Tag: Sugunendra Theertha Swamiji

  • ಉಡುಪಿ ಶ್ರೀಕೃಷ್ಣನ ರಥೋತ್ಸವ ಸೇವೆಯಲ್ಲಿ ಭಾಗಿಯಾದ ತೇಜಸ್ವಿ ಸೂರ್ಯ ದಂಪತಿ

    ಉಡುಪಿ ಶ್ರೀಕೃಷ್ಣನ ರಥೋತ್ಸವ ಸೇವೆಯಲ್ಲಿ ಭಾಗಿಯಾದ ತೇಜಸ್ವಿ ಸೂರ್ಯ ದಂಪತಿ

    ಉಡುಪಿ: ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ (Tejasvi Surya) ದಂಪತಿ ಉಡುಪಿಯ (Udupi) ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.

    ನವದಂಪತಿ, ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ (Sugunendra Theertha Swamiji) ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಶ್ರೀಗಳು ಅಶೀರ್ವಚನ ನೀಡಿದ್ದು, ಶ್ರೀಕೃಷ್ಣನ ದರ್ಶನದಿಂದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ವಿವಾಹಕ್ಕೆ ವಿಶೇಷ ಅನುಗ್ರಹ ದೊರೆತಿದೆ. ಎಲ್ಲಾ ನವದಂಪತಿಗಳು ಕೃಷ್ಣನ ದರ್ಶನ ಮಾಡಬೇಕು. ಶ್ರೀಕೃಷ್ಣ ಕಲ್ಯಾಣದ ದೇವರು. ಇಂದು ಮದುವೆಯಾದ ತಕ್ಷಣ ಪಿಕ್‌ನಿಕ್‌ ಹೋಗ್ತಾರೆ. ಆದರೆ ತೇಜಸ್ವಿ ಸೂರ್ಯ ಅವರು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಇದನ್ನೂ ಓದಿ: ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಸದ ತೇಜಸ್ವಿ ಸೂರ್ಯ ದಂಪತಿ ಭೇಟಿ

    ಸಂಸತ್ತಿನಲ್ಲಿ ವೇದಘೋಷ ಮೊಳಗಿಸಲು ಹೊರಗಿನಿಂದ ವೈದಿಕರನ್ನು ಕರೆಸುವ ಅಗತ್ಯ ಇಲ್ಲ, ನಮ್ಮ ಸಂಸದರೇ ಸಾಕು. ಇಬ್ಬರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ದಂಪತಿಯಾಗಿದ್ದಾರೆ. ಇಡಿ ದೇಶಕ್ಕೆ ಇವರ ಸೇವೆ, ಸ್ಪೂರ್ತಿ ಸಿಗುವಂತಾಗಲಿ ಎಂದು ಹಾರೈಸಿದ್ದಾರೆ.

    ಎರಡೂ ಕುಟುಂಬಗಳ ಸದಸ್ಯರು ಮಠದಲ್ಲಿ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಶ್ರೀ ಕೃಷ್ಣನ ರಾತ್ರಿಯ ಮಹಾಪೂಜೆ ಮತ್ತು ಪ್ರತಿದಿನ ನಡೆಯುವ ರಥೋತ್ಸವ ಸೇವೆಯಲ್ಲಿ ನವದಂಪತಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ರಾಹುಲ್‌ ಸೂಚನೆ ಮೇರೆಗೆ ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ: ರವಿಶಂಕರ್ ಪ್ರಸಾದ್ ಕಿಡಿ

