Tag: Suchindra Prasad

  • Exclusive- ನನ್ನ ಜೊತೆ ಇರೋದು ನನ್ನದೇ ಒಡವೆ, ನರೇಶ್ ಪತ್ನಿ ರಮ್ಯಾದ್ದಲ್ಲ : ನಟಿ ಪವಿತ್ರಾ ಲೋಕೇಶ್

    Exclusive- ನನ್ನ ಜೊತೆ ಇರೋದು ನನ್ನದೇ ಒಡವೆ, ನರೇಶ್ ಪತ್ನಿ ರಮ್ಯಾದ್ದಲ್ಲ : ನಟಿ ಪವಿತ್ರಾ ಲೋಕೇಶ್

    ಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಸಂಬಂಧದ ಪ್ರಕರಣ ಹಲವು ರೂಪಗಳನ್ನು ಪಡೆದುಕೊಂಡಿದೆ. ಪವಿತ್ರಾಗಾಗಿ ತಮ್ಮ ಪತಿ ತಮಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ರಮ್ಯಾ ಆರೋಪ ಮಾಡಿದ ನಂತರ, ಪವಿತ್ರಾ ಲೋಕೇಶ್ ಮತ್ತು ನರೇಶ್ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಪವಿತ್ರಾ ಕೊರಳಲ್ಲಿರುವ ಅನೇಕ ಒಡವೆಗಳು ತಮ್ಮವೇ ಎಂದೂ ರಮ್ಯಾ ಹೇಳಿಕೆ ನೀಡಿದ್ದರು. ಈ ಕುರಿತು ಪವಿತ್ರಾ ಲೋಕೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.

    ‘ಬೇರೆ ಯಾರದೋ ಒಡವೆಯನ್ನು ಹಾಕಿಕೊಂಡು ಮರೆಯುವಂತಹ ಗತಿ ನನಗೆ ಬಂದಿಲ್ಲ. ನನ್ನಲ್ಲಿಯೇ ಬಹಳಷ್ಟು ಒಡವೆಗಳಿವೆ. ನಾನು ಕಷ್ಟಪಟ್ಟು ಸಂಪಾದನೆ ಮಾಡಿದ ಒಡವೆಗಳು ಅವು. ನನ್ನ ತಾಯಿ ಕಾಲೇಜು ದಿನಗಳಲ್ಲಿ ನನಗೊಂದು ಚೈನ್ ಮತ್ತು ಉಂಗುರು ಕೊಟ್ಟಿದ್ದರು. ಆಮೇಲೆ ಸಂಪಾದನೆ ಮಾಡಿ ಸಾಕಷ್ಟು ಒಡವೆಗಳನ್ನು ಖರೀದಿಸಿದ್ದೇನೆ. ಅವುಗಳನ್ನು ನಾನೇ ಖರೀದಿಸಿದ್ದೇನೆ ಎನ್ನುವುದಕ್ಕೆ ನನ್ನ ಬಳಿ ರಸೀದಿ ಇದೆ’ ಎಂದಿದ್ದಾರೆ ಪವಿತ್ರಾ ಲೋಕೇಶ್. ಇದನ್ನೂ ಓದಿ : Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ

    ಒಬ್ಬರ ಒಡವೆ ಮತ್ತೊಬ್ಬರ ಒಡವೆ ರೀತಿಯಲ್ಲಿ ಇರಬಾರದು ಅಂತಿದೆಯಾ ಎಂದು ಪ್ರಶ್ನೆಯನ್ನೂ ಮಾಡಿರುವ ಪವಿತ್ರಾ ಲೋಕೇಶ್, “ಐಶ್ವರ್ಯ ರೈ ಹಾಕಿದ ಒಡವೆ ನನ್ನ ಬಳಿ ಇದ್ದರೆ, ಅದು ಅವರದ್ದು ಹೇಗೆ ಆಗುತ್ತದೆ? ನರೇಶ್ ಅವರಷ್ಟು ನಾನು ಶ್ರೀಮಂತ ಅಲ್ಲದೇ ಇರಬಹುದು. ಆದರೆ, ನೂರಾರು ಸಿನಿಮಾಗಳಲ್ಲಿ ನಟಿಸಿ ಸಂಪಾದಿಸಿದ್ದೇನೆ. ಅದರಿಂದಲೇ ಅನೇಕ ಒಡವೆಗಳನ್ನು ಖರೀದಿಸಿರುವೆ. ಕಂತಿನ ರೂಪದಲ್ಲಿ ಕೆಲವು ಒಡವೆಗಳನ್ನು ಖರೀದಿಸಿದ್ದೇನೆ’ ಎಂದಿದ್ದಾರೆ ಪವಿತ್ರಾ ಲೋಕೇಶ್.

    ರಮ್ಯಾ ಮಾಡುತ್ತಿರುವ ಎಲ್ಲ ಆರೋಪಗಳಲ್ಲೂ ಹುರುಳಿಲ್ಲ. ನನ್ನ ಹೆಸರನ್ನು ಅವರು ಹಾಳು ಮಾಡುತ್ತಿದ್ದಾರೆ. ಇದೇ ರೀತಿಯಲ್ಲಿ ಮುಂದುವರೆದರೆ ನಾನೂ ಕೂಡ ಕಾನೂನು ರೀತಿಯಲ್ಲಿ ಕ್ರಮ ತಗೆದುಕೊಳ್ಳಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ. ತಮ್ಮ ಕೌಟುಂಬಿಕ ಕಲಹದಲ್ಲಿ ತಮ್ಮನ್ನು ಎಳೆತಂದಿರುವುದಕ್ಕೆ ತುಂಬಾ ನೋವಾಗಿದೆ ಎಂದೂ ಪವಿತ್ರಾ ಮಾತನಾಡಿದ್ದಾರೆ.

    Live Tv

  • ನಟ ನರೇಶ್ ಆತ್ಮೀಯರಾಗಿದ್ದು ದುಡ್ಡಿನ ಕಾರಣಕ್ಕೆ ಅಲ್ಲ, ನಾನು ದುಡ್ಡಿನ ಹಿಂದೆ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

    ನಟ ನರೇಶ್ ಆತ್ಮೀಯರಾಗಿದ್ದು ದುಡ್ಡಿನ ಕಾರಣಕ್ಕೆ ಅಲ್ಲ, ನಾನು ದುಡ್ಡಿನ ಹಿಂದೆ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

    ವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಹಿಂದೆ ಹೋಗಿದ್ದು ಕೇವಲ ದುಡ್ಡಿಗಾಗಿ ಎನ್ನುವ ಆಡಿಯೋವೊಂದು ಸಖತ್ ವೈರಲ್ ಆಗಿದೆ. ಈ ಮಾತುಗಳನ್ನು ಪವಿತ್ರಾ ಲೋಕೇಶ್ ಜೊತೆ 11 ವರ್ಷಗಳ ಕಾಲ ಬದುಕು ನಡೆಸಿರುವ ಸುಚೇಂದ್ರ ಪ್ರಸಾದ್ ಅವರೇ ಆಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಪಬ್ಲಿಕ್ ಟಿವಿ ನಟಿ ಪವಿತ್ರಾ ಲೋಕೇಶ್ ಅವರನ್ನು ಪ್ರಶ್ನಿಸಿದಾಗ, ಆ ಪ್ರಶ್ನೆಗೂ ಅವರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದಾರೆ. ಇದನ್ನೂ ಓದಿ : Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ

    ಸುಚೇಂದ್ರ ಪ್ರಸಾದ್ ಅವರು ಏನು ಮಾತನಾಡಿದ್ದಾರೆ ಅಂತ ನನಗಂತೂ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎನ್ನಲಾದ ಆಡಿಯೋದಲ್ಲಿ ನಾನು ದುಡ್ಡಿಗಾಗಿ ನರೇಶ್ ಅವರ ಜೊತೆ ಹೋಗಿದ್ದೇನೆ ಅಂತ ಅವರು ಹೇಳಿದ್ದರೆ, ನಾನು ಸುಚೇಂದ್ರ ಪ್ರಸಾದ್ ಅವರನ್ನು ಒಪ್ಪಿ ಹೋದಾಗ ಅವರ ಬಳಿ ಏನಿತ್ತು ಎನ್ನುವುದನ್ನು ಯೋಚಿಸಲಿ ಎಂದಿದ್ದಾರೆ ಪವಿತ್ರಾ ಲೋಕೇಶ್.

    ಸುಚೇಂದ್ರ ಪ್ರಸಾದ್ ಅವರನ್ನು ಇಷ್ಟಪಟ್ಟು, ಅವರೊಂದಿಗೆ ಬದುಕಬೇಕು ಎಂದು ಹೋದಾಗ ಸುಚೇಂದ್ರ ಪ್ರಸಾದ್ ಬಳಿ ಏನೂ ಇರಲಿಲ್ಲ. ನಾನು ದುಡ್ಡಿನ ಹಿಂದೆ ಹೋದವಳು ಅಂತಾಗಿದ್ದಾರೆ, ನಾನು ಅವರೊಂದಿಗೆ ಹನ್ನೊಂದು ವರ್ಷ ಬದುಕುತ್ತಲೂ ಇರಲಿಲ್ಲ. ಸುಚೇಂದ್ರ ಪ್ರಸಾದ್ ತುಂಬಾ ಒಳ್ಳೆಯ ವ್ಯಕ್ತಿ. ತುಂಬಾ ಓದಿಕೊಂಡಿದ್ದಾರೆ. ಶಾಂತ ಸ್ವಭಾವದ ಮನುಷ್ಯ ಅನ್ನುವ ಕಾರಣಕ್ಕಾಗಿ ನಾನು ಅವರೊಂದಿಗೆ ಇದ್ದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ ಪವಿತ್ರಾ ಲೋಕೇಶ್.

    Live Tv

  • Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ

    Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ

    ತೆಲುಗು ನಟ ನರೇಶ್ ಅವರ ಜೊತೆ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರಾ? ಈ ಕುರಿತು ಕಳೆದೊಂದು ವಾರದಿಂದ ದೊಡ್ಡ ಚರ್ಚೆ ಆಗುತ್ತಿದೆ. ತೆಲುಗು ಮಾಧ್ಯಮಗಳಂತೂ ಎರಡು ವರ್ಷಗಳ ಹಿಂದೆಯೇ ಅವರು ಮದುವೆ ಆಗಿದ್ದಾರೆ ಎಂದು ಸುದ್ದಿ ಮಾಡಿದ್ದವು. ಈ ಕುರಿತು ನರೇಶ್ ಅವರ ಪತ್ನಿ ರಮ್ಯಾ ಕೂಡ ಹೇಳಿಕೆ ನೀಡಿ, ನರೇಶ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಪವಿತ್ರಾ ಲೋಕೇಶ್ ಜೊತೆಗಿದ್ದ ಸುಚೇಂದ್ರ ಪ್ರಸಾದ್ ಕೂಡ ರಮ್ಯಾ ಅವರಿಗೆ ಅನ್ಯಾಯ ಆಗಬಾರದು ಎಂದಿದ್ದರು. ಈ ಕುರಿತು ಪವಿತ್ರಾ ಲೋಕೇಶ್ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

