Tag: Sudarshan

  • ಮೂಗು ಚುಚ್ಚಿಸಿಕೊಂಡ ಪತ್ನಿ ಸಂಗೀತಾ ಲುಕ್‌ಗೆ ‘ಭಾಗ್ಯಲಕ್ಷ್ಮಿ’ ನಟ ಏನಂದ್ರು ಗೊತ್ತಾ?

    ಮೂಗು ಚುಚ್ಚಿಸಿಕೊಂಡ ಪತ್ನಿ ಸಂಗೀತಾ ಲುಕ್‌ಗೆ ‘ಭಾಗ್ಯಲಕ್ಷ್ಮಿ’ ನಟ ಏನಂದ್ರು ಗೊತ್ತಾ?

    ಸ್ಯಾಂಡಲ್‌ವುಡ್ (Sandalwood) ನಟಿ ಸಂಗೀತಾ ಭಟ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಎರಡನೇ ಸಲ (Eradane Sala Actress) ನಾಯಕಿ ಸಂಗೀತಾ ಈಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪತ್ನಿಯ ಹೊಸ ಲುಕ್ ನಟ ಸುದರ್ಶನ್ ಅಲಿಯಾಸ್ ತಾಂಡವ್ ಸೂರ್ಯವಂಶಿ ಏನಂದ್ರು ಗೊತ್ತಾ.?

    ಚಂದ್ರಚಕೋರಿ, ಭಾಗ್ಯವಂತರು, ಚಂದ್ರಮುಖಿ ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ನಟಿಸಿರುವ ಪ್ರತಿಭಾನ್ವಿತ ನಟಿ ಸಂಗೀತಾ ಭಟ್ ತಮಿಳಿನ ಸಿನಿಮಾವೊಂದರ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ರು. ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ಎರಡನೇ ಸಲ, ದಯವಿಟ್ಟು ಗಮನಿಸಿ, ಸೇರಿದಂತೆ ಹಲವು ಚಿತ್ರಗಳಲ್ಲಿ ಸಂಗೀತಾ ಲೀಡ್ ನಾಯಕಿಯಾಗಿ ನಟಿಸಿದ್ದಾರೆ. ಅದರಲ್ಲೂ ಡಾಲಿಗೆ ನಾಯಕಿಯಾದ ಎರಡನೇ ಸಲ ಚಿತ್ರದಲ್ಲಿನ ಸಂಗೀತಾ ನಟನೆ ಎಲ್ಲರ ಗಮನ ಸೆಳೆದಿತ್ತು. ಇದನ್ನೂ ಓದಿ:ಚಿಟ್ಟೆಯಂತೆ ಮಿಂಚಿದ ಸಂತೂರ್‌ ಮಮ್ಮಿ ಪ್ರಣಿತಾ ಸುಭಾಷ್

    ಸುದರ್ಶನ್ ಜೊತೆ ಸಂಗೀತಾ ಭಟ್ (Sangeetha Bhat) ಮದುವೆಯ (Wedding) ಬಳಿಕ ನಟನೆಯಿಂದ ದೂರ ಸರಿದರು. ಈಗ ಮತ್ತೆ ‘ಕ್ಲಾಂತ’ (Klaantha) ಸಿನಿಮಾದ ಮೂಲಕ ನಟಿ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ಸಂಗೀತಾ ಭಟ್ ನಾಯಕಿಯಾಗಿ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರಕ್ಕೆ ನಟಿ ಜೀವತುಂಬಿದ್ದಾರೆ.

    ಪತಿ ಸುದರ್ಶನ್ ಅವರು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಗುರುತಿಸಿಕೊಂಡಿದ್ದರು. ಈಗ ಭಾಗ್ಯಲಕ್ಷ್ಮಿ (Bhagyalakshmi) ಸೀರಿಯಲ್ ಮೂಲಕ ಸುದರ್ಶನ್ ನಾಯಕನಾಗಿ ಶೈನ್ ಆಗ್ತಿದ್ದಾರೆ. ಭಾಗ್ಯಗೆ ಕಾಟ ಕೊಡುವ ಪತಿಯಾಗಿ ತಾಂಡವ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇಬ್ಬರು ಚಿತ್ರರಂಗದಲ್ಲಿ ಇರುವ ಕಾರಣ ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಾಥ್ ನೀಡ್ತಿದ್ದಾರೆ.

