Tag: Sudeepro Sen

  • ‘ದಿ ಕೇರಳ ಸ್ಟೋರಿ’ ನಂತರ ಮತ್ತೊಂದು ಸಿನಿಮಾ ಘೋಷಿಸಿದ ಟೀಮ್

    ‘ದಿ ಕೇರಳ ಸ್ಟೋರಿ’ ನಂತರ ಮತ್ತೊಂದು ಸಿನಿಮಾ ಘೋಷಿಸಿದ ಟೀಮ್

    ದೇಶದಾದ್ಯಂತ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಿರ್ದೇಶಕ ಸುದೀಪ್ರೋ ಸೇನ್ (Sudeepro Sen) ಇದೀಗ ಮತ್ತೊಂದು ಸಿನಿಮಾ ಘೋಷಣೆ (New Movie) ಮಾಡಿದ್ದಾರೆ. ಆ ಚಿತ್ರಕ್ಕೆ ಅವರು ಬಸ್ತರ್ ಎಂದು ಹೆಸರಿಟ್ಟಿದ್ದಾರೆ.  ಈ ಕುರಿತು ಸ್ವತಃ ನಿರ್ದೇಶಕರೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದು, ಸನ್ ಸೈನ್ ಪಿಕ್ಚರ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

    ಈಗಾಗಲೇ ಬಸ್ತರ್ (Bastar)  ಸಿನಿಮಾದ ಕೆಲಸಗಳು ಸದ್ದಿಲ್ಲದೇ ಶುರುವಾಗಿವೆ ಎಂದು ಹೇಳಲಾಗಿದ್ದು, ಏಪ್ರಿಲ್ 5, 2024ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಿದೆ ಚಿತ್ರತಂಡ. ಇದು ಕೂಡ ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, ಯಾವ ಘಟನೆ ಎನ್ನುವುದನ್ನು ಚಿತ್ರತಂಡ ಹೇಳಿಕೊಂಡಿಲ್ಲ. ಹಾಗಾಗಿ ನಿರ್ದೇಶಕರು ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿರಬೇಕು ಎನ್ನುವ ಕುತೂಹಲ ಮೂಡಿದೆ.

    ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

    ಕಡಿಮೆ ಬಜೆಟ್ ನಲ್ಲಿ ತಯಾರಾದ ದಿ ಕಾಶ್ಮೀರ ಫೈಲ್ಸ್ ಸಿನಿಮಾ ಕಡಿಮೆ ಅವಧಿಯಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿತು. ವಿವಾದ, ಬೈಕಾಟ್, ಬ್ಯಾನ್ ನಡುವೆಯೂ ಹಲವು ರಾಜ್ಯಗಳಲ್ಲಿ ಇದು ತುಂಬಿದ ಪ್ರದರ್ಶನ ಕಂಡಿತು. ಕೆಲ ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಮೊತ್ತ ನಿರ್ಮಾಪಕರಿಗೆ ಹರಿದು ಬಂದಿತ್ತು.

    ಈಗ ಹೊಸದಾಗಿ ತಯಾರಿಸಲು ಹೊರಟಿರುವ ಬಸ್ತರ್ ಸಿನಿಮಾ ಕೂಡ ಮತ್ತೊಂದು ಕಾರಳ ಮುಖವನ್ನು ಬಿಚ್ಚಿಡಲಿದೆ ಎಂದು ಹೇಳಲಾಗುತ್ತಿದೆ. ಸುಳ್ಳಿನ ಹಿಂದಿರುವ ಸತ್ಯವನ್ನು ಈ ಸಿನಿಮಾ ಮೂಲಕ ಹೇಳುವುದಾಗಿ ಪೋಸ್ಟರ್ ನಲ್ಲಿಯೇ ಚಿತ್ರತಂಡ ತಿಳಿಸಿದೆ. ಹಾಗಾಗಿ ಯಾವ ಕಥೆಯನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ‘ದಿ ಕೇರಳ ಸ್ಟೋರಿ’ ತಂಡಕ್ಕೆ ಆಘಾತ: ಆಸ್ಪತ್ರೆಗೆ ದಾಖಲಾದ ನಿರ್ದೇಶಕ, ನಟಿ

