Tag: Sudhamoorthy

  • ಸುಧಾಮೂರ್ತಿ, ನಾರಾಯಣಮೂರ್ತಿಯನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು: ಕಾರಜೋಳ

    ಸುಧಾಮೂರ್ತಿ, ನಾರಾಯಣಮೂರ್ತಿಯನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು: ಕಾರಜೋಳ

    – ಶಾಲೆಯ ನಿರ್ಮಾಣವನ್ನು ಉತ್ತಮ ಗುಣಮಟ್ಟದಲ್ಲಿ ಮಾಡಬೇಕು ಎಂದು ಸೂಚಿಸಿದ್ದೇನೆ

    ವಿಜಯಪುರ: ಡಾ.ಸುಧಾಮೂರ್ತಿ ಮತ್ತು ಡಾ.ನಾರಾಯಣಮೂರ್ತಿರನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು ಎಂದು ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ.ಕಾರಜೋಳ ಹೇಳಿದರು.

    ಪದ್ಮಶ್ರೀ ಕಾಕಾ ಕಾರ್ ಖಾನಿಸ್ ಪ್ರೌಢಶಾಲೆ ನಿರ್ಮಾಣ ಕಾಮಗಾರಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ಶಂಕುಸ್ಥಾಪನೆ ಮಾಡಿದ್ದಾರೆ. ಅದಕ್ಕೂ ಮೊದಲು ಮಾಧ್ಯಮಗಳೊಂದಿದಗೆ ಮಾತನಾಡಿದ ಅವರು, ಈ ಶಾಲೆ ನಿರ್ಮಿಸುವ ಕಾರ್ಯ 6 ತಿಂಗಳಲ್ಲಿ ಮುಗಿಸಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ಚಟುವಟಿಕೆಗಳು ಪ್ರಾರಂಭ ಆಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಡಾ.ಸುಧಾಮೂರ್ತಿ ಮತ್ತು ಡಾ.ನಾರಾಯಣಮೂರ್ತಿ ಅವರನ್ನು ಈ ಪ್ರೌಢಶಾಲೆ ಕಟ್ಟಡ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಕರೆತರುವ ಆಶಯ ತಮ್ಮದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

    2020-21ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯ ಅಡಿಯಲ್ಲಿ 10 ಕೋಟಿ ರೂ. ಅನುದಾನ ಮಾಡಲಾಗಿತ್ತು. ಅದರಲ್ಲಿ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯ, ವಾಚನಾಲಯ, ದೈಹಿಕ ಶಿಕ್ಷಣ ವಿಭಾಗದ ಕೊಠಡಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಕಾಲಾವಧಿಯಲ್ಲಿ ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ:ಮದುವೆ ಮನೆಗೆ ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡ 100ಕ್ಕೂ ಹೆಚ್ಚು ಜನರು

    1933 ರಲ್ಲಿ ಗಾಂಧೀಜಿಯವರಿಂದ ಪ್ರೇರಣೆ ಪಡೆದು ಕಾಕಾ ಕಾರಖಾನೀಸ ಅವರು ಹರಿಜನ ಕನ್ಯಾ ಮಂದಿರ ಮತ್ತು ಹರಿಜನ ಗಂಡು ಮಕ್ಕಳ ಹಾಸ್ಟೆಲ್ ಪ್ರಾರಂಭ ಮಾಡಿ 236 ಮಕ್ಕಳನ್ನು ಓದಿಸಿ ಕರ್ನಾಟಕದ ಗಾಂಧಿ ಅನಿಸಿಕೊಂಡರು. ದೀನ ದಲಿತರ ಉದ್ಧಾರಕ್ಕಾಗಿ ಅವರ ಜೀವನವನ್ನೇ ಮುಡುಪಾಗಿಟ್ಟವರು ಎಂದು ನೆನೆಪಿಸಿಕೊಂಡರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಸನಗೌಡ ಪಾಟೀಲ ವಹಿಸಿದ್ದರು. ಈ ಕಟ್ಟಡವು 2020-21 ನೇ ಸಾಲಿನ 5054-ಎಸ್.ಸಿ.ಪಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ ರೂ.ಗಳಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಇದನ್ನೂ ಓದಿ:ಹುಬ್ಬಳ್ಳಿಗೆ ಅಮಿತ್ ಶಾರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ

    ಕಟ್ಟಡದಲ್ಲಿ ಏನಿದೆ?