  • ಗೋವಿನ ಕೆಚ್ಚಲು ಕತ್ತರಿಸಿರೋದು ಭವಿಷ್ಯದ ಅಪಾಯವನ್ನು ಸೂಚಿಸುತ್ತಿದೆ: ಸುಗುಣೇಂದ್ರ ಶ್ರೀ

    ಗೋವಿನ ಕೆಚ್ಚಲು ಕತ್ತರಿಸಿರೋದು ಭವಿಷ್ಯದ ಅಪಾಯವನ್ನು ಸೂಚಿಸುತ್ತಿದೆ: ಸುಗುಣೇಂದ್ರ ಶ್ರೀ

    ಉಡುಪಿ: ಗೋವುಗಳೆಂದರೆ (Cow) ದೇವರ ಸನ್ನಿಧಾನ ಇರುವ ಸ್ಥಳ ಎಂದು ನಾವು ಗೌರವಿಸುತ್ತೇವೆ. ಪವಿತ್ರ ಎಂದು ಪರಿಗಣಿಸಿ ಭಾರತದಲ್ಲಿ ಪೂಜಿಸಲಾಗುತ್ತದೆ ಎಂದು ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು (Sugunendra Theertha Swamiji) ಹೇಳಿದ್ದಾರೆ.

    ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದರು. ಈ ಅಮಾನವೀಯ ಪ್ರಕರಣವನ್ನು ಖಂಡಿಸುತ್ತೇವೆ. ಈ ಘಟನೆಯ ಬಗ್ಗೆ ಕೇಳಿ ಆಘಾತವಾಗಿದೆ. ಕ್ರೂರವಾಗಿ ಹಿಂಸೆಯನ್ನು ನೀಡಿ ಹಸುವಿಗೆ ಘಾಸಿಗೊಳಿಸಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

    ನಮ್ಮ ದೇಶದಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವುದು ಭಯಾನಕವಾದದ್ದು. ಯಾವುದೇ ಘಟನೆಯನ್ನು ಗೋವಿನ ಮೇಲೆ ಹಿಂಸೆಯಾಗಿ ಪರಿಗಣಿಸಬಾರದು. ಇದು ಸನಾತನ ಧರ್ಮದ ಅಸ್ತಿತ್ವದ ಪ್ರಶ್ನೆಯಾಗಿದೆ. ನಮ್ಮ ದೇಶದಲ್ಲೇ ಇಂತಹ ಘಟನೆಗಳು ನಡೆಯುತ್ತಿದೆ ಎಂದರೆ ಮುಂದೆ ಏನಾಗಬಹುದು? ಅದನ್ನು ಯೋಚಿಸಿದರೆ ಕತ್ತಲೆ ಕವಿದಂತಾಗುತ್ತದೆ ಎಂದು ಆತಂಕ ಹೊರಹಾಕಿದ್ದಾರೆ.

    ಇದೊಂದು ಸಾಂಕೇತಿಕ ಘಟನೆಯಾಗಿದ್ದು ಭವಿಷ್ಯದ ಅಪಾಯವನ್ನು ಸೂಚಿಸುತ್ತಿದೆ. ಗೋಪಾಲಕೃಷ್ಣನ ( Udupi Gopalakrishna) ಸನ್ನಿಧಾನದಿಂದ ನಾನು ಈ ಕೃತ್ಯವನ್ನು ಖಂಡಿಸುತ್ತೇನೆ. ಸರ್ಕಾರ ವಿಶೇಷ ಪ್ರಯತ್ನವಹಿಸಿ ಅಪರಾಧಿಗಳನ್ನು ಶಿಕ್ಷಿಸಬೇಕು ಒತ್ತಾಯಿಸಿದ್ದಾರೆ.

  • ಸಂಸ್ಕೃತ ಬರದಿದ್ರೆ ದೇವಲೋಕಕ್ಕೆ ವೀಸಾ ಇಲ್ಲ: ಚರ್ಚೆಗೆ ಗ್ರಾಸವಾದ ಪುತ್ತಿಗೆ ಶ್ರೀ ಹೇಳಿಕೆ

    ಸಂಸ್ಕೃತ ಬರದಿದ್ರೆ ದೇವಲೋಕಕ್ಕೆ ವೀಸಾ ಇಲ್ಲ: ಚರ್ಚೆಗೆ ಗ್ರಾಸವಾದ ಪುತ್ತಿಗೆ ಶ್ರೀ ಹೇಳಿಕೆ

    – ಪಿತಾದಿಂದ ಫಾದರ್, ಮಾತಾದಿಂದ ಮದರ್
    – ಇಂಗ್ಲೀಷ್ ಅಂತರಾಷ್ಟ್ರೀಯ, ಸಂಸ್ಕೃತ ಅಂತರ್‌ಲೋಕದ ಭಾಷೆ

