Tag: Sudhamurthy

  • The Vaccine War ಸಿನಿಮಾ ನೋಡಿ ಹೊಗಳಿದ ಸುಧಾ ಮೂರ್ತಿ

    The Vaccine War ಸಿನಿಮಾ ನೋಡಿ ಹೊಗಳಿದ ಸುಧಾ ಮೂರ್ತಿ

    ‘ದಿ ಕಾಶ್ಮೀರಿ ಫೈಲ್ಸ್’ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈಗ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಮೂಲಕ ಸದ್ದು ಮಾಡ್ತಿದ್ದಾರೆ. ರಿಲೀಸ್‌ಗೂ ಮುನ್ನವೇ ಸಿನಿಮಾ ಗಮನ ಸೆಳೆಯುತ್ತಿದೆ. ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋವೊಂದನ್ನ ಬೆಂಗಳೂರಿನಲ್ಲಿ (ಸೆ.18) ಆಯೋಜಿಸಲಾಗಿತ್ತು. ಈ ವೇಳೆ ಸುಧಾ ಮೂರ್ತಿ ಅವರು ಆಗಮಿಸಿದ್ದರು. ದಿ ವ್ಯಾಕ್ಸಿನ್ ವಾರ್ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್

    ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮನ ಮುಟ್ಟುವ ಸಿನಿಮಾ ಎಂದು ಸುಧಾ ಮೂರ್ತಿ ಕರೆದಿದ್ದಾರೆ. ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಆರಂಭಿಸಿ ಆ ಬಳಿಕ ಇಂಗ್ಲಿಷ್‌ನಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು. ನಾನು ಮಹಿಳೆಯರ ಪಾತ್ರವನ್ನು ಅರ್ಥ ಮಾಡಿಕೊಂಡಿದ್ದೇನೆ. ಅವಳು ತಾಯಿ, ಪತ್ನಿ ಜೊತೆ ವೃತ್ತಿ ಬದುಕನ್ನು ನಡೆಸುವವಳೂ ಹೌದು. ಕುಟುಂಬ ಹಾಗೂ ಕೆಲಸವನ್ನು ಸಮದೂಗಿಸಿಕೊಂಡು ಹೋಗುವುದು ಕಷ್ಟ. ಕೆಲವರು ಈ ವಿಚಾರದಲ್ಲಿ ಅದೃಷ್ಟಶಾಲಿಗಳು. ನಾವು ಉಳಿದುಕೊಂಡ ಕಟ್ಟಡದ ಮೇಲೆ ನಮ್ಮ ತಂದೆ ತಾಯಿ ವಾಸಿಸುತ್ತಿದ್ದರು. ನಾನು ಕೆಳಗೆ ವಾಸಿಸುತ್ತಿದ್ದೆ. ಹೀಗಾಗಿ ಹೆಚ್ಚಿನ ಕೆಲಸ ಮಾಡಲು ನನಗೆ ಸಹಕಾರಿ ಆಯಿತು. ಮಕ್ಕಳನ್ನು ಬೆಳೆಸುತ್ತಾ ವೃತ್ತಿ ಜೀವನ ನಡೆಸಿಕೊಂಡು ಹೋಗೋದು ಕಷ್ಟ. ಹಾಗೆ ಮಾಡಬೇಕು ಎಂದರೆ ಕುಟುಂಬದ ಬೆಂಬಲ ಬೇಕು ಅದು ಮುಖ್ಯ ಎಂದಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್

    ಮಹಿಳಾ ವಿಜ್ಞಾನಿಗಳು ಕೊವಿಡ್ ಸಂದರ್ಭದಲ್ಲಿ ಲ್ಯಾಬ್‌ಗೆ ಬಂದು ಸಂಶೋಧನೆ ಮಾಡಿದ್ದರು. ಇದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕೊವಾಕ್ಸಿನ್ ಏನು ಎಂಬುದು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಆದರೆ, ಹಿಂದಿರುವ ಶ್ರಮವನ್ನು ಈ ಸಿನಿಮಾ ತೋರಿಸುತ್ತದೆ. ಎಲ್ಲಾ ವಿಜ್ಞಾನಿಗಳು ಮಾಡಿದ್ದು ನಿಸ್ವಾರ್ಥದ ಕೆಲಸ. ಕೊವಿಡ್ ಅವಧಿಯಲ್ಲಿ ಅವರು ಗರಿಷ್ಟ ಸಮಯವನ್ನು ಔಷಧ ಕಂಡು ಹಿಡಿಯಲು ಕಳೆದರು. ಇದರಿಂದ ನಾವು ಸುಖವಾಗಿ ಬದುಕುವಂತಾಯಿತು ಎಂದು ಸುಧಾ ಮೂರ್ತಿ ಮಾತನಾಡಿದ್ದರು. ಕಲಾವಿದರ ನಟನೆ, ವಿವೇಕ್‌ ಅಗ್ನಿಹೋತ್ರಿ ನಿರ್ದೇಶನ ಮತ್ತು ತಂಡದ ಶ್ರಮಕ್ಕೆ ಭೇಷ್ ಎಂದಿದ್ದಾರೆ.

