Tag: SUCI candidate

  • ವೋಟು, ನೋಟು ಎರಡು ನೀವೇ ಕೊಡಿ- ಎಸ್‍ಯುಸಿಐ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ

    ವೋಟು, ನೋಟು ಎರಡು ನೀವೇ ಕೊಡಿ- ಎಸ್‍ಯುಸಿಐ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ

    ಧಾರವಾಡ: ಚುನಾವಣೆ ಅಂದ್ರೆ ಎಲ್ಲ ಕಡೆ ಹಣ, ಮದ್ಯ ಹಂಚೋದು ನೋಡಿರುತ್ತೀರಾ. ಆದ್ರೆ ಧಾರವಾಡದಲ್ಲಿ ಎಸ್‍ಯುಸಿಐ ಕಮ್ಯೂನಿಸ್ಟ [ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆ ಇಂಡಿಯಾ (ಕಮ್ಯುನಿಸ್ಟ್)] ಪಕ್ಷದ ಅಭ್ಯರ್ಥಿಯೊಬ್ಬರು ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿ ಜನರ ಗಮನ ಸೆಳೆದಿದ್ದಾರೆ.

    ಧಾರವಾಡ ಕ್ಷೇತ್ರದ ಎಸ್‍ಯುಸಿಐ ಅಭ್ಯರ್ಥಿಯಾದ ಗಂಗಾಧರ್ ಬಡಿಗೇರ ಅವರು ಜನರಿಂದಲೇ ಹಣ ಸಂಗ್ರಹಿಸುವ ಮೂಲಕ ಚುನಾವಣಾ ಪ್ರಚಾರ ಮಾಡಿದ್ದಾರೆ. 25 ವರ್ಷಗಳಿಂದ ಜನರು ನಮಗೆ ಬೆಂಬಲ ನೀಡಿದ್ದು, ಚುಣಾವಣೆಗೆ ಜನರೇ ವೋಟು ಹಾಗೂ ನೋಟು ಕೊಡಬೇಕು ಎಂದು ಮನವಿ ಮಾಡಿದರು.

    ಎಲ್ಲಾ ಪಕ್ಷಗಳು ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸಿವೆ. ಆದರೆ ನಮ್ಮ ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡಲಿದೆ ಎಂದ ಅಭ್ಯರ್ಥಿ ಲೋಕಸಭೆಯಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಪ್ರಚಾರ ಮಾಡಿದರು.

    ಹಾಗೆಯೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‍ನಂಥ ಪಕ್ಷಗಳಿಗೆ ಅದಾನಿ ಅಂಬಾನಿಯಂತಹ ಜನರು ಚುನಾವಣಾ ಖರ್ಚಿಗೆ ಹಣ ಕೊಡುತ್ತಾರೆ. ಬಳಿಕ ಅದೇ ಹಣ ಅವರು ವಸೂಲಿ ಮಾಡುತ್ತಾರೆ ಎಂದು ಎಸ್‍ಯುಸಿಐ ಅಭ್ಯರ್ಥಿ ಕಿಡಿಕಾರಿದರು.