ನವದೆಹಲಿ: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರದ್ದು ಬಹಳ ಸರಳ ವ್ಯಕ್ತಿತ್ವ. ಅವರ ದಯೆ ಹಾಗೂ ಮಾನವೀಯ ಆದರ್ಶಗಳ ಜೀವನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ಇದೀಗ ಅವರ ಒಂದು ವೀಡಿಯೋ ಸಾಮಾಜಿಕ ಜಾಕತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಗರು ಫಿದಾ ಆಗಿದ್ದಾರೆ.
ಹೌದು. ಸುಧಾಮೂರ್ತಿಯವರು ತಮ್ಮ ಮನೆಯ ಸಾಕು ಶ್ವಾನದ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದ್ದಾರೆ. ಶ್ವಾನಕ್ಕೆ ಆರತಿ ಬೆಳಗಿ ಬರ್ತ್ ಡೇ ಆಚರಿಸಿದ್ದಾರೆ. ಇದರ ವೀಡಿಯೋ ಸುಧಾಮೂರ್ತಿ ಹೆಸರಿನ ಇನ್ ಸ್ಟಾಗ್ರಾಂನಿಂದ ಶೇರ್ ಆಗಿದ್ದು, ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: CDS ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ- ಪತ್ನಿ ಸೇರಿ11 ಮಂದಿ ಸಾವು
ವೀಡಿಯೋದಲ್ಲಿ ಸುಧಾಮೂರ್ತಿಯವರ ಸಹೋದರಿ ಆರತಿಯನ್ನು ಕೈಯಲ್ಲಿ ಹಿಡಿದುಕೊಂಡು ಶ್ವಾನ ಗೋಪಿಗೆ ವಿಶ್ ಮಾಡಿದ್ದಾರೆ. ಇತ್ತ ಸುಧಾಮೂರ್ತಿಯವರು ಕೂಡ ಶ್ವಾನಕ್ಕೆ ಆರತಿ ಬೆಳಗಿ ಹಣೆಗೆ ಕುಂಕುಮ ಇಟ್ಟು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಈ ಸುಂದರ ವೀಡಿಯೋಗೆ ಮೂರ್ತಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಮೆಂಟ್ ಮಾಡುವ ಮೂಲಕ ಗೋಪಿಗೆ ಎಲ್ಲರೂ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಇಂತಹ ಕೆಟ್ಟ, ದುರಾಡಳಿತ, ಭ್ರಷ್ಟಾಚಾರದ ಸರ್ಕಾರವನ್ನು ಇದುವರೆಗೂ ನಾನು ನೋಡಿರಲಿಲ್ಲ: ಸಿದ್ದರಾಮಯ್ಯ
ಸದ್ಯ ಈ ವೀಡಿಯೋವನ್ನು 748000 ಬಾರಿ ವೀಕ್ಷಣೆಯಾಗಿದೆ. ಎಲ್ಲರೂ ಮೂರ್ತಿಯವರ ಮುದ್ದಿನ ಶ್ವಾನಕ್ಕೆ ವಿಶ್ ಮಾಡಿದ್ದಾರೆ.
ಚಿಕ್ಕಬಳ್ಳಾಪುರ: ಐತಿಹಾಸಿಕ ಪುರಾಣ ಪ್ರಸಿದ್ಧ ಹಾಗೂ ಕರ್ನಾಟಕದ ಜಲಿಯನ್ ವಾಲಾಬಾಗ್ ಖ್ಯಾತಿಯ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮಕ್ಕೆ ಇನ್ಫೋಸಿಸ್ ಸಂಸ್ಥೆ ವ್ಯವಸ್ಥಾಪಕಿ ಸುಧಾಮೂರ್ತಿ ಅವರು ಶುಕ್ರವಾರ ಭೇಟಿ ನೀಡಿದರು.
