Tag: sugar cane

  • ಕಬ್ಬು ಕಟಾವು ಹಿನ್ನೆಲೆ, ಮೆಟ್ರಿಕ್ ಟನ್ ಕಬ್ಬಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ- ಬಿ.ಫೌಜಿಯಾ ತರನ್ನುಮ್

    ಕಬ್ಬು ಕಟಾವು ಹಿನ್ನೆಲೆ, ಮೆಟ್ರಿಕ್ ಟನ್ ಕಬ್ಬಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ- ಬಿ.ಫೌಜಿಯಾ ತರನ್ನುಮ್

    ಕಲಬುರಗಿ: ಕಳೆದ 2023-24ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು (Sugar Company) ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯ ಆಧಾರದ ಮೇಲೆ ಪ್ರಸಕ್ತ 2024-25ನೇ ಸಾಲಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ನುರಿಸುವ ಕಬ್ಬಿಗೆ ಮೊದಲ ಕಂತಿನ ರೂಪದಲ್ಲಿ ರೈತರಿಗೆ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆಯ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

    ಪ್ರಸಕ್ತ 2024-25ನೇ ಸಾಲಿನಲ್ಲಿ ಜು.1,2024 ರಿಂದ ಸೆ.30,2025ರ ವರೆಗೆ ಆಳಂದ ತಾಲೂಕಿನ ಭೂಸನೂರ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ 9,34,763 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 91,956 ಸಕ್ಕರೆ ಉತ್ಪಾದಿಸಲಿದೆ. ಶೇ.9.84 ಸಕ್ಕರೆ ಇಳುವರಿ ಬರಲಿದ್ದು, ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,264 ರೂ.ದರ ನಿಗದಿ ಪಡಿಸಲಾಗಿದೆ. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್‌ ಟೈಸನ್‌ – ಜೇಕ್ ಪಾಲ್ ವಿರುದ್ಧ ಸೋಲು

    ಅಫಜಲಪೂರ ತಾಲೂಕಿನ ಚೌಡಾಪುರ ಕೆ.ಪಿ.ಆರ್. ಶುಗರ್ಸ್ ಕಾರ್ಖಾನೆ 11,35,389 ಮೆಟ್ರಿಕ್ ಟನ್ ಕಬ್ಬು (Sugar Cane) ನುರಿಸಲಿದ್ದು, 91,170 ಸಕ್ಕರೆ ಉತ್ಪಾದಿಸಲಿದೆ. ಶೇ.10.12 ಸಕ್ಕರೆ ಇಳುವರಿಯೊಂದಿಗೆ ಪ್ರತಿ ಮೆ.ಟನ್ ಕಬ್ಬಿಗೆ 3,357 ರೂ. ದರ ನಿಗದಿ ಮಾಡಲಾಗಿದೆ. ಅದೇ ರೀತಿ ಅಫಜಲಪೂರ ತಾಲೂಕಿನ ಹವಳಗಾದ ರೇಣುಕಾ ಸಕ್ಕರೆ ಕಾರ್ಖಾನೆ 8,92,152 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 56,828 ಸಕ್ಕರೆ ಉತ್ಪಾದಿಸಲಿದೆ. ಶೇ.9.15 ಸಕ್ಕರೆ ಇಳುವರಿ ಹೊಂದಿದ್ದು, ಪ್ರತಿ ಮೆ.ಟನ್ ಕಬ್ಬಿಗೆ 3,151 ರೂ.ದರ ಹಾಗೂ ಯಡ್ರಾಮಿ ತಾಲೂಕಿನ ನಾಗರಹಳ್ಳಿಯ ಉಗಾರ ಸಕ್ಕರೆ ಕಾರ್ಖಾನೆ 3,79,352 ಮೆ.ಟನ್ ಕಬ್ಬು ನುರಿಸಲಿದ್ದು, 34,890 ಸಕ್ಕರೆ ಉತ್ಪಾದಿಸಲಿದೆ. ಶೇ.9 ಸಕ್ಕರೆ ಇಳುವರಿಯೊಂದಿಗೆ ಪ್ರತಿ ಮೆ.ಟನ್ ಕಬ್ಬಿಗೆ 3,151 ರೂ. ದರ ನಿಗದಿ ಮಾಡಲಾಗಿದೆ. ರೈತರು ಆಯಾ ಸಮೀಪದ ಸಕ್ಕರೆ ಕಾರ್ಖಾನೆಗೆ ಕಬ್ಬು ಮಾರಾಟ ಮಾಡುವ ಮೂಲಕ ಸೌಲಭ್ಯ ಪಡೆಯಬೇಕೆಂದು ಡಿ.ಸಿ. ಕೋರಿದ್ದಾರೆ. ಇದನ್ನೂ ಓದಿ: ಹಾಸನ | ಟ್ರ್ಯಾಕ್ಟರ್, ಬೈಕ್‌ ನಡುವೆ ಡಿಕ್ಕಿ – ಎಮ್‌ಸಿಎಫ್‌ ಸಿಬ್ಬಂದಿ ಸಾವು