    ‘ನಾನು ಮತ್ತು ನರೇಶ್ ಅವರು ಪರಿಚಯವಾಗಿದ್ದು 4 ವರ್ಷಗಳ ಹಿಂದೆ. ಅವರು ನಾನು ಹ್ಯಾಪಿ ವೆಡ್ಡಿಂಗ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದೆವು. ಆಗ ನರೇಶ್ ಯಾರು ಅಂತಾನೇ ಗೊತ್ತಿರಲಿಲ್ಲ. ಎರಡನೇ ಸಿನಿಮಾ ಮಾಡುವಾಗ ಪರಿಚಯವಾದರು. ತೀರಾ ಸಲುಗೆ ಬೆಳೆಯಿತು. ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. ನಾನೂ ಹಂಚಿಕೊಳ್ಳುತ್ತಿದೆ. ಅಷ್ಟರ ಮಟ್ಟಿಗೆ ನಮ್ಮಲ್ಲಿ ಆತ್ಮಿಯತೆ ಬೆಳೆಯಿತು. ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಅಂದರೆ, ಒಟ್ಟಿಗೆ ಓಡಾಡುವುದು ಸಹಜ. ಅದರ ಹೊರತಾಗಿ ಏನೂ ಇಲ್ಲ” ಎಂದಿದ್ದಾರೆ ಪವಿತ್ರಾ ಲೋಕೇಶ್. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    ನಾನು ನೂರಾರು ಸಿನಿಮಾಗಳನ್ನು ಮಾಡಿರುವೆ. ಹಲವು ಕಲಾವಿದರ ಜೊತೆ ನಟಿಸಿರುವೆ. ಹಾಗಂತ ಎಲ್ಲರ ಜೊತೆಯೂ ನನಗೆ ಸಂಬಂಧವಿದೆ ಅಂದರೆ ಹೇಗೆ? ರಮ್ಯಾ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ನಾನು ಮತ್ತು ನರೇಶ್ ಏನು ಅಂತ ನಮ್ಮಿಬ್ಬರಿಗೆ ಗೊತ್ತು. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ ಪವಿತ್ರಾ ಲೋಕೇಶ್. ಸದ್ಯ ಆತ್ಮೀಯರಾಗಿದ್ದೇವೆ. ನಾಳೆಯ ಬಗ್ಗೆ ನಾನು ಹೇಗೆ ಮಾತನಾಡೋಕೆ ಆಗುತ್ತೆ? ಎಂದು ಹೇಳುವ ಮೂಲಕ ಮತ್ತೆ ಕುತೂಹಲ ಮೂಡಿಸಿದ್ದಾರೆ.

    ನರೇಶ್ ಅವರ ಬ್ಯಾನರ್ ನಲ್ಲೇ ಪವಿತ್ರಾ ಲೋಕೇಶ್ ಅವರು ಶಾರ್ಟ್ ಫಿಲ್ಮ್ ವೊಂದನ್ನು ನಿರ್ದೇಶನ ಮಾಡಿದ್ದಾರಂತೆ. ಹೀಗೆ ಒಟ್ಟಿಗೆ ಕೆಲಸ ಮಾಡುವಾಗ ಆತ್ಮೀಯತೆ ಬೆಳೆಯದೇ ಇರುತ್ತಾ ಎನ್ನುವುದು ಪವಿತ್ರಾ ಲೋಕೇಶ್ ಪ್ರಶ್ನೆ. ನರೇಶ್ ಮತ್ತು ತಮ್ಮ ಮಧ್ಯೆ ಕೇವಲ ಆತ್ಮೀಯತೆ ಎನ್ನುವುದಕ್ಕಿಂತ ಒಂದು ಹೆಜ್ಜೆ ಮುಂದಿನ ಆಪ್ತತೆಯೂ ಇದೆ ಎಂದೂ ಪವಿತ್ರಾ ಲೋಕೇಶ್ ಹೇಳಿದ್ದಾರೆ. ನರೇಶ್ ಮತ್ತು ತಮ್ಮ ಮದುವೆ ವಿಚಾರ ಸದ್ಯಕ್ಕೆ ಇಷ್ಟೆ. ಮುಂದೆ ಏನು ಅಂತ ನನಗಂತೂ ಗೊತ್ತಿಲ್ಲ ಎಂದಿದ್ದಾರೆ ಪವಿತ್ರಾ.

    Live Tv