ಮೊದಲು ವಿದುರಾಶ್ವತ್ಥ ಗ್ರಾಮದ ಅಶ್ವತ್ಥನಾರಾಯಣನ ಸನ್ನಿಧಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ತದನಂತರ ದೇವಾಲಯ ಹಿಂಭಾಗದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದು ಹುತಾತ್ಮರಾದ ವೀರಸೇನಾನಿಗಳ ಸ್ತೂಪ ಸ್ಮಾರಕಕ್ಕೆ ನಮನ ಸಲ್ಲಿಸಿ ಪೂಜೆ ಸಲ್ಲಿಸಿದರು. ನಂತರ ಸ್ವಾತಂತ್ರ್ಯ ಸಂಗ್ರಾಮದ ನೆನಪಿನ ಚಿತ್ರ ಗ್ಯಾಲರಿಗೆ ಭೇಟಿ ನೀಡಿ ಪೋಟೋಗಳನ್ನು ವೀಕ್ಷಿಸಿದರು. ಇದನ್ನೂ ಓದಿ: ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ
ವಿದುರ ಮಹರ್ಷಿ ನೆಟ್ಟ ಅಶ್ವತ್ಥ ವೃಕ್ಷದ ಕೆಳಗೆ ಅಶ್ವತ್ಥನಾರಾಯಣ ನೆಲೆಸಿದ್ದು, ಈ ಜಾಗದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಚಳುವಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷರು ಗುಂಡಿನ ದಾಳಿಗೆ ಹಲವರು ಬಲಿದನಗೈದಿದ್ದಾರೆ. ಅವರ ಸವಿನೆನಪಿಗಾಗಿ ಸ್ಮಾರಕ-ಸ್ತೂಪ, ಚಿತ್ರ ಗ್ಯಾಲರಿ ನಿರ್ಮಿಸಲಾಗಿದೆ. ಇದನ್ನೂ ಓದಿ: ಬಿಡದಿ ತೋಟದಲ್ಲಿ ಗೋಪೂಜೆ ನೆರವೇರಿಸಿದ ಹೆಚ್‍ಡಿಕೆ ದಂಪತಿ
ರಾಯಚೂರು: ಕೊರೊನಾ ಲಾಕ್‍ಡೌನ್ ಬಳಿಕ ರಾಯರ ಭಕ್ತರಿಗೆ ಅನುಕೂಲವಾಗಲಿ ಅಂತ ಇನ್ಫೋಸಿಸ್ ಫೌಂಡೇಶನ್ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಒಂದು ಲಾರಿ ಆಹಾರ ಪದಾರ್ಥಗಳನ್ನ ವಿತರಣೆ ಮಾಡಿದೆ.
ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ, ಸುಧಾಮೂರ್ತಿ ದಂಪತಿಗಳಿಂದ ಆಹಾರ ಧಾನ್ಯ ವಿತರಣೆಯಾಗಿದ್ದು, ಅಕ್ಕಿ ,ಬೇಳೆ, ಅಡುಗೆ ಎಣ್ಣೆ ಸೇರಿ ಆಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನ ಬೆಂಗಳೂರಿನಿಂದ ರವಾನೆ ಮಾಡಿದ್ದಾರೆ.
ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಇನ್ಫೋಸಿಸ್ ಫೌಂಡೇಶನ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಅವರ ಕಾರ್ಯಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್ ನೀಡಿದ ಆಹಾರ ಧಾನ್ಯಗಳನ್ನ ಮಠ ಭಕ್ತರ ಪ್ರಸಾದಕ್ಕೆ ಬಳಕೆ ಮಾಡಲಿದೆ. ಇದನ್ನೂ ಓದಿ: ಸುನಂದಾ ಪುಷ್ಕರ್ ಪ್ರಕರಣ – 7 ವರ್ಷಗಳ ಬಳಿಕ ಶಶಿ ತರೂರ್ಗೆ ರಿಲೀಫ್
ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಅವರು 70ನೇ ಜನ್ಮ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಇಂದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹಾಗೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಸುಧಾಕರ್ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಸುಧಾಮೂರ್ತಿ ಅವರಿಗೆ ಶುಭಕೋರಿದ್ದಾರೆ.
ಪ್ರಸಿದ್ಧ ಲೇಖಕರು, ರಾಜ್ಯದ ಪ್ರವಾಸೋದ್ಯಮ ಕಾರ್ಯಪಡೆಯ ಮುಖ್ಯಸ್ಥೆಯಾಗಿ ಸಕ್ರಿಯರಾಗಿರುವ, ಕೋವಿಡ್ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಿಂದ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ಪ್ರಸಿದ್ಧ ಲೇಖಕರು, ರಾಜ್ಯದ ಪ್ರವಾಸೋದ್ಯಮ ಕಾರ್ಯಪಡೆಯ ಮುಖ್ಯಸ್ಥೆಯಾಗಿ ಸಕ್ರಿಯರಾಗಿರುವ, ಕೋವಿಡ್ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಿಂದ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಸಾಮಾಜಿಕ ಹೊಣೆಗಾರಿಕೆ, ನಿಷ್ಕಲ್ಮಶ ಮಾನವ ಪ್ರೀತಿ ಅನುಕರಣೀಯ. ಸಮಾಜದ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಅವರ ಮಾತೃ ಹೃದಯಕ್ಕೆ ನಾನು ಸದಾ ಶರಣು.
ಸುಧಾಮೂರ್ತಿ ಅವರು ನೂರ್ಕಾಲ ಆರೋಗ್ಯವಾಗಿರಲೆಂದು ಅವರ ಜನ್ಮದಿನದಂದು ಶುಭ ಕೋರುತ್ತೇನೆ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) August 19, 2020
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಸಾಮಾಜಿಕ ಹೊಣೆಗಾರಿಕೆ, ನಿಷ್ಕಲ್ಮಶ ಮಾನವ ಪ್ರೀತಿ ಅನುಕರಣೀಯ. ಸಮಾಜದ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಅವರ ಮಾತೃ ಹೃದಯಕ್ಕೆ ನಾನು ಸದಾ ಶರಣು. ಸುಧಾಮೂರ್ತಿ ಅವರು ನೂರ್ಕಾಲ ಆರೋಗ್ಯವಾಗಿರಲೆಂದು ಅವರ ಜನ್ಮದಿನದಂದು ಶುಭ ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೂಡ ಟ್ವೀಟ್ ಮಾಡಿ ಸುಧಮ್ಮನಿಗೆ ವಿಶ್ ಮಾಡಿದ್ದಾರೆ. ಕನ್ನಡನಾಡಿನ ಹೆಮ್ಮೆಯ ಪುತ್ರಿ, ಮಮತೆ ವಾತ್ಸಲ್ಯಗಳ ಸಾಕಾರ ಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಸಾಧನೆ ಮತ್ತು ಸೇವೆಯಿಂದ ಇಡೀ ದೇಶಕ್ಕೆ ಸ್ಫೂರ್ತಿಯಾಗಿರುವ ಅವರಿಗೆ ದೇವರು ಉತ್ತಮ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕನ್ನಡನಾಡಿನ ಹೆಮ್ಮೆಯ ಪುತ್ರಿ, ಮಮತೆ ವಾತ್ಸಲ್ಯಗಳ ಸಾಕಾರ ಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಸಾಧನೆ ಮತ್ತು ಸೇವೆಯಿಂದ ಇಡೀ ದೇಶಕ್ಕೆ ಸ್ಪೂರ್ತಿಯಾಗಿರುವ ಅವರಿಗೆ ದೇವರು ಉತ್ತಮ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.@Infy_Foundationpic.twitter.com/oZoR02k7ri
ಬೆಂಗಳೂರು: ಇನ್ಫೋಸಿಸ್ ಫೌಂಡೆಶನ್ ಮುಖ್ಯಸ್ಥೆ, ಲೇಖಕಿ ಸುಧಾಮೂರ್ತಿ ಅವರ ವ್ಯಕ್ತಿತ್ವಕ್ಕೆ ಸರಿಸಾಟಿಯಿಲ್ಲ. ಅವರ ಸರಳ ಜೀವನಕ್ಕೆ ಮಾರು ಹೋಗದವರಿಲ್ಲ. ಅದರಲ್ಲೂ ಚಿಕ್ಕ ಮಕ್ಕಳೊಂದಿಗೆ ಅವರು ಇಂದು ಪುಟ್ಟ ಮಗುವಿನಂತಾಗಿದ್ದರು.