    ಕಟ್ಟಡದ ನೆಲಮಹಡಿ(1140,00 ಚಿ.ಮೀ), ಮೊದಲ ಮಹಡಿ (1180,00 ಚಿ.ಮೀ), ಎರಡನೇ ಮಹಡಿ (980,00 ಚ.ಮೀ) ಹಾಗೂ ಟೆರೆಸ್ ಮಹಡಿ (50.00 ಚ.ಮೀ) ಒಟ್ಟು 3350.00 ಚ.ಮೀ ವಿಸ್ತೀರ್ಣವನ್ನು ಹೊಂದಿದ್ದು, ಶಾಲೆಗೆ ಅವಶ್ಯವಿರುವ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ನೆಲ ಮಹಡಿಯು ಅಡ್ಮಿನಿಸ್ಟ್ರೇಟಿವ್ ಆಫೀಸ್, ರಿಸರ್ಚ್ ಸೆಂಟರ್, ಪ್ರಿನ್ಸಿಪಲ್ ಚೇಂಬರ್, ಕ್ಲಾಸ್ ರೂಮ್ಸ್-4, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಯೋಗಾ ಸೆಂಟರ್, ಲೇಡಿಸ್ ವೇಟಿಂಗ್ ರೂಮ್ ಗಳನ್ನು ಒಳಗೊಂಡಿರುತ್ತದೆ.

    ಯಾವ ಸೌಲಭ್ಯವಿದೆ?

    ಮೊದಲನೇ ಮಹಡಿಯ ಕಾನ್ಫರನ್ಸ್ ರೂಮ್, ಲೈಬ್ರರಿ, ಮ್ಯಾನೇಜಮೆಂಟ್ ರೂಮ್, ಸ್ಟಾಫ್ ರೂಮ್, ಕ್ಲಾಸ್ ರೂಮ್ಸ್-4, ಹೆಲ್ತ್ ಸೆಂಟರ್, ಸ್ಟೋರ್ ಮತ್ತು ರೆಕಾಡ್ರ್ಸ್, ಇಂಡೋರ್ ಸ್ಪೋಟ್ರ್ಸ ಫೆಸಿಲಿಟ, ಜೆಂಟ್ಸ್ ವೇಟಿಂಗ್ ರೂಮ್ ಗಳನ್ನು ಒಳಗೊಂಡಿರುತ್ತದೆ. ಎರಡನೇ ಮಹಡಿಯ ರೆಸೋನನ್ಸ್ ಸೆಂಟರ್, ಡಿಜಿಟಲ್ ಲೈಬ್ರರಿ, ಮ್ಯಾನೇಜಮೆಂಟ್ ರೂಮ್, ಕ್ಲಾಸ್ ರೂಮ್ಸ್-4, ಮಲ್ಟಿ ಪರಪಸ್ ಹಾಲ್ ಗಳನ್ನು ಒಳಗೊಂಡಿದ್ದು, ಮೂರನೇ ಮಹಡಿಯು ಸ್ಟೇರಕೇಸ್ ಹೆಡ್ ರೂಮ್ಸ್ ಗಳಿರುತ್ತದೆ. ಇದನ್ನೂ ಓದಿ:ಬೆಳಗಾವಿ ಮೂವರು ನಾಯಕರನ್ನ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ

    ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಶ್ರೀ ರಮೇಶ್ ಜಿಗಜಿಣಗಿ, ಜಿಲ್ಲಾಧಿಕಾರಿ ಪಿ, ಸುನೀಲ್ ಕುಮಾರ್, ಪೆÇಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್, ಮುಖಂಡರುಗಳಾದ ಗೋಪಾಲನಾಯಕ್, ಅಡಿವೆಪ್ಪ ಸಾಲಗಲ್, ಸಿದ್ದು ರಾಯಣ್ಣವರ, ರಮೇಶ್ ಆಸಂಗಿ, ಶಂಕರ್, ಭೀರಪ್ಪ ಅರ್ಧಾವೂರ, ಹಾಗೂ ಇತರೆ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.

  • ಅಸಹಾಯಕ ಸಿನಿಮಾ ಕಾರ್ಮಿಕರಿಗೆ ಇನ್ಫೋಸಿಸ್ ಫೌಂಡೇಷನ್ ಆಸರೆ

    ಅಸಹಾಯಕ ಸಿನಿಮಾ ಕಾರ್ಮಿಕರಿಗೆ ಇನ್ಫೋಸಿಸ್ ಫೌಂಡೇಷನ್ ಆಸರೆ

    -ನಿರ್ಮಾಪಕ ರಮೇಶ್ ರೆಡ್ಡಿ ಸಮ್ಮುಖದಲ್ಲೊಂದು ಸಾರ್ಥಕ ಕಾರ್ಯ

    ಬೆಂಗಳೂರು: ಕೊರೊನಾ ವೈರಸ್ ಅಟಾಟೋಪದಿಂದಾಗಿ ಹೆಚ್ಚೂ ಕಡಿಮೆ ಇಡೀ ವಿಶ್ವವೇ ಸ್ತಬ್ಧವಾಗಿದೆ. ಅದರಲ್ಲಿ ನಮ್ಮ ದೇಶ, ರಾಜ್ಯವೂ ಹೊರತಾಗಿಲ್ಲ. ಮೇಲ್ನೋಟಕ್ಕೆ ಲಾಕ್‍ಡೌನ್ ಈ ಕ್ಷಣದ ಅನಿವಾರ್ಯತೆಯಾಗಿ ಕಂಡರೂ ಕೂಡಾ ದಿನದ ತುತ್ತನ್ನು ಆ ದಿನವೇ ಸಂಪಾದಿಸಿಕೊಂಡು ಜೀವನ ಸಾಗಿಸುತ್ತಿದ್ದ ಕೋಟಿ ಕೋಟಿ ಜೀವಗಳು ತೀವ್ರತರನಾದ ಸಂಕಷ್ಟಕ್ಕೀಡಾಗಿವೆ. ಆ ಸಾಲಿನಲ್ಲಿ ಕನ್ನಡ ಚಿತ್ರರಂಗದ ಭಾಗವಾಗಿರುವ ಕಾರ್ಮಿಕರೂ ಕೂಡ ಸೇರಿಕೊಂಡಿದ್ದಾರೆ. ಅಂಥವರಿಗೆಲ್ಲ ನೆರವಾಗುವಂಥ ಸಾರ್ಥಕ ಕಾರ್ಯವನ್ನು ಸುಧಾ ಮೂರ್ತಿ ಸಾರಥ್ಯದ ಇನ್ಫೋಸಿಸ್ ಫೌಂಡೇಷನ್ ಕೈಗೊಂಡಿದೆ. ಅದು ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಮೇಶ್ ರೆಡ್ಡಿಯವರ ಇರುವಿಕೆಯಲ್ಲಿ ನಡೆಯುತ್ತಿದೆ.

    ಯಾವುದೇ ಸಂಕಷ್ಟದ ಕಾಲದಲ್ಲಿ ನೊಂದವರ ನೆರವಿಗೆ ನಿಲ್ಲುವಂಥಾ ತಾಯ್ತನವನ್ನು ಸುಧಾಮೂರ್ತಿ ಸದಾ ಕಾಲವೂ ಕಾಯ್ದುಕೊಳ್ಳುತ್ತಾರೆ. ಅವರ ನೆರಳಿನಲ್ಲಿಯೇ ಬೆಳೆದು ಬಂದಿರುವ ರಮೇಶ್ ರೆಡ್ಡಿಯವರು ಕೂಡಾ ಅಂಥಾದ್ದೇ ಮನಸ್ಥಿತಿಯನ್ನು ರೂಢಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರೂ ಕೂಡಾ ಕಾರ್ಮಿಕರ ಬದುಕಿನ ಅನಿವಾರ್ಯತೆಗಳನ್ನು, ಸಂಕಟಗಳನ್ನು ತಾವೇ ಕಂಡು ಬೆಳೆದು ಬಂದವರು. ಆದ್ದರಿಂದಲೇ ಬಹು ಬೇಗನೆ ಚಿತ್ರರಂಗದ ಕಾರ್ಮಿಕರ ಸಂಕಷ್ಟಗಳಿಗೆ ಕಣ್ಣಾಗಿದ್ದಾರೆ. ಇದರ ಭಾಗವಾಗಿಯೇ ಸುಧಾಮೂರ್ತಿಯವರ ನೆರವು ಕನ್ನಡ ಚಿತ್ರರಂಗದ ಕಾರ್ಮಿಕ ಸಂಘಟನೆಗಳ ಸಮ್ಮುಖದಲ್ಲಿ ಹಲವಾರು ಕಾರ್ಮಿಕರಿಗೆ ಜೀವನಾವಶ್ಯಕ ಸಾಮಾಗ್ರಿಗಳನ್ನು ತಲುಪಿಸಲಾಗಿದೆ.

    ನಿರ್ಮಾಪಕ ರಮೇಶ್ ರೆಡ್ಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷರಾದ ಸಾ.ರಾ ಗೋವಿಂದು, ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷರಾದ ರವಿಶಂಕರ್ ಮುಂತಾದ ಹಲವರ ಉಪಸ್ಥಿತಿಯಲ್ಲಿ ಇನ್ಫೋಸಿಸ್ ಫೌಂಡೇಷನ್ನಿನ ನೆರವನ್ನು ಕಾರ್ಮಿಕರಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಹೀಗೆ ಚಾಲನೆ ಪಡೆದುಕೊಂಡಿರುವ ಈ ನೆರವಿನ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಮೂಲಕ ಮುಂದುವರೆಯಲಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ನೆರವಾಗಿರುವ ಸುಧಾಮೂರ್ತಿಯವರ ಕಾರ್ಯವನ್ನು ಮೆಚ್ಚಿಕೊಂಡು ಮಾತಾಡಿರುವ ರಮೇಶ್ ರೆಡ್ಡಿಯವರು `ಸುಧಾಮೂರ್ತಿಯವರ ಕಡೆಯಿಂದ ದೇಶ ಮತ್ತು ರಾಜ್ಯದಲ್ಲಿ ಅನೇಕ ಒಳ್ಳೆ ಕೆಲಸಗಳಾಗುತ್ತಿವೆ. ಈ ಕಷ್ಟ ಕಾಲದಲ್ಲಿ ಅವರು ಚಲನಚಿತ್ರ ಕಾರ್ಮಿಕರ ಬಗ್ಗೆ ಕಾಳಜಿ ತೋರಿಸಿರುವುದು ಸ್ವಾಗತಾರ್ಹ’ ಎಂದಿದ್ದಾರೆ.

    ಸುಧಾ ಮೂರ್ತಿಯವರ ಈ ಮಾನವೀಯ ನೆರವನ್ನು ಸಾ.ರಾ.ಗೋವಿಂದು ಕೂಡಾ ಮನದುಂಬಿ ಮೆಚ್ಚಿಕೊಂಡಿದ್ದಾರೆ. `ಈ ಕೊರೋನಾ ಕರ್ಫ್ಯೂನಿಂದಾಗಿ ಸಾವಿರಾರು ಚಲನಚಿತ್ರ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ದಿನನಿತ್ಯದ ಜೀವನಕ್ಕೂ ಪರದಾಡುವ ಸ್ಥಿತಿ ತಲುಪಿಕೊಂಡಿರುವ ಅಂಥವರಿಗೆಲ್ಲ ಸುಧಾಮೂರ್ತಿಯವರ ನೆರವು ನೀಡುತ್ತಿರೋದು ಸಂತಸದ ವಿಷಯ’ ಎಂದಿದ್ದಾರೆ.

    ಒಟ್ಟಾರೆಯಾಗಿ ಇದೊಂದು ಸಾರ್ಥಕ ಕಾರ್ಯಕ್ರಮ. ಅದು ಇದೀಗ ಗಾಳಿಪಟ-2 ಚಿತ್ರದ ನಿರ್ಮಾಪಕರೂ ಆಗಿರುವ ರಮೇಶ್ ರೆಡ್ಡಿಯವರ ಸಮ್ಮುಖದಲ್ಲಿಯೇ ನಡೆದಿರೋದು ನಿಜಕ್ಕೂ ಖುಷಿಯ ಸಂಗತಿ. ಯಾಕೆಂದರೆ, ರಮೇಶ್ ರೆಡ್ಡಿಯವರೂ ಕೂಡಾ ನಾನಾ ಪಡಿಪಾಟಲುಗಳನ್ನು ಅನುಭವಿಸುತ್ತಾ, ಗಾರೆ ಕಾರ್ಮಿಕರಾಗಿಯೂ ದುಡಿದು ಅನುಭವ ಹೊಂದಿರುವವರು. ಆ ಕಷ್ಟದ ದಿನಗಳ ನೆನಪಿನ ಪಸೆಯನ್ನು ಇನ್ನೂ ಮನಸಲ್ಲಿಟ್ಟುಕೊಂಡಿರುವ ಅವರೀಗ ಇಂಥಾದ್ದೊಂದು ಮಾನವೀಯ ಕಾರ್ಯಕ್ರಮದ ಭಾಗವಾಗಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.