    ಉಡುಪಿ: ಸ್ವರ್ಗ ಲೋಕಕ್ಕೆ ಹೋಗಬೇಕಾದರೆ ಸಂಸ್ಕೃತ (Sanskrit) ಕಲಿಯಬೇಕು ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ (Sugunendra Theertha Swamiji) ಹೇಳಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಮಾಸೋತ್ಸವ ಸಮಾರೋಪದ ವೇಳೆ ಸಂಸ್ಕೃತ ಭಾಷೆಯಲ್ಲಿ ಮಾತನಾಡಿದ ಅವರು, ಸಂಸ್ಕೃತ ಪವಿತ್ರ ಶ್ರೇಷ್ಠ ವಿಶ್ವಭಾಷೆಯಾಗಿದೆ. ದೇವರ ಎಲ್ಲಾ ಶ್ಲೋಕಗಳು, ಪೂಜೆಗಳು ಸಂಸ್ಕೃತ ಭಾಷೆಯಲ್ಲಿ ನಡೆಯುತ್ತದೆ. ಒಂದು ತಿಂಗಳುಗಳ ಕಾಲ ನಡೆದ ಶ್ರೀ ಕೃಷ್ಣ ಮಹಾಸ್ವೋತ್ಸವವನ್ನು ದೇವರಿಗೆ ಅರ್ಪಣೆ ಮಾಡಿದ್ದೇವೆ. ಶ್ರೀಕೃಷ್ಣನ ಮಹೋತ್ಸವದ ಸಂದರ್ಭವಾದ ಕಾರಣ ನಾನು ದೇವ ಭಾಷೆ ಸಂಸ್ಕೃತದಲ್ಲಿ ಮಾತನಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

    ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ. ತುಳು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳು ಹುಟ್ಟಿಕೊಂಡಿರುವುದೇ ಸಂಸ್ಕೃತದಿಂದ. ಕೇವಲ ಭಾರತೀಯ ಭಾಷೆಗಳಿಗೆ ಮಾತ್ರ ಸಂಸ್ಕೃತ ಮೂಲವಲ್ಲ. ಆಂಗ್ಲ ಭಾಷೆಗಳಿಗೂ ಮೂಲ ಸಂಸ್ಕೃತವೇ ಆಗಿದೆ. ಪಿತಾದಿಂದ ಫಾದರ್, ಮಾತಾದಿಂದ ಮದರ್ ಹುಟ್ಟಿಕೊಂಡಿದೆ. ಸಮಗ್ರವು ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

    ಸಂಸ್ಕೃತ ಭಾಷೆಯನ್ನು ಹೊರತುಪಡಿಸಿ ಇತರ ಭಾಷೆಗಳು ಪ್ರಾದೇಶಿಕ ಭಾಷೆಗಳಾಗಿವೆ. ಕರ್ನಾಟಕದಲ್ಲಿ ಕನ್ನಡ, ದೇಶದಲ್ಲಿ ಹಿಂದಿ, ವಿದೇಶದಲ್ಲಿ ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ ಹಾಗೂ ಸಂಸ್ಕೃತ ಅಂತರ್‍ಲೋಕದ ಭಾಷೆ. ದೇವಲೋಕದಲ್ಲಿ ವ್ಯವಹರಿಸುವುದು ಸಂಸ್ಕೃತ ಭಾಷೆಯಲ್ಲಿ. ಸಂಸ್ಕೃತ ದೇವ ಭಾಷೆ. ಸಂಸ್ಕೃತ ಭಾಷೆ ತಿಳಿಯದಿದ್ದರೆ ದೇವಲೋಕಕ್ಕೆ ವೀಸಾ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಸ್ವಾಮೀಜಿಗಳ ಭಾಷಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳಾಗುತ್ತಿವೆ.