ನಗರದ ಪಂಚತಾರಾ ಹೋಟೆಲ್ ನಲ್ಲಿ ಲಿಟ್ಸ್ ಕಿಂಗ್ಡಮ್ ಸಂಸ್ಥೆ ಆಯೋಜಿಸಿದ, ವಸ್ತು ಪ್ರದರ್ಶನವನ್ನು ಸುಧಾಮೂರ್ತಿ ಅವರು ಉದ್ಘಾಟಿಸಿದರು. ಈ ಪ್ರದರ್ಶನದಲ್ಲಿ ನವಜಾತ ಶಿಶು ಹಾಗೂ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆಗಳು, ಬೆಳವಣಿಗೆಗೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಚಿಣ್ಣರ ಕುತೂಹಲಭರಿತ ಪ್ರಶ್ನೆಗಳಿಗೆ ಸುಧಾಮೂರ್ತಿ ಉತ್ತರಿಸಿದರು. ಇದೇ ವೇಳೆ ಮಕ್ಕಳಿಗೆ ತಾವು ಸಹಿ ಮಾಡಿದ ಪುಸ್ತಕ ನೀಡಿ ನಕ್ಕು ನಲಿದರು.
ಕೆಲವು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಸಾಮಾನ್ಯರಂತೆ ಕೈಚೀಲ ಹಿಡಿದು ತರಕಾರಿ ಖರೀದಿ ಮಾಡಿದ್ದರು. ಈ ವೇಳೆ ಹಳ್ಳಿಯ ಜನರೊಂದಿಗೆ ಸಾಮನ್ಯರಂತೆ ಬೆರೆತು ಅವರ ಕಷ್ಟಗಳನ್ನು ಆಲಿಸಿದ್ದರು. ಅಲ್ಲದೇ ಮಾರುಕಟ್ಟೆಯಲ್ಲಿ ಚೌಕಾಸಿ ಮಾಡದೇ ತರಕಾರಿ ಖರೀದಿಸಿದ್ದರು.
ಬೆಂಗಳೂರು: ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಮಗನ ಮದುವೆ ಸೋಮವಾರ ಬೆಂಗಳೂರಿನ ಹೋಟೆಲಿನಲ್ಲಿ ಸರಳವಾಗಿ ನಡೆದಿದೆ.
ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ಮದುವೆಯಾಗಿದ್ದಾರೆ. ಮದುವೆಯಲ್ಲಿ ರೋಹನ್ ಕಪ್ಪು ಬಣ್ಣದ ಪ್ಯಾಂಟ್ ಹಾಕಿ ಪ್ಲೇನ್ ಕುರ್ತಾ ಧರಿಸಿದರೆ, ಅರ್ಪಣಾ ನಳಿ ಬಣ್ಣದ ಲೆಹೆಂಗಾ ಧರಿಸಿ ಮದುವೆಯಲ್ಲಿ ಮಿಂಚಿದ್ದಾರೆ. ಇವರ ಆರತಕ್ಷತೆಗೆ ಗಾಯಕಿ ಬಾಂಬೆ ಜಯಶ್ರೀ ಅತಿಥಿಯಾಗಿ ಆಗಮಿಸಿದ್ದರು.
ರೋಹನ್ ಹಾಗೂ ಅರ್ಪಣಾ ಸ್ನೇಹಿತರೊಬ್ಬರ ಮೂಲಕ ಮೂರು ವರ್ಷಗಳಿಂದ ಪರಿಚಯವಾಗಿದ್ದರು. ಇವರ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಪ್ರೀತಿಯಾಗಿ ಮನೆಯವರ ಒಪ್ಪಿಗೆ ಮೆರಿಗೆ ಮದುವೆಯಾಗಿದ್ದಾರೆ. ಈ ಮದುವೆ ಸರಳವಾಗಿ ನಡೆದಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದರು.