    ‘ದಿ ಕೇರಳ ಸ್ಟೋರಿ’ ತಂಡಕ್ಕೆ ಆಘಾತ: ಆಸ್ಪತ್ರೆಗೆ ದಾಖಲಾದ ನಿರ್ದೇಶಕ, ನಟಿ

    ಒಂದು ಕಡೆ ಯಶಸ್ಸಿನ ಮೆಟ್ಟಿಲು ಏರುತ್ತಲೇ ಸಾಗುತ್ತಿದೆ ದಿ ಕೇರಳ ಸ್ಟೋರಿ (The Kerala Story), ಮತ್ತೊಂದು ಕಡೆ ತಂಡಕ್ಕೆ ಆಘಾತವಾಗಿದೆ (Accident). ಚಿತ್ರದ ಸಕ್ಸಸ್ ಸಂಭ‍್ರಮದಲ್ಲಿ ಭಾಗಿಯಾಗಲು ಚಿತ್ರತಂಡ ಪ್ರಯಾಣ ಮಾಡುತ್ತಿದ್ದು, ಈ ಸಂದರ್ಭದಲ್ಲಿ ರಸ್ತೆ ಅಪಘಾತವಾಗಿ ನಿರ್ದೇಶಕ ಸುದೀಪ್ರೋ ಸೇನ್ (Sudeepro Sen) ಹಾಗೂ ನಾಯಕಿ ಅದಾ ಶರ್ಮಾ(Adah Sharma)  ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ (Hospital)ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

    ಮುಂಬೈನ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ನಿರ್ದೇಶಕ ಹಾಗೂ ನಟಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಅಂದುಕೊಂಡಂತೆ ಆಗಿದ್ದರೆ ನಿನ್ನೆ ಚಿತ್ರತಂಡವು ಮುಂಬೈನ ಕಾರ್ಯಕ್ರಮ ಮುಗಿಸಿ ತೆಲಂಗಾಣದ ಕರೀಂ ನಗರಕ್ಕೆ ತೆರಳಬೇಕಿತ್ತು. ತುರ್ತು ಆರೋಗ್ಯದ ಸಮಸ್ಯೆಯಿಂದ ಹೋಗಲು ಆಗುತ್ತಿಲ್ಲವೆಂದು ನಿರ್ದೇಶಕರು ತಿಳಿಸಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    ಅಪಘಾತವನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದ್ದು, ನಾನಾ ಗೊಂದಲಗಳನ್ನು ಮೂಡಿಸಿದೆ. ಇದೊಂದು ಪೂರ್ವ ನಿಯೋಜಿತ ಅಪಘಾತ ಎಂದು ಕೆಲವರು ಗಾಳಿ ಸುದ್ದಿ ಹಬ್ಬಿಸಲು ರೆಡಿಯಾಗಿದ್ದರು. ಆದರೆ, ಇದಕ್ಕೆ ಸ್ವತಃ ನಿರ್ದೇಶಕರೇ ಬ್ರೇಕ್ ನೀಡಿದ್ದಾರೆ. ಗಾಬರಿ ಪಡುವಂಥದ್ದು ಏನೂ ಆಗಿಲ್ಲ. ನಾವೆಲ್ಲರೂ ಚೆನ್ನಾಗಿದ್ದೇವೆ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ನಿರ್ದೇಶಕರು ಹೇಳಿದ ಮಾತಿಗೂ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗೂ ಹೊಂದಾಣಿಕೆ ಆಗದೇ ಇರುವ ಕಾರಣದಿಂದಾಗಿ ಇನ್ನೂ ಅಭಿಮಾನಿಗಳು ಆತಂಕದಲ್ಲೇ ಇದ್ದಾರೆ. ನಿಜವಾಗಿಯೂ ಅಪಘಾತವಾಗಿದೆಯಾ? ಅಥವಾ ತುರ್ತು ಆರೋಗ್ಯ ಸಮಸ್ಯೆ ಎಂದರೆ ಏನು? ಎನ್ನುವ ಕುರಿತು ನಿರ್ದೇಶಕರು ಸ್ಪಷ್ಟತೆ ನೀಡಬೇಕಿದೆ. ಈ ನಡುವೆ ಇಂದಿನಿಂದ ಮತ್ತೆ ಪ್ರಚಾರದಲ್ಲಿ ತೊಡಗುವುದಾಗಿಯೂ ಚಿತ್ರತಂಡ ಹೇಳಿಕೊಂಡಿದೆ. ಈ ಸುದ್ದಿಗೆ ಇವತ್ತು ಸ್ಪಷ್ಟತೆ ಸಿಗಬಹುದು.