Tag: Sudhir Sangwan

  • ಆಸ್ತಿಗಾಗಿ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆ? ಪೋಲಿಸರಿಗೆ ಮಹತ್ವದ ಸುಳಿವು

    ಆಸ್ತಿಗಾಗಿ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆ? ಪೋಲಿಸರಿಗೆ ಮಹತ್ವದ ಸುಳಿವು

    ಗುರುಗ್ರಾಮ ಮೂಲದ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ವಾರದ ಹಿಂದೆ ಗೋವಾದಲ್ಲಿ ನಿಧನರಾಗಿದ್ದರು. ಈ ಸಾವು ಹೃದಯಾಘಾತದಿಂದ ಸಂಭವಿಸಿದ್ದು ಎಂದು ಹೇಳಲಾಗಿತ್ತು. ಆನಂತರ ನಟಿಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತನಿಖೆಗೆ ಕೈಗೊಳ್ಳಲಾಗಿದ್ದು, ಸೊನಾಲಿ ಸಾವಿನ ಕುರಿತು ದಿನಕ್ಕೊಂದು ತಿರುವು ಸಿಗುತ್ತಿದೆ.

    ಸೋನಾಲಿ ಸಾವಿಗೆ ಆಕೆಯ ಆಪ್ತರಾದ ಸುಧೀರ್ ಸಾಂಗ್ವಾನ್ ಮತ್ತು ಸಖ್ಖೀಂದರ್ ಕಾರಣ ಎಂದು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದರು. ಆಕೆಗೆ ಡ್ರಗ್ಸ್ ನೀಡಿದ ಹಿನ್ನೆಲೆಯಲ್ಲಿ ಸಾವು ಆಗಿರಬಹುದು ಎಂದು ಆಪ್ತರು ಹೇಳಿಕೊಂಡಿದ್ದರು ಎನ್ನಲಾಗುತ್ತಿದೆ. ಈ ಸಾವು ಸೊನಾಲಿ ಆಸ್ತಿಗಾಗಿ ನಡೆದಿದೆ ಎನ್ನುವ ಮಾಹಿತಿಯನ್ನೂ ಇದೇ ಆಪ್ತರು ನೀಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ತಮ್ಮ ಸಂಭಾವನೆಯಲ್ಲಿ ʼಜವಾನ್‌ʼ ಚಿತ್ರಕ್ಕಾಗಿ 5 ಕೋಟಿ ಹೆಚ್ಚಿಸಿಕೊಂಡ ವಿಜಯ್ ಸೇತುಪತಿ!

    ಗುರುಗ್ರಾಮದಲ್ಲಿ ಸೊನಾಲಿ ಹೆಸರಿನಲ್ಲಿ ಫ್ಲ್ಯಾಟ್ ಇದ್ದು, ಇದು ಸೊನಾಲಿ ಮತ್ತು ಸುಧೀರ್ ಸಾಂಗ್ವಾನ್ ಹೆಸರಿನಲ್ಲಿ ನೋಂದಣಿ ಆಗಿದೆ ಎಂದು ಹೇಳಲಾಗುತ್ತಿದೆ. ಈ ನೋಂದಣಿ ಪತ್ರದಲ್ಲಿ ಸೊನಾಲಿ ಅವರು ಸುಧೀರ್ ಪತ್ನಿ ಎಂದು ನಮೂದಿಸಲಾಗಿದೆಯಂತೆ. ಅಲ್ಲದೇ, ಸೊನಾಲಿ ಅವರ ಆಸ್ತಿಯನ್ನು ಸುಧೀರ್ ನೋಡಿಕೊಳ್ಳುತ್ತಿದ್ದರು ಎಂದೂ ಹೇಳಲಾಗಿದ್ದು, ಈ ಆಸ್ತಿಗಾಗಿ ಅವರನ್ನು ಕೊಲೆ ಮಾಡಲಾಗಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

    Live Tv
    [brid partner=56869869 player=32851 video=960834 autoplay=true]

  • ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ರ್ಯಾಣ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಸಾವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೊದಲು ಇದು ಹೃದಯಾಘಾತದಿಂದ ನಡೆದ ಸಾವು ಎಂದು ಹೇಳಲಾಗಿತ್ತು. ಆದರೆ, ಇದನ್ನು ಸೊನಾಲಿ ಕುಟುಂಬ ಒಪ್ಪಿಕೊಳ್ಳಲಿಲ್ಲ. ಇದೊಂದು ಕೊಲೆ ಎಂದು ಆರೋಪಿಸಿ, ತನಿಖೆಗೆ ಒತ್ತಾಯಿಸಲಾಯಿತು. ತನಿಖೆಗೆ ಇಳಿದ ಪೊಲೀಸರು ಸೊನಾಲಿ ಜೊತೆಯೇ ಗೋವಾಗೆ ಬಂದಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆನಂತರ ಇದೊಂದು ಕೊಲೆ ಎನ್ನುವ ತೀರ್ಮಾನಕ್ಕೆ ಬರಲಾಯಿತು.

    ಸೊನಾಲಿ ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದ ಮೇಲೆ ಗಾಯಗಳ ಗುರುತು ಇರುವ ವರದಿ ಬಂದಿದ್ದೇ ತಡ, ಪೊಲೀಸರು ಅಲರ್ಟ್ ಆದರು. ಸೊನಾಲಿ ಜೊತೆಗೆ ಬಂದಿದ್ದ, ಅವರ ಸಹಾಯಕರೂ ಆಗಿರುವ ಸುಧೀರ್ ಸಾಂಗ್ವಾನ್ ಮತ್ತು ಸಖ್ವೀಂದರ್ ಎನ್ನುವವರನ್ನು ಅರೆಸ್ಟ್ ಮಾಡಿದಾಗ, ತಾವು ಸೊನಾಲಿಗೆ ಡ್ರಗ್ಸ್ ಕೊಟ್ಟಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಯಿತು. ಪ್ರತಿಷ್ಠಿತ ಪಬ್ ಗೆ ಹೋಗಿ ಚೆನ್ನಾಗಿ ಕುಡಿದೆವು. ಅದೇ ಪಬ್ ನಲ್ಲಿಯೇ ಡ್ರಗ್ಸ್ ತಗೆದುಕೊಂಡು ನೀರಿನಲ್ಲಿ ಹಾಕಿ ಕುಡಿಸಿದೆವು. ನಂತರ ಹೋಟೆಲ್ ಗೆ ಬಂದೆವು. ಮರು ದಿನ ಸೊನಾಲಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ:ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

    ಸೋನಾಲಿ ಪಬ್ ನಲ್ಲಿ ಡಾನ್ಸ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಈ ವಿಡಿಯೋ ಗೋವಾದಲ್ಲ ಎಂದು ಅವರ ಸಹೋದರ ಹೇಳಿಕೊಂಡಿದ್ದಾರೆ. ಇದು ಗುರುಗ್ರಾಮದ್ದು. ಸೊನಾಲಿ ಹೆಸರು ಹಾಳು ಮಾಡುವುದಕ್ಕೆ ಈ ವಿಡಿಯೋ ಗೋವಾದ್ದು ಎಂದು ನಂಬಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ಮೂಲಕ ಸೊನಾಲಿ ಸಾವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

    Live Tv
    [brid partner=56869869 player=32851 video=960834 autoplay=true]