ಅರ್ಪಣಾ ನಿವೃತ್ತ ಎಸ್‍ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್ ಹಾಗೂ ಕಮಾಂಡರ್, ಮಾಜಿ ಭಾರತೀಯ ನೌಕಾಪಡೆ ಅಧಿಕಾರಿ ಕೆಆರ್ ಕೃಷ್ಣನ್ ಮಗಳು. ಶಾಲಾ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿರುವ ಅರ್ಪಣಾ ಹೆಚ್ಚಿನ ಶಿಕ್ಷಣಕ್ಕಾಗಿ ಕೆನೆಡಾಗೆ ಹೋಗಿದ್ದರು. ಅರ್ಪಣಾ ಅಮೆರಿಕದ ಡಾರ್ಟ್ಮೌತ್ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.
ಅರ್ಪಣಾ ಈಗ ಬೆಂಗಳೂರಿನ ನಿವಾಸಿಯಾಗಿದ್ದು, ಮೊದಲು ಮೆಕಿನ್ಸೆ ಹಾಗೂ ಸಿಕ್ವೊಯ ಕ್ಯಾಪಿಟಲ್‍ನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರೋಹನ್ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಪಿಎಚ್‍ಡಿ ಪದವಿಯನ್ನು ಪಡೆದಿದ್ದಾರೆ. ರೋಹನ್ `ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ’ವನ್ನು ಸ್ಥಾಪಿಸಿದ್ದರು. ಕಳೆದ ಎರಡು ಸಹಸ್ರಮಾನಗಳಿಂದ ಭಾರತದ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ವಿಶ್ವದ ಅತಿದೊಡ್ಡ ಓದುಗರವರೆಗೆ ಪ್ರಸ್ತುತಪಡಿಸುವುದು ಅವರ ಗುರಿಯಾಗಿದೆ.
ರೋಹನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2013ರಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ವರದಿಯಾಗಿತ್ತು. ಬಳಿಕ 2015ರ ನವೆಂಬರಿನಲ್ಲಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು.
ಬೆಂಗಳೂರು: ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರ ಮಗನ ಮದುವೆ ಡಿ. 2ರಂದು ಬೆಂಗಳೂರಿನ ಹೋಟೆಲಿನಲ್ಲಿ ಸರಳವಾಗಿ ನಡೆಯಲಿದೆ.
ಸುಧಾಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮದುವೆ ಸರಳವಾಗಿ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರಿಗೆ ಆಹ್ವಾನ ನೀಡಲಾಗಿದೆ. ರೋಹನ್ ಹಾಗೂ ಅರ್ಪಣಾ ಸ್ನೇಹಿತರೊಬ್ಬರ ಮೂಲಕ ಮೂರು ವರ್ಷಗಳಿಂದ ಪರಿಚಯವಾಗಿದ್ದರು.
ಅರ್ಪಣಾ ನಿವೃತ್ತ ಎಸ್‍ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್ ಹಾಗೂ ಕಮಾಂಡರ್, ಮಾಜಿ ಭಾರತೀಯ ನೌಕಾಪಡೆ ಅಧಿಕಾರಿ ಕೆಆರ್ ಕೃಷ್ಣನ್ ಮಗಳು. ಶಾಲಾ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿರುವ ಅರ್ಪಣಾ ಹೆಚ್ಚಿನ ಶಿಕ್ಷಣಕ್ಕಾಗಿ ಕೆನೆಡಾಗೆ ಹೋಗಿದ್ದರು. ಅರ್ಪಣಾ ಅಮೆರಿಕದ ಡಾರ್ಟ್ಮೌತ್ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.
ಅರ್ಪಣಾ ಈಗ ಬೆಂಗಳೂರಿನ ನಿವಾಸಿಯಾಗಿದ್ದು, ಮೊದಲು ಮೆಕಿನ್ಸೆ ಹಾಗೂ ಸಿಕ್ವೊಯ ಕ್ಯಾಪಿಟಲ್‍ನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರೋಹನ್ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಪಿಎಚ್‍ಡಿ ಪದವಿಯನ್ನು ಪಡೆದಿದ್ದಾರೆ.
ರೋಹನ್ ‘ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ’ವನ್ನು ಸ್ಥಾಪಿಸಿದ್ದರು. ಕಳೆದ ಎರಡು ಸಹಸ್ರಮಾನಗಳಿಂದ ಭಾರತದ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ವಿಶ್ವದ ಅತಿದೊಡ್ಡ ಓದುಗರವರೆಗೆ ಪ್ರಸ್ತುತಪಡಿಸುವುದು ಅವರ ಗುರಿಯಾಗಿದೆ.
ರೋಹನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2013 ರಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ವರದಿಯಾಗಿತ್ತು.
2015ರ ಎಪ್ರಿಲ್ ನಲ್ಲಿ ರೋಹನ್- ಲಕ್ಷ್ಮಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2015ರ ನವೆಂಬರಿನಲ್ಲಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ 2014ರ ಸೆಪ್ಟೆಂಬರ್‍ನಲ್ಲಿ ಲಕ್ಷ್ಮಿಯ ಸಹೋದರ ಸುದರ್ಶನ್ ಅವರ ವಿವಾಹ ಸಮಾರಂಭದಲ್ಲಿ ನಾರಾಯಣ ಮೂರ್ತಿ ಕುಟುಂಬ ಗೈರು ಹಾಜರಾದಾಗ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಇರುವ ವಿಚಾರ ಬೆಳಕಿಗೆ ಬಂದಿತ್ತು.
ಬೆಂಗಳೂರು: ಸಾಕಷ್ಟು ಅಗತ್ಯ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ಕಳುಹಿಸಿ, ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿರುವುದು ಮಾತ್ರವಲ್ಲದೆ, ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮನೆಗಳನ್ನು ಕಟ್ಟಿಸಿಕೊಡಲು ಸಹ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ನಿರ್ಧರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾ ಮೂರ್ತಿ ಅವರು, ಈಗಾಗಲೇ ಸಂತ್ರಸ್ತರಿಗೆ ಸಾಕಷ್ಟು ಅಗತ್ಯ ವಸ್ತುಗಳನ್ನು ಕಳುಹಿಸಿ ಕೊಡಲಾಗಿದೆ. ಅಲ್ಲದೆ, ಮಳೆಯ ಅಬ್ಬರ ಹಾಗೂ ಪ್ರವಾಹ ಕಡಿಮೆಯಾದ ಬಳಿಕ ಮನೆ ಕಟ್ಟಿಕೊಡಲೂ ಸಹ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ತುಂಬಾ ಪ್ರವಾಹ ಪೀಡಿತ ಹಾಗೂ ಕಾನೂನಿನ ದೃಷ್ಟಿಯಿಂದ ಸರಿಯಾಗಿರುವ ಜಾಗವನ್ನು ಹುಡುಕಿ ಮನೆ ಕಟ್ಟಿಕೊಡಲು ನಿರ್ಧರಿಸಲಾಗಿದೆ. ಈ ಅಗತ್ಯ ವಸ್ತುಗಳನ್ನು ಸಾಗಿಸುವ ತುರ್ತು ಸೇವೆಯನ್ನು ಹೊರತು ಪಡಿಸಿ ಸುಮಾರು 10 ಕೋಟಿ ರೂ.ಗಳ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ಪ್ರವಾಹದಿಂದ ಯಾವ ಜಾಗದಲ್ಲಿ ಹೆಚ್ಚು ಹಾನಿಯಾಗಿದೆ ಹಾಗೂ ಯಾವುದು ಸೂಕ್ತ ಜಾಗ ಎಂಬುದನ್ನು ನೋಡಿಕೊಂಡು ಅಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆ ಎಂದರು.