  • ಕೋಟಿ ಗೀತಾ ಯಜ್ಞಕ್ಕೆ ಚಾಲನೆ – ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಹೇಳಿಕೆ

    ಕೋಟಿ ಗೀತಾ ಯಜ್ಞಕ್ಕೆ ಚಾಲನೆ – ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಹೇಳಿಕೆ

    ನವದೆಹಲಿ: 2024ರ ಜನವರಿಯಲ್ಲಿ ನಡೆಯಲಿರುವ ಪರ್ಯಾಯದ ಸಲುವಾಗಿ ವಿಶ್ವ ಸಂಚಾರ ಮುಗಿಸಿದ್ದು, ಕೋಟಿ ಗೀತಾ ಯಜ್ಞಕ್ಕೂ (Koti Gita Yajna) ಚಾಲನೆ ನೀಡಲಾಗಿದೆ ಎಂದು ಉಡುಪಿಯ ಶ್ರೀಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು (Sugunendra Theertha Swamiji) ಹೇಳಿದರು.

    ದೆಹಲಿಯ ಪೇಜಾವರ ಶಾಖಾ ಮಠದಲ್ಲಿ ಮಾತನಾಡಿದ ಅವರು, 4ನೇ ಬಾರಿ ಪರ್ಯಾಯ ಪಟ್ಟ ಅಲಂಕರಿಸುತ್ತಿದ್ದು, ಗೀತೆಯ ಸಂದೇಶ ತತ್ವ ಸಾರುವ ಸಲುವಾಗಿ ಜಾಗತಿಕ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಧರ್ಮ, ಜಾತಿ ಮೀರಿ ಭಾಗವಹಿಸಬಹುದು ಎಂದರು. ಇದನ್ನೂ ಓದಿ: ಬಿಪರ್ಜೋಯ್ ಚಂಡಮಾರುತ ಎಫೆಕ್ಟ್- ಅಲೆಯ ಅಬ್ಬರಕ್ಕೆ ಯುವತಿಯರು ತಬ್ಬಿಬ್ಬು

    ಆಂದೋಲನದ ಭಾಗವಾಗಿ ಪುಸ್ತಕಗಳನ್ನು ನೀಡಲಾಗುತ್ತಿದ್ದು ಯಾವ ಭಾಷೆಯಲ್ಲಿ ಬೇಕಾದರೂ ಜನರು ಪುಸ್ತಕದಲ್ಲಿ ಗೀತೆಯನ್ನು ಬರೆದು‌ ನಮಗೆ ಕಳುಹಿಸಬಹುದು. ಬಳಿಕ ಅದನ್ನು ನಾವು ವಾಪಸ್ ಜನರಿಗೆ ಮರಳಿಸಲಿದ್ದು, ಅದನ್ನು ಪೂಜೆ ಮಾಡಬೇಕು. ಇದರಿಂದ ಭಗವದ್ಗೀತೆ ಹೆಚ್ಚು ಪಸರಿಸಲಿದೆ. ಆಂದೋಲನದಲ್ಲಿ ಭಾಗಿಯಾಗುವರು ಇತತರೂ ಭಾಗಿಯಾಗುವಂತೆ ಪ್ರೇರೆಪಿಸಬೇಕು ಎಂದು ಸಲಹೆ ನೀಡಿದರು.