  • ಪ್ರತಿ ಟನ್ ಕಬ್ಬಿಗೆ 3600 ರೂ. MSP ನಿಗದಿ ಪಡಿಸಿ

    ಪ್ರತಿ ಟನ್ ಕಬ್ಬಿಗೆ 3600 ರೂ. MSP ನಿಗದಿ ಪಡಿಸಿ

    ಕಲಬುರಗಿ: ಆಳಂದ ತಾಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆಯವರು(Sugar Factory) ಪ್ರತಿ ಟನ್‍ಗೆ 3,600 ರೂ. ಕನಿಷ್ಠ ಬೆಂಬಲ ಬೆಲೆ(MSP) ನಿಗದಿ ಮಾಡಿ 15 ದಿನಗಳೊಳಗಾಗಿ ಕಬ್ಬು ಕ್ರಷಿಂಗ್ ಪ್ರಾರಂಭಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ರೈತರು ಎಲ್ಲ ಸೇರಿ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ್ ಹಾಗೂ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ಥಂಬೆ ಎಚ್ಚರಿಕೆ ನೀಡಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸನೂರ ಸಕ್ಕರೆ ಕಾರ್ಖಾನೆ ಬಂದ್ ಆಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈಗ ಸಣ್ಣ ಹಾಗೂ ದೊಡ್ಡ ರೈತರ ಜಮೀನಿನಲ್ಲಿ ಕಬ್ಬು ಈಗಾಗಲೇ ಬೆಳೆ ಬೆಳೆದು ನಿಂತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಕಬ್ಬು ಬೆಳೆದು ನಿಂತಿದೆ. ಇದಕ್ಕಾಗಿ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‍ಗೆ 2,400 ರೂ. ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ರೈತರಿಗೆ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಪಾಲನೆ ಪೋಷಣೆ ಹಾಗೂ ಶಾಲಾ ಶುಲ್ಕ ಹೀಗೆ ಇನ್ನಿತರ ಖರ್ಚುಗಳನ್ನು ಸರಿದೂಗಿಸಲು ಆಗುವುದಿಲ್ಲ. ಹೀಗಾಗಿ ಕೂಡಲೇ ಎಂಎಸ್‍ಪಿ ಬೆಲೆಯನ್ನು 3,600 ರೂ. ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೆಜಿಎಫ್‌ ಮ್ಯೂಸಿಕ್‌ ಬಳಕೆ – ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ಬ್ಲಾಕ್‌ ಮಾಡುವಂತೆ ಕೋರ್ಟ್‌ ಆದೇಶ

    ಈಗ ರೇಣುಕಾ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‍ಗೆ 2,700 ರೂ. ದರ ನೀಡುತ್ತಿದ್ದು, ಆದರೆ ಭೂಸನೂರ ಸಕ್ಕರೆ ಕಾರ್ಖಾನೆಯವರು 3,600 ರೂ. ಎಎಸ್‍ಪಿ ನಿಗದಿ ಮಾಡಿ ಪ್ರಾರಂಭಿಸಬೇಕು. ಈಗಾಗಲೇ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಸಿಯಲ್ಲಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ತೊಗರಿ, ಸೋಯಾಬಿನ್, ಹೆಸರು, ಉದ್ದು ನಾಶವಾಗಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ದೂರಿದರು.

    ಪ್ರಮುಖರಾದ ಉಮಾಪತಿ ಪಾಟೀಲ್, ವಿಜಯಕುಮಾರ ಹತ್ತರಕಿ, ಮಂಜು ಸಿ.ಕೆ., ರಮೆಶ ರಾಗಿ, ಸುನಿಲ್‌ ಕುಮಾರ ಮಠಪತಿ, ಶರಣಯ್ಯ ಸ್ವಾಮಿ ಮಠ, ಸಿದ್ದು ವೇದಶೆಟ್ಟಿ ಇತರರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಸುಟ್ಟು ಭಸ್ಮ

    ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಸುಟ್ಟು ಭಸ್ಮ

    ಕಲಬುರಗಿ: ವಿದ್ಯುತ ಶಾರ್ಟ್ ಸರ್ಕ್ಯೂಟ್‌ನಿಂದ ಗದ್ದೆಯಲ್ಲಿ ಬೆಳೆದ ಕಬ್ಬು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಅವರಳ್ಳಿ ಗ್ರಾಮದಲ್ಲಿ ನಡೆದಿದೆ.