ಮನೆ ನಿರ್ಮಿಸಿಕೊಡಲು ಸುಮಾರು 10 ಕೋಟಿ ರೂ. ಮೀಸಲಿರಿಸಿದ್ದೇವೆ. ಕಳೆದ ಬಾರಿ ಕೊಡಗಿನಲ್ಲಿ ಪ್ರವಾಹ ಸಂಭವಿಸಿದಾಗ 2,500 ಮನೆಗಳನ್ನು ನಿರ್ಮಿಸಿದ್ದೆವು. ಆಂಧ್ರದಲ್ಲಿ ಪ್ರವಾಹ ಸಂಭವಿಸಿದಾಗ 250 ಮನೆ ನಿರ್ಮಾಣ ಮಾಡಿದ್ದೇವು. ಹೀಗೆ ಹಾನಿಯ ಪ್ರಮಾಣವನ್ನು ನೋಡಿಕೊಂಡು ಅಗತ್ಯವಿದ್ದಷ್ಟು ಮನೆಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ನಮ್ಮ ಗುತ್ತಿಗೆದಾರ ರಮೇಶ್ ರೆಡ್ಡಿ ಅವರ ತಂಡ ಸಿದ್ಧವಾಗಿದೆ. ಅವರ ನೇತೃತ್ವದಲ್ಲೇ ಮನೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಸಿದ್ಧ ಆಹಾರ ಪದಾರ್ಥವನ್ನು ಹೊರತುಪಡಿಸಿ ಎಲ್ಲವನ್ನೂ ಕಳುಹಿಸಿ ಕೊಡುತ್ತಿದ್ದೇವೆ. ನಮ್ಮ ತಂಡ ಯಾವಾಗಲೂ ಇಂತಹ ಕಾರ್ಯಗಳಿಗೆ ಸದಾ ಸಿದ್ಧವಿರುತ್ತದೆ. ಪ್ರವಾಹ ಕೈ ಮೀರಿ ಹೋಗುತ್ತಿದೆ ಎನ್ನುವಷ್ಟರಲ್ಲಿ ನಾವು 50 ಲಕ್ಷ ರೂ. ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂದಾಯ ಮಾಡಿದ್ದೇವೆ. ಉತ್ತಮ ಗುಣಮಟ್ಟದ ವಸ್ತುಗಳನ್ನೇ ನೀಡಲಾಗುತ್ತಿದ್ದು, ನಾವು ಬಳಸುವ ರೀತಿಯ ವಸ್ತುಗಳನ್ನೇ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಒಂದು ಕುಟುಂಬಕ್ಕೆ ಒಂದು ಚೀಲದಂತೆ ಅದರಲ್ಲಿ ಬಟ್ಟೆ ಸೇರಿದಂತೆ ಕುಟುಂಬಕ್ಕೆ ಬೇಕಾದ ಎಲ್ಲ ಬಗೆಯ ವಸ್ತಗಳನ್ನು ಪ್ಯಾಕ್ ಮಾಡಿ ವಿತರಿಸುತ್ತೇವೆ. ಈ ಕಿಟ್‍ನಲ್ಲಿ ಉಪ್ಪು, ಸಕ್ಕರೆ, ಮೇಣದ ಬತ್ತಿ, ಬೆಂಕಿ ಪೊಟ್ಟಣ, ಸೋಪ್, ಪೇಸ್ಟ್, ಸ್ಯಾನಿಟರಿ ಪ್ಯಾಡ್, ಮಕ್ಕಳ ಫ್ರಾಕ್, ದೊಡ್ಡವರ ಬಟ್ಟೆಗಳು, ಔಷಧಿ, ಸೊಳ್ಳೆ ಬತ್ತಿ ಸೇರಿದಂತೆ ಒಂದು ಕುಟುಂಬಕ್ಕೆ ಅಗತ್ಯವಿರುವ ಎಲ್ಲ ರೀತಿಯ ವಸ್ತುಗಳನ್ನು ನೀಡುತ್ತೇವೆ. ವಿತರಿಸಲೂ ಸಹ ನಮ್ಮದೇ ಸ್ವಯಂ ಸೇವಕರಿದ್ದು, ಅವರ ಮೂಲಕವೇ ಎಲ್ಲ ವಸ್ತುಗಳು ಹಂಚಲಾಗುತ್ತದೆ. ಹೀಗಾಗಿ ಯಾವುದೇ ರೀತಿಯ ದುರ್ಬಳಕೆಯಾಗುವ ಸಂದರ್ಭ ಬರುವುದಿಲ್ಲ ಎಂದು ವಿವರಿಸಿದರು.