    ಭಗವದ್ಗೀತೆ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನ ತಂದಿದೆ. ಮಾನಸಿಕ ಯಾತನೆ ಮುಕ್ತಿಗೆ ಗೀತೆ ಬಹಳ ಪರಿಣಾಮಕಾರಿಯಾಗಿದೆ. ಗೀತೆಯ ಪ್ರಚಾರ ವಿಶ್ವದಲ್ಲಿ ನಡೆಯಬೇಕು ಹಾಗಾಗಿ ಪ್ರತಿಯೊಬ್ಬರು ಕೂಡ ಈ ಗೀತೆಯ ಯಜ್ಞದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು ‘ಮಿಯಾಝಾಕಿ’

    ಕೋಟಿ ಗೀತಾ ಯಜ್ಞ ಸಲುವಾಗಿ ಪಾರ್ಥಸಾರಥಿಯ ಚಿನ್ನದ ರಥವನ್ನು ಮಾಡಿಸುವ ಯೋಜನೆ ರೂಪಿಸಲಾಗಿದೆ. ಪರ್ಯಾಯಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi), ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಸಾಮಾಜಿಕ, ಧಾರ್ಮಿಕ ಚಿಂತಕರಿಗೂ ಆಹ್ವಾನ ನೀಡಲಾಗಿದೆ ಎಂದು ಶ್ರೀಗಳು ಹೇಳಿದರು.

  • ಉಡುಪಿ ಜಿಲ್ಲಾಡಳಿತಕ್ಕೆ 10 ಲಕ್ಷ ರೂ. ಮೌಲ್ಯದ ದಿನಸಿ ಹಸ್ತಾಂತರಿಸಿದ ಪುತ್ತಿಗೆ ಶ್ರೀ

    ಉಡುಪಿ ಜಿಲ್ಲಾಡಳಿತಕ್ಕೆ 10 ಲಕ್ಷ ರೂ. ಮೌಲ್ಯದ ದಿನಸಿ ಹಸ್ತಾಂತರಿಸಿದ ಪುತ್ತಿಗೆ ಶ್ರೀ

    ಉಡುಪಿ: ಕೊರೊನಾ ವೈರಸ್ ದೇಶವನ್ನು ಸ್ತಬ್ಧ ಮಾಡಿದ್ದು, ಜನ ಸಂಕಷ್ಟದಲ್ಲಿದ್ದಾರೆ. ಜನೋಪಯೋಗಕ್ಕಾಗಿ ನಮ್ಮ ಮಠದ ವತಿಯಿಂದ ಹತ್ತು ಲಕ್ಷ ದೇಣಿಗೆ ಕೊಡುತ್ತಿದ್ದೇವೆ ಎಂದು ಉಡುಪಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಕೊರೊನಾ ವೈರಸ್ ಅನ್ನು ಉದ್ದೇಶಪೂರ್ವಕವಾಗಿ ಪಸರಿಸಲಾಗುತ್ತಿದೆ. ಈ ಬಗ್ಗೆ ನಮಗೆ ಅನುಮಾನ ಇದೆ. ಕೊರೊನಾ ನರಕಾಸುರನಂತೆ ಭಾಸವಾಗುತ್ತಿದೆ. ಕೊರೊನಾವನ್ನು ಉಲ್ಟಾ ಹೇಳಿದರೆ ನರಕ ಎಂದಾಗುತ್ತದೆ. ನರಕಾಸುರನ ಸಂಹಾರ ಮಾಡಲು ಕೃಷ್ಣನ ಅವತಾರ ಎತ್ತಿ ಬರಬೇಕಾಗಿದೆ. ಮಾನವ ಸಮುದಾಯ ಮಾಡಿದ ತಪ್ಪುಗಳಿಂದ ಈ ಪರಿಸ್ಥಿತಿ ಬಂದಿದೆ ಎಂದರು. ಇದೇ ವೇಳೆ ಐದು ಲಕ್ಷ ರೂ. ಮೌಲ್ಯದ ದಿನಸಿಯನ್ನು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಅವರ ಮೂಲಕ ಸ್ವಾಮೀಜಿ ಹಸ್ತಾಂತರ ಮಾಡಿದರು.