    ಯಲ್ಲಾಲಿಂಗ ಪಾಟೀಲ್ ಮತ್ತು ಮಲ್ಲಮ್ಮಾ ಪಾಟೀಲ್‌ಗೆ ಸೇರಿದ ಕಬ್ಬಿನ ಗದ್ದೆ ಇದಾಗಿದೆ. ೭ ಎಕರೆ ೧೯ ಗುಂಟೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಲಕ್ಷಾಂತರ ರೂ ಮೌಲ್ಯದ ಸುಮಾರು ೫೦೦ ಟನ್ ಕಬ್ಬು ಸುಟ್ಟು ಕರಕಲಾಗಿದೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ವಿದ್ಯುತ್ ತಂತಿಗಳು ಜೊತು ಬಿದ್ದಿರುವ ಪರಿಣಾಮ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಘಟನೆಯು ದೇವಲ್ ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

  • ಚಲಿಸುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಆಕಸ್ಮಿಕ ಬೆಂಕಿ

    ಚಲಿಸುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಆಕಸ್ಮಿಕ ಬೆಂಕಿ

    ಬಾಗಲಕೋಟೆ: ಚಲಿಸುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.

    ಪ್ರಭುಲಿಂಗೇಶ್ವರ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿದೆ. ಅದೃಷ್ಟವಶಾತ್ ಸ್ಥಳೀಯ ಪೊಲೀಸರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಟ್ರ್ಯಾಕ್ಟರ್ ನಲ್ಲಿದ್ದ ಕಬ್ಬಿನ ಲೋಡ್ ಬೆಂಕಿಯಿಂದ ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಬಸವೇಶ್ವರ ವೃತ್ತದಲ್ಲಿ ಬಳಿ ಟ್ರ್ಯಾಕ್ಟರ್ ನಿಲ್ಲಿಸಿ ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

    ಘಟನೆ ಕುರಿತು ಜಮಖಂಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅದು ಮೇಕೆದಾಟಲ್ಲ, ಮೇಕೆ ನಾಟಕ ಪಾದಯಾತ್ರೆ: ಮುನಿರತ್ನ

  • ಒಂದೇ ರಾತ್ರಿಯಲ್ಲಿ 43 ಟನ್ ಕಬ್ಬು ಲೋಡ್ – ಯುವಕನ ಸಾಧನೆಗೆ ರೈತರ ಮೆಚ್ಚುಗೆ

    ಒಂದೇ ರಾತ್ರಿಯಲ್ಲಿ 43 ಟನ್ ಕಬ್ಬು ಲೋಡ್ – ಯುವಕನ ಸಾಧನೆಗೆ ರೈತರ ಮೆಚ್ಚುಗೆ

    ಬಾಗಲಕೋಟೆ: ಸಾಧಿಸುವ ಛಲವೊಂದಿದ್ದರೆ ಏನುಬೇಕಾದರೂ ಸಾಧಿಸಬಹುದು ಎಂಬುದನ್ನು ಯುವ ಕಾರ್ಮಿಕರೊಬ್ಬರು ಒಂದೇ ರಾತ್ರಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಯುವ ಶ್ರಮಜೀವಿ 43 ಟನ್ ಕಬ್ಬನ್ನು ಟ್ರ್ಯಾಕ್ಟರ್‍ ಗೆ ಲೋಡ್ ಮಾಡುವ ಮೂಲಕ ಸಾಧನೆ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ.

    ಕ್ಷೇತ್ರ ಯಾವುದಾದರೇನು ಸಾಧಕನಿಗೆ ಸಾಧನೆ ಸಹಜವಾಗಿ ಪ್ರಾಪ್ತವಾಗುತ್ತದೆ ಎಂಬುದಕ್ಕೆ ಸಾಕ್ಷಿಯಂತಿರುವ ಈ ಘಟನೆ ನಡೆದಿರುವುದು ಬಾಗಲಕೋಟೆಯಲ್ಲಿ. ಕಟಾವ್ ಮಾಡಿ ಹಾಕಿದ್ದ 43 ಟನ್ ಕಬ್ಬನ್ನು ಒಂದೇ ರಾತ್ರಿಯಲ್ಲಿ ತಾನೊಬ್ಬನೇ ಟ್ರ್ಯಾಕ್ಟರ್‍ ಗೆ ಲೋಡ್ ಮಾಡಿರುವ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ 21 ವರ್ಷದ ಶ್ರೀನಿವಾಸ ನಾಯಕ ಇದೀಗ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕಬ್ಬು ಕಟಾವ್ ಮಾಡುವ ಗುಂಪಿನಲ್ಲಿ ಕೆಲಸ ಮಾಡುತ್ತಿರುವ ಶ್ರೀನಿವಾಸ್, ನಿನ್ನೆ ರಾತ್ರಿ 11.50ಕ್ಕೆ ಕಬ್ಬು ಲೋಡ್ ಆರಂಭಿಸಿ ಇಂದು ಬೆಳಗ್ಗೆ 6.20 ರವರೆಗೆ ಮೂರು ಟ್ರ್ಯಾಲಿಗಳಲ್ಲಿ ಒಟ್ಟು 43 ಟನ್ ಕಬ್ಬು ಲೋಡ್ ಮಾಡಿದ್ದಾರೆ.

