Tag: Sudeep Birthday

  • ಸುದೀಪ್ ಹುಟ್ಟುಹಬ್ಬಕ್ಕೆ ಬಿಲ್ಲ ರಂಗ ಬಾಷಾ ಫಸ್ಟ್ ಲುಕ್ ಪೋಸ್ಟರ್

    ಸುದೀಪ್ ಹುಟ್ಟುಹಬ್ಬಕ್ಕೆ ಬಿಲ್ಲ ರಂಗ ಬಾಷಾ ಫಸ್ಟ್ ಲುಕ್ ಪೋಸ್ಟರ್

    ಕಿಚ್ಚ ಸುದೀಪ್ (Kichcha Sudeep) ಅವರಿಗೆ ಇಂದು (ಸೆ.2) 52ನೇ ಹುಟ್ಟುಹಬ್ಬದ ಸಂಭ್ರಮ. ಈ ದಿನ ಊರಿನಲ್ಲಿ ಇರದ ಕಾರಣ ಸುದೀಪ್ ರಾತ್ರಿಯೇ ಅಭಿಮಾನಿಗಳ ಸಮ್ಮುಖದಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ.

    ಹುಟ್ಟುಹಬ್ಬದ ಅಂಗವಾಗಿ ಮಾರ್ಕ್ ಸಿನಿಮಾ ಟೈಟಲ್ ಟೀಸರ್ ರಿಲೀಸ್ ಆಗಿದೆ. ಜೊತೆಗೆ ಕ್ರಿಸ್‌ಮಸ್ ಹಬ್ಬಕ್ಕೆ ಸಿನಿಮಾ ಥಿಯೇಟರ್‌ಗೆ ಬರೋದಾಗಿ ಅಭಿಮಾನಿಗಳಿಗೆ ಕಿಚ್ಚನಿಂದ ಗುಡ್‌ನ್ಯೂಸ್ ಸಿಕ್ಕಿದೆ. ಇದೀಗ ಬಿಲ್ಲ ರಂಗ ಬಾಷಾ ಸಿನಿಮಾದ ಬಿಗ್ ಅಪ್‌ಡೇಟ್‌ವೊಂದು ಸುದೀಪ್ ಭಕ್ತಗಣಕ್ಕೆ ಸಿಕ್ಕಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ – ಕಿಚ್ಚನ ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

     

    View this post on Instagram

     

    A post shared by Anup Bhandari (@anupsbhandari)

    ವಿಕ್ರಾಂತ್ ರೋಣ ಚಿತ್ರದ ಸಕ್ಸಸ್‌ನ ನಂತರ ಅನೂಪ್ ಭಂಡಾರಿ ಹಾಗೂ ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರುವ ಬಿಲ್ಲ ರಂಗ ಬಾಷಾ (Billa Ranga Baasha). ಈ ಸಿನಿಮಾದ ಖಡಕ್ ಪೋಸ್ಟರ್ ಬರ್ತ್ಡೇ ಸ್ಪೆಷಲ್ ರಿಲೀಸ್ ಮಾಡಿದೆ ಚಿತ್ರತಂಡ. ಕಿಚ್ಚನ ಬೆಂಕಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿರುವ ಬಿಲ್ಲ ರಂಗ ಬಾಷಾ ಹಾಗೂ ಮಾರ್ಕ್ ಚಿತ್ರದ ಚಿತ್ರೀಕರಣ ನಡೆಯುತ್ತಿವೆ.

    ತಮ್ಮ ಅಭಿಮಾನಿಗಳ ಆಸೆಯನ್ನ ನಿರಾಸೆ ಮಾಡದೇ ಸುದೀಪ್ ಅಭಿಮಾನಿಗಳೊಟ್ಟಿಗೆ ಬರ್ತ್ಡೇ ಅದ್ಧೂರಿಯಾಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳು ಖುಷಿಯಿಂದ ಕುಣಿದಾಡುವಂತಹ ಸರ್ಪ್ರೈಸ್‌ ಮೇಲೆ ಸರ್ಪ್ರೈಸ್ ಕೊಟ್ಟಿದ್ದಾರೆ. ಸದ್ಯ ಕಿಚ್ಚನ ಅಭಿಮಾನಗಳ ಚಿತ್ತ ಡಿಸೆಂಬರ್‌ನತ್ತ ನೆಟ್ಟಿದೆ. ಮಾರ್ಕ್ ಬೆಳ್ಳಿಪರದೆ ಮೇಲೆ ನೋಡಿ ಸಂಭ್ರಮಿಸೋಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಸುದೀಪ್ ಫ್ಯಾನ್ಸ್. ಇದನ್ನೂ ಓದಿ: 52ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ – ರಾತ್ರಿಯೇ ಕೇಕ್ ಕತ್ತರಿಸಿ ಫ್ಯಾನ್ಸ್ ಜೊತೆ ಸಂಭ್ರಮ…!

  • ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ – ಕಿಚ್ಚನ ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

    ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ – ಕಿಚ್ಚನ ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಕಿಚ್ಚ ಸುದೀಪ್‌ (Kichcha Sudeep) ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. `K47′ (ಕಿಚ್ಚ 47) ಹೆಸರಿನಲ್ಲಿ ಚಿತ್ರೀಕರಣವಾಗುತ್ತಿರುವ ಕಿಚ್ಚನ ಸಿನಿಮಾಕ್ಕೆ ಟೈಟಲ್‌ ಕೂಡ ಫಿಕ್ಸ್‌ ಆಗಿದೆ.

    ಯೆಸ್‌. ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರೋ ಸ್ಟಾರ್ ಸಿನಿಮಾಗಳಿಗೆ (Cinema) ಕಿಚ್ಚ ಸುದೀಪ್ ಠಕ್ಕರ್ ಕೊಡುತ್ತಾರೆ ಅಂತ ಹೇಳಲಾಗಿತ್ತು. ಅದೀಗ ನಿಜವಾಗಿದೆ. ಕಿಚ್ಚ ಸುದೀಪ್ ಈ ವರ್ಷ ತಾವು ಅಂದುಕೊಂಡಂತೆ ಒಂದು ಸಿನಿಮಾವನ್ನ ತಮ್ಮ ಅಭಿಮಾನಿಗಳಿಗೆ ದರ್ಶನ ಮಾಡಿಸಲು ಶಪಥ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 25ರಂದು ತೆರೆಕಂಡ ಮ್ಯಾಕ್ಸ್ ಸಿನಿಮಾ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದನ್ನೂ ಓದಿ: `ತಿಪ್ಪರ್‌ಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡʼ – ದರ್ಶನ್‌ಗೆ ಸುದೀಪ್‌ ಹೀಗಂದಿದ್ಯಾಕೆ?

    ಹೀಗಾಗಿ ಈ ವರ್ಷವೂ ಡಿಸೆಂಬರ್‌ಗೆ ಸುದೀಪ್‌ ಅವರ ಹೊಸ ಚಿತ್ರ ತೆರೆಗೆ ಬರಲಿದ್ದು, ʻಮಾರ್ಕ್‌ʼ (MARK) ಅಂತ ಹೆಸರಿಡಲಾಗಿದೆ. ಮ್ಯಾಕ್ಸ್‌ ಚಿತ್ರತಂಡದ ಜೊತೆಗಿನ 2ನೇ ಸಿನಿಮಾ ಇದಾಗಿದ್ದು, ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿಬರಲಿದೆ. ಹೊಸ ಚಿತ್ರದ ಟೈಟಲ್‌ ಟೀಸರ್‌ ಕೂಡ ರಿಲೀಸ್‌ ಆಗಿದ್ದು, ಖದರ್‌ ಲುಕ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇದನ್ನೂ ಓದಿ: ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    52ನೇ ವಸಂತಕ್ಕೆ ಕಾಲಿಡುತ್ತಿರುವ ಕಿಚ್ಚ
    ಕಿಚ್ಚ ಸುದೀಪ್ ನಾಳೆ 52ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಮಾಧ್ಯಮದ ಜೊತೆ ಸುದ್ದಿಗೋಷ್ಠಿ ನಡೆಸಿರುವ ಸುದೀಪ್ ಒಂದಷ್ಟು ಪ್ರಸ್ತುತ ವಿಚಾರಗಳ ಕುರಿತು ಮಾತನಾಡಿದ್ರು. ರಾಜಕೀಯಕ್ಕೆ ಬರೋದ್ರ ಕುರಿತು, ದರ್ಶನ್ ಹಾಗೂ ತಮ್ಮ ನಡುವಿನ ಸ್ನೇಹ ಮತ್ತೆ ಬೆಸೆಯುತ್ತಾ ಅನ್ನುವ ಪ್ರಶ್ನೆಗಳಿಗೆಲ್ಲ ಮಾರ್ಮಿಕವಾಗಿ ಕಿಚ್ಚ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಸಾಧು ಕೋಕಿಲ ಕಿತಾಪತಿ – ಕಿಚ್ಚ ಸುದೀಪ್‌

