದ್ದಾರಾ ಶಾರುಖ್ ಖಾನ್ ಮಗಳು

    ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮನೆಗೆ ಶಾರುಖ್ ಖಾನ್ (Shahrukh Khan) ಪುತ್ರಿ ಸುಹಾನಾ (Suhana) ಸೊಸೆಯಾಗಿ ಬರುತ್ತಾರೆ ಎನ್ನುವ ಮಾತು ಹರಿದಾಡುತ್ತಿದೆ. ಇದು ನಂಬಲು ಅಸಾಧ್ಯವೆನಿಸಿದರೂ, ಸಾಧ್ಯವಾಗುವಂತಹ ವಿಚಾರಗಳನ್ನು ಬಿಟೌನ್ ತನ್ನ ಒಡಲಿಲ್ಲ ಇಟ್ಟುಕೊಂಡಿರುವುದಂತೂ ಸತ್ಯ. ಹಾಗಾಗಿ ಇಂಥದ್ದೊಂದು ಸುದ್ದಿಗೆ ರೆಕ್ಕೆಪುಕ್ಕಗಳು ಬಂದಿವೆ.

    ಅಮಿತಾಭ್ ಮೊಮ್ಮಗ ಅಗಸ್ತ್ಯ (Agastya) ಹಾಗೂ ಶಾರುಖ್ ಖಾನ್ ಮಗಳು ಸುಹಾನಾ ಡೇಟಿಂಗ್ (Dating) ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಆದರೆ, ಅವರ ಪ್ರೇಮ ಮದುವೆಯವರೆಗೂ ಹೋಗಿದೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಪರಸ್ಪರ ಗೌರವ ಕೊಟ್ಟುಕೊಂಡು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೊಂದು ಗಟ್ಟಿ ಪ್ರೇಮವಾದ್ದರಿಂದ ಮದುವೆಯಾದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಿದೆ ಬಾಲಿವುಡ್. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    ಸುಹಾನಾ ಮತ್ತು ಅಗಸ್ತ್ಯ ಅನೇಕ ಬಾರಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅನೇಕ ಸಮಾರಂಭಗಳಿಗೆ ಒಟ್ಟಿಗೆ ಹೋಗಿದ್ದಾರೆ. ಅಲ್ಲದೇ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾಗಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬೆಳೆಯುತ್ತಿದ್ದಾರೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಹಾಗಂತ ಇಬ್ಬರೂ ತಾವು ಡೇಟಿಂಗ್ ಮಾಡುತ್ತಿರುವ ವಿಚಾರವನ್ನೂ ಈವರೆಗೂ ಯಾವತ್ತೂ ಬಹಿರಂಗವಾಗಿ ಮಾತನಾಡಿಲ್ಲ.

    ಈ ವಯಸ್ಸಿನ ಡೇಟಿಂಗ್ ತುಂಬಾ ದಿನ ಉಳಿಯುವುದಿಲ್ಲ ಎನ್ನುವ ಮಾತಿದೆ. ಹಲವಾರು ಪ್ರೇಮಿಗಳು ಅರ್ಧಕ್ಕೆ ಬಾಂಧವ್ಯವನ್ನು ತುಂಡರಿಸಿಕೊಂಡು ಹೋಗಿದ್ದಾರೆ. ಇವರಿಬ್ಬರ ಪ್ರೇಮವೂ ಹಾಗೆಯೇ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಏನೇ ಆಗಲಿ, ಅವರ ಪ್ರೇಮ ಗಟ್ಟಿಯಾಗಿ ಉಳಿದುಕೊಳ್ಳಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

  • ಬಾಲಿವುಡ್ ಗೆ ಎಂಟ್ರಿ ಕೊಡಲು ತಯಾರಾದ್ರಾ ಶಾರೂಖ್ ಖಾನ್ ಪುತ್ರಿ!

    ಬಾಲಿವುಡ್ ಗೆ ಎಂಟ್ರಿ ಕೊಡಲು ತಯಾರಾದ್ರಾ ಶಾರೂಖ್ ಖಾನ್ ಪುತ್ರಿ!

    ಮುಂಬೈ: ಬಾಲಿವುಡ್‍ ನಲ್ಲಿ ಸ್ಟಾರ್ ನಟರ ಮಕ್ಕಳು ಬಣ್ಣ ಹಚ್ಚಿ ಕ್ಯಾಮೆರಾಗೆ ಕಣ್ಣು ಹೊಡೆಯೊದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹಾಗೆಯೇ ಈಗ ಬಿ-ಟೌನ್ ಬಿಗ್ ಸ್ಟಾರ್ ನಟನ ಪುತ್ರಿಯೊಬ್ಬರು ಬಣ್ಣದ ಬದುಕೆಗೆ ಬಲಗಾಲಿಟ್ಟು ಬರಲು ಜೆಮ್‍ ನಲ್ಲಿ ಬೆವರಿಳಿಸುತ್ತಿದ್ದಾರೆ.