    ಗ್ರಾಮದ ರೈತ ಶ್ರೀನಿವಾಸ್ ಲೆಂಡಿ ಅವರ ಜಮೀನಿನಲ್ಲಿ ಕಡಿದು ಹಾಕಿದ್ದ ಕಬ್ಬನ್ನು ಶ್ರೀನಿವಾಸ್ ಹೊತ್ತುಕೊಂಡು ಟ್ರ್ಯಾಕ್ಟರ್‍ ನಲ್ಲಿ ಹಾಕಿದ್ದಾರೆ. ಈ ಹಿಂದೆ ಗ್ರಾಮದಲ್ಲಿ ಒಬ್ಬ ಕೂಲಿ ಕಾರ್ಮಿಕರೊಬ್ಬರು ಒಂದು ರಾತ್ರಿಯಲ್ಲಿ 34 ಟನ್ ಕಬ್ಬು ಲೋಡ್ ಮಾಡಿದ್ದರು. ಆ ದಾಖಲೆ ಮೀರಿಸಲು ಶ್ರೀನಿವಾಸ್ 43 ಟನ್ ಕಬ್ಬು ಲೋಡ್ ಮಾಡಿ, ಕಬ್ಬಿನ ಗ್ಯಾಂಗ್‍ನವರಿಂದ ಶಹಬ್ಬಾಶ್ ಗಿರಿ ಪಡೆದಿದ್ದಾರೆ.

    ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಕಟಾವು ಆರಂಭವಾಗಿದ್ದು, ಕಾರ್ಮಿಕರು ಈ ರೀತಿಯ ಜಿದ್ದಿಗೆ ಬಿದ್ದು ಕಟಾವ್ ಮಾಡಿ, ಕಬ್ಬು ಟ್ರ್ಯಾಕ್ಟರ್‍ ಗೆ ಹೇರುವ ಸಾಧನೆ ಮಾಡಿ ಗಮನ ಸೆಳೆಯುತ್ತಿದ್ದಾರೆ. ಶ್ರೀನಿವಾಸ್ ಸಾಧನೆ ಜಿಲ್ಲೆಯ ರೈತ ಸಮೂಹದಿಂದ ಮಚ್ಚುಗೆ ವ್ಯಕ್ತವಾಗಿದೆ.

  • ಬೆಳೆಯನ್ನು ಎಮ್ಮೆ ಹಾಳು ಮಾಡಿತೆಂದು ಅಪ್ರಾಪ್ತ ಬಾಲಕನ ಹೊಡೆದು ಕೊಂದ್ರು!

    ಬೆಳೆಯನ್ನು ಎಮ್ಮೆ ಹಾಳು ಮಾಡಿತೆಂದು ಅಪ್ರಾಪ್ತ ಬಾಲಕನ ಹೊಡೆದು ಕೊಂದ್ರು!

    – ಬಾಲಕನ ಜೊತೆಯೇ ವಾಗ್ವಾದಕ್ಕಿಳಿದು ಕೋಲಿನಿಂದ ಹಲ್ಲೆಗೈದ್ರು

    ಲಕ್ನೋ: ತೋಟಕ್ಕೆ ನುಗ್ಗಿ ಎಮ್ಮೆ ಬೆಳೆ ಹಾಳು ಮಾಡಿತೆಂದು ಸಿಟ್ಟುಗೊಂಡ ಮೂವರು ಕುಡುಕರು 15 ವರ್ಷದ ಬಾಲಕನ ಹೊಡೆದು ಕೊಂದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಘಟನೆಯ ಬಳಿಕ ಮೂವರು ಆರೋಪಿಗಳು ಕೂಡ ಪರಾರಿಯಾಗಿದ್ದಾರೆ. ಮೃತ ದುರ್ದೈವಿ ಬಾಲಕನನ್ನು ಕುಲ್ದೀಪ್ ಯಾದವ್ ಎಂದು ಗುರುತಿಸಲಾಗಿದೆ.