    ನಾವು ಪ್ರಾಚೀನ ಮೌಲ್ಯಗಳನ್ನು ಬದಿಗೆ ಇಟ್ಟಿದ್ದೇವೆ. ಅನಗತ್ಯ ಪ್ರಾಣಿ ಸಂಹಾರದಿಂದ ಕೊರೊನಾ ಬಂದಿದೆ. ಮನುಷ್ಯನ ದೇಹಕ್ಕೆ ಸಸ್ಯಾಹಾರವೇ ಸೂಕ್ತ. ಮನುಷ್ಯ ಬದುಕಲು ಮಾಂಸಾಹಾರದ ಅಗತ್ಯ ಇಲ್ಲ. ಜೀವಂತ ಪ್ರಾಣಿಗಳನ್ನು ಹಿಡಿದು ತಿನ್ನುವುದರಿಂದ ಕೊರೊನಾ ಬಂದಿದೆ. ಮಾನವ ಸಮುದಾಯ ವಿಧ್ವಂಸಕ ಚಿಂತನೆಯಲ್ಲಿ ಸಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.

    ಭಗವಂತ ಭೂಮಿಯನ್ನು ಸೃಷ್ಟಿ ಮಾಡಿದ್ದು ಬದುಕುವುದಕ್ಕಾಗಿ. ಮನುಷ್ಯರು ಶಸ್ತ್ರಾಸ್ತ್ರ ಒಗ್ಗೂಡಿಸುವಲ್ಲಿ ನಿರತರಾಗಿದ್ದಾರೆ. ಕೊರೊನಾದಿಂದ ಜಗತ್ತನ್ನು ನಾಶ ಮಾಡಬಹುದೆಂದು ದುಷ್ಟರಿಗೆ ಗೊತ್ತಾಗಿದೆ. ಉದ್ದೇಶಪೂರ್ವಕವಾಗಿ ಕೊರೊನಾ ಹರಡುವ ಪ್ರಯತ್ನವೂ ಆಗಬಹುದು. ಒಬ್ಬ ದುಷ್ಟ ನಿಂದ ಸಮಾಜಕ್ಕೆ ದೇಶಕ್ಕೆ ತೊಂದರೆಯಾಗುತ್ತದೆ. ಜಾಗತಿಕ ವೇದಿಕೆಯಲ್ಲಿ ಕೊರೊನಾ ಬಗ್ಗೆ ಚರ್ಚೆಯಾಗಲಿ. ಈಗಾಗಲೇ ವಿಶ್ವದ ಧಾರ್ಮಿಕ ನಾಯಕರ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.

    ಕೊರೊನಾದ ವಿರುದ್ಧ ದೂರಗಾಮಿ ಆಲೋಚನೆಯ ಅಗತ್ಯತೆ ಇದೆ. ಇತರ ದೇಶಗಳನ್ನು ಕಂಡು ಸಮಸ್ಯೆಯ ತೀವ್ರತೆಯನ್ನು ಅರಿಯಬೇಕು. ಕೊರೊನಾದಿಂದ ಪುತ್ತಿಗೆ ಮಠದ ವಿದೇಶಿ ಬ್ರಾಂಚ್ ಗಳಿಗೆ ತೊಂದರೆಯಾಗಿದೆ. ಅಮೆರಿಕ, ಲಂಡನ್‍ನ 11 ಶಾಖೆಗಳನ್ನು ಮುಚ್ಚಿದ್ದೇವೆ. ಮಠದ ಸಿಬ್ಬಂದಿ, ಅರ್ಚಕರು ಗೊಂದಲದಲ್ಲಿದ್ದಾರೆ. ಅಲ್ಲಿನ ಸರ್ಕಾರಗಳು ನಮಗೆ ಸಾಕಷ್ಟು ಸಹಾಯ ಮಾಡಿದೆ ಎಂದು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.