    ಹೌದು. ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಪುತ್ರಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ, ತಂದೆಯ ಜೊತೆಗೆ ಫಂಕ್ಷನ್‍ ಗಳಿಗೆ ಬರುತ್ತಿದ್ದ ಸುಹಾನಾ ಖಾನ್ ಬಾಳೆ ಮರದ ರೀತಿ ಬೆಳಿದು ನಿಂತಿದ್ದಾರೆ. ಮನೆಯಿಂದ ಹೊರ ಬರುತ್ತಿದ್ದಂತೆ ಫೋಟೋಗ್ರಾಫರ್‍ ಗಳು ಮುತ್ತಿಕೊಂಡು ಕ್ಯಾಮೆರಾ ಪಟ್ಟಪಟನೇ ಕ್ಲಿಕಿಸುವಂತೆ ಮಾಡುವ ಚೆಂದುಳಿ ಚೆಲುವೆಯಾಗಿದ್ದಾರೆ.

    ಶಾರುಖ್ ಪುತ್ರಿಯ ಬೆಡಗು ಬಿನ್ನಾಣಕ್ಕೀಗ ಬಾಲಿವುಡ್‍ ನಿಂದ ಬೇಜಾನ್ ಆಫರ್‍ ಗಳು ಬರುತ್ತಿವೆ. ನಮ್ಮ ಬ್ಯಾನರ್‍ನಲ್ಲಿ ನಿಮ್ಮ ಮಗಳನ್ನ ಗ್ರ್ಯಾಂಡ್ ಆಗಿ ಇಂಟ್ರೊಡ್ಯೂಸ್ ಮಾಡುತ್ತೇವೆ ಎಂದು ಪ್ರೋಡ್ಯೂಸರ್‍ಗಳು ಕ್ಯೂ ನಿಂತಿದ್ದಾರೆ. ಅಷ್ಟರ ಮಟ್ಟಿಗೆ ಸುಹಾನಾ ಮೋಡಿ ಮಾಡಿದ್ದಾರೆ.

    ಇನ್ನು ಸುಹಾನಾಗೆ ಕೇವಲ 17ರ ಹರೆಯ. ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿ ಪಿಯುಸಿ ಒದುತ್ತಿದ್ದಾರೆ ಅಷ್ಟೇ. ಅಷ್ಟರಲ್ಲಿ ಬಾಲಿವುಡ್‍ ನ ದೊಡ್ಡ ದೊಡ್ಡ ಬ್ಯಾನರ್‍ ಗಳಿಂದ ಆಫರ್ ಬರಲು ಕಾರಣವೇನು? ಎಂದು ದುರ್ಬಿನ್ ಹಾಕಿ ನೋಡಿದಾಗ ಸಿಕ್ಕ ಉತ್ತರವೇ ಈ ವಿಡಿಯೋ.

    ಸುಹಾನಾ ಖಾನ್ ಜಿಮ್‍ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಟಾಪ್ ಹೀರೋಯಿನ್ ಗಳಾದ ಕತ್ರಿನಾ ಕೈಫ್, ಅಲಿಯಾ ಭಟ್, ಜಾಕ್ವೆಲಿನ್ ಫರ್ನಾಂಡಿಸ್ ರೀತಿ ವರ್ಕೌಟ್ ಮಾಡುತ್ತಿದ್ದಾರೆ.

    ಸದ್ಯ ಬಾಲಿವುಡ್‍ನಲ್ಲಿ ಶಾರೂಖ್ ಪುತ್ರಿ ಸುಹಾನಾಗೆ ಭರ್ಜರಿ ಆಫರ್‍ಗಳು ಬರುತ್ತಿವೆ. ಅವಕಾಶಕ್ಕೆ ತಕ್ಕ ಹಾಗೇ ಸುಹಾನಾ ಜಿಮ್‍ನಲ್ಲಿ ಭರ್ಜರಿ ಕಸರತ್ತು ಮಾಡುವ ಮೂಲಕ ಬೇವರಿಳಿಸುತ್ತಿದ್ದಾರೆ. ಎಲ್ಲಾ ಕಸರತ್ತು ನೋಡಿದ ಬಾಲಿವುಡ್ ಸಿನಿಪಂಡಿತರು, ಓಹೋ ಶಾರೂಖ್ ಪುತ್ರಿ ಸಿನ್ಮಾ-ಗಿನ್ಮಾ ಮಾಡ್ತಿರಬೇಕು, ಅದಕ್ಕೆ ಇಷ್ಟೆಲ್ಲಾ ಬೆವರು ಸುರಿಸುತ್ತಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

    https://www.youtube.com/watch?v=G-qY8dEYATo