    ಯಾದವ್ ಶನಿವಾರ ತನ್ನ ಗ್ರಾಮದಲ್ಲಿ ಗೆಳೆಯರ ಜೊತೆ ಸೇರಿಕೊಂಡು ಆಟವಾಡುತ್ತಿದ್ದನು. ಇದೇ ಸಂದರ್ಭದಲ್ಲಿ ಸಾಧು ಸಿಂಗ್ ಹಾಗೂ ಧರ್ಮೇಂದ್ರ ಸಿಂಗ್ ಅವರ ಕಬ್ಬಿನ ತೋಟಕ್ಕೆ ಯಾದವ್ ಮನೆಯ ಎಮ್ಮೆ ನುಗ್ಗಿದೆ. ಹೀಗೆ ತೋಟಕ್ಕೆ ನುಗ್ಗಿದ ಎಮ್ಮೆಯನ್ನು ಸಾಧು ಹಾಗೂ ಧರ್ಮೇಂದ್ರ ಸಿಂಗ್ ಹಿಡಿದಿದ್ದು, ಯಾದವ್ ಮನೆಗೆ ವಾಪಸ್ ಮಾಡಲು ನಿರಾಕರಿಸಿದ್ದಾರೆ. ಅಲ್ಲದೆ ಸಹೋದರರಿಬ್ಬರು ಯಾದವ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

    ಜಗಳ ತಾರಕಕ್ಕೇರುತ್ತಿದ್ದಂತೆಯೇ ಸಾಧು, ಧರ್ಮೇಂದ್ರ ಹಾಗೂ ಮಗ ಭೂಪಿಂದರ್ ಸೇರಿಕೊಂಡು ಯಾದವ್ ಮೇಲೆ ಕೋಲಿನಿಂದ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಯಾದವ್ ಪ್ರಜ್ಞಾಹೀನನಾಗಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಈ ವೇಳೆ ಮೂವರು ಆರೋಪಿಗಳೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಇತ್ತ ಯಾದವ್ ತಂದೆ ಮಹೇಶ್ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡ ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕನ ಸ್ಥಿತಿ ಗಂಭೀರವಾಗಿದ್ದಿದ್ದನ್ನು ಅರಿತು ಹೆಚ್ಚಿನ ಚಿಕಿತ್ಸೆಗಾಗಿ ಬರೇಲಿಯ ಆಸ್ಪತ್ರೆಗೆ ಕರೆದುಕೊಯ್ಯಲು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಕರೆದುಕೊಂಡು ಹೋಗಲಾಯಿತಾದರೂ ಮಾರ್ಗ ಮಧ್ಯೆಯೇ ಆತ ಮೃತಪಟ್ಟಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜಗ್ನಾರಾಯರ್ನ ಪಾಂಡೆ ತಿಳಿಸಿದ್ದಾರೆ.

  • ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ- ನೋಡ ನೋಡುತ್ತಿದ್ದಂತೆ ಸುಟ್ಟುಹೋಯ್ತು 10 ಎಕ್ರೆ ಬೆಳೆ

    ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ- ನೋಡ ನೋಡುತ್ತಿದ್ದಂತೆ ಸುಟ್ಟುಹೋಯ್ತು 10 ಎಕ್ರೆ ಬೆಳೆ

    ಸಾಂದರ್ಭಿಕ ಚಿತ್ರ

    ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಟಾವಿಗೆ ಬಂದಿದ್ದ ಸುಮಾರು 10 ಕ್ಕೂ ಹೆಚ್ಚು ಎಕರೆ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರಟೇಕ ಗ್ರಾಮದಲ್ಲಿ ನಡೆದಿದೆ.

    ಇಂದು ಮಧ್ಯಾಹ್ನದ ವೇಳೆ ಚಂದೂರಟೇಕ ಗ್ರಾಮದ ಕಬ್ಬಿನ ಗದ್ದೆಯಲ್ಲಿದ್ದ ಟ್ರಾನ್ಸ್‌ಫಾರ್ಮರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು. ಬಳಿಕ ಸುತ್ತಲಿದ್ದ ಗ್ರಾಮದ ಸುಕುಮಾರ ಚೌಗಲೆ, ಮಹಾವೀರ ಚೌಗಲೆ, ಧನಂಜಯ ಚೌಗಲೆ,ಬಾಳಾಸಾಬ ಚೌಗಲೆ, ರಾಜು ಚೌಗಲೆ, ಸಾಗರ ಚೌಗಲೆ ಸೇರಿದಂತೆ 7 ಕ್ಕಿಂತ ಹೆಚ್ಚು ರೈತರ 10 ಎಕರೆಗೂ ಅಧಿಕ ಕಬ್ಬು ಸುಟ್ಟು ಕರಕಲಾಗಿದೆ.

    ಬೆಂಕಿಯನ್ನು ಕಂಡು ರೈತರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲ. ನೋಡು ನೋಡುತ್ತಲೇ ಬೆಳೆದು ನಿಂತಿದ್ದ ಕಬ್ಬು ಧಗಧಗನೆ ಉರಿದು ಸುಟ್ಟು ಕರಕಲಾಗಿವೆ. ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

    ಇತ್ತೀಚೆಗೆ ಇದೇ ಗ್ರಾಮದಲ್ಲಿ 60 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿತ್ತು. ಘಟನೆ ಸಂಬಂಧ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಗಲಕೋಟೆ ರೈತನಿಗೆ ಸಾಲಕಟ್ಟುವಂತೆ ಸಮನ್ಸ್!