    ಇದೇ ಸೆ.28ರಂದು ‘ದಿ ವ್ಯಾಕ್ಸಿನ್ ವಾರ್’ (The Vaacine War) ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ, ಅನುಪಮ್ ಖೇರ್, ಪಲ್ಲವಿ ಜೋಶಿ, ರೈಮಾ ಸೇನ್ ಸೇರಿದಂತೆ ಹಲವರು ನಟಿಸಿದ್ದಾರೆ. ‘ದಿ ಕಾಶ್ಮೀರಿ ಫೈಲ್ಸ್’ ಸಕ್ಸಸ್ ನಂತರ ಈ ಸಿನಿಮಾಗೆ ವಿವೇಕ್ ಅಗ್ನಿಹೋತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ರಿಲೀಸ್‌ಗೆ ಫ್ಯಾನ್ಸ್ ಕಾಯ್ತಿದ್ದಾರೆ.

    ‘ಕಾಂತಾರ’ (Kantara) ಸಿನಿಮಾದ ಸಕ್ಸಸ್ ನಂತರ ಸಪ್ತಮಿ ಗೌಡ (Saptami Gowda) ನಟನೆಯ ಮೊದಲ ಬಾಲಿವುಡ್ ಸಿನಿಮಾ ಇದಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾರಾಯಣಮೂರ್ತಿ ದಂಪತಿಯಿಂದ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ

    ನಾರಾಯಣಮೂರ್ತಿ ದಂಪತಿಯಿಂದ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ

    ಬೆಂಗಳೂರು: ಇನ್ಫೋಸಿಸ್ (Infosys) ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ (Narayanamurthy) ಹಾಗೂ ಸುಧಾಮೂರ್ತಿ (Sudhamurthy) ದಂಪತಿ ತಿರುಪತಿಗಿರಿವಾಸನಾದ ಶಂಖಚಕ್ರಧಾರಿ ತಿಮ್ಮಪ್ಪನಿಗೆ (Tirupati) ಬಂಗಾರದ ಶಂಖವನ್ನು ಕಾಣಿಕೆ ನೀಡಿದ್ದಾರೆ.

    ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ಅವರು ಸಾಕಷ್ಟು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಮೊದಲಿನಿಂದಲೂ ಸರಳ ಜೀವನ ನಡೆಸುತ್ತಾ ಅನೇಕರಿಗೆ ಮಾದರಿಯಾಗಿದ್ದಾರೆ.

    ಅವರ ದಾಂಪತ್ಯ ಜೀವನಕ್ಕೆ ಈಗ ನಲವತ್ತೈದು ವರ್ಷ. ಈ ನಲವತ್ತು ವರ್ಷಗಳಲ್ಲಿ ತಮ್ಮ ಬಳಿಯಿದ್ದ ಕೆಲವೇ ಕೆಲವು ಆಭರಣಗಳಿಂದ ಈ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ಮಾಪಕ ರಮೇಶ್ ರೆಡ್ಡಿ ನೇತೃತ್ವದಲ್ಲಿ ಸುಧಾಮೂರ್ತಿಗೆ ಸನ್ಮಾನ

    ನಿರ್ಮಾಪಕ ರಮೇಶ್ ರೆಡ್ಡಿ ನೇತೃತ್ವದಲ್ಲಿ ಸುಧಾಮೂರ್ತಿಗೆ ಸನ್ಮಾನ

    ನ್ಫೋಸಿಸ್ (Infosys) ಎಂಬ ಐ.ಟಿ ದಿಗ್ಗಜ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ ಕನ್ನಡತಿ. ಲಕ್ಷಾಂತರ ಮಂದಿಗೆ ಕೆಲಸ ಕೊಟ್ಟ ಉದ್ಯಮಿ, ಸಮಾಜಸೇವಕಿ, ಲೇಖಕಿ ಸುಧಾಮೂರ್ತಿ (Sudhamurthy) ಅವರ ಸಾಮಾಜಿಕ ಸೇವೆಗಾಗಿ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ (Padma Bhushan) ಪ್ರಶಸ್ತಿ ಪ್ರದಾನ ಮಾಡಿದ್ದರು. ಈ ನಿಟ್ಟಿನಲ್ಲಿ, ಇತ್ತೀಚಿಗೆ ಖ್ಯಾತ ನಿರ್ಮಾಪಕರಾದ ರಮೇಶ್ ರೆಡ್ಡಿ (Ramesh Reddy) ನೇತೃತ್ವದಲ್ಲಿ, `ಸುಧಾಮೂರ್ತಿ ಅವರ ಆತ್ಮೀಯ ಗೆಳೆಯರ ಬಳಗ’ ಮೂಲಕ ಸನ್ಮಾನ ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ ಅವರು.’ನನಗೆ ಸನ್ಮಾನ ಹೊಗಳಿಕೆಗಳು ತುಂಬಾ ಮುಜುಗರ ಮಾಡುತ್ತದೆ. ಆದರೆ, ರಮೇಶ್ ರೆಡ್ಡಿ ಹಲವು ವರ್ಷಗಳಿಂದ ನಮ್ಮ ಸಂಸ್ಥೆಗಾಗಿ ದುಡಿದಿದ್ದಾರೆ. ಅವರ ಕೆಲಸದ ಬಗ್ಗೆ ಇರುವ ಶ್ರದ್ಧೆಯನ್ನು ನಾನು ಮೆಚ್ಚಿದ್ದೇನೆ. ನಾನು ಸನ್ಮಾನ ಸ್ವೀಕರಿಸುವುದರಿಂದ ಹಲವರಿಗೆ ಸಂತೋಷವಾಗುವುದರಿಂದ ಅವರ ಸಂತೋಷದಲ್ಲಿ ನಾನು ಸಂತೋಷ ಕಾಣುತ್ತೇನೆ. ನನ್ನ ಕೆಲಸ ನಾನು ಮಾಡಿದ್ದೀನಿ, ಯಾವತ್ತೂ ಪ್ರಶಸ್ತಿಗಾಗಿ ಕೆಲಸ ಮಾಡಿದವಳು ನಾನಲ್ಲ. ಈಗ ಪ್ರಶಸ್ತಿ ಬಂದಿದ್ದಕ್ಕೆ ಸಂತೋಷ. ಇನ್ನು ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತು ಹೇಳಲು ಇಚ್ಚಿಸುತ್ತೇನೆ.  ಹೆಣ್ಣು ಮಕ್ಕಳು ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗದೆ, ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ನಾನು ನನ್ನ ಸಂಪೂರ್ಣ ಶಕ್ತಿಯನ್ನು ಬಳಸಿಕೊಂಡೆ ಅಷ್ಟೇ. ಎಲ್ಲರಿಂದಲೂ ಇದು ಸಾಧ್ಯವಿದೆ’ ಎಂದರು. ಇದನ್ನೂ ಓದಿ:ಜುಲೈನಲ್ಲಿ ಹೆರಿಗೆ : ಗುಟ್ಟು ಬಿಟ್ಟುಕೊಟ್ಟ ರಾಮ್ ಚರಣ್ ಪತ್ನಿ ಉಪಾಸನಾ

    ‘ಇನ್ನೊಂದು ಬಹಳ ಮುಖ್ಯವಾದ ಬಿನ್ನಹವೆಂದರೆ, ದಯವಿಟ್ಟು ಎಲ್ಲರೂ ದಿನಕ್ಕೆ ಹತ್ತು ರುಪಾಯಿಯಾದರೂ ಮೂಕಪ್ರಾಣಿಗಳ ಕಲ್ಯಾಣಕ್ಕೆ ಕೂಡಿಡಿ. ಆ ದುಡ್ಡನ್ನು ಪ್ರಾಣಿ ದಯಾ ಸಂಘಗಳಿಗೆ ಕೊಡಿ. ಇದರಿಂದ ಸರಿಯಾದ ಆಹಾರವಿಲ್ಲದೆ ಬಳಲುತ್ತಿರುವ ಪ್ರಾಣಿಗಳಿಗೆ ಆಹಾರ, ಆರೋಗ್ಯ ಸಿಗುತ್ತದೆ’ ಎಂದು ತಮ್ಮ ಮನದಾಳದ ಮಾತುಗಳನ್ನು ತರೆದಿಟ್ಟರು. ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಸುಧಾಮೂರ್ತಿ ಅವರ ಆತ್ಮೀಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದು, ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

  • ಸುಧಾಮೂರ್ತಿಯವರಿಗೆ ಆರತಿ ಬೆಳಗಿ ಕುಂಕುಮ ಹಚ್ಚಿ ಸಂಭ್ರಮಿಸಿದ ಕುಟುಂಬ

    ಸುಧಾಮೂರ್ತಿಯವರಿಗೆ ಆರತಿ ಬೆಳಗಿ ಕುಂಕುಮ ಹಚ್ಚಿ ಸಂಭ್ರಮಿಸಿದ ಕುಟುಂಬ

    ಬಾಗಲಕೋಟೆ: ಇನ್ಫೋಸಿಸ್ (Infosys) ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

    ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಕೆಹೆಚ್ ಬಿ ಕಾಲೋನಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಸುಧಾಮೂರ್ತಿ (udhamurthy) ಅವರಿಗೆ ಆರತಿ ಬೆಳಗಿ ಕುಂಕುಮ ಹಚ್ಚಿ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮೋದಿ ಪ್ರಧಾನಿಯಾಗಿದ್ರಿಂದ ನನಗೆ ಪ್ರಶಸ್ತಿ ಬಂತು, ಇಲ್ಲದಿದ್ದರೆ ಬರುತ್ತಿರಲಿಲ್ಲ: ಎಸ್.ಎಲ್ ಭೈರಪ್ಪ

    ಸುಧಾಮೂರ್ತಿ ಅವರ ಅಣ್ಣನ ಮಗ ನಾರಾಯಣ ಕುಲಕರ್ಣಿ, ಪತ್ನಿ ವನಜಾ ಕುಲಕರ್ಣಿ, ಮಗಳು ಶ್ರೇಯಾ ಕುಲಕರ್ಣಿ ಆರತಿ ಬೆಳಗಿ ಸಂಭ್ರಮಿಸಿದ್ದಾರೆ. ಸಾಮಾನ್ಯ ಮಹಿಳೆಯಂತೆ ನೆಲದ ಕೂತು ಆರತಿ ಮಾಡಿಸಿಕೊಂಡ ಸುಧಾಮೂರ್ತಿ, ಆರತಿ ತಟ್ಟೆಗೆ ಹಣ ಹಾಕಿದ್ದಾರೆ.

    ಗುರುವಾರ ಅವರು ಬಾಗಲಕೋಟೆ (Bagalkote) ಗೆ ಭೇಟಿ ನೀಡಿದ್ದರು. ಹೀಗಾಗಿ ಜಮಖಂಡಿ ನಗರಕ್ಕೆ ಬಂದ ವೇಳೆಯೇ ಪ್ರಶಸ್ತಿ ಘೋಷಣೆಯಾಗಿದ್ದಕ್ಕೆ ಸಂಬಂಧಿಕರ ಸಂತಸ ಇಮ್ಮಡಿಯಾಗಿದೆ. ನಿನ್ನೆ ಜಮಖಂಡಿಯಲ್ಲಿ ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಸುಧಾಮೂರ್ತಿಯವರು ಶುಕ್ರವಾರ ಬೆಳಗ್ಗೆ ಪಾಂಡವಪುರಕ್ಕೆ ತೆರಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಡುಗಡೆಯ ದಿನವೇ 2000 ಪ್ರದರ್ಶನ ಕಂಡ ಗಂಧದ ಗುಡಿ

    ಬಿಡುಗಡೆಯ ದಿನವೇ 2000 ಪ್ರದರ್ಶನ ಕಂಡ ಗಂಧದ ಗುಡಿ

    ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಗಂಧದ ಗುಡಿ ಸಿನಿಮಾ ಬಿಡುಗಡೆ ಆದ ಮೊದಲ ದಿನ ಎರಡು ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡಿದೆ ಎಂದು ಅಂದಾಜಿಸಲಾಗಿದೆ. ನೂರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಈ ಸಿನಿಮಾವನ್ನು ಅಭಿಮಾನಿಗಳು ಬೆಳಗ್ಗೆಯಿಂದಲೇ ಕಣ್ತುಂಬಿಕೊಂಡಿದ್ದಾರೆ. ಶುಕ್ರವಾರ ಬಹುತೇಕ ಕಡೆ ಸಿನಿಮಾ ಹೌಸ್ ಫೂಲ್ ಆಗಿದ್ದು, ವಾರಾಂತ್ಯದ ಟಿಕೆಟ್ ಕೂಡ ಸೋಲ್ಡ್ ಔಟ್ ಆಗಿವೆ.

    ಸಿಲೆಬ್ರಿಟಿಗಾಗಿ ಗುರುವಾರ ಗಂಧದ ಗುಡಿ (Gandhad Gudi) ಸ್ಪೆಷಲ್ ಶೋ ಆಯೋಜನೆ ಮಾಡಲಾಗಿತ್ತು. ಕನ್ನಡದ ಬಹುತೇಕ ನಟ, ನಟಿಯರು ಹಾಗೂ ತಂತ್ರಜ್ಞರ ಜೊತೆ ಲೇಖಕಿ, ಇನ್ಫೋಸಿಸ್ ನ ಸುಧಾಮೂರ್ತಿ (Sudhamurthy) ಕೂಡ ಆಗಮಿಸಿದ್ದರು. ಸಿನಿಮಾ ನೋಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಬಂದಿರುವುದು ನೋಡಿ ಗರ್ವ ಬಂತು. ಅವರ ಈ ಪ್ರಯತ್ನಕ್ಕೆ ಫುಲ್ ಮಾರ್ಕ್ಸ್ ಕೊಡುತ್ತೇನೆ’ ಎಂದು ಹೆಮ್ಮೆಯಿಂದ ಮಾತನಾಡಿದರು. ಇದನ್ನೂ ಓದಿ:ಪುನೀತ್ ಪ್ರಥಮ ಪುಣ್ಯಸ್ಮರಣೆ: ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಪತ್ರ

    ಈ ಗಂಧದ ಗುಡಿಯಲ್ಲಿ ಯುವಕರು ನೋಡಿ ತಿಳಿದುಕೊಳ‍್ಳಬಹುದಾದ ಸಾಕಷ್ಟು ವಿಷಯಗಳು ಇವೆ. ಅದರಲ್ಲೂ ನನ್ನ ಉತ್ತರ ಕರ್ನಾಟಕದ ಬಗ್ಗೆ ತೋರಿಸಿದಾಗ ಮತ್ತು ಪುನೀತ್ ಅವರು ಉತ್ತರ ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತನಾಡಿದಾಗ ನಾನೂ ಭಾವುಕಳಾದೆ. ನಮ್ಮ ನೆಲದ ಚಿತ್ರ ಇದಾಗಿದ್ದರಿಂದ ಹೆಚ್ಚು ಆಪ್ತತೆ ಅನಿಸಿತು ಎಂದು ಸುಧಾಮೂರ್ತಿ ಮಾತನಾಡಿದರು.

     

    ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ನಿನ್ನೆ ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.

    Live Tv
    [brid partner=56869869 player=32851 video=960834 autoplay=true]

  • ‘ಗಂಧದ ಗುಡಿ’ ನೋಡಿ ಗರ್ವ ಬಂತು: ಸುಧಾಮೂರ್ತಿ ಫಸ್ಟ್ ರಿಯಾಕ್ಷನ್

    ‘ಗಂಧದ ಗುಡಿ’ ನೋಡಿ ಗರ್ವ ಬಂತು: ಸುಧಾಮೂರ್ತಿ ಫಸ್ಟ್ ರಿಯಾಕ್ಷನ್

    ಸಿಲೆಬ್ರಿಟಿಗಾಗಿ ನಿನ್ನೆ ಗಂಧದ ಗುಡಿ (Gandhad Gudi) ಸ್ಪೆಷಲ್ ಶೋ ಆಯೋಜನೆ ಮಾಡಲಾಗಿತ್ತು. ಕನ್ನಡದ ಬಹುತೇಕ ನಟ, ನಟಿಯರು ಹಾಗೂ ತಂತ್ರಜ್ಞರ ಜೊತೆ ಲೇಖಕಿ, ಇನ್ಫೋಸಿಸ್ (Infosys) ನ ಸುಧಾಮೂರ್ತಿ ಕೂಡ ಆಗಮಿಸಿದ್ದರು. ಸಿನಿಮಾ ನೋಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಬಂದಿರುವುದು ನೋಡಿ ಗರ್ವ ಬಂತು. ಅವರ ಈ ಪ್ರಯತ್ನಕ್ಕೆ ಫುಲ್ ಮಾರ್ಕ್ಸ್ ಕೊಡುತ್ತೇನೆ’ ಎಂದು ಹೆಮ್ಮೆಯಿಂದ ಮಾತನಾಡಿದರು.

    ಈ ಗಂಧದ ಗುಡಿಯಲ್ಲಿ ಯುವಕರು ನೋಡಿ ತಿಳಿದುಕೊಳ‍್ಳಬಹುದಾದ ಸಾಕಷ್ಟು ವಿಷಯಗಳು ಇವೆ. ಅದರಲ್ಲೂ ನನ್ನ ಉತ್ತರ ಕರ್ನಾಟಕದ ಬಗ್ಗೆ ತೋರಿಸಿದಾಗ ಮತ್ತು ಪುನೀತ್ (Puneeth Rajkumar) ಅವರು ಉತ್ತರ ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತನಾಡಿದಾಗ ನಾನೂ ಭಾವುಕಳಾದೆ. ನಮ್ಮ ನೆಲದ ಚಿತ್ರ ಇದಾಗಿದ್ದರಿಂದ ಹೆಚ್ಚು ಆಪ್ತತೆ ಅನಿಸಿತು ಎಂದು ಸುಧಾಮೂರ್ತಿ (Sudhamurthy) ಮಾತನಾಡಿದರು. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.

    ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ಜನರಿಗೆ ರಿಷಿ ಒಳ್ಳೆಯದು ಮಾಡ್ತಾರೆ ಅನ್ನೋ ವಿಶ್ವಾಸ ಇದೆ: ನಾರಾಯಣಮೂರ್ತಿ

    ಬ್ರಿಟನ್ ಜನರಿಗೆ ರಿಷಿ ಒಳ್ಳೆಯದು ಮಾಡ್ತಾರೆ ಅನ್ನೋ ವಿಶ್ವಾಸ ಇದೆ: ನಾರಾಯಣಮೂರ್ತಿ

    ನವದೆಹಲಿ: ಅಳಿಯ ರಿಷಿ ಸುನಕ್ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಹೇಳುವ ಮೂಲಕ ಇನ್ಫೋಸೀಸ್ ಸಹ-ಸಂಸ್ಥಾಪಕ ನಾರಾಯಣಮೂರ್ತಿ (Narayana Murthy) ಶುಭ ಕೋರಿದ್ದಾರೆ.

    42 ವರ್ಷದ ರಿಷಿ ಸುನಕ್ (Rishi Sunak) ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ನಾರಾಯಣ ಮೂರ್ತಿಯವರು, ಮೊದಲು ರಿಷಿಗೆ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ. ಅಲ್ಲದೆ ಅವರಿಗೆ ಯಶಸ್ಸನ್ನು ಬಯಸುತ್ತೇವೆ ಎಂದು ಹೇಳಿದರು. ಬ್ರಿಟನ್ ಜನರಿಗೆ ರಿಷಿ ತಮ್ಮ ಕೈಲಾದಷ್ಟು ಒಳ್ಳೆಯದು ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಮೂರ್ತಿಯವರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವ ನಾಯಕರ ಪಟ್ಟಿಯಲ್ಲಿ ಭಾರತೀಯರ ಪಾರುಪತ್ಯ – ರಿಷಿ ಸುನಾಕ್ ನೂತನ ಎಂಟ್ರಿ

    ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬೋರಿಸ್ ಜಾನ್ಸನ್ ಭಾನುವಾರ ಘೋಷಿಸಿದ್ದರಿಂದ ರಿಷಿ ಸುನಾಕ್ ಬ್ರಿಟನ್‍ (Britain) ನ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿತ್ತು. ಈಗ ಸುನಾಕ್‍ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಪ್ರತಿಸ್ಪರ್ಧಿ ಮೊರ್ಡಂಟ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಪಕ್ಷದ ಸದಸ್ಯರಿಂದ ಒತ್ತಡ ಕೇಳಿಬಂದಿತ್ತು. ಯುಕೆಯ ಮೊದಲ ಬಿಳಿಯರಲ್ಲದ, ಭಾರತೀಯ ಮೂಲದವರೊಬ್ಬರು ಪ್ರಧಾನಿಯಾದರೆಂಬ ಇತಿಹಾಸ ಕೂಡ ಸೃಷ್ಟಿಯಾಗಿದೆ. ಇದನ್ನೂ ಓದಿ: ಬ್ರಿಟನ್ ನೂತನ ಪ್ರಧಾನಿ ಭಾರತ ಮೂಲದ ರಿಷಿ ಸುನಾಕ್ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳಿವು

    ರಿಷಿ ಸುನಾಕ್ ಅವರು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ. ಬ್ರಿಟನ್‍ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳೆದಿರುವ ಅವರು ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಾಯಚೂರಿನಲ್ಲಿ ತಯಾರಾಗೋ ವಿಶೇಷ ಕೌದಿ – ಸುಧಾಮೂರ್ತಿಯಿಂದ ರಾಷ್ಟ್ರಪತಿಗೆ ಉಡುಗೊರೆ

    ರಾಯಚೂರಿನಲ್ಲಿ ತಯಾರಾಗೋ ವಿಶೇಷ ಕೌದಿ – ಸುಧಾಮೂರ್ತಿಯಿಂದ ರಾಷ್ಟ್ರಪತಿಗೆ ಉಡುಗೊರೆ

    ರಾಯಚೂರು: ರಾಜ್ಯಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿಗಳಿಗೆ ಇನ್ಫೋಸಿಸ್ ಫೌಂಡೇಶನ್ (Infosys Foundation) ಮುಖ್ಯಸ್ಥೆ ಸುಧಾಮೂರ್ತಿ ( Sudhamurthy) ಕೌದಿ ಉಡುಗೊರೆ ನೀಡಿದ್ದು, ಇದೀಗ ಈ ವಿಚಾರ ಭಾರೀ ಚರ್ಚೆಯಾಗುತ್ತಿದೆ.

    ಧಾರವಾಡದಲ್ಲಿ ಐಐಐಟಿ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಆಗಮಿಸಿದ್ದ ವೇಳೆ ಕೌದಿ (Kaudi Blanket) ಉಡುಗೊರೆ ನೀಡಿದ್ದರು. ಉಡುಗೊರೆ ಹಿಂದಿನ ಕತೆಯಲ್ಲಿ 3 ಸಾವಿರ ದೇವದಾಸಿಯರ ಪಾತ್ರ ಪ್ರಮುಖವಾಗಿದೆ. ರಾಯಚೂರು ಜಿಲ್ಲೆಯ ದೇವದಾಸಿ ಮಹಿಳೆಯರು ತಯಾರಿಸಿದ ಕೌದಿಯನ್ನು ಸುಧಾಮೂರ್ತಿ ಉಡುಗೊರೆಯಾಗಿ ನೀಡಿದ್ದಾರೆ. ದೇವದಾಸಿ ಪದ್ಧತಿಯಿಂದ (Devadasi system) ಹೊರತಂದು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿರುವ ಸುಧಾಮೂರ್ತಿ, ಅದೇ ಮಹಿಳೆಯರು ತಯಾರಿಸಿದ ಕೌದಿ ಹಾಗೂ ಸೀರೆ ಮತ್ತು ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದರು.  ಇದನ್ನೂ ಓದಿ: RSS ಬ್ಯಾನ್ ವಿಚಾರ – ಸಿದ್ದರಾಮಯ್ಯಗೆ ತಲೆಕೆಟ್ಟಿದೆ ಎಂದು ಅಪ್ಪಚ್ಚು ರಂಜನ್ ಕಿಡಿ

    ಈ ಕೌದಿಗಳು ಫುಲ್ ಡಿಮ್ಯಾಂಡ್ ಹೊಂದಿವೆ. ಈ ಕೌದಿಗಳ ಬಗ್ಗೆಯೇ ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಸುಧಾಮೂರ್ತಿ ಪುಸ್ತಕ ಬರೆದಿದ್ದಾರೆ. ‘ತ್ರೀ ತೌಸಂಡ್ ಸ್ಟಿಚ್ಚಸ್'(Three Thousand Stitches), ‘ತೀನ್ ಹಜಾರ್ ಟಾಕಿ'(Teen Hazar Talkie) ಎಂಬ ಹೆಸರಿನ ಪುಸ್ತಕ ಬಿಡುಗಡೆಯಾಗಿವೆ. ಒಬ್ಬೊಬ್ಬ ದೇವದಾಸಿಯ ಒಂದೊಂದು ಹೊಲಿಗೆ ಸೇರಿ ಮೂರು ಸಾವಿರ ಹೊಲಿಗೆಗಳಿಂದ ಹೊಲಿದ ವಿಶೇಷ ಕೌದಿ ಸುಧಾಮೂರ್ತಿಗೆ ಉಡುಗೊರೆ ನೀಡಿದ್ದರು. ಕೌದಿ ಹೊಲಿದು ಸ್ವಯಂ ದುಡಿಮೆ ಮಾಡುವ ಸಂಸ್ಥೆ ನಿರ್ಮಿಸಿ ಸುಧಾಮೂರ್ತಿ ಅವರು ದೇವದಾಸಿಯರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಇದನ್ನೂ ಓದಿ: ತಾನು ಎರಡನೇ ಪತ್ನಿ ಅಂತಾ ಗೊತ್ತಾಗ್ತಿದ್ದಂತೆಯೇ ಮುಂಜಾನೆ ನೇಣಿಗೆ ಶರಣಾದ ನವವಧು!

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತಿ ಮುರ್ಮುಗೆ ಕೌದಿ, ರೇಷ್ಮೆ ಸೀರೆ ಗಿಫ್ಟ್ ಕೊಟ್ರು ಸುಧಾ ಮೂರ್ತಿ

    ರಾಷ್ಟ್ರಪತಿ ಮುರ್ಮುಗೆ ಕೌದಿ, ರೇಷ್ಮೆ ಸೀರೆ ಗಿಫ್ಟ್ ಕೊಟ್ರು ಸುಧಾ ಮೂರ್ತಿ

    ಧಾರವಾಡ: ವಿದ್ಯಾಕಾಶಿ ಧಾರವಾಡ (Dharwad) ಕ್ಕೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಆವರು ಆಗಮಿಸಿದ್ದರು. ಐಐಐಟಿ ಉದ್ಘಾಟನೆ ಮಾಡಿದ ರಾಷ್ಟ್ರಪತಿ ಮುರ್ಮು ಅವರಿಗೆ ಸುಧಾ ಮೂರ್ತಿಯವರು ಕೌದಿ ಕೊಟ್ಟು ಗೌರವಿಸಿದ್ದಾರೆ.

    ವೇದಿಕೆ ಮೇಲೆ ರಾಷ್ಟ್ರಪತಿ (President) ಅವರಿಗೆ ಸ್ವಾಗತಿಸಿಕೊಂಡ ಸುಧಾ ಮೂರ್ತಿ ಅವರು, ಕೌದಿ ಜೊತೆ ರೇಷ್ಮೆ ಸೀರೆ ಕೂಡಾ ಕೊಟ್ಟಿದ್ದಾರೆ. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಮೋದಿಯವರಿಂದ್ಲೇ ಧಾರವಾಡ IIT ಕ್ಯಾಂಪಸ್‌ ಉದ್ಘಾಟನೆ – ಜೋಶಿ

    ರಾಯಚೂರಿನ ಮೂರು ಸಾವಿರ ದೇವದಾಸಿಯರು ಈ ಕೌದಿಯನ್ನ ತಯಾರು ಮಾಡಿದ್ದಾರೆ. ಇವರನ್ನು ಸಮಾಜಕ್ಕೆ ಮರಳಿ ತರುವಲ್ಲಿ ಸುಧಾ ಮೂರ್ತಿ (SudhaMurthy) ಸಾಕಷ್ಟು ಪ್ರಯತ್ನ ಮಾಡಿದ್ದರು. ಅದಕ್ಕೆ ಆ ದೇವದಾಸಿಯರು ಇವರಿಗೆ ತಾವು ತಯಾರಿಸಿದ ಕೌದಿಯನ್ನ ಕೊಟ್ಟಿದ್ದರು. ಆ ಕೌದಿ ಮೇಲೆಯೇ ಸುಧಾ ಮೂರ್ತಿ ಅವರು ಹಿಂದಿಯಲ್ಲಿ 3 ಹಜಾರ್ ಟಾಕೆ ಹಾಗೂ ಇಂಗ್ಲೀಷ್ ನಲ್ಲಿ 3 thousand stitchs ಎಂದು ಪುಸ್ತಕ ಬರೆದಿದ್ರು. ಆ ಪುಸ್ತಕ (Book) ಕೂಡಾ ಸುಧಾ ಮೂರ್ತಿ ಇವತ್ತು ರಾಷ್ಟ್ರಪತಿಗೆ ನೀಡಿದರು. ರಾಷ್ಟ್ರಪತಿ ಕೂಡಾ ಇವರ ಈ ಗಿಫ್ಟ್ ನೋಡಿ ಸಂತಸ ಪಟ್ಟರು ಎಂದು ಸ್ವತಃ ಸುಧಾ ಮೂರ್ತಿ ಅವರೇ ಹೇಳಿದ್ದಾರೆ.

    ರಾಷ್ಟ್ರಪತಿಗೆ ಮಧ್ಯಾಹ್ನ ಊಟದಲ್ಲಿ ಉತ್ತರ ಕರ್ನಾಟಕ (Uttara Karnataka) ದ ಬಿಳಿ ರೊಟ್ಟಿ, ಮೆಂತಿ ರೊಟ್ಟಿ, ಗೋಧಿ ಪಾಯಸ ಸೇರಿ ಹಲವು ಬಗೆಯ ಊಟ ತಯಾರು ಮಾಡಿದರು. ಆದರೆ ರಾಷ್ಟ್ರಪತಿ ಅವರು ಏನು ಊಟ ಮಾಡಿದ್ದಾರೆ ಅಂತಾ ನಮಗೆ ಗೊತ್ತಿಲ್ಲ ಎಂದು ಸುಧಾ ಮೂರ್ತಿ ಹೇಳಿದರು. ಇದನ್ನೂ ಓದಿ: ಮೈಸೂರು ಸಿಲ್ಕ್‌ ಸೀರೆ ಧರಿಸಿ ದಸರಾಗೆ ಚಾಲನೆ ನೀಡಿದ ದ್ರೌಪದಿ ಮುರ್ಮು

    ರಾಷ್ಟ್ರಪತಿಗೆ ಕೊಟ್ಟ ಕೌದಿಯನ್ನೇ ಸುಧಾ ಮೂರ್ತಿ ಅವರು ರಾಜ್ಯಪಾಲ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಗೂ ಕೊಟ್ಟಿದ್ದಾರೆ. ವೇದಿಕೆಯಲ್ಲಿ ರಾಷ್ಟ್ರಪತಿ ಬರುವ ಮೊದಲೇ ಈ ಮೂವರಿಗೆ ಸುಧಾ ಮೂರ್ತಿ ಈ ಕೌದಿ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮ ಜೀವನದ ಸ್ಫೂರ್ತಿ ಸುಧಾಮೂರ್ತಿ ಅವರನ್ನು ಭೇಟಿಯಾದ ಆಶಾ ಭಟ್

    ತಮ್ಮ ಜೀವನದ ಸ್ಫೂರ್ತಿ ಸುಧಾಮೂರ್ತಿ ಅವರನ್ನು ಭೇಟಿಯಾದ ಆಶಾ ಭಟ್

    `ರಾಬರ್ಟ್’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಟಿ ಆಶಾ ಭಟ್. ಕನ್ನಡದ ಮೊದಲ ಚಿತ್ರದಲ್ಲೇ ಭರವಸೆಯ ನಟಿಯಾಗಿ ಗುರುತಿಸಿಕೊಂಡ್ರು. ನಟಿಯಾಗಿ ಮತ್ತು ಗಾಯಕಿಯಾಗಿ ಸೌಂಡ್ ಮಾಡ್ತಿರೋ `ರಾಬರ್ಟ್’ ಬ್ಯೂಟಿ ಆಶಾ, ತಮ್ಮ ಜೀವನದಲ್ಲಿ ಇವರು ನನ್ನ ಸ್ಫೂರ್ತಿ ಎಂದು ಸುಧಾಮೂರ್ತಿ ಅವರ ಜತೆಗಿನ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ನಟಿ ಆಶಾ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್ ಆಗ್ತಿದೆ.

    `ಕಣ್ಣು ಹೊಡೆಯಾಕ’ ಅಂತಾ ಹೇಳ್ತಾ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಆಶಾ, ಬಾಲಿವುಡ್ ಜಂಗ್ಲಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಬಳಿಕ ಕನ್ನಡ ಚಿತ್ರದ ಮೂಲಕ ಹವಾ ಕ್ರಿಯೇಟ್ ಮಾಡಿದ್ರು. ಆಕ್ಟಿಂಗ್ ಮತ್ತು ಡ್ಯಾನ್ಸ್ಗಷ್ಟೇ ತಾನು ಸೀಮಿತವಲ್ಲ ಗಾಯಕಿಯಾಗಿಯೂ ಸೈ ಅಂತಾ ಪ್ರೂವ್ ಮಾಡಿದ್ರು. ನಟಿ ಆಶಾ ಇಂದು ದೆಹಲಿಯ ಈವೆಂಟ್‌ವೊಂದರಲ್ಲಿ ಸುಧಾಮೂರ್ತಿ ಅವರನ್ನು ಭೇಟಿಯಾಗಿದ್ದಾರೆ. ತಮ್ಮ ಬದುಕಿನಲ್ಲಿ ಸುಧಾಮೂರ್ತಿ ಅದೆಷ್ಟರ ಮಟ್ಟಿಗೆ ಸ್ಫೂರ್ತಿ ಎಂಬುದರ ಕುರಿತು ಇನ್ಸಾ÷್ಟಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೇರಳದಲ್ಲೂ ಯಶ್ ಹವಾ: ಟಾಪ್ 3ನೇ ಸ್ಥಾನದಲ್ಲಿ ಕೆಜಿಎಫ್ 2

     

    View this post on Instagram

     

    A post shared by Asha Bhat (@asha.bhat)

    ಇದೀಗ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಅವರ ಜತೆಗಿನ ಫೋಟೋ ಶೇರ್ ಮಾಡಿ, ಸುಧಾಮೂರ್ತಿ ಒಬ್ಬರು ಶ್ರೇಷ್ಠ ಮಹಿಳೆ, ನನಗೆ ಸ್ಫೂರ್ತಿ ನೀಡಲು ಎಂದಿಗೂ ವಿಫಲವಾಗದ ವ್ಯಕ್ತಿ. ಅವರ ಗುಣ ಮತ್ತು ನಡತೆ ನನಗೆ ಬೆರಗುಗೊಳಿಸುತ್ತದೆ ಎಂದು ತಮ್ಮ ನೆಚ್ಚಿನ ವ್ಯಕ್ತಿಯ ಬಗ್ಗೆ ಆಶಾ ಭಟ್ ಮೆಚ್ಚಗೆಯ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.