Tag: Sued

  • ಜೂಮ್ ಕಾಲ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿರುದ್ಧವೇ ಕೇಸ್

    ವಾಷಿಂಗ್ಟನ್: ಸಂಸ್ಥೆಯ ಆರ್ಥಿಕ ನಿರೀಕ್ಷೆ ಹಾಗೂ ಕಾರ್ಯಕ್ಷಮತೆಯ ಬಗ್ಗೆ ಹೂಡಿಕೆದಾರರನ್ನು ತಪ್ಪುದಾರಿಗೆಳೆಯುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಬೆಟರ್ ಡಾಟ್ ಕಾಮ್‌ನ ಮುಖ್ಯ ಕಾರ್ಯನಿರ್ವಾಹಕ ವಿಶಾಲ್ ಗಾರ್ಗ್ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

    ಸಾಫ್ಟ್‌ಬ್ಯಾಂಕ್ ಬೆಂಬಲಿತ ಕಂಪನಿಯ ಮಾರಾಟ ಹಾಗೂ ಕಾರ್ಯಾಚರಣೆಗಳ ಮಾಜಿ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಸಾರಾ ಪಿಯರ್ಸ್ ತನ್ನ ಮೊಕದ್ದಮೆಯಲ್ಲಿ ಗಾರ್ಗ್ ತನ್ನ ಆರ್ಥಿಕ ಸ್ಥಿತಿಯ ಕಾರಣ ಹೂಡಿಕೆದಾರರು ಹಿಂದೇಟು ಹಾಕುವ ಸಂದರ್ಭ ಎಸ್‌ಪಿಎಸಿ ಯೊಂದಿಗೆ ವಿಲೀನವಾಗುವ ಬಗ್ಗೆ ತಪ್ಪಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಡಿ ಸಮನ್ಸ್ – ವಿಚಾರಣೆಯಿಂದ ವಿನಾಯಿತಿ ಕೋರಿದ ಸೋನಿಯಾ

    ನ್ಯಾಯಾಲಯದಲ್ಲಿ ಪಿಯರ್ಸ್ ಸಲ್ಲಿಸಿದ ಮೊಕದ್ದಮೆಯಲ್ಲಿ ಈ ಒಪ್ಪಂದದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೂ ಆರ್ಥಿಕ ಪರಿಹಾರ ಕೋರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಟರ್ ಡಾಟ್ ಕಾಮ್‌ನ ವಕೀಲರು, ಕಂಪನಿಯ ಹಣಕಾಸು, ಲೆಕ್ಕಪತ್ರದ ಬಗ್ಗೆ ವಿಶ್ವಾಸವಿದೆ ಹಾಗೂ ಈ ಮೊಕದ್ದಮೆಯನ್ನು ನಾವು ಬಲವಾಗಿ ಸಮರ್ಥಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೆಪೋ ರೇಟ್ ಏರಿಸಿದ ಆರ್‌ಬಿಐ – ಹೆಚ್ಚಳವಾಗಲಿದೆ ಲೋನ್, ಇಎಂಐಗಳ ಬಡ್ಡಿ ದರ

    ಕಳೆದ ವರ್ಷ ಬೆಟರ್ ಡಾಟ್ ಕಾಮ್ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ಷೇರು ಬಿಡುಗಡೆ ಮಾಡಲು ಮುಂದಾಗಿತ್ತು. ಈ ಸಂಬಂಧ ಬೆಟರ್ ಡಾಟ್ ಕಾಮ್ ವಿಶೇಷ ಉದ್ದೇಶದ ಸ್ವಾದೀನ ಕಂಪನಿ ಅರೋರಾ ಜೊತೆ ವಿಲೀನ ಮಾಡಿಕೊಂಡಿತ್ತು. 7.7 ಶತಕೋಟಿ ಡಾಲರ್(ಸುಮಾರು 59 ಸಾವಿರ ಕೋಟಿ ರೂ.) ಮೌಲ್ಯದ ಒಪ್ಪಂದ ಮಾಡಿಕೊಂಡಿತ್ತು. ಈ ವಿಲೀನ ಪ್ರಕ್ರಿಯೆ ಶೀಘ್ರವೇ ಕೊನೆಯಾಗುವ ಸಾಧ್ಯತೆಯಿದೆ.