    ಬಾಗಲಕೋಟೆ ರೈತನಿಗೆ ಸಾಲಕಟ್ಟುವಂತೆ ಸಮನ್ಸ್!

    ಬಾಗಲಕೋಟೆ: ಒಂದು ಕಡೆ ಕಬ್ಬು ಬೆಳೆಗಾರರ ಹೋರಾಟ ಮುಗಿಲು ಮುಟ್ಟಿದೆ. ಈ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕಬ್ಬು ಬೆಳೆಗಾರನೋರ್ವರಿಗೆ ಬ್ಯಾಂಕ್ ನಿಂದ ಕೋರ್ಟ್ ಸಮನ್ಸ್ ಬಂದಿದೆ.

    ಸಾಲ ಮರುಪಾವತಿ ಮಾಡುವಂತೆ ಸಮನ್ಸ್ ಜಾರಿಯಾಗಿದ್ದು, ರೈತ ಕಂಗಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ರೈತ ರವಿಶಂಕರ ವೆಂಕಪ್ಪ ಕುಸಗಲ್ ಗೆ ಬೆಂಗಳೂರಿನ ಡೆಬ್ಟ್ ರಿಕವರಿ ಟ್ರಿಬ್ಯೂನಲ್‍ನಿಂದ ಸಮನ್ಸ್ ಜಾರಿಯಾಗಿದೆ.

    ರೈತ ಇಂಡಿಯನ್ ಬ್ಯಾಂಕ್ ನಿಂದ 2015ರಲ್ಲಿ ಕಬ್ಬು ಬೆಳೆಸಾಲ ಅಂತ 10 ಲಕ್ಷ ರೂ. ಪೈಪ್ ಲೈನ್ ಗಾಗಿ 6 ಲಕ್ಷ ರೂ. ಸಾಲ ಪಡೆದಿದ್ದರು. ನಂತರ ಕೊಳವೆ ಬಾವಿ ಬಂದ್ ಆಗಿದ್ದರಿಂದ ನಾಲ್ಕು ವರ್ಷಗಳಿಂದ ಕಬ್ಬು ಬೆಳೆಯಲು ಆಗಿರಲಿಲ್ಲ. ಹೀಗಾಗಿ ರೈತನಿಗೆ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಲಾಗಿಲ್ಲ. ಆದರೂ ನೋಟಿಸ್ ಬರುತ್ತಲೇ ಇತ್ತು. ಇದರಿಂದ ನೊಂದ ರೈತ ಶಿವಶಂಕರ್ ಬ್ಯಾಂಕಿನ ಕಿರುಕುಳಕ್ಕೆ ಬೇಸತ್ತು ಕಳೆದ ಆಗಸ್ಟ್ 30ರಂದು ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದರು. ನಂತರ ಮುಖ್ಯಮಂತ್ರಿ ಸಚಿವಾಲಯದಿಂದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬಾಗಲಕೋಟೆ ಜಿಲ್ಲಾಧಿಕಾರಿಗೆ ಕಳೆದ ಅಕ್ಟೋಬರ್ 3 ರಂದು ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದರು.

    ನಾಲ್ಕು ವರ್ಷಗಳ ಹಿಂದೆ ಮುಧೋಳ ರನ್ನ ಸಕ್ಕರೆ ಕಾರ್ಖಾನೆಗೆ ಸಾಗಿಸಿದ ಕಬ್ಬಿಗೆ ಕಡಿತ ಮಾಡಿದ್ದ ದುಡ್ಡು ಇನ್ನೂ ಬಾಕಿ ಬಂದಿಲ್ಲ ಸಾಲ ಎಲ್ಲಿ ಕಟ್ಟಲಿ ಎಂಬುದು ಇದೀಗ ರೈತನ ಗೋಳಾಗಿದೆ. ಶಿವಶಂಕರನಿಗೆ ಅಷ್ಟೇ ಅಲ್ಲದೆ ಇವರಿಗೆ ಜಾಮೀನುದಾರರಾದವ್ರಿಗೂ ಸಮನ್ಸ್ ಜಾರಿಯಾಗಿದೆ. ರೈತನಿಗೆ ಸರ್ಕಾರದ ಸಾಲ ಮನ್ನಾ ಲಾಭವೂ ಕೂಡ ತಟ್ಟಿಲ್ಲ ಬ್ಯಾಂಕಿನಿಂದ ಕಿರುಕುಳವೂ ನಿಂತಿಲ್ಲ.