    K47 Kiccha Sudeep

    ಕಿಚ್ಚ ಸುದೀಪ್ ಓಪನ್ ಹಾರ್ಟ್
    ಪ್ರತಿ ಹುಟ್ಟುಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಸಿಗುವ ವಾಡಿಕೆ ಇಟ್ಕೊಂಡಿದ್ದಾರೆ ಕಿಚ್ಚ. ಜಾಸ್ತಿ ಜನ ಸೇರೋದ್ರಿಂದ ಮನೆಯ ಮುಂದಿನ ದಾರಿ ಚಿಕ್ಕದಾಗಿರೋದ್ರಿಂದ ಮನೆಯ ಬದಲು ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿಲಿಂಕ್ಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳನ್ನ ಭೇಟಿಯಾಗುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಒಂದಿನ ಮುಂಚಿತವಾಗೇ ಸಿಗುತ್ತಿದ್ದಾರೆ ಸುದೀಪ್. ಅದಕ್ಕೂ ಮುನ್ನವೇ ಮಾಧ್ಯಮಗೋಷ್ಠಿ ಕರೆದು ಒಂದಷ್ಟು ವಿಷಯಗಳನ್ನ ಸುದೀಪ್ ಹಂಚಿಕೊಂಡ್ರು.

    ಕಿಚ್ಚ ಸುದೀಪ್ ಅಭಿನಯದ ಕೆ47 ಚಿತ್ರ ಇದೇ ಡಿಸೆಂಬರ್ 25ಕ್ಕೆ ತೆರೆಕಾಣುತ್ತಿದೆ. ಇದೇ ತಿಂಗಳು ದರ್ಶನ್ ಅಭಿನಯಿಸಿರುವ ಡೆವಿಲ್ ಸಿನಿಮಾ ಕೂಡ ರಿಲೀಸ್ ಘೊಷಣೆಯಾಗಿದ್ದು ಕ್ಲ್ಯಾಶ್‌ ಆಗುತ್ತಾ ಎಂಬ ಪ್ರಶ್ನೆಗೆ ಸುದೀಪ್ ನೇರವಾಗೇ ಉತ್ತರಿಸಿದ್ದಾರೆ. ಡೆವಿಲ್ ಚಿತ್ರಕ್ಕೆ ಒಳ್ಳೆಯದಾಗ್ಲಿ. ಕ್ಲ್ಯಾಶ್‌ ಏನೂ ಇಲ್ಲ. ಅವರ ಪಾಡಿಗೆ ಅವರು ಬರ್ತಾರೆ ನಾವು ನಮ್ಮ ಪಾಡಿಗೆ ಬರ್ತೀವಿ ಎಂದಿದ್ದಾರೆ. ಜೊತೆಗೆ ಸದ್ಯದ ದರ್ಶನ್ ಸ್ಥಿತಿ ಬಗ್ಗೆ ಬೇಸರ ಇದೆ. ಆದರೆ ಕಾನೂನಿನಡಿ ಇರೋದ್ರಿಂದ ನಾನು ಮಾತನಾಡಿದ್ರೆ ತಪ್ಪಾಗುತ್ತೆ. ಅವರನ್ನ ಇಷ್ಟ ಪಡುವ ಅಭಿಮಾನಿ ಬಳಗದ ನಂಬಿಕೆಗೂ ಬೇಸರ ಮಾಡಿದಂತಾಗುತ್ತೆ ಅಂದಿದ್ದಾರೆ ಸುದೀಪ್‌.

  • ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    – ಸೂರ್ಯ – ಚಂದ್ರ ಅದರ ಜಾಗದಲ್ಲಿ ಎರಡು ಚೆನ್ನಾಗಿರುತ್ತೆ ಎಂದ ಸುದೀಪ್‌

    ನಾವೇನು ಚಿಕ್ಕವರಲ್ಲ, ನಾವು ದೂರಾಗಿದ್ದು ಯಾಕೆ ಅನ್ನೋದು ನಮಗೆ ಗೊತ್ತಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ನಟ ದರ್ಶನ್ (Actor Darshan) ಬಗ್ಗೆ ಹೇಳಿದರು.

    ಸೆ.2ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಟ ದರ್ಶನ್ ಹಾಗೂ ತಮ್ಮ ಸ್ನೇಹದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರ ಸಿನಿಮಾಗೆ ಒಳ್ಳೇದಾಗಲಿ. ಅವರಿಗೆ ಅವರದ್ದೇ ಆದ ನೋವು ಇರುತ್ತೆ. ಅದರ ಹಿಂದೆ ಅವರ ಅಭಿಮಾನಿಗಳು ಇರುತ್ತಾರೆ. ಅಭಿಮಾನಿಗಳಿಗೂ ಒಂದು ನಂಬಿಕೆ ಇರುತ್ತದೆ. ನಾವು ಮಾತಾಡೋದು ತಪ್ಪಾಗುತ್ತೆ. ಸರ್ಕಾರ, ಕಾನೂನು ಅಂತ ಬಂದಾಗ ಅವರೇನು ಮಾಡಬೇಕು ಅದನ್ನ ಮಾಡ್ತಾ ಇರ್ತಾರೆ. ಅದಕ್ಕೂ ನಾವು ಅಡ್ಡ ಬರಬಾರದು. ಯಾರೂ ಕೈಕಟ್ಕೊಂಡು ಸುಮ್ಮನೇ ಕುಳಿತಿರಲ್ಲ. ಆದರೆ ಕೆಲವೊಂದಕ್ಕೆ ನಾನು ತಲೆಹಾಕೋಕೆ ಹೋಗಲ್ಲ. ಯಾಕಂದ್ರೆ ನಂಗೆ ವೈಯಕ್ತಿಕವಾಗಿ ಇಂಟ್ರೆಸ್ಟ್ ಇಲ್ಲ. ಮಾತಾಡಿದ್ರೆ ಅದು ಎಲ್ಲವನ್ನೂ ಹಾಳಮಾಡುತ್ತೆ. ಜೊತೆಗೆ ಅದು ಕೆಲವೊಮ್ಮೆ ಅಂತರ ಸೃಷ್ಟಿ ಮಾಡುತ್ತೆ ಎಂದು ಹೇಳಿದರು.ಇದನ್ನೂ ಓದಿ: ಪರಮ ಸುಂದರಿಯಾದ ರಮ್ಯಾ!

    ಇನ್ನೂ ನಾವಿಬ್ಬರು ಯಾಕೆ ಮಾತಾಡಲ್ಲ ಅಂದ್ರೆ ಅದಕ್ಕೆ ಕೆಲವು ಕಾರಣಗಳಿವೆ. ಯಾರೂ ಆ ಕಾರಣಗಳ ಬಗ್ಗೆ ಕೇಳಲ್ಲ. ಆದ್ರೆ ನಮಗೆ ಗೊತ್ತಿರುತ್ತೆ. ಇನ್ನೂ ಯಾರದ್ದೋ ಮಾತು ಕೇಳಿಕೊಂಡು ಹೀಗೆ ಮಾಡುವಷ್ಟು ನಾವು ಚಿಕ್ಕವರಲ್ಲ, ನಮಗೆ ಕೆಲವು ವಿಷಯಗಳು ಅರ್ಥ ಆಗುತ್ತವೆ. ನಾವ್ಯಾಕೆ ಹೀಗೀದಿವಿ ಅಂತ ನಮ್ಮ ಸತ್ಯ ನಮಗೆ ಗೊತ್ತಿರುತ್ತೆ. ಸೂರ್ಯ ಹಾಗೂ ಚಂದ್ರ ಅದರ ಜಾಗದಲ್ಲಿ ಎರಡು ಚೆನ್ನಾಗಿರುತ್ತೆ ಎಂದರು.

    ಕಿಚ್ಚ ಸುದೀಪ್ ಸೋಮವಾರ (ಸೆ.1) ರಾತ್ರಿ 9 ರಿಂದ 12 ಗಂಟೆವರೆಗೆ ಅಭಿಮಾನಿಗಳ ಜೊತೆ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಸಿನಿಮಾ ರೈಟರ್ ಎಸ್.ಎಸ್ ಡೇವಿಡ್ ನಿಧನ

  • ರಾತ್ರಿನೇ ಸಿಗೋಣವಾ ಎಂದ ಕಿಚ್ಚ; ಅಭಿಮಾನಿಗಳಿಗೆ ಸುದೀಪ್‌ ಪತ್ರ

    ರಾತ್ರಿನೇ ಸಿಗೋಣವಾ ಎಂದ ಕಿಚ್ಚ; ಅಭಿಮಾನಿಗಳಿಗೆ ಸುದೀಪ್‌ ಪತ್ರ

    ಕಿಚ್ಚ ಸುದೀಪ್ ಹುಟ್ಟುಹಬ್ಬವೆಂದ್ರೆ ಅವರ ಅಭಿಮಾನಿಗಳು ವಾರದ ಮುಂಚೆಯೇ ವಿಧ ವಿಧವಾಗಿ ಪ್ಲ್ಯಾನ್‌ ಮಾಡಿಕೊಂಡಿರ್ತಾರೆ. ಈ ಸಲವೂ ಅವರ ಫ್ಯಾನ್ಸ್‌ ಹುಟ್ಟುಹಬ್ಬಕ್ಕಾಗಿ ಕಾದು ಕುಳಿತಿದ್ದರು. ಈ ವೇಳೆ ನಟ ಸುದೀಪ್ ಅವರ ಅಭಿಮಾನಿಗಳಿಗೆ ಪತ್ರದ ಮೂಲಕ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಿದ್ದಾರೆ. ಜೊತೆಗೆ ಮನವಿಯನ್ನೂ ಮಾಡಿಕೊಂಡಿದ್ದಾರೆ.

    ಸೆಪ್ಟಂಬರ್ 2 ಕಿಚ್ಚ ಸುದೀಪ್ ಹುಟ್ಟುಹಬ್ಬ, ಈ ವರ್ಷ 52ನೇ ವಸಂತಕ್ಕೆ ಕಾಲಿಡಲಿದ್ದಾರೆ ಕಿಚ್ಚ ಸುದೀಪ್. ತಮ್ಮ ಹುಟ್ಟುಹಬ್ಬದ ಆಚರಣೆಗಾಗಿ ಕಾಯುವ ಅಭಿಮಾನಿಗಳಿಗೆ ನಿರಾಸೆ ಮಾಡಲಾರೆ. ಆದ್ರೆ ಸೆಪ್ಟಂಬರ್‌ 2ಕ್ಕೆ ಅಲ್ಲ, ಬದಲಾಗಿ ಒಂದರ ರಾತ್ರಿಯೇ ಸಿಗೋಣವಾ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಜೊತೆಗೆ ಸೆ.2ರಂದು ಮನೆಯಲ್ಲಿ ಇರೊಲ್ಲ ಹಾಗಾಗಿ ಮನೆ ಬಳಿ ಬಂದು ಯಾರೂ ಕಾಯುವುದು, ಗಲಾಟೆ ಮಾಡೋದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳಾಪುರಂ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಗೌತಮಿ ನಾಯಕಿ

    “ಸೆಪ್ಟಂಬರ್ 1ರ ರಾತ್ರಿ 12 ಗಂಟೆಗೆ ಗಡಿಯಾರದ ಶಬ್ದದ ಜೊತೆ ನಿಮ್ಮ ಶುಭಾಶಯಗಳೇ ನನ್ನ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟಂಬರ್ 1ರ ರಾತ್ರಿ ನಾವೆಲ್ಲ ಒಂದು ಕಡೆ ಸೇರೋಣ. ಜಾಗ ಎಲ್ಲಿ, ಹೇಗೆ..? ಅನ್ನೋದನ್ನ ತಿಳಿಸುತ್ತೇನೆ. ಆದರೆ ಮಾರನೇ ದಿನ ಅಂದರೆ ಸೆಪ್ಟಂಬರ್ 2ರಂದು ನಾನು ಊರಿನಲ್ಲಿ ಇರುವುದಿಲ್ಲ. ಯಾರೂ ದಯವಿಟ್ಟು ಮನೆ ಹತ್ತಿರ ಬಂದು ಕಾಯುವುದು ಬೇಡ. ನಾನಿರುವುದಿಲ್ಲ ಎಂದು ಹೇಳಿದಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸ್ಸಿಗೆ ನೋವಾಗುತ್ತೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ, ನೀವು ನನ್ನನ್ನ ಅರ್ಥಮಾಡಿಕೊಳ್ಳುವಿರೆಂದು. ಅದು ಬಿಟ್ಟರೆ ಯಥಾಪ್ರಕಾರ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ, ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ. ಎಂದು ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ ನಟ ಕಿಚ್ಚ ಸುದೀಪ್. ಇದನ್ನೂ ಓದಿ: ಮದರಾಸಿ ಟ್ರೈಲರ್‌ ರಿಲೀಸ್ – ಮಾಸ್ ಲುಕ್‌ನಲ್ಲಿ ಶಿವಕಾರ್ತಿಕೇಯನ್