Tag: Suchitra

  • ಖ್ಯಾತ ನಟರ ಅಶ್ಲೀಲ ವಿಡಿಯೋ  ಮೂಲಕ ಸದ್ದು ಮಾಡಿದ್ದ ಗಾಯಕಿ ಸುಚಿತ್ರಾ, ಇದೀಗ ಮತ್ತೊಮ್ಮೆ ರಾಂಗ್ ಆಗಿದ್ದಾರೆ

    ಖ್ಯಾತ ನಟರ ಅಶ್ಲೀಲ ವಿಡಿಯೋ ಮೂಲಕ ಸದ್ದು ಮಾಡಿದ್ದ ಗಾಯಕಿ ಸುಚಿತ್ರಾ, ಇದೀಗ ಮತ್ತೊಮ್ಮೆ ರಾಂಗ್ ಆಗಿದ್ದಾರೆ

    ಮಿಳು ಸಿನಿಮಾ ರಂಗದ ಅನೇಕ ಹೆಸರಾಂತ ನಟ ನಟಿಯರ ನಿದ್ದೆಗೆಡಿಸಿದ್ದ ಗಾಯಕಿ ಸುಚಿತ್ರಾ ಇದೀಗ ಮತ್ತೆ ಗರಂ ಆಗಿದ್ದಾರೆ. ಖ್ಯಾತ ನಟ ಧನುಷ್ ಸೇರಿದಂತೆ ಹಲವರ ವಿರುದ್ಧ ಚೆನ್ನೈನ ಪೊಲೀಸ್ ಆಯುಕ್ತರಿಗೆ ಅವರು ದೂರು ಸಲ್ಲಿಸಿದ್ದಾರೆ. ತನ್ನನ್ನು ಅವಹೇಳನಕಾರಿ ರೀತಿಯಲ್ಲಿ ರಂಗನಾಥನ್ ಎನ್ನುವ ನಟ ಮತ್ತು ಪತ್ರಕರ್ತ ತೋರಿಸುತ್ತಿದ್ದು, ಈ ನಟನ ಹಿಂದೆ ಧನುಷ್ ಮತ್ತು ಇತರ ಕಲಾವಿದರು ಇದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    2017ರಲ್ಲಿ ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಪೇಜಿನಲ್ಲಿ ಕಾಲಿವುಡ್ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋಗಳನ್ನು ಅವರು ಪೋಸ್ಟ್ ಮಾಡಿದ್ದರು. ಹೆಸರಾಂತ ನಟರು ಮಾತ್ರವಲ್ಲ, ನಟಿಯರ ಅಶ್ಲೀಲ ವಿಡಿಯೋಗಳನ್ನು ಅವರು ಪೋಸ್ಟ್ ಮಾಡುತ್ತಿದ್ದರು. ಇದಕ್ಕೆ ಸುಚಿ ಲೀಕ್ಸ್ ಎಂದು ಹೆಸರಿಟ್ಟಿದ್ದರು. ಆ ವೇಳೆಯಲ್ಲಿ ಕಾಲಿವುಡ್ ನಲ್ಲಿ ಅದು ಸಂಚಲನವನ್ನೇ ಮೂಡಿಸಿತ್ತು. ಅನೇಕ ನಟ ನಟಿಯರು ತಲೆತಗ್ಗಿಸುವಂತೆ ಮಾಡಿತ್ತು. ತಮ್ಮ ಖಾತೆಗಳನ್ನು ಹ್ಯಾಕ್ ಮಾಡಿ, ಯಾರೋ ಈ ವಿಡಿಯೋಗಳನ್ನು ಹಂಚುತ್ತಿದ್ದಾರೆ ಎಂದು ಸುಚಿತ್ರಾ ಹೇಳಿದ್ದರು. ಅಲ್ಲಿಂದ ಸುಚಿತ್ರಾ ಅವರ ಮೇಲೆ ನಿರಂತರ ಕಿರುಕುಳ ನೀಡಲಾಗುತ್ತಿದೆಯಂತೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ತಾನು ಮಾಡದೇ ಇರುವ ತಪ್ಪಿಗೆ 2017ರಿಂದ ಕಿರುಕುಳವನ್ನು ಅನುಭವಿಸುತ್ತಾ ಬಂದಿದ್ದೇನೆ. ಯೂಟ್ಯೂನಲ್ಲಿ ಪತ್ರಕರ್ತ ಮತ್ತು ನಟನಾಗಿರುವ ಬೈಲ್ವಾನ್ ರಂಗನಾಥ್ ಅನ್ನುವವರು ನಾನು ಲೈಂಗಿಕ ವ್ಯಸನಿ, ಮದ್ಯ ವ್ಯಸನಿ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಅನೇಕ ವಿಡಿಯೋಗಳನ್ನು ನನ್ನ ವಿರುದ್ಧ ಮಾಡಿದ್ದಾರೆ. ಇವರ ಹಿಂದೆ ನಟ ಧನುಷ್, ನಿರ್ದೇಶಕ ವೆಂಕಟ್ ಪ್ರಭು ಮತ್ತು ಕಾರ್ತಿಕ್ ಕುಮಾರ್ ಎನ್ನುವವರು ಇದ್ದಾರೆ. ಇದರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಸುಚಿತ್ರಾ ದೂರು ನೀಡಿದ್ದಾರೆ.

  • ತಮಿಳು ಗಾಯಕಿಯಿಂದ ಧನುಷ್, ಹನ್ಸಿಕಾ, ರಾಣಾ, ತ್ರಿಶಾ ಖಾಸಗಿ ಫೋಟೋ ಲೀಕ್

    ತಮಿಳು ಗಾಯಕಿಯಿಂದ ಧನುಷ್, ಹನ್ಸಿಕಾ, ರಾಣಾ, ತ್ರಿಶಾ ಖಾಸಗಿ ಫೋಟೋ ಲೀಕ್

    ಚೆನ್ನೈ: ತಮಿಳು ನಟಿ ಕಮ್ ಗಾಯಕಿ ಸುಚಿತ್ರಾ ಕಾರ್ತಿಕ್ ಖಾತೆಯಿಂದ ಸಂಚಿತಾ ಶೆಟ್ಟಿ ವಿಡಿಯೋ ಮಾತ್ರವಲ್ಲ, ಕಾಲಿವುಡ್ ನಟರಾದ ಧನುಷ್, ಹನ್ಸಿಕಾ, ಆಂಡ್ರಿಯಾ ಜರ್ಮಿಯಾ, ದಗ್ಗುಬಾಟಿ ರಾಣಾ, ತ್ರಿಶಾ, ಅನಿರುದ್ಧ್ ಅವರ ಬಣ್ಣವು ಬಯಲಾಗಿದೆ.

    ಧನುಷ್‍ನಿಂದ ನಾನು ಲೈಂಗಿಕ ಕಿರುಕುಳ ಒಳಗಾಗಿದ್ದೇನೆ. ಧನುಷ್ – ಅನಿರುದ್ಧ್ ನೀವು ಅಂದುಕೊಂಡಷ್ಟು ಒಳ್ಳೆಯವರಲ್ಲ ಎನ್ನುವ ಬರಹವಿರುವ ಟ್ವೀಟ್ ಸುಚಿತ್ರಾ ಖಾತೆಯಿಂದ ಪ್ರಕಟವಾಗಿದೆ. ಅಷ್ಟೇ ಅಲ್ಲದೇ ದಗ್ಗುಬಾಟಿ ರಾಣಾ ನಟಿ ತ್ರಿಶಾಗೆ ಮುತ್ತು ನೀಡುತ್ತಿರುವ ಫೋಟೋ ಸುಚಿತ್ರಾ ಖಾತೆಯಿಂದ ಟ್ವೀಟ್ ಆಗಿದೆ.

    ಈ ಬಗ್ಗೆ ತಮಿಳು ನಟಿ ಕಮ್ ಗಾಯಕಿ ಸುಚಿತ್ರಾ ಪತಿ ಕಾರ್ತಿಕ್ ಸ್ಪಷ್ಟನೆ ನೀಡಿ, ತನ್ನ ಪತ್ನಿಯ ಟ್ವಿಟ್ಟರ್ ಅಕೌಂಟ್ ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಈಗ ಸುಚಿತ್ರಾ ಕಾರ್ತಿಕ್ ಟ್ವೀಟ್‍ಗಳು ಡಿಲೀಟ್ ಆಗಿದೆ. ಈ ಟ್ವೀಟ್‍ಗಳು ಡಿಲೀಟ್ ಆಗಿದ್ದರೂ ಸುಚಿತ್ರಾ ಖಾತೆಯಿಂದ ಪ್ರಕಟವಾದ ಟ್ವೀಟ್‍ಗಳ ಸ್ಕ್ರೀನ್ ಶಾಟ್‍ಗಳನ್ನು ಜನ ತೆಗೆದು ಶೇರ್ ಮಾಡುತ್ತಿದ್ದು ಈಗ ವೈರಲ್ ಆಗಿದೆ.

    ಇದನ್ನೂ ಓದಿ: ತಮಿಳು ಗಾಯಕಿ ರಿಲೀಸ್ ಮಾಡಿದ ಹಸಿ ಬಿಸಿ ವೀಡಿಯೋ ಸ್ಯಾಂಡಲ್‍ವುಡ್ ನಟಿಯದ್ದಾ..?

    ಇಲ್ಲಿ ಸುಚಿತ್ರಾ ಖಾತೆಯಿಂದ ಪ್ರಕಟವಾಗಿರುವ ಫೋಟೋ ಮತ್ತು ಅವರ ಟ್ವೀಟ್ ಗಳನ್ನು ನೀಡಲಾಗಿದೆ.

  • ತಮಿಳು ಗಾಯಕಿ ರಿಲೀಸ್ ಮಾಡಿದ ಹಸಿ ಬಿಸಿ ವೀಡಿಯೋ ಸ್ಯಾಂಡಲ್‍ವುಡ್ ನಟಿಯದ್ದಾ..?

    ತಮಿಳು ಗಾಯಕಿ ರಿಲೀಸ್ ಮಾಡಿದ ಹಸಿ ಬಿಸಿ ವೀಡಿಯೋ ಸ್ಯಾಂಡಲ್‍ವುಡ್ ನಟಿಯದ್ದಾ..?

    ಚೆನ್ನೈ: ತಮಿಳು ನಟಿ ಕಮ್ ಗಾಯಕಿಯಿಂದ ಕಾಲಿವುಡ್, ಸ್ಯಾಂಡಲ್‍ವುಡ್, ಟಾಲಿವುಡ್ ನಟ ನಟಿಯರ ಬಣ್ಣ ಬಯಲಾಗಿದೆ. ಕನ್ನಡದ ನಟಿಯ ಕಾಮಪುರಾಣದ ವಿಡಿಯೋ ಫೋಟೋಗಳು ಗಾಯಕಿ ಸುಚಿತ್ರಾ ಕಾರ್ತಿಕ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಆಗಿದೆ.

    ಸ್ಯಾಂಡಲ್‍ವುಡ್ ಯುವ ನಟಿ, ಮುಂಗಾರು ಮಳೆ-2ನಲ್ಲಿ ಅಭಿನಯಿಸಿದ್ದ ಸಂಚಿತಾ ಶೆಟ್ಟಿಯದ್ದು ಎನ್ನಲಾದ ಹಸಿಬಿಸಿ ಲುಕ್‍ನಲ್ಲಿ ಕಾಣಿಸಿಕೊಂಡಿರುವ ವಿಡಿಯೋವೊಂದು ಸುಚಿತ್ರಾ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಆಗಿದೆ. ಈ ವೀಡಿಯೋ ಬಯಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಂಚಿತಾ ಶೆಟ್ಟಿ, ಆ ಚಿತ್ರದಲ್ಲಿರುವುದು ನಾನಲ್ಲ. ಹಸಿಬಿಸಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು ನಾನಲ್ಲ. ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಏನು ನಡೆಯುತ್ತಿದೆ ಅನ್ನೋದು ನನಗೆ ಗೊತ್ತಿದೆ. ನನ್ನ ಅಭಿಮಾನಿಗಳೇ ನನ್ನ ಮೇಲೆ ನಂಬಿಕೆ ಇಟ್ಟಿರೋದಕ್ಕೆ ಧನ್ಯವಾದ ಎಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ.

    ಈ ಬಗ್ಗೆ ತಮಿಳು ನಟಿ ಕಮ್ ಗಾಯಕಿ ಸುಚಿತ್ರಾ ಪತಿ ಕಾರ್ತಿಕ್ ಸ್ಪಷ್ಟನೆ ನೀಡಿ, ತನ್ನ ಪತ್ನಿಯ ಟ್ವಿಟ್ಟರ್ ಅಕೌಂಟ್ ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ.ಈಗ ಸುಚಿತ್ರಾ ಕಾರ್ತಿಕ್ ಖಾತೆಯಿಂದ  ಟ್ವೀಟ್‍ಗಳು ಡಿಲೀಟ್ ಆಗಿದೆ.

    https://www.youtube.com/watch?v=8EmrsjP72kc