    ಸಿಎಂ ಬ್ಯಾಂಕಿನವರಿಗೆ ನೋಟಿಸ್ ನೀಡದಂತೆ ಹೇಳಿದ್ದೇನೆ ಅಂತಾರೆ. ಆದರೆ ಇಲ್ಲಿ ಬ್ಯಾಂಕಿನವರು ಅದಕ್ಕೆ ಕಿವಿಗೊಡದೇ ನೋಟಿಸ್ ಮೇಲೆ ನೋಟಿಸ್ ಕೊಡುತ್ತಲೇ ಇದ್ದಾರೆ. ಇದು ಕಬ್ಬು ಬೆಳೆಗಾರ ರೈತ ರವಿಶಂಕನಿಗೆ ಚಿಂತೆಗೀಡು ಮಾಡಿದೆ.

    ಕಬ್ಬು ಬೆಳೆಗಾರರ ಹೋರಾಟದ ನಡುವೆಯೇ ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಕಬ್ಬು ರೈತರು ಮತ್ತು ಕಾರ್ಖಾನೆ ಮಾಲೀಕರ ಮಹತ್ವದ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ಮಧ್ಯಾಹ್ನ 12.30ಕ್ಕೆ ಗಂಟೆಗೆ ಸಭೆ ನಡೆಯಲಿದ್ದು, ಕಬ್ಬು ಬಾಕಿ ಪಾವತಿ ಮತ್ತು ರೈತರ ಇತರೆ ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಳ್ಳೆ ಕೆಲಸ ಮಾಡುವುದು ತಪ್ಪೇ? ನಾನು ಏನು ತಪ್ಪು ಮಾಡಿದ್ದೇನೆ: ಸಿಎಂ

    ಒಳ್ಳೆ ಕೆಲಸ ಮಾಡುವುದು ತಪ್ಪೇ? ನಾನು ಏನು ತಪ್ಪು ಮಾಡಿದ್ದೇನೆ: ಸಿಎಂ

    ಬೆಂಗಳೂರು: ನಾನು ಮಹಿಳೆಗೆ ಅಪಮಾನ ಮಾಡಿದರೆ ಈ ಕ್ಷಣವೇ ರಾಜೀನಾಮೆ ನೀಡುತ್ತೇನೆ. ಹೆಣ್ಣುಮಗಳಿಗೆ ನೋವಾಗಿದ್ದರೆ ಪದ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಕೆಯೇ ಮುಖ್ಯಮಂತ್ರಿ ನಾಲಾಯಕ್ ಅಂದು ರಾಜ್ಯಕ್ಕೆ ಅವಮಾನ ಮಾಡಿದ್ದಾರೆ. ಕನ್ನಡಸೌಧ ಗೇಟ್‍ಗೆ ಕಲ್ಲಲ್ಲಿ ಹೊಡೆದರೆ ಸುಮ್ಮನಿರಬೇಕೇ? ಅದಕ್ಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ನಾನು ರೈತ ಮಹಿಳೆಯಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಮಹಿಳೆಯರಿಗೆ ಅಪಮಾನ ಮಾಡಿದೆ ಎಂದು ಹೇಳಿದರೆ ಒಂದು ಕ್ಷಣ ನಾನು ಈ ಸ್ಥಾನದಲ್ಲಿ ಇರುವುದಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಗೂ ನಾನು ರೆಡಿ. ಒಳ್ಳೆ ಕೆಲಸ ಮಾಡುವುದು ತಪ್ಪೇ? ನಾನು ಏನು ತಪ್ಪು ಮಾಡಿದ್ದೇನೆ? ಆ ಮಹಿಳೆಗೆ ನೋವಾಗಿದ್ದರೆ ಆ ಪದವನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಎಂದರು.

    ಪೊಲೀಸರಿಗಿಂತ ಮಾಧ್ಯಮಗಳೇ ಮೊದಲು ಹೋಗ್ತಿರಾ ಅಂದ್ರೆ ಅರ್ಥ ಏನು? ನಾಲಾಯಕ್ ಮುಖ್ಯಮಂತ್ರಿ ಅಂದ್ರೆ ನಾನು ಸುಮ್ಮನೆ ಇರಬೇಕೇ? ಅದಕ್ಕೆ ಆಕೆಯನ್ನ ಬಂಧಿಸಲು ನಾನೇ ಹೇಳಿದೆ. ಗುಪ್ತಚರ ಇಲಾಖೆಯ ವೈಫಲ್ಯ ಆಗಿಲ್ಲ. ಕೆಲ ಮಾಧ್ಯಮಗಳ ಪ್ರಾಯೋಜಿತ ಪ್ರತಿಭಟನೆ ಇದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದರು.