    ಸದ್ಯ ನಟಿ ಸಂಗೀತಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ. ಕೊನೆಗೂ ಮೂಗು ಚುಚ್ಚಿಸಿಕೊಂಡೇ ಅಂತಾ ಪೋಸ್ಟ್ ಮಾಡಿದ್ದಾರೆ. ಮೂಗು ಚುಚ್ಚಿಸಿದ ಬಳಿಕ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ನಯಾ ಲುಕ್ ನೋಡಿ ಪತಿ ಸುದರ್ಶನ್ ಕೂಡ ಖುಷಿಪಟ್ಟಿದ್ದಾರೆ. ನನ್ನ ಹೆಂಡ್ತಿ ಮುದ್ದಾಗಿ ಕಾಣಿಸುತ್ತಿದ್ದಾಳೆ ಅಂತಾ ನಟ ಸುದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.

  • ಸಂಗೀತಾ ಭಟ್ ಬಿಕಿನಿ ಫೋಟೋ ಕ್ಲಿಕ್ಕಿಸಿದ್ದು ಪತಿ ಸುದರ್ಶನ್

    ಸಂಗೀತಾ ಭಟ್ ಬಿಕಿನಿ ಫೋಟೋ ಕ್ಲಿಕ್ಕಿಸಿದ್ದು ಪತಿ ಸುದರ್ಶನ್

    ಸ್ಯಾಂಡಲ್ ವುಡ್ ನಟಿ ಸಂಗೀತಾ ಭಟ್ ಪತಿಯೊಂದಿಗೆ ಬಾಲಿಗೆ ತೆರಳಿದ್ದಾರೆ. ವಿವಾಹ ವಾರ್ಷಿಕೋತ್ಸವದ ನಿಮಿತ್ತ ಅವರು ಪ್ರವಾಸ ಕೈಗೊಂಡಿದ್ದು, ಅಲ್ಲಿ ಬಿಕಿನಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋವನ್ನು ಸೆರೆ ಹಿಡಿದದ್ದು ಬೇರೆ ಯಾರೂ ಅಲ್ಲ, ಪತಿ ಸುದರ್ಶನ್ (Sudarshan) ಎನ್ನುವುದು ಬಹಿರಂಗವಾಗಿದೆ. ಸುದರ್ಶನ್ ಕೂಡ ನಟರಾಗಿದ್ದು, ಧಾರಾವಾಹಿಯೊಂದರಲ್ಲಿ ಸದ್ಯ ನಟಿಸುತ್ತಿದ್ದಾರೆ.

    ಕನ್ನಡದ ಹಲವಾರು ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟಿ ಸಂಗೀತಾ ಭಟ್ (Sangeeta Bhatt) ಇಂಡೋನೇಷ್ಯಾದ (Indonesia) ಬಾಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಾಲಿಯಲ್ಲಿ (Bali) ಅವರು ಬೇಸಿಗೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿ ಎನ್ನುವಂತೆ ಸಂಗೀತಾ ಬಿಕಿನಿಯಲ್ಲಿ (Bikini) ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಪಾತ್ರಕ್ಕಾಗಿ ಅವನು ಸಹಕರಿಸು ಅಂದ: ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ

    ಬಿಕಿನಿಯಲ್ಲಿ ಈಜುಕೊಳಕ್ಕೆ ಇಳಿದಿರುವ ಕೆಲ ಫೋಟೋಗಳನ್ನು ಮತ್ತು ವಿಡಿಯೋವನ್ನು ಸಂಗೀತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ರೀತಿಯ ಹೊಸ ಅನುಭವ ಮತ್ತು ಹುಚ್ಚತನದ ಆನಂದ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಕೂಡ ಮಾಡಿದ್ದಾರೆ.

    ವೈಯಕ್ತಿಕ ಕಾರಣದಿಂದಾಗಿ ಸಂಗೀತಾ ಹಲವು ವರ್ಷಗಳ ಕಾಲ ಚಿತ್ರೋದ್ಯಮದಿಂದ ದೂರ ಉಳಿದಿದ್ದರು. ಮೀಟೂ ನಂತರ ಅವರು ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರಿಸಲಿಲ್ಲ. ಈಗ ಮತ್ತೆ ಬಣ್ಣ ಲೋಕಕ್ಕೆ ಕಂಬ್ಯಾಕ್ ಆಗಿದ್ದಾರೆ.

    `ಎರಡನೇ ಸಲ’, `ಅನುಕ್ತ’ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಸಂಗೀತಾ ಭಟ್ ಈಗ ಪವರ್‌ಫುಲ್ ಪಾತ್ರದ ಮೂಲಕ ಮಿಂಚಲು ರೆಡಿಯಾಗಿದ್ದಾರೆ. ರೂಪಾಂತರ ಚಿತ್ರದಲ್ಲಿ ನಟ ಕಿಶೋರ್ ಜತೆ ಪ್ರಮುಖ ಪಾತ್ರದಲ್ಲಿ ಸಂಗೀತಾ ನಟಿಸಿದ್ದಾರೆ. ಈ ಕುರಿತು ಅಧಿಕೃತವಾಗಿ ಸಂಗೀತಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ರೂಪಾಂತರ ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಸಸ್ಪೆನ್ಸ್ ಕಥೆಯಾಗಿದ್ದು, ಪವರ್‌ಫುಲ್ ಪಾತ್ರದ ಮೂಲಕ ಸಂಚಲನ ಮೂಡಿಸಿದ್ದಾರೆ. ಭಿನ್ನ ಕಥೆಯ ಮೂಲಕ ಮತ್ತೆ ಸಂಗೀತಾ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಲಿದ್ದಾರೆ.

  • ಸ್ಯಾಂಡಲ್‍ವುಡ್ ಹಿರಿಯ ನಟ ಸುದರ್ಶನ್ ಇನ್ನಿಲ್ಲ

    ಸ್ಯಾಂಡಲ್‍ವುಡ್ ಹಿರಿಯ ನಟ ಸುದರ್ಶನ್ ಇನ್ನಿಲ್ಲ

    ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಆರ್ ಎನ್ ಸುದರ್ಶನ್(78) ನಿಧನರಾಗಿದ್ದಾರೆ.

    ಸಪ್ಟೆಂಬರ್ 5ರ ನಸುಕಿನ ಜಾವ ಮನೆಯ ಸ್ನಾನಗೃಹದಲ್ಲಿ ಜಾರಿ ಬಿದ್ದಿದ್ದ ಸುದರ್ಶನ್ ಅವರನ್ನು ಬನ್ನೇರುಘಟ್ಟದ್ದಲ್ಲಿರುವ ಸಾಗರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

    ವಯೋಸಹಜ ಖಾಯಿಲೆಯಿಂದಲೂ ಬಳಲುತ್ತಿದ್ದ ಸುದರ್ಶನ್‍ರವರಿಗೆ ಚಿಕಿತ್ಸೆ ಫಲಿಸದೇ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

    ‘ನಗುವ ಹೂವು’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಸುದರ್ಶನ್ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ‘ವಿಜಯನಗರದ ವೀರ ಪುತ್ರ’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು.

     ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಲನಚಿತ್ರ ಖಳನಟ, ಕನ್ನಡ ಚಿತ್ರರಂಗದಲ್ಲಿ ಲಂಬು ನಾಗೇಶ್ ಎಂದೇ ಹೆಸರುವಾಸಿಯಾಗಿದ್ದ ಪೋಷಕ ನಟ ನಾಗೇಶ್ ಅವರು ಸೆಪ್ಟೆಂಬರ್ 1ರಂದು  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು.