Tag: Sudhir

  • ಬಿಗ್ ಬಾಸ್ ಸ್ಪರ್ಧಿ, ನಟಿ ಸೊನಾಲಿ ಪೋಗಟ್ ಕೊಲೆಗೆ ನೂರು ಕೋಟಿ ಆಸ್ತಿ ಕಾರಣವಾ?

    ಬಿಗ್ ಬಾಸ್ ಸ್ಪರ್ಧಿ, ನಟಿ ಸೊನಾಲಿ ಪೋಗಟ್ ಕೊಲೆಗೆ ನೂರು ಕೋಟಿ ಆಸ್ತಿ ಕಾರಣವಾ?

    ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ನಟಿ ಸೊನಾಲಿ ಪೋಗಟ್ ಕುರಿತಾಗಿ ದಿನಕ್ಕೊಂದು ಮಾಹಿತಿ ಹೊರ ಬರುತ್ತಿವೆ. ನೂರಾರು ಕೋಟಿ ಆಸ್ತಿಗಾಗಿ ಸ್ವತಃ ಸೊನಾಲಿ ಅವರ ಪಿಎ ಸುಧೀರ್ ಅನ್ನುವವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸೊನಾಲಿ ಅವರದ್ದು ನೂರು ಕೋಟಿಗೂ ಅಧಿಕ ಆಸ್ತಿಯಿದ್ದು, ಅದನ್ನು ತನ್ನ ಹೆಸರಿಗೆ ನೋಂದಾಯಿಸಲು ಸುಧೀರ್ ಪ್ಲ್ಯಾನ್ ಮಾಡಿದ್ದ ಎಂದು ಹೇಳಲಾಗುತ್ತಿದ್ದು, ಈ ಕುರಿತಾದ ದಾಖಲೆಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರಂತೆ.

    ಸುಧೀರ್, ಸೊನಾಲಿ ಸೇರಿದಂತೆ ಹಲವರು ಗೋವಾಗೆ ಶೂಟಿಂಗ್ ನೆಪದಲ್ಲಿ ಬಂದಿದ್ದರು. ಆದರೆ, ರಾತ್ರಿ ಸೊನಾಲಿ ಅವರಿಗೆ ಕುಡಿಸಿ, ಅದರಲ್ಲಿ ಡ್ರಗ್ಸ್ ಕೂಡ ಬೆರೆಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಸೊನಾಲಿ ಅತಿಯಾಗಿ ಡ್ರಗ್ಸ್ ಸೇವನೆ ಮಾಡಿದ್ದರಿಂದ, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ, ಸೊನಾಲಿ ಉಳಿಯಲಿಲ್ಲ ಎಂದು ಹೇಳಲಾಗುತ್ತಿದೆ. ಸೊನಾಲಿಯನ್ನು ಕೊಲೆ ಮಾಡಲೆಂದೇ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಆಕೆಯ ಕುಟುಂಬದ್ದು. ಇದನ್ನೂ ಓದಿ:200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನಟಿ ನೋರಾ ಫತೇಹಿ ವಿಚಾರಣೆ

    ಗೋವಾ ಪೊಲೀಸರು ಈಗಾಗಲೇ ಸೊನಾಲಿ ಅವರ ಗುರುಗಾಂವ್‌ಗೆ ಬಂದಿದ್ದು, ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರಂತೆ. ಅಲ್ಲದೇ, ಸೊನಾಲಿ ಅವರಿಗೆ ಸೇರಿದ್ದು ಎನ್ನಲಾದ ಮೂರು ಡೈರಿಗಳು ಕೂಡ ಪತ್ತೆ ಆಗಿವೆಯಂತೆ. ಅವುಗಳು ಕೊಲೆಯ ರಹಸ್ಯ ಬೇಧಿಸಲು ಸಹಾಯಕ್ಕೆ ಬರುತ್ತಿವೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆಸ್ತಿ ಕಬಳಿಸಲು ತನ್ನ ಸಿಬ್ಬಂದಿಯಿಂದಲೇ ಸೊನಾಲಿ ಕೊಲೆಯಾಗಿದ್ದಾರೆ ಎನ್ನುವುದು ಆಘಾತಕಾರಿ ವಿಷಯ.

    Live Tv
    [brid partner=56869869 player=32851 video=960834 autoplay=true]

  • ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು

    ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್‌ನಲ್ಲಿ ಭಾರತದ ಸುಧೀರ್ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

    ಪುರುಷರ ಹೆವಿವೇಯ್ಟ್ ವಿಭಾಗದಲ್ಲಿ ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ 208 ಕೆ.ಜಿ ಭಾರ ಎತ್ತಿದರು. ಇದರಿಂದ 134.5 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಸುಧೀರ್ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಚಿನ್ನದ ಪದಕ ಗೆಲ್ಲಲು ಭಾರತದ ಮೀರಾಬಾಯಿ ಚಾನು ನನಗೆ ಸ್ಫೂರ್ತಿ ಎಂದ ಪಾಕ್ ವೇಟ್ ಲಿಫ್ಟರ್

    ಇದೇ ಗೇಮ್‌ನಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ನೈಜೀರಿಯಾದ ಇಕೆಚುಕ್ವು ಕ್ರಿಶ್ಚಿಯನ್ ಉಬಿಚುಕ್ವು 133.6 ರೊಂದಿಗೆ ಬೆಳ್ಳಿ ಮತ್ತು ಸ್ಕಾಟ್ಲೆಂಡ್‌ನ ಮಿಕ್ಕಿ ಯೂಲ್ 130.9 ಕಂಚಿನ ಪದಕ ಗೆದಿದ್ದಾರೆ. ಕ್ರಿಸ್ಟಿಯನ್ 197 ಕೆಜಿ ಎತ್ತಿದರೆ ಯೂಲ್ 192 ಕೆಜಿ ಎತ್ತಿದರು.

    ಸುಧೀರ್ 2013ರಲ್ಲಿ ಪವರ್ ಲಿಫ್ಟಿಂಗ್ ಆರಂಭಿಸಿದರು. ಈ ಹಿಂದೆ ಸೌತ್ ಕೊರಿಯಾದಲ್ಲಿ ನಡೆದ ಪ್ಯಾರಾ ಪವರ್ ಲಿಫ್ಟಿಂಗ್ ಏಷ್ಯಾ ಒಕೆಶನ್ ಓಪನ್ ಚಾಂಪಿಯನ್ ಶಿಪ್‌ನಲ್ಲಿ 88 ಕೆಜಿ ವಿಭಾಗದ ಪುರುಷರ ವಿಭಾಗದಲ್ಲಿ 214 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದರು. 2022ರ ಏಷ್ಯಾ ಪ್ಯಾರಾ ಗೇಮ್ಸ್‌ಗೂ ಅವರು ಅರ್ಹತೆ ಪಡೆದಿದ್ದಾರೆ. ಈ ನಡುವೆ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನಾಥಾಶ್ರಮಗಳಿಗೆ ಭೇಟಿ ನೀಡಿ, ಆಹಾರ ಪೂರೈಸಿದ ಸತೀಶ್ ನೀನಾಸಂ

    ಅನಾಥಾಶ್ರಮಗಳಿಗೆ ಭೇಟಿ ನೀಡಿ, ಆಹಾರ ಪೂರೈಸಿದ ಸತೀಶ್ ನೀನಾಸಂ

    ನ್ನಡದ ಹೆಸರಾಂತ ನಟ ಸತೀಶ್ ನೀನಾಸಂ ನಿನ್ನೆ ಬೆಂಗಳೂರಿನ ಅನಾಥಾಶ್ರಮಗಳಿಗೆ ಭೇಟಿ ನೀಡಿದ್ದಾರೆ. ಪೆಟ್ರೊಮ್ಯಾಕ್ಸ್ ತಂಡದೊಂದಿಗೆ ಭೇಟಿ ನೀಡಿದ ಅವರು, ಅಲ್ಲಿ ವಾಸವಿದ್ದವರ ಜೊತೆ ಊಟ ಮಾಡಿ, ಅವರಿಗೂ ಊಟ ಕೊಡಿಸಿ ಕೆಲ ಹೊತ್ತು ಕಳೆದಿದ್ದಾರೆ. ಸತೀಶ್ ಅವರು ಅನಾಥಾಶ್ರಮಕ್ಕೆ ಹೋಗುವುದಕ್ಕೆ ಕಾರಣವಿದೆ. ಸದ್ಯದಲ್ಲೇ ಅವರ ಪೆಟ್ರೋಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಸತೀಶ್, ಫುಡ್ ಡೆಲಿವರಿ ಬಾಯ್ ಆಗಿ ನಟಿಸಿದ್ದಾರೆ. ಈ ಪಾತ್ರ ಪ್ರೇರಣೆಯಿಂದಾಗಿ ಅವರು ಅಲ್ಲಿಗೆ ಹೋಗಿದ್ದಾರಂತೆ.

    ಆಗಾಗ್ಗೆ ನಾನು ಅನಾಥಾಶ್ರಮಗಳಿಗೆ ಮತ್ತು ವೃದ್ಧಾಶ್ರಮಗಳಿಗೆ ಹೋಗುತ್ತಲೇ ಇರುತ್ತೇನೆ. ಈ ಬಾರಿಯ ವಿಶೇಷತೆ ಅಂದರೆ, ನಾನು ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ನಟಿಸಿದ್ದೇನೆ. ಹಸಿದ ಹೊಟ್ಟೆಗಳಿಗೆ ಆಹಾರ ಪೂರೈಸುವ ಪಾತ್ರವದು. ಆ ನೆಪವಾಗಿಟ್ಟುಕೊಂಡು ಈ ಬಾರಿ ಹೋಗಿದ್ದೆ. ಪ್ರತಿ ಬಾರಿ ಹೋದಾಗಲೂ ನನಗೆ ಬೇರೆ ಬೇರೆ ರೀತಿಯ ಅನುಭವಗಳು ಆಗುತ್ತವೆ. ಈ ಬಾರಿಯಂತೂ ನಾನು ತುಂಬಾ ಭಾವುಕನಾಗಿಬಿಟ್ಟೆ. ಸಿನಿಮಾದ ಕಥೆ ತುಂಬಾ ಎಮೋಷನಲ್ ಆಗಿದೆ. ಅದನ್ನು ಹಾಸ್ಯ ರೂಪದಲ್ಲಿ ಕಟ್ಟುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು ಎಂದಿದ್ದಾರೆ ಸತೀಶ್. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ನೀರ್ ದೋಸೆ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವಿಜಯ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಸತೀಶ್ ಜೊತೆ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಕಾರುಣ್ಯ ರಾಮ್, ನಾಗಭೂಷಣ್, ಅರುಣ್ ಸೇರಿದಂತೆ ಹಲವು ಕಲಾವಿದರು ಇದ್ದಾರೆ. ವಿಜಯ್ ಪ್ರಸಾದ್, ಸುಧೀರ್, ಸತೀಶ್ ನೀನಾಸಂ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜೂ.20ಕ್ಕೆ ನೀನಾಸಂ ಸತೀಶ್ ಹುಟ್ಟು ಹಬ್ಬ : ಪೆಟ್ರೋಮ್ಯಾಕ್ಸ್ ಟೀಮ್ ನಿಂದ ಸಿಹಿ ಸುದ್ದಿ

    ಜೂ.20ಕ್ಕೆ ನೀನಾಸಂ ಸತೀಶ್ ಹುಟ್ಟು ಹಬ್ಬ : ಪೆಟ್ರೋಮ್ಯಾಕ್ಸ್ ಟೀಮ್ ನಿಂದ ಸಿಹಿ ಸುದ್ದಿ

    ದೇ ಜೂನ್ 20ರಂದು ನೀನಾಸಂ ಸತೀಶ್ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಹತ್ತು ಹಲವು ಉಡುಗೊರೆಗಳನ್ನು ನೀಡಲು ಚಿತ್ರತಂಡಗಳು ಸಿದ್ಧವಾಗಿವೆ. ಈಗಾಗಲೇ ಶೂಟಿಂಗ್ ಮುಗಿಸಿ, ನೇರವಾಗಿ ಓಟಿಟಿಯಲ್ಲಿ ‘ಡಿಯರ್ ವಿಕ್ರಮ್’ ಸಿನಿಮಾ ರಿಲೀಸ್ಗೆ ರೆಡಿಯಿದೆ. ಈ ಸಿನಿಮಾದ ಜೊತೆಗೆ ಪೆಟ್ರೋಮ್ಯಾಕ್ಸ್ ಕೂಡ ಸಂಪೂರ್ಣ ಶೂಟಿಂಗ್ ಮುಗಿಸಿದ್ದು, ಈ ಸಿನಿಮಾದ ರಿಲೀಸ್ ಡೇಟ್ ಅಥವಾ ಇನ್ನೇನಾದರೂ ಸಿಹಿ ಸುದ್ದಿ ಕೊಡಬಹುದಾ ಎಂದು ನಿರೀಕ್ಷಿಸಲಾಗಿದೆ.

    ಇಂದು ಸತೀಶ್ ಫೋಟೋವೊಂದನ್ನು ಶೇರ್ ಮಾಡಿದ್ದು, ಆ ಫೋಟೋದಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾದ ನಿರ್ದೇಶಕ ವಿಜಯ್ ಪ್ರಸಾದ್, ನಿರ್ಮಾಪಕರಲ್ಲಿ ಒಬ್ಬರಾದ ಸುಧೀರ್ ಇದ್ದಾರೆ. ಹೀಗಾಗಿ ಬಹುಶಃ ಸಿನಿಮಾ ಡೇಟ್ ಬಹಿರಂಗ ಪಡಿಸಬಹುದು ಎನ್ನಲಾಗುತ್ತಿದೆ. ಈಗಾಗಲೇ ಟೀಸರ್ ನಿಂದಾಗಿ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು, ಇದೇ ಮೊದಲ ಬಾರಿಗೆ ವಿಜಯ್ ಪ್ರಸಾದ್ ಮತ್ತು ಸತೀಶ್ ಅವರ ಕಾಂಬಿನೇಷನ್ ಈ ಚಿತ್ರದಲ್ಲಿ ಇರುವುದರಿಂದ ಮನರಂಜನೆ ಪಕ್ಕಾ ಸಿಗಲಿದೆ. ಇದನ್ನೂ ಓದಿ: ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4 : ನಿರ್ದೇಶಕ ಮಂಸೋರೆ ಮನದಾಳ

    ಈ ಸಿನಿಮಾಗಳ ಜೊತೆಗೆ ಸತೀಶ್ ಅಶೋಕ ಬ್ಲೇಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ನಡೆದಿದೆ. ದಸರಾ ಕೂಡ ಬಹುತೇಕ ಚಿತ್ರೀಕರಣ ಮುಗಿಸಿದೆ. ಮ್ಯಾಟ್ನಿ ಕೂಡ ಚಿತ್ರೀಕರಣ ಆಗಬೇಕಿದೆ. ಹೀಗಾಗಿ ಈ ಸಿನಿಮಾಗಳ ಫಸ್ಟ್ ಲುಕ್, ಪೋಸ್ಟರ್ ಅಥವಾ ಟ್ರೈಲರ್ ಹುಟ್ಟು ಹಬ್ಬದಂದು ರಿಲೀಸ್ ಆಗಲಿವೆ ಎನ್ನಲಾಗುತ್ತಿದೆ.

    ಸಾಲು ಸಾಲು ಚಿತ್ರಗಳ ಜೊತೆಗೆ ಇನ್ನೂ ಹಲವಾರು ನಿರ್ದೇಶಕರು ಸತೀಶ್ ಅವರು ಕತೆ ಹೇಳಿದ್ದಾರೆ. ಕೆಲ ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ಒಟ್ಟಿನಲ್ಲಿ ಸಖತ್ ಬ್ಯುಸಿಯಾಗಿರುವ ಸತೀಶ್ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಏನೆಲ್ಲ ಸರ್ ಪ್ರೈಸ್ ಇರಲಿವೆ ಎನ್ನುವುದನ್ನು ಕಾದು ನೋಡಬೇಕು.

    Live Tv