    ಮುಖ್ಯಮಂತ್ರಿಯಾಗಿ ನಾನು ಟಿಎ, ಡಿಎ ತೆಗೆದುಕೊಂಡಿಲ್ಲ. ಸರ್ಕಾರಿ ಬಂಗಲೆಯನ್ನು ನಾನು ಬಳಸುತ್ತಿಲ್ಲ. ಪೆಟ್ರೋಲ್ ಬಿಲ್ ತಗೊಂಡಿಲ್ಲ. ನಾನು ನಾಡಿನ ಜನರನ್ನು ರಕ್ಷಿಸಲು ಇಲ್ಲಿ ಕುಳಿತಿದ್ದೇನೆ. ನನ್ನ ಮೇಲೆ ಯಾಕೆ ಅನುಮಾನ, ಯಾಕೆ ಆಕ್ರೋಶ? 45 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಕ್ಕಾ ಎಂದು ಪ್ರಶ್ನಿಸಿದರು.

    ಪ್ರತಿಭಟನೆ ವಾಪಸ್: ಸೋಮವಾರ ಫ್ರೀಡಂ ಪಾರ್ಕ್‍ನಲ್ಲಿ ರೈತರು ನೆಲದಮೇಲೆ ಉರುಳಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಹೋರಾತ್ರಿ ಧರಣಿಗೂ ಮುಂದಾಗಿದ್ದರು. ಆದರೆ ಮಧ್ಯಾಹ್ನ 4 ಗಂಟೆ ಹೊತ್ತಿಗೆ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ ರೈತರು ಪ್ರತಿಭಟನೆ ಹಿಂಪಡೆದರು. ಸಿಎಂ ನಮ್ಮನ್ನ ಭೇಟಿಯಾಗದೇ ಇದ್ದರೂ ಪರವಾಗಿಲ್ಲ. ನಮ್ಮ 29 ಬೇಡಿಕೆಗಳ ಪಟ್ಟಿಕೊಟ್ಟಿದ್ದೇವೆ. 15 ದಿನಗಳೊಳಗೆ ಈಡೇರಿಸದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಡೆಡ್‍ಲೈನ್ ನೀಡಿದರು.

    https://www.youtube.com/watch?v=Uy_ZDY02jOo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿದ್ಯುತ್ ತಂತಿ ತಗುಲಿ 9 ಲಕ್ಷ ರೂ. ಮೌಲ್ಯದ 9 ಎಕರೆ ಕಬ್ಬು ಬೆಂಕಿಗಾಹುತಿ

    ವಿದ್ಯುತ್ ತಂತಿ ತಗುಲಿ 9 ಲಕ್ಷ ರೂ. ಮೌಲ್ಯದ 9 ಎಕರೆ ಕಬ್ಬು ಬೆಂಕಿಗಾಹುತಿ

    ವಿಜಯಪುರ: ವಿದ್ಯುತ್ ತಂತಿ ತಗುಲಿದ ಪರಿಣಾಮ ಇಬ್ಬರು ರೈತರಿಗೆ ಸೇರಿದ್ದ ಒಂಭತ್ತು ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.

    ಉಮರಾಣಿ ಗ್ರಾಮದ ಕಸ್ತೂರಪ್ಪ ಮುತ್ತಪ್ಪ ಚಿಂಚೋಳಿ ಅವರಿಗೆ ಸೇರಿದ 6 ಎಕರೆ ಹಾಗೂ ಅಶೋಕ್ ಮುತ್ತಪ್ಪ ಚಿಂಚೋಳಿರಿಗೆ ಸೇರಿದ 3 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಮಾಹಿತಿಗಳ ಪ್ರಕಾರ ಫಸಲಿಗೆ ಬಂದಿದ್ದ ಬೆಳೆಗೆ ವಿದ್ಯುತ್ ತಂತಿ ತಗುಲಿದ್ದರ ಪರಿಣಾಮ 9 ಎಕರೆಯಲ್ಲಿ ಬೆಳೆದಿದ್ದ ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ಕಬ್ಬು ಸಂಪೂರ್ಣ ಸುಟ್ಟುಹೋಗಿದೆ.

    ಭೀಕರ ಬರದಲ್ಲಿ ಇಬ್ಬರೂ ರೈತರು ಕಷ್ಟಪಟ್ಟು ಕಬ್ಬಿನ ಬೆಳೆ ಬೆಳೆದಿದ್ದರು. ಆದರೆ ಫಸಲು ಕೈಗೆ ಬರುವ ಮುನ್ನವೇ, ಸುಟ್ಟು ಹೋಗಿದ್ದರಿಂದ ರೈತರಿಬ್ಬರೂ ಕಂಗಾಲಾಗಿ ಹೋಗಿದ್ದಾರೆ. ಈ ಬಗ್ಗೆ ಕೂಡಲೇ ಸೂಕ್ತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಇಂಡಿ ತಾಲೂಕಿನ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews