Tag: Sudeepto Sen

  • ದಿ ಕೇರಳ ಸ್ಟೋರಿ ಕೆಟ್ಟ ಯಶಸ್ಸಿನ ಟ್ರೆಂಡ್: ನಟ ನಾಸಿರುದ್ದೀನ್ ಶಾ

    ದಿ ಕೇರಳ ಸ್ಟೋರಿ ಕೆಟ್ಟ ಯಶಸ್ಸಿನ ಟ್ರೆಂಡ್: ನಟ ನಾಸಿರುದ್ದೀನ್ ಶಾ

    ಬಾಲಿವುಡ್ ನ ಖ್ಯಾತ ನಟ ನಾಸಿರುದ್ದೀನ್ ಶಾ (Naseeruddin Shah) ‘ದಿ ಕೇರಳ ಸ್ಟೋರಿ’ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಈ ಸಿನಿಮಾವನ್ನು ತಾವು ಯಾವತ್ತೂ ನೋಡುವುದಿಲ್ಲ ಎಂದಿರುವ ಅವರು,  ಸಿನಿಮಾ ಗೆದ್ದಿದೆ ಎಂದ ಮಾತ್ರಕ್ಕೆ ಅದು ಒಳ್ಳೆಯ ಗೆಲುವಲ್ಲ. ಅದೊಂದು ಕೆಟ್ಟ ಟ್ರೆಂಡಿನ ಗೆಲುವು ಎಂದು ಪ್ರತಿಕ್ರಿಯಿಸಿದ್ದಾರೆ. ದ್ವೇಷವನ್ನು ಹಂಚುತ್ತಿರುವ ಕುರಿತು ಅವರು ಕಳವಳವನ್ನು  ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಇನ್ನೆಷ್ಟು ದಿನ ಈ ದ್ವೇಷವನ್ನು ಹಂಚುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

    ಬಾಕ್ಸ್ ಆಫೀಸಿನಲ್ಲಿ ಇನ್ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ, ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ ಬಗ್ಗೆ ಈ ಹಿಂದೆ ಕಮಲ್ ಹಾಸನ್ (Kamal Haasan) ಕೂಡ ಮಾತನಾಡಿದ್ದರು. ಅದೊಂದು ಪ್ರೊಪಗಾಂಡ ಸಿನಿಮಾ ಎಂದು ಟೀಕಿಸಿದ್ದರು. ಸತ್ಯವನ್ನು ಹೇಳದೇ ಅಸತ್ಯವನ್ನೇ ತುಂಬಿರುವಂತಹ ಚಿತ್ರವದು ಎಂದು ಮಾತನಾಡಿದ್ದರು. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್‌ಗೆ ಸ್ಟಾರ್ ನಟ ಕಮಲ್ ಹಾಸನ್ ವಿಲನ್

    ಅಬುಧಾಬಿಯಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಕಮಲ್ ಹಾಸನ್,  ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ನಾನು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ ನನ್ನನ್ನೂ ವಿರೋಧಿಸಿದ್ದಾರೆ. ಸಿನಿಮಾದಲ್ಲಿ ಸತ್ಯ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಿದರೆ ಸಾಲದು. ಅದರಲ್ಲಿ ಸತ್ಯ ಇರಬೇಕು’ ಎಂದು ಪ್ರತಿಕ್ರಿಯಿಸಿದ್ದರು.

    ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಕಥೆಯೇ ಬೋಗಸ್ ಎಂದು ಹಲವರು ಈಗಾಗಲೇ ಹಲವರು ವಾದ ಮಾಡಿದ್ದಾರೆ. ಅವರು ಹೇಳಿದ ಪ್ರಮಾಣದಲ್ಲಿ ಮಹಿಳೆಯರು ಇಸ್ಲಾಂ ಮೂಲಭೂತವಾದಕ್ಕೆ ಸಿಲುಕಿಲ್ಲ ಎಂದು ಚರ್ಚೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ಟೀಮ್ ಮಾಧ್ಯಮಗೋಷ್ಠಿ ನಡೆಸಿ, ಅಲ್ಲಿಗೆ ಸಂತ್ರಸ್ತರನ್ನು ಕರೆತಂದಿದ್ದರು. ಒಬ್ಬೊಬ್ಬರ ಕಥೆಯನ್ನು ಸಿನಿಮಾ ಟೀಮ್ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದೆ.

     

    ದಿ ಕೇರಳ ಸ್ಟೋರಿಯ ಟ್ರೈಲರ್ ರಿಲೀಸ್ ಆದ ಸಂದರ್ಭದಲ್ಲಿ ಒಟ್ಟು 32 ಸಾವಿರ ಯುವತಿಯರ ಮತಾಂತರ ಮಾಡಲಾಗಿದೆ ಎಂದು ಹೇಳಿತ್ತು. ಅಂಕಿ ಸಂಖ್ಯೆಯ ಕುರಿತು ವ್ಯಾಪಕ ಟೀಕೆ ಬಂದ ಬೆನ್ನಲ್ಲೇ ಸಂಖ್ಯೆಯ ವಿಚಾರವನ್ನು ಸಿನಿಮಾದಿಂದಲೇ ಕೈ ಬಿಡಲಾಯಿತು. ಆದರೆ, ಸಾಕಷ್ಟು ಸಂಖ್ಯೆಲ್ಲಿ ಮತಾಂತರ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಕೆಲ ದಿನಗಳ ಹಿಂದೆ ನಡೆದ ಮಾಧ್ಯಮ ಗೋಷ್ಠಿಗೆ 26 ಯುವತಿಯರನ್ನು ಕರೆತಂದಿದ್ದರು ನಿರ್ದೇಶಕ ಸುದೀಪ್ತೋ ಸೇನ್.

  • ದಿ ಕೇರಳ ಸ್ಟೋರಿ ಸುಳ್ಳಲ್ಲ: ಸಂತ್ರಸ್ತರನ್ನು ಮಾಧ್ಯಮದ ಮುಂದೆ ತಂದ ಟೀಮ್

    ದಿ ಕೇರಳ ಸ್ಟೋರಿ ಸುಳ್ಳಲ್ಲ: ಸಂತ್ರಸ್ತರನ್ನು ಮಾಧ್ಯಮದ ಮುಂದೆ ತಂದ ಟೀಮ್

    ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಕಥೆಯೇ ಬೋಗಸ್ ಎಂದು ಹಲವರು ವಾದ ಮಾಡಿದ್ದರು. ಅವರು ಹೇಳಿದ ಪ್ರಮಾಣದಲ್ಲಿ ಮಹಿಳೆಯರು ಇಸ್ಲಾಂ ಮೂಲಭೂತವಾದಕ್ಕೆ ಸಿಲುಕಿಲ್ಲ ಎಂದು ಚರ್ಚೆ ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ಟೀಮ್ ಮಾಧ್ಯಮಗೋಷ್ಠಿ ನಡೆಸಿ, ಅಲ್ಲಿಗೆ ಸಂತ್ರಸ್ತರನ್ನು ಕರೆತಂದಿದ್ದರು. ಒಬ್ಬೊಬ್ಬರ ಕಥೆಯನ್ನು ಸಿನಿಮಾ ಟೀಮ್ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿತು.

    ದಿ ಕೇರಳ ಸ್ಟೋರಿಯ ಟ್ರೈಲರ್ ರಿಲೀಸ್ ಆದ ಸಂದರ್ಭದಲ್ಲಿ ಒಟ್ಟು 32 ಸಾವಿರ ಯುವತಿಯರ ಮತಾಂತರ ಮಾಡಲಾಗಿದೆ ಎಂದು ಹೇಳಿತ್ತು. ಅಂಕಿ ಸಂಖ್ಯೆಯ ಕುರಿತು ವ್ಯಾಪಕ ಟೀಕೆ ಬಂದ ಬೆನ್ನಲ್ಲೇ ಸಂಖ್ಯೆಯ ವಿಚಾರವನ್ನು ಸಿನಿಮಾದಿಂದಲೇ ಕೈ ಬಿಡಲಾಯಿತು. ಆದರೆ, ಸಾಕಷ್ಟು ಸಂಖ್ಯೆಲ್ಲಿ ಮತಾಂತರ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಎರಡು ದಿನಗಳ ಹಿಂದೆ ನಡೆದ ಮಾಧ್ಯಮ ಗೋಷ್ಠಿಗೆ 26 ಯುವತಿಯರನ್ನು ಕರೆತಂದಿದ್ದರು ನಿರ್ದೇಶಕ ಸುದೀಪ್ತೋ ಸೇನ್. ಇದನ್ನೂ ಓದಿ:ಮಳೆ ಆರ್ಭಟಕ್ಕೆ ಮನೆಗೆ ನೀರು ನುಗ್ಗಿ ಜಗ್ಗೇಶ್ ಕಾರು ಮುಳುಗಡೆ

    ಸಂತ್ರಸ್ತೆ (Victim) ಯುವತಿಯೊಬ್ಬಳು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ , ‘ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಅದಾ ಶರ್ಮಾ (Adah Sharma) ಮಾಡಿದ ಪಾತ್ರಕ್ಕೂ ನನ್ನ ಜೀವನಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ. ಅದಾ ಶರ್ಮಾ ಮಾಡಿದ ಪಾತ್ರ ನೂರಕ್ಕೂ ನೂರು ನನ್ನನ್ನೇ ಹೋಲುತ್ತದೆ. ಮನೆಯಲ್ಲಿ ಕೆಳಗೆ ಪೂಜೆ ನಡೆಯುತ್ತಿದ್ದರೆ, ಟೆರೇಸ್ ಮೇಲೆ ನಾನು ನಮಾಜ್ ಮಾಡುತ್ತಿದ್ದೆ. ಅಷ್ಟರ ಮಟ್ಟಿಗೆ ಪರಿವರ್ತನೆ ಮಾಡಿದ್ದರು’ ಎಂದು ಹೇಳಿಕೊಂಡರ.

    ದಿ ಕೇರಳ ಸ್ಟೋರಿ ಸಾಕಷ್ಟು ಸದ್ದು ಮಾಡುತ್ತಿದೆ. ವಿವಾದ, ನಿಷೇಧದ ನಡುವೆಯೂ ಇಂದು ಅದು 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಶನಿವಾರಕ್ಕೆ 183 ಕೋಟಿ ರೂಪಾಯಿಗೂ ಅಧಿಕ ಬಾಕ್ಸ್ ಆಫೀಸ್ ಬಾಚಿದೆ. ಇನ್ನೂ ಸಾಕಷ್ಟು ಕಡೆ ತುಂಬಿದ ಪ್ರದರ್ಶನವನ್ನು ಚಿತ್ರ ಕಾಣುತ್ತಿದೆ.

  • ದಿ ಕೇರಳ ಸ್ಟೋರಿ 2 ನಿರ್ದೇಶನಕ್ಕೆ ತೆರೆಮರೆಯಲ್ಲಿ ತಯಾರಿ : ಸ್ಟೋರಿ ಏನು?

    ದಿ ಕೇರಳ ಸ್ಟೋರಿ 2 ನಿರ್ದೇಶನಕ್ಕೆ ತೆರೆಮರೆಯಲ್ಲಿ ತಯಾರಿ : ಸ್ಟೋರಿ ಏನು?

    ಗಾಗಲೇ ನೂರಾರು ಕೋಟಿ ಗಳಿಕೆ ಮಾಡಿ, ಹಲವು ಕಡೆ ಇನ್ನೂ ತುಂಬಿದ ಪ್ರದರ್ಶನ ಕಾಣುತ್ತಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಎರಡನೇ ಭಾಗವಾಗಿ ಮೂಡಿ ಬರಲಿದೆಯಾ? ಇಂಥದ್ದೊಂದು ಸುದ್ದಿ ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ (Sudeepto Sen) ಕೂಡ ಈ ಬಗ್ಗೆ ಮಾತನಾಡಿದ್ದಾರೆ. ದಿ ಕೇರಳ ಸ್ಟೋರಿ 2 (The Kerala Story 2) ಮಾಡುವಂತೆ ಆಫರ್ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

    ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಿ, ಅವರನ್ನು ಮತಾಂತರಿಸಿ ಉಗ್ರರನ್ನಾಗಿಸುವ ಕಥೆಯನ್ನು ಹೊಂದಿತ್ತು. ಎರಡನೇ ಭಾಗದಲ್ಲಿ ಮುಸ್ಲಿಂ ಮುಗ್ಧ ಹುಡುಗರ ತಲೆಕೆಡಿಸಿ ಉಗ್ರರನ್ನಾಗಿ ಹೇಗೆ ಮಾಡಲಾಗುತ್ತಿದೆ ಎನ್ನುವ ಕಥೆಯನ್ನು ಹೊಂದಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತಾಗಿ ನಿರ್ದೇಶಕರು ಕೆಲ ಸುಳಿವುಗಳನ್ನೂ ನೀಡಿದ್ದಾರೆ. ಆದರೆ, ಅಧಿಕೃತವಾಗಿ ಯಾವಾಗ ಘೋಷಣೆಯಾಗಲಿದೆ ಎನ್ನುವ ಕುರಿತು ಅವರು ತಿಳಿಸಿಲ್ಲ. ಇದನ್ನೂ ಓದಿ:ಪವಿತ್ರಾ ಲೋಕೇಶ್ ಗೆ ಪ್ರೀತಿಯಿಂದ ‘ಅಮ್ಮು’ ಎಂದು ಕರೆಯುತ್ತೇನೆ : ನಟ ನರೇಶ್

    ಈಗಾಗಲೇ ಸಿನಿಮಾ ಭಾರತದಲ್ಲೇ ನೂರೈವತ್ತು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿದೇಶದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆಸ್ಟ್ರೇಲಿಯಾ (Australia), ಅಮೆರಿಕ (America) ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ರಿಲೀಸ್ ಆಗಿ ಎರಡನೇ ದಿನಕ್ಕೆ 46 ಲಕ್ಷ ರೂಪಾಯಿ ಕಮಾಯಿ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೇ, ಅಮೆರಿಕಾದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಎರಡು ರಾಜ್ಯಗಳಲ್ಲಿ ನಿಷೇಧ ಹೇರಿದ್ದರೂ, ಸ್ವತಃ ಕೇರಳದಲ್ಲೇ ಸಿನಿಮಾ ಪ್ರದರ್ಶನಕ್ಕೆ ನಾನಾ ಅಡತಡೆಗಳನ್ನು ಒಡ್ಡಿದ್ದರೂ ಅದು ಹೇಗೆ ಈ ಪ್ರಮಾಣದಲ್ಲಿ  ಕಲೆಕ್ಷನ್ ಆಗೋಕೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಮಾಡಿದ್ದಾರೆ. ಆದರೆ, ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರವೇ ಬೇರೆ ಇದೆ. ಮೂರು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಿರುವುದರಿಂದ ಇನ್ನೂ ಭಾರಿ ಪ್ರಮಾಣದಲ್ಲಿ ಹಣ ಹರಿದು ಬರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.