ವಸ್ತುಗಳನ್ನು ಸಾಗಿಸಲು ಟ್ರಕ್ ಸಮಸ್ಯೆ ಉಂಟಾಗಿತ್ತು. ಆಗ ಜಪಾನಂದ ಸ್ವಾಮೀಜಿಯವರೊಂದಿಗೆ ಮಾತನಾಡಿಕೊಂಡು ಟ್ರಕ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆ ಟ್ರಕ್‍ಗಳ ಮೂಲಕ ಸಂತ್ರಸ್ತರಿಗೆ ವಸ್ತುಗಳನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಗದಗ: ಸಾಧಕಿ ಹಾಗೂ ಸಮಾಜ ಸುಧಾರಕಿ ಸುಧಾಮೂರ್ತಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಲಾಗಿದೆ.
ಮಾಜಿ ಪುರಸಭೆ ಸದಸ್ಯ ಮಲ್ಲಿಕಾರ್ಜುನ ಹಡಪದ ತನ್ನ ಫೇಸ್‍ಬುಕ್ ಮೂಲಕ ಸುಧಾಮೂರ್ತಿ ಅವರನ್ನು ಅವಮಾನಿಸಿದ್ದಾರೆ. ಮಲ್ಲಿಕಾರ್ಜುನ ಹಡಪದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ `ಸೋಗಲಾಡಿ ಸುಧಾರಕಿ’ ಎಂದು ಸುಧಾಮೂರ್ತಿ ಅವರನ್ನು ಅವಮಾನ ಮಾಡಿದ್ದಾರೆ.
ಸಮಾಜ ಸೇವಕಿ ಸುಧಾಮೂರ್ತಿ ಬಗ್ಗೆ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಫೇಸ್‍ಬುಕ್‍ನಲ್ಲಿ ಮಲ್ಲಿಕಾರ್ಜುನ ಹಡಪದಗೆ ಜನರು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.
ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು: ಇಂದು ಮುಂಜಾನೆಯಿಂದಲೇ ಸಾರ್ವಜನಿಕರು, ಸೆಲೆಬ್ರಿಟಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮತದಾನ ಮಾಡುತ್ತಿದ್ದಾರೆ. ಇದೀಗ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಅವರು ಮತದಾನ ಮಾಡಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸುಧಾಮೂರ್ತಿ ಅವರು ಬೆಳಗ್ಗೆ ಜಯನಗರ ಬಿಇಎಸ್ ಕಾಲೇಜಿಗೆ ಬಂದು ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ದಯವಿಟ್ಟು ನಿಮ್ಮ ಮತವನ್ನು ಚಲಾಯಿಸಿ. ವೋಟ್ ಮಾಡುವ ಮೂಲಕ ನಿಮ್ಮ ನಾಯಕರನ್ನೂ ನೀವು ಆಯ್ಕೆ ಮಾಡಿ, ಪ್ರಜಾಪ್ರಭುತ್ವಕ್ಕೆ ಮಹತ್ವವನ್ನು ಕೊಡಿ ಎಂದು ಭಾರತದ ಎಲ್ಲ ಪ್ರಜೆಗಳಲ್ಲೂ ನನ್ನದೊಂದು ವಿನಂತಿ ಅಂತ ಕೇಳಿಕೊಂಡಿದ್ದಾರೆ.
ಇಂದು ರಜೆ ಎಂದು ಮನೆಯಲ್ಲಿ ಕುಳಿತುಕೊಳ್ಳಬೇಡಿ. ಇದು ನಿಮ್ಮ ಕರ್ತವ್ಯವಾಗಿದೆ. ಜೊತೆಗೆ ಆದೇಶವೂ ಆಗಿದೆ. ಒಂದು ರಾಷ್ಟ್ರವನ್ನು ಬಲವಾಗಿ ಕಟ್ಟುವ ಸಾಧನವೇ ಮತದಾನವಾಗಿದೆ. ಹೀಗಾಗಿ ದಯಮಾಡಿ ಎಲ್ಲರೂ ಬಂದು ಮತ ಹಾಕಿ ಎಂದು ಸುಧಾಮೂರ್ತಿ ಅವರು ಮನವಿ ಮಾಡಿಕೊಂಡಿದ್